ಜನರನ್ನು ತಂತ್ರದಿಂದ ಆಳಿದವರು ಸ್ವತಂತ್ರ ಅಲ್ಲ. ಜನರು ಗಣಗಳಾಗಿ ಸಂಘ ಹಾಗು ಗುಂಪುಗಳನ್ನೆಲ್ಲ ಒಂದಾಗಿಸುತ್ತಾ ಉತ್ಸಾಹ ದಿಂದ ಉನ್ನತಮಟ್ಟದ ಗುರಿಯ ಕಡೆಗೆ ರಾಜ್ಯವನ್ನು ನಡೆಸುವುದೇ ಪ್ರಜಾಪ್ರಭುತ್ವದ ಪ್ರಗತಿ.ಅದರೆ ಇದುನಡೆದಿದೆಯೆ? ಎಲ್ಲಾ ಗುಂಪು,ಸಂಘದ ಗಣಗಳು ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕುವತ್ತ ವೈಭವದ ಉತ್ಸವಗಳಿಂದ ಜನರನ್ನು ಸುಲಿಗೆ ಮಾಡುತ್ತಾ ಸರ್ಕಾರದ ಹಿಂದೆ ಬೇಡಿಕೆಗಳ ಮಹಾಪೂರವನ್ನೇ ಸುರಿಸುತ್ತಾ ಜನರ ಹಣವನ್ನು ದುರ್ಭಳಕೆ ಮಾಡಿಕೊಂಡು ಪರಕೀಯರ ಸಾಲ, ಬಂಡವಾಳವನ್ನು ರಾಜ್ಯಕ್ಕೆ ತಂದು ತಮ್ಮ ಸ್ವಾರ್ಥ ಸುಖಕ್ಕೆ ಸಾಮಾನ್ಯರ ದಾರಿತಪ್ಪಿಸಿ ಆಳುವವರಿಗೆ ಇನ್ನಷ್ಟು ಸಹಕಾರ ನೀಡಿ ರಾಜ್ಯದ ಭಾಷೆ,ಸಂಸ್ಕೃತಿ, ಧರ್ಮ ಬಿಟ್ಟು ನಡೆದವರಿಗೆ ಪ್ರಶಸ್ತಿ ಸನ್ಮಾನ ಅದೇ ಅದನ್ನು ಉಳಿಸಿ ಬೆಳೆಸಿ ರಾಜ್ಯದೊಳಗಿದ್ದವರಿಗೆ ಅವಮಾನ ಅಸಹಕಾರ ತೋರುವ ಎಷ್ಟೋ ಸಂಘಟನೆಗಳು ರಾಜ್ಯದ ಈ ಸ್ಥಿತಿಗೆ ರಾಜಕೀಯ ಕಾರಣವೆನ್ನಬಹುದು.ಆದರೆ ಆ ರಾಜಕೀಯ ನಮ್ಮೊಳಗೇ ಇರೋವ ಸತ್ಯವನ್ನು ಒಪ್ಪಿಕೊಳ್ಳದಿದ್ದರೆ ಸತ್ಯ ಅಸತ್ಯವಾಗೋದಿಲ್ಲ.ಉಂಡೂ ಹೋದ ಕೊಂಡೂ ಹೋದ ಎನ್ನುವವರಿಂದ ಯಾವ ರೀತಿಯ ಉಪಕಾರ,ಉಪಚಾರ ಉತ್ಸಾಹ ಕಾಣಬಹುದು. ಒಟ್ಟಿನಲ್ಲಿ ಎಲ್ಲರಿಗೂ ರಾಜ್ಯದ ಮೇಲೆ ಕಾಳಜಿಯಿದೆ.ಆದರೆ ರಾಜ್ಯದ ಮೂಲ ಶಿಕ್ಷಣದಲ್ಲಿಯೇ ಜನರ ದಾರಿತಪ್ಪಿಸಿ ಭಾಷೆ,ಸಂಸ್ಕೃತಿ ಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಮಾಡಿದ್ದರೆ ಇದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲು ಗುಂಪುಗಾರಿಕೆ,ಸಂಘಟನೆಗಳ ಸ್ವಾರ್ಥ ಬಿಡುತ್ತಿಲ್ಲ. ಹರಿದುಹೋಗುತ್ತಿರುವ ಹಣವೆಲ್ಲವೂ ಜನರಿಗೆ ಸೇರುವಮೊದಲೇ ಮಧ್ಯವರ್ತಿಗಳ ಪಾಲಾಗಿ ಸಾಲ ಮಾತ್ರ ಬಡವರ ತಲೆಮೇಲೆ. ಬಡತನವನ್ನು ಜ್ಞಾನದಿಂದ ಓಡಿಸುವ ಶಿಕ್ಷಣ ನೀಡದ ಸಂಘಟನೆಗಳಿಂದ ರಾಜ್ಯದಲ್ಲಿ ಅಜ್ಞಾನ ಮಿತಿಮೀರಿದೆ.