ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, January 1, 2023

ದಾರಿ ಯಾವುದಯ್ಯಾ ವೈಕುಂಠಕ್ಕೆ?

ಇತರ ದೇವತೆಗಳನ್ನು ಪೂಜಿಸಿದರೂ ನನಗೆ ಸೇರುತ್ತದೆ.ನನ್ನನ್ನು ಪೂಜಿಸಿದರೂ ನನ್ನನ್ನೇ ಕೊನೆಗೆ ಸೇರುವೆ.ಶ್ರೀ ಕೃಷ್ಣ ಸಂದೇಶ.
ಯೋಗದ ಮೂಲಕ ಮುಕ್ತಿ ಮಾರ್ಗ ತಿಳಿಸಿದ ಶ್ರೀ ಕೃಷ್ಣ ವೈಕುಂಠಕ್ಕೆ ದಾರಿ ತಿಳಿಸಿರುವುದನ್ನು ಭಗವದ್ಗೀತೆ ಯಲ್ಲಿ ತಿಳಿಯಬಹುದು. ಭಗವಂತನಿಗೆ  ಭೇಧಭಾವವಿಲ್ಲ ಎಲ್ಲಾ ದೇವಾಸುರರನ್ನೂ ತನ್ನೊಳಗಿಟ್ಡುಕೊಂಡಿರುವ ಮಹಾಶಕ್ತಿ ವಿಶ್ವದರ್ಶನದಿಂದ ಸತ್ಯದರ್ಶನ ಮಾಡಿಸಿ ಅರ್ಜುನನ ವಿಷಾಧವನ್ನು ದೂರಮಾಡಿದ ದಿನ ವೈಕುಂಠ ಏಕಾದಶಿ.
ಈ ದಿನದಲ್ಲಿ ಶ್ರೀ ಮನ್ನಾರಾಯಣನ ಸ್ಮರಣೆ ಮಾಡಿದರೂ ಹೆಚ್ಚು  ಪುಣ್ಯಲಭಿಸಿ ಮುಕ್ತಿಯೆಡೆಗೆ  ಸಾಗಬಹುದೆನ್ನುವರು. ಸಾಕಷ್ಟು ಮಂದಿರಗಳಲ್ಲಿ ವೈಕುಂಠ ದ್ವಾರ ನಿರ್ಮಿಸಿ ಭಕ್ತರಿಗೆ ಅವಕಾಶ ಕಲ್ಪಿಸಿಕೊಟ್ಟು  ಬಹಳ ವೈಭವದಿಂದ ಏಕಾದಶಿ ಆಚರಣೆ ಮಾಡೋದನ್ನು ನಗರಪ್ರದೇಶದಲ್ಲಿ ಕಾಣುತ್ತೇವೆ.
ಜನರು ಸಾಲುಗಟ್ಟಿ ತಾಸುಗಟ್ಟಲೆ ಕಾದು ಕೊನೆಗೆ ವೈಕುಂಠ ದ್ವಾರದಲ್ಲಿ  ವಿಷ್ಣುದರ್ಶ ನ ಮಾಡಿಕೊಂಡು ಹೊರಬರುತ್ತಾರೆ.
ಇಲ್ಲಿ ಭಗವಂತನಿಗೆ ಭಕ್ತರ ಕೊರತೆಯಿಲ್ಲ. ಆದರೆ ಭಕ್ತರಲ್ಲಿ ಭಕ್ತಿಯ ಕೊರತೆಯಿರುವುದರಿಂದ ಎಷ್ಟೇ ಆಚರಣೆ
ಮಾಡಿದರೂ  ದೈವಶಕ್ತಿಯ ಕಡೆಗೆ ನಡೆಯಲಾಗದೆ ಹೊರಗಿನ ವ್ಯವಹಾರದ ರಾಜಕೀಯದಲ್ಲಿ ಮನಸ್ಸು ಮುಳುಗಿ ಮಾಡಿದ ಪುಣ್ಯವನ್ನು ಯಾರಿಗೂ ಕೊಟ್ಟು ಕೈಮುಗಿದರೆ ಕಷ್ಟ ನಷ್ಟ  ಹೆಚ್ಚಾಗುತ್ತದೆ.  ಆದರೂ  ಮಾನವನ ಮನಸ್ಸು ಅಷ್ಟು ಸಮಯ ಭಗವಂತನಲ್ಲಿರುವುದು  ಇದರ ಮಹತ್ವ. ಇದು ಸರಳವಾಗಿದ್ದರೆ ಉತ್ತಮವೆನ್ನಬಹುದು.
