ನನ್ನ ಲೇಖನಿಯ ವಿಶೇಷವೇನಂದರೆ ಯಾವುದೇ ವಿಚಾರವಿರಲಿ ಅದು ನಮ್ಮ ವಾಸ್ತವ ಜೀವನದಲ್ಲಿ ಅನುಭವಕ್ಕೆ ಬರುವಂತಿರಬೇಕು ಸತ್ಯ ಹಾಗು ಧರ್ಮದ ಸಮಾನತೆ ,ಸಮಾಜದ ಲೋಪದೋಷಗಳ ಜೊತೆಗೆ ನಮ್ಮ ಲೋಪದೋಷಗಳ ವಿವರಣೆ ಇರುತ್ತದೆ. ಕಾರಣ ನನ್ನ ಕ ಜೀವನದಲ್ಲಿ ಅನುಭವಿಸಿದ ಸತ್ಯವು ಭೌತಿಕದ ಹಲವು ಅಸಮಾನತೆಗೆ ಕಾರಣವಾಗಿರುವಾಗ ಸಮಾಜದ
ಮದ್ಯೆಇದ್ದು ಅದರಲ್ಲಿನ ತಪ್ಪು ಸರಿ ಎನ್ನುವ ಹಕ್ಕು ಸ್ವಾತಂತ್ರ್ಯನಮಗಿದೆ ಎನ್ನುವ ದೃಷ್ಟಿಕೋನದಿಂದ ಲೇಖನಗಳು "ಪ್ರಜಾಪ್ರಭುತ್ವ ಮತ್ತು ಧರ್ಮ""ಮಾತೃಭಾಷಾ ಶಿಕ್ಷಣದ ಮಹತ್ವ","ರಾಜಕೀಯ ಮತ್ತು ಮಾದ್ಯಮ","ಆಧ್ಯಾತ್ಮ ಮತ್ತು ಆತ್ಮನಿರ್ಭರ ಭಾರತ"ದ ಪುಸ್ತಕ ರೂಪ ಪಡೆದಿವೆ.
ವಿಪರ್ಯಾಸವೆಂದರೆ ಭಾರತದಲ್ಲಿ ಸ್ತ್ರೀ ಯರ ಜ್ಞಾನಕ್ಕೆ ಬೆಲೆ ಇಲ್ಲದ ರಾಜಕೀಯಕ್ಕೆ ಭಾರತೀಯರೆ ಬಲಿಯಾಗಿರುವುದಾಗಿದೆ.
ಭೂತದ ಬಾಯಲ್ಲಿ ಭಗವದ್ಗೀತೆ ಎಂದರೆ ಹೀಗೇ ಇರಬೇಕು.
ವಾಸ್ತವ ಸತ್ಯ ತಿಳಿಸಿದರೆ ನಮಗೇ ಅವಮಾನ ಕಾರಣ ನಾವು ವಾಸ್ತವದಲ್ಲಿ ಬದುಕುತ್ತಿಲ್ಲ. ಪುರಾಣ,ಇತಿಹಾಸದ ರಾಜಕೀಯ ಇಟ್ಟುಕೊಂಡು ಭವಿಷ್ಯ ನಿರ್ಮಾಣ ಮಾಡುವ ಕನಸಿನ ಭಾರತದಲ್ಲಿ ನಿದ್ದೆ ಮಾಡುತ್ತಿರುವವರ ಹಿಂದೆ ನಡೆದು ಒಳಗೇ ಅಡಗಿದ್ದ ಸ್ವತಂತ್ರ ಜ್ಞಾನಕುಸಿದಿದೆ. ಈಗ ಹೊರಗೆ ಹೋರಾಟ,ಹಾರಾಟ,ಮಾರಾಟ ಮಾಡುತ್ತಾ ಹಣಕ್ಕೆ, ಅಧಿಕಾರಕ್ಕೆ, ಸ್ಥಾನಮಾನಕ್ಕೆ ಸ್ಫರ್ಧೆ ನಡೆಸಿದರೆ ಒಳಗೆ ಸ್ವಚ್ಚ ವಾಗೋದಿಲ್ಲ. ಇನ್ನಷ್ಟು ಮಹಿಳೆ ಮಕ್ಕಳು ಹೊರಗೆ ಬಂದು ಮನೆ ಖಾಲಿ.ಆ ಖಾಲಿಜಾಗದಲ್ಲಿ ಖಾಲಿಸ್ಥಾನಿಗಳೇನಾದರೂ ಬಂದರೆ ಮೇಲಿರುವ ಆ ದೇವರೂ ಏನೂಮಾಡಲಾಗದು.
