ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Wednesday, February 1, 2023

ಸಾಧಕರಾಗುವುದು ಬೇಕೆ? ಯಾಕೆ? ಹೇಗೆ?

ಜೀವನದ ಸೋಲು ಗೆಲುವಿನ ನಡುವಿನ ಹೋರಾಟದಲ್ಲಿ ಸೋತವರು ಗೆಲ್ಲಲು ಬರುತ್ತಾರೆ.ಗೆದ್ದವರು ಮತ್ತೆ ಬಂದು ಸೋಲುತ್ತಾರೆ.
ಇದರರ್ಥ  ಜೀವನ ಒಂದು ತಾತ್ಕಾಲಿಕ ಜೀವದ ನಡಿಗೆಯಾಗಿರುತ್ತದೆ. ಒಬ್ಬ ವ್ಯಕ್ತಿ ಜೀವನದ ಮುಖ್ಯ ಗುರಿಯಕಡೆಗೆ ನಡೆದಂತೆಲ್ಲಾ  ಸೋಲುಗಳು ಬಂದರೂ ಮತ್ತೆ ಮತ್ತೆ ಅದೇ ಗುರಿಯ ಕಡೆಗೆ  ಎದ್ದು ಬಿದ್ದು ತಲುಪಿದಾಗ  ಜನ ಅವನನ್ನು ಗುರುತಿಸಿ  ಸನ್ಮಾನದಿಂದ ಮೇಲೆತ್ತಿದಾಗ  ತಾನು ಗುರಿ ತಲುಪಿದ ಮಹಾವ್ಯಕ್ತಿ ಎನ್ನುವ ಭಾವನೆಯಲ್ಲಿ ಮುಂದೆ ನಡೆದವರಿಂದ ಹಲವು ತಪ್ಪು ಗಳಾದರೂ ಜನ ಅದನ್ನು ಗುರುತಿಸಿದರೂ ಹೇಳೋದಿಲ್ಲ ಕಾರಣ ,ಅವನ ಹಿಂದಿನ ಶ್ರಮದ ಜೀವನ  ಚರಿತ್ರೆಯಾಗಿ ಜನರಲ್ಲಿ  ಉತ್ತಮ ಬಾವನೆಯಿರುತ್ತದೆ. ಆದರೆ, ಅವನ ತಪ್ಪು ಎತ್ತಿ ಹಿಡಿಯುವವರು ತಪ್ಪಿತಸ್ಥರಾಗುತ್ತಾರೆನ್ನಬಹುದು. 

ರಾಮಾಯಣ ಮಹಾಭಾರತದಂತಹ  ಪುರಾಣ ಕಥೆಗಳಲ್ಲಿ ಬರುವ ಪಾತ್ರಗಳಲ್ಲಿದ್ದ ಧಾರ್ಮಿಕ ತಾತ್ವಿಕ ವ್ಯಕ್ತಿತ್ವದ ಬಗ್ಗೆ ಮಾತನಾಡುವಾಗ ಬಹಳ ಎಚ್ಚರವಾಗಿರಬೇಕು. ಅಂದಿನ ರಾಜ ಪ್ರಭುತ್ವದ ಕ್ಷತ್ರಿಯ ಧರ್ಮ, ಧಾರ್ಮಿಕತೆಯನ್ನು ಮೀರಿ ನಡೆದಿರಲಿಲ್ಲ. ಹಾಗೆ ಈಗಿನ ಪ್ರಜಾಪ್ರಭುತ್ವದ ಪ್ರಜಾಧರ್ಮವು  ದೇಶದಿಂದ ವಿದೇಶದೆಡೆಗೆ ನಡೆದಿರುವಾಗ ಯಾರ ಧರ್ಮ ಶ್ರೇಷ್ಠ ಕನಿಷ್ಠ ಎನ್ನಬಹುದು?  