ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, February 14, 2023

ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು

ಕೆಲವರು ಹೇಳುತ್ತಾರೆ ಎಲ್ಲಾ ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು ಯಾರಿಗೂ ಏನೂ ಹೇಳುವ ಅಗತ್ಯವಿಲ್ಲವೆಂದು, ಹಲವರು ಹೇಳುತ್ತಾರೆ  ನಮ್ಮ ಪ್ರಯತ್ನವಿಲ್ಲದೆ ಏನೂ ನಡೆಯೋದಿಲ್ಲ ಹಾಗಾಗಿ ಅವಕಾಶವನ್ನು ತಪ್ಪಿಸಿಕೊಳ್ಳದೆ ಎಲ್ಲಾ ಹೇಳಿ ಮುಗಿಸಬೇಕೆಂದು. ಇದರಲ್ಲಿ ಯಾವುದು ಸತ್ಯ ಮಿಥ್ಯ?
ನಾವು ಹೇಳುವುದರಲ್ಲಿ ಸತ್ಯವಿದ್ದರೆ ಸತ್ಯ ಬೆಳೆಯುವುದು.
ಮಿಥ್ಯವಿದ್ದರೆ ಮಿಥ್ಯ ಬೆಳೆಯುವುದು.ಆದರೆ ಸತ್ಯ ಕಣ್ಣಿಗೆ ಕಾಣದಿರುವಾಗ ಸತ್ಯ ಹೇಳಿದರೂ ಬೆಳೆಯುವುದಿಲ್ಲವೆನ್ನುವ
‌ಕಾರಣಕ್ಕಾಗಿ ಎಲ್ಲಾ ಪರಮಾತ್ಮನಿಗೆ ಬಿಟ್ಟು ಸತ್ಯ ತಿಳಿದವರು ಹೇಳದೆ ಹೊರಟರು.ಇದರ ಪರಿಣಾಮ ಮಿಥ್ಯ ಸತ್ಯದ ಜಾಗವನ್ನೂ ಆಕ್ರಮಿಸಿಕೊಂಡು ರಾಜಾರೋಷವಾಗಿ ಹರಡಿಕೊಂಡು  ಆಳುತ್ತಿದೆ. 
ಒಂದೆ ಸತ್ಯ ಮಾತ್ರ ತಟಸ್ಥ ವಾಗಿ ನಿಂತು ನೋಡುತ್ತಿದೆ.
ಮಿಥ್ಯದ ರಾಜಕೀಯಕ್ಕೂ ಸತ್ಯದ ರಾಜಯೋಗಕ್ಕೂ ಅಂತರ ಬೆಳೆದು  ಇಂದು ಮನುಕುಲ  ಎಲ್ಲಾ ನಾನೇ, ನನ್ನಿಂದಲೇ
,ನನಗಾಗಿಯೇ ಇರೋದೆನ್ನುವ ಭ್ರಮೆಯಲ್ಲಿ  ಮಾಡಬಾರದ್ದನ್ನು ಮಾಡಿಕೊಂಡು ಸರ್ಕಾರ ಕಾರಣವೆಂದೋ ಇಲ್ಲ ಒಂದು ವರ್ಗ ಕಾರಣವೆಂದೋ ತಿಳಿಸಿ ದ್ವೇಷ ಬೆಳೆಸುತ್ತಾ ದೇಶವನ್ನೇ ಹಾಳು ಮಾಡುತ್ತಿದ್ದರೂ ಎಲ್ಲಾ ಪರಮಾತ್ಮನ ಇಚ್ಚೆಯಂತೆಯೇ ನಡೆಯುತ್ತದೆ ಎನ್ನುವವರಿಗೆ ಯಾವುದೇ  ಸಮಸ್ಯೆಯಿಲ್ಲ.ಕಾರಣ ಜನಬಲ ಹಣಬಲ ಇರುವ ಕಡೆ ಸಮಸ್ಯೆಗಳು ಜನರೆಡೆಗೆ ಹೋಗುವುದು.ಸಹಕಾರ ಕೊಟ್ಟ ಮೇಲೆ ಅದರ ಫಲವೂ ಅನುಭವಿಸಲೇಬೇಕಲ್ಲವೆ. ಇಲ್ಲಿ ಸತ್ಯಕ್ಕೆ ಕೊಡುವ ಸಹಕಾರಕ್ಕಿಂತ ಮಿಥ್ಯಕ್ಕೆ ಕೊಡುವ ಸಹಕಾರದಿಂದ ಜನರಲ್ಲಿ ಅಜ್ಞಾನ ಬೆಳೆದು ತನ್ನೊಳಗೆ ಅಡಗಿರುವ ಸತ್ಯವನ್ನು ಹೇಳದೆ,ಕೇಳದೆ ಜೀವ ಹೋಗುತ್ತಿದೆ ಎಂದರೆ ಪರಮಾತ್ಮನಿಗೆ ಸತ್ಯ ಬೇಕೋ ಮಿಥ್ಯವೋ?