ಹಾಗಾದರೆ ಪುರಾಣ ಇತಿಹಾಸ ಭವಿಷ್ಯದ ಅಗತ್ಯವಿಲ್ಲವೆ?
ಇವುಗಳೇ ಇಂದಿನ ದುಸ್ಥಿತಿಗೆ ಕಾರಣವಾಗುವಂತಿದ್ದರೆ ಅಗತ್ಯವಿಲ್ಲ. ನಾನಿದ್ದೇನೆಂದರೆ ನನ್ನೊಳಗೇ ಜ್ಞಾನಶಕ್ತಿಯೂ ಇದೆ.ಸತ್ಯ ಧರ್ಮ ಗಳು ನನ್ನ ಮೂಲದಲ್ಲಿದ್ದರೆ ನನ್ನಲ್ಲಿ ಇರುತ್ತದೆ. ಇಲ್ಲವಾದಲ್ಲಿ ಇದನ್ನು ಹೊರಗಿನ ಗುರುವಿನಶಿಕ್ಷಣ ನೀಡಬೇಕು. ಯಾವುದೂ ಸಿಗದಿದ್ದರೆ ಸ್ವತಂತ್ರ ಜ್ಞಾನವಿದೆ ಅದನ್ನು ಸದ್ಬಳಕೆಮಾಡಿಕೊಳ್ಳುವ ಸರ್ಕಾರ ಬೇಕು. ಎಲ್ಲವೂ ಇದ್ದರೂ ನನ್ನ ಜೀವಕ್ಕೆ ಬೇಕಾದಷ್ಟು ಮಾತ್ರ ಪಡೆಯುವಂತಿದ್ದರೆ ಉತ್ತಮ.ಮಿತಿಮೀರಿದರೆ ನನಗೇ ಸಂಕಷ್ಟ. ಜನರನ್ನು ಆಳೋ ಮೊದಲು ನನ್ನ ನಾ ಆಳಿಕೊಳ್ಳಲು ಬೇಕಾದ ಜ್ಞಾನವಿರಬೇಕೆನ್ನುವುದಾಗಿದೆ. ಇದೇ ಇಂದಿನ. ಪ್ರಜೆಗಳ ಸಮಸ್ಯೆಗೆ ಕಾರಣ.ಮೂಲದ. ಜ್ಞಾನ. ಬಿಟ್ಟು ಹೊರಗಿನಜ್ಞಾನ ಒಳಗೆ ಹಾಕಿಕೊಂಡರೆ ಒಳಗೆ ಸ್ವಚ್ಚ ಆಗಬಹುದೆ? ಕೂಡಿಕೊಂಡು ಬಾಳಬಹುದೆ? ಯೋಗವೆಂದರೆ ಸೇರುವುದು. ಪರಮ ಸತ್ಯದೊಂದಿಗೆ ಪರಕೀಯರಸತ್ಯ ಹೊಂದಿಕೆಯಾಗವುದೆ?
ಎಲ್ಲರನ್ನೂ ಒಗ್ಗೂಡಿಸಿಕೊಂಡು ಬದುಕಲು ನಮ್ಮ ತತ್ವಗಳು ಸಿದ್ದಾಂತಗಳು, ಧರ್ಮಗಳು ಬೆಳೆದರೂ ಅದರ ಜೊತೆಗೆ ಸತ್ಯವೇ ಇಲ್ಲವಾದರೆ ಅಸಮಾನತೆಯ ರಾಜಕೀಯವಾಗಿ ತಂತ್ರದ ಜೊತೆಗೆ ಕುತಂತ್ರವೂ ಬೆರೆತು ಸ್ವತಂತ್ರವಿಲ್ಲದ ಮಾನವನಿಗೆ ಅತಂತ್ರ ಜೀವನವೇ ಗತಿ.
