ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, January 22, 2023

ಆತ್ಮನಿರ್ಭರ ಭಾರತ ರಾಜಕೀಯದಿಂದ ಸಾಧ್ಯವೆ?

ಅತಿಯಾದ ಶಾಂತಿ ಕ್ರಾಂತಿಗೆ ಕಾರಣವಾದಂತೆ ಅತಿಯಾದ ಕ್ರಾಂತಿ ಶಾಂತಿಗೆ ಕಾರಣವಾಗಿಲ್ಲ.ಕಾರಣ ಕ್ರಾಂತಿಯ ಹಿಂದೆ ರಾಜಕೀಯವಿರುತ್ತದೆ.ಶಾಂತಿಯ ಹಿಂದೆ ರಾಜಯೋಗವಿರುತ್ತದೆ. 
ವಿವೇಕಾನಂದರು ದೇಶವನ್ನು ಸ್ವತಂತ್ರ ಗೊಳಿಸುವ ರಾಜಯೋಗದ ಶಿಕ್ಷಣದಿಂದ ಯುವಕರನ್ನು  ಎಚ್ಚರಿಸಿದ್ದರೆ ಇಂದಿನ ಯುವಕರು   ಭ್ರಷ್ಟಾಚಾರದ ಮೂಲವನ್ನು ತಿಳಿಯದೆ ನೇರವಾಗಿ ರಾಜಕೀಯಕ್ಕೆ ಸಹಕರಿಸುತ್ತಾ ವಿದೇಶದವರೆಗೂ ಹೋಗುತ್ತಿದ್ದಾರೆ.  ಸರಳವಾಗಿದ್ದ ತತ್ವ ಬಿಟ್ಟು  ಅತಂತ್ರಗೊಳಿಸುವ ತಂತ್ರಜ್ಞಾನದಿಂದ ದೇಶ ಕಟ್ಟಲು  ಹಣಸಂಪಾದನೆಯೇ ಗುರಿಯಾಗಿಸಿಕೊಂಡು  ಸತ್ಯಜ್ಞಾನ ಕುಸಿದಿದೆ. ಬ್ರಿಟಿಷ್‌  ಸರ್ಕಾರವಾದರೂ  ವಿಜ್ಞಾನದಿಂದ ದೇಶವನ್ನು ಆರ್ಥಿಕವಾಗಿ ಸಬಲಗೊಳಿಸುವತ್ತ  ನಡೆದರು.ಆದರೆ, ಭಾರತೀಯರ ಆತ್ಮಜ್ಞಾನವೇ  ದುರ್ಭಳಕೆ  ಮಾಡಿಕೊಂಡರೆ  ನಷ್ಟ ಯಾರಿಗೆ?      ರಾಜಕೀಯ ಕಣ್ಣಿಗೆ ಕಾಣುತ್ತದೆ ರಾಜಯೋಗ ಕಣ್ಣಿಗೆ ಕಾಣೋದಿಲ್ಲ.ರಾಜಯೋಗ ಆಂತರಿಕ ಶಕ್ತಿಯಾದರೆ ರಾಜಕೀಯ ಭೌತಿಕ ಶಕ್ತಿ. ಭೌತಿಕದಲ್ಲಿ ಶಾಂತಿ ಕಂಡವರು ಯೋಗಿಗಳಷ್ಟೆ. ಯೋಗಿಗಳು ಆತ್ಮಜ್ಞಾನದಿಂದ ಸತ್ಯದೆಡೆಗೆ ನಡೆದು ಮುಕ್ತಿ ಪಡೆದರು.ಆದರೆ ಭೋಗದೆಡೆಗೆ ನಡೆದವರ ಜೀವನದಲ್ಲಿ ರೋಗವೇ ಹೆಚ್ಚಾಗಿ ಕೊನೆಗೆ ಕ್ರಾಂತಿಕಾರಿಗಳನ್ನು  ಬೆಳೆಸುವತ್ತ  ನಡೆಯುತ್ತಾರೆ. ದೇಶ ಯೋಗಿಗಳಿಂದ  ಆತ್ಮನಿರ್ಭರ ವಾಗಬಹುದೇ ಹೊರತು ರೋಗಿಗಳಿಂದ ಆಗದು.ಭ್ರಷ್ಟಾಚಾರ ರೋಗದ  ಹವಾ  ಜನರ ಉಸಿರುಗಟ್ಟಿಸಿ ಸಾಯುಸುವಾಗ ತಿರುಗಿ  ಜನ್ಮ ಪಡೆದಾಗಲೂ  ಅದೇ  ಗಾಳಿಯಲ್ಲಿ  ಜೀವಿಸಬೇಕೆಂದರೆ ಬದಲಾವಣೆ ಕಷ್ಟ. ಇದಕ್ಕೆ ಕಾರಣವಾಗಿರುವ ಶಿಕ್ಷಣದ ರಾಜಕೀಯ ಹೋಗಿ ಶಿಕ್ಷಣದಲ್ಲಿ ರಾಜಯೋಗದ ವಿಚಾರ ವಿದ್ದರೆ  ಬದಲಾವಣೆ ಆಂತರಿಕ ಶುದ್ದಿಯಿಂದ ಸಾಧ್ಯವಿದೆ. ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಮಧ್ಯವರ್ತಿಗಳ  ಅರ್ಧ ಸತ್ಯದ ರಾಜಕೀಯಕ್ಕೆ ದೇಶವೇ ತನ್ನ ಮೂಲವನ್ನು ಮರೆತು ನಡೆದಿದೆ. ಯಾರೂ ಯಾರನ್ನೂ ಬದಲಾಯಿಸೋ ಬದಲು ನಾವು ನಮ್ಮನ್ನು ಬದಲಾಯಿಸುವ ಸತ್ಯದೆಡೆಗೆ ನಡೆಯಲಾಗದಿದ್ದರೆ  ಇದಕ್ಕೆ ನಾವೇ ಕಾರಣ. ನಮ್ಮ ಸಹಕಾರವೇ  ಕ್ರಾಂತಿಕಾರಿ ಬೆಳವಣಿಗೆಗೆ ಕಾರಣ. ಯಾರಾದರೂ ಕ್ರಾಂತಿಯಿಂದ ಮುಕ್ತಿ ಪಡೆದಿದ್ದರೆ ಅದು ಕ್ಷತ್ರಿಯರಷ್ಟೆ.ಹಾಗಾದರೆ ಪ್ರಜಾಪ್ರಭುತ್ವದಲ್ಲಿ ಕ್ಷತ್ರಿಯರು ಯಾರು? ಸೈನಿಕರನ್ನು ಹೇಳಬಹುದು.ಆದರೆ ಅವರಿಗೆ ದೇಶ ಆಳುವ ಅಧಿಕಾರವಿಲ್ಲ.ದೇಶ ಕಾಯುವ ಅಧಿಕಾರವಿದ್ದರೂ ದೇಶದೊಳಗೆ ಶತ್ರುಗಳನ್ನು ಸ್ವಾಗತಿಸುತ್ತಾ ವಿದೇಶವನ್ನು ಬೆಳೆಸುವ  ತಂತ್ರವೇ ಇಂದು ಹೆಚ್ಚಾಗಿದ್ದರೆ ತತ್ವಜ್ಞಾನದಲ್ಲಿದ್ದ ಶಾಂತಿ ಅರ್ಥ ವಾಗದೆ ಜೀವ ಹೋಗುತ್ತದೆ. ಆತ್ಮರಕ್ಷಣೆ ಕಷ್ಟ.
 ಭೂಮಿ ಮೇಲಿರುವ ಸತ್ಯ ಓದಿ ತಿಳಿಸುವ ಅಗತ್ಯವಿಲ್ಲ.ಆದರೆ ಆಕಾಶದೆತ್ತರ  ಹಾರೋದಕ್ಕೆ ಭೂಮಿಯನ್ನು ದುರ್ಭಳಕೆ ಮಾಡಿಕೊಳ್ಳುವತ್ತ ನಡೆದಿರೋದು  ಮನುಕುಲಕ್ಕೆ  ಅಪಾಯ. ಇದರಲ್ಲಿ ಭೂಮಿ ಆಕಾಶದಲ್ಲಿದ್ದರೂ ಮನುಕುಲ ಇರೋದು ಭೂಮಿ ಮೇಲೆ ಎಂದಾಗ ನನಗೆ ಆಸರೆಯಾಗಿದ್ದವರನ್ನು ಆಳಾಗಿ ಕಂಡರೆ  ಜೀವಕ್ಕೆ ಮುಕ್ತಿ ಸಿಗುವುದೆ? ಸಾಮಾನ್ಯ ಮಾನವನಲ್ಲಿರಬೇಕಾದ ಸಾಮಾನ್ಯಜ್ಞಾನ  ಕುಸಿದಿರೋದಕ್ಕೆ ರಾಜಕೀಯ ಕಾರಣ. ರಾಜಕೀಯವನ್ನು ರಾ ರಾವಣ,ಕೀ ಕೀಚಕ, ಜ ಜರಾಸಂಧ, ಯ ಯಮ ಎನ್ನುವುದು ಯಾಕೆ?
 ರಾವಣನಂತಹ ಮಹಾಜ್ಞಾನಿ ಸ್ತ್ರೀ ಯನ್ನು ದುರ್ಭಳಕೆ ಮಾಡಿಕೊಳ್ಳಲು ಹೋಗಿ ಕೀಚಕನಾಗಿ  ಜರಾಸಂಧನಂತೆ ಮರಣ ಕಂಡು ಯಮಲೋಕ ತೋರಿಸಿದಂತೆ ಈಗಲೂ ಮಾನವರಾಗಿದ್ದವರು ಅಸುರ ಶಕ್ತಿಯ ರಾಜಕೀಯಕ್ಕೆ ಸಹಕರಿಸುತ್ತಾ ಸ್ತ್ರೀ ಯರಲ್ಲಿದ್ದ ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು  ಜ್ಞಾನ ಬೇರೆ ವಿಜ್ಞಾನ ಬೇರೆ ಎನ್ನುವ ಹಂತ ತಲುಪಿ ಸಾಯುತ್ತಿರುವುದನ್ನು ಪ್ರಗತಿ ಎಂದರೆ ಅಜ್ಞಾನವಷ್ಟೆ.