ಸರ್ಕಾರದ ಸಾಧನೆಗೆ ಸಹಕರಿಸಿರುವ ಪ್ರಜೆಗಳಿಗೆ ಸಿಕ್ಕಿದ್ದು ಭ್ರಷ್ಟಾಚಾರ. ಹಾಗಾದರೆ ಭ್ರಷ್ಟಾಚಾರ ವನ್ನು ಬೆಳೆಸಿದ್ದೂ ಪ್ರಜೆಗಳೆ ಆದಾಗ ಯಾರನ್ನು ಸಾಧಕರೆನ್ನಬಹುದು? ಒಟ್ಟಿನಲ್ಲಿ ಕೋಟ್ಯಾಂತರ ರೂಗಳ ಕಾರ್ಯಕ್ರಮ  ಎಲ್ಲಾ ಕ್ಷೇತ್ರದಲ್ಲಿ ನಡೆಯುತ್ತಿದೆ.ಕೋಟ್ಯಾಂತರ ಜನ ಜೀವನವೂ  ಹಾಳಾಗಿದೆ. ಲಕ್ಷಾಂತರ ಸಾಧಕರು ಮರೆಯಾಗಿದ್ದಾರೆ. ದೇಶ ಮಾತ್ರ ಹಿಂದುಳಿದ ಸಂಖ್ಯೆಯಲ್ಲಿ ಮುಂದೆ ಬಂದಿದೆ. ಈ ಸಂಖ್ಯಬಲವು ರಾಜಕೀಯಕ್ಕೆ ಸಹಕರಿಸಿ ಇನ್ನಷ್ಟು ಅಜ್ಞಾನದಲ್ಲಿ  ಹೋಗುತ್ತಿದೆ. ಯಾವುದೇ ಆಗಲಿ ಅತಿಯಾದರೆ ಗತಿಗೇಡು .ಸರ್ಕಾರ ಇರೋದು ದೇಶ ಸೇವೆಗೆ, ಆದರೆ ಜನರಸೇವೆಯೇ ದೇಶಸೇವೆ ಎಂದರೆ ಜನರಲ್ಲಿ  ದೈವತ್ವ ವಿದೆಯೆ? ಅಸುರತ್ವವೆ? ಎರಡೂ  ನಮ್ಮೊಳಗೇ ಇದೆ.
ಯಾವುದರೆಡೆಗೆ ಹೋಗುವೆವೋ ಅದರ ವಶವಾಗುವುದು ಜೀವ. ಇದನ್ನು ಧಾರ್ಮಿಕ ವರ್ಗ ಅರ್ಥ ಮಾಡಿಕೊಂಡರೆ ಉತ್ತಮ  ರೀತಿಯಲ್ಲಿ ದೇಶ ಕಟ್ಟಬಹುದು. ವಿಪರ್ಯಾಸವೆಂದರೆ ನಮ್ಮವರಿಗೆ ಕೊಡಬೇಕಾದ ಧಾರ್ಮಿಕ ಶಿಕ್ಷಣದ ಕೊರತೆ  ಅಧರ್ಮ ವನ್ನು ಬೆಳೆಸಿ ಆಳಲು ಹೊರಟಿದೆ. ಇದು ಸಾಧನೆಯಾದರೆ ಎಲ್ಲಾ ಸಾಧಕರೆ.
ಪ್ರತಿಪಕ್ಷವೂ  ಜನರನ್ನು ಆಳುವುದಕ್ಕೆ  ಹೊರಟಿರೋದು  ಪ್ರಜಾಪ್ರಭುತ್ವದ ಧರ್ಮವಾಗುವುದೆ?
ಇಲ್ಲಿ ಸಮಾಜದ ದೃಷ್ಟಿಯಲ್ಲಿ   ಕಷ್ಟಪಟ್ಟು ಮೇಲೇರಿದವರ ತಪ್ಪು  ತಪ್ಪಾಗದಿದ್ದರೆ ಅದು ಜನರನ್ನು ಇನ್ನಷ್ಟು ತಪ್ಪಿದ ದಾರಿಗೆ ಎಳೆಯುವುದೂ ಸತ್ಯ. ಹೀಗಾಗಿ ತಪ್ಪು ಯಾರೇ ಮಾಡಿದರೂ ತಪ್ಪಾಗಿರುತ್ತದೆ. ಹೇಳಿದರೆ ಸರಿಪಡಿಸಿಕೊಳ್ಳಲು ಸಾಧ್ಯವಾದರೆ  ವ್ಯಕ್ತಿಯು ಇನ್ನಷ್ಟು ಉತ್ತಮ ವಾಗಿ ಬೆಳೆಯಬಹುದು.ಇದು ಮಕ್ಕಳು ಮಹಿಳೆಯರಿಗೆ ಅಗತ್ಯವಿದೆ.