ಅಜ್ಞಾನವನ್ನು ಬಂಡವಾಳ ಮಾಡಿಕೊಂಡರೆ ಇನ್ನಷ್ಟು ಅಜ್ಞಾನವೇ ಬೆಳೆಯೋದಷ್ಟೆ. ಶಾಂತಿ ಪ್ರೀತಿ,ವಿಶ್ವಾಸವನ್ನು ಬೆಳೆಸಬೇಕಾದ ಗಣಗಳೀಗ ಗಣಿಗಳ ಕೈಕೆಳಗೆ ನಿಂತು ಬೇಡುವ ಸ್ಥಿತಿಗೆ ಬಂದಿರುವುದು ಪ್ರಜಾಪ್ರಭುತ್ವ ದ ರಾಜ್ಯಗಳನ್ನು ಬೇರೆ ಬೇರೆ ಮಾಡಿ ಆಳುವ ರಾಜಕೀಯವೆಂದರೆ ತಪ್ಪಿಲ್ಲ. ಒಂದು ದಿನದ ಕಾರ್ಯಕ್ರಮದ ಖರ್ಚು ವೆಚ್ಚ ಬರಿಸೋ ಶಕ್ತಿ ಇಲ್ಲದವರು ಹಣವನ್ನು ನೀರಿನಂತೆ ಬಳಸಿಕೊಂಡು ನಾಟಕದಲ್ಲಿ ನಾಟಕವಾಡಿ ಜನರ ಮನಸ್ಸನ್ನು ಗೆದ್ದರೂ ಪರಮಾತ್ಮನ ಹೃದಯದಲ್ಲಿ ಸ್ಥಳವಿರದು. ಒಟ್ಟಿನಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷ ವಾದರೂ ಗಣರಾಜ್ಯೋತ್ಸವ ವೈಭವದಿಂದ ನಡೆದಿರವ ಹಿಂದೆ ನಮ್ಮ ಅಸಹಾಯಕತೆಯನ್ನು ಎತ್ತಿ ಹಿಡಿದಿದೆ.
ನೀವು ನಮಗೆ ಅಧಿಕಾರ ಕೊಟ್ಟರೆ ನಾನು ನಿಮ್ಮನ್ನು ಆಳುತ್ತೇವೆ ಎನ್ನುವ ಮಟ್ಟಿಗೆ ರಾಜಕೀಯ ಬೆಳೆದರೂ ಜನರ ಜ್ಞಾನ ಕುಸಿದ ಪರಿಣಾಮ ಸರ್ಕಾರದ ಹಿಂದೆ ನಡೆಯುತ್ತಾ ನಮ್ಮ ಮೂಲದ ಆಸ್ತಿಯನ್ನು ಸದ್ಬಳಕೆ ಮಾಡಿಕೊಳ್ಳದೆ ಹಳ್ಳಿ ಬಿಟ್ಟು ನಗರಕ್ಕೆ ಬಂದವರು ಕೂಲಿಕಾರ್ಮಿಕರಾಗಿ ಪರಕೀಯರ ಕೆಳಗೆ ಜೀವನನಡೆಸಿ ಸುಖವಾಗಿದ್ದೇವೆ ಎಂದರೆ ಭೂಮಿಯ ಋಣ ತೀರಿದಂತಾಗುವುದೆ?
ಗಣಪತಿಯನ್ನು ದೇವತೆಗಳ ಅಧಿಪತಿಯನ್ನಾಗಿಸಿ ಭೂಮಿಯ ಜನರ ಕಾರ್ಯ ನಡೆಸಲು ಪ್ರಥಮ ಪೂಜೆಯ ಗಣನಾಯಕನನ್ನಾಗಿಸಿದಂತೆ ಇಲ್ಲಿ ಪ್ರತಿಯೊಂದು ಕೆಲಸವು ಜನರ ಸಹಕಾರವಿಲ್ಲದೆ ನಡೆಯದು.ಆದರೆ ಭ್ರಷ್ಟಾಚಾರ ದಲ್ಲಿ ಕೆಲಸವಾದರೆ ಭ್ರಷ್ಟರಿಗೆ ಶಕ್ತಿ. ಹೀಗಾಗಿ ರಾಜ್ಯದ ಉತ್ದವ ರಾಜ್ಯದ ಜನರ ಹಣದಲ್ಲಿ ನಡೆಸುವಾಗ ಎಚ್ಚರವಾಗಿರಬೇಕು. ಇದಕ್ಕೆ ಸಹಕರಿಸುವಾಗಲೂ ಜ್ಞಾನಿಗಳು ಅರ್ಥ ಮಾಡಿಕೊಳ್ಳುವ ಜ್ಞಾನವಿರಬೇಕಿತ್ತು.ಜ್ಞಾನದ ಶಿಕ್ಷಣವೇ ಕೊಡದೆ ಆಳಿದವರೂ ಜೀವನದಲ್ಲಿ ಸೋತರು,ಆಳಿಸಿಕೊಂಡವರೂ ಸೋತರು.ಗೆದ್ದವರು ಮಧ್ಯವರ್ತಿಗಳಷ್ಟೆ.ಈಗಲಾದರೂ ಮಧ್ಯವರ್ತಿಗಳ ರಾಜಕೀಯ ತಿಳಿದು ಸಜ್ಜನರನ್ನು ಗುರುತಿಸಿ ಸಹಕರಿಸಿದರೆ ಉತ್ತಮ ಪ್ರಗತಿ.ಇಲ್ಲವಾದರೆ ಅಧೋಗತಿ
No comments:
Post a Comment