ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, February 20, 2023

ಸರ್ವಜ್ಞರು ಯಾರು?

ಇಂದು ಸರ್ವಜ್ಞ ಜಯಂತಿ ಯಂತೆ ಅಂದರೆ ಸರ್ವಜ್ಞ ಒಬ್ಬ ವ್ಯಕ್ತಿ ಎನ್ನಬಹುದಾದರೆ ಎಲ್ಲವನ್ನೂ ಅರಿತವರು ಸರ್ವಜ್ಞ ರಾಗುವರು. ಇಲ್ಲಿ ಎಲ್ಲಾ ತಿಳಿದವರಿಲ್ಲ ಎಲ್ಲರಿಗೂ ತಿಳಿಸುವವರಿದ್ದಾರೆ ತಿಳಿಸುವವರ ತಿಳುವಳಿಕೆಯು ಎಲ್ಲರಿಗೂ ತಿಳಿಯುವಂತಾದರೆ ಅವರು ಸರ್ವಜ್ಞರು.  ಹಾಗಂತ ಇಡೀ ಬ್ರಹ್ಮಾಂಡ ಶಕ್ತಿ ಯನ್ನು ಒಬ್ಬ ವ್ಯಕ್ತಿ ತಿಳಿಯಲಾಗದು.ಒಬ್ಬೊಬ್ಬರಲ್ಲಿಯೂ ಒಂದೊಂದು ಶಕ್ತಿ ಇರೋವಾಗಾ ಒಂದು ಶಕ್ತಿಯನ್ನು  ಹೇಗೆ ಕಾಣಬಹುದೆಂದು ಒಬ್ಬ ವ್ಯಕ್ತಿಯು ಅವರ  ಅನುಭವದಿಂದ  ತಿಳಿದು ತಿಳಿಸಬಹುದು. ತತ್ವದ ಮೂಲಕ ಕಾಣೋದನ್ನು ತಂತ್ರದಿಂದ ಕಂಡೆನೆಂದರೆ  ಸತ್ಯವಿದ್ದರೂ ಅದು ತತ್ವವಾಗದು.ತತ್ವ ಒಂದೇ ಹಾಗಾಗಿ ಹಲವಾರು ತಂತ್ರಗಳ ಮೂಲಕ ಮಾನವ ದೇವರನ್ನು ಕಾಣುವ ಪ್ರಯೋಗ ಮಾಡಿರೋದಾಗಿದೆ. ಈ ಪ್ರಯೋಗದಿಂದ  ತನ್ನ ಹಾಗು ಉಳಿದವರ ಆತ್ಮೋನ್ನತಿಯಾದರೆ ಅಧ್ಯಾತ್ಮ ವೆನ್ನಬಹುದು.ಹಾಗೆಯೇ ತನ್ನ ಜೀವನದ ಜೊತೆಗೆ ಸಮಾಜದ ಜೀವನವೂ ಉನ್ನತಮಟ್ಟಕ್ಕೆ  ಏರಿದರೆ ಸಾಧನೆ ಎನ್ನುವರು. ಈ ಸಾಧನೆಯು  ಆತ್ಮಸಾಕ್ಷಿ ಯ  ಮೂಲದವರೆಗೆ  ಹೋದರೆ  ಅವನಿಗೆ ಸರ್ವಜ್ಞ ಕಾಣಬಹುದು.ಅಂದರೆ ಅಧ್ಯಾತ್ಮದ ಮೂಲ  ಕಣ್ಣಿಗೆ ಕಾಣದು, ಅನುಭವಕ್ಕೆ  ಬರೋವಾಗ ಒಂದೆ ರೀತಿಯಲ್ಲಿರದ ಕಾರಣ  ತಂತ್ರ ಬೆಳೆದು ಯಂತ್ರ ಮಾನವನ ಸೃಷ್ಟಿ ಯಾಗಿದೆನ್ನಬಹುದು.