ಹೀಗೇ ತಪ್ಪು ಮಾಡುತ್ತಾ ಹೋದರೂ ಯಾರೂ ತಿಳಿಸದೆ ಮುಂದೆ ನಡೆದ ಜೀವ ಒಮ್ಮೆ ಹೋಗುತ್ತದೆ. ತಿರುಗಿ ಬಂದಾಗ ಹಿಂದಿನ ಜನ್ಮದ ಆಸೆ ಆಕಾಂಕ್ಷೆಗಳು ಮತ್ತೆ ಜೀವಂತವಾಗೇ ಇರುವುದರಿಂದ ಅದೇ ಜೀವನವಾಗುತ್ತದೆನ್ನುವರು. ಅಂದರೆ ಹಿಂದಿನ ಜನ್ಮದ ಪಾಪ ಪುಣ್ಯಗಳ ಮಿಶ್ರಣವೇ ಜೀವನದ ಆಗು ಹೋಗುಗಳ ಮೂಲ. ಶ್ರೀ ಕೃಷ್ಣ ಪರಮಾತ್ಮ ತಿಳಿಸಿದಂತೆ
ಕೊನೆಕ್ಷಣದಲ್ಲಿ ಮಾನವನ  ಮನಸ್ಸು ಏನು ಚಿಂತಿಸಿ ಹೋಗುವುದೋ  ಅದೇ ಚಿಂತನೆಯು ಮುಂದಿನ ಜನ್ಮದ ಪ್ರಾರಂಭವಾಗಿರುತ್ತದೆ. ಮಕ್ಕಳಿಗೆ ಸಂಸ್ಕಾರ ಕೊಡುವ ಉದ್ದೇಶ ಇದೇ ಆಗಿತ್ತು.ಕೆಟ್ಟ ಶಕ್ತಿಯನ್ನು  ಹೊರಗೆ ಹಾಕಿ ಒಳ್ಳೆಯದನ್ನು ಸೇರಿಸುವುದೇ ಸಂಸ್ಕಾರದ ಉದ್ದೇಶ. ಈಗ ಸಾಕಷ್ಟು ಶಾಸ್ತ್ರ ಸಂಪ್ರದಾಯ, ಆಚರಣೆ, ಇನ್ನಿತರ ಕಾರ್ಯಕ್ರಮ  ನಡೆಸಿದರೂ ಅದರೊಳಗಿರುವ ನಕಾರಾತ್ಮಕ ಭಿನ್ನಾಭಿಪ್ರಾಯ, ದ್ವೇಷ, ಅಸೂಯೆಗಳ ಸಂಸ್ಕಾರವಾಗದೆ ಕಾಟಾಚಾರ, ಮೂಢನಂಬಿಕೆ ಹೆಚ್ಚಾಗಿ ದೈವತ್ವ ಕುಸಿದಿದೆ. ಸಾಧ್ಯವಾದರೆ ಆಚರಣೆಯು ಶುದ್ದ ಮನಸ್ಸಿನಿಂದ ಸರಳವಾಗಿ ಯಾವ ಸಾಲಮಾಡದೆ ನಡೆಸಿದರೆ ಅದು ಉತ್ತಮ ಜೀವನವಾಗಬಹುದು.ಒಗ್ಗಟ್ಟನ್ನು ಬೆಳೆಸಬೇಕಾಗಿದ್ದ ಆಚರಣೆಯು ರಾಜಕೀಯ ರೂಪ ಪಡೆದು ಬಿಕ್ಕಟ್ಟು, ಭಿನ್ನಾಭಿಪ್ರಾಯ ಬೆಳೆಸಿದರೆ ಸಾಧನೆಯಾಗದು. ಇದು ಧಾರ್ಮಿಕ , ಸಾಹಿತ್ಯಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಾಗಿ ರಾಜಕೀಯದೆಡೆಗೆ  ಸಾಗಿದೆ.ನಮಗೆ ರಾಜಕೀಯ ಕ್ಷೇತ್ರವಷ್ಟೆ ಕಾಣೋದರಿಂದ ರಾಜಕಾರಣಿಗಳ ಹಿಂದೆ ನಿಂತಿರುವ ಮಧ್ಯವರ್ತಿಗಳು  ರಾಜಾರೋಷವಾಗಿ ಬೆಳೆದಿರೋದು   ಮಾನವನಿಗೇ  ನುಂಗಲಾರದ. ತುತ್ತಾಗುತ್ತಿದೆ.
