ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, February 21, 2023

ಆಳುವವರು ಆಳಾಗಿರುತ್ತಾರೆ

ಹಿಂದೂ ಧರ್ಮದ  ಚಿಂತನೆಗಳು ಜೀವನ್ಮುಕ್ತಿಯೆಡೆಗೆ ಆತ್ಮಸಾಕ್ಷಿಯ ಕಡೆಗಿತ್ತು. ಕಾಲಾನಂತರದ ರಾಜಕೀಯ ಪ್ರಭಾವದಿಂದಾಗಿ  ಮನುಷ್ಯತ್ವ ಮರೆತವರು ತತ್ವವನ್ನು ತಂತ್ರವಾಗಿ ಬಳಸಿಕೊಂಡು ಜೀವವನ್ನೇ ಆಳಲು ಹೊರಟು ಆತ್ಮಹತ್ಯೆ ಮಾಡಿಕೊಂಡವರೆ ಹೆಚ್ಚಾದರು. ಇದನ್ನು ತಡೆಯಲು ಹೊರಟ ಪರಧರ್ಮದವರು ಜೀವಕ್ಕೆ ಬೆಲೆಕಟ್ಟಿ ಕೊಂಡುಕೊಳ್ಳುವ ವ್ಯವಹಾರಕ್ಕೆ ತಮ್ಮ ಧರ್ಮ ಬಳಸಲು ಮುಂದಾದರು.ಇದೀಗ ಎಷ್ಟರ ಮಟ್ಟಿಗೆ  ಸಮಸ್ಯೆ ಗೆ ಕಾರಣ ಆಗಿದೆಯೆಂದರೆ  ಮಹಾತ್ಮರನ್ನೂ ಬಿಡದೆ ಎಲ್ಲಾ ಧರ್ಮದ ಉದ್ದೇಶ ಹಣ,ಅಧಿಕಾರ,ಸ್ಥಾನಮಾನ ಪಡೆದು ಜನರನ್ನು ಆಳುವುದು. ಇದನ್ನು ಸತ್ಯಜ್ಞಾನವೆಂದರೆ   ತಪ್ಪು. ಮಿಥ್ಯಜ್ಞಾನದಲ್ಲಿ ವ್ಯವಹಾರವೇ ಮುಖ್ಯ ಧರ್ಮ ವಲ್ಲ.
ಸತ್ಯದ ಬೆನ್ನತ್ತಿ ಹೋದವರಿಗಷ್ಟೆ ಹಿಂದಿರುವ ತಂತ್ರದ ದರ್ಶನ.ಎಲ್ಲಾ ಮಾನವರಾದಾಗ ಎಲ್ಲರಲ್ಲಿಯೂ ತಂತ್ರವಿದೆ.ಒಬ್ಬರಿಗೊಬ್ಬರು ಆಳಿಕೊಳ್ಳಲು ಮುಂದಾದಷ್ಟೂ ಕುತಂತ್ರ ಹೆಚ್ಚಾಗುತ್ತಾ ಕೊನೆಗೆ ಒಳಗೇ ಇದ್ದ ಸ್ವತಂತ್ರ ಜ್ಞಾನ ಹಿಂದುಳಿಯುತ್ತದೆ. ಇದರಿಂದಾಗಿ ಕಷ್ಟ ನಷ್ಟ ಅನುಭವಿಸುವುದು ಒಳಗಿನ ಜೀವವೇ ಹೊರತು ಹೊರಗಿನ ಜೀವನವಲ್ಲ. ಜೀವನದಲ್ಲಿ ಸಾಕಷ್ಟು ಜೀವಿಗಳ ವನವಿದೆ. ಆ ವನವನ್ನು  ಆಳೋಬದಲಾಗಿ ಸರಿಯಾದ ಪೋಷಣೆ ಮಾಡಿ ಬೆಳೆಸಿ ಬೆಳೆಯಲು ಬಿಟ್ಟರೆ ತಾನೇ ಒಳ್ಳೆಯ ಫಲ ನೀಡಲು ಸಾಧ್ಯ? ಕಲಿಗಾಲದ ಪ್ರಭಾವ ಎಲ್ಲರಿಗೂ ಆಳುವುದಕ್ಕೆ  ಆಸೆ ಆದರೆ  ಜ್ಞಾನಗಳಿಸುವುದಕ್ಕೆ ಆಸೆಯಿಲ್ಲದ ಕಾರಣ ಅಸತ್ಯ ಅನ್ಯಾಯ, ಅಧರ್ಮದೆಡೆಗೆ  ಸಹಕಾರ ಕೊಡುತ್ತಾ ಅದರಲ್ಲಿ ಸುಖವಿದೆ ಎನ್ನುವ ಭ್ರಮೆಯಲ್ಲಿ ತಾನೂ ಹಾಳಾಗಿ ಇತರರನ್ನು ಹಾಳುಮಾಡಿ ಹೋಗುವ  ಆಳುವವರು ಮತ್ತೆ ಜನ್ಮ ಪಡೆದಾಗ ಆಳಾಗಿರುತ್ತಾರೆ.
