ಭಾರತದ ಭೂಷಿರದ ಶಾರದಾ ಪೀಠದ ದಕ್ಷಿಣ ದ್ವಾರದ ಮೂಲಕ ಶ್ರೀ ಆದಿ ಶಂಕರಾಚಾರ್ಯರು ಪ್ರವೇಶ ಮಾಡಿ ಧರ್ಮ ಪೀಠವಾದ ಸರ್ವಜ್ಞ ಪೀಠ ಏರಿದನ್ನು ನಾವು ಇಂದಿಗೂ ನೆನಪಿಸಿಕೊಂಡು ಅಧ್ವೈತ ತತ್ವ ಪ್ರಚಾರದಲ್ಲಿದ್ದೇವೆ. ಭಾರತ ಮಾತೆಯ ಮೇಲಿನ ಕಾಶ್ಮೀರ ಶಾರದೆಯ ತವರೂರಾಗಿತ್ತು. ವಿದ್ವಂಸಕರು ಅವಳನ್ನು ಅಲ್ಲಿಂದ ಅಟ್ಟಿ ದೇಶವನ್ನು ಅಧರ್ಮದಿಂದ ಆಳಲು ಹೊರಟಿದ್ದರು. ಈಗ ಮತ್ತೆ ಆ ತಾಯಿಯ ವಿಗ್ರಹ ಮೂರ್ತಿ ದಕ್ಷಿಣದ ಶಾರದಾಪೀಠವಾಗಿರುವ ಶೃಂಗೇರಿಯಿಂದ ಕಾಶ್ಮೀರದವರೆಗೆ ಹೊರಟಿರುವುದರ ಹಿಂದೆ ಜ್ಞಾನ ದೇವತೆಯು ಕೆಳಗಿನಂತೆ ಮೇಲಿನವರೆಗೆ ಹೊರಟಿದ್ದಾಳೆನ್ನಬಹುದು. ಜ್ಞಾನವನ್ನು ಯಾರೂ ಕದಿಯಲಾಗದು. ಆ ದೇವತೆಯನ್ನು ಎಷ್ಟೇ ದೂರ ಮಾಡಿದರೂ ಅವಳಿಲ್ಲದ ಜೀವನವೇ ನರಕವಾಗಿರುತ್ತದೆ ಎನ್ನುವ ಸತ್ಯ ನಮ್ಮ ಹಿಂದೂ ಧರ್ಮ ತಿಳಿಸುತ್ತದೆ. ತಲೆಗೆ ಸಿಗದ ಜ್ಞಾನ ಕಾಲಿನವರೆಗೆ ಹೇಗೆ ಹರಿಯಬೇಕು? ಹೀಗಾಗಿ ಮಾನವನ ತಲೆಗೆ ಜ್ಞಾನದ ಶಿಕ್ಷಣ ತುಂಬಿದಾಗಲೇ ಅವನ ನಡಿಗೆಯೂ ಉತ್ತಮವಾಗಿರುತ್ತದೆ. ಕೇವಲ ಓದಿ ತಿಳಿದರೆ ಜ್ಞಾನಿಯಾಗೋದಿಲ್ಲ ಅದರ ತತ್ವ ಅಳವಡಿಸಿಕೊಂಡು ನಡೆದರೆ ಮಾತ್ರ ಮಾನವನಿಗೆ ಸನ್ಮಾರ್ಗ ಕಾಣುವುದು. ಹಿಂದೂ ಧರ್ಮದ ಬೇರು ಸಾತ್ವಿಕವಾಗಿರುವಾಗ ಅದನ್ನು ಆಳವಾಗಿ ತಿಳಿದು ನಡೆಯುವುದಕ್ಕೆ ನಮಗೆ ಶಾರದೆಯ ಕೃಪೆ ಇರಲೇಬೇಕು. ಇದೀಗ ಶಾರದೆಯ ಪ್ರತಿಮೆ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರುಗಳಿಂದ ಪೂಜಿಸಲ್ಪಟ್ಟು ಶಾರದೆಯ ತವರೂರಿಗೆ ಕಳಿಸಲಾಗುತ್ತಿರುವುದು ಭಾರತ ಮಾತೆಯ ಶಿರಕ್ಕೆ ಸಿಕ್ಕ ಜ್ಞಾನದ ಶಿಖರ. ತಾಯಿ ಶಾರದೆ, ಮೇಲೆ ನಿಂತು ನೋಡಿದಾಗಲೇ ಕೆಳಗಿಳಿದಿರುವ ಜ್ಞಾನಶಕ್ತಿ ಮೇಲೇರಲು ಸಾಧ್ಯ. ತಾಯಿಯನ್ನೇ ಹೊರಗಟ್ಟಿರುವ ಅಸುರರನ್ನು ಸಂಹಾರ ಮಾಡಲು ಜ್ಞಾನದಿಂದ ಮಾತ್ರ ಸಾಧ್ಯ.
