ಸ್ತ್ರೀ ವಾದ
ಸ್ತ್ರೀ ವಾದ ವಿಭಿನ್ನ ದೃಷ್ಟಿಕೋನ.
'ಒಲಿದರೆ ನಾರಿಮುನಿದರೆ ಮಾರಿ' ಸ್ತ್ರೀ ಶಕ್ತಿಯ ಸಹಕಾರವಿಲ್ಲದೆ ಭೂಮಿ ನಡೆದಿಲ್ಲ ನಡೆಯುತ್ತಿಲ್ಲ ನಡೆಯೋದಿಲ್ಲ. ಸಹನಾ ಮೂರ್ತಿ ಯಾಗಿದ್ದ ಸ್ತ್ರೀ ಇಂದು ಅಸಹನೆಯಿಂದ ಬಳಲುತ್ತಿರುವುದಕ್ಕೆ ಕಾರಣ ಅನಾರೋಗ್ಯಕರವಾದ ವಿಷಯಗಳಾಗಿವೆ.
ಸ್ತ್ರೀ ಯನ್ನು ಮಹಾಶಕ್ತಿ ಎನ್ನುವ ಹಿಂದೂ ಧರ್ಮದ ಅಳಿವು ಉಳಿಯುವಿಕೆಯು ಸ್ತ್ರೀ ಶಕ್ತಿಯ ಮೇಲಿದೆ. ಪುರಾಣ ಇತಿಹಾಸದ ಕಾಲದಿಂದಲೂ ಸ್ತ್ರೀ ಯನ್ನು ಮುಂದಿಟ್ಟುಕೊಂಡು ರಾಜಕೀಯ ಬೆಳೆದಿದೆ.ಮನುಕುಲ ಇರುವ ಭೂ ತಾಯಿಯ ಋಣ ತೀರಿಸಲಾಗದು. ಇದಕ್ಕಾಗಿ ಸತ್ಯ ಧರ್ಮ, ನ್ಯಾಯ ನೀತಿ ,ಸಂಸ್ಕೃತಿ, ಸಂಪ್ರದಾಯದಂತಹ ಅನೇಕ ಆಚರಣೆಗಳಲ್ಲಿ ಸ್ತ್ರೀ ಪಾತ್ರ ದೊಡ್ಡದು.
ಎಲ್ಲಿ ಸ್ತ್ರೀ ಗೆ ಗೌರವಾದರಗಳಿರುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆನ್ನುವ ಮುಖ್ಯ ಕಾರಣ ಸ್ತ್ರೀ ತನ್ನ ಜ್ಞಾನದಿಂದ ಇಡೀ ಬ್ರಹ್ಮಾಂಡವನ್ನಾವರಿಸಿದ್ದರೂ ಭೂಮಿಯ ಮೇಲಿರುವ ಲಿಂಗಬೇಧದಿಂದಾಗಿ ಸಾಕಷ್ಟು ಯುದ್ದಗಳು,ಅಧರ್ಮ
,ಅನ್ಯಾಯ,ಅಸತ್ಯವು ಬೆಳೆಯಲು ಸ್ತ್ರೀ ಸಹಕಾರವೂ ಕಾರಣವೆನ್ನುತ್ತಾರೆ. ಜ್ಞಾನ ದೇವತೆಯನ್ನು ಶ್ರದ್ದಾಭಕ್ತಿಯಿಂದ ಆರಾಧಿಸುವ ಮನುಕುಲಕ್ಕೆ ತನ್ನ ಹತ್ತಿರವಿರುವ ಸ್ತ್ರೀ ಗೆ ಸರಿಯಾದ ಗೌರವ ಕೊಡುವ ಸಾಮಾನ್ಯಜ್ಞಾನ ಇಲ್ಲವಾಗಿರೋದೆ ಇದಕ್ಕೆ ಕಾರಣವೆಂದರೆ ಸ್ವಯಂ ಸ್ತ್ರೀ ವಿರೋಧಿಸುವ ಕಾಲದಲ್ಲಿ ನಾವಿದ್ದೇವೆ.
