ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, February 10, 2023

ಸಂಕಷ್ಟಹರ ಗಣಪತಿ ವಿಶೇಷತೆ

ಜಯದೇವಜಯದೇವ ಶ್ರೀ ಗಣಪತಿರಾಯ ಜಯಗಣಪತಿ ರಾಯ ಭಯಕಾರಕ ಭಯಹಾರಕ ಓಂಕಾರ ಕಾಯ..
ದ.ರಾ ಬೇಂದ್ರೆಯವರ  ಇದರಲ್ಲಿ ಗಣಪತಿಯು ಭಯಕಾರಕನೂ,ಭಯಹಾರಕನೂ ಆಗಿರುವುದು ವಿಶೇಷ. 
ದೇವರು ಕೂಡ ಭಯವನ್ನು ಹುಟ್ಟಿಸಿ  ಭಯ
ಕಳೆಯುತ್ತಾನೆಂದರೆ  ಮಾನವನ ಗತಿ  ಹೇಗಿರಬಹುದು.
ಗಣಪತಿಯ ಸಣ್ಣದಾದ ಕಣ್ಣುಸೂಕ್ಮ ಸತ್ಯವನ್ನು ಸೂಚಿಸುತ್ತದೆ, ದೊಡ್ಡದಾದ ಕಿವಿ ಹೆಚ್ಚುಕೇಳಿಸಿಕೊಳ್ಳುವ ಸೂಚನೆಯಾದರೆ ಉದ್ದವಾಗಿರುವ  ಮೂಗು ಬಾಯಿಗೇ ಅಡ್ಡವಾಗಿದ್ದರೂ ಸಾತ್ವಿಕ ಆಹಾರವನ್ನು ಹೆಚ್ಚು ತಿಂದು  ದೈಹಿಕ ಬಲದಲ್ಲಿಯೂ  ಎಲ್ಲರಿಗಿಂತ  ಬಲಿಷ್ಠ.  ಮಾತು ಕಡಿಮೆ ಕೆಲಸ ಹೆಚ್ಚು  ಮಾಡುವ ಇಂತಹ ಗಣಗಳ ಪತಿಯು ಸಂಕಷ್ಟದಿಂದ  ದೂರಮಾಡುವ ಸಂಕಷ್ಟ ಹರ ಚತುರ್ಥಿ ವ್ರತ ಕಥೆ ಮಾನವರು ಮಾಡೋದಕ್ಕೆ ಕಾರಣಸಂಕಷ್ಟವೇ ಆಗಿರುತ್ತದೆ. ಸಂಕಟಬಂದಾಗ ವೆಂಕಟರಮಣ ಎನ್ನುವಂತೆ ಮಾನವರು ಕಷ್ಟವಿಲ್ಲದಿದ್ದರೆ ಯಾವ ದೇವರೂ ಭೂಮಿಯಲ್ಲಿರುತ್ತಿರಲಿಲ್ಲ. ಒಟ್ಟಿನಲ್ಲಿ ಭೂಮಿ ಮೇಲಿರುವ ಎಲ್ಲಾ ದೇವಾನುದೇವತೆಗಳಿಗೂ  ತನ್ನದೆ ವಿಶೇಷ ಶಕ್ತಿಯಿದೆ. ಆ ಶಕ್ತಿಯನ್ನು ಮಾನವ ದುರ್ಭಳಕೆ ಮಾಡಿಕೊಂಡರೆ ಕಷ್ಟ.ಸದ್ಬಳಕೆ ಮಾಡಿಕೊಂಡರೆ ಸುಖ. ಅತಿಯಾದ ಸುಖವೇ ದು:ಖಕ್ಕೆ ಕಾರಣ.  
ಅಗೋಚರ ಶಕ್ತಿಯ   ಹೆಸರಿನಲ್ಲಿ ನಡೆಸುವ ವ್ಯವಹಾರದಲ್ಲಿ  ಸಾಕಷ್ಟು ಲಾಭಗಳಿಸಿದರೂ  ಕೊನೆಗೊಮ್ಮೆ ನಷ್ಟವೂ ಆಗುತ್ತದೆ. ಇದಕ್ಕಾಗಿ ಮಾನವರು ಇತಿಮಿತಿಗಳನ್ನು ಕಾಯ್ದು ಕೊಂಡಿರಲು  ಧಾರ್ಮಿಕತೆಯ ಅಗತ್ಯವಿದೆ.ಸತ್ಯದ ಅಗತ್ಯವಿದೆ. 
ಒಂದೇ ಸತ್ಯ ಒಂದೇ ಗಣಪತಿ,ಒಂದೇ ದೇವರು ನಾಮ ಹಲವು. ಈ ಹಲವುಗಳಲ್ಲಿಯೂ  ಹಲವು ವಿಶೇಷ ಶಕ್ತಿಯಿದೆ. ಎಲ್ಲಾ ವಿಶೇಷವೂ ಒಬ್ಬ ಮಾನವನಲ್ಲಿರಲಾಗದು.ಆದರೆ ಎಲ್ಲಾ ದೇವರನ್ನು ಒಬ್ಬ ಮಾನವರೂಪಿ ಗುರು ತಿಳಿಯಬಹುದು. ಇದೇ ಕಾರಣಕ್ಕಾಗಿ  ದೇವರಿಗಿಂತ ಗುರುವೇ ದೊಡ್ಡವರು ಎನ್ನುವರು.