ಲೇಖನಗಳನ್ನು ಬರೆಯುವಾಗ ಯಾರಿಗೂ ಮನಸ್ಸಿಗೆ ನೋವಾಗದಂತೆ ಇಳಿಸಬೇಕೆಂದುಕೊಂಡರೂ ಇಳಿಸಿದ ಮೇಲೆ ಅದರಲ್ಲಿ ಸತ್ಯ ಧರ್ಮ ವಿದ್ದರೂ ಹಲವರಿಗೆ ನೋವು ಆಗಬಹುದು.ಇದರಲ್ಲಿ ನಾನೂ ಒಬ್ಬಳು .ಕಾರಣವಿಷ್ಟೆ ನನ್ನ ಉದ್ದೇಶ ವಾಸ್ತವದಲ್ಲಿ ನಾವೆಲ್ಲರೂ ಎಲ್ಲಿ ತಪ್ಪಿರುವುದು ಎಂದು ತಿಳಿಯುವ ಪ್ರಯತ್ನ ವಷ್ಟೆ. ಪ್ರಜಾಪ್ರಭುತ್ವದ ಪ್ರಜೆಗೆ ಈ ಅಧಿಕಾರ,ಅವಕಾಶವಿದೆ.ಆದರೆ ಇದು ಸಮಾಜದ ಜನತೆ ಕೊಡುವುದಿಲ್ಲ ನಾವೇ ಒಳಹೊಕ್ಕಿ ತಿಳಿಯಬೇಕಾದ ಅಧ್ಯಾತ್ಮ ಸತ್ಯ.ಆತ್ಮಾವಲೋಕನ ದಿಂದ ಆತ್ಮನಿರ್ಭರ ಭಾರತ ಎನ್ನಬಹುದಷ್ಟೆ. ಯಾರಲ್ಲಿ ಯಾವ ಮಹಾತ್ಮರಿರುವರೋ ಅಸುರರಿರುವರೋ ಕಾಣದ ಕುರುಡು ಜಗತ್ತಿನಲ್ಲಿ ಮಾನವ ನಡೆದಿರುವಾಗ ಅವರವರ ಕುರುಡುತನಕ್ಕೆ ಒಳಗಣ್ಣಿನ ಅಗತ್ಯವಿದೆ.ಇದನ್ನು ಎಲ್ಲಾ ಮಹಾತ್ಮರೂ ತಿಳಿಸಿದ್ದರೂ ನಾವು ಏನೂ ಹೆಸರು,ಹಣ,ಅಧಿಕಾರವಿಲ್ಲದೆ ಅದೇ ಸತ್ಯ ತಿಳಿಸಿದರೆ ನಮ್ಮವರೆ ವಿರೋಧಿಗಳಾಗುತ್ತಾರೆಂದರೆ ನಮ್ಮವರೆ ನಮಗೆ ಶತ್ರುಗಳೆಂದರ್ಥ. ಮಾನವ ತನಗೆ ತಾನೇ ಮೋಸ ಹೋಗುವಷ್ಟು ಬೇರೆಯವರಿಂದ ಹೋಗುವುದಿಲ್ಲವಂತೆ.
ಆತ್ಮಸಾಕ್ಷಿಗೆ ವಿರುದ್ದ ನಡೆದಷ್ಟೂ ಮೋಸ ಹೋಗುವುದು ಸತ್ಯ . ಇದಕ್ಕಾಗಿ ಮಹಾತ್ಮರನ್ನು ದೇವರೆಂದರು.ದೈವತ್ವದೆಡೆಗೆ ಹೋಗಿ ಸೇರಿದರೆ ದೇವರಾಗುತ್ತಾರೆ.