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಸೆ ಸ್ತ್ರೀ ಪುರುಷರಿಗೆ ಇರುತ್ತದೆ. ಯಾವಾಗ ಈ ಆಸೆಗೆ ತಡೆಗೋಡೆಗಳು ಹೆಚ್ಚುವುದೋ ಆಗಲೇ ಗೋಡೆ ಒಡೆದು ಹೊರಗೆ ಬರುವುದು. ಆಸೆಯೇ ದು:ಖಕ್ಕೆ ಕಾರಣವಲ್ಲ.
ಅತಿಆಸೆಯೇ ದು:ಖಕ್ಕೆ ಕಾರಣ. ಆಸೆಯಲ್ಲಿ ಅಧ್ಯಾತ್ಮ ಹಾಗು ಭೌತಿಕ ವಿಷಯವಿದೆ.ಅದರಲ್ಲೂ ಸತ್ವ,ರಾಜಸ್ಸು,ತಾಮಸಿಕ ಆಸೆಗಳು ಮನುಕುಲದ ಭವಿಷ್ಯವನ್ನು ನಿರ್ಧರಿಸುತ್ತದೆ.
ಸಾತ್ವಿಕ. ಸತ್ವಯುತ,ಸತ್ಯದ ಮಾರ್ಗದಲ್ಲಿ ನಡೆಯೋ ಆಸೆ ಬೆರಳೆಣಿಕೆಯಷ್ಟು ಜನರಲ್ಲಿದ್ದರೆ ರಾಜಸಿಕ ಆಸೆಯು ಬಹಳ ಜನರಲ್ಲಿರುತ್ತದೆ ಅತಿಯಾದ ರಾಜಕೀಯವೇ ಕೆಳಮಟ್ಟದ ತಾಮಸ ಜನರನ್ನು ಬೆಳೆಸುತ್ತದೆ. ಹಾಗಾಗಿ ಭೂಮಿಯ ರಕ್ಷಣೆಗಾಗಿ ಸ್ತ್ರೀ ಸಾತ್ವಿಕ ಆಸೆಯನ್ನು ಬೆಳೆಸಿಕೊಳ್ಳಲು ಜ್ಞಾನದ ಶಿಕ್ಷಣದ ಅಗತ್ಯವಿದೆ.
ಸಾತ್ವಿಕ ಗುಣ ಬರಿಗಣ್ಣಿಗೆ ಕಾಣದು, ರಾಜಸಿಕ ಗುಣ ಕಂಡರೂ ಹೇಳಲಾಗದು,ತಾಮಸಿಕ ಗುಣದಿಂದ ರೋಗವೇ ಹೆಚ್ಚುವುದು.ಅಧ್ಯಾತ್ಮ ಎಂದರೆ ತನ್ನ ತಾನರಿಯುವ ಆಂತರಿಕ ಜ್ಞಾನವಾದರೆ ಪರರನ್ನು ಆಳುವ ರಾಜಕೀಯದ ಆಸೆ ತೊಲಗಿ ತಾಮಸ ಗುಣ ಕುಸಿಯುತ್ತದೆ.
ಸ್ತ್ರೀ ಸ್ವಾತಂತ್ರ್ಯ ವು ಅಧ್ಯಾತ್ಮ ಕ್ಷೇತ್ರದಲ್ಲಿ ಕುಸಿದ ಪರಿಣಾಮದಿಂದಾಗಿ ಇಂದು ಭೌತಿಕ ವಿಜ್ಞಾನ ಮಿತಿಮೀರಿ ಬೆಳೆದಿದೆ. ಸ್ತ್ರೀ ಭೌತಿಕದಲ್ಲಿ ಪುರುಷನನ್ನೂ ಮೀರಿ ಬೆಳೆದರೆ ಹಿಡಿಯಲಾಗದು. ಭೂಮಿ ಆಕಾಶದ ಒಂದು ಭಾಗವಾದಾಗ ಆಕಾಶವನ್ನೂ ಮೀರಲು ಕಷ್ಟ ವೆನ್ನುವ ಸತ್ಯ ತಿಳಿದರೆ ಭೂಮಿಯನ್ನು ಸದ್ಬಳಕೆ ಮಾಡಿಕೊಂಡು ಮನುಕುಲ ಸುಖವಾಗಿರಲು ಸಾಧ್ಯ.