ಸಾಮಾನ್ಯವಾಗಿ ನಾವೀಗ ಎಷ್ಟೋ ಸಾಧಕರ ಮೂಲವನ್ನು ಗಮನಿಸಿದರೆ ತುಂಬಾ ಬಡತನವನ್ನನುಭವಿಸಿ ಮೇಲೆದ್ದು ಬಂದವರಿದ್ದಾರೆ. ಕಷ್ಟಪಟ್ಟು ಸುಖ ಅನುಭವಿಸುವುದು ಸರಿ.ಆದರೆ ಸುಖ ಬಂದಾಗ ಕಷ್ಟದಲ್ಲಿರುವವರನ್ನು ಆಳುವುದು ತಪ್ಪು. ಒಟ್ಟಿನಲ್ಲಿ  ಕರ್ಮಕ್ಕೆ ತಕ್ಕಂತೆ ಫಲ.ಯಾರಿಗೆ ಗೊತ್ತು ನಾವು ಹಿಂದಿನ ಜನ್ಮದಲ್ಲಿ ಏನು ಪಾಪ ಪುಣ್ಯದ ಕರ್ಮ ಮಾಡಿದ್ದೇವೆಂದು. ಇದನ್ನು ಅಧ್ಯಾತ್ಮ
ತಿಳಿಸುತ್ತದೆ.ಆದರೆ, ಅಧ್ಯಾತ್ಮ ದ ವಿಚಾರ ಓದಿ ತಿಳಿಸುವಾಗ ನಮ್ಮನ್ನು ನಾವು ಅರಿಯಲಾಗದೆ ಮೋಸ ಹೋಗುವ ಸಂಭವವೂ ಇರುತ್ತದೆ. ಈ ಮಾಯಾಲೋಕದಲ್ಲಿ ಎಲ್ಲಾ ಕ್ಷಣಿಕವೆ ಎಂದು ತಿಳಿದರೂ ಅಧಿಕಾರ,ಸ್ಥಾನಮಾನ,ಸನ್ಮಾನ
,ಪ್ರಶಸ್ತಿ, ಹಣ,ಜನಕ್ಕಾಗಿ ಪ್ರತಿಕ್ಷಣವೂ ಹಪಹಪಿಸುವ   ಸ್ವಾರ್ಥ. ರಾಜಕೀಯ ಬಿಟ್ಟು ಹಿಂದೆ ಬರುವುದು ಬಹಳ ಕಷ್ಟವಿದೆ. ಇದು ಹೊರಗಿನ ಜಗತ್ತನ್ನು ಆಳಲು ಹೊರಟು ಒಳಗಿನ ಜಗತ್ತಿನಿಂದ ಪಲಾಯನಮಾಡಿ ಗೆದ್ದೆ ಎನ್ನುವ ಭ್ರಮೆಯಲ್ಲಿ  ಹರಡುತ್ತಿದೆ. ಇದು ಧಾರ್ಮಿಕ ಕ್ಷೇತ್ರವನ್ನೇ ಆವರಿಸಿದರೆ ಧರ್ಮ ರಕ್ಷಣೆ ಹೇಗೆ ಸಾಧ್ಯ?
