ಅದ್ವೈತ ದೊಳಗೇ ದ್ವೈತ ಕಣ್ಣಿಗೆ ಕಾಣುವಾಗ ಬೇರೆ ಬೇರೆ ಎನ್ನುವ ವಾದ ವಿವಾದಕ್ಕೆ ಅರ್ಥ ವಿದೆಯೆ?
ಅದ್ವೈತ ದರ್ಶನ ವಾಗಲು ನಾನು ಹೋಗಬೇಕು. ನಾನುಹೋದರೆ ಆತ್ಮದರ್ಶನ.ಅಹಂಕಾರ ಸ್ವಾರ್ಥದ ರಾಜಕೀಯವಿರುವ ಕಡೆ ತತ್ವವಿರೋದಿಲ್ಲ ತಂತ್ರವೇ ಇರುತ್ತದೆ. ತಂತ್ರದಲ್ಲಿ ಪೂರ್ಣ ಸತ್ಯವಿರದು. ಪೂರ್ಣ ಸತ್ಯವಿಲ್ಲದೆ ಸರ್ವಜ್ಞರಾಗದು. ಭಗವಂತನೊಬ್ಬನೆ ಸರ್ವಜ್ಞ ಎಂದಮೇಲೆ ಅವನೊಳಗಿರುವ ಜೀವಾತ್ಮರು ಅಲ್ಪಜ್ಞರಷ್ಟೆ.
ಅಲ್ಪ ಸ್ವಲ್ಪ ಸಿಕ್ಕಿದ್ದನ್ನು ಸದ್ಬಳಕೆ ಮಾಡಿಕೊಂಡರೆ ಮುಕ್ತಿ.
ಇದಕ್ಕೆ ಬೇಕಿದೆ ಮಾನವನಿಗೆ ಸಾಮಾನ್ಯಜ್ಞಾನ.
ಸಾಮಾನ್ಯಜ್ಞಾನದಿಂದ ವಿಶೇಷ ಜ್ಞಾನಕ್ಕೆ ನಿಧಾನವಾಗಿ ಹೋದವರಿಗಷ್ಟೆ ಈ ತತ್ವದರ್ಶನ ಆಗಿರೋದು.ಹಾಗೆ ಸಾಮಾನ್ಯರ ಮಧ್ಯೆ ಇದ್ದು ಸತ್ಯ ತಿಳಿದವರಿಗೆ ಪರಮಾತ್ಮನದರ್ಶನವಾಗಿದೆ. ಸಾಮಾನ್ಯರಿಂದ ದೂರವಿದ್ದು ವಿಶೇಷಜ್ಞಾನ ಪಡೆದವರ ಅನುಭವವನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಕಷ್ಟ.ಹಾಗೆಯೇ ಮೊದಲೇ ವಿಶೇಷ ಜ್ಞಾನವನ್ನು ತಿಳಿಯುವ ಅವಕಾಶ,ಅಧಿಕಾರ ಪಡೆದವರಿಗೆ ಸಾಮಾನ್ಯರೊಳಗಿದ್ದ ಪರಮಾತ್ಮ ಕಾಣಿಸಲಿಲ್ಲ. ಸಾಮಾನ್ಯಜ್ಞಾನವಿಲ್ಲದ ವಿಶೇಷ ಜ್ಞಾನ ಕುಂಟುತ್ತಿದೆ
ವಿಶೇಷಜ್ಞಾನದೆಡೆಗೆ ಹೋಗಲಾಗದ ಸಾಮಾನ್ಯ ಜ್ಞಾನ ಕುರುಡು ಜಗತ್ತಿನಲ್ಲಿದೆ. ಒಟ್ಟಿನಲ್ಲಿ ಎರಡೂ ಒಂದಾಗದಿದ್ದರೆ ಅದ್ವೈತ ವಲ್ಲ. ಒಂದನ್ನು ಎರಡಾಗಿಸೋದರಿಂದ ತತ್ವವಾಗಲ್ಲ. ಒಗ್ಗಟ್ಟನ್ನು ಬೆಳೆಸುವುದು ಸುಲಭವಲ್ಲ.ಬಿಕ್ಕಟ್ಟನ್ನು ಬಗೆಹರಿಸುವುದೂ ಸುಲಭವಲ್ಲ.