ಕಲಿಯುವವರೆಗೆ ಬ್ರಹ್ಮವಿದ್ಯೆ ಕಲಿತಮೇಲೆ ಕೋತಿ ವಿದ್ಯೆ ಎಂದಂತೆ ವಿದ್ಯೆಯನ್ನು ದುರ್ಭಳಕೆ ಮಾಡಿಕೊಂಡರೆ ಅಧರ್ಮ. ಮಂಗನಿಂದ ಮಾನವನಾಗಿರೋದನ್ನು ವಿಜ್ಞಾನ ತಿಳಿಸುತ್ತದೆ ಆದರೆ ದೇವರಿಂದ ಮಾನವನಾಗಿರೋದು ಅಧ್ಯಾತ್ಮ ತಿಳಿಸುತ್ತದೆ.ಇಲ್ಲಿ ವಿಜ್ಞಾನದ ಪ್ರಕಾರ ಮಾನವ ಮಂಗನಿಗಿಂತ ಹೆಚ್ಚು ಸಾಧನೆ ಮಾಡಿ ಮುಂದೆ ಬಂದಿದ್ದರೆ, ಅಧ್ಯಾತ್ಮದ ಪ್ರಕಾರ ದೇವರಂತಿದ್ದವರು ಇಳಿಯುತ್ತಾ ಮಾನವನಾಗಿ ಸತ್ಯ ತಿಳಿಯಲು ಸೋತಿದ್ದಾನೆನ್ನಬಹುದು.
ಓದಿ ತಿಳಿದವರಿಗೆ ಬಹಳ. ಬೇಗ ಹೆಸರು,ಹಣ,ಸ್ಥಾನ,
ಅಧಿಕಾರ,ಸನ್ಮಾನ ಸಿಗೋದಾದರೆ ಅದರಲ್ಲಿನ ಸತ್ಯಾಸತ್ಯತೆಯನ್ನು ಯಾರೂ ತಿಳಿಯಲು ಹೋಗದೆ ಹೊರಜಗತ್ತಿನಲ್ಲಿ ರಾಜಕೀಯ ಬೆಳೆಯುತ್ತದೆ. ಇದು ಮನುಕುಲವನ್ನು ದಾರಿತಪ್ಪಿಸಿ ಆಳಿದರೆ ಅದೇ ಅಸುರ
ಸಾಮ್ರಾಜ್ಯವಾಗುತ್ತದೆ. ಅಸುರರೊಳಗೇ ಸುರರಿರುವಾಗ ಯಾರು ಸ್ವತಂತ್ರ ರು? ಸಾಮಾನ್ಯಸತ್ಯವನ್ನು ಸಾಮಾನ್ಯರ ನಡುವಿದ್ದು,ಸಾಮಾನ್ಯಜ್ಞಾನವಿದ್ದವರಷ್ಟೇ ಗುರುತಿಸಿ ಅಳವಡಿಸಿಕೊಂಡು ಮಾನವರಾಗಿ ನಂತರ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಒಂದೂ ಕೆಳಗಿನ ಮೆಟ್ಟಿಲು ಹತ್ತದವರಿಗೆ ನೇರವಾಗಿ ಮೇಲಿನ ವಿಚಾರ ತಲೆಗೆ ತುಂಬಿದರೆ ಹುಚ್ಚರಾಗುತ್ತಾರೆ. ಮಕ್ಕಳ ಮುಗ್ಧ ಮನಸ್ಸಿಗೆ ಪ್ರಬುದ್ಧ ವಿಚಾರ ಮೊದಲೇ ತುಂಬಿದರೆ ಮುಂದೆ ಅವರನ್ನು ಆಳೋದು ದೇವರಲ್ಲ ಅಸುರರು.
ಇಲ್ಲಿ ಅತಿಯಾದ ಆತ್ಮವಂಚನೆಯೇ ಅಜ್ಞಾನವಾಗಿರುವಾಗ ಅಜ್ಞಾನವನ್ನು ಬಂಡವಾಳ ಮಾಡಿಕೊಂಡವರು ವ್ಯವಹಾರ ನಡೆಸಿದರೂ ಆ ಹಣವೂ ಅಜ್ಞಾನದ ಸಂಪಾದನೆ. ಇದರಲ್ಲಿ ಧರ್ಮ ರಕ್ಷಣೆ ಮಾಡಬಹುದೆ? ಮಾಡಲು ಹೋದರೂ ಆ ಅಜ್ಞಾನವೇ ಹೆಚ್ಚುತ್ತದೆ.
