ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, January 4, 2023

ಗುಡಿ ಬೇಡ,ಸಮಾಧಿ ಬೇಡ ಶ್ರೀ ಸಿದ್ದೇಶ್ವರ ಸ್ವಾಮಿ

ಗುಡಿ ಬೇಡ ಸಮಾಧಿ ಬೇಡ ಶ್ರೀ ಸಿದ್ದೇಶ್ವರ ಸ್ವಾಮಿಯವರ ಈ ನುಡಿಯಲ್ಲಿರುವ ಮುತ್ತುಗಳ ಅರ್ಥ ವೇನು?
ಒಂದು ಶುದ್ದವಾದ ಮುತ್ತು ತಯಾರಾಗಲು ಸಮುದ್ರದ ಆಳಕ್ಕೆ ಇಳಿಯುವ  ಜೀವಿಯಂತೆ ಮಾನವನೂ ತನ್ನ ಜೀವಾತ್ಮನನ್ನು ಪರಮಾತ್ಮನೊಂದಿಗೆ ಸೇರಿಸಲು  ಆಳವಾದ ಜ್ಞಾನದಿಂದ ಸಾಧ್ಯ.
ಸಾಮಾನ್ಯವಾಗಿ ಹಿಂದೂಗಳು ಸಾಕಾರಮೂರ್ತಿಯಿಂದ ನಿರಾಕಾರ ಬ್ರಹ್ಮನೆಡೆಗೆ ಸಾಗುವುದನ್ನು ಮೊದಲಿನಿಂದಲೂ ಕಾಣುತ್ತಿರುವ ಸತ್ಯ. ಸಾಕಾರ ಮೂರ್ತಿಗಳಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳೀಗ ನಿರಾಕಾರ ಶಿವನಲ್ಲಿ ಐಕ್ಯವಾಗಿ ಶಿವಸಾನಿದ್ಯ ಪಡೆದಿರುವ‌ ಮಹಾಸಂತರಾಗಿರುವಾಗ ಅವರ ಹೆಸರಲ್ಲಿ  ಸಮಾಧಿ ಹಾಗು ಗುಡಿಯನ್ನು ಭೂಮಿಯಲ್ಲಿ ಕಟ್ಟಿ ಭಕ್ತರು ಅವರನ್ನು ನೆನಪಿಸಿಕೊಂಡರೆ ತಪ್ಪಿಲ್ಲ ಆದರೆ ಅವರ ಹೆಸರಿನಲ್ಲಿ ವ್ಯವಹಾರದ ರಾಜಕೀಯಕ್ಕೆ ಇಳಿದರೆ ಜನರ ಅಲ್ಪ ಸ್ವಲ್ಪ ಜ್ಞಾನವೂ ಕುಸಿಯುವ ಸಾಧ್ಯತೆ ಇದೆ ಎನ್ನುವ ಸತ್ಯವನ್ನು ಅವರು  ಈಗ ನಡೆಯುತ್ತಿರುವ ಅನೇಕ ಕಡೆಯ ಧಾರ್ಮಿಕ, ರಾಜಕೀಯ, ಆರ್ಥಿಕ ,ಸಾಮಾಜಿಕ ,ಶೈಕ್ಷಣಿಕ,ಸಾಹಿತ್ಯದ ಕ್ಷೇತ್ರದಲ್ಲಿ ಕಣ್ಣಾರೆ
ಸೂಕ್ಮದೃಷ್ಟಿಯಿಂದರಿತಿದ್ದರೆನ್ನುವುದು ಸ್ಪಷ್ಟವಾಗುತ್ತದೆ.