ಎಷ್ಟೇ ಎತ್ತರ ಏರಿದರೂ ಜೀವ ಹುಟ್ಡಿ ಸಾಯೋದು ಭೂಮಿಮೇಲೆ.ಇದು ಪುರಾಣ,ಇತಿಹಾಸ,ವೇದಗಳ ಕಾಲದಿಂದಲೂ ನಡೆದು ಬಂದಿರುವ ಸತ್ಯ.ಅಂದಿನ ಮಹಾತ್ಮರ ಜ್ಞಾನಕ್ಕೂ ಇಂದಿನ ವೈಜ್ಞಾನಿಕ ಜ್ಞಾನಕ್ಕೂ ಅಂತರ ಹೆಚ್ಚಾಗುತ್ತಾ ಮಧ್ಯವರ್ತಿತನ್ನ ಅಹಂಕಾರ ಸ್ವಾರ್ಥ ಕ್ಕೆ ಭೂಮಿಯನ್ನು, ಸ್ತ್ರೀ ಯನ್ನು, ಪ್ರಕೃತಿಯನ್ನು ದುರ್ಭಳಕೆ ಮಾಡಿಕೊಂಡರೆ ಅಸುರರ ಶಕ್ತಿ ಹೆಚ್ಚುತ್ತಾ ತಿರುಗಿ ಸ್ತ್ರೀ ಗೆ ಹೆಚ್ಚು ಸಮಸ್ಯೆ . ಇಲ್ಲಿ ದೇವಾಸುರರ ಶಕ್ತಿ ಮಾನವನ ಗುಣಜ್ಞಾನದಲ್ಲಿದೆ. ಇದನ್ನರಿತರೆ ನಮ್ಮಲ್ಲಿರುವ ದೈವೀ ಶಕ್ತಿಯ ಕಡೆಗೆ ಆತ್ಮಜ್ಞಾನದ ಕಡೆಗೆ ನಡೆದವರು ಮಹಾತ್ಮರಾದರು. ಆದರೆ ಇದಕ್ಕೆ ಸ್ವತಂತ್ರಜ್ಞಾನದ ಅಗತ್ಯವಿದೆ .ಸ್ವತಂತ್ರ ಜೀವನದ ಅಗತ್ಯವಿದೆ. ಸಂನ್ಯಾಸಿಗಳಿಗೆ ಸಾಧ್ಯವಾದಂತೆ ಸಂಸಾರಿಗಳಿಗೆ ನಡೆಯೋದು ಕಷ್ಟ. ವಾಸ್ತವತೆಯಲ್ಲಿ ಮಹಿಳೆಯ ವೈಜ್ಞಾನಿಕ ಚಿಂತನೆಯಿಂದ ಭೌತಿಕದಲ್ಲಿ ಸಾಧನೆ ಮಾಡುತ್ತಾ ಅಧ್ಯಾತ್ಮ ಚಿಂತನೆಗಳ ವಿರುದ್ದ ಹೋರಾಟ ನಡೆಸಿ ಮನೆಯಿಂದ ಹೊರಗಿದ್ದು ಸ್ವತಂತ್ರ ಜೀವನ ನಡೆಸಬಹುದಾದರೂ, ಸಂಸಾರದೊಳಗಿದ್ದು ಜೀವನದ ಮುಖ್ಯ ಗುರಿ ತಲುಪಿದವರ ಆತ್ಮಜ್ಞಾನಕ್ಕೂ, ಸಂಸಾರದಿಂದ ದೂರವಿದ್ದು ಅಧ್ಯಾತ್ಮದ ವಿಚಾರ ಓದಿ,ಕೇಳಿ,ನೋಡಿ,ಹೇಳುವುದಕ್ಕೂ ವ್ಯತ್ಯಾಸವಿದೆ.
ಒಂದು ಅನುಭವದ ಸತ್ಯ, ಇನ್ನೊಂದು ಅನುಭವಿಸದೆ ತಿಳಿದ ಸತ್ಯ. ಪ್ರತಿಯೊಬ್ಬರಿಗೂ ಸತ್ಯ ತಿಳಿದರೂ ಅದರ ಅನುಭವ ಒಂದೆ ರೀತಿಯಲ್ಲಿರಲು ಕಷ್ಟ.ಆದರೂ ಅನುಭವಿಸಿದಾಗ ಒಪ್ಪಲೇ ಬೇಕು.