ಸತ್ಯಕ್ಕೆ ಸಾವಿಲ್ಲವೆಂದರೆ  ದೇವರು ಯಾರು? ಸಾಯಿತ್ತಿರುವುದು ಯಾರು? ಪರಮಾತ್ಮ ಇರೋದೆಲ್ಲಿ? ಚರಾಚರಗಳಲ್ಲಿಯೂ ಇರುವ ಆ ಬ್ರಹ್ಮವಸ್ತುವನ್ನು ಬಳಸುವ ಜ್ಞಾನವೇ ಇಲ್ಲದವರನ್ನು ಆಳುವುದು ಸುಲಭ. ಆಳಿದರೂ ಮುಕ್ತಿಯಿಲ್ಲವೆನ್ನುವುದೂ ಸತ್ಯ. ಆದರೂ ರಾಜಕೀಯ ಮಿತಿಮೀರಿದೆ. ಸತ್ಯ  ತಿಳಿದವರಿಗೆ ಅಧಿಕಾರ,
ಹಣವಿಲ್ಲ.
ಅಧಿಕಾರ,ಹಣಬಲ,ಜನಬಲವಿದ್ದವರಿಗೆ ಪೂರ್ಣ ಸತ್ಯಜ್ಞಾನವಿಲ್ಲ. ಮಧ್ಯವರ್ತಿಗಳು ಯಾವಾಗಲೂ ಅರ್ಧ ಸತ್ಯದಲ್ಲಿಯೇ ಇರೋವಾಗ ಮುಂದೆ ನಡೆದವರಿಗೆ ಸತ್ಯ ತಿಳಿದರೂ ತಿಳಿಸಲು  ಅವಕಾಶವಿರಬೇಕು.
ಈಗಿನ‌ಪ್ರಜಾಪ್ರಭುತ್ವದಲ್ಲಿರುವ ಸ್ವಾತಂತ್ರ್ಯ ಹಿಂದಿನ ರಾಜರ ಕಾಲದಲ್ಲಿಯೂ ಇರಲಿಲ್ಲವೇನೋ ಆದರೆ ಅಂದಿನ ಪ್ರಜೆಗಳಲ್ಲಿದ್ದ  ಜ್ಞಾನಶಕ್ತಿ ಈಗಿನ ಪ್ರಜೆಗಳಲ್ಲಿ ಇರದ ಕಾರಣವೇ ಇಂದು ಮಿಥ್ಯವೇ ಜಗತ್ತನ್ನು ಆಳಲು ಹೊರಟು ಪ್ರಕೃತಿ  ವಿಕೋಪಗಳು ಹೆಚ್ಚಾಗಿದೆ. ಪ್ರಕೃತಿಯ ಸಣ್ಣ ಬಿಂದುಮಾತ್ರದ ಮಾನವನಿಗೆ ಸತ್ಯದ ಅರಿವಿದ್ದರೆ ಮಾತ್ರ ಜೀವನದ ಅರ್ಥ ವಾಗುತ್ತದೆ. ಇಲ್ಲವಾದರೆ ಜೀವನವೇ ವ್ಯರ್ಥ ಎಂದರು ಮಹಾತ್ಮರುಗಳು.
 ಮಹಾಭಾರತದ ಯುದ್ದ ಸಮಯದಲ್ಲಿ ಅರ್ಜುನನ ವಿಷಾಧ ಯೋಗಕ್ಕೆ ಶ್ರೀ ಕೃಷ್ಣ ನ ಒಂದು ಉತ್ತರ ಎಲ್ಲಾ ಮೊದಲೇ ಸತ್ತಿರುವಾಗ ಯಾರನ್ನು ಯಾರೂ ಸಾಯಿಸುತ್ತಿಲ್ಲ ವೆಂದು.
