ಅರ್ಜುನನ ವಿಷಾಧ ಯೋಗದಿಂದ ಶ್ರೀ ಕೃಷ್ಣ ನ ಉತ್ತರ ಈಗಾಗಲೇ ಸತ್ತಿರುವವರನ್ನು ನೀನು ಸಾಯಿಸುತ್ತಿಲ್ಲ
.ಅಧರ್ಮವನಷ್ಟೇ ತಡೆಯುತ್ತಿರುವುದೆನ್ನುವುದಾಗಿತ್ತು.
ಆದರೆ ಭಗವದ್ಗೀತೆ ಇಂದಿಗೂ ಪ್ರಚಾರದಲ್ಲಿದೆ. ಭೂತದ ಬಾಯಲ್ಲಿ ಗೀತೆ ಎನ್ನುವುದೂ ಸತ್ಯವಾಗುತ್ತಿದೆ. ಕೆಲವು ಪ್ರಚಾರ ಮಾಡುವವರಲ್ಲಿಯೇ ಅಧರ್ಮದ ರಾಜಕೀಯವಿದೆ.ಇದನ್ನು ಧರ್ಮ ಮಾರ್ಗದಲ್ಲಿರುವವರು ಕೇಳಿಕೊಂಡು ಅಧರ್ಮದ ರಾಜಕೀಯಕ್ಕೆ ಸಹಕಾರ ಕೊಡುತ್ತಾ ಮನೆಯಿಂದ ಹೊರಬಂದರೆ ಒಳಗಿದ್ದ ಅಲ್ಪ ಸ್ವಲ್ಪ ಧರ್ಮ ವೂ ನಾಶವಾಗಬಹುದು. ಆದರೂ ಭಗವದ್ಗೀತೆ ಯ ಪಠಣ,ಶ್ರವಣವು ಮಾನವನಿಗೆ ಪುಣ್ಯ ಸಿಗುವಂತೆ ಮಾಡುತ್ತದೆ. ಜೀವನದಲ್ಲಿ ಕಷ್ಟಬಂದಾಗ ಪುಣ್ಯದ ಸಹಾಯದಿಂದ ಕಷ್ಟವನ್ನು ಅನುಭವಿಸುವ ಶಕ್ತಿ ಬರುತ್ತದೆ. ಈ ಕಾರಣದಿಂದಾಗಿ ಧಾರ್ಮಿಕ ಸದ್ವಿಚಾರ ದ ಪ್ರವಚನ,ಪ್ರಚಾರ,ಆಚಾರ,ವಿಚಾರಗಳು ಬೆಳೆದಿವೆ.ಆದರೆ ಕೆಲವು ತತ್ವವು ಶ್ರವಣದಿಂದ ಅರ್ಥ ವಾಗದು ಮನನ ಮಾಡಿಕೊಂಡು ನಿಧಿದ್ಯಾಸನದಿಂದ ಸ್ಪಷ್ಟಪಡಿಸುವತ್ತ ನಡೆದವು. ಇದು ನಾವಿಂದು ಮಾಡಿಕೊಳ್ಳಲು ಉತ್ತಮ ಶಿಕ್ಷಣದ ಜೊತೆಗೆ ಗುರುವೂ ಬೇಕಾಗಿದೆ. ಶಾಲಾ ಪಠ್ಯಗಳಲ್ಲಿ ಈಗಾಗಲೇ ಅಳವಡಿಸಿದ್ದರೂ ಶಿಕ್ಷಕರಿಗೆ ಎಷ್ಟು ಇದರ ಸತ್ಯದ ಅನುಭವವಾಗಿದೆ? ಮಕ್ಕಳಿಗೆ ಯಾವ ರೀತಿಯಲ್ಲಿ ತಿಳಿಸುವ ಪ್ರಯತ್ನವಾಗಿದೆ ಎನ್ನುವುದರ ಮೇಲಿದೆ ಧರ್ಮ ರಕ್ಷಣೆ.