ಸುಲಭವಾಗಿರೋದು ಧರ್ಮರಕ್ಷಣೆ ಮಾಡೋದಿಲ್ಲ.
ಧರ್ಮ ರಕ್ಷಣೆ ಮಾಡೋದು ಸುಲಭವಾಗಿರೋದಿಲ್ಲ.
ಕಣ್ಣಿಗೆ ಕಾಣೋದೆಲ್ಲಾ ಸತ್ಯವಲ್ಲ. ಸತ್ಯ ಕಣ್ಣಿಗೆ ಕಾಣೋದಿಲ್ಲ.
ಹಣದಿಂದ ಜ್ಞಾನ ಬೆಳೆದಿಲ್ಲ. ಜ್ಞಾನದಿಂದ ಹಣಸಂಪಾದನೆ ಮಾಡಬಹುದಲ್ಲ.
ಬ್ರಾಹ್ಮಣ,ಕ್ಷತ್ರಿಯ, ವೈಶ್ಯ,ಶೂದ್ರರಲ್ಲಿ ಮೇಲುಕೀಳಿಲ್ಲ.
ಬ್ರಾಹ್ಮಣನ ತಲೆಯ ಜ್ಞಾನದಿಂದ ಹೃದಯವಂತರಾಗಿ ಹೊಟ್ಟೆಯ ಹಸಿವನ್ನು ತೀರಿಸಿಕೊಂಡು ಸೇವಕರಾಗಿ ನಡೆಯುವುದೇ ವರ್ಣದ ಉದ್ದೇಶವಾಗಿತ್ತು.
ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು ದೈಹಿಕ ಶ್ರಮ ಕ್ಕೆ ಬೆಲೆಕೊಡದೆ ಅಡ್ಡದಾರಿಗೆಳೆದು ಆಳಿದ ರಾಜಕೀಯವೇ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ.
ಬಡಬ್ರಾಹ್ಮಣ,ಬಡಶಿಕ್ಷಕ,ಬಡ,ಸೈನಿಕ,ಬಡ ರೈತ ಎನ್ನುವುದರಲ್ಲಿ ಅಡಗಿತ್ತು ಬಡತನದ ಅಜ್ಞಾನ. ಈಗಲೂ ಇದೇ ಜನರಲ್ಲಿ ಹಾಸುಹೊಕ್ಕಾಗಿದೆ. ಮಲಗಿದವರನ್ನು ಎಚ್ಚರಿಸಬಹುದು.ಮಲಗಿದವರಂತೆ ನಾಟಕವಾಡುತ್ತಿ
ರುವವರನ್ನು ಎಬ್ಬಿಸಲಾಗದು. ಸಾಕಷ್ಟು ಜನ ನಾಟಕ
ನೋಡಿಕೊಂಡು ಮನರಂಜನೆಯಲ್ಲಿದ್ದು ಆತ್ಮವಂಚನೆಯ ಜೀವನ ನಡೆಸಿದ್ದಾರೆ. ಇದನ್ನು ಸರಿಪಡಿಸಲು ಭಗವಂತನಿಂದಲೂ ಕಷ್ಟವಾಗಿ ಭೂ ತಾಯಿಯೇ ತನ್ನ ಸ್ವಚ್ಚ ತೆಗೆ ಮುಂದಾಗಿ ಪ್ರಕೃತಿ ವಿಕೋಪ,ಕೊರೊನದಂತಹ ಮಹಾಮಾರಿ,ಅಪಘಾತ,ಯುದ್ದ,ಇನ್ನಿತರ ರಾಜಕೀಯ
ಹೋರಾಟದ ಮೂಲಕ ಜೀವ ಹೋಗುತ್ತಿದೆ. ಅಜ್ಞಾನದಲ್ಲಿ ಹೋದ ಜೀವ ತಿರುಗಿ ಜನ್ಮ ಪಡೆದಾಗ ಜ್ಞಾನದ ಶಿಕ್ಷಣ ನೀಡಿ ಬೆಳೆಸಿದರೆ ಅದೇ ಧರ್ಮ. ಎಲ್ಲದ್ದಕ್ಕೂ ಕಾರಣವೇ ಶಿಕ್ಷಣ.