ಆಡಂಬರಕ್ಕೆ ಸುರಿಯುವ ಹಣಕ್ಕೆ ಬದಲಾಗಿ ಸರಳವಾಗಿರುವ ಸದ್ವಿಚಾರವನ್ನು ಜನಸಾಮಾನ್ಯರಿಗೆ ತಿಳಿಸುತ್ತಾ ತಾವೂ ಜೊತೆಗೆ ನಡೆಯುತ್ತಾ ಆತ್ಮಜ್ಞಾನದ ಶಿಕ್ಷಣ  ಕೊಟ್ಟಿದ್ದರೆ ಮನುಕುಲಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. 
ಮನೆಯೊಳಗೆ ಕುಳಿತು ಮಾಡುವ ದ್ಯಾನಕ್ಕೂ ಹೊರಗೆ ಹೋಗಿ ಕಾದು ಕಾದು ಸುಸ್ತಾಗಿ ಆಯ್ತಪ್ಪ ದರ್ಶನ ಎನ್ನುವ ಪ್ರದರ್ಶನಕ್ಕೂ ವ್ಯತ್ಯಾಸವಿದ್ದರೂ ಕೆಲವರಿಗೆ ಹೊರಗೆ ಕಾಣುವ ಮೂರ್ತಿಯೇ ಸಂತೋಷ ಕಾಣುತ್ತದೆ. ಕೆಲವರಿಗಷ್ಟೆ ಭಗವಂತನು ಎಲ್ಲರಲ್ಲಿಯೂ ಇದ್ದು ನಡೆಸುವ ಅದ್ವೈತ ದರ್ಶನ  ಆಗುತ್ತದೆ. ಹೀಗಾಗಿ ಜನಮರುಳೋ ಜಾತ್ರೆಯೋ ಎಂದಂತೆ ಜನರಿರುವಲ್ಲಿ ಜಾತ್ರೆ ಹೆಚ್ಚು.ಜಾತ್ರೆಯಲ್ಲಿ ವ್ಯವಹಾರದ ಹುಚ್ಚು.ವ್ಯವಹಾರಕ್ಕೆ ಹಣದ ಖರ್ಚು, ಹಣದಿಂದ  ಭಗವಂತನ ಕಾಣಲಾಗದೆನ್ನುವವರು ಹೆಚ್ಚಾಗಬೇಕು. ಹಣವನ್ನು ದಾನ,ಧರ್ಮ ಮಾಡಿ ಖರ್ಚು ಮಾಡಿದರೂ ಅದರ ಮೂಲ  ಧರ್ಮ ವಾಗಿದ್ದರೆ ಪುಣ್ಯ ಹೆಚ್ಚು. ಅಧರ್ಮ, ಅನ್ಯಾಯ, ಭ್ರಷ್ಟಾಚಾರದ ಹಣವಾಗಿದ್ದರೆ ಇನ್ನಷ್ಟು ಪಾಪ ಸುತ್ತಿಕೊಳ್ಳುವುದು ಹೆಚ್ಚು.  ಭಗವಂತನ ಯೋಗದಿಂದ ಕಾಣಲು ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮ ಯೋಗ ಬೇಕು. ನಮ್ಮ ಮಹಾತ್ಮರುಗಳು ಯೋಗಮಾರ್ಗದಿಂದ ಮುಕ್ತಿ ಮೋಕ್ಷ ಪಡೆದರೆಂದರೆ ಅಲ್ಲಿ ರಾಜಕೀಯವಿರಲಿಲ್ಲ.ಹಣ,ಅಧಿಕಾರ,ಸ್ಥಾನಮಾನಕ್ಕೆ ಬೆಲೆ ಕೊಡಲಿಲ್ಲ. ಹಾಗಾದರೆ ನಾವೀಗ  ಭಗವಂತನ ಕಾಣುತ್ತಿರುವ
ರೀತಿ ಸರಿಯಿಲ್ಲವೆ? ನಮ್ಮಲ್ಲಿ ಯೋಗವಿಲ್ಲವೆ? ಜ್ಞಾನವಿಲ್ಲವೆ? ಭಕ್ತಿಯಿಲ್ಲವೆ? ಕರ್ಮ ಮಾಡುತ್ತಿಲ್ಲವೆ? ಆದರೂ ಯಾಕಿಷ್ಟು ಅಧರ್ಮ? 