ಹಾಗಾದರೆ ಭಗವದ್ಗೀತೆ ಬೇಡವೆ? ಭಗವಂತನ ವಾಣಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಈಗಿನ ರಾಜಕೀಯದ ವಿರುದ್ದವಿರುತ್ತಾರೆನ್ನಬಹುದು. ಕಾರಣ ಅಂದು ಕ್ಷತ್ರಿಯ ಧರ್ಮ ವಿತ್ತು.ಇಂದು ಪ್ರಜಾಧರ್ಮ ವಿದೆ. ಭಗವಂತನು ಅರ್ಜುನನಿಗೆ ಕ್ಷತ್ರಿಯನಾಗಿದ್ದು ಅಧರ್ಮದ ವಿರುದ್ದ ಹೋರಾಡಿ ಧರ್ಮ ರಕ್ಷಣೆ ಮಾಡಲು ತಿಳಿಸಿದ್ದರೆ ಇಂದಿನವರು ಸಾಮಾನ್ಯರ ಸಾಮಾನ್ಯಜ್ಞಾನವನ್ನರಿಯದೆ
ವಿಶೇಷಜ್ಞಾನಿಗಳೆನ್ನುವ ಅಹಂಕಾರ ಸ್ವಾರ್ಥದಿಂದ ಜನರ ಜೀವನದ ಜೊತೆಗೆ ಆಟವಾಡುತ್ತಾ ಸಂಸಾರದೊಳಗೇ ಕ್ರಾಂತಿ ಎಬ್ಬಿಸುತ್ತಾ ಮಹಿಳೆ ಮಕ್ಕಳನ್ನು ರಾಜಕೀಯದೆಡೆಗೆ ತಂದು ಆಳುತ್ತಿರುವುದರ ಹಿಂದೆ ಯಾವ ಧರ್ಮ, ಸಂಸ್ಕೃತಿ, ಭಾಷೆ ರಕ್ಷಣೆ ಆಗಿದೆ? ವ್ಯವಹಾರ ಮಾಧ್ಯಮಗಳು ಶಾಂತಿಯ ಮಾತನಾಡದೆ ಕ್ರಾಂತಿಯ ವಿಷಬೀಜವನ್ನು ಬಿತ್ತಿ ಮನರಂಜನೆ ಕಡೆಗೆ ಮನುಕುಲ ಹೊರಟಿದೆ. ಆದರೆ ಆತ್ಮವಂಚನೆಯ ಫಲ ಇಡೀ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಆಳುವ ಅಸುರಶಕ್ತಿ ಬೆಳೆಯುವಂತಾಗಿದೆ. ಭಗವದ್ಗೀತೆ ಒಂದು ಪವಿತ್ರ ಗ್ರಂಥ.ಇದರಲ್ಲಿ ಯೋಗವಿದೆ.ಅಂದರೆ ತತ್ವವಿದೆ. ಯೋಗವೆಂದರೆ ಕೊಡುವುದು ಸೇರುವುದಾದರೆ ರಾಜಕೀಯ ಜನರನ್ನು ಯಾವುದಕ್ಕೆ ಸೇರಿಸುತ್ತಿದೆ? ಪ್ರಜೆಗಳಿಗೆ ಜ್ಞಾನದ ಶಿಕ್ಷಣ ನೀಡದೆ ಯೋಗ ಹೇಗೆ ಬರುತ್ತದೆ? ಪರಮಾತ್ಮನ ಜೀವಾತ್ಮಸೇರುವುದೇ ಮಹಾಯೋಗ.ಇದನ್ನು ಮಾನವ ತನ್ನ ಸತ್ಯಜ್ಞಾನದಿಂದ, ರಾಜಯೋಗದಿಂದ, ಭಕ್ತಿಯೋಗದಿಂದ ಹಾಗುಸತ್ಕರ್ಮ ಯೋಗದಿಂದ ಕಾಣುವ ಬದಲಾಗಿ ಭೌತಿಕ ಸತ್ಯದೆಡೆಗೆ ನಡೆಯುತ್ತಾ ರಾಜಕೀಯದೆಡೆಗೆ ನಡೆಯುತ್ತಾ ದೇಶಭಕ್ತಿಯಿಲ್ಲದೆ, ಸ್ವಧರ್ಮ ಕರ್ಮದ ಅರಿವಿಲ್ಲದೆ ಭಗವಂತನ ಕಾಣಬಹುದೆ?
