ಅಥಾತೋ ಬ್ರಹ್ಮಜಿಜ್ಞಾಸಾ' ಬ್ರಹ್ಮಸೂತ್ರದ ಮೊದಲ ಸೂತ್ರ೧-೧-೧
ಬ್ರಹ್ಮಜ್ಞಾನವು ಕೇವಲ ನಂಬಿಕೆಯಲ್ಲ ಅದು ವಿಚಾರ
ಮಂಥನದಿಂದ ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದ ಸತ್ಯವೆಂದು ಪ್ರಾಚೀನ ಋಷಿಗಳು ಮೂಢನಂಬಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ನಿರಾಕರಿಸುವುದಕ್ಕೂ ತಿರಸ್ಕರಿಸುವುದಕ್ಕೂ ವ್ಯತ್ಯಾಸವಿದೆ. ನಿರಾಕರಣೆಯಲ್ಲಿ ಕೇಳುವುದಿರುತ್ತದೆ, ತಿರಸ್ಕಾರದಲ್ಲಿ ಏನು ಹೇಳುತ್ತಿದ್ದಾರೆನ್ನುವುದನ್ನೂ ಕೇಳುವ ಮನಸ್ಸಿರೋದಿಲ್ಲ.
ಇಂದಿನ ಈ ನಮ್ಮ ಸ್ಥಿತಿಗೆ ಸತ್ಯವನ್ನು ತಿರಸ್ಕರಿಸಿ ನಡೆದವರೆ ಕಾರಣವೆನ್ನಬಹುದು. ಬ್ರಹ್ಮಜ್ಞಾನವನ್ನು ಓದಿ ತಿಳಿದವರಿಗೆ ನಿಜವಾದ ಸತ್ಯದ ಅನುಭವವಾಗದೆ ಸಾಮಾನ್ಯಜ್ಞಾನವನ್ನು ತಿರಸ್ಕರಿಸಿ ಅವರ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸೋತು ನಾನೇ ಬ್ರಹ್ಮ ಎನ್ನುವ ಮಟ್ಟಿಗೆ ಮೇಲೇರಿದವರಿಗೆ ವಾಸ್ತವತೆಯ ಅರಿವು ಕಷ್ಟ. ಜನಬಲ,ಹಣಬಲವೆಲ್ಲವೂ ಸುಲಭವಾಗಿ ಸಿಗೋವಾಗ ಸತ್ಯದ ಅರಿವಾಗೋದು ಕಷ್ಟ. ಹೀಗಾಗಿ ಮಾನವನ ಜೀವನ ಅರ್ಧ ಸತ್ಯದ ರಾಜಕೀಯಕ್ಕೆ ಸಿಲುಕಿ ತಾನೂ ಮುಂದೆ ಹೋಗದೆ ಹಿಂದಿರುವವರಿಗೂ ಮುಂದೆ ನಡೆಯಲು ಬಿಡದೆ ಅತಂತ್ರಸ್ಥಿತಿಗೆ ತಲುಪಿದೆ.