ಕಾರಣವಿಷ್ಟೆ   ನಮ್ಮನ್ನು ನಾವು ಆಳಿಕೊಳ್ಳುವ ಸತ್ಯಜ್ಞಾನವಿಲ್ಲ. ನಮ್ಮ‌ಮೂಲದ ಧರ್ಮ ಕರ್ಮಕ್ಕೆ ನಾವೇ ಬೆಲೆ ಕಟ್ಟಿಲ್ಲ. ನಮ್ಮವರನ್ನೇ ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಶಿಕ್ಷಣವೇ ಪರಕೀಯರ ವಶವಾಗಿ ನಮ್ಮ ಜ್ಞಾನದ ಶಕ್ತಿ ನಮಗೆ ತಿಳಿಯಲಿಲ್ಲ.ಹೊರಗಿನ ಆಚಾರ,ವಿಚಾರ,ಪ್ರಚಾರಗಳಲ್ಲಿ ಸಾಕಷ್ಟು ರಾಜಕೀಯ ವ್ಯವಹಾರವಿದ್ದರೂ ಪ್ರಶ್ನೆ ಮಾಡುವ  ಜ್ಞಾನ ನಮಗಿಲ್ಲ.
ದೇವನೊಬ್ಬನೆ ನಾಮ ಹಲವು .ನಾಮ ಹಲವುಗಳನ್ನುಒಂದು ಮಾಡಲಾಗದ ರಾಜಕೀಯ ನಮ್ಮೊಳಗೇ ಇದ್ದರೆ ರಾಜಯೋಗದ ಅರ್ಥ ತಿಳಿಸಿದರೂ ವ್ಯರ್ಥ. ಹೀಗಾಗಿ ಒಳಗೆ ಇದ್ದ ಒಂದೇ ಶಕ್ತಿ ಆತ್ಮಶಕ್ತಿ ಕ್ಷೀಣಿಸಿ ಹೊರಗಿನ ಭೌತಿಕ ಶಕ್ತಿ ಬೆಳೆದಿದೆ. ಭೌತಿಕದೆಡೆಗೆ  ಹೊರಟ ಮನಸ್ಸಿಗೆ ಅಧ್ಯಾತ್ಮ ಸತ್ಯ ಅರ್ಥ ವಾಗದು. ಒಟ್ಟಿನಲ್ಲಿ ಜೀವನ ಎಲ್ಲರಿಗೂ ಬೇಕಿದೆ. ಜೀವ ಎಲ್ಲರಲ್ಲಿಯೂ ಅಡಗಿದೆ.ಜೀವಾತ್ಮನ ಪರಿಚಯ ಎಲ್ಲರೂ ಮಾಡಿಕೊಳ್ಳಲು ಸಾಧ್ಯವಾಗದಿರೋದೆ ಅಧರ್ಮ ಕ್ಕೆ
ಅಸುರಿ ಶಕ್ತಿಗೆ ವರದಾನವಾಗಿದೆ. 