ಧಾರ್ಮಿಕ ಪ್ರಗತಿಯ ಮೊದಲ ಮೆಟ್ಟಿಲೇ ಮಾನವನ ಸದ್ಗುಣ ಬೆಳೆಸಲು ಒಳಗಿರುವ ಅಸತ್ಯವನ್ನು ಹೊರಗಟ್ಟಿ ಸ್ವಚ್ಚ ಸಂಸ್ಕಾರದಿಂದ ಶುದ್ದಗೊಳಿಸುವ ಶಿಕ್ಷಣ ನೀಡುವುದು ಭಾರತೀಯ ಶಿಕ್ಷಣದ ಗುರಿಯಾಗಿತ್ತು. ಈಗ ಈ ಶಿಕ್ಷಣ ಯಾರ ವಶವಾಗಿದೆ? ಇದೆಯೇ? ಇದ್ದರೆ ಯಾರಲ್ಲಿದೆ? ಯಾವ ರೂಪ ಪಡೆದಿದೆ? ಯಾರ ಕೈಕೆಳಗಿದೆ? ಈ ವಿಚಾರ ಪ್ರಜೆಗಳ ಕಣ್ಣಿಗೆ ಕಾಣಿಸದಷ್ಟು ಮುಚ್ಚಿಹೋಗುತ್ತಿದೆ.
ಒಟ್ಟಿನಲ್ಲಿ ಅಧಿಕಾರವಿದ್ದವರ ತಪ್ಪು ತಪ್ಪಲ್ಲ.ಅಧಿಕಾರ ಇಲ್ಲದವರ ಸರಿ ತಪ್ಪಾಗಿರುವುದು ಭ್ರಷ್ಟಾಚಾರದ ಹಾದಿ ಹಿಡಿದಿದೆ.
ಹಸಿದ ಹೊಟ್ಟೆಗೆ ಊಟ ಕೊಟ್ಟು ಸಮಾಧಾನದಿಂದ ಅವರ ಸ್ಥಿತಿಗೆ ಕಾರಣ ತಿಳಿದು ಹೃದಯವಂತಿಕೆಯ ಜ್ಞಾನದ ಮೂಲಕ ಮೇಲಿರುವ ಪರಮಾತ್ಮನೆಡೆಗೆ ನಡೆಸುವವರೆ ನಿಜವಾದ ಗುರುಗಳಾಗಿದ್ದರು. ಈಗ ಎಲ್ಲಾ ಗುರುಗಳೇ ಶಿಷ್ಯರಿಲ್ಲದ ಸಮಾಜ.ಇಲ್ಲಿ ಯಾರು ಬೇಕಾದರೂ ಪುರಾಣ ಇತಿಹಾಸ ,ಹಿಂದಿನ ಕಥೆ ಓದಿ ತನ್ನದೇ ಹೆಸರಲ್ಲಿ ಬರೆದುಕೊಂಡು ಪ್ರಚಾರ ಮಾಡಬಹುದು.ಆದರೆ ವಾಸ್ತವ ಸತ್ಯದ ಅರಿವಿಲ್ಲದೆ ಜನರನ್ನು ಆಳಿದರೆ ಇದೇ ಅಧರ್ಮ ದ ಹಾದಿ ಹಿಡಿಯುತ್ತದೆನ್ನುವುದಷ್ಟೆ ಸರ್ವ ಕಾಲಿಕ ಸತ್ಯ.
