. . . .🕉. . . .
|| **ನುಡಿ ಮುತ್ತುಗಳು/ THOUGHTS OF THE DAY.**
- - - - - - - - - - - - **
**ಕೂದಲೆಲ್ಲ ಹೋದ ಮೇಲೆ ಪ್ರಕೃತಿ ಕೊಡುವ ಬಾಚಣಿಗೆಗೆ ಅನುಭವ ಎಂದು ಹೆಸರು.**
*ಭೂಮಿಯನ್ನು ಸ್ತ್ರೀ ಯನ್ನು ಆಳೋದಕ್ಕೆ ಹಣ ಮುಖ್ಯವಲ್ಲ ಸತ್ಯಜ್ಞಾನ ಮುಖ್ಯ *
ನಮಗೆ ಸಿಗುವ ಪಾಲನ್ನು ಕೇಳಿ,ಎಲ್ಲ ಸಂಬಂಧಗಳೂ ಕಳಚಿಕೊಳ್ಳುತ್ತವೆ.ಅದೇ ಪಾಲನ್ನು ಬಿಟ್ಟುಕೊಡಿ.ಎಲ್ಲರೂ ಬಂಧುಗಳಾಗುತ್ತಾರೆ.**
** ಬೇಸಿಗೆ ಕಾಲದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಕೀಳಲು ಆಗದಬಂಡೆಗಲ್ಲು,ಮಳೆಗಾಲದಲ್ಲಿ ತನ್ನಿಂದ ತಾನೇ ಉರುಳಿ ಹೋಗುತ್ತದೆ.
ಜೀವನದಲ್ಲಿ ತಾಳ್ಮೆಯಿಂದ ಇದ್ದರೆ ಎಲ್ಲವನ್ನೂ ಸಾಧಿಸಬಹುದು.**
ನಿದ್ರಾಭಂಗ ಮಾಡುವುದು,ಹೇಳುತ್ತಿದ್ದ ಕಥೆಗಳನ್ನು ಅರ್ಧದಲ್ಲಿ ನಿಲ್ಲಿಸುವುದು,ಅನ್ಯೋನ್ಯವಾಗಿರುವ ದಂಪತಿಗಳ ಪ್ರೀತಿಯನ್ನು ನಾಶಪಡಿಸುವುದು,ಸ್ನೇಹಿತರಲ್ಲಿ ಒಡಕನ್ನು ಉಂಟುಮಾಡುವುದು,
ವಿದ್ಯಾಭ್ಯಾಸಕ್ಕೆ ವಿಘ್ನವನ್ನುಂಟುಮಾಡುವುದು"
ಇವು ದೊಡ್ಡ ಪಾಪಗಳು.
{ ಸುಭಾಷಿತರತ್ನಭಾಂಡಾಗಾರ }
**ನಾನು ತುಂಬಾ ಜನ ವ್ಯಕ್ತಿಗಳಿಗೆ ಕೆಟ್ಟವನಾಗಿ ಕಾಣತ್ತಿನಿ ಯಾಕೆಂದ್ರೆ ನಾನು ಎಂದೂ ಅವರಿಗೆ ಸೋತಿಲ್ಲ.**
**" ಸುಖ "ಎಂಬುದು ಕಷ್ಟ ಎಂಬ ಬೆಟ್ಟದ ಮೇಲೆಯೇ ಇರುತ್ತದೆ.**
***ತಾಳ್ಮೆ ಎಂಬುದು ಒಂದು ಸದ್ಗುಣ. ಜೊತೆಗೆ ಅದೊಂದು ಕಠಿಣವಾದ ಪಾಠ*
ಅಸಾಧ್ಯವಾದ ವ್ಯಕ್ತಿಯು “ಸುಖದ ಶಿಖರ "ದಲ್ಲಿ ವಿಹರಿಸಲು ಅಸಾಧ್ಯ.**
**Burn your "Ego", before it burns "You"**
**Perfection is achieved, not when there is nothing more to add, but when there is nothing left to take away.**
**Simplicity is being comfortable with the circumstances in our lives without worrying or making matters complicated. One who is simple lives from the heart. Abundance means a full heart, not a full house.**
**Every Test in Our Life makes us bitter or better, Every Problem Comes to Break us or make Us. The Choice is Ours Whether We Become VICTIM or VICTOR.**
**You should be driven with some purpose in life. Be strict in your arrangements with your quality of work . Pay no attention to the haters.