ನಮ್ಮ ದೇಶದಲ್ಲಿ ರುವ ಎಲ್ಲಾ ದೇವಾನುದೇವತೆಗಳ ಮಂದಿರ,ಮಠ,ದೇವಸ್ಥಾನ, ಗುಡಿ ಇನ್ನಿತರ ದಾಸರು,ಶರಣರು,ಸಾದು,ಸಂತರು ಮಹಾತ್ಮರು,ಜ್ಞಾನಿಗಳು ನಮಗೆ ಪ್ರತಿಮೆ ರೂಪದಲ್ಲಿ ಕಂಡರೂ ಅವರಲ್ಲಿದ್ದ ತತ್ವ,ಸತ್ವ
ಸತ್ಯ,ನ್ಯಾಯ,ನೀತಿ, ಧರ್ಮ ವು  ಎಷ್ಟು ಮಂದಿಗೆ ಅರಿವಿಗೆ ಬಂದಿದೆಯೋ  ದೇವರಿಗಷ್ಟೆ  ಗೊತ್ತು. ಹಾಗಾದರೆ ದೇವರು ಯಾರು? ಎಲ್ಲಿರುವರು? ಹೇಗಿರುವರೆಂಬ ಪ್ರಶ್ನೆಗೆ ಉತ್ತರ ಒಂದೇ  ನಿರಾಕಾರದಲ್ಲಿರುವ ಆತ್ಮವೇ ದೇವರು. ಎಲ್ಲರ ಹೃದಯದಲ್ಲಿ ನೆಲೆಸಿರುವ ಆ ಪರಾಶಕ್ತಿಯನ್ನು  ಹೃದಯವಂತಿಕೆಯುಳ್ಳವರು ಕಾಣಬಹುದು. ಹೃದಯ ಎಲ್ಲರ ದೇಹದ ಪ್ರಮುಖ ಭಾಗವಾದರೂ ಅದನ್ನು  ಯಾವ ಮಾರ್ಗದಲ್ಲಿ  ನಡೆದರೆ ಹೃದಯಮಂದಿರವಾಗುವುದೆನ್ನುವ
ಜ್ಞಾನವಿದ್ದವರಷ್ಟೆ ಹೃದಯವಂತರು. ಇವರು ತತ್ವದ ಮೇಲೆ ನಂಬಿಕೆಇಟ್ಟು ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ಕಾಣುವಲ್ಲಿ  ಯಶಸ್ಸು ಪಡೆದಿದ್ದರೂ ಯಾವುದೇ ರೀತಿಯ ರಾಜಕೀಯಕ್ಕೆ ಬಲಿಯಾಗದೆ ಸ್ವತಂತ್ರ ಜೀವನ ನಡೆಸಿ ಇದ್ದಾಗಲೇ ಪರಮಾತ್ಮನಲ್ಲಿ  ಐಕ್ಯವಾಗಿರುವಾಗ ದೇಹತ್ಯಾಗದ ನಂತರ ಅವರು ಭೂಮಿಯಲ್ಲಿರಲು ಬಯಸೋದಿಲ್ಲ. ಹೀಗಾಗಿ  ಅವರ ಶಿಷ್ಯರು,ಅನುಯಾಯಿಗಳು, ಭಕ್ತರು ಎಲ್ಲರೂ ಅವರು ಬಿಟ್ಟುಕೊಟ್ಟು ಹೋದ  ಜೀವನಸಾರದ ಸತ್ಯವನ್ನರಿತು ತಮ್ಮೊಳಗೆ ಅಳವಡಿಸಿಕೊಂಡರೆ ಅದೇ  ಅವರಿಗೆ ಕೊಡುವ ಗೌರವ. ಮಾನವ ಮಧ್ಯವರ್ತಿಯಾಗಿ  ಈ ಕಡೆ ದೇವರು ಇನ್ನೊಂದು ಕಡೆ ಅಸುರರ  ಗುಣವನ್ನರಿತು ನಡೆಯುವಾಗ
ತನ್ನ ಆತ್ಮಜ್ಞಾನದ ಪ್ರಕಾರ  ನಡೆಯುವವರು ದೈವತ್ವಪಡೆದು ಮುಕ್ತಿ ಪಡೆದರೆ  ಅಸುರರ ಕಡೆಗೆ ನಡೆದವರು ಭೂಮಿಯ ಋಣ ತೀರಿಸಲು ಕಷ್ಟ ಹೀಗಾಗಿ ಜನ್ಮ ಜನ್ಮಗಳಿಂದ  ಹೊತ್ತು ಬಂದ ಸಾಲವನ್ನು ತೀರಿಸಬೇಕಾದರೆ ತತ್ವಜ್ಞಾನದೆಡೆಗೆ ಸತ್ಯ ಧರ್ಮದ ಕಡೆಗೆ  ನಡೆಯುವವರು ಮಹಾತ್ಮರಾಗುತ್ತಾರೆ.