ಶಂಖದಿಂದ ಬಂದದ್ದೆಲ್ಲಾ ಸ್ವಚ್ಚ ತೀರ್ಥವಾಗಿದ್ದರೆ ಇಂದು ಅಸತ್ಯಕ್ಕೆ ಸ್ಥಾನವೇ ಇರುತ್ತಿರಲಿಲ್ಲ. ತೀರ್ಥಕ್ಷೇತ್ರಗಳ ಸ್ವಚ್ಚತೆಗೆ ಕೋಟ್ಯಾಂತರ ರೂ ಬಳಸುವ ಮೊದಲು ಸ್ವಚ್ಚ ಶಿಕ್ಷಣ ನೀಡಿದರೆ ಉತ್ತಮ. ಇಂದು ಅಸತ್ಯಕ್ಕೆ ಹೆಚ್ಚಿನ ಸ್ಥಾನಮಾನ ಸಿಗುತ್ತಿರುವುದಕ್ಕೆ ಕಾರಣವೇನೆಂದರೆ ನಮ್ಮ ಸಹಕಾರವಷ್ಟೆ.ಅಸತ್ಯಕ್ಕೆ ಕೊಡುವ ಸಹಕಾರ ಸತ್ಯಕ್ಕೆ ಕೊಡದೆ ಅಧರ್ಮ ಬೆಳೆಯಿತು. ಧರ್ಮಹಿಂದುಳಿಯಿತು.
ಸತ್ಯದಜೊತೆಗೇ ಧರ್ಮ ವಿದ್ದರೆ ಮಾತ್ರ ಸಮಾನತೆ,ಶಾಂತಿ,
ತೃಪ್ತಿ ಮುಕ್ತಿ ಎನ್ನುವುದು ಸತ್ಯವಲ್ಲವೆ?
ಎಲ್ಲಾ ಓದುವರೆಂದು ನಾನು ಬರೆಯುವುದಿಲ್ಲ ಬರೆಯುವುದು ಅನಿವಾರ್ಯ ಕರ್ಮ ನನದೂ.
ಓದುವವರಿಹರೆಂದು ನಾಬಲ್ಲೆ ಅದರಿಂದ ಬರೆಯುವೆನು ಮನಸ್ಸಾರೆ ಎಂದಿನಂತೆ ..ಯಾರು ಓದದಿದ್ದರೂ ನನಗಿಲ್ಲ ಚಿಂತೆ.ನನ್ನ ಆಂತರಿಕ ಶಕ್ತಿಗೆ ನಾನು ಕೊಡುವ ಒಂದು ಬೆಲೆ ಎಂದಾಗ ಅವರವರ ಆತ್ಮಶಕ್ತಿಯನ್ನು ಅವರವರೆ ತಿಳಿದು ಸದ್ಬಳಕೆ ಮಾಡಿಕೊಂಡು ಋಣಮುಕ್ತರಾಗಲು ಈಗಿನ ಪ್ರಜಾಪ್ರಭುತ್ವ ಸ್ವಾತಂತ್ರ್ಯ ನೀಡಿತ್ತು. ಆದರೂ ಪರಕೀಯರ ಪರರ ರಾಜಕೀಯಕ್ಕೆ ಸಹಕರಿಸಿ ಪರದೇಶವನ್ನೂ ದೇಶದೊಳಗೆ ಸೇರಿಸಿಕೊಂಡು ಆಳುವ ರಾಜಕೀಯ ದೇಶದ ಪ್ರಜೆಗಳ ಆತ್ಮದುರ್ಭಲಕ್ಕೆ ಕಾರಣವಾಗಬಾರದಷ್ಟೆ.
ಆಗೋದೆಲ್ಲಾ ಒಳ್ಳೆಯದಕ್ಕೆ ಎನ್ನಬಹುದಷ್ಟೆ. ಯಾರೂ ಯಾರ ಕರ್ಮ ವನ್ನು ಮಾಡಿದರೂ ಅದರಫಲ ಅವನ ಜೀವವೆ ಅನುಭವಿಸುವಾಗ ನಮ್ಮ ಕರ್ಮಕ್ಕೆ ನಾವೇ ಕಾರಣರು.