Intelligence without ambition is a bird without wings.The man who simply dreams with the idea of getting rich won't succeed,
you must have determination & commitment to succeed. Beauty is nothing without brain .
Hard work beats talent when talent doesn't work hard. Ambition is believing in yourself even when no one else in the world does.**
** Parents do not Need Tour Tears When they Die. They Need Your Hugs, Laughter, Love and Care While Still Alive.**
** The Person Who tries to Keep Everyone happy often ends up feeling the Loneliest.**
ಸಾಲದಿಂದ ಭೂಮಿ ಆಳಬಾರದು.
ಇತ್ತೀಚಿನ ಯುವಕರಿಗೆ ಹೆಣ್ಣನ್ನು ಆಳೋದಕ್ಕೆ ಹಣಬೇಕೆನ್ನುವ ಅಜ್ಞಾನವಿದೆ. ಜೀವನದಲ್ಲಿ ಸೆಟಲ್ ಆದ ಮೇಲೇ ಮದುವೆ ಎನ್ನುವ ಹಂತಕ್ಕೆ ಬಂದು ಹಣಗಳಿಸಿ,
ಮನೆಮಾಡಿ ನಂತರ ಮದುವೆ ಮಾಡಿಕೊಂಡು ಸುಖವಾಗಿರಬಹುದೆನ್ನುವಾಗ ಸಾಕಷ್ಟು ಸಾಲದ ಹೊರೆ ಮೈಮೇಲಿರುತ್ತದೆ.ಇನ್ನು ಹೆಣ್ಣಿನ ಋಣ ತೀರಿಸಲು ಭೂಮಿಯ ಸಾಲ ತೀರಿಸಲು ಸಾಧ್ಯವೆ? ಆದರೆ ಕೂಲಿ ಕಾರ್ಮಿ ಕರಾಗಲಿ,ಬಡವರಾಗಲಿ ಮದುವೆಯ ಚಿಂತೆಯೇ ಇಲ್ಲದೆ ಮದುವೆಯಾಗಿದ್ದಾರೆ. ಅವರು ಮದುವೆಯಾಗಿ ಸಂಸಾರ ನಡೆಸಿರುವಾಗ ಓದಿ ಹಣಗಳಿಸಿದವರಿಗೆ ಯಾಕೆ ಹೆಣ್ಣನ್ನು ಸಾಕೋದಕ್ಕೆ ಕಷ್ಟವಾಗಿ ವಿಚ್ಚೇದನ ಹೆಚ್ಚಾಗಿದೆ ಎಂದಾಗ ಇದರಲ್ಲಿ ಅಜ್ಞಾನದ ಅಹಂಕಾರ ಸ್ವಾರ್ಥ ಕಂಡುಬರುತ್ತದೆ. ಭೂಮಿ ಮೇಲೆ ನಿಂತು ಭೂಮಿಯನ್ನು ಆಳುವಾಗ ಜ್ಞಾನವಿರಬೇಕಷ್ಟೆ.