ಮೊದಲಿದ್ದ ವರ್ಣ ಪದ್ದತಿಯಲ್ಲಿ ಅವರವರ ಧರ್ಮ ಕರ್ಮಕ್ಕೆ ಪ್ರಾಧಾನ್ಯತೆ ಕೊಟ್ಟು ಸಮಾಜದ ನಾಲ್ಕು ಅಂಗಗಳಿಗೂ ಸ್ವತಂತ್ರ ಜ್ಞಾನವಿತ್ತು. ಯಾವಾಗ ಮೇಲು ಕೀಳೆಂಬ ಅಜ್ಞಾನ ಬೆಳೆಯಿತೋ ವರ್ಣಗಳಲ್ಲಿಯೇ ಜಾತಿ ಬೆಳೆದು ಈಗಿದು ವಿಪರೀತ ಜಾತಿಯಿದೆ ಧರ್ಮ ಕರ್ಮದಲ್ಲಿ ಶುದ್ದತೆಯಿಲ್ಲದೆ ಮಿಶ್ರವರ್ಣದ ಮಿಶ್ರಜಾತಿ, ಮಿಶ್ರ ಪಂಗಡ,ಪಕ್ಷ, ಮಿಶ್ರ ಸರ್ಕಾರದವರೆಗೆಹೊರಟು ರಾಜಯೋಗ
ಹಿಂದುಳಿದು ರಾಜಕೀಯದಲ್ಲಿ ಜೀವ ಸಿಕ್ಕಿಕೊಂಡು ಹೊರಬರಲಾಗದೆ ಅಲ್ಲೇ ಸಾಯುತ್ತಿದೆ. ಹಾಗಾದರೆ ಇದಕ್ಕೆ ಪರಿಹಾರವಿಲ್ಲವೆ? ಪರಿಹಾರ ನಮ್ಮೊಳಗಿನ ಸತ್ಯಜ್ಞಾನದಲ್ಲಿತ್ತು. ಈಗಲೂ ಇದೆ ಆದರೆ ನಾವು ಸತ್ಯಕ್ಕೆ ಬೆಲೆ ಕೊಡುವುದಿಲ್ಲ ದೇವರು ಕಾಣೋದಿಲ್ಲ ಆದರೆ ದೇವರ ಹೆಸರಿನಲ್ಲಿ ವ್ಯವಹಾರ ನಡೆಸಿಕೊಂಡು ಬದುಕಿದ್ದೇವೆ. ಈ ಬದುಕು ಶಾಶ್ವತವಲ್ಲ. ಹೀಗಾಗಿ ಬ್ರಹ್ಮನ ಸೃಷ್ಟಿ ನಿರಂತರವಾಗಿ ನಡೆದಿದೆ .ಜನಸಂಖ್ಯೆ ಬೆಳೆದಿದೆ ಜ್ಞಾನ ಕುಸಿದಿದೆ.
ಎಲ್ಲಿಯವರೆಗೆ ಸತ್ಯಜ್ಞಾನ ಆಂತರಿಕ ಶುದ್ದಿಯಿಂದ ಸಿಗುವುದಿಲ್ಲವೋ ಅಲ್ಲಿಯವರೆಗೆ ಬ್ರಹ್ಮಜ್ಞಾನದ ಅರ್ಥ ವಾಗದು. ಬ್ರಹ್ಮನ ಸೃಷ್ಟಿ ಗೆ ತಕ್ಕಂತೆ ದೇವಿ ಜ್ಞಾನನೀಡಿರುವಾಗ ಅದನ್ನರಿಯದೆ ಅದಕ್ಕೆ ವಿರುದ್ದದ ಭೌತಿಕ ಜ್ಞಾನದಲ್ಲಿ ಮುಳುಗಿದ್ದರೆ ಸೃಷ್ಟಿ ಗೆ ವಿರುದ್ದ ನಡೆದಂತೆ. ಇದನ್ನು ಯಾವ ಸರ್ಕಾರವೂ ಸರಿಪಡಿಸಲಾಗದು.
ಜ್ಞಾನದೆಡೆಗೆ,ಸತ್ಯದ ಕಡೆಗೆ ಹೋಗುವುದೆಂದರೆ ಭೌತಿಕದ ರಾಜಕೀಯದಿಂದ ದೂರವಿರುವುದಾಗಿತ್ತು.ಕಾರಣ ಅಲ್ಲಿ ಯಾವ ಅಧಿಕಾರ,ಹಣ,ಸ್ಥಾನಮಾನಕ್ಕೆ ಬೆಲೆಯಿರೋದಿಲ್ಲ.