ಧಾರ್ಮಿಕ ಕ್ಷೇತ್ರದ ಗುರು ಗಳು ಜನರ ಋಣವನ್ನು ಸಾಲವನ್ನು ತೀರಿಸುವ ಆತ್ಮಜ್ಞಾನವನ್ನು ಶಿಕ್ಷಣದಲ್ಲಿಯೇ ಕೊಟ್ಟು ಮುಂದೆ ನಡೆದವರು ಭಾರತೀಯ ಋಷಿಗಳು,
ಯೋಗಿಗಳು ಮಹಾತ್ಮರುಗಳಾಗಿದ್ದರು.ಆದರೆ ಈಗ ಭ್ರಷ್ಟ ಸರ್ಕಾರದ ವಶದಲ್ಲಿ ಜನರನ್ನು ಸೇರಿಸುವ ಕೆಲಸದಲ್ಲಿ ಕೆಲವರು ಮಗ್ನರಾಗಿದ್ದು ಸಾಲ ತೀರಿಸುವ ಬದಲು ಸಾಲ ಏರಿಸುವತ್ತ ದೇಶ ನಡೆದಿದೆ. ಪ್ರತಿಯೊಬ್ಬ ಪ್ರಜಾಶಕ್ತಿ ಆತ್ಮಜ್ಞಾನದಿಂದ ಬೆಳೆಸುವ ಬದಲಾಗಿ ಹಣದಿಂದ ಕುಸಿದರೆ ಭಗವಂತನಾದರೂ ಏನೂ ಮಾಡಲಾಗದು.
ಕಾರಣ ಗುರುವೇ ಪ್ರತ್ಯಕ್ಷ ದೈವ. ಹೀಗಿರುವಾಗ ಮೊದಲ ಗುರುವಾದ ತಾಯಿಗೆ ಆತ್ಮಜ್ಞಾನವಿಲ್ಲವಾದರೆ ಮಕ್ಕಳು ತಾಯಿಯ ಋಣ ತೀರಿಸಬಹುದೆ? ಕೊನೆಪಕ್ಷ ಭೌತಿಕ ಗುರುವಾದರೂ ಉತ್ತಮ ಸಂಸ್ಕಾರ ನೀಡಿ ಶಿಕ್ಷಣ ಕೊಟ್ಟಿದ್ದರೆ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಸ್ವತಂತ್ರವಾಗಿರುವ ಸತ್ಯವನ್ನು ತಿಳಿದು ನಡೆಯಬಹುದು. ಕೆಲವರಿದ್ದರೂ ಅವರನ್ನು ಕೇವಲವಾಗಿ ಕಾಣುವವರಿದ್ದಾಗ ಸತ್ಯ ಕಾಣೋದಿಲ್ಲ. ಹೀಗಾಗಿ ಭಗವದ್ಗೀತೆ ಸರ್ವ ಕಾಲಿಕ ಸತ್ಯವಾಗಿದ್ದರೂ ಕಾಲವನ್ನರಿತು ಧರ್ಮ ರಕ್ಷಣೆ ಮಾಡೋದು ಅಗತ್ಯವಿದೆ. ಇಲ್ಲಿ ಯಾರೂ ರಾಜರಿಲ್ಲ. ಯಾರೂ ಸೇವಕರೂ ಇಲ್ಲ.ಆದರೆ ಹಣ,ಅಧಿಕಾರ,ಸ್ಥಾನಕ್ಕೆ ಏರಿದ ಮನಸ್ಸಿಗೆ ಅಹಂಕಾರ ಸ್ವಾರ್ಥ ವೇ ಶತ್ರುವಾದರೂ ಅದನ್ನು ಬೆಳೆಸಿಕೊಂಡು ಜನರನ್ನು ದಾರಿತಪ್ಪಿಸಿ ಆಳಿದರೆ ಆಳಿದವನೂ ಆಳಾಗಿ ಜನ್ಮ ತಾಳುವನು.ಕರ್ಮಕ್ಕೆ ತಕ್ಕಂತೆ ಫಲ. ಅವತಾರ ಪುರುಷ ಸ್ತ್ರೀ ಗೇ ಬಿಡದ ಕರ್ಮ ಫಲ ಸಾಮಾನ್ಯ ಮಾನವರಿಗೆ ಬಿಡುವುದೆ? ಒಟ್ಟಿನಲ್ಲಿ ಮುಕ್ತಿ ಮೋಕ್ಷವು ಮೋಹದಿಂದ ಕ್ಷಯವಾದವರಿಗೆ ಸಿಕ್ಕಿದೆ. ಮೋಹಪಾಶದೊಳಗಿದ್ದವರಿಗೆ ಸಿಕ್ಕಿಲ್ಲವೆನ್ನುವುದು ಸತ್ಯ.