ಯಾವುದೇ ವಿಚಾರವಿರಲಿ ಅದು ರಾಜಯೋಗದೆಡೆಗೆ ನಡೆಸಿದರೆಮುಕ್ತಿ, ರಾಜಕೀಯಕ್ಕೆ ಬಳಸಿದರೆ ?
ಮನುಕುಲ ಭೂಮಿ ಮೇಲಿರುವುದನ್ನು ಯಾರೂ ಅಸತ್ಯವೆನ್ನಲಾಗದು. ಆದರೆ ಪ್ರತಿಕ್ಷಣವೂ ಈ ಸತ್ಯವನ್ನರಿತು ಭೂಮಿಯ ಮೇಲಿರೋರನ್ನು ಕಾಣಲಾಗದು. ಹಾಗೆ ತಾಯಿಯಿಂದ ಜನ್ಮಪಡೆದ ಮಗು ಸಣ್ಣದರಲ್ಲಿರುವಾಗ ಅಮ್ಮನಿಂದ ದೂರವಿರಲು ಬಯಸೋದಿಲ್ಲ.ದೊಡ್ಡವರಾದ ಮೇಲೆ ದೂರ ಇರಲು ಬಯಸಿದರೆ ಇದರಲ್ಲಿ ಸ್ವಾರ್ಥ ,ಅಹಂಕಾರವಿದೆ ಎನ್ನಲಾಗದು.ಪ್ರಕೃತಿಯ ಸಣ್ಣ ಜೀವದ ಭಾಗವಾದ ಮಾನವನಿಗೆ ಪ್ರಕೃತಿವಿರುದ್ದವೇ ನಡೆದಂತೆಲ್ಲಾ ಜೀವಶಕ್ತಿ ಕುಸಿಯುತ್ತದೆ.ಆತ್ಮಶಕ್ತಿ ಕುಗ್ಗುತ್ತದೆ. ಭೂಮಿ,ಪ್ರಕೃತಿ ಮಾತೆ,ವಿಶ್ವಮಾತೆ,ಭಾರತಮಾತೆ,ಕನ್ನಡಮ್ಮ,ಹೆತ್ತತಾಯಿ,ಇನ್ನಿತರ ಶಕ್ತಿದೇವತೆಗಳಲ್ಲಿ ಕೊನೆಯದಾಗಿರುವ ಸ್ತ್ರೀ, ತಾಯಿ,ಸಹೋದರಿ,ಸ್ನೇಹಿತೆಯರಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ,ಅಸೂಯೆ,ಜಗಳ,ಮನಸ್ತಾಪಗಳಿದ್ದರೆ ಸಂಸಾರದಲ್ಲಿ ಬಿಕ್ಕಟ್ಟು, ಸಮಾಜದಲ್ಲಿ ಬಿಕ್ಕಟ್ಟು, ದೇಶದಲ್ಲಿ ಒಡಕು ಹರಡುತ್ತಾ ತಿರುಗಿ ಅದರ ಫಲವನ್ನೂ ಸ್ತ್ರೀ ಅನುಭವಿಸಬೇಕೆನ್ನುವ ಕಾರಣಕ್ಕಾಗಿ ಹಿಂದೆ ಸನಾತನ ಧರ್ಮದಲ್ಲಿ ಸಾಕಷ್ಟು ದೇವತಾರಾಧನೆ, ಧಾರ್ಮಿಕ ಕಾರ್ಯಕ್ರಮ, ಶಾಸ್ತ್ರ, ಸಂಪ್ರದಾಯ ಉತ್ಸವಗಳ ಮೂಲಕ ಸ್ತ್ರೀ ಶಕ್ತಿಯರನ್ನು ಒಂದಾಗಿಸಿ ಆತ್ಮಶಕ್ತಿ ಹೆಚ್ಚಿಸಿಕೊಂಡು ಜೀವನದ ಮುಖ್ಯಗುರಿ ತಲುಪುವ ಮುಕ್ತಿ ಮಾರ್ಗವನ್ನು ಹಿಡಿದರು. ಆದರೆ ಯಾವಾಗ ಸ್ತ್ರೀ ಅಧರ್ಮಕ್ಕೆ, ಅನ್ಯಾಯ,ಅಸತ್ಯಕ್ಕೆ ಸಹಕರಿಸಿ ಪುರುಷಶಕ್ತಿಯನ್ನು ಬೆಳೆಸಿ ಸ್ತ್ರೀ ಶಕ್ತಿಯ ವಿರುದ್ದ ನಿಂತು ಸ್ವಾರ್ಥ ದ ಬಲೆಯಲ್ಲಿ ಅಜ್ಞಾನದಿಂದ ಸಿಕ್ಕಿದಳೋ ಆಗಲೇ ಭೂಮಿಯ ಸತ್ವ,ಸತ್ಯ ಕುಸಿದು ಅಸುರ ಶಕ್ತಿಗೆ ತಾನೇ ಬಲಿಯಾದರೂ ಇದೊಂದು ಕರ್ಮ ಫಲವೆಂದು ಹೇಳುವ ಮೂಲಕ ಎಲ್ಲದ್ದಕ್ಕೂ ಕಾರಣ ಸ್ತ್ರೀ ಎಂದೇ ಇಂದಿಗೂ ರಾಮಾಯಣ, ಮಹಾಭಾರತದ ಯುದ್ದಕ್ಕೆ ಸ್ತ್ರೀ ಕಾರಣವೆಂದರೆ ಸತ್ಯವೆ?