ಆದರೆ ಮಾನವನಿಗೆ ಇದು ಬಹಳ ಕಷ್ಟ. ಹೀಗಾಗಿ ಮಧ್ಯವರ್ತಿಗಳು ಸತ್ಯವನ್ನು ಬಿಟ್ಟು ಮಿಥ್ಯಕ್ಕೆ ಬೆಲೆ ಕೊಟ್ಟು ಮೇಲೇರಿಸಿರುವುದು.ಕಣ್ಣಿಗೆ ಕಾಣದ ಸತ್ಯ ಮಾತ್ರ ಬ್ರಹ್ಮಜ್ಞಾನದೆಡೆಗೆ ನಡೆಸುವುದು ಅದಕ್ಕೆ ನಿರಾಕಾರ ಬ್ರಹ್ಮ ಎಂದರು. ಋಷಿಗಳು ತಮ್ಮ ಅನುಭೂತಿಯಿಂದ 'ಈ ಜಗತ್ತು ಪರಬ್ರಹ್ಮಶಕ್ತಿಯ ಸಾಕಾರರೂಪ.ಇಲ್ಲಿ ಕಾಣೋದೆಲ್ಲ ಅದೇ ಚೈತನ್ಯದ ರೂಪಾಂತರವಷ್ಟೆ ಎಲ್ಲದರ ಮೂಲ ಒಂದೇ ಬ್ರಹ್ಮಶಕ್ತಿ ಇರುವುದು ' ಎಂಬ ನಿಷ್ಕರ್ಷೆಗೆ ಬಂದರು. ಆದರೆ ಇಂದು ಪ್ರಜಾಪ್ರಭುತ್ವದ ಪ್ರಜೆಗಳಲ್ಲಿ ಅಡಗಿದ್ದ ಸಾಮಾನ್ಯಜ್ಞಾನದ ಆ ಬ್ರಹ್ಮನ ಶಕ್ತಿ ಕಾಣದೆ, ನಾನೇ ಪರಬ್ರಹ್ಮ ಎನ್ನುವ ಮಟ್ಟಿಗೆ ಸತ್ಯ ತಿಳಿಯದೆ,ತಿಳಿದರೂ ತಿಳಿಸದೆ ಜನರಿಗೆ ಸರಿಯಾದ ಶಿಕ್ಷಣ ನೀಡದೆ ಆಳುವ ರಾಜಕೀಯವೇ ಇಡೀ ವಿಶ್ವಶಕ್ತಿಗೆ ಮಾಡಿದ ಅವಮಾನ. ಇದು ಕಾಲದ ಪ್ರಭಾವವೆಂದು ಸುಮ್ಮನಿರಬಹುದಾದರೆ ಸರಿ ಸಹಿಸಲಾಗದ ಅಸಹ್ಯಕರ ಬದಲಾವಣೆಯನ್ನು ನೋಡಿ
ಕೊಂಡು ಜೀವನ ನಡೆಸುವುದಕ್ಕೆ ಜ್ಞಾನಿಗಳಿಗೆ ಕಷ್ಟ.
ಅಜ್ಞಾನದಲ್ಲಿರುವವರಿಗೆ ಸತ್ಯ ತಿಳಿಯದ ಕಾರಣ ಇದೇ ಜೀವನ ಎಂದು ಸಹಕರಿಸಬಹುದು.ಆದರೆ ಇದರ ಪ್ರತಿಫಲ ಮಾತ್ರ ಘೋರವಾಗಿರುವಾಗ ಅದನ್ನು ಸಹಿಸಿಕೊಳ್ಳುವ ಆತ್ಮಶಕ್ತಿಯ ಅಗತ್ಯವಿದೆ. ಹೀಗಾಗಿ ಅಧ್ಯಾತ್ಮ ಎಂದರೆ ತನ್ನ ತಾನರಿತು ಸ್ವಾವಲಂಬನೆ, ಸ್ವಾಭಿಮಾನ, ಆತ್ಮಸಾಕ್ಷಿಯ ಕಡೆಗೆ ನಡೆಯೋದೆಂದರೆ ಇದು ಜನಸಾಮಾನ್ಯರ ಸಾಮಾನ್ಯಜ್ಞಾನಕ್ಕೆ ಅರ್ಥ ವಾಗಬಹುದು. ಯಾರೂ ಶಾಶ್ವತವಲ್ಲ.ಯಾವುದೂ ಸ್ಥಿರವಲ್ಲ.ಕಾಲಚಕ್ರ ತಿರುಗುತ್ತದೆ.ಅನುಭವಿಸಿದ ನಂತರವೇ ಸತ್ಯದರ್ಶನ.
ರಾಜಕೀಯ ಭ್ರಷ್ಟಾಚಾರವಾದರೂ ಅಜ್ಞಾನದಿಂದ ಬೆಳೆದಿದೆ ಧಾರ್ಮಿಕ ಭ್ರಷ್ಟಾಚಾರಕ್ಕೆ ಕಾರಣವೇನು? ಕಾಲವೇ ಕಾರಣ.
ಜನಬಲ ಹಣಬಲ ಎಲ್ಲೆಡೆಯೂ ಹರಡಿಕೊಂಡಿದೆ ಜ್ಞಾನಬಲದ ಕೊರತೆ ಸಮಾಜದ ದಾರಿತಪ್ಪಿಸುತ್ತಿದೆ.