ಇಂತಹ ಶಕ್ತಿ ಬರಲು ಕಾರಣವೆ ಪೂರ್ವಜನ್ಮದ ಪುಣ್ಯ. ಪುಣ್ಯ ಮಾಡಲು ಸತ್ಕರ್ಮ, ಸ್ವಧರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯವೇ ಮೆಟ್ಟಿಲುಗಳು. ಇವುಗಳನ್ನು ಒಳಗೇ ಬೆಳೆಸಿಕೊಳ್ಳಲು  ಗುರು ಬೇಕು. ಗುರುಗಳೂ ತಮ್ಮ ನಡೆ ನುಡಿಯಲ್ಲಿ ಶುದ್ದವಾಗಿದ್ದರೆ ಶಿಷ್ಯರೂ ಹಾಗೇ ಇರುತ್ತಾರೆ.
ಶಿಕ್ಷಣವೇ  ಇದಕ್ಕೆ ಮೂಲಾಧಾರ. ಉತ್ತಮ ಸಾತ್ವಿಕ ಶಿಕ್ಷಣ
ಸಾತ್ವಿಕರನ್ನು ಬೆಳೆಸಿದರೆ, ರಾಜಸಿಕ ಶಿಕ್ಷಣ ರಾಜಕೀಯವನ್ನು ಎತ್ತಿ ಹಿಡಿಯುವತ್ತ ನಡೆಸುತ್ತದೆ.ಬೇಡದ ಅನಾವಶ್ಯಕವಾದ ವಿಷಯಗಳನ್ನು ತಿಳಿಸುವ ಶಿಕ್ಷಣವೇ ತಾಮಸಗುಣವನ್ನು ಬೆಳೆಸುತ್ತಾ  ಸತ್ಯದ ಅರಿವಿಲ್ಲದೆ ರಾಜಕೀಯದೆಡೆಗೆ ಹೋಗಿ ತನ್ನಲ್ಲಿರುವ  ಉತ್ತಮ ಗುಣವನ್ನು ತಿಳಿಯಲಾಗದೆ ಒಮ್ಮೆ ಮರೆಯಾಗುತ್ತದೆ.
ಭಾರತೀಯ ಶಿಕ್ಷಣದಲ್ಲಿದ್ದ ಅತ್ಯುತ್ತಮ ಸಾತ್ವಿಕ,ತಾತ್ವಿಕ ಶಕ್ತಿ
ವಿದೇಶಿ ಶಿಕ್ಷಣದಲ್ಲಿರಲಿಲ್ಲ. ಇತ್ತೀಚೆಗೆ ಅವರು ಭಾರತೀಯರ ತತ್ವದೆಡೆಗೆ  ನಡೆಯುತ್ತಿರುವುದು ಉತ್ತಮವಾದರೂ ನಮ್ಮ ಶಿಕ್ಷಣವು ವಿದೇಶಿತಂತ್ರಕ್ಕೆ ಒಳಪಟ್ಟಿರೋದು ದುರಂತ.
ಕೆಲವರಷ್ಟೆ ನಮ್ಮಲ್ಲಿ  ಉತ್ತಮ ಶಿಕ್ಷಣ ಸಂಸ್ಥೆ ತೆರೆದು ಧರ್ಮ ಸತ್ಯ,ನ್ಯಾಯ,ನೀತಿಯನ್ನು  ಬೆಳೆಸುವಲ್ಲಿದ್ದರೂ ಸರ್ಕಾರ ಹಾಗು ಇನ್ನಿತರ ಖಾಸಗಿ ಶಾಲೆಯಲ್ಲಿ ಬದಲಾವಣೆ ಆಗುವುದು ಅಗತ್ಯವಿದೆ. ಇದರಿಂದಾಗಿ ಮನುಕುಲಕ್ಕೆ ತನ್ನ
ಈ ಜನ್ಮಕ್ಕೆ ಕಾರಣ ತಿಳಿದು ಜನ್ಮಸಾರ್ಥಕತೆಯತ್ತ ಉತ್ತಮ ಜೀವನದತ್ತ ಒಗ್ಗಟ್ಟಿನಿಂದ  ತತ್ವದೆಡೆಗೆ ನಡೆಯಬಹುದು.