ಸಾಕಷ್ಟು  ಹೆಸರಿನಲ್ಲಿ ದೇವಸ್ಥಾನ ವಿದೆ. ಒಂದೇ ದೇವರ ದೇವಸ್ಥಾನವು ಅನೇಕ ಇದೆ. ಮಾನವರ ಸಂಕಷ್ಟಕ್ಕೆ  ಮಿತಿಯಿಲ್ಲವಾಗಿದೆ. ಸಂಕಷ್ಟ ಬರೋದು ಸಹಜವಾದರೂ  ಅದನ್ನು ದೇವರಿಂದ  ಪರಿಹರಿಸಿಕೊಳ್ಳಲು  ನಡೆಸೋ ವ್ಯವಹಾರ  ಸರಿಯಿಲ್ಲದ ಕಾರಣ  ಅಂತ್ಯವಿಲ್ಲದ ಜೀವನವಾಗಿದೆ. ಇಲ್ಲಿ ದೇವರು  ಹಣ,ಅಧಿಕಾರ,ಸ್ಥಾನ ಕೊಟ್ಟು  ಜನರನ್ನು ಸನ್ಮಾರ್ಗದಲ್ಲಿ ನಡೆಸಲು ಒಬ್ಬ ವ್ಯಕ್ತಿಗೆ ಅವಕಾಶಕೊಟ್ಟರೆ ಅವನು ಅದನ್ನು ತನ್ನದೆನ್ನುವ  ದರ್ಪದಲ್ಲಿ‌ ಭ್ರಷ್ಟಾಚಾರದ ದಾರಿಹಿಡಿದರೆ ಭ್ರಷ್ಟಾಚಾರಕ್ಕೆ  ಭಯವಿದೆಯೆ? ಭ್ರಷ್ಟರಿಗೆ ಭಯವಿದೆಯೆ? ಇದ್ದರೆ ಅದು ಬೆಳೆಯುತ್ತಿರಲಿಲ್ಲ.ಹಾಗಾದರೆ ಭ್ರಷ್ಟಾಚಾರಿಗಳಿಗೆ ದೇವರ ಸಹಕಾರವಿದೆಯೆ? ಸಹಕಾರವಿಲ್ಲದೆ ಯಾವುದೂ ಬೆಳೆಯದು  ಈಗ‌ನಾವು ದೇವರಿರುವುದು ಎಲ್ಲಿಎಂಬ ಪ್ರಶ್ನೆಗೆ ಉತ್ತರ ನಮ್ಮೊಳಗೆ ಇರುವ  ದೈವತ್ವದ ಗುಣವೇ ದೇವರು. ದೇವರಿಗೆ  ಅರ್ಪಿಸುವ ಎಲ್ಲದರಲ್ಲಿಯೂ ಆ ದೇವರಿದ್ದಾನೆಂದ ಮೇಲೆ ನಾವು ಕೊಡುವ ಸಹಕಾರದಲ್ಲಿಯೂ ದೇವರಿದ್ದಾನೆ.
ಪ್ರತಿಫಲಾಪೇಕ್ಷೆ ಇಲ್ಲದ, ನಿಸ್ವಾರ್ಥ, ನಿರಹಂಕಾರದ ಸೇವೆಯೇ ನನಗೆ ಅತ್ಯಂತ ಪ್ರಿಯವಾದದ್ದು ಎಂದು ಶ್ರೀ ಕೃಷ್ಣ ಪರಮಾತ್ಮ ತಿಳಿಸಿಲ್ಲವೆ?
ಪ್ರತಿಷ್ಠಿತ ವ್ಯಕ್ತಿಗಳನ್ನು ಬೆಳೆಸಿರುವ  ಜನರ ಸಂಕಷ್ಟ ತೀರಿತೆ?