ಕರ್ಮಕ್ಕೆ ತಕ್ಕಂತೆ ಫಲ.ಅವರವರ ಮೂಲದ ಧರ್ಮ ಕರ್ಮ ಅವರಿಗೆ ಶ್ರೇಷ್ಠ. ಅದರಲ್ಲಿ ಕಾಲಕ್ಕೆ ತಕ್ಕಂತೆ ಸಂಸ್ಕರಿಸಿಕೊಂಡು ಶುದ್ದ ಮಾಡಿಕೊಳ್ಳುವುದು ಅಗತ್ಯವಿತ್ತು. ಹೊರಗಿನ ಸಂಸ್ಕಾರವು ಒಳಗಿನ ಸಂಸ್ಕಾರದೆಡೆಗೆ ನಡೆಯದೆ ಸ್ವಚ್ಚಭಾರತಕ್ಕೆ ಕೋಟ್ಯಾಂತರ ಹಣ ಬಳಸಿದರೂ ಧಾರ್ಮಿಕವಾಗಿ ಹಿಂದುಳಿದರೆ ಆತ್ಮಸಂಸ್ಕಾರವಾಗದೆ ಅದೂ ರಾಜಕೀಯವಾಗಿರುತ್ತದೆನ್ನಬಹುದೆ? ಅವರವರ ಮನೆಯ ಸಾಲ ತೀರಿಸಲು ಎಲ್ಲಾ ಒಗ್ಗಟ್ಟಿನಿಂದ ಸತ್ಕರ್ಮದೆಡೆಗೆ ನಡೆದು ಧರ್ಮದ ಹಾದಿ ಹಿಡಿಯುವ ಬದಲು ಮನೆಯಿಂದ ಹೊರಬಂದು ವಿದೇಶದ ಕಡೆಗೆ ನಡೆದು ಅಧರ್ಮದ ಹಣಬಲ ಜನಬಲದಿಂದ ನಮ್ಮವರನ್ನೇ ಆಳುವುದು ಪ್ರಜಾಪ್ರಭುತ್ವ ಧರ್ಮಕ್ಕೆ ವಿರುದ್ಧ. ಇದಕ್ಕೆ ನಮ್ಮದೇ ಸಹಕಾರ ವಿರೋವಾಗ ನಾವೇ ಇದಕ್ಕೆ ಕಾರಣ. ಈವರೆಗೆ ಇದೇ ವಿಚಾರದಲ್ಲಿ ಸಾಕಷ್ಟು ಲೇಖನಗಳಲ್ಲಿ ಸಾಮಾನ್ಯಜ್ಞಾನ ಎಷ್ಟು ಮುಖ್ಯ ಎನ್ನುವ ವಿಚಾರವಿತ್ತು. ವಿಪರ್ಯಾಸವೆಂದರೆ ನಾವು ಮಾನವರಾಗಲು ತಯಾರಿಲ್ಲ.ಮಾನವನಿಗೆ ಮಾತ್ರ ಸಾಮಾನ್ಯಜ್ಞಾನವಿರೋದಲ್ಲವೆ ದೇವತೆಗಳು ಅಸುರರು ಅಸಮಾನ್ಯರು. ಅವರ ಕಡೆಗೆ ಹೇಗೆ ಹೋದರೆ ನಮ್ಮ ಸಾಮಾನ್ಯರು ಸಮಾನರಾಗಿರುವರೆಂದು ತಿಳಿಸುವುದೇ ತತ್ವ. ಈ ತತ್ವವೇ ತಂತ್ರದೆಡೆಗೆ ಹೊರಟು ಯಂತ್ರಮಯವಾಗಿದೆ. ಯಾಂತ್ರಿಕ ಜೀವನದಲ್ಲಿ ಸತ್ಯ ಕಾಣೋದಿಲ್ಲ.ಇದೇ ನಮ್ಮ ಹಿಂದೂ ಧರ್ಮದ ಹಿಂದುಳಿಯುವಿಕೆಗೆ ಕಾರಣವಾಗುತ್ತಿದೆ. ಈ ವಿಚಾರದಲ್ಲಿ ವಾದ ವಿವಾದಕ್ಕೇನೂ ಕೊರತೆಯಿಲ್ಲ.
ಚರ್ಚೆಗೆ ಕೊರತೆಯಿದೆ. ಶಾಂತಿಯಿಂದ ಚರ್ಚೆ ನಡೆಸಬಹುದು. ವಾದ ವಿವಾದವು ಕ್ರಾಂತಿಗೆ ಕಾರಣವಾಗುತ್ತದೆ.
