ಓಂ ಪದದಿಂದಲೇ ಆತ್ಮೋನ್ನತಿ ಸಾಧ್ಯವೆನ್ನುವ ಹಿಂದೂ ಧರ್ಮವನ್ನು ರಕ್ಷಣೆ ಮಾಡೋದಕ್ಕೆ ಎಷ್ಟೋ ವರ್ಷಗಳಿಂದಲೂ ಹೋರಾಟ,ಹಾರಾಟ,ಮಾರಾಟ ನಡೆದಿದೆ. ಇದಕ್ಕೆ ಕಾರಣ ಓಂ ಪದದಲ್ಲಿರುವ ಮೂರು ಅಕ್ಷರದ ಮಹಿಮೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರೋದೆನ್ನಬಹುದೆ?
ಏನು ಹೇಳಿದರೂ ತಪ್ಪನ್ನು ಹುಡುಕುವ ನಮಗೆ ನಮ್ಮ ತಪ್ಪು ಕಾಣೋದಿಲ್ಲವೆನ್ನುವುದೂ ಸತ್ಯ. ಇಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಎಲ್ಲಾ ಆಚರಣೆಯ ಮುಖ್ಯ ಉದ್ದೇಶ ಜ್ಞಾನಾರ್ಜನೆಯಾದರೆ ಆಂತರಿಕ ಶುದ್ದಿ. ಧನಾರ್ಜನೆ ಆದರೆ ಭೌತಿಕ ಪ್ರಗತಿ.
ಓಂ ಎನ್ನುವುದರಲ್ಲಿ ಅಡಗಿರುವ ಮೂರಕ್ಷರ ಅ,ಉ,ಮ.ಇವು ಮಾನವನೊಳಗಿರುವ ಚಕ್ರಶುದ್ದಿ ಮಾಡುವ ಶಕ್ತಿ ಪಡೆದಿದೆ. ಏಳು ಮುಖ್ಯಚಕ್ರಗಳಲ್ಲಿ ಮೂರು ಚಕ್ರ ಶುದ್ದಿ ಓಂ ಪದವನ್ನು ಮೂರಕ್ಷರದಿಂದ ಹೇಳುವುದರಿಂದ ಶುದ್ದಿ ಮಾಡಬಹುದೆಂದರೆ ಆಶ್ಚರ್ಯ ವಾಗುತ್ತದಲ್ಲವೆ? ಇದನ್ನು ಜನಸಾಮಾನ್ಯರವರೆಗೆ ತಿಳಿಸುವಲ್ಲಿ ನಮ್ಮ ಶಿಕ್ಷಣ ಹಿಂದುಳಿದು ಹೊರಗಿನಿಂದ ಓ ಎಂದು ಕೂಗುವತ್ತ ನಡೆದಿರೋದು ದುರಂತ.
ಅ ಶಬ್ದ ದ ಉಚ್ಚಾರಣೆಯು ಸ್ವಾಧಿಷ್ಠಾನ ಚಕ್ರದಿಂದ ಪ್ರಾರಂಭಿಸಿ, ಉ ಕಾರವು ಹೃದಯದ ಭಾಗ,ಎದೆಯ ಮದ್ಯೆ ಭಾಗದ. ಅನಾಹತ ಚಕ್ರಕ್ಕೆ ಬಂದು ನಂತರ ಮ ಕಾರದಿಂದ ಮೇಲಿರುವ ಸಹಸ್ರಾರ ಚಕ್ರದೆಡೆಗೆ ಸಾಗಿ ಮುಗಿಸುವ ದ್ಯಾನ
ಮಾನವನ ಹೊಟ್ಟೆ ಭಾಗದ ಸ್ವಾಧಿಷ್ಠಾನ, ಎದೆ ಭಾಗದ ಅನಾಹತ, ತಲೆಭಾಗದ ಸಹಸ್ರಾರ ಚಕ್ರವನ್ನು ಶುದ್ದಗೊಳಿಸುವುವಾಗ ಹೊರಗಿನಿಂದ ಎಷ್ಟೋ ಮಂತ್ರಶಕ್ತಿ ಎಷ್ಟು ಮಾನವನ ಆರೋಗ್ಯ ಹೆಚ್ಚಿಸಬಹುದು. ಮಂತ್ರದಿಂದ ಮಾವಿನಕಾಯಿ ಉದುರೋದಿಲ್ಲ ಎನ್ನುವುದನ್ನು ಹರಡಿಕೊಂಡು ಅದೇ ಮಂತ್ರ ತಂತ್ರವಾಗಿ ಬಳಸುತ್ತಾ ವ್ಯವಹಾರದಲ್ಲಿ ಯಂತ್ರದಂತೆ ದುಡಿದರೂ ಮಾನವನಿಗೆ ಸ್ವತಂತ್ರ ಜ್ಞಾನವಿಲ್ಲದೆ ಅತಂತ್ರಸ್ಥಿತಿಗೆ ಬಂದಿರೋದಕ್ಕೆ ಕಾರಣ ಸರಳವಾಗಿದ್ದ ಒಂದು ಪದವನ್ನು ಸರಿಯಾದ ಮಾರ್ಗದರ್ಶನ ವಿಲ್ಲದೆ ಬಳಸಿ , ಇನ್ನಷ್ಟು ಸೇರಿಸಿಕೊಂಡು ಮುಂದೆ ಬಂದಂತೆಲ್ಲಾ ಮೂಲಾಕ್ಷರಕ್ಕೆ ದಕ್ಕೆಯಾಯಿತು.
