ಇಷ್ಟು ವರ್ಷ ಸರ್ಕಾರ ಕೆಲವರಿಗಷ್ಟೇ ಉಚಿತ ಸಾಲ,ಸೌಲಭ್ಯಗಳನ್ನು ನೀಡುತ್ತಿತ್ತು.ಈಗ ಎಲ್ಲರಿಗೂ ನೀರನ್ನು ಉಚಿತವಾಗಿ ನೀಡುವ ಭರವಸೆ ನೀಡಿದೆ. ತಿಂದ ಮೇಲೆ ನೀರು ಕುಡಿಯಲೇಬೇಕಲ್ಲವೆ?
ಕೆಲವರು ಉಚಿತವಾಗಿ ತಿನ್ನುತ್ತಿದ್ದಾರೆನ್ನುವವರೂ ಮಧ್ಯದಲ್ಲಿ ನಿಂತು ತಮ್ಮ ಪಾಲನ್ನು ಹಂಚಿಕೊಂಡರು. ಈಗ ನೀರನ್ನು ಹಾಗೆ ಮಾಡಲಾಗದು ಇದು ಹರಿದುಹೋಗಲೇಬೇಕು ಅದಕ್ಕೆ ಎಲ್ಲರಿಗೂ ನೀರು ಉಚಿತ. ನಮ್ಮ ಪ್ರಜಾಪ್ರಭುತ್ವ ಹೇಗಿದೆಯೆಂದರೆ ಪ್ರಕೃತಿಯಿಂದ ಉಚಿತವಾಗಿ ಸಿಗುವ ನೆಲ ಜಲವನ್ನು ಸರ್ಕಾರದಿಂದ ಪಡೆಯಬೇಕಾಗಿದೆ. ಅಂದರೆ ಇದು ನಗರ ಪ್ರದೇಶಗಳಿಗೆ ಅನಿವಾರ್ಯ ವಾಗಿರೋದು ದೊಡ್ಡ ದುರಂತ.
ಪ್ರಕೃತಿಯನ್ನು ವಿಕೃತವಾಗಿ ಬಳಸುತ್ತಾ ಅದನ್ನು ವ್ಯವಹಾರಕ್ಕೆ ಸೀಮಿತಗೊಳಿಸಿದರೆ ಬೆಲೆ ಕಟ್ಟುವುದು ಹಣದಿಂದ ಮಾತ್ರ ಜ್ಞಾನದಿಂದ ಕಷ್ಟ. ಒಟ್ಟಿನಲ್ಲಿ ಎಲ್ಲಾ ಉಚಿತವಾದಾಗ ರೋಗವೂ ಉಚಿತ ಔಷಧವೂ ಉಚಿತ.ಶಿಕ್ಷಣದಲ್ಲಿ ಮಾತ್ರ
ಬದಲಾವಣೆ ತರಲು ಸಾಧ್ಯವಾಗದಿದ್ದರೆ ಇದೇ ಆಗೋದಲ್ಲವೆ?
ನೀರಿಗಾಗಿ ಹೋರಾಟ ನಡೆಸೋ ಬದಲಾಗಿ ಶಿಕ್ಷಣದ ಬದಲಾವಣೆಗೆ ಸ್ಪಂದಿಸುವತ್ತ ಜನರು ನಡೆದರೆ ಯಾವುದೂ ಉಚಿತ ಹಂಚುವ ಮಧ್ಯವರ್ತಿಗಳೇ ಇರೋದಿಲ್ಲ.ಎಲ್ಲಾ ಸಮಾನರಾದ ಮಾನವರಾಗಿರಬಹುದು. ಎಷ್ಟು ಉಚಿತ ಪಡೆದರೂ ಸಾಲ ಮಾತ್ರ ಖಚಿತವಾಗಿ ಬೆಳೆಯುತ್ತದೆ. ಇದೇ ಅಧ್ಯಾತ್ಮ ಸತ್ಯ. ಅಗತ್ಯವಿದ್ದವರಿಗೆ ಚೇತರಿಸಿಕೊಳ್ಳಲು ಬೇಕು.
ಮಲಗಿದವರು ಎದ್ದು ಕೂರಲಿ ದುಡಿದು ಬಾಳಲಿ.
ಉತ್ತಮ ಶಿಕ್ಷಣದಿಂದ ಸತ್ತಂತಿರುವವರನ್ನು ಬಡಿದೆಬ್ಬಿಸಬೇಕಿತ್ತು.ಬದುಕಿದವರನ್ನು ಸಾಯಿಸುವ ಶಿಕ್ಷೆ ಬೇಕೆ?
No comments:
Post a Comment