ಮಧ್ಯವರ್ತಿಗಳು, ಮಾಧ್ಯಮಗಳು, ಮಹಿಳೆ ಮಕ್ಕಳು ಮನೆಯಿಂದ ಹೊರಬಂದು ಎಷ್ಟೇ ಹಣಸಂಪಾದನೆ ಮಾಡಿ ಮನರಂಜನೆಯಲ್ಲಿದ್ದರೂ ಮನಸ್ಸಿನ ಒಳಗಿರುವ ಸ್ವಾರ್ಥ ಅಹಂಕಾರದ ಅಸುರರಿಂದ ಬಿಡುಗಡೆ ಪಡೆಯದೆ ಜೀವನ್ಮುಕ್ತಿ ಪಡೆಯಲಾಗದೆನ್ನುವುದೆ ಅಧ್ಯಾತ್ಮ ಸತ್ಯವಾಗಿತ್ತು.
ಮಠ,ಮಂದಿರಗಳೇನೋ ಬೆಳೆದಿದೆ ಆದರೆ ಅದರೊಳಗಿನ ಸಂಪತ್ತು,ಹಣ,ಆಸ್ತಿಗಳು ದೇಶದ ಸಾಲವನ್ನಾಗಲಿ ಜನರ ಅಜ್ಞಾನವನ್ನಾಗಲಿ ತೀರಿಸಲಾಗದಿದ್ದರೆ ಧರ್ಮ ವಾಗದು.
ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂದಂತೆ ನಮ್ಮ ಜ್ಞಾನವನ್ನು ಸರಿಯಾಗಿ ಕೊಡದೆ ಆಸ್ತಿಯನ್ನು ಬಚ್ಚಿಟ್ಟು ಈಗ ಪರರು ಬೆಳೆದು ನಿಂತರು. ನಮ್ಮವರೆ ಹಿಂದುಳಿದರು.
ಆತ್ಮಾವಲೋಕನ ಭಾರತೀಯರಷ್ಟೆ ಅಲ್ಲದೆ ಮಾನವರು ಮಾಡಿಕೊಳ್ಳಲು ಹೊರಗಿನ ರಾಜಕೀಯ ಬಿಟ್ಟು ಚಿಂತನೆ ನಡೆಸಬೇಕು. ರಾಜಕೀಯ ಜನರನ್ನು ಹೊರಗೆಳೆಧು
ಹೊಡೆಯುತ್ತಿದೆ. ಇದು ಮನೆಯೊಳಗೆ ಇರೋವಾಗ ಹೊರಗಿನ ರಾಜಕೀಯ ಏನೂ ಮಾಡಲಾಗದು.ಇದಕ್ಕೆ ಕಾರಣವೇ ಅಜ್ಞಾನ.ಅಜ್ಞಾನವೆಂದರೆ ತಿಳುವಳಿಕೆಯಲ್ಲಿರುವ ಅಸತ್ಯವೆನ್ನಬಹುದಷ್ಟೆ. ಏನೂ ಓದದಿರುವವರೂ ಜ್ಞಾನಿಗಳಾಗಬಹುದು. ಅರ್ಧ ಸತ್ಯ ಓದಿದವರಿಂದಲೇ ಸಮಸ್ಯೆ ಹೆಚ್ಚು. ಇವರು ಮಧ್ಯವರ್ತಿಗಳಾದರೆ ಮನುಕುಲಕ್ಕೆ ಮಾರಕ. ಎಚ್ಚರವಾಗದೆ ಮಲಗಿದ್ದರೆ ಸಾವೇನೂ ಬರುತ್ತದೆ. ಜ್ಞಾನ ಬರೋದಿಲ್ಲ. ಇದ್ದಾಗಲೇ ಸತ್ಯಜ್ಞಾನದ ಕಡೆಗೆ ನಡೆದವರು ಮಹಾತ್ಮರುಗಳು. ಯೋಗಿಗಳ ದೇಶವನ್ನು ಸಾಲದೆಡೆಗೆ ನಡೆಸುತ್ತಾ ಭೋಗದ ಜೀವನದಲ್ಲಿ ಶ್ರೀಮಂತ ರಾದವರಿಗೆ ಆತ್ಮನಿರ್ಭರ ಎಂದರೆ ಅರ್ಥ ಆಗಲು ಕಷ್ಟ. ಇದು ತತ್ವದಲ್ಲಿತ್ತು ತಂತ್ರದಲ್ಲಿರಲಿಲ್ಲ.
No comments:
Post a Comment