ಸಾಮಾನ್ಯವಾಗಿ ನಾವೀಗ  ಪ್ರಜಾಪ್ರಭುತ್ವದ ದೇಶದಲ್ಲಿರುವ ಸಾಮಾನ್ಯಪ್ರಜೆಗಳಷ್ಟೆ ಆದರೂ ಕೆಲವರಿಗೆ  ಅತಿಯಾದ ಅಧಿಕಾರ, ಪುರಸ್ಕಾರ, ಕೆಲವರಿಗೆ ಅತಿಯಾದ ತಿರಸ್ಕಾರ .ಎಲ್ಲಾ ಒಂದೇ ಎನ್ನುವ ಪ್ರಚಾರವಷ್ಟೆ. ಇದರಲ್ಲಿ ಗೆದ್ದವರು  ಅಧಿಕಾರ ಪಡೆದು ಪುರಸ್ಕಾರಗಳಿಸುವವರೆನ್ನುವ ಭ್ರಮೆಯಲ್ಲಿ  ಜನಜೀವನ ಇದ್ದರೆ , ತಿರಸ್ಕಾರದಿಂದ  ಕಂಡ ವ್ಯಕ್ತಿಯೂ  ಒಮ್ಮೆ ಜೀವನದಲ್ಲಿ ಮೇಲೆದ್ದು ಪುರಸ್ಕಾರ ಪಡೆಯುತ್ತಾನೆ. ಅಂದಾಗ ಯಾವುದೂ ಯಾರೂ ಶಾಶ್ವತವಲ್ಲ. ಶಾಶ್ವತವಾಗಿರೋದು ಆತ್ಮ ಮಾತ್ರ.ಹೀಗಾಗಿ ಕಷ್ಟಪಟ್ಟು ಆತ್ಮಜ್ಞಾನದೆಡೆಗೆ ಹೋಗುವಾಗ  ಕೆಲವರಿಗೆ ಮದ್ಯೆ ಪುರಸ್ಕಾರ,ಅಧಿಕಾರ,ಸನ್ಮಾನಗಳು ಸಿಗುತ್ತದೆ ಆಗ ಅಲ್ಲಿಯೇ ನಿಂತು  ರಾಜಕೀಯಕ್ಕೆ ಇಳಿಯುವವರೂ ಹೆಚ್ಚು.ಆದರೆ ಕೆಲವರಿಗಷ್ಟೆ ಮೊದಲಿನಿಂದಲೂ ವಿರೋಧಗಳಿದ್ದು ಯಾವ ಸಹಕಾರವಿಲ್ಲದೆಯೇ  ಜೀವನದ ಸತ್ಯಾಸತ್ಯತೆಯನ್ನು ತಿಳಿಯಲು ಸಾಧ್ಯ. ಇವರು  ಜನರಿಗೆ ಹಣ ನೀಡುವ ಶ್ರೀಮಂತ ರಾಗದಿದ್ದರೂ  ಜ್ಞಾನ ನೀಡುವ ಗುರುವಾಗಿರೋದು ನಮ್ಮ ಸನಾತನ ಧರ್ಮದ  ಅಧ್ಯಾತ್ಮ ಸಾಧಕರಲ್ಲಿ ಮಾತ್ರ ಕಾಣಬಹುದು. ಪರಧರ್ಮದವರು ಹಣದಿಂದ ಜನರನ್ನು  ನಡೆಸಬಹುದೆನ್ನುವ ಭ್ರಮೆಯಲ್ಲಿ ಬದುಕಿದರೆ, ಹಿಂದೂ ಧರ್ಮದವರ  