ಬ್ರಹ್ಮನಿಗೆ ಆಕಾರವಿಲ್ಲ ಆದರೆ ಬ್ರಹ್ಮನ ಸೃಷ್ಟಿಗೆ ಆಕಾರ ಹೆಚ್ಚಾಗಿ ಅದೇ ಈಗ ಮಾನವನಿಗೆ ಅಧರ್ಮದೆಡೆಗೆ ಅಸತ್ಯದ ಕಡೆಗೆ ನಡೆಸಿದರೆ ಬ್ರಹ್ಮಜ್ಞಾನದ ಉದ್ದೇಶವೇನಿತ್ತು? ಸಾಕಾರದಿಂದ ನಿರಾಕಾರದೆಡೆಗೆ ನಡೆಯುವುದೇ ನಿಜವಾದ ಅಧ್ಯಾತ್ಮ ಸಾಧನೆ. ಆದರೆ, ಅಜ್ಞಾನದಲ್ಲಿರುವವರಿಗೆ ಜ್ಞಾನದ ಶಿಕ್ಷಣ ನೀಡುತ್ತಾ ಭಗವಂತನೆಡೆಗೆ ನಡೆಸುವ ಗುರುವೇ ದೇವರು. ಗುರುವಿನ ಗುರಿ ಅಧ್ಯಾತ್ಮ ಸಾಧನೆ, ಭಾರತದಂತಹ ಮಹಾತ್ಮರ ದೇಶದ ಶಿಕ್ಷಣವು ಭೌತಿಕದ ಗುರುವಿನ ಕಡೆಗೆ ನಡೆದಿರುವ ಈ ಸಮಯದಲ್ಲಿ ಅಧ್ಯಾತ್ಮ ಗುರುಗಳಾದವರು ತಮ್ಮ ಸುತ್ತಮುತ್ತಲಿನ ಶಾಲಾ ಮಕ್ಕಳಿಗೆ ಶಿಕ್ಷಕರನ್ನಾಗಿ ತಮ್ಮ ಶಿಷ್ಯರನ್ನು ನೇಮಿಸುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವ ಕೆಲಸ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸುವುದು ಅಗತ್ಯವಾಗಿದೆ. ಇಲ್ಲವಾದರೆ ತಮ್ಮದೇ ಶಾಲೆ ಕಾಲೇಜ್ ಗಳಲ್ಲಿ ಇರುವ ಯುವಕ ಯುವತಿಯರಿಗೆ ಸನ್ಮಾರ್ಗ ದಲ್ಲಿ ನಡೆಯಲು ಸಹಕರಿಸಬೇಕು. ನಾವೇ ಸೃಷ್ಟಿಸಿದ ಬೇಧಭಾವಕ್ಕೆ ನಮ್ಮಲ್ಲಿಯೇ ಪರಿಹಾರ ಕಂಡುಕೊಂಡರೆ ಯಾವ ಹೊರಗಿನ ರಾಜಕೀಯದ ಅಗತ್ಯವಿಲ್ಲದೆ ಧರ್ಮ ಸ್ವತಂತ್ರ ವಾಗಿರುವುದು. ಸೃಷ್ಟಿಯ ರಹಸ್ಯ ವನ್ನು ಕಂಡುಹಿಡಿಯಲು ಆತ್ಮಜ್ಞಾನದ ಅಗತ್ಯವಿದೆ.
ಆತ್ಮನಿರ್ಭರ ಭಾರತ ಅಧ್ಯಾತ್ಮದ ಸಂಶೋಧನೆಯಲ್ಲಿದೆ.ವೈಜ್ಞಾನಿಕ ಸಂಶೋದನೆಯಿಂದ ಕಷ್ಟ.
ಭೌತಿಕ ಜಗತ್ತಿನಲ್ಲಿ ಎಷ್ಟು ಕಂಡುಹಿಡಿದರೂ ಆತ್ಮಕ್ಕೆ ಶಾಂತಿಯಿಲ್ಲ. ಭೂಮಿ ಮೇಲಿದ್ದು ಭೂ ತತ್ವವನರಿತು ಭೂತಾಯಿಯ ಸೇವೆ ಮಾಡೋದಕ್ಕೆ ಪರಾಶಕ್ತಿಯ ಜ್ಞಾನವಿರಬೇಕು.
No comments:
Post a Comment