ಸತ್ಯ ಜ್ಞಾನವಿಲ್ಲದ ಜಗತ್ತಿನಲ್ಲಿ ಮಿಥ್ಯಜ್ಞಾನದ ರಾಜಕೀಯ ಬೆಳೆದರೆ ಮಾನವನ ಅಜ್ಞಾನವೇ ಬೆಳೆಯುವುದು ಎನ್ನುವ ಸತ್ಯ ನಾವೀಗ ಕಾಣುತ್ತಿದ್ದೇವೆ .ಬದಲಾವಣೆ ಒಳಗಿನಿಂದ ನಡೆದಾಗಲೇ ಹೊರಗೂ ಬದಲಾವಣೆ ಸಾಧ್ಯವಿದೆ. ಹಾಗೆಯೇ ಒಳಗಿನ ಜ್ಞಾನಶಕ್ತಿಯನ್ನು ಮೇಲ್ಮಟ್ಟಕ್ಕೆ ಏರಿಸಿದರೆ ಮಾನವನಿಗೆ ಸಂಕಷ್ಟದಿಂದ ಮುಕ್ತಿ. ನಾವೇ ಹೊರಗಿನಿಂದ ಒಳಗೆಳೆದುಕೊಂಡ ಅಜ್ಞಾನವನ್ನು ಹೊಡೆದೋಡಿಸಲು ಜ್ಞಾನದೇವತೆಯಿಂದಲೇ ಸಾಧ್ಯ. ಇದೇ ನಿಜವಾದ ಜೀವನ.
ಮಾನವ ಎಷ್ಟೇ ಅಜ್ಞಾನ,ಅಸತ್ಯ,ಅನ್ಯಾಯವನ್ನು ಬೆಳೆಸಿ ಮೆರೆದರೂ ಜ್ಞಾನವಿಲ್ಲದೆ ಮುಕ್ತಿ ಮೋಕ್ಷ ಸಾಧ್ಯವಿಲ್ಲ ಎನ್ನುವ ಸತ್ಯ ಮಾತ್ರ ಬದಲಾಗದುಕಾರಣ ಸತ್ಯ ಒಂದೇ ಇರೋದು.
ಮನೆಮನೆಯೊಳಗಿದ್ದ ಜ್ಞಾನ ದೇವತೆಯನ್ನು ಹಣಸಂಪಾದನೆಗೆ ಭೌತಿಕದಲ್ಲಿ ಬಳಸಿ ಆಂತರಿಕ ಜ್ಞಾನ ಕುಸಿಯಿತು. ಆದರೆ ಎಲ್ಲಿ ಜ್ಞಾನವಿರುವುದೋ ಅಲ್ಲಿ ಸತ್ಯ ಧರ್ಮ ವಿರುತ್ತದೆ.ಹೀಗಾಗಿ ಅಜ್ಞಾನದ ಜೊತೆಗೆ ಅಸತ್ಯ ಅಧರ್ಮ ವೇ ಬೆಳೆದರೆ ಶಾಂತಿ ಸಿಗದೆ ಕ್ರಾಂತಿಯಿಂದ ಜೀವ ಹೋಗುವುದು. ಹೀಗೆಯೇ ಯುಗಯುಗದಿಂದಲೂ ಈ ಭೂಮಿಯಲ್ಲಿ ರಾಜಕೀಯವು ಅತಿರೇಖಕ್ಕೆ ಹೋಗಿರುವುದು ಅಜ್ಞಾನದಿಂದ. ಇದನ್ನು ಸರಿಪಡಿಸಲು ಮತ್ತೆ ಜ್ಞಾನ ಶಕ್ತಿಯ ಕಡೆಗೆ ಹೋಗುತ್ತೇವೆ. ಇದರ ಅರಿವಿದ್ದವರು ಜ್ಞಾನದ ಮೂಲಕ ಸಮಾಧಾನಕರ ಜೀವನ ನಡೆಸುತ್ತಾರೆ.
No comments:
Post a Comment