ಜ್ಞಾನವೇ ಜೀವನಕ್ಕೆ ಬಂಡವಾಳ. ಇದಿಲ್ಲದ ಹಣ ಅಜ್ಞಾನವನ್ನು ಬೆಳೆಸಿ ಭೌತಿಕ ಸಾಧನೆಗೆ  ಪ್ರೇರಣೆ ನೀಡಿ  ಸೋಲು ಗೆಲುವಿನ ಹೋರಾಟವು ನಿರಂತರವಾಗಿ ನಡೆಯುತ್ತಿರುತ್ತದೆ. ಯಾರೂ ಸೋತವರೂ ಇಲ್ಲ ಗೆದ್ದವರೂ ಇಲ್ಲ. ಎಲ್ಲರೂ ಒಂದೇ ಭೂಮಿಯಲ್ಲಿ  ಜನ್ಮ ಜನ್ಮದ ಫಲವನ್ನು ಅನುಭವಿಸುವ ಸಾಮಾನ್ಯರು ಮಾನವರು.
 ಸಾಧನೆ ಮಾಡೋದು ತಪ್ಪಲ್ಲ ಆ ಸಾಧನೆಯ ಮಾರ್ಗ ತಪ್ಪಾಗಬಾರದು. ಯಾರನ್ನೂ ಕಾಡಿ ಬೇಡಿ ಎಷ್ಟೇ ಸಾಧನೆ ಮಾಡಿದರೂ  ಅದೊಂದು ನಾಟಕವಾಗಿರುತ್ತದೆ. ಭಗವಂತನ ನಾಟಕದಲ್ಲಿ ಪಾತ್ರಧಾರಿಗಳಾಗಿರುವಾಗ  ಭಗವಂತನೆಡೆಗೆ ಹೋಗುವ ಮಾರ್ಗದಲ್ಲಿ ಸಾಧನೆ ಮಾಡಿದವರಿಗೇ ಸಿಗದ ಮೋಕ್ಷ ಹುಲುಮಾನವರ ನಾಟಕಕ್ಕೆ ಸಿಗುವುದೆ? 

ಭೂಮಿಯನ್ನು  ಸರಿಯಾಗಿ ಅರ್ಥ ಮಾಡಿಕೊಂಡು ಸೇವಾ ಮನೋಭಾವದಿಂದ  ಜೀವನ ನಡೆಸಿದವರು ಮಹಾತ್ಮರಾದರು. 
ತತ್ವಜ್ಞಾನದಲ್ಲಿ  ನಾಟಕಕ್ಕೆ  ಬೆಲೆಯಿಲ್ಲ.ತಂತ್ರಜ್ಞಾನದ ನಾಟಕಕ್ಕೆ ಬೆಲೆಹೆಚ್ಚು ಆದರೆ ಇದು ಸ್ಥಿರವಾಗಿರೋದಿಲ್ಲ.
 ಬ್ರಹ್ಮ ಪುರಾಣ,ವಿಷ್ಣು ಪುರಾಣ,ಶಿವಪುರಾಣಕ್ಕೆ ಕೊಡುವ ಸ್ಥಾನ ದೇವಿಪುರಾಣಕ್ಕೂ ಕೊಟ್ಟರೆ ಯಾವ ರಾಮಾಯಣ ಮಹಾಭಾರತ ಯುದ್ದ ನಡೆದಿದೆಯೋ ಅದಕ್ಕೆ ಕಾರಣ ತಿಳಿಯಬಹುದು.

No comments:

Post a Comment