ಈ ಪ್ರಶ್ನೆಗೆ ಈವರೆಗೆ ಯಾವ ಧಾರ್ಮಿಕ ವರ್ಗ ಉತ್ತರ ನೀಡಲಾಗಿಲ್ಲ.ಕಾರಣವಿಷ್ಟೆ ಧರ್ಮಕ್ಕಿಂತವ್ಯವಹಾರವೇ ಮುಖ್ಯ.ಹಣವಿಲ್ಲದವರನ್ನು ಜನರು ಬದುಕಲು ಬಿಡೋದಿಲ್ಲ.ಒಬ್ಬ ಶುದ್ದ ಬ್ರಾಹ್ಮಣನ ಬಡತನವು ಅವನ ಸಂಸಾರವನ್ನು ನಾಶ ಮಾಡುತ್ತದೆಂದರೆ ಜ್ಞಾನ ಮೇಲೆ ಬರಲು ಕಷ್ಟವಿದೆ.ಹಾಗಂತ ಅಜ್ಞಾನದಿಂದ ಸಂಸಾರ ನಡೆಸಿದರೆ ಜೀವನ್ಮುಕ್ತಿಯಿಲ್ಲವಾದರೆ ಇಲ್ಲಿ ಜೀವಕ್ಕೆ ಮುಕ್ತಿ ಸಿಗದೆ ಅತಂತ್ರಸ್ಥಿತಿಗೆ ತಲುಪಿರುವ ಸಾಕಷ್ಟು ಅತೃಪ್ತ ಆತ್ಮಗಳಿವೆ.
ತೃಪ್ತಿ ಸಿಗುವುದಕ್ಕೆ ಆತ್ಮಜ್ಞಾನ ಬೇಕು.ಆತ್ಮಜ್ಞಾನಕ್ಕೆ ತಕ್ಕಂತೆ ಶಿಕ್ಷಣವಿರಬೇಕು.ಶಿಕ್ಷಣ ನೀಡುವವರು ಸ್ವತಂತ್ರ ಜ್ಞಾನಿಗಳಾಗಿ ಇರಬೇಕು. ಸ್ವತಂತ್ರವಾಗಿರುವ ಸತ್ಯವನ್ನು ತಿಳಿದು ನಡೆಯಬೇಕು. ಸತ್ಯವಿಲ್ಲದ ಧರ್ಮ  ಕುಂಟುತ್ತದೆ. ಧರ್ಮ ವೆ ಇಲ್ಲದ ಭೌತಿಕ ಸತ್ಯ ಕುರುಡರನ್ನು ಬೆಳೆಸುತ್ತದೆ. ಹೀಗಾಗಿ ಸತ್ಯ ಒಳಗಿದೆ ಇದನ್ನು ಒಳಗಿದ್ದೇ ಬೆಳೆಸಿಕೊಳ್ಳಲು  ಜನರಿಗೆ ಸ್ವಾತಂತ್ರ್ಯ ವಿದೆ. ಆದರೆ ಶಿಕ್ಷಣ ಮಾತ್ರ ಹೊರಗಿನದ್ದಾಗಿದ್ದು ಅಸತ್ಯವನ್ನು ಒತ್ತಾಯಪೂರ್ವಕವಾಗಿ ಒಳಗೆ ಸೇರಿಸುತ್ತಾ ಆಳುತ್ತಿದೆ. ಈ ವಿಚಾರವಾಗಿ ಯಾರೂ ಗಮನಕೊಡುತ್ತಿಲ್ಲ.
ಶಿಕ್ಷಣದಲ್ಲಿ ಬದಲಾವಣೆ ಮಾಡಬೇಕೆಂಬ ಕೂಗಿದೆ.ಅದಕ್ಕೆ ಸಾಕಷ್ಟು ಹಣಬಳಕೆಯಾಗಿದೆ,ಸಂಘಟನೆಗಳು ಹುಟ್ಟಿ
ಕೊಂಡಿದೆ, ಚರ್ಚೆ ಮಾಡೋರಿಗೆ ಅಧಿಕಾರ ಹಣವಿದೆ.
ಅಧಿಕಾರ ಹಣದ ಮೂಲವೇ  ಸರ್ಕಾರವಾಗಿದೆ.