ಆಗೋದೆಲ್ಲಾ ಒಳ್ಳೆಯದಕ್ಕೆ, ಆಗುತ್ತಿರುವುದರ ಹಿಂದಿನ ಶಕ್ತಿ ಆ ಭಗವಂತನೆ ಆದಾಗ ಯಾರನ್ನು ವಿರೋಧಿಸಬೇಕು?
ಸತ್ಯಕ್ಕೆ ಸಾವಿಲ್ಲವೆಂದಾಗ ನಮ್ಮೊಳಗಿನ ಸತ್ಯಕ್ಕೆ ನಾವೇ ಬೆಲೆ ಕೊಡದೆ ಸಾಯಿಸಿದರೆ ಸತ್ತಿದ್ದು ಸತ್ಯವಲ್ಲ ನಮ್ಮ ಜ್ಞಾನವಷ್ಟೆ.
ಅದ್ವೈತ ಧ್ವೈತ ವಿಶಿಷ್ಟಾದ್ವೈತ ವೆಲ್ಲವೂ ಆ ಪರಮಾತ್ಮನ ತತ್ವ. ಇದರಲ್ಲಿ ಬೇರೆ ಕಾಣೋದು ಮಾನವನ ತಂತ್ರ. ಈ ತಂತ್ರದಿಂದ ಸ್ವತಂತ್ರ ಜ್ಞಾನ ಪಡೆಯಲಾಗದು. ಎಂದಾಗ ಇಲ್ಲಿ ಸ್ವತಂತ್ರ ವಾಗಿದ್ದ ಸತ್ಯ ಒಂದೇ ಅದೇ ಆತ್ಮಸಾಕ್ಷಿ.
ಇದು ಸಾಮಾನ್ಯರಲ್ಲಿ ಹೆಚ್ಚಾಗಿತ್ತು.ಆದರೆ ವಿಶೇಷ ಜ್ಞಾನಿಗಳ ಹಿಂದೆ ನಡೆಯುತ್ತಾ ಕುಸಿದಿದೆ.ಅದರಲ್ಲೂ ಮಕ್ಕಳಲ್ಲಿ ಶುದ್ದವಾಗಿತ್ತು.ಪೋಷಕರು ಅದನ್ನು ಬೆಳೆಸದೆ ಅಸತ್ಯದೆಡೆಗೆ ನಡೆಸುತ್ತಾ ಮಕ್ಕಳು ಭೌತಿಕದ ವಿಶೇಷಜ್ಞಾನಿಗಳಾದರೂ ಅಧ್ಯಾತ್ಮದ ವಿಶೇಷಜ್ಞಾನದಿಂದ ದೂರವಾದರು. ಒಟ್ಟಿನಲ್ಲಿ ಒಂದರೊಳಗೆ ಇನ್ನೊಂದು ಅಡಗಿದೆ.ಅದ್ವೈತ ದೊಳಗೆ ದ್ವೈತ, ವಿಜ್ಞಾನದೊಳಗೆ ಜ್ಞಾನ, ಆದರೆ ವಿದೇಶದೊಳಗೆ ದೇಶ ಅಡಗಿ ಕುಳಿತರೆ ಯಾರಿಗೆ ಕಷ್ಟ ನಷ್ಟ? ಹಾಗೆಯೇ ಅಧರ್ಮದೊಳಗೆ ಧರ್ಮ ಸಿಲುಕಿದರೆ?