ಸ್ತ್ರೀ ತನ್ನ ಆತ್ಮಜ್ಞಾನದಿಂದ ಧರ್ಮ ರಕ್ಷಣೆ ಮಾಡುವಾಗ ಅಹಂಕಾರ ಸ್ವಾರ್ಥ ಬಿಟ್ಟು ನಡೆದಿರುತ್ತಾಳೆ. ಸ್ತ್ರೀ ಸಂನ್ಯಾಸಿಯಾದರೆ ಸಂಸಾರದ ಗತಿ ಏನು? ಎನ್ನುವ ಕಾರಣಕ್ಕಾಗಿ ಸ್ತ್ರೀ ಗೆ ಅಧ್ಯಾತ್ಮ ಸತ್ಯ ತಿಳಿಸದೆ ಒಂದು ಚೌಕಟ್ಟನ್ನು ಹಾಕಿ ಮನೆಯೊಳಗೆ ದಾಸಿಯನ್ನಾಗಿಸಿದ ಅಜ್ಞಾನದ ರಾಜಕೀಯಕ್ಕೆ ನಾರಿಯಾಗಿದ್ದ ಸ್ತ್ರೀ ಶಕ್ತಿ ಮಾರಿಯಾಗಿ ಸಿಡಿದೇಳಲು ಕಾರಣವಾಯಿತು. ರಾಜಯೋಗದ ಪ್ರಕಾರ ಸ್ತ್ರೀ ಪುರುಷರಲ್ಲಿರುವ ಆ ಒಂದೇ ಶಕ್ತಿಯನ್ನು ಇಬ್ಬರೂ ಸಮನಾಗಿ ಅರಿತರೆ ಸಂಸಾರದ ಜೊತೆಗೆ ಸಮಾಜ,ರಾಷ್ಟ್ರ,ವಿಶ್ವವೇ ಶಾಂತಿ ಕಾಣಬಹುದೆನ್ನುವರು.ಆದರೆ ಆ ಮಾರ್ಗದಲ್ಲಿ ನಡೆಯಲು ಒಳಗಿರುವ ಚಕ್ರ. ಶುದ್ದಿ ಅಗತ್ಯವಿದೆ. ಕೆಲವರು ಈ ದ್ಯಾನ ಮಾರ್ಗದಲ್ಲಿ ಸತ್ಯ ತಿಳಿದು ಸ್ವತಂತ್ರ ಜೀವನ ನಡೆಸಿದ್ದರೂ ಉಳಿದ ಸಾಮಾನ್ಯರಿಗೆ ಶಿಕ್ಷಣವಿಲ್ಲದೆ,ಸರಿಯಾದ ಗುರು,ಗುರಿಯಿಲ್ಲದೆ ಹೊರಗಿನ ರಾಜಕೀಯದ ಹಿಂದೆ ನಡೆದು ಭ್ರಷ್ಟಾಚಾರ ಬಲವಾಗಿದೆ. ನಮ್ಮ ಸಹಕಾರವೇ ಎಲ್ಲಾ ಸಮಸ್ಯೆಗೆ ಕಾರಣ ಹಾಗೆ ಪರಿಹಾರವೂ ನಮ್ಮ ಸಹಕಾರವಿದ್ದರೆ ಮಾತ್ರ ಸಾಧ್ಯ.ಉತ್ತಮ ಸದ್ವಿಚಾರಕ್ಕೆ ಸ್ತ್ರೀ ವಿರೋಧವಿದ್ದರೆ ಅವಳ ಆತ್ಮಶಕ್ತಿ ಭೌತಿಕದೆಡೆಗೆ ಹೆಚ್ಚಾಗುತ್ತಾ ಜೀವಹೋದಮೇಲೆ ಆತ್ಮಜ್ಞಾನ ಬೆಳೆಸಲಾಗುವುದೆ?