ಧರ್ಮದ ಪ್ರಕಾರ ಭೂಮಿಯ ಋಣ ತೀರಿಸಲು ಜ್ಞಾನದ ಸಂಪಾದನೆಗೆ ಬದಲಾಗಿ ಹಣದ ಸಂಪಾದನೆಗಿಳಿದು ಭೌತಿಕದಲ್ಲಿ ಯುವಕರು ಹೆಣ್ಣನ್ನು ಕಾಣುವ ದೃಷ್ಟಿಯಲ್ಲಿಯೇ ದೋಷವಿರುವಾಗ ಇದನ್ನು ಬದಲಾಯಿಸಿಕೊಂಡವರಿಗೆ ನಿಜವಾದ ಜೀವನದ ಸುಖ ದು:ಖದ ಅರಿವಾಗುತ್ತದೆ. ಎಷ್ಟೋ ಬಡವರಿಗೆ ಹಣವಿಲ್ಲದೆಯೇ ಸಂಸಾರ ನಡೆಸುವ ಜ್ಞಾನಶಕ್ತಿ ಇರುವ ಕಾರಣ ಕಷ್ಟವೋ ಸುಖವೋ ಜೀವನ ನಡೆಸುತ್ತಾರೆ. ಆದರೆ ಹಣದ ಶ್ರೀಮಂತ ರಿಗೆ ಹೆಣ್ಣಿನ ಬಗ್ಗೆ ತಾತ್ಸಾರವಿದ್ದು ತನ್ನ ಜೀವನವನ್ನೇ ಹಾಳುಮಾಡಿಕೊಂಡಿರುವುದು ಅಜ್ಞಾನವೆನ್ನಬಹುದಷ್ಟೆ. ಇದು ಕೇವಲ ಯುವಕರ ಕಥೆಯಲ್ಲ ಯುವತಿಯರ ಕಥೆಯೂ ಹಾಗೆ ಆಗಿದೆ. ವರ್ಣದ ಪ್ರಕಾರ ಬ್ರಾಹ್ಮಣನಿಗೆ ಜ್ಞಾನವೇ ಸಂಪತ್ತು,ಕ್ಷತ್ರಿಯನಿಗೆ ಬಾಹುಬಲವೇ ಸಂಪತ್ತು, ವೈಶ್ಯನಿಗೆ ಸತ್ಯದ ವ್ಯವಹಾರಜ್ಞಾನ ಸಂಪತ್ತು,ಶೂದ್ರನ ಕಾಯಕವೇ ಪರಮಾತ್ಮನ ಸೇವಾ ಸಂಪತ್ತು. ಇದರಲ್ಲಿ ಮೇಲು ಕೀಳು ಹಣದಲ್ಲಿರಲಿಲ್ಲ ಅವರವರ ಜ್ಞಾನವೇ ಸಂಪತ್ತಾಗಿತ್ತು.ವಿಜ್ಞಾನ ಜಗತ್ತಿನಲ್ಲಿ ಸಾಕಷ್ಟು ಹಣವಿದ್ದರೂ ಸದ್ಬಳಕೆ ಮಾಡಿಕೊಳ್ಳಲು ಜ್ಞಾನದ ಕೊರತೆ. ಹೀಗಾಗಿ ಸಂಬಂಧ ಗಳು ಹಣಕ್ಕೆ ಮೀಸಲು.ಗುಣಜ್ಞಾನ ಹಿಂದುಳಿದಾಗ ಜೀವನವಾಗೋದಿಲ್ಲ.
ಇದರಲ್ಲಿನ ಸೂಕ್ಮ ಸತ್ಯವನ್ನು ಅರ್ಥ ಮಾಡಿಕೊಂಡರೆ ಉತ್ತಮ ಜೀವನ ಸಾಧ್ಯ. ಇತ್ತೀಚೆಗೆ ಸಾಕಷ್ಟು ಬ್ರಾಹ್ಮಣ ಯುವಕ ಯುವತಿಯರು ,ಅಡಿಗೆ ಕೆಲಸಗಾರರು,
ಪುರೋಹಿತರು,ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲವೆನ್ನುವ ಪರಿಸ್ಥಿತಿ ಬಂದಿದೆ.