ಭಗವಂತನೊಳಗಿರುವ ಎಲ್ಲಾ ಒಂದೇ ಶಕ್ತಿಯ ಪ್ರತಿಬಿಂಬ ಎಂದ ಮೇಲೆ ಭಾರತೀಯರೆಲ್ಲರೂ ಭಾರತಮಾತೆಯ ಸಣ್ಣ ಶಕ್ತಿ ಪಡೆದರೂ  ಅದನ್ನು ಸರಿಯಾಗಿ ಬಳಸದೆ  ನಾನೇ ಭಾರತ ಎಂದರೆ  ಸರಿಯಲ್ಲ. ಹಾಗೆ ಸರ್ವಜ್ಞ ನ ತತ್ವಪದಗಳ ಹಿಂದಿನ  ಅಧ್ಯಾತ್ಮ ಸತ್ಯ ಅರ್ಥ ವಾಗಲು ನಮ್ಮೊಳಗೇ ತತ್ವದರ್ಶನ ಆಗಬೇಕು. ಆಗಲೇ ಹೊರಗಿರುವ ತತ್ವದ ಜೊತೆಗೆ ತಂತ್ರವೂ ಸ್ಪಷ್ಟವಾಗಿ ಕಾಣುತ್ತದೆ. ನಮ್ಮ ಶುದ್ದಿಗೆ ಬೇಕಾಗಿರೋದು ತತ್ವ.ಜೀವನಕ್ಕೆ ಬೇಕಾಗಿರೋದು  ತಂತ್ರಜ್ಞಾನದ ಸದ್ಬಳಕೆ. ಯಾವಾಗ ತತ್ವ ಬಿಟ್ಟು ತಂತ್ರದ ದುರ್ಭಳಕೆ ಆಯಿತೋ ಅಧರ್ಮ ಬೆಳೆಯಿತು.
ದೇಶದ ಪ್ರಶ್ನೆ ಬಂದಾಗ ದೇಶ ಒಂದೇ ಆದರೂ ಪ್ರಜೆಗಳಲ್ಲಿ ಒಗ್ಗಟ್ಟು ಇಲ್ಲ. ಇದು ಯೋಗದಿಂದ ಬೆಳೆದರೆ ಭಕ್ತಿಯಾಗುತ್ತದೆ
ದೇವನೊಬ್ಬನಾದರೂ ದೇವರನ್ನು ಬೇರೆ ಬೇರೆ ಕಾಣೋದು ಕಡಿಮೆಯಾಗಿಲ್ಲ. ಶಿವ ಬೇರೆ ರುದ್ರ ಬೇರೆ ಎನ್ನುವ ವಾದವಿವಾದ ಶಿವರಾತ್ರಿಯಲ್ಲಿ  ಕೆಲವರು ಮಾಡುತ್ತಿದ್ದರು.
ಅದ್ವೈತ ದೊಳಗೆ ದ್ವೈತ ವಿದ್ದರೂ ಬೇರೆ ಬೇರೆ ಹೇಗೆ ಆಗಿದೆಯೋ ಹಾಗೆ ರುದ್ರನೊಳಗಿರುವ ಶಿವಕಾಣೋದಿಲ್ಲ. ಶಿವನೊಳಗಿದ್ದ ರುದ್ರ ಕಂಡಿಲ್ಲ. ಕಾರಣ ನಾನಿರುವಾಗ ದೇವರು ಕಾಣೋದಿಲ್ಲ  ದೇವರು ಕಂಡಾಗ ನಾನಿರೋದಿಲ್ಲ. ಲಯದಲ್ಲಿ ರುದ್ರನ  ಕಾಣೋದು ಶಿವನಲ್ಲಿ ಶಾಂತಿ ಕಾಣೋದು ಒಂದೇ  ಸಮನಾದರೂ  ಒಂದೇ ಸಲವಾಗದು.
ಶಾಂತವಾಗಿರುವಾಗ ಸಿಟ್ಟು ಬರೋದಿಲ್ಲ.ಸಿಟ್ಟು ಬಂದಾಗ ಶಾಂತಿ ಇರೋದಿಲ್ಲವಲ್ಲ. 
ಶ್ರೀ ರಾಮನೊಳಗಿರುವ ವಿಷ್ಣು ವಿಷ್ಣುವಿನೊಳಗಿದ್ದ ರಾಮತತ್ವ ಕಾಣದೆ  ಸಾಕಷ್ಟು ರಾಮರು,ಕೃಷ್ಣರ ದೇವಾಲಯ ಹಲವಾರು ಹೆಸರಿನಿಂದ ಪೂಜಿಸಲಾಗಿದೆ.ಅವರವರ ಜ್ಞಾನಕ್ಕೆ ಭಕ್ತಿಗೆ, ಶಕ್ತಿಗನುಸಾರವಾಗಿ  ದೈವತತ್ವ ಕಂಡಿರುವುದೇ ಇದಕ್ಕೆ ಕಾರಣ ಹಾಗಂತ ಯಾರ ತಪ್ಪು ಯಾರ ಸರಿ ಎನ್ನುವ ವಾದಕ್ಕೆ
ಕುಳಿತರೆ ನಾನ್ಯಾರು? ನಾವ್ಯಾರು? ಎನ್ನುವ  ಸತ್ಯ ತಿಳಿಯದೆ ಜೀವ ಹೋಗುತ್ತದೆ. ಬ್ರಹನ ಸೃಷ್ಟಿ ಸರಸ್ವತಿಯ ಜ್ಞಾನ, ವಿಷ್ಣುವಿನ ಕಾರ್ಯವೂ ಲಕ್ಮಿ ಕೃಪೆಯಿಂದ, ಕೊನೆಯಲ್ಲಿ ಸಿಗೋದು ಲಯದ ಅಂತ್ಯ  ಜೀವನ್ಮುಕ್ತಿ, 
ಹಾಗಾದರೆ ಶಿವನಿಂದ  ಜೀವನದಲ್ಲಿ ಆನಂದ,ಸಂತೋಷ,
ಶಾಂತಿ,ತೃಪ್ತಿ, ಮುಕ್ತಿ  ಸಿಗೋದು  ಸರಳ ಸುಲಭ ಎನ್ನುವ  ಕರ್ಮ ಯೋಗ,ಭಕ್ತಿಯೋಗ,ರಾಜಯೋಗ ಜ್ಞಾನಯೋಗ  ಎಲ್ಲದರಲ್ಲೂ ಅಡಗಿರುವ ಯೋಗವು ದೈಹಿಕ ಕ್ರಿಯೆಯ ಜೊತೆಗೆ ಮಾನಸಿಕ ಕ್ರಿಯೆಯೂ ಅಗತ್ಯವೆಂದಾಯಿತು.