ಇದಕ್ಕೆ ಹಿಂದೆ ಅನೇಕ ಧರ್ಮ ಯುದ್ದಗಳಲ್ಲಿ ದೇವತೆಗಳು ,ದೇವಿಯರ ಸಹಾಯದಿಂದ ಅಸುರರ ಸಂಹಾರ ಮಾಡಿದ್ದರು. ಇಲ್ಲಿ ಹೊತ್ತು ,ಹೆತ್ತು,ಸಾಕಿ,ಸಲಹಿದ ಸ್ತ್ರೀ ಗೆ ಸಹನೆ,ಪ್ರೀತಿ,ಕರುಣೆ,ಮಮಕಾರ ಹೆಚ್ಚಾದಾಗ ಮಕ್ಕಳ ತಪ್ಪು ತಿದ್ದದೆ ಬೆಳೆಸುವುದರಿಂದ ಭೂಮಿಯನ್ನು ಅಧರ್ಮದಿಂದ ಆಳುವ ಅಸುರ ಕುಲ ಹೆಚ್ಚುವುದೆನ್ನುವ ಕಾರಣಕ್ಕಾಗಿ ಹಿಂದೂ ಧರ್ಮದ ಸ್ತ್ರೀ ಯರಿಗೆ ಸಂಸ್ಕಾರದ ಕಟ್ಟುಪಾಡುಗಳಿಂದ ಭೌತಿಕ ವಿಜ್ಞಾನದಿಂದ ದೂರವಿಟ್ಟು ಕೊನೆಗೆ ಅದೇ ಶೋಷಣೆಯ ಹಾದಿ ಹಿಡಿಯಿತು.
ಯಾವುದೇ ಇರಲಿ ಅತಿಯಾದರೆ ಗತಿಗೇಡು. ಇದಕ್ಕಾಗಿ ಇಂದಿನ ಅಧರ್ಮಕ್ಕೆ ಸಹಕರಿಸುವ ಸ್ತ್ರೀ ಯರಿಗೆ ಜ್ಞಾನದ ಶಿಕ್ಷಣದ ಕೊರತೆಯಿರುವಾಗ ಅದನ್ನು ನೀಡದೆ ಧಾರ್ಮಿಕ ವರ್ಗ ರಾಜಕೀಯ ನಡೆಸಿದರೆ ಭೂಮಿಯಲ್ಲಿ ಧರ್ಮ ದೇವತೆ ಇರುವಳೆ?
ಜ್ಞಾನದ ನಂತರವೇ ವಿಜ್ಞಾನ ಅಧ್ಯಾತ್ಮ ಚಿಂತನೆಯ ಮೂಲಕವೇ ಭೌತಿಕ ಚಿಂತನೆ ನಡೆಸಿದರೆ ಸಮಾನತೆಯ ಸಮಾಜನಿರ್ಮಾಣ ಸಾಧ್ಯ.