ಮೂಲಾಧಾರ ಚಕ್ರವೇ ಶುದ್ದಿಗೊಳಿಸದೆ ಸಹಸ್ರಾರ ಚಕ್ರ ಶುದ್ದಿ ಸಾಧ್ಯವೆ? ಹೊರಗಿನ ‌ಮಂತ್ರ, ತಂತ್ರ,ಯಂತ್ರದ ಸುಳಿಯಲ್ಲಿ ಸ್ವತಂತ್ರ ಜ್ಞಾನವೇ ಹಿಂದುಳಿದಿರುವಾಗ  ಅತಂತ್ರಸ್ಥಿತಿಗೆ  ಜೀವನ ತಲುಪುವುದನ್ನು ಸರ್ಕಾರ ತಪ್ಪಿಸುವುದೆಂದರೆ  ಒಂದು  ವ್ಯಕ್ತಿ, ಪಕ್ಷ,ಜಾತಿ,ಧರ್ಮದಿಂದ  ಈ ಮನುಕುಲ  ಬೆಳೆದಿಲ್ಲ.ಆದರೆ ಒಂದೇ ಶಕ್ತಿಯ ಅಧೀನದಲ್ಲಿರುವ ಸತ್ಯ ಒಂದೇ .ಆ ಒಂದೇ ಸತ್ಯದಕಡೆಗೆ  ನಡೆಯುವುದೆ ಜೀವನದ ಗುರಿ. ಈ ಗುರಿ ತಲುಪಲು ಸಾವಿರಾರು ದಾರಿಯಿದ್ದರೂ ತತ್ವ ಒಂದೇ. ತತ್ವದೆಡೆಗೆ ನಡೆಯದೆ ತಂತ್ರದಿಂದ  ನಡೆದರೆ ಅಡ್ಡದಾರಿ ಹಿಡಿದವರಿಗೆ  ಗುರಿಗೆ ತಲುಪಲು ಕಷ್ಟ.ತಿರುಗಿ  ಸೀದಾ ರಸ್ತೆಗೆ ಬರಲು ಕಷ್ಟಪಡಬೇಕು. ಈ ಕಷ್ಟಪಟ್ಟು  ನಡೆದವರನ್ನು ಮಧ್ಯವರ್ತಿಗಳು ತಡೆದು ನಿಲ್ಲಿಸಿ ಉಚಿತವಾಗಿ  ಕೊಟ್ಟರೆ ಅಲ್ಲೇ ಸುಖವಿದೆ ಎಂದು ಮನಸ್ಸು ನಿಂತಾಗಲೇ ಮಧ್ಯವರ್ತಿಗಳು ಬೆಳೆಯುವುದು. ಯಾವಾಗ ಮಧ್ಯವರ್ತಿಗಳ ಅರ್ಧ ಸತ್ಯದ ವ್ಯವಹಾರಿಕ ರಾಜಕೀಯ ಭೂಮಿಯನ್ನು ಆಳುವುದೋ ಆಗಲೇ  ಜನಜೀವನದಲ್ಲಿ ಅಶಾಂತಿಯ ಹೋರಾಟ,ಹಾರಾಟ,ಮಾರಾಟದ ಜ್ಞಾನ ಹೆಚ್ಚಾಗಿ ಮೂಲದ ಧರ್ಮ ಕರ್ಮ ಕ್ಕೆ ದಕ್ಕೆ. ಎಲ್ಲಿಯವರೆಗೆ ಮೂಲ ಸೇರಲಾಗದೋ ಅಲ್ಲಿಯವರೆಗೆ  ಶಾಂತಿ,ತೃಪ್ತಿ, ಮುಕ್ತಿ ಇಲ್ಲ. ಹೀಗಾಗಿ ಹಿಂದಿನ ಮಹಾತ್ಮರುಗಳು ವಾಸ್ತವಸತ್ಯವ ತತ್ವದಿಂದ ತಿಳಿದು ಸ್ವತಂತ್ರ ಜೀವನ ನಡೆಸುತ್ತಾ ಜನರಿಗೆ ಮಾರ್ಗ ದರ್ಶಕರಾಗಿ  ಮುಕ್ತರಾದರು. ಈಗಿನ ಶಿಕ್ಷಣವೇ ಅತಂತ್ರಸ್ಥಿತಿಗೆ ತಲುಪಿರುವಾಗ ಅದನ್ನು ಒಳಗೆಳೆದುಕೊಂಡ ಯುವಜನರ ಗತಿ ಏನಾಗಿರಬೇಡ. ಇದನ್ನು ಧಾರ್ಮಿಕ ಗುರು ಹಿರಿಯರು ಚಿಂತನೆ ಮಾಡಬೇಕಿದೆ.  ಅವರೂ ರಾಜಕೀಯದ ಹಿಂದೆ ನಡೆದರೆ  ರಾಜಯೋಗದ ಗತಿ?

No comments:

Post a Comment