ಕಣ್ಣಿನ ದೃಷ್ಟಿ ಸರಿಯಿಲ್ಲ ಎನ್ನುವ ಕಾರಣಕ್ಕಾಗಿ ಹೊರಗಿನಿಂದ ನಾವು ಕಣ್ಣಿಗೆ ಕನ್ನಡಕ ಹಾಕಿಕೊಂಡು ದೃಷ್ಟಿ ಸರಿಪಡಿಸಿಕೊಳ್ಳುವುದು ಭೌತಿಕ ವಿಜ್ಞಾನ. ಅದೇ ನಾವು ನೋಡುವ,ಕೇಳುವ,ಓದುವ,ಹೇಳುವ ವಿಚಾರದಲ್ಲಿಯೂ ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ಸರಿತಪ್ಪು ಕಾಣುತ್ತದೆ. ಇದನ್ನು ಸರಿಪಡಿಸಲು ಭೌತಿಕ ವಿಜ್ಞಾನದಿಂದ ಅಸಾಧ್ಯ.ಇದನ್ನು ಅದ್ಯಾತ್ಮಿಕ ಜ್ಞಾನದಿಂದ ಮಾತ್ರ ನಮ್ಮ ದೃಷ್ಟಿ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವೆನ್ನುವರು ಮಹಾತ್ಮರುಗಳು. ಅದ್ಯಾತ್ಮದ ಪ್ರಕಾರ ಎಲ್ಲಾ ಒಂದೇ ಆದರೂ ಒಂದೇ ದೃಷ್ಟಿಯಿಂದ ನೋಡಲಾಗಿಲ್ಲ. ಒಂದೇ ದೇವರನ್ನು ಹಲವಾರು ರೀತಿಯಲ್ಲಿ ಕಾಣಲಾಗಿದೆ.ಒಂದೇ ಭೂಮಿಯಲ್ಲಿದ್ದರೂ ಎಲ್ಲರೂ ಭೂಮಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ.ಕಾರಣವಿಷ್ಟೆ ನಮ್ಮ ಒಳದೃಷ್ಟಿಗೆ ಹೊರ ದೃಷ್ಟಿ ಹೊಂದಿಕೆಯಾಗಿಲ್ಲ. ಹೊರಗಿನ ದೃಷ್ಟಿ ಬದಲಾದಂತೆ ಒಳಗಿನ ದೃಷ್ಟಿ ಬದಲಾಗದು.ಒಳ ದೃಷ್ಟಿ ಯ ಕಡೆಗೆ ಹೆಚ್ಚು ಗಮನಿಸಿದಾಗಲೇ ಹೊರಗಿನ ದೃಷ್ಟಿ ದೋಷ ನಿವಾರಣೆ ಸಾಧ್ಯ. ಇಂದು ಮನುಕುಲ ಸತ್ಯವನ್ನು ಹೊರಗೆ ಹುಡುಕುತ್ತಾ ಒಳಗಿನ ಸತ್ಯ ಹಿಂದುಳಿದಿರುವ ಕಾರಣ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಹೊರಗಿನ ಪ್ರಯೋಗ ನಡೆದಿದೆ. ಹೊರಗೆ ಎಷ್ಟೇ ಪ್ರಯೋಗ ಮಾಡಿದರೂ ಅದು ಅಂತರಾತ್ಮನೆಡೆಗೆ ಸಾಗುವಲ್ಲಿ ಸೋತರೆ ದೃಷ್ಟಿ ಹೀನರೆ ಹೆಚ್ಚಾಗಿ ಭೂಮಿ ಮೇಲಿದ್ದರೂ ಆಕಾಶ ನೋಡಿಕೊಂಡು ಎಡವಿ ಬೀಳುವರು. ಬಿದ್ದವರು ಎದ್ದು ನಿಂತು ಭೂಮಿಯನ್ನು ಅರ್ಥ ಮಾಡಿಕೊಂಡರೆ ಎಲ್ಲಾ ಭೂಮಿಯಲ್ಲಿ ಕಾಣುತ್ತದೆ. ಇಲ್ಲವಾದರೆ ಜನ್ಮ ಜನ್ಮಗಳವರೆಗೂ ಹುಡುಕುತ್ತಲೇ ಇರಬೇಕು. ಈ ಕಾರಣಕ್ಕಾಗಿ ಅಧ್ಯಾತ್ಮ ಸಾಧಕರು ದ್ಯಾನದಿಂದ ಕಣ್ಣುಮುಚ್ಚಿಕೊಂಡು ಒಳಗಿನ ದೃಷ್ಟಿಯಿಂದ ಸತ್ಯ ತಿಳಿದು ಉನ್ನತಮಟ್ಟಕ್ಕೆ ಏರಿದ್ದರು. ನಮ್ಮ ಕಣ್ಣಿಗೆ ಅವರು ಕಾಣೋದಿಲ್ಲ.ಆದರೆ ಅವರ ಅರಿವಿನ ಸ್ವಲ್ಪ ಭಾಗ ನಮ್ಮೊಳಗೂ ಇದೆ.ಹುಡುಕಿಕೊಳ್ಳಲು ಪ್ರಯತ್ಮಪಡಬೇಕು. ಸಿಕ್ಕಿದ ಮೇಲೇ ನಮ್ಮ ಆಂತರಿಕ ದೃಷ್ಟಿಯಿಂದ ಭೌತಿಕ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಭೂಮಿಯ ಒಳಗೆ ಕತ್ತಲಿದೆ.ಕತ್ತಲಲ್ಲಿ ಬೆಳಕಿದೆ. ಭೂಮಿಯ ಮೇಲೆ ತಾತ್ಕಾಲಿಕ ಬೆಳಕಿದೆ.ಬೆಳಕಿನ ನಂತರ ಕತ್ತಲೂ ಇದೆ. ಕತ್ತಲಿನಿಂದ ಬೆಳಕಿನಕಡೆಗೆ ಹೋಗಲು ಆತ್ಮಜ್ಞಾನದ ಅಗತ್ಯವಿದೆ. ಆತ್ಮಜ್ಞಾನ ಒಳಗಿದೆ.ಒಳಗಿನ ದೃಷ್ಟಿಯಲ್ಲಿ ಸತ್ಯವಿದೆ. ಸತ್ಯವೇ ದೇವರಾಗಿದೆ. ಹಾಗಾದರೆ ದೇವರು ಇರೋದೆಲ್ಲಿ? ನಾವ್ಯಾರು?
ಹೋರಾಟ ಆಂತರಿಕ ದೃಷ್ಟಿಯಿಂದ ತಿಳಿದು ನಡೆಸಿದರೆ ಧರ್ಮ .ಯಾರೋ ಹೇಳಿದ್ದಷ್ಟೆ ಸತ್ಯವಲ್ಲ.ಹೇಳಿದ್ದನ್ನು ಕೇಳಿ ಪರಿಶೀಲನೆ ಮಾಡಿ ಆಂತರಿಕವಾಗಿ ಅನುಭವಿಸಿದವರಿಗೆ ದೃಷ್ಟಿ ದೋಷ ನಿವಾರಣೆ ಆಗಿದೆ.ನಮ್ಮದು ಅರ್ಧ ಸತ್ಯದ ದೃಷ್ಟಿ ಯಷ್ಟೆ. ಹೊರಗಿನ ಕನ್ನಡಕ ಹಾಕಿಕೊಂಡು ಒಳಗಿನ ಕನಸು ಕಾಣೋದಾಗಿದೆ.
No comments:
Post a Comment