ಸ್ತ್ರೀ ಸಮಾನತೆಯ ಹೋರಾಟ ರಾಜಕೀಯ ರೂಪ ಪಡೆದರೂ ಸ್ವಯಂ ಸ್ತ್ರೀ ತನ್ನ ಅಧಿಕಾರವನ್ನು ಇನ್ನೊಂದು ಸ್ತ್ರೀ ಜೊತೆ ಹಂಚಿಕೊಳ್ಳಲು ಕಷ್ಟ.ಹೀಗಿರುವಾಗ ಪುರುಷರ ವಿರುದ್ದ ತಮ್ಮ ಆರೋಪಮಾಡಿ ತಾನೇ ಸರಿ ಎನ್ನುವ ಅಹಂಕಾರ, ಸ್ವಾರ್ಥ ಸ್ತ್ರೀ ಯರಲ್ಲಿ ಬಿಕ್ಕಟ್ಟು ತರಬಹುದು. ಇದು ನಮ್ಮಮನಸ್ಸು,ಮನೆ,ಕುಟುಂಬ, ಗ್ರಾಮ,ಜಿಲ್ಲೆ, ರಾಜ್ಯಮಟ್ಟದಲ್ಲಿ ನಮ್ಮ ಹೆಸರನ್ನು ಬೆಳೆಸಿದ್ದರೂ ಮಕ್ಕಳ ವಿಚಾರದಲ್ಲಿ ಸೋತರೆ ನಷ್ಟ ಯಾರಿಗೆ? ಅದಕ್ಕಾಗಿ ಮನೆಯೊಳಗಿದ್ದ ಗೃಹಿಣಿಯರಿಗೆ ಉತ್ತಮ ಸಂಸ್ಕಾರವಿದ್ದರೆ ಸಂಸಾರ ಮಾತ್ರವಲ್ಲ ಸಮಾಜವೂ ಉತ್ತಮ ಪ್ರಜೆಗಳನ್ನು ಕಾಣಬಹುದೆಂದರೆ.ಸ್ತ್ರೀ ಒಬ್ಬಳು ಕಲಿತರೆ ಇಡೀ ಸಂಸಾರವೇ ಕಲಿತಂತೆ ಎಂದರೆ ಸ್ತ್ರೀ ಯ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ದೊರೆತರೆ ಪ್ರತಿಯೊಬ್ಬಳೂ ಒಂದು ಶಕ್ತಿದೇವತೆಯೆ. ವಿಪರ್ಯಾಸವೆಂದರೆ ಭಾರತದಂತಹ ಮಹಾಪವಿತ್ರ ದೇಶದಲ್ಲಿ ಸ್ತ್ರೀ ಯರಿಗೆ ಧಾರ್ಮಿಕ ಶಿಕ್ಷಣದ ಕೊರತೆಯಿದೆ.ಭೌತಿಕದಲ್ಲಿ ಸಾಧನೆ ಮಾಡಿದ್ದರೂ ಧಾರ್ಮಿಕ ಸತ್ಯವನ್ನರಿಯದಿದ್ದರೆ ಮಧ್ಯವರ್ತಿ ಯಾಗಿ ಅತಂತ್ರ ಜೀವನ
ಇಲ್ಲಿ ಯಾರೂ ಪರಿಪೂರ್ಣರೂ ಇಲ್ಲ ಸರ್ವಜ್ಞ ರೂ ಅಲ್ಲ.ಆದರೂ ಎಲ್ಲರಿಗೂ ಎಲ್ಲರನ್ನೂ ಆಳುವ ರಾಜಕೀಯದ ಆಸೆ ಇದೆ.ಸಾತ್ವಿಕ ವಿಚಾರಗಳನ್ನು ಪ್ರಚಾರ ಮಾಡುವುದು ಪುಣ್ಯದ ಕೆಲಸ, ಎಲ್ಲಾ ದೇವರ ಪ್ರತಿನಿಧಿಗಳು. ಅದರಲ್ಲೂ ಶಕ್ತಿಯಿಲ್ಲದ ಮಾನವನಿಲ್ಲ.ಶಿವಶಕ್ತಿಯರ ಸಮಾನತೆಯೇ ಅಧ್ಯಾತ್ಮದ ಪ್ರಗತಿ.