ಇಲ್ಲಿ ತಿಳಿದವರಷ್ಟೆ ಮಂತ್ರವನ್ನು ಸರಿಯಾದ ಉಚ್ಚಾರಣೆಯಿಂದ ಸದ್ಬಳಕೆ ಮಾಡಿಕೊಂಡಿದ್ದರೂ ಅವರ ಹಿಂದೆ ನಡೆದವರಿಗೆ ಅರ್ಥ ವಾಗದೆ ಮೂಲವನ್ನು ಬಿಟ್ಟು ಹೊರಗಿನ ಮಂತ್ರವನ್ನು ತಂತ್ರವಾಗಿಸಿ ಯಂತ್ರ ದೆಡೆಗೆ ನಡೆದರು. ಇದನ್ನು ಕಾಲದ ಪ್ರಭಾವ ಎನ್ನಬಹುದು.ಆದರೆ ಮಾನವನಿಗೆ ಮುಕ್ತಿ ಮೋಕ್ಷದ ದಾರಿಯಲ್ಲಿ ನಡೆಯುವುದಕ್ಕೆ ಮೂಲದೆಡೆಗೆ ಸಾಗಲೇಬೇಕು. ಅಡ್ಡದಾರಿಯಲ್ಲಿ ನಿಂತರೂ ತಿರುಗಿ ಸೀದಾದಾರಿ ಹಿಡಿಯಲೇಬೇಕು. ಓಂ ಕಾರಣದಿಂದಲೇ ಈ ಭೂಮಿ ನಡೆದಿದೆ ಎಂದು ಈಗಾಗಲೇ ವಿಜ್ಞಾನಿಗಳ ಸಂಶೋಧನೆ ತಿಳಿಸಿದೆ ಎಂದರೆ ಅದರ ಮೇಲಿರುವ ಮಾನವನೊಳಗೂ ಅದೇ ಶಕ್ತಿಯಿರುವಾಗ ಮೊದಲು ಇದರೊಂದಿಗೆ ಕೂಡಿಕೊಂಡು ನಂತರ ಹೊರಗಿನ ಇತರ ಸದ್ವಿಚಾರವನ್ನು ಅಳವಡಿಸಿಕೊಂಡರೆ ಆತ್ಮಜ್ಞಾನ.
ಹೊಟ್ಟೆಯ ಭಾಗ ಸ್ವಾಧಿಷ್ಠಾನ ಚಕ್ರದ ದೇವತೆ ಪಾರ್ವತಿ ಮಾತೆ ಅನ್ನಪೂರ್ಣೆಯ ಮೂಲಕ ಹೃದಯವಂತಿಕೆಯ ಗುಣದ ಅನಾಹತ ಚಕ್ರ ಶುದ್ದಿಯಿಂದ ಮೇಲಿನ ಸಹಸ್ರಾರ ಚಕ್ರದ ನಟರಾಜನ ತಲುಪಬಹುದು. ಅಂದರೆ ಹಸಿದ ಹೊಟ್ಟೆಗೆ ಅನ್ನ ಕೊಟ್ಟು, ಹೃದಯವಂತಿಕೆಯ ಶಿಕ್ಷಣ ನೀಡಿ ಮೇಲಿರುವ ಜ್ಞಾನದೆಡೆಗೆ ಮಾನವನ ನಡೆಸುವುದೇ ನಿಜವಾದ ಹಿಂದಿನ ಸನಾತನ ಧರ್ಮವಾಗಿದೆ. ಕೇವಲ ಹೊಟ್ಟೆ ತುಂಬಿಸಿ ಸೋಮಾರಿಯಾಗಿಸಿ ಮಲಗಿಸಿದರೆ ಮಾರಿಯ ದರ್ಶನ .