ಶಿವನೆ ಬೇರೆ ವಿಷ್ಣುವೇ ಬೇರೆ ಎನ್ನುವವರೊಮ್ಮೆ ನಾನೇ ಬೇರೆ ದೇಶವೇ ಬೇರೆ,ಭೂಮಿಯೇ ಬೇರೆ,ದೇವರೆ ಬೇರೆ,ಧರ್ಮ ಬೇರೆ  ರಾಜಕೀಯ ಬೇರೆ ಆಗಲು  ರುದ್ರ ಕಾರಣನೆ ಶಿವನೆ?
ಮಾನವನ ಮನಸ್ಸು ಕಾರಣ.ಮನಸ್ಸೇ ಎಲ್ಲದರ ಮೂಲ.
ಇಬ್ಬರೂ ಒಂದೇ   ಎನ್ನುವ ತತ್ವ  ತಂತ್ರಕ್ಕೆ ಇಳಿದರೆ ಅತಂತ್ರಜ್ಞಾನ. ತಾಳಿದವನು ಬಾಳಿಯಾನು ಎಂದು  ತಾಳ್ಮೆ ಯಿಲ್ಲದ ಬಾಳು  ಗೋಳಾದಾಗ ರುದ್ರನೇ ಕಾಣೋದು.
ಹಾಗೆಯೇ ಅತಿಯಾದರೆ ಗತಿಗೇಡು ಎನ್ನುವರು.
ಪೈಪೋಟಿ, ಹಗೆತನ,ಬಡತನ,ಸಾಲ, ಅತಿಯಾದ ಸಿರಿತನವೇ ಲಯಕ್ಕೆ   ಕಾರಣ. ಸಮಾನತೆಯಿದ್ದರೆ ಶಾಂತಿ.
ಅಸಮಾನತೆಯಿದ್ದರೆ ಕ್ರಾಂತಿ.  ಸಾವನ್ನು ಪ್ರೀತಿಸುವ  ಜ್ಞಾನಕ್ಕೂ ದ್ವೇಷಿಸುವ ಅಜ್ಞಾನಕ್ಕೂ ನಡುವಿರುವ  ಸಾಮಾನ್ಯಜ್ಞಾನ  ಮುಖ್ಯ.
ಶಾಂತಿಯಿಂದ ಅಧ್ಯಾತ್ಮ ಸಾಧಕರಾದವರಿದ್ದಾರೆ. ಅವರು ಸರ್ವಜ್ಞ ಪೀಠ ಏರಿದವರು. ಜ್ಞಾನಪೀಠ ಸಿಗಬಹುದು. ಇದನ್ನು  ಮಾನವರು ಕೊಡುತ್ತಾರೆ  ಸರ್ವಜ್ಞ ಪೀಠ ಕಷ್ಟವಿದೆ. ಇದನ್ನು ಮಹಾತ್ಮರು ಗಳಿಸಿಕೊಳ್ಳಬೇಕಿದೆ. ದೈವತ್ವವೇ ಇದರ ಮೂಲಾಧಾರ. ಬ್ರಹ್ಮಾಂಡದೊಳಗಿರಬಹುದು ಬ್ರಹ್ಮನೊಳಗೆ ಹೊಕ್ಕಿ ಜ್ಞಾನ ಪಡೆಯುವುದು ಕಷ್ಟ ಎಂದಂತೆ.

No comments:

Post a Comment