ಸತ್ಯ ಧರ್ಮ ಬಿಟ್ಟು ನಡೆದರೆ ಸತ್ತಂತೆ ಎನ್ನುವುದು  ಹಿಂದು ಧರ್ಮ, ಇದನ್ನು ಪರಧರ್ಮದವರು  ಅವರ ಅರಿವಿಗೆ ತಕ್ಕಂತೆ ತಿಳಿದು ನಡೆದರು. ಆದರೆ ಆಳವಾಗಿರುವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಆಳಕ್ಕೆ ಇಳಿದವರು ಸನಾತನಿಗಳಾದರು.
ಈಗಲೂ ಇದ್ದಾರೆ ಹಾಗಾಗಿ ಮಳೆ ಬೆಳೆಯಾಗುತ್ತಿದೆ. ಅವರನ್ನು ಆಳಲು ಹೋಗಬಾರದಷ್ಟೆ.  ಆತ್ಮಸಾಕ್ಷಿಗೆ ಸರ್ಕಾರ ಬೇಡ. ಸರ್ಕಾರದಲ್ಲಿ ಆತ್ಮಸಾಕ್ಷಿಗೆ ಅವಕಾಶವಿಲ್ಲ.
ಅಧಿಕಾರವೂ ಇಲ್ಲದ ಕಾರಣವೇ ಭ್ರಷ್ಟಾಚಾರ ಮುಗಿಲು
ಮುಟ್ಟಿದೆ. ಆ ಮುಗಿಲನ್ನು ಆಳೋದಕ್ಕೆ ಹೋದರೆ ಜೀವ ಹೋಗುತ್ತದೆ. ಒಟ್ಟಿನಲ್ಲಿ ಭೂಮಿ ಮೇಲಿದ್ದೇ ಆಕಾಶದೆತ್ತರ ಜ್ಞಾನವನ್ನು ಬೆಳೆಸಿಕೊಂಡಿದ್ದ ಋಷಿಮುನಿಗಳ ಸತ್ಯಜ್ಞಾನವು  ಅಲ್ಪ ಸ್ವಲ್ಪ ಈಗ ನಮಗಿದೆ.ಇದನ್ನು ಸಾಮಾನ್ಯ ಜ್ಞಾನವೆಂದರೆ ಸರಿಯಾಗಬಹುದು. ಈ ಸಾಮಾನ್ಯಜ್ಞಾನ ವಿಶೇಷಜ್ಞಾನಕ್ಕಿಂತ ಅಗತ್ಯವಾಗಿದೆ. ವಿಶೇಷಜ್ಞಾನವು ಹೊರಗಿನಿಂದ ಒಳಗೆ ಸೇರಿದೆ ಸಾಮಾನ್ಯಜ್ಞಾನ ಹುಟ್ಟುವಾಗಲೇ ಜೊತೆಯಲ್ಲಿದೆ. ಹೊರಗಿನಿಂದ ಸೇರಿಕೊಂಡಿರುವುದು ನಮ್ಮನ್ನೇ ಆಳುತ್ತದೆ.ನಮ್ಮನ್ನು ನಾವು ಆಳಿಕೊಳ್ಳಲು ಸಾಮಾನ್ಯಜ್ಞಾನದ ಅಗತ್ಯವಿದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸಾಮಾನ್ಯಜ್ಞಾನದ ಕೊರತೆ ಇದ್ದರೆ  ಪರಮಾತ್ಮನ ತತ್ವವೂ ಕಾಣೋದಿಲ್ಲ ಪರಕೀಯರ ತಂತ್ರವೂ  ಕಾಣೋದಿಲ್ಲ. ಇದಕ್ಕೆ ಇರಬೇಕು ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು ಎಂದು.