ಒಟ್ಟಿನಲ್ಲಿ ಹಿಂದೂ ಧರ್ಮದ ಸರಳವಾಗಿದ್ದ ಸದ್ವಿಚಾರವನ್ನು ಕ್ಲಿಷ್ಟವಾಗಿಸಿಕೊಂಡು ಹೊರಬಂದ ಅನೇಕ ಆಚಾರ,ವಿಚಾರ,
ಪ್ರಚಾರಗಳು ಧರ್ಮದ ಮೂಲವನ್ನರಿಯದೆ ಹಿಂದೆಯೂ ಹೋಗಲಾಗದೆ ಮುಂದೆ ನಡೆಯಲೂ ಆಗದ ತ್ರಿಶಂಕುಸ್ಥಿತಿಯಲ್ಲಿದೆ.
ಕೆಲವರು ಇತ್ತೀಚೆಗೆ ಜನಸಾಮಾನ್ಯರಿಗೆ ಈ ಕುಂಡಲಿನೀ ದ್ಯಾನವನ್ನು ಹೇಳಿಕೊಡುವುದರ ಮೂಲಕ ತಮ್ಮ ಆಂತರಿಕ ಶಕ್ತಿಯನ್ನು ಬೆಳೆಸಿಕೊಳ್ಳುವಲ್ಲಿ ಸಹಕರಿಸುತ್ತಿದ್ದಾರೆ. ಇದು ಶಾಲಾ ಕಾಲೇಜ್ ಮಟ್ಟಕ್ಕೆ ಬೆಳೆದರೆ ಉತ್ತಮ ಯೋಗದ ಮೂಲಕ ಭಾರತೀಯರ ಜ್ಞಾನಶಕ್ತಿ ಬೆಳೆಯುವುದು.ಹಿಂದಿನ ಭಾರತದ ಶಿಕ್ಷಣದಲ್ಲಿದ್ದ ಯೋಗ್ಯ ವಿಚಾರದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುವ ಕೆಲಸ ಮಠ ಮಾನ್ಯಗಳು, ಸಂಘ,ಸಂಸ್ಥೆ ಗಳು, ಇನ್ನಿತರ ಸಂಘಟನೆಗಳು ಒಟ್ಟಾಗಿ ಸೇರಿ
ಶೈಕ್ಷಣಿಕ ಕ್ಷೇತ್ರದಲ್ಲಿ ಅಳವಡಿಸಿ ತಾವೂ ಸೇವೆ ಮಾಡುವುದರ ಮೂಲಕ ದೇಶ ಕಟ್ಟಲು ಮುಂದಾದರೆ ಆತ್ಮನಿರ್ಭರ ಭಾರತ ಸಾಧ್ಯ.
ಇದನ್ನು ಒಂದು ಚೌಕಟ್ಟಿಗೇ ಸೀಮಿತವಾಗಿಟ್ಟು ನಮ್ಮವರನ್ನೇ ದ್ವೇಷ ಮಾಡಿದಷ್ಟೂ ಪರಕೀಯರೆ ಬೆಳೆಯೋದು. ತಾರತಮ್ಯಕ್ಕೆ ತಂತ್ರಜ್ಞಾನ ಬಳಸಿದರೆ ,ಒಗ್ಗಟ್ಟಿಗೆ ತತ್ವಜ್ಞಾನ.
ಯಾರ ದೇಹದಲ್ಲಿ ಯಾವ ಮಹಾತ್ಮನಿರುವರೋ ಯಾರಿಗೆ ಗೊತ್ತು. ಆತ್ಮಶಕ್ತಿಯನ್ನು ಗುರುತಿಸದ ಶಿಕ್ಷಣ ಶಿಕ್ಷಣವೇ ಅಲ್ಲ.
ಮಾನ ಸನ್ಮಾನವು ಆತ್ಮಜ್ಞಾನದಿಂದ ಬೆಳೆದರೆ ಉತ್ತಮ.
ಏನೂ ತಿಳಿಯದವರಿಗೆ ತಿಳಿಸಬಹುದು ಅರ್ಧ ತಿಳಿದವರಿಗೆ ಕಷ್ಟ. ಎಲ್ಲಾ ತಿಳಿದಿದೆ ಎನ್ನುವವರು ತಿಳಿಯಲು ಹೋಗೋದೆ ಇಲ್ಲ. ಇದು ವಾಸ್ತವ ಸತ್ಯ. ಈ ಲೇಖನವು ಮಾನವರಿಗೆ ತನ್ನ ಒಳಗಿರುವ ಚಕ್ರವನ್ನರಿಯಲು ಸಹಾಯವಾಗಬಹುದು. ಇದಕ್ಕಾಗಿ ಹಂಚಿಕೊಂಡೆ. ಒಳಗಿನ ಚಕ್ರ ಶುದ್ದಿಯಾಗದೆ, ಹೊರಗಿನ ಆಚರಣೆಯು ಮಾನವನ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿಸುತ್ತಿದೆ. ಎಷ್ಟು ತಿರುಗಿದರೂ ದೈಹಿಕ ಹಾಗು ಮಾನಸಿಕ ನೆಮ್ಮದಿ ಸಿಗುವುದೆ?
No comments:
Post a Comment