ಕಷ್ಟಪಟ್ಟು ದುಡಿದರೂ  ಅಲ್ಪಸ್ವಲ್ಪ ಭಾಗವನ್ನು ದೇವರಿಗೆ ಅರ್ಪಿಸಿ  ಸೇವಿಸುವುದೇ ಹಿಂದೂ ಧರ್ಮಾಚರಣೆಯಾಗಿದೆ. ಇದರಲ್ಲಿ ಹಣಕ್ಕಿಂತ ಮೊದಲು ಜ್ಞಾನವನ್ನು  ಹಂಚಿಕೊಂಡು 
ಬಾಳುವುದರಿಂದ  ಬಿದ್ದರೂ ಜೊತೆಗಿದ್ದವರು ಎತ್ತಲು ಬರುವರು.ಇಲ್ಲ ಎಲ್ಲಾ ನನಗೆ ಎಂಬಸ್ವಾರ್ಥ ದಲ್ಲಿ ಯಾರು  ಗಣಪತಿಯನ್ನಾಗಲಿ ಇತರ ದೇವತೆಗಳನ್ನಾಗಲಿ ಅತಿಯಾಗಿ ಆಳಿದರೆ ಸಂಕಷ್ಟ  ತಪ್ಪಿದ್ದಲ್ಲ ಎನ್ನುವ ಅರ್ಥದಲ್ಲಿ  ಹೊರಗಿನಿಂದ ಎಷ್ಟೇ ಕಾಡಿ ಬೇಡಿ ಪಡೆದರೂ  ನಮ್ಮ ಹಣೆ ಬರಹವನ್ನು  ಯಾರೂ ಅಳಿಸಲಾಗದೆನ್ನುವರು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಸಂಕಷ್ಟಹರ , ಇತರರಿಗೆ ಕಷ್ಟಕೊಟ್ಟಷ್ಟೂ ಕಷ್ಟ ಹೆಚ್ಚುವುದು. ದೇವರು ಸರ್ವಾಂತರ್ಯಾಮಿ ಆಗಿದ್ದರೂ ಕಷ್ಟ ಸುಖಗಳಿಗೆ‌ ಅವರವರು ದೈವ ತತ್ವವನ್ನು ಬಳಸಿಕೊಂಡಿಲ್ಲ.
ಕಷ್ಟಪಟ್ಟರೆ ಸುಖವಿದೆ, ಕಷ್ಟಪಡದೆ ಸುಖ ಗಳಿಸುವುದೆ  ಅಧರ್ಮ.  ಇದಕ್ಕೆ ಕಾರಣ ಅಜ್ಞಾನ. ಎಂದರೆ‌ ಗಣಗಳನ್ನು ಒಂದೆ ಸಮನಾಗಿ  ನಡೆಸುವವನು ಗಣಪತಿ.ಹೆಚ್ಚು ಪಡೆದರೆ ಹೆಚ್ಚು ಸಂಕಷ್ಟ . ಅತಿಯಾದರೆ ಗತಿಗೇಡು.
ಆನೆಯಂತಹ ದೈತ್ಯ ಪ್ರಾಣಿಯ ಆಹಾರ ಎಷ್ಟು ಸಾತ್ವಿಕವಾಗಿದೆ ಅದಕ್ಕೆ ಅದು ಶಾಂತವಾಗಿರುತ್ತದೆ. ಶಾಂತಿಯಿಂದ ಜ್ಞಾನ,  ಶಾಂತಿಯಿಂದ ದೈವತ್ವದ ದರ್ಶನ ಸಾಧ್ಯ. ಹಾಗೆ ಅದರ ಮುಖವಿರುವ ಗಣಪತಿಯ ಜ್ಞಾನ. ಸಂಪತ್ತು ಅಪಾರ ಅವನ ಜ್ಞಾನ ನಮಗಿದ್ದರೆ ಮಾತ್ರ ಅವನ ತಂದೆತಾಯಿಯ ಅಂದರೆ ಶಿವಶಕ್ತಿಯ ದರ್ಶನ.  ಅದಕ್ಕಾಗಿ ಪ್ರತಿಯೊಂದು ‌ಕಾರ್ಯದ ಮೊದಲು ಗಣಪತಿಯ ಅಪ್ಪಣೆ ಅಗತ್ಯ. ದೇವತೆಗಳ ಸರ್ಕಾರಕ್ಕೂ ಮಾನವರ ಸರ್ಕಾರಕ್ಕೂ ವ್ಯತ್ಯಾಸವಿಷ್ಟೆ.ದೇವತೆಗಳು ಧರ್ಮ ಹಾಗು ಸತ್ಯದ ಪರನಿಂತು  ಕಾಣದೆ ಸಹಕರಿಸುವರು, ಮಾನವರು ಅಧರ್ಮ, ಅಸತ್ಯಕ್ಕೆ ಸಹಕರಿಸಿ ಸಂಕಷ್ಟಕ್ಕೆ ಗುರಿಯಾಗುವರು. ರಾಜಕೀಯದಲ್ಲಿ ಅಸತ್ಯ ಅಧರ್ಮ ವೇ ಹೆಚ್ಚು, ಅದೇ ರಾಜಯೋಗದಲ್ಲಿ ಸತ್ಯ ಹಾಗು ಧರ್ಮ ವಿದೆ. ಅಂದರೆ ನಮ್ಮ ದೈವೀ ಸಂಪತ್ತನ್ನು ಸರಿಯಾಗಿ ಬಳಸಿಕೊಂಡು  ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಕಷ್ಟವಿದ್ದರೂ ನಂತರ ಸುಖವಿದೆ ಎಂದರ್ಥ.
ಎಲ್ಲಿಯವರೆಗೆ  ಮಾನವರಿಗೆ  ಆಂತರಿಕ ಶಕ್ತಿಯ ಪರಿಚಯವಾಗದೆ  ಭೌತಿಕದ ರಾಜಕೀಯಕ್ಕೆ  ಸಹಕರಿಸುವರೋ ಅಲ್ಲಿಯವರೆಗೆ ಸಂಕಷ್ಟ ತಪ್ಪಿದ್ದಲ್ಲ
ವೆನ್ನಬಹುದು.

No comments:

Post a Comment