ಈಗಲೂ ರಾಜಕೀಯದ ವ್ಯಾಮೋಹ ರಾಜಕಾರಣಿಗಷ್ಟೆ ಅಲ್ಲದೆ ಪ್ರತಿಯೊಂದು ಕ್ಷೇತ್ರದ ದುರಂತಕ್ಕೆ ಕಾರಣವಾಗಿದೆ. ಮೂಢ ಜನರು ಅದನ್ನು ಪ್ರಗತಿ ಎಂದು ಹಿಂದೆ ನಡೆಯುತ್ತಾ ತನ್ನೊಳಗೆ ಇರುವ ಸತ್ಯವನ್ನರಿಯದೆ ಅಧರ್ಮ ಕ್ಕೆ ಸಹಕಾರ ನೀಡುತ್ತಾ ಭ್ರಷ್ಟಾಚಾರ ಬೆಳೆದಿದೆ. ಯಾರಿಗೆ ಗೊತ್ತು ಯಾರ ದೇಹದಲ್ಲಿ ಯಾವ ದೇವರಿರುವರೋ ಅಸುರರೋ?
ಸತ್ಯ ಬಿಟ್ಟು ನಡೆದರೆ ಅಸುರರೆ ಬೆಳೆಯೋದಷ್ಟೆ.ಹಾಗೆ ಅಧರ್ಮಕ್ಕೆ ತಕ್ಕಂತೆ ಶಿಕ್ಷೆಯಿದೆ. ಇದನ್ನು ಹಣದಿಂದ ತಪ್ಪಿಸಲಾಗದು. ದೇಶರಕ್ಷಣೆ,ಸ್ತ್ರೀ ರಕ್ಷಣೆ,ಭೂಮಿರಕ್ಷಣೆ ಮಾಡೋ ಮೊದಲು ಮಾನವ ಆತ್ಮರಕ್ಷಣೆ ಮಾಡಿಕೊಳ್ಳುವ ಜ್ಞಾನ ಪಡೆದರೆ ಧರ್ಮ ರಕ್ಷಣೆಯ ದಾರಿ ಕಾಣುತ್ತದೆ.
ಅಧರ್ಮದ ಶಿಕ್ಷಣ ಪಡೆದು ಆಳಿದರೆ ಅಧರ್ಮ ವೆ ಬೆಳೆಯೋದು. ಏನೂ ಮಾಡದೆ ತನ್ನ ತಾನರಿತು ಬದುಕೋದು ಕಷ್ಟ.ಇದರಿಂದ ಸಮಾಜಕ್ಕೆ ತೊಂದರೆ ಯಾಗದು. ಆದರೆ ಎಲ್ಲಾ ನಾನೇ ಮಾಡುವೆನೆಂದು ಅಸತ್ಯ ಅನ್ಯಾಯ,ಅಧರ್ಮದೆಡೆಗೆ ನಡೆದರೆ ಇಡೀ ಸಮಾಜವೇ ದಾರಿತಪ್ಪುತ್ತದೆ. ಅದಕ್ಕಾಗಿಹಿಂದಿನತಪಸ್ವಿಗಳು,ಯೋಗಿಗಳು,
ಸಂನ್ಯಾಸಿಗಳು ರಾಜಕೀಯ ಬಿಟ್ಟು ಸ್ವತಂತ್ರ ವಾಗಿದ್ದು ಸತ್ಯದರ್ಶನ ಮಾಡಿಕೊಂಡಿದ್ದರು.ಕ್ಷತ್ರಿಯರಿಗೂ ಧರ್ಮದ ಬಗ್ಗೆ ಉಪದೇಶ ಮಾಡುತ್ತಾ ಭೂಮಿಯಲ್ಲಿ ಧರ್ಮ ರಕ್ಷಣೆ ಮಾಡಿದ್ದರು.ಇದಕ್ಕೆ ಭೂತಾಯಿ,ಸ್ತ್ರೀ ಶಕ್ತಿಯರೂ ಸಹಕಾರ ನೀಡಿದ ಪರಿಣಾಮ ಅಸುರ ಶಕ್ತಿಯನ್ನು ಸಂಹಾರ ಮಾಡಲಾಯಿತು.ಎಲ್ಲದ್ದಕ್ಕೂ ಸ್ತ್ರೀ ಸಹಕಾರ ಅಗತ್ಯ.ಅದಕ್ಕೆ ಮೊದಲು ಸ್ತ್ರೀ ಗೆ ಆತ್ಮಜ್ಞಾನದ ನಂತರ ಭೌತಿಕ ಜ್ಞಾನವಿರಬೇಕು. ಯಾವುದೂ ಅತಿಯಾದರೆ ಕಷ್ಟ. ಓದಿದ್ದನ್ನು ಅಳವಡಿಸಿಕೊಳ್ಳಲು ಅವಕಾಶ,ಸಹಕಾರ ಬೇಕು.
No comments:
Post a Comment