ಭಗವದ್ಗೀತೆ ಯನ್ನು ಸಾಮಾನ್ಯಜ್ಞಾನದಿಂದ ಅರ್ಥ ಮಾಡಿಕೊಳ್ಳಲು ನಾವು ಸಾಮಾನ್ಯರೊಡನಿದ್ದು ರಾಜಕೀಯ ಬಿಟ್ಟು  ಸಾಮಾನ್ಯಮಾನವರಾಗಿ ಶರಣ,ದಾಸರ ತತ್ವವನ್ನು ಅಳವಡಿಸಿಕೊಂಡರೆ ಗೀತೆಯ ಉದ್ದೇಶ ಅರ್ಥ ಆಗುತ್ತದೆ.
ಶರಣರ ತತ್ವ,ದಾಸರ ತತ್ವ  ಯೋಗದೆಡೆಗೆ  ಇತ್ತು.ಭೋಗದ ರಾಜಕೀಯದೆಡೆಗೆ ನಡೆದಿರಲಿಲ್ಲವೆನ್ನುವ ಸತ್ಯ  ಗಮನಿಸಿದರೆ
ಭೂಮಿಗೆ ಬಂದಿರುವ ಜೀವಾತ್ಮನ ಋಣ ತೀರಿಸಲು ಪರಮಾತ್ಮನ ಸತ್ಯದ ಕಡೆಗೆ ಆತ್ಮಜ್ಞಾನದೆಡೆಗೆ  ಸಾಗಿಸುವುದೆ ಯೋಗವೆನ್ನುವ ಅರ್ಥ ಬರುತ್ತದೆ. ಇಲ್ಲಿ ರಾಜಪ್ರಭುತ್ವ ವಿಲ್ಲ. ಆತ್ಮಜ್ಞಾನ ರಾಜಕೀಯದಲ್ಲಿಲ್ಲ. ಒಳಗಿರುವ  ಜೀವನಿಗೆ ಸತ್ಯದ ಅರಿವಿಲ್ಲದೆ ಮಿಥ್ಯದೆಡೆಗೆ ಹೋಗುತ್ತಾ ಇನ್ನಷ್ಟು ಸಾಲದ ಸುಳಿಗೆ ಸಿಲುಕಿದರೆ  ಬಿಡುಗಡೆ ಅಥವಾ ಮುಕ್ತಿ ಸಿಗದು. ಅದಕ್ಕಾಗಿ ದಾಸರು ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮ ಒಂದಿದ್ದರೆ ಸಾಕೋ ಎಂದು ನಾಮ ಸ್ಮರಣೆ ಯಿಂದಲೇ ಪರಮಾತ್ಮನೆಡೆಗೆ ಸಾಗಿದರು. ಕಲಿಯುಗದ ಅಲ್ಪ ಆಯಸ್ಸಿನಲ್ಲಿ  ಋಣ ತೀರಿಸಲು ಕರ್ಮಫಲ ಪರಮಾತ್ಮನಿಗೆ ಬಿಟ್ಟು ಸತ್ಯಧರ್ಮದ ಹಾದಿ ಹಿಡಿಯಲು ಕಾಯಕವೇ ಕೈಲಾಸ ಎಂದರು ಶರಣರು. ಭಗವದ್ಗೀತೆಯು  ಪ್ರತಿಯೊಬ್ಬರಿಗೂ ಒಂದೊಂದು  ಅನುಭವದ ಸಂದೇಶ ನೀಡಿದೆ,ಅನುಭವಿಸದೆ ಬೇರೆಯವರ ಅನುಭವ ತಿಳಿದರೆ  ಅರ್ಥ ವಾಗದು.ಹೀಗೇ ಅನೇಕ ಪುರಾಣ,ಕಥೆಗಳೂ ಅಂದಿನ‌ಕಾಲಮಾನಕ್ಕಾದ ಅನುಭವದ ಸಾರ ಎತ್ತಿ ಹಿಡಿದಿದೆ. ರಾಜರ ಕಾಲದ ಧರ್ಮ ಶಿಕ್ಷಣವಿಲ್ಲ,ರಾಜಪ್ರಭುತ್ವ ವಿಲ್ಲ ಆದರೆ ಅದೇ ಸತ್ಯವೆನ್ನುವ ಮಧ್ಯವರ್ತಿಗಳ ಪ್ರಚಾರವಿದೆ.ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯಜ್ಞಾನದ ಕೊರತೆಯಿದೆ. ಹೀಗಾಗಿ ಇದನ್ನು  ದುರ್ಭಳಕೆ ಮಾಡಿಕೊಂಡು ಆಳಲು ಹೊರಟವರ ವಿರುದ್ದ ನಿಲ್ಲುವ‌ಬದಲಾಗಿ ನಮ್ಮಲ್ಲಿ ಒಗ್ಗಟ್ಟು ಬೆಳೆಯಬೇಕು. ಸತ್ಯ ತಿಳಿದು ನಡೆಯಬೇಕು.ಆತ್ಮಸಾಕ್ಷಿಯೇ ದೇವರಾದರೆ ಇದನ್ನು ಯಾರೂ  ಕದಿಯಲಾಗದು.  