ಯಾವಾಗ ಸ್ತ್ರೀ ಶಕ್ತಿ ಕುಸಿಯುವುದೋ ಪುರುಷ ಶಕ್ತಿ ಬೆಳೆಯುವುದೋ ಭೂಮಿ ನಡುಗುತ್ತದೆ. ನಡುಗುವಾಗ ಹೊತ್ತು ನಡೆಯೋ ಜೀವವನ್ನು ಉಳಿಸಲು ಅಸಾಧ್ಯ.ಹೀಗೇ ಈಗಲೂ ಪ್ರಕೃತಿವಿಕೋಪಗಳು,ಪ್ರವಾಹ,ಅಪಘಾತ,ಇನ್ನಿತರ ರೂಪ ಪಡೆದಿರೋದು ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡ ರಾಜಕೀಯದಿಂದ ಎಂದರೆ ನಂಬದಿದ್ದರೂ ಸರಿ. ಕೊರೊನ ಇದರ ಒಂದು ರೂಪ. ಯಾರಾದರೂ ಗಾಳಿಯನ್ನು ತಡೆಯಬಹುದೆ? ಗಾಳಿಸುದ್ದಿಯನ್ನು ತಡೆಯಬಹುದು.ಆದರೆ ಇದು ಮಾಧ್ಯಮಗಳು, ಮಧ್ಯವರ್ತಿಗಳು ಪ್ರಚಾರಮಾಡಿ ಮನೆಯೊಳಗಿರುವವರಿಗೂ ತಲುಪಿಸಿ ರೋಗವನ್ನು ಹರಡುವುದರ ಮೂಲಕ ಸಾಧಕರಾದವರಿಗೆ ನಮ್ಮ ಸಹಕಾರವಿದೆ. ಆದರೆ ಇದು ಬರದಂತೆ ಮನಸ್ಸನ್ನು ತಡೆದು ಸಾತ್ವಿಕತೆಯನ್ನು ಹೆಚ್ಚಿಸುವ ವಿಷಯಗಳು ಮೂಲೆ ಸೇರುತ್ತದೆ. ಇದನ್ನು ಪುರುಷರು ಸ್ತ್ರೀ ಯರು ನಡೆಸಿದರೂ ತಪ್ಪು ನಮ್ಮೊಳಗೇ ಇರುತ್ತದೆ.
ಒಟ್ಟಿನಲ್ಲಿ ಆಂತರಿಕ ಶಕ್ತಿ ಹೆಚ್ಚಾಗಿರುವ ಸ್ತ್ರೀ ಯರಿಗೆ ಅಧ್ಯಾತ್ಮದ ಸತ್ವಯುತ ವಿಚಾರ ತಿಳಿಸುವುದರಲ್ಲಿ ಸೋತಿರುವ ಭಾರತೀಯರಿಗೆ ಈಗಿನ ಮಿತಿಮೀರಿದ ಪರಿಸ್ಥಿತಿಗೆ ಕಾರಣ ತಿಳಿದರೂ ತಿರುಗಿ ಬರಲಾಗದ ಪರಿಸ್ಥಿತಿ ಮನೆಯೊಳಗೆ ಇದೆ.ಮನೆಯೊಳಗೆ ಇದ್ದು ತಮ್ಮ ಸಂಸಾರದಲ್ಲಿ ಧರ್ಮ ಕರ್ಮಕ್ಕೆ ಬೆಲೆಕೊಟ್ಟು ಸಹಕರಿಸುವ ಸ್ತ್ರೀ ಯರಲ್ಲಿರುವ ಶಾಂತಿ,ಸಮಾಧಾನ,ನೆಮ್ಮದಿ ಎಲ್ಲವನ್ನೂ ಬಿಟ್ಟು ಹೊರಬಂದವರಿಗೆ ಸಿಕ್ಕಿದ್ದರೆ ಅದು ಹೊರಗಿನವರಿಂದ ಮಾತ್ರ.
ನಮ್ಮವರನ್ನೇ ದ್ವೇಷ ಮಾಡುವ ಮನಸ್ಥಿತಿ ಎಲ್ಲಿಯವರೆಗೆ ನಮ್ಮಲ್ಲಿ ಹೋಗದೋ ,ಎಲ್ಲಿಯವರೆಗೆ ನಮ್ಮತನ ನಮ್ಮ ಧರ್ಮ, ನಮ್ಮ ಸತ್ಯ ನಮ್ಮ ದೇಶದ ಶಿಕ್ಷಣಕ್ಕೆ ನಾವೇ ವಿರುದ್ದವಿರುವೆವೋ ಅಲ್ಲಿಯವರೆಗೆ ಆಂತರಿಕ ಶಾಂತಿ ಸಿಗದು.
ಇದನ್ನು ನಮ್ಮ ಮಹಾತ್ಮರುಗಳು ಮೊದಲೇ ತಿಳಿಸಿದ್ದಾರೆ.ರಾಜಯೋಗವನ್ನು ರಾಜಕೀಯವಾಗಿ ಪ್ರಚಾರ ಮಾಡದೆ ರಾಜಕೀಯದಲ್ಲಿ ರಾಜಯೋಗವನ