ವಾಸ್ತವ ಜಗತ್ತಿನಲ್ಲಿ ಯಾರಲ್ಲಿ ಹೆಚ್ಚುಹಣ,ಸಂಪತ್ತು, ವಿದ್ಯೆ, ಅಧಿಕಾರ,ಸೌಂದರ್ಯವಿದೆಯೋ ಅವರಿಗೆ ಸಾಕಷ್ಟು ಹಿಂಬಾಲಕರಿರುತ್ತಾರೆ. ಆದರೆ, ಹಿಂಬಾಲಕರಲ್ಲಿರುವ ಅಲ್ಪ ಸ್ವಲ್ಪ ಹಣ,ಸಂಪತ್ತು,ಅಧಿಕಾರ,ವಿದ್ಯೆ, ಸೌಂದರ್ಯ ದ ಪರಿಚಯ ಸ್ವತಃ ಅವರಿಗೇ ಇಲ್ಲದೆ ಹಿಂದುಳಿದರೆ ಇಡೀ ದೇಶ, ವಿಶ್ವದ ಶಕ್ತಿ ಕಡೆಗೆಣಿಸಿದಂತೆ. ಹೀಗಾಗಿ ಸ್ವಾಮಿ ವಿವೇಕಾನಂದರು ಎಲ್ಲಾ ನಿನ್ನೊಳಗೇ ಅಡಗಿರುವಾಗ ಒಳಹೊಕ್ಕಿ ನೋಡಿದಾಗಲೇ ನೀನು ಅಮೃತ ಪುತ್ರನಾಗಲು ಸಾಧ್ಯವೆಂದರು. ಅಮೃತಪುತ್ರರ ಜ್ಞಾನ ಯಾವತ್ತೂ ಶಾಶ್ವತ.
ಆದರೆ ಆ ಜ್ಞಾನವೇ ಹೊರಗಿನವರ ಬಳುವಳಿಯಾದರೆ ಮೂಲ ಶಕ್ತಿಯೇ ಕಾಣದೆ ಹೊರಗಿನ ಶಕ್ತಿಯ ಹಿಂಬಾಲಕರೆ ಹೆಚ್ಚಾಗುತ್ತಾರೆ. ಇದು ಅಧರ್ಮ, ಅನ್ಯಾಯ,ಅಸತ್ಯ,
ಅನೀತಿಯಾದರಂತೂ ಜೀವನವೇ ನರಕ.
ಈ ಕಾರಣಕ್ಕಾಗಿ ನಮ್ಮ ಭಾರತೀಯರು ಯೋಗಿಗಳಾಗಿ ಆತ್ಮಜ್ಞಾನದೆಡೆಗೆ ಸಾಗಿದ್ದರು. ಜ್ಞಾನ ವಿಜ್ಞಾನದ ಅಂತರದಲ್ಲಿರುವ ನಾವೀಗ ನಮ್ಮ ಸಾಮಾನ್ಯಜ್ಞಾನ
ದಿಂದಲೇ ವಾಸ್ತವಸತ್ಯವನ್ನರಿತರೆ ನಮ್ಮ ಆಂತರಿಕ ಜ್ಞಾನದಿಂದಲೇ ಆತ್ಮನಿರ್ಭರ ಭಾರತ ಮಾಡಬಹುದು. ಯಾವಾಗ ಇದು ರಾಜಕೀಯವಾಗುವುದೋ ಆಗ ರಾಜಯೋಗ ಹಿಂದುಳಿದು ಸತ್ಯವಿಲ್ಲದ ಧರ್ಮ ಧರ್ಮ ವಿಲ್ಲದ ಸತ್ಯದ ನಡುವಿನ ಅಧರ್ಮಕ್ಕೆ ಜೋತುಬಿದ್ದು ಜೀವ ಹೋಗುವುದು.
ಸತ್ಯವೇ ನಮ್ಮ ತಾಯಿತಂದೆ,ಸತ್ಯವೇ ನಮ್ಮ ಬಂಧು ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾಪರಮಾತ್ಮನು .
.ಪುಣ್ಯಕೋಟಿಯ ಕಥೆ ಮಕ್ಕಳಿಗೆ ತಿಳಿಸುವುದರ ಮೂಲಕ ಪುಣ್ಯ ಗಳಿಸಬಹುದು. ಸತ್ಯ ಹೇಳಲು ಬಿಟ್ಟರೆ ಮಾತ್ರ ಮಕ್ಕಳನ್ನು ದೇವರೆನ್ನಬಹುದು.
ಕಾರಣ ನಿಷ್ಕಲ್ಮಶ ಹೃದಯವಿದ್ದವರೆ ದೇವರು ಮಕ್ಕಳನ್ನು ದೇವರೆನ್ನುವ ಕಾಲವಿತ್ತು. ಆತ್ಮಸಾಕ್ಷಿಗಿಂತ ದೊಡ್ಡ ದೇವರಿಲ್ಲ.
ಜನರನ್ನು ದಾರಿತಪ್ಪಿಸಿ ಆಳುವುದು ಸುಲಭ. ಆದರೆ ಅದೇ ಕರ್ಮಕ್ಕೆ ಆಳಾಗಿ ಜನ್ಮ ಪಡೆದಾಗ ಅಳುವ ಸರದಿಯೂ ಇದೆ . ಈ ಸತ್ಯ ಪ್ರತಿಕ್ಷಣ ಮಾನವ ಮರೆಯದಿದ್ದರೆ ಯಾರ ಹಿಂದೆ ಯಾರು ನಡೆಯಬೇಕಿತ್ತು.ಯಾರು ನಡೆದಿರುವುದು ಯಾಕೆ ಎನ್ನುವ ಜ್ಞಾನ ಬರುತ್ತದೆ.
ಸರಿಯಾದ ಶಿಕ್ಷಣ ನೀಡದೆ ಅಜ್ಞಾನದಲ್ಲಿರುವವರನ್ನು ಆಳುವುದುಪ್ರಗತಿಯಾಗದು.ಅಧೋಗತಿಯಾಗುತ್ತದೆನ್ನುವರು ಮಹಾತ್ಮರುಗಳು. ಭಾರತದ ಭವಿಷ್ಯ ಆತ್ಮಜ್ಞಾನದ ಶಿಕ್ಷಣವಾಗಿತ್ತು. ಅದರಜೊತೆಗೆ ವೈಜ್ಞಾನಿಕ ಸಂಶೋಧನೆ ಇದ್ದರೆ ಸಮಾನತೆಯ ಅರ್ಥ ವಾಗುತ್ತದೆ. ಹಿಂದಿನ ಕಾಲದಂತಿರಲಾಗದಿದ್ದರೂ ಈಗಿನ ಕಾಲವನ್ನು ಹಾಳು ಮಾಡುವಂತಾಗದಿದ್ದರೆ ಉತ್ತಮ.ಭವಿಷ್ಯದ ಬಗ್ಗೆ ಚಿಂತನೆ ನಡೆಸಬಾರದೆನ್ನುವ ಮಧ್ಯವರ್ತಿಗಳು ಸಾಕಷ್ಟು ಸಾಲ ಮಾಡಿ ಹೋದರು. ಈಗ ಸಾಲ ತೀರಿಸಲು ಹಿಂದಿನವರು ಬರುವರೆ?
ಪರಕೀಯರ ಶಿಕ್ಷಣ,ಭಾಷೆ,ಸಂಸ್ಕೃತಿ, ಭಾಷೆಯ ಹಿಂದೆ ನಡೆದರೆ ಪರಕೀಯರೆ ಆಳುವುದು.
No comments:
Post a Comment