ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, January 31, 2023

ಸರ್ಕಾರದ ಯೋಜನೆ ಜನರ ಯೋಚನೆಗೆ ಪೂರಕವೆ? ಮಾರಕವೆ?

ಈವರೆಗಿನ ಸರ್ಕಾರದ ಯೋಜನೆಗಳಿಂದ ದೇಶದ ಸಾಲ ಕಡಿಮೆಯಾಯಿತೆ? ಜನರ ಸಾಲ ತೀರಿತೆ? ಬಡವರು ಇಲ್ಲವೆ? 
ಋಣ= ಸಾಲ
ಕರ್ಮ= ಕೆಲಸ ಸತ್ಕರ್ಮ, ಸ್ವಧರ್ಮ, ಸುಜ್ಞಾನದಿಂದಾದ ಯೋಚನೆ, ಯೋಜನೆಯಿಂದ ಮಾತ್ರ ಸಾಲ ತೀರಿಸಲು ಸಾಧ್ಯ. ಸರ್ಕಾರದ ಹಣ ದೇಶದ ಋಣ ,ದೇಶದ ಸೇವೆಯಿಂದ ಋಣ ತೀರುತ್ತದೆ ಎಂದರೆ  ಯೋಗಿಗಳ ದೇಶದ ಋಣ ತೀರಿಸಲು ಯೋಗಿಗಳಿಂದ ಸಾಧ್ಯ. ಯೋಗಿಯಾಗಲು ಯೋಗ್ಯ ಶಿಕ್ಷಣವಿರಬೇಕು. 
ರೋಗಿಗಳಿಂದಾಗಲಿ,ಭೋಗದಿಂದಾಗಲಿ ಸಾಲ ತೀರಿಸಲಾಗದು. ಮಧ್ಯವರ್ತಿ ಮಾನವನೊಳಗಿರುವ ದೈವತ್ವ ಅಸುರತ್ವದ  ಕಡೆಗೆ  ಸಹಕರಿಸಿದಷ್ಟೂ ಅಸುರ ಶಕ್ತಿಯೇ ಆಳುವುದು. ಇದಕ್ಕೆ ನಮ್ಮದೇ ಸಹಕಾರವಿದ್ದರೆ ಪ್ರತಿಫಲ ವೂ ಜೀವವೇ ಅನುಭವಿಸುವುದು.  ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಾಗಬಾರದಷ್ಟೆ. ಅನಾವಶ್ಯಕವಾಗಿ ಸಾಲ ಮಾಡಬಾರದು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂದಾಗಬಾರದು. ಸಾಲವೇ ಶೂಲ. ಸಾಲ ತೀರಿಸಲು ಬಂದ ಜೀವಕ್ಕೆ ಮತ್ತಷ್ಟು ಸಾಲದ ಹೊರೆ ಹಾಕಿದರೆ  ಮಾನವ ಅವನಿಗೆ ಅವನೇ ಶತ್ರುವಾಗಿರುವುದು ಸತ್ಯ.  ಹಾಸಿಗೆ ಇದ್ದಷ್ಟು ಕಾಲು ಚಾಚು, ಪ್ರಜೆಗಳಿಗೆ ಉತ್ತಮ ಶಿಕ್ಷಣವನ್ನು  ಉಚಿತವಾಗಿ  ನೀಡಿದ್ದರೆ  ಆರೋಗ್ಯವೂ ಉತ್ತಮವಾಗಿದ್ದು  ಸತ್ಷ್ರಜೆಗಳಿಂದ ದೇಶೋದ್ದಾರವಾಗಿ ವಿದೇಶಕ್ಕೆ ನಾವು ಸಾಲ ಕೊಡುವಷ್ಟು  ಶ್ರೀಮಂತ ರಾಗಬಹುದಿತ್ತು. ವಿಪರ್ಯಾಸವೆಂದರೆ ವಿದೇಶದಿಂದ ಸಾಲ ತಂದು ದೇಶ ನಡೆಸೋದನ್ನು ಪ್ರಗತಿ ಎನ್ನುವ ಹಂತಕ್ಕೆ ಭಾರತೀಯರು  ಅಜ್ಞಾನದಲ್ಲಿ ಮುಳುಗಿರುವುದು  