ಹೇಳಿದಷ್ಟು ಸುಲಭದವಿಷಯವಲ್ಲ. ಮಾನವ ಬೇರೆಯವರನ್ನು ಬದಲಾಯಿಸುವಷ್ಟು ಸುಲಭವಲ್ಲ ತನ್ನ ತಾನರಿತು ಬದಲಾಯಿಸಿಕೊಳ್ಳುವುದು. ಬದಲಾವಣೆ ಜಗದ ನಿಯಮ ಅಸಾಧ್ಯವೇನಿಲ್ಲ.
ಸಾಧನೆ ಬೇರೆಯವರು ನೋಡಬೇಕೆಂದು ಮಾಡಿದರೆ ಭೌತಿಕ ವಿಜ್ಞಾನ. ತನ್ನ ತಾನರಿತು ಶುದ್ದವಾಗಲು ಅಧ್ಯಾತ್ಮ ಸಾಧನೆ
ಅಗತ್ಯ. ನಾನೆಂಬುದಿಲ್ಲ ಎಂದಾಗ ನನಗಾಗಿ ಗುಡಿ ಯಾಕೆ? ದೇಹದೊಳಗೆ ಆತ್ಮವೇ ಹೊರಬಂದ ಮೇಲೆ ದೇಹಕ್ಕೆ ಸಮಾಧಿ ಯಾಕೆ?  ಪಂಚಭೂತಗಳಿಂದಾದ ಈ ದೇಹವನ್ನು ತಿರುಗಿ ಪಂಚಭೂತಗಳಿಗೇ ಅರ್ಪಿಸಿದರೆ  ಉಳಿಯೋದು ಶೂನ್ಯ. ಶೂನ್ಯದಿಂದ ಬಂದ ಆತ್ಮ ಶೂನ್ಯಕ್ಕೆ ತಲುಪಿದರೆ ಮುಕ್ತಿ.
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ತತ್ವಜ್ಞಾನದಿಂದ ಹೊರಬಂದ ಸಂದೇಶಗಳಲ್ಲಿ ಅದ್ವೈತ ವಿದೆ. ಯಾವುದೇ ರೀತಿಯ ರಾಜಕೀಯವಿಲ್ಲ. ಆತ್ಮಕ್ಕೆ ಸ್ವತಂತ್ರ ಸಿಕ್ಕಾಗ ಅದನ್ನು ತಿರುಗಿ  ಹಿಡಿದಿಟ್ಟುಕೊಂಡು  ತಮ್ಮ ಸ್ವಾರ್ಥ ಕ್ಕೆ ಬಳಸುವ‌ ಬದಲು  ಸ್ವತಂತ್ರವಾಗಿ ಬಿಟ್ಟರೆ ಇನ್ನಷ್ಟು ಮತ್ತಷ್ಟು ಬಲ ಹೆಚ್ಚುವುದು.
ಕೆಲವೊಮ್ಮೆ  ನಮಗೇ ತಿಳಿಯದೆ ರಾಜಕೀಯದ ವಶದಲ್ಲಿ
ನಮಗೆ ನಾವೇ ಮೋಸಹೋಗಿದ್ದರೂ ಇದು ಸಹಜ ಎಂದು ತಳ್ಳಿ ಹಾಕಿದರೂ ಅದರ ಫಲ ಅನುಭವಿಸುವುದೂ ನಾವೇ
ಎನ್ನುವ ಸತ್ಯದ ಅರಿವಾಗೋದಿಲ್ಲ. ಹೀಗಾಗಿ ಅತಿಯಾದ  ರಾಜಕೀಯವು  ಮಾನವ ಮಾನವನಲ್ಲಿಯೇ ಒಡಕು ಮೂಡಿಸಿ  ಆಳುತ್ತದೆ. ಆಳುವವರೂ ಆಳಾಗಿ ಜೀವನ ನಡೆಸೋದೂ ಸತ್ಯವೆ. ಹೀಗಾಗಿ ಮಹಾತ್ಮರುಗಳು ಯಾವ ರಾಜಕೀಯದ ಬಲೆಗೆ ಬೀಳದೆ ಸ್ವತಂತ್ರ ರಾಗಿದ್ದರು.


No comments:

Post a Comment