ಸರ್ಕಾರ ಭ್ರಷ್ಟರಿಗೆ ಮಣೆ ಹಾಕಿದೆ. ಜ್ಞಾನ ಬರೋದಕ್ಕೆ ಭ್ರಷ್ಟಾಚಾರವೇ ಅಡ್ಡಿಯಾದಾಗ ಅದರ ಮೂಲದವರಿಂದ  ಶಿಕ್ಷಣದ ಬದಲಾವಣೆ ಆದರೂ ಮಕ್ಕಳ  ಮುಗ್ದ ಮನಸ್ಸು,
ಸ್ವಚ್ಚ ಮನಸ್ಸು ಶುದ್ದಿ ಮಾಡಲು ಶಿಕ್ಷಕರು ಶುದ್ದವಾಗಬೇಕು. ಸ್ವಚ್ಚ ಭಾರತವಾಗಲು ಶಿಕ್ಷಣ ಶುದ್ದವಾಗಬೇಕು.ಮೊದಲು ಪೋಷಕರು ಶುದ್ದವಾದರೆ ಅವರವರ ಮನೆಮನೆಯೇ ಗುರುಕುಲವಾಗಬಹುದು.ಇದಕ್ಕೆ  ಭ್ರಷ್ಟರಾಜಕೀಯದ ಬಲವಿದ್ದರೆ ಮಾತ್ರ ಮನೆ ಮನೆಗೂ ಭ್ರಷ್ಟಾಚಾರ ಹರಡುತ್ತದೆ.ಈಗಾಗಲೇ ಹರಡಿದೆ.ಎಲ್ಲೋ ಸ್ವಲ್ಪ ಉಳಿದಿರುವ  ಕಡೆಗೆ  ನಡೆಸದಿದ್ದರೆ ಉತ್ತಮ. ಮರವನ್ನು ಕಡಿದರೂ ಬೇರನ್ನು ಕೀಳಲಾಗದು.ಹಾಗಾಗಿ ಗಿಡದ ಮೂಲ ಶುದ್ದವಾಗಿದ್ದರೆ ನಿಧಾನವಾಗಿ ಉತ್ತಮ ಫಲ ಕೊಡುತ್ತದೆ.
ಯಾರನ್ನೋ ಯಾರೋ ಆಳಲು ಹೊರಟು ತಾವೇ ಆಳಾಗಿರುವ ಸತ್ಯ ನಮಗೇ ತಿಳಿದಿಲ್ಲ. ಸಾಮಾನ್ಯಜ್ಞಾನದ ಕೊರತೆ ಮಾನವನಿಗೆ ಒಳಗೇ ಸೇರಿಕೊಂಡಿರುವ,
ಸೇರುತ್ತಿರುವ ಅಸುರರ ಪರಿಚಯವಾಗದೆ ನಾನೇ
 ದೇವರು ಎನ್ನುವ ಅಹಂಕಾರ ಬೆಳೆದು ಮಕ್ಕಳ ಒಳಗಿನ ದೈವತ್ವ ಕಾಣದಾಗಿದೆ. ಪ್ರತಿಯೊಂದು ದೇಶಕ್ಕೂ ಅದರದೇ ಆದ ಮೂಲ ಶಿಕ್ಷಣಪದ್ದತಿ ಇದೆ.ಆ ದೇಶಕ್ಕೆ ಅದು ಉತ್ತಮ ಭವಿಷ್ಯನಿರ್ಮಾಣ ಮಾಡಬಹುದು. ಯಾವಾಗ ಪರದೇಶದ ಶಿಕ್ಷಣವೇ ಮೂಲ ಶಿಕ್ಷಣವಾಗುವುದೋ ಅದೇ ದೊಡ್ಡ ದುರಂತ ಕ್ಕೆ ಕಾರಣವಾಗುವುದು. ಜನ್ಮದಾರಂಭದಿಂದಲೇ ಹೊತ್ತುಕೊಂಡು ಬಂದಿರುವ ಋಣ ವನ್ನು ಸತ್ಕರ್ಮದಿಂದ ಸ್ವಧರ್ಮದಿಂದ ತೀರಿಸುವುದು ಸುಲಭ.