ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, January 18, 2023

ವಾಸ್ತವಸತ್ಯ ಸಾಮಾನ್ಯರಿಗೆ ಅರ್ಥ ವಾಗುವುದೆ?

ಕರ್ನಾಟಕದ ಪರಿಸ್ಥಿತಿ ಹೇಗಿದೆಯೆಂದರೆ ಇಲ್ಲಿಯ ಮೂಲದವರನ್ನು ಗುರುತಿಸದೆ ಹೊರಗಿನವರನ್ನು ಸ್ವಾಗತಿಸಿ ಗೌರವಿಸುವ ಅತಿಥಿಸತ್ಕಾರ ಹೆಚ್ಚಾಗಿದೆ. ಭಾರತ ದೇಶವೇ ಹಿಂದೂ ದೇಶ. ಹಿಂದಿನಿಂದಲೂ  ಅತಿಥಿ ಸತ್ಕಾರವೇ ನಮ್ಮ ಧರ್ಮ. ಈಗ ಅತಿಥಿಗಳನ್ನು  ಸ್ವಾಗತಿಸುವುದರ ರಾಜಕೀಯಕ್ಕೆ  ಒಳಗಾಗಿ ನಮ್ಮವರನ್ನೇ ತಿರಸ್ಕರಿಸುವ ಕಾಲ ಬಂದಿದೆ. ಕಾರಣವಿಷ್ಟೆ ನಮ್ಮ ಆತ್ಮಜ್ಞಾನದಿಂದ ಹಣ
ಸಂಪಾದನೆ ಮಾಡೋದು ಕಷ್ಟ. ವಿದೇಶಿಗಳ ವಿಜ್ಞಾನದಿಂದ ಸಾಕಷ್ಟು ಹಣಸಂಪಾದನೆ ಮಾಡಬಹುದು.ಈ ಕಾರಣದಿಂದ ಕಾಣದ ಆತ್ಮಜ್ಞಾನ ತಿರಸ್ಕರಿಸಿ ವಿದೇಶಜ್ಞಾನ ಪುರಸ್ಕಾರ ಪಡೆದಿದೆ. ಇದರಿಂದಾಗಿ  ಯಾರ ಜ್ಞಾನ ಹಿಂದುಳಿಯಿತು ಎಂದರೆ ನಮ್ಮದೇ ಜ್ಞಾನ. ಅಜ್ಞಾನವನ್ನು ಎತ್ತಿ ಹಿಡಿದು ಎಷ್ಟೇ ಮೇಲೇರಿದರೂ ಕೊನೆಗೆ ತಿರುಗಿ ಬರೋದು ಮೂಲಕ್ಕೆ ಎಂದಾಗ ಮೂಲವನ್ನು  ಹಿಡಿದುಕೊಂಡು ನಿಧಾನವಾಗಿ ಮುಂದೆ ಹೋದರೆ  ನಮ್ಮನ್ನು ಪರಕೀಯರು ಆಳುವ ಪರಿಸ್ಥಿತಿಗೆ ದೇಶ ಬರುವುದಿಲ್ಲ.ಹಿಂದೆ ಬ್ರಿಟಿಷ್  ಸರ್ಕಾರ ನಡೆಸಿದ ಆಡಳಿತ ಈಗಲೂ ಇದ್ದರೂ ನಮ್ಮವರೆ ಎನ್ನುವ ಭ್ರಮೆಯಲ್ಲಿ  ಸಹಕರಿಸುವಾಗ  ಮುಂದೆ ಅದೇ ದೊಡ್ಡ ಸಮಸ್ಯೆಗೆ ದಾರಿಮಾಡುತ್ತದೆನ್ನುವ ಸತ್ಯದ ಅರಿವಿಲ್ಲದೆ
ಪ್ರಜಾಪ್ರಭುತ್ವದ ಪ್ರಜೆಗಳು  ಸ್ವತಂತ್ರ ಚಿಂತನೆ ಮಾಡದೆ ಪರತಂತ್ರದ ತಂತ್ರಜ್ಞಾನದಲ್ಲಿ ಮುಳುಗುತ್ತಾ ಒಳಗಿರುವ ತತ್ವ ಬಿಟ್ಟು ನಡೆದರೆ  ಪರಮಾತ್ಮ ಸಿಗೋದಿಲ್ಲ. ಪರಕೀಯರ ದಾಸರಾಗುವ ಮೊದಲು ಎಚ್ಚರವಾಗಲು ಸಾಧ್ಯವೆ?
ಯಾರೇ  ದೇಶದ  ಶಿಕ್ಷಣದಲ್ಲಿ  ಬದಲಾವಣೆ ಮಾಡಿದರೂ ದೇಶಕ್ಕೆ ಅಪಾಯ. ಭಾರತೀಯರ ತತ್ವಜ್ಞಾನಕ್ಕೆ ಬದಲಾಗಿ ತಂತ್ರಜ್ಞಾನ  ಬೆಳೆಸಿದರೆ ಸ್ವತಂತ್ರ ಜ್ಞಾನದ ಕೊರತೆ ಹೆಚ್ಚುವುದು.
ಅದಕ್ಕೆ ನಮ್ಮವರೆ ನಮಗೆ ಶತ್ರುಗಳಾಗಿ ನಿಂತು ಪರಕೀಯರ ವಶದಲ್ಲಿದ್ದರೂ ಸ್ವತಂತ್ರವೆನ್ನುವ ಭ್ರಮೆ ಹೆಚ್ಚಾಗಿದೆ. ಯಾರೂ ಶಾಶ್ವತವಲ್ಲ.ಯಾವುದೂ ಸ್ಥಿರವಲ್ಲ.ಆತ್ಮ ಹಾಗು ಸತ್ಯ ಮಾತ್ರ
ಯಾವತ್ತೂ ಒಂದೇ ಸ್ಥಿರವಾಗಿರುತ್ತದೆ. ಇದನ್ನರಿತರೆ ಉತ್ತಮ.

No comments:

Post a Comment