ನಾನೇ  ಸರಿ ಎನ್ನುವ ಅಹಂಕಾರವಿದ್ದವರಿಂದ ಎಷ್ಟು ಗೀತೆ
ಪ್ರಚಾರವಾದರೂ ಅನುಭವಕ್ಕೆ ಸಿಗದ ವಿಚಾರವು ಕೇಳುಗರಿಗೆ ತಲುಪಿಸಲಾಗದು.ಸ್ಥಿತಪ್ರಜ್ಞಾವಂತರಿಂದ ಸಾಧ್ಯ.ಆದರೆ ವಿಪರ್ಯಾಸವೆಂದರೆ ಇದ್ದದ್ದು ಇದ್ದ ಹಾಗೇ ಹೇಳಿದರೆ ಎದ್ದು ಹೊಡೆಯೋರೆ ಹೆಚ್ಚಾಗಿರುವಾಗ ಯಾರು ಸತ್ಯ ತಿಳಿಸಲು ಮುಂದೆ ಬರುವರು? ಒಟ್ಟಿನಲ್ಲಿ ತತ್ವ ಬಿಟ್ಟು ತಂತ್ರದಿಂದ  ಭಗವಂತನ ವರ್ಣನೆ ಮಾಡಬಹುದು. ಭಗವಂತನ ನಿಜಸ್ವರೂಪಕ್ಕೆ ತತ್ವವನ್ನು ಅಳವಡಿಸಿಕೊಂಡು
ಅನುಭವಿಸಿಯೇ ಕಾಣಬೇಕು. ಇದಕ್ಕೆ ಹಣ ಬೇಡ ಜ್ಞಾನ ಬೇಕು. ಯೋಗಿಯಾಗು ಎಂದರೆ ಪರಮಾತ್ಮನ ಅರ್ಥ ಮಾಡಿಕೊಂಡು  ಜೀವನ ನಡೆಸೋದು.ಪರದೇಶದ ಹಿಂದೆ ನಡೆಯೋದಲ್ಲ,ಪರಕೀಯರನ್ನು ದ್ವೇಷ ಮಾಡೋದೂ ಅಲ್ಲ.
ದ್ವೇಷ ದೇಶವನ್ನು ವಿದೇಶ ಮಾಡಿದರೆ ಕಷ್ಟ ನಷ್ಟ ಯಾರಿಗೆ? ಅವರವರ ಒಳಗಿನ ಜ್ಞಾನವೇ ಭಗವಂತನೆಡೆಗೆ ನಡೆಸುವಾಗ
ನಮ್ಮ ಜ್ಞಾನವನ್ನು ನಾವೇ ತಿಳಿಯದೆ ಹೊರಗಿನವರ ಜ್ಞಾನ ಪಡೆದು ಆಳಿದರೆ ಅಧರ್ಮ. ಇದು ಧಾರ್ಮಿಕ ವರ್ಗದವರು ಅರ್ಥ ಮಾಡಿಕೊಂಡು ಜನಸಾಮಾನ್ಯರ ಸಾಮಾನ್ಯಜ್ಞಾನಕ್ಕೆ ಅರ್ಥ ವಾಗುವ ತತ್ವ ,ನೈತಿಕ,ಮಾನವೀಯತೆಯ ಶಿಕ್ಷಣ ನೀಡಿದರೆ ಮನೆಮನೆಯೊಳಗಿದ್ದೇ ಭಗವಂತನ ಕಾಣುವ‌ಜ್ಞಾನ ಪಡೆಯಬಹುದು. ನಾನೇ ದೇವರೆ? ನನ್ನಲ್ಲಿ ದೈವತ್ವ ಇದೆಯೆ?