ಆದರೆ ಅದನ್ನರಿಯದೆ ಹೊರಗಿನಿಂದ ಇನ್ನಷ್ಟು ಮತ್ತಷ್ಟು ಋಣ ಅಥವಾ ಸಾಲ ಮೈ ಮೇಲೆಳೆದುಕೊಂಡರೆ ತೀರಿಸಲಾಗುವುದೆ ಈ ವಿಚಾರ ತಿಳಿಯಲು ಜನಸಾಮಾನ್ಯರು ಯಾವ ದೇವರ ಹತ್ತಿರ ಹೋಗುವ ಅಗತ್ಯವಿಲ್ಲ.ಇದೊಂದು ಸಾಮಾನ್ಯ ಜ್ಞಾನ. ಪಾಲಿಗೆಬಂದದ್ದು ಪಂಚಾಮೃತವೆಂದೆಣಿಸಿ ಸರಳ ಜೀವನ ಸತ್ಯ,ಧರ್ಮದ ಕಾಯಕದಲ್ಲಿ ತೃಪ್ತಿ ಕರ ಸಂಸಾರ ನಡೆಸಿದ ಹಿಂದಿನವರಲ್ಲಿದ್ದ ತತ್ವಜ್ಞಾನ ಇಂದಿನವರಲ್ಲಿ ಮರೆಯಾಗಿ ತಂತ್ರಜ್ಞಾನದಲ್ಲಿ ಸಾಕಷ್ಟು ಸಂಶೋಧನೆಯಾಗಿದೆ.ತಂತ್ರದಿಂದ ಸ್ವತಂತ್ರ ಜ್ಞಾನ ಸಿಗದು.ಕಾರಣ ಇದು ಒಂದೇ ಇರೋದು.ಸತ್ಯ ಒಂದೇ ಇರೋದು.ಒಬ್ಬ ದೇವರನ್ನು ಕೋಟಿ ಮಾಡಿಕೊಂಡರೂ ಮೂಲ ಒಬ್ಬನೆ.
ದೇಹದೊಳಗೆ ಏನು ಸೇರಿಸಿದರೂ ಜೀವವೆ ಅನುಭವಿಸುವಂತೆ  ಪರಮಾತ್ಮನ  ಹೆಸರಿನಲ್ಲಿ ನಡೆಸುವ ಕಾರ್ಯದಲ್ಲಿ ಸ್ವಚ್ಚತೆಯಿಲ್ಲವಾದರೆ  ದೈವಶಕ್ತಿ ಕ್ಷೀಣಿಸಿ ಅಸುರ ಶಕ್ತಿ ಒಳಗೆ ಬೆಳೆಯುತ್ತದೆ. ಆಹಾರ,ವಿಹಾರ,ಸಂಸ್ಕಾರ,ವ್ಯವಹಾರದ ರೂಪಪಡೆದರೆ  ಹಣವೇ ಸರ್ವಸ್ವ. ಜ್ಞಾನ  ಕ್ಣೀಣವಾದಂತೆಲ್ಲಾ ಅಜ್ಞಾನದ ಕರುಡು ಹೆಚ್ಚುವುದು. ಇದು ದೇಶಕ್ಕೂ ಒಂದೇ ವಿದೇಶಕ್ಕೂ ಒಂದೇ  ಪ್ರಭಾವ ಬೀರುವುದು.ಎಲ್ಲಾ ಕಡೆ ಇರೋದೂ ಮಾನವ ರೂಪದಲ್ಲಿರುವ  ದೈವಾಂಶ ಸಂಭೂತರೆ.

 ದೇಶ ಒಂದೇ, ಭೂಮಿ ಒಂದೇ, ತಾಯಿ ಒಬ್ಬಳೆ ಜನ್ಮವೇ ಇಲ್ಲವಾಗಿದ್ದರೆ ಜೀವನ ಎಲ್ಲಿರುವುದು? ಜನನಿಯನ್ನು ಆಳುವುದರಿಂದ ಮುಕ್ತಿ ಸಿಗುವುದೆ? ಜನನಿಯ ಧರ್ಮ ರಕ್ಷಣೆಗಾಗಿ  ಅಧಿಕಾರ ಬೇಕಷ್ಟೆ.ಇದನ್ನು  ಸರಿಯಾಗಿ ಬಳಸುವ ಜ್ಞಾನದ ಅಗತ್ಯವಿದೆ.
ದೇವನೊಬ್ಬನೆ ನಾಮ ಹಲವು ಎಂದಂತೆ ದೇವಿಯೊಬ್ಬಳೆ ನಾಮ ಹಲವು ಯಾಕಾಗಲಿಲ್ಲ? ಭೂಮಿ ಮೇಲೆ ನಿಂತವರಿಗೆ ಕೆಳಗೆ ಕಾಣದೆ ಮೇಲೆ ಕಂಡಿದೆ.ಇದಕ್ಕೆ ಕಾಲುಬುಡದ ಕಸ ಹಾಗೇ ಉಳಿದಿದೆ. ಸ್ವಚ್ಚ ಮಾಡಿಕೊಳ್ಳಲು ಸಾಧ್ಯವಿದೆ.
ಸ್ವಚ್ಚಭಾರತ ಅಭಿಯಾನವು ರಾಜಕೀಯವಾಗಿ ಬೆಳೆದಷ್ಟೂ ಕೊಳಕು ತುಂಬಿಹೋಗುತ್ತದೆ. ಅವರವರ ಮನೆ,ಮನಸ್ಸಿನ ಸ್ವಚ್ಚತೆ ಕಡೆಗೆ ಗಮನಕೊಡದ ತತ್ವಜ್ಞಾನ ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಆಚಾರಕ್ಕೆಬಂದರೆ ಒಗ್ಗಟ್ಟು  ಸತ್ಯ ಹಾಗು ಸತ್ವದ ಕಡೆಗಿರುತ್ತದೆ. ಎಲ್ಲಾ   ಪರಮಾತ್ಮನಆಟವೆನ್ನುವವರು
ತಮ್ಮ ಆಟದಲ್ಲಿರುವ ರಾಜಕೀಯಬಿಟ್ಟುರಾಜಯೋಗದೆಡೆಗೆ 
ನಡೆದರೆ ಪರಮಾತ್ಮನ ಕಾಣಬಹುದು. ಒಳಗಿನ  ಕೊಳಕನ್ನು  ಸರ್ಕಾರದ ಹಣ ತೊಳೆಯಲಾಗದು.
ಇದನ್ನು ಶಿಕ್ಷಣದಿಂದ ಸಂಸ್ಕಾರ ಮಾಡಿ ಮಕ್ಕಳಿಗೆ ಕೊಡದೆ  ದೇಶ  ಹಾಳಾಗಿದೆ,ಧರ್ಮ ಕೆಟ್ಟಿದೆ,ಸಂಸ್ಕಾರ ರಹಿತ ಸಮಾಜವಾಗಿದೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಕೂಗುವ ಮಧ್ಯವರ್ತಿಗಳು, ಮಾಧ್ಯಮಗಳು  ದೇಶದ ಪರ ಧರ್ಮದ ಪರ ನಿಂತರೆ? ಅಥವಾ ರಾಜಕೀಯ ಪಕ್ಷದ ಪರ ನಿಂತು ವ್ಯವಹಾರಕ್ಕಿಳಿದವೆ?
 ಸಾಮಾನ್ಯಪ್ರಜೆಗಳ ಸಾಮಾನ್ಯಜ್ಞಾನಕ್ಕೆ ವಿರುದ್ದನಿಂತು ಆಳಿದವರು ದೇಶ ರಕ್ಷಣೆ ಮಾಡಲಾಯಿತೆ? ಆಗಿದ್ದು ಆಗಿದೆ ಇನ್ನಾದರೂ ಹಿಂದಿರುಗಿ ಬಂದು ತಮ್ಮನ್ನು ತಾವು ಶುದ್ದಿಗೊಳಿಸಿಕೊಳ್ಳಲು ಮುಂದೆ ನಡೆದವರಿಗೆ ಮೇಲೆ ಹೋದವರಿಗೆ ಕಷ್ಟ. ಹಿಂದೆ ನಡೆದವರನ್ನು ತಡೆಯದೆ ಮುಂದೆ  ಸರಿದಾರಿಯಲ್ಲಿ ನಡೆಯಲು ಬಿಟ್ಟರೆ ಇದೇ ಧರ್ಮ.
ಒಟ್ಟಿನಲ್ಲಿ  ಕಲಿಗಾಲ ಮಾನವನಿಗೆ ತಕ್ಕ ಪಾಠ ಕಲಿಸುತ್ತದೆ.
ಆದರೂ ಪಾಠವನ್ನೇ ತಿರುಚಿಕೊಂಡು ಆಳುವ  ಅಸುರಿ ಶಕ್ತಿ ತಡೆಯಲು  ಅಸುರರಿಂದಲೇ ಸಾಧ್ಯ.ಮುಳ್ಳನ್ನು ಮುಳ್ಳಿನಿಂದಲೆ ತೆಗೆಯಬೇಕೆಂಬುದೆ  ಸತ್ಯ. ಆದರೂ ಏನೂ ಅರಿಯದ ಮುಗ್ದ ಮಕ್ಕಳು  ಅಸುರಶಕ್ತಿಯ ಆಳಾದರೆ  ಅವರ ಭವಿಷ್ಯ ಹೇಗಿರಬಹುದು? ಮನರಂಜನೆಗಾಗಿ ಬಳಸುವ  ಮಕ್ಕಳ ಪ್ರತಿಭೆಯನ್ನು ದುರ್ಭಳಕೆ ಮಾಡಿಕೊಂಡರೂ ಅರ್ಥ ವಾಗದ ಪೋಷಕರಿಗೆ  ಮಕ್ಕಳ ಸತ್ಯಜ್ಞಾನ ಹಿಂದುಳಿಯುತ್ತಿರುವ ಸತ್ಯದ ಅರಿವಿಲ್ಲದಿರೋದು ಶಿಕ್ಷಣದ ಪ್ರಭಾವ.ತಂತ್ರ ತಾತ್ಕಾಲಿಕ ವಷ್ಟೆ.ತತ್ವ ಮಾತ್ರ ಶಾಶ್ವತ.
 ಬದಲಾವಣೆ ಜಗದ ನಿಯಮ.ಕಾಲಚಕ್ರ ತಿರುಗಿದಾಗ‌
ಮೇಲಿನವರು ಕೆಳಗೆ ಕೆಳಗಿನವರು ಮೇಲಕ್ಕೆ. ಹಿಂದಿನ ಪುರಾಣ ಕಥೆಗಳಲ್ಲಿ ತಿಳಿಸಿದಂತೆ  ಅಸುರರು ದೇವಲೋಕ
ವನ್ನು ಆಕ್ರಮಿಸಿ ಮೆರೆದರು.ದೇವತೆಗಳು ಹೆದರಿ ಅಡಗಿ
ಕುಳಿತರು.ಇದರರ್ಥ  ಸಾಮಾನ್ಯಜ್ಞಾನದಿಂದಲೇ ತಿಳಿಯಬಹುದು. ಯಾವಾಗ ದೈವಶಕ್ತಿಯ ದುರ್ಭಳಕೆ
ಯಾಗುವುದೋ ಅಸುರರೆ  ಸಾಮ್ರಾಜ್ಯಸ್ಥಾಪಿಸಿಕೊಂಡು ಆಳುವರೆಂದರ್ಥ.ಈಗಲೇ ಈ ಸ್ಥಿತಿ ಮುಂದೆ ಏನು ಗತಿ? ಒಳಗಿನ ದೈವತ್ವದ ಸದ್ಬಳಕೆಯಾಗಲು ರಾಜಕೀಯ ಬೇಡ.ರಾಜಯೋಗದ ಅಗತ್ಯವಿದೆ.ವೈಭವದ  ವೈಚಾರಿಕತೆ
ಗಿಂತ ಸರಳವಾದ ವಿಚಾರವೇ ಶ್ರೇಷ್ಟ. ನಮ್ಮಲ್ಲಿ ಅಳವಡಿಸಿಕೊಂಡರೆ‌ ಉತ್ತಮ.ಪ್ರಯತ್ನ ನಮ್ಮದು ಫಲ ಭಗವಂತನದು.

No comments:

Post a Comment