ಪರಮಾತ್ಮ ಎಲ್ಲರಲ್ಲಿಯೂ ಆವರಿಸಿರುವಾಗ ಎಲ್ಲರ ಸಹಕಾರದಿಂದಲೇ ಹುಲ್ಲಿನ ಕಟ್ಟನ್ನು ಎತ್ತಿ ಹಿಡಿಯುವುದು.ಪ್ರತಿಯೊಂದು ಹುಲ್ಲಿನಲ್ಲಿಯೂ ಭೂ ತತ್ವವಿದೆ. ಆದರೆ ಅದರ ಬಳಕೆಯು ಮಾತ್ರ ಸರಿಯಾಗಿಲ್ಲದೆ ಅಧರ್ಮ ಬೆಳೆದಿದೆ. ಅತಿಯಾದ ಸಹಕಾರವೂ ಸೋಮಾರಿಗಳನ್ನು ಬೆಳೆಸುತ್ತದೆ. ಭ್ರಷ್ಟಾಚಾರ ಬೆಳೆಸುತ್ತದೆ. ಇದರ ಪ್ರತಿಫಲ ಅಜ್ಞಾನದ ಜೀವನವಾಗುತ್ತದೆ. ಮಾರಿ ಅಂದರೆ ರೋಗ ಹೆಚ್ಚುತ್ತದೆ. ರೋಗದ ಹೆಸರಿನಲ್ಲಿ ವ್ಯವಹಾರ ಬೆಳೆಯುತ್ತದೆ. ವ್ಯವಹಾರದಲ್ಲಿ ಹಣವೇ ಸರ್ವಸ್ವ ವಾಗುತ್ತದೆ.ಹಣಕ್ಕಾಗಿ ಹೆಣವನ್ನು ಮಾರಾಟಮಾಡುವ ಹಂತಕ್ಕೆ ಮಾನವ ಬಂದರೆ ಒಳಗಿದ್ದ  ಜೀವಾತ್ಮನಿಗೆ ಮುಕ್ತಿ ಸಿಗುವುದೆ? ಈ ವಿಚಾರದಲ್ಲಿ ಅಧ್ಯಾತ್ಮ ಚಿಂತಕರಾದವರು ಚರ್ಚೆ ನಡೆಸಿದ್ದರೆ ಈವರೆಗೂ  ಬೆಳೆದು ನಿಂತಿರುವ ಆರೋಗ್ಯ ರಕ್ಷಣೆಯ  ಆಸ್ಪತ್ರೆಯ ಬದಲಾಗಿ ಆರು ಯೋಗ್ಯವಾಗಿರಿಸುವ ಆರೋಗ್ಯಕರ ಶಿಕ್ಷಣ ನೀಡಿದ್ದರೆ ದೇಶ ಆತ್ಮನಿರ್ಭರ ಭಾರತ ಆಗುತ್ತಿತ್ತು. ಈಗಲೂ ಕಾಲಮಿಂಚಿಲ್ಲ ರಾಜಕೀಯವು ರಾಜಯೋಗದೆಡೆ ನಡೆದರೆ ಸಾಧ್ಯವಿದೆ.ಅಂದರೆ ಪರಮ ತತ್ವದ ಕಡೆಗೆ ನಡೆದರೆ ವಿಶ್ವಗುರು ಭಾರತವಾಗುವುದು. ಇದಕ್ಕೆ  ಪ್ರಜೆಗಳ ಸಹಕಾರವಿರಬೇಕಷ್ಟೆ. ಅಸತ್ಯವನ್ನು ಎತ್ತಿ ಹರಡುವ ಬದಲಾಗಿ ಸತ್ಯವನ್ನು ಒಳಗೇ ಬೆಳೆಸಿಕೊಂಡು ಕಂಡುಕೊಂಡರೆ  ಆತ್ಮಜ್ಞಾನ. ಇದನ್ನೂ ಸರ್ಕಾರ ಮಾಡಲು ಕಷ್ಟ ಕಷ್ಟ. ಹಣವನ್ನು ಸದ್ಬಳಕೆ ಮಾಡಿದರೆ ಜ್ಞಾನ.ದುರ್ಭಳಕೆ ಮಾಡಿದಷ್ಟೂ ಅಜ್ಞಾನ.ಇದ್ದಾಗಲೇ ಜ್ಞಾನಸಂಪಾದನೆಗಾಗಿ ಶ್ರಮಪಡಬೇಕೆನ್ನುವರು  ಮಹಾತ್ಮರುಗಳು.

ಪರಮಾತ್ಮನ ಇಚ್ಚೆ  ಮಾನವನ ಸ್ವೇಚ್ಚೆ ಎರಡೂ ಒಂದಾಗೋದು  ಸಾಧ್ಯವೆ? 

No comments:

Post a Comment