ಯಾವುದೇ ರೀತಿಯ ಪದವಿ,ಪ್ರಶಸ್ತಿ, ಹಣ,ಅಧಿಕಾರ,ರಾಜಕೀಯಕ್ಕೆ ಸಹಕರಿಸದೆ ಮುಕ್ತರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳಲ್ಲಿದ್ದ ಅದ್ವೈತ ತತ್ವ ಶರಣರ ತತ್ವವಾಗಿತ್ತು.
ಅಧ್ವೈತವನ್ನು ಅರ್ಥ ಮಾಡಿಕೊಂಡು ನಡೆದವರಿಗೆ ದೇಹವೇ ದೇಗುಲ, ದೇಶವೇ ಮನೆ, ಮನಸ್ಸೇ ಮಂದಿರವಾಗುತ್ತದೆ.
ಅಂದರೆ ನಮ್ಮ ದೇಹವನ್ನು ದೇವರ ಮನೆ ಎನ್ನುವ ಜ್ಞಾನ ಬರೋದು ದೈವತ್ವ ಬೆಳೆದಾಗ,ತತ್ವದೊಳಗೆ ಹೊಕ್ಕಾಗಲೇ, ದೇಶವನ್ನು ಮನೆಯಾಗಿಸಿಕೊಳ್ಳಲು ದೇಶಭಕ್ತಿ ಇರಬೇಕು. ಹಾಗೆಯೇ ಮನಸ್ಸಿನಲ್ಲಿ ನಾನೆಂಬ ಅಹಂಕಾರ ಅಳಿದ ಮೇಲೆ
ದೇವರನ್ನು ಕಾಣುವ ಮಂದಿರವಾಗುತ್ತದೆ. ಇವೆಲ್ಲವೂ ಒಳಗೇ ನಡೆಯುವ ಕ್ರಿಯೆ. ಇದನ್ನು ಹೊರಗೆ ತೋರಿಸಲು ಕಷ್ಟ.
ಹೀಗಾಗಿ ಎಲ್ಲಾ ಮಹಾತ್ಮರೂ ಮೌನವಾಗಿ ಮುಂದೆ ನಡೆದು ಯೋಗಿಗಳಾದರು. ಇದರಲ್ಲಿ ಜ್ಞಾನಯೋಗಿಗಳಿಗೆ ಮೇಲಿರುವ ಭಗವಂತನ ಪೂರ್ಣ ಚಿತ್ರಣ ಅರ್ಥ ವಾದರೆ,
ರಾಜಯೋಗಿಗಳಿಗೆ ನಾನ್ಯಾರೆನ್ನುವ ಸತ್ಯದರ್ಶನ ,
ಭಕ್ತಿಯೋಗದಿಂದ ದಾಸರು ಸಂತರು ಪರಮಾತ್ಮನಿಗೆ ದಾಸರಾದರೆ ಕರ್ಮಯೋಗದಿಂದ ಶರಣ ರಾದವರು ಮುಕ್ತಿಯ ಮಾರ್ಗ ಹಿಡಿದರು. ಎಲ್ಲರಲ್ಲಿಯೂ ಜ್ಞಾನವಿದ್ದರೂ ಹೊರಟ ದಾರಿ ಬೇರೆಯಾಗಿದ್ದರೂ ಸೇರಿದ ಸ್ಥಳ ಒಂದೇ ಅದೇ ಮುಕ್ತಿಯ ಮಾರ್ಗ. ಭೂಮಿಯಲ್ಲಿ ಮಾನವನಾಗಿ ಜನ್ಮಪಡೆಯುವುದಕ್ಕೆ ಮೊದಲು ಎಷ್ಟೋ ಜೀವ ಜಂತು ಪ್ರಾಣಿ ಪಕ್ಷಿ, ಮರಗಿಡಗಳ ಪ್ರಕೃತಿಯೊಂದಿಗಿದ್ದ ಜೀವನು ಮಾನವ ಜನ್ಮದ ನಂತರ ಪ್ರಕೃತಿಗೇ ವಿರುದ್ದ ನಡೆದರೆ ಮುಕ್ತಿ ಸಿಗದು. ಪ್ರಕೃತಿಯ ಜೊತೆಗಿದ್ದು ತನ್ನ ಅಧ್ಯಾತ್ಮ ಸಾಧನೆ ಮಾಡಿದವರಿಗಷ್ಟೆ ಮುಕ್ತಿ ಮೋಕ್ಷ ಎಂದು ತಿಳಿಸುವ ಸನಾತನ ಧರ್ಮ ವು ಹಿಂದಿನಿಂದಲೂ ಭೌತಿಕ ಜಗತ್ತನ್ನು ಆಳಲು ಹೊರಟಿದೆ. ಆದರೆ ಧರ್ಮ ಹಾಗು ಸತ್ಯ ಬಿಟ್ಟು ಆಳಿದರೆ ಅಸುರರ ಸಾಮ್ರಾಜ್ಯವಾಗುವುದೆನ್ನುವುದೆ ನಾವೀಗ ತಿಳಿಯಬೇಕಾದ ಸಾಮಾನ್ಯಸತ್ಯ.