ಇದಕ್ಕೆ ಕಾರಣ ಹೆಣ್ಣಿನ ವಿದ್ಯಾಭ್ಯಾಸ, ಅವಳ ಭೌತಿಕಾಸಕ್ತಿ ಎನ್ನುವುದೂ ಸತ್ಯ. ಇಲ್ಲಿ ಹೆಣ್ಣು ಕಲಿತರೆ ಕುಟುಂಬವೇ ಕಲಿತಂತೆ ಎನ್ನುವುದನ್ನು ತಳ್ಳಿ ಹಾಕಲಾಗದು. ಜ್ಞಾನದೇವತೆ ಹೆಣ್ಣು ಹೀಗಾಗಿ ಅವಳಿಗೆ ಜ್ಞಾನದ ಶಿಕ್ಷಣದ ನಂತರ ವಿಜ್ಞಾನ ಶಿಕ್ಷಣ ನೀಡಬೇಕಿತ್ತು.ಹಾಗೆ ಮೊದಲು ಇದನ್ನು ಪುರುಷರು ಪಡೆದು ಸ್ತ್ರೀ ಯನ್ನು ಹಿಂದೆ ನಿಲ್ಲಿಸಿ ಆಳಿದ ಪರಿಣಾಮ ಇಂದಿಗೂ ಸ್ತ್ರೀ ತನ್ನ ಅಸ್ತಿತ್ವಕ್ಕೆ ಹೋರಾಟ ನಡೆಸಿದ್ದರೂ ಸಮಾಜದ ದೃಷ್ಟಿಯಿಂದ ಇದೊಂದು ಕೆಟ್ಟಪ್ರಭಾವ ಬೀರಿದೆ. ಹಾಗಂತ ಇದು ಯಾರ ತಪ್ಪು ? ಪ್ರಶ್ನೆಗೆ ಉತ್ತರ ಅಜ್ಞಾನದ ತಪ್ಪು. ಜ್ಞಾನವನ್ನು ದುರ್ಭಳಕೆ ಮಾಡಿಕೊಂಡ ಮಾನವನ ತಪ್ಪು. ಇದಕ್ಕೆ ತಕ್ಕಂತೆ ಪ್ರತಿಫಲ ಅನುಭವಿಸುವುದೂ ಮಾನವರೆ. ದೇವರನ್ನು ಹೊರಗೆ ಪೂಜಿಸುವಾಗ ಒಳಗಿನ ದೈವ ಶಕ್ತಿ ಜಾಗೃತವಾದರೆ ಮಾತ್ರ ಎಲ್ಲರ ಒಳಗಿರುವ ದೇವಿ ಒಬ್ಬಳೇ ಎನ್ನುವ ಅರಿವಾಗುತ್ತದೆ. ದೇವನೊಬ್ಬನೆ ನಾಮ ಹಲವು ಎಂದಂತೆ ದೇವಿಯೂ ಒಬ್ಬಳೇ ನಾಮ ಹಲವು ಯಾಕಾಗಬಾರದು? ಇಂತಹ ಅಸಮಾನತೆಯೇ ಇಂದು ಸಮಾಜಕ್ಕೆ ಮಾರಕವಾಗಿ ನಾರಿಯ ಬದಲು ಮಾರಿಯ ದರ್ಶನದಲ್ಲಿ ಮಾನವ ಸೋಮಾರಿಯಾಗಿ ಕಾಲಕಳೆದರೂ ಸಾರಿ ಕೇಳೋದಿಲ್ಲ. ಋಣ ತೀರಿಸಲು ಬಂದ ಜೀವಕ್ಕೆ ಇನ್ನಷ್ಟು ಋಣ ಭಾರ ಹೊತ್ತು ನಡೆಯುವ ಅಜ್ಞಾನದ ಶಿಕ್ಷಣವೇ ಇದಕ್ಕೆ ಕಾರಣ. ಹಣವನ್ನು ಸತ್ಕರ್ಮದಿಂದ ಸಂಪಾದಿಸುತ್ತಾ ಸ್ವಧರ್ಮ, ಸತ್ಯ, ಸ್ವಾಭಿಮಾನ, ಸ್ವಾವಲಂಬನೆ ,ಸ್ವದೇಶದ ಸೇವೆಯಲ್ಲಿ ತೊಡಗಿದವರ ಜೀವನದಲ್ಲಿ ಸಾಮರಸ್ಯವಿರುತ್ತದೆ. ಇದಕ್ಕೆ ವಿರುದ್ದ ನಡೆದಷ್ಟೂ ಲಕ್ಮಿ ಒಲಿದರೂ ಸರಸ್ವತಿ ಒಲಿಯದ ಜೀವನವಾಗುತ್ತದೆ. ಮನೆ ಮನೆಯೊಳಗೆ ಬಡವ ಶ್ರೀಮಂತ ಎನ್ನುವ ಬೇದಭಾವ ಮಕ್ಕಳವರೆಗೂ ಹರಡುವಾಗ ಸಮಾನತೆ ಎಲ್ಲಿರುತ್ತದೆ? ಇದೊಂದು ಭೌತಿಕದ ಅಜ್ಞಾನ.
No comments:
Post a Comment