ಅಸತ್ಯದೊಳಗಿನ ಸತ್ಯ ಕಾಣಬಹುದೆ? ಸತ್ಯದ ಅರಿವಾಗಲು ಆಂತರಿಕ ಶುದ್ದಿಯ ನಂತರ ಭೌತಿಕ ಶುದ್ದಿಯಾಗಬೇಕು.
ಆಂತರಿಕ ಶುದ್ದಿಗೆ ಸಂಸ್ಕಾರಯುತ ಶಿಕ್ಷಣವಿರಬೇಕು. ನಂತರ ಭೌತಿಕ ಶುದ್ದಿಯಾಗುತ್ತದೆ. ಸಂಸ್ಕಾರವೆಂದರೆ ಅನಾವಶ್ಯಕ ವಿಷಯವನ್ನು ಬಿಟ್ಟು ವಾಸ್ತವತೆಯನ್ನರಿತು ರಾಜಕೀಯ
ವಿಲ್ಲದ ಶುದ್ದವಾದ ಸದ್ವಿಚಾರವನ್ನರಿತು ಸ್ವತಂತ್ರ ವಾಗಿ ನಡೆಯೋದಾಗಿತ್ತು. ಈಗೆಲ್ಲಿದೆ?ಯಾವ ಕ್ಷೇತ್ರ ಶುದ್ದವಾಗಿದೆ? ಯಾವ ರೀತಿಯಲ್ಲಿ ಶುದ್ದ ಮಾಡಬಹುದು?
ಸರ್ಕಾರದ ಹಣ,ಶ್ರೀಮಂತ ರ ಹಣ, ದೇವರ ಹಣ,ದೇಶದ ಋಣ. ಈ ದೇಶದ ಋಣ ತೀರಿಸಲು ತತ್ವಜ್ಞಾನ ಅಗತ್ಯ. ತಂತ್ರವು ತಾತ್ಕಾಲಿಕ ಪರಿಹಾರ ಮಾರ್ಗ ತಿಳಿಸಿದರೆ ತತ್ವ ಶಾಶ್ವತ ಪರಿಹಾರದೆಡೆಗೆ ನಡೆಸುತ್ತದೆ. ಭೂಮಿಯಲ್ಲದೆ ಮನುಕುಲವಿಲ್ಲ.ಮಾನವನಿಲ್ಲದೆ ಧರ್ಮ ವಿಲ್ಲ.
ಧರ್ಮವಿಲ್ಲದೆ ಶಾಂತಿಯಿಲ್ಲ. ದೈವತ್ವವಿಲ್ಲದೆ ಮಹಾತ್ಮರಾಗೋದಿಲ್ಲ.ಮಹಾತ್ಮರು ದೇವರನ್ನು ಕಂಡಿದ್ದಾರೆ
ಆದರೆ ಮಹಾತ್ಮರಿಂದ ದೇವರಲ್ಲ.
ದೇಶದ ವಿಚಾರದಲ್ಲಿ ವಿದೇಶದಿಂದ ದೇಶ ಬೆಳೆಸೋದು ಅಜ್ಞಾನ. ಅದರಲ್ಲೂ ಭಾರತದಂತಹ ಮಹಾದೇಶ ಯೋಗಿಗಳ ದೇಶವನ್ನೇ ಭೋಗದೆಡೆಗೆ ನಡೆಸುತ್ತಾ ಹೋದರೆ ಆತ್ಮನಿರ್ಭರವಾಗದು. ಹಣವಿಲ್ಲದೆ ಜೀವನವಿಲ್ಲ. ಸತ್ಯಜ್ಞಾನವಿಲ್ಲದ ಮಾನವನ ಬದುಕೇ ಬದುಕಲ್ಲ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.