ನಾವೇ ಗುರುತಿಸಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲವೆ? ಸರ್ಕಾರ ಭಗವಂತನೆಡೆಗೆ ನಡೆಸುವುದೆ? 
ಎಲ್ಲಿರುವರು ಮಹಾತ್ಮರು? ಎಲ್ಲಿರುವುದು ನಮ್ಮ ಜೀವ? ನಮ್ಮ ಮನಸ್ಸು ಇರೋದೆಲ್ಲಿ? ಮನಸ್ಸು ಮತ್ತು ಆತ್ಮ ಸೇರಿದರೆ ಯೋಗ. ಯೋಗಿಗಳ ದೇಶವೀಗ ರೋಗಿಗಳ ದೇಶ ಆಗಲು ಹೊರಗಿನ ರಾಜಕೀಯ ಕಾರಣ.ಇದಕ್ಕೆ ನಮ್ಮದೆ ಸಹಕಾರವಿದ್ದು ಮನಸ್ಸು ಹೊರ ನಡೆದರೆ ನಮ್ಮದೆ ತಪ್ಪು. ತಪ್ಪಿಗೆ ತಕ್ಕಂತೆ ಶಿಕ್ಷೆ. ಇದೇ ಇಂದಿನ ಸ್ಥಿತಿಗೆ ಕಾರಣವೆಂದರೆ ಇದಕ್ಕೆ  ಪುರಾವೆ,ಪ್ರಮಾಣ, ಇನ್ನಷ್ಟು ಪ್ರಶ್ನೆಗಳು ಮಧ್ಯವರ್ತಿಗಳು ಸೃಷ್ಟಿ ಮಾಡಿ ಸತ್ಯವನ್ನು ತಿರುಚುವ ಕೆಲಸ ಮಾಡಿದರೂ ಸತ್ಯ ಅನುಭವಕ್ಕೆ ಬರದೆ ಏನೂ ಮಾಡಲಾಗದು. ಯುದ್ದದಿಂದ ಸಾಕಷ್ಟು ಕಷ್ಟ ನಷ್ಟ.ಅದೇ ಶಾಂತಿಯಿಂದ  ಸತ್ಯ ತಿಳಿದರೆ ಒಳಗೇ ನಡೆಯುತ್ತಿರುವ ಕಲಹಕ್ಕೆ ತಡೆಹಾಕುವ ಯೋಗಕೂಡಿಬರುತ್ತದೆ.ಒಟ್ಟಿನಲ್ಲಿ ಹೊರಗೆ ನಡೆಸೋ ಆಚರಣೆಯು ಸಾತ್ವಿಕವಾಗಿದ್ದರೆ ಉತ್ತಮ.
ಅನೇಕ ಕಡೆ ಶುದ್ದವಾಗಿದೆ. ಹಲವು ಕಡೆ ಅಶುದ್ದತೆ ಹೆಚ್ಚಾಗಿದೆ. ಇದರಿಂದಾಗಿ  ಸಮಸ್ಯೆಗೆ  ಪರಿಹಾರ ಸಿಗೋದಾದರೆ ಸರಿ.ಒಳಗಿನ ಸಮಸ್ಯೆಗೆ ಒಳಗೆ ಶುದ್ದವಾಗಬೇಕು.

No comments:

Post a Comment