ಜ್ಞಾನಿಗಳಿಗೆ  ಕಾಣಬೇಕಿತ್ತು. ಧರ್ಮದೆಡೆಗೆ ರಾಜಕೀಯ ನಡೆದು ಬರೋದರ ಬದಲಾಗಿ ಧಾರ್ಮಿಕ ಕ್ಷೇತ್ರವೇ ರಾಜಕೀಯದ ಹಿಂದೆ ನಿಂತು ಬೇಡುವಂತಾದರೆ ಆತ್ಮನಿರ್ಭರ ಭಾರತವಾಗುವುದೆ? ಒಟ್ಟಿನಲ್ಲಿ ಎಲ್ಲಾರೂ ಮಾಡುವುದು ಓಟಿಗಾಗಿ ನೋಟು ಸೀಟಿಗಾಗಿ ಎಂದರೂ  ಕೆಲವರ  ಉನ್ನತ ಮಟ್ಟದ ಯೋಚನೆ ಸರಿಯಾಗಿ ಅರ್ಥ ಮಾಡಿಕೊಳ್ಳಲು ಜನರಿಗೆ  ಜ್ಞಾನವಿರಬೇಕಲ್ಲವೆ? ಸರ್ಕಾರದ ಯೋಜನೆಯ ಫಲಾನುಭವಿಗಳೇ  ಮಧ್ಯವರ್ತಿಗಳು. ಇವರನ್ನು ತಡೆಯುವ ಶಕ್ತಿ ಸರ್ಕಾರಕ್ಕೆ  ಇದ್ದರೆ  ದೇಶದಲ್ಲಿ  ಸಾಕಷ್ಟು ಬದಲಾವಣೆ ಸಾಧ್ಯ. ಮಾಧ್ಯಮಗಳು, ಮಧ್ಯವರ್ತಿಗಳು  ಮದ್ಯೆ ನಿಂತು ಹರಿದುಹೋಗುವ  ಸಾಲ ಸೌಲಭ್ಯಗಳನ್ನು  ಸರಿಯಾಗಿ ತಲುಪಿಸುವ ಕಾರ್ಯದಲ್ಲಿ  ಸೋತರೆ  ಸರ್ಕಾರದ ಯೋಜನೆ ನೀರಿನಲ್ಲಿ ಹೋಮಮಾಡಿದಂತೆ. 
ನಮ್ಮದೇ ಹಣವನ್ನು ನಮಗೇ ಕೊಡುವುದು ಧರ್ಮ.
ನಮ್ಮದಲ್ಲದ ಹಣವನ್ನು ನಾವು ಪಡೆದು ಪರರಿಗೆ ಕೊಡುವುದೂ ಅಧರ್ಮ ವೆ. ಪರರ ಹಣವನ್ನು ಪಡೆದು ನಮ್ಮವರಿಗೆ ಹಂಚಿ ಆಳುವುದೂ ಅಧರ್ಮ, ಪರರ ಸೇವೆಗೆ ನಮ್ಮವರನ್ನೇ  ಬಳಸಿ ಆಳುವುದೂ ಅಧರ್ಮ. ಇಲ್ಲಿ ಸಾಕಷ್ಟು ಅಧರ್ಮ ಬೆಳೆಯಲು ಜ್ಞಾನದ ಕೊರತೆಯ ಶಿಕ್ಷಣವೇ ಕಾರಣ.
ಬದಲಾವಣೆ‌ ಜ್ಞಾನದಿಂದ ಆದರೆ ಹಣದ ಸದ್ಬಳಕೆ ಆಗುತ್ತದೆ.
ಒಂದೊಂದು ಸಮಾವೇಷಕ್ಕೆ,ಸಮಾರಂಭಕ್ಕೆ,ಸಮಾರಾಧನೆಗೆ  ಬಳಸುವ ಹಣವನ್ನು ದೇಶದ ಮಕ್ಕಳ ಶಿಕ್ಷಣದ ಸುಧಾರಣೆಗೆ ಬಳಸಿ  ಜನರಲ್ಲಿ ಜ್ಞಾನವನ್ನು ಹೆಚ್ಚಿಸುವ ಕೆಲಸ ಈವರೆಗೆ ಯಾವ ಸರ್ಕಾರವೂ ಮಾಡದಿರೋದರ ಹಿಂದೆ ಪ್ರಜೆಗಳ ಅಜ್ಞಾನದ  ಅಸಹಕಾರವೇ ಕಾರಣ. ಇದರ ಪ್ರತಿಫಲವೇ ರಾಜಕಾರಣಿಗಳು,ಶ್ರೀಮಂತ ವರ್ಗ, ಇನ್ನಿತರ ಪ್ರತಿಷ್ಠಿತ ರ  ಆಡಳಿತದ ತುಳಿತದಲ್ಲಿ  ಜನಜೀವನ ಹಿಂದುಳಿದಿರೋದು. 

No comments:

Post a Comment