ಎಷ್ಟೇ ಎತ್ತರ ಏರಿದರೂ ಭೂಮಿಯಲ್ಲಿ ಮರಣ ಇಲ್ಲೇ ಜನ್ಮ.ಹಾಗಾಗಿ ಭೂಮಿಯನ್ನು ದುರ್ಭಳಕೆ ಮಾಡಿಕೊಂಡರೆ ಅದಕ್ಕೆ ತಕ್ಕಂತೆ ಜನ್ಮವೂ ಇದೆ ಪ್ರತಿಫಲವೂ ಇದೆ.ಇದನ್ನು ಹಣದಿಂದ ಸರಿಪಡಿಸಲಾಗದು.ಜ್ಞಾನದಿಂದ ಮಾತ್ರ ಸಾಧ್ಯ. ಜ್ಞಾನದಿಂದ ಯೋಗ.ಯೋಗದಿಂದ ಸಂಯೋಗ.ಅಂದರೆ ಜೀವಾತ್ಮ ಪರಮಾತ್ಮನಲ್ಲಿ ಸೇರುವ ಸಂಯೋಗವೆ ಮುಕ್ತಿ.
ಎಲ್ಲವೂ ಭಗವಂತನದೇ ಎಂದಾಗ ಇಲ್ಲಿ ನಾನೆಂಬುದಿಲ್ಲ. ನಾನಿಲ್ಲವಾದಾಗ ರಾಜಕೀಯವಿಲ್ಲ. ರಾಜಕೀಯದಿಂದ ದೂರವಿದ್ದವರಿಗಷ್ಟೆ ಅದ್ವೈತ ಸಿದ್ದಾಂತದ ಆಳ ಅಗಲದ ಅರ್ಥ ಸ್ವಲ್ಪ ಪ್ರಮಾಣದಲ್ಲಿ ಆಗಬಹುದು. ಎಂದರೆ ನಾವು ಜಗತ್ತಿನಲ್ಲಿರುವ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಅಸಾಧ್ಯ. ಆದರೆ ಜಗದೀಶ್ವರನ,ಜಗದೀಶ್ವರಿಯನ್ನು ಸಮಾನ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳಲು ಶಿವಜ್ಞಾನ ಬೇಕು.
ಮುಕ್ತಿ ಕೊಡುವ ಶಿವನೇ ಬೇರೆ ಸ್ಥಿತಿಕಾರಕ ವಿಷ್ಣುವೇ ಬೇರೆ ಎನ್ನುವ ದ್ವಂದ್ವದಲ್ಲಿರುವ ಮನಸ್ಸಿಗೆ ನಾನೇ ಬೇರೆ ನೀನೇ ಬೇರೆ ಎನ್ನುವ ಮನಸ್ಸಿನಿಂದ ಹೊರಬರಲಾರದೆ ರಾಜಕೀಯವೇ ಬೆಳೆಯುತ್ತದೆ.ಒಳಗಿದ್ದ ರಾಜಯೋಗ ಹಿಂದೆ ಉಳಿದಾಗಲೇ ಆತ್ಮವಿಶ್ವಾಸ ಕುಸಿದು ಅಹಂಕಾರ ಬೆಳೆದು ನಿಲ್ಲುವುದು.
ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯು ಭೌತಿಕದೆಡೆಗೆ ಹೊರಟರೆ ಹೆಸರು,ಹಣ,ಅಧಿಕಾರ,ಸ್ಥಾನಮಾನಕ್ಕೆ ನಿಂತು ಪರರನ್ನು ಆಳಬಹುದು ಆದರೆ ಅಂತರಾಳಕ್ಕೆ ಇಳಿದವರು ಇದರಿಂದ ದೂರವಾಗುತ್ತಾ ಒಮ್ಮೆ ಮರೆಯಾಗುವರು. ಇದನ್ನು ನಾವು ಪುರಾಣ,ಇತಿಹಾಸದ ಕಥೆ,ವೇದಕಾಲದ ಜನಜೀವನದಲ್ಲಿ ಓದಿ ತಿಳಿದರೂ ಈಗಿನ ಪರಿಸ್ಥಿತಿಯಲ್ಲಿ ಅರ್ಥ ಮಾಡಿಕೊಳ್ಳಲು ಸ್ವತಂತ್ರ ಜ್ಞಾನದ ಅಗತ್ಯವಿದೆ. ಯಾರೋ ಹೇಳಿದ್ದಷ್ಟೇ ಸತ್ಯವೆನ್ನುವ ಬದಲು ಸತ್ಯದ ಒಳಹೊಕ್ಕಿ ನೋಡುವ ಅನುಭವವಿದ್ದರೆ ಒಳಗಿರುವ ಒಂದೇ ಶಕ್ತಿ ಹೊರಗೂ ಇರುವುದನ್ನು ಕಾಣುವ ಶಕ್ತಿ ಬರುತ್ತದೆ. ಇದನ್ನು
ಶಿವಶರಣರು,ದಾಸ,ಸಂತರು,ಮಹಾತ್ಮರುಗಳು, ಋಷಿಮುನಿಗಳು ತಮ್ಮ ಸ್ವಾನುಭವದಿಂದ ತಿಳಿದು ಹೊರ ಹಾಕಿದ್ದರೂ ಅಂದಿನ ಜ್ಞಾನಿಗಳ ಸ್ವತಂತ್ರ ಜೀವನ ಇಂದಿಲ್ಲದ ಕಾರಣ ಅರ್ಧ ಸತ್ಯದ ವ್ಯವಹಾರಕ್ಕೆ ಧರ್ಮ ನಿಂತ ನೀರಾಗಿದೆ. ನಿಂತನೀರು ಸ್ವಚ್ಚವಾಗಲು ಹರಿಯಲು ಬಿಡಬೇಕಷ್ಟೆ. ಇಲ್ಲವಾದರೆ ಅದೇ ಕೊಳಕಲ್ಲಿ ಜೀವವೂ ಹೋಗುತ್ತದೆ. ಕೆಲವರು ಸ್ವಚ್ಚವಾಗಿದ್ದರೂ ಕಣ್ಣಿಗೆ ಕಾಣದ ಜ್ಞಾನ, ಕಾಣುವ ರಾಜಕೀಯಕ್ಕಿಂತ ಸಣ್ಣದಾಗಿದೆ. ಇದು ಮಾನವನಿಗೇ ನುಂಗಲಾರದ ತುತ್ತಾದರೆ ಇದಕ್ಕೆ ಕಾರಣವೆ ನಮ್ಮ ಸಹಕಾರ. ಎಲ್ಲಿಯವರೆಗೆ ತತ್ವವನ್ನು ತಂತ್ರದಿಂದ ಅಳೆಯುವರೋ ಅಲ್ಲಿಯವರೆಗೆ ಮಾನವ ಮಹಾತ್ಮನಾಗೋದಿಲ್ಲ.
ಸಾಮಾನ್ಯಜ್ಞಾನವಿಲ್ಲದೆ ವಿಶೇಷಜ್ಞಾನ ಒಳಗೆಳೆದುಕೊಂಡರೆ ಜಗತ್ತಿಗೆ ವಿಶೇಷವಾಗಿ ಕಾಣಬಹುದು. ಜಗಧೀಶ್ವರನಿಗೆ ಕಾಣೋದಿಲ್ಲ. ಧರ್ಮದ ವಿಷಯದಲ್ಲಿ ಯಾರೂ ಸ್ವತಂತ್ರ ರಲ್ಲ. ಸತ್ಯದ ವಿಚಾರದಲ್ಲಿ ಸ್ವತಂತ್ರ ವಿದೆ.ನಮ್ಮ ಸತ್ಯಕ್ಕೆ ನಾವೇ ಸಾಕ್ಷಿ. ಆತ್ಮಸಾಕ್ಷಿ ಸತ್ಯದಿಂದ ಬೆಳೆಸಿಕೊಂಡರೆ ಧರ್ಮ ಅದರ ಜೊತೆಗೆ ಬರುತ್ತದೆ. ಕಾರಣ ಸತ್ಯ ಒಂದೇ ಅಲ್ಲವೆ?
ಧರ್ಮ ವಾದರೂ ಮೂರಿದೆ ದೇವರಧರ್ಮ, ಮಾನವಧರ್ಮ, ಅಸುರಧರ್ಮ. ಮಧ್ಯವರ್ತಿ ಮಾನವನಲ್ಲಿ
ಎರಡೂ ಇದೆ. ಯಾವಾಗ ದೈವತ್ವ ಬಿಟ್ಟು ಅಸುರತ್ವಕ್ಕೆ ದಾಸನಾದನೋ ಆಗಲೇ ಮಾನವೀಯತೆ ಕುಸಿದು ರಾಜಕೀಯತೆ ಮಿತಿಮೀರಿ ಬೆಳೆಯುತ್ತದೆ. ಇದರಿಂದಾಗಿ ಆತ್ಮವಂಚನೆಯೇ ಹೆಚ್ಚಾಗಿ ಆತ್ಮಹತ್ಯೆಗಳು ನಡೆಯುತ್ತದೆ.
ಜೀವ ಹೋದರೂ ಮತ್ತೆ ಜನ್ಮಪಡೆಯುತ್ತದೆ ಆತ್ಮಹತ್ಯೆಗೆ ಪರಿಹಾರವಿದೆಯೆ? ಹಣ ನೀಡಿದರೆ ಪರಿಹಾರವಲ್ಲ ಜ್ಞಾನ ನೀಡಬೇಕು. ಜ್ಞಾನ ನೀಡಲಾಗದು ಬೆಳೆಸಿಕೊಳ್ಳಲು ಶಿಕ್ಷಣ ಕೊಡಬೇಕು.ದುಷ್ಟಶಕ್ತಿಗೆ ಶಿಕ್ಷೆ ನೀಡಿಯಾದರೂ ತಡೆಯಬೇಕು. ಆದರೆ ವಿಪರ್ಯಾಸವೆಂದರೆ ನಮ್ಮ ಭಾರತದ ಶಿಕ್ಷಣದ ಶಿಷ್ಟಾಚಾರ ಬಿಟ್ಟು ಭ್ರಷ್ಟಾಚಾರ ಬೆಳೆದು
ಭೌತಿಕದೆಡೆಗೆ ಜೀವ ಹೊರಟಿದೆ. ಅಧ್ಯಾತ್ಮ ದ ತತ್ವ ಭೌತಿಕದ ತಂತ್ರದೆಡೆಗೆ ಸಾಗುತ್ತಿದೆ ಎಂದರೆ ಎತ್ತ ಸಾಗಿದೆ ಮನುಕುಲ?
ಅದ್ವೈತ ಸಂಶೋಧನಾ ಕೇಂದ್ರಕ್ಕೆ ತಲುಪಿಸಬೇಕಾಗಿ ವಿನಂತಿ.
No comments:
Post a Comment