ಸಾಲ ತೀರದೆ ಮುಕ್ತಿಯಿಲ್ಲ. ಸಾಲವೇ ಶೂಲವಾಗಬಾರದಲ್ಲ.
ಅಲ್ಲ ಅಲ್ಲ ಎನ್ನುವವರೆಲ್ಲರೂ ಅಲ್ಲನ ಕಂಡಿಲ್ಲ. ಹೀಗಾಗಿ ದೇವರೆ ಇಲ್ಲ ನಾನೇ ಎಲ್ಲಾ ಎನ್ನುವವರೂ ಒಂದು ರೀತಿಯ ಅಲ್ಲನ ಭಕ್ತರೆ. ದೇವರಿದ್ದಾನೆ ನಾನೇ ದೇವರು ಎನ್ನುವವರೂ ಅಲ್ಲಾನ ಭಕ್ತರಾಗಿಲ್ಲ. ಹೀಗೇ ಎಲ್ಲದ್ದಕ್ಕೂ ಅಲ್ಲ ಎನ್ನುವ ಬದಲು ನಾನೇನೂ ಅಲ್ಲ ಎನ್ನುವುದೇ ಉತ್ತಮ. ಪ್ರಯತ್ನ ನಮ್ಮದು ಫಲ ಭಗವಂತನದು. ಯಾರನ್ನೂ ಯಾರೂ ಆಳಲು ನಾವೇನು ಆಳಲ್ಲ. ಆಳಾದವರಲ್ಲಿಯೂ ಪರಮಾತ್ಮನಿದ್ದಾನಲ್ಲ. ಅಂತವರಿಗೆ ಉತ್ತಮ ಶಿಕ್ಷಣ ನೀಡಿ ಸ್ವತಂತ್ರ ಜೀವನ ನಡೆಸಲು ಬಿಡಬಹುದಲ್ಲ. ಎಲ್ಲಾ ಹೇಳಬಹುದಷ್ಟೆ ಆದರೆ ಸತ್ಯದೆಡೆಗೆ ಧರ್ಮದೆಡೆಗೆ ತಿರುಗಿ ಬರೋದಕ್ಕೂ ಕರ್ಮಫಲ ಬಿಡೋದಿಲ್ಲ. ಕರ್ಮಕ್ಕೆ ತಕ್ಕಂತೆ ಫಲ. ದೇವಾನುದೇವತೆಗಳಿಗೂ ಇದು ತಪ್ಪಿದ್ದಲ್ಲ. ಸೃಷ್ಟಿ ಮಾಡಿಕೊಂಡ ಅರ್ಧ ಸತ್ಯದಿಂದ ಮುಂದೆ ಪೂರ್ಣ ಸತ್ಯವಿದೆ
ಮಧ್ಯವರ್ತಿಗಳಿಗೆ ಮಣೆಹಾಕಿದಷ್ಟೂ ಅತಂತ್ರಸ್ಥಿತಿಗೆ ಜೀವನ ತಲುಪುವುದೆನ್ನುವ ಕಾರಣಕ್ಕಾಗಿ ಹಿಂದಿನ ಜ್ಞಾನಿಗಳು ಸ್ವತಂತ್ರ ವಾಗಿ ಮುಂದೆ ನಡೆದು ಮುಕ್ತರಾದರು. ಅವರಿಗೂ ನಮಗೂ ವ್ಯತ್ಯಾಸವಿಷ್ಟೆ ಅವರು ತತ್ವ ತಿಳಿದು ನಡೆದರು.
ನಾವು ತಂತ್ರದಲ್ಲಿದ್ದೇವೆ. ಇದಕ್ಕೆ ಸ್ವತಂತ್ರ ಭಾರತವು ತಂತ್ರದ ವಶದಲ್ಲಿದೆ.ತತ್ವದಿಂದ ತಂತ್ರವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ತಂತ್ರಕ್ಕೆ ತತ್ವ ಅರ್ಥ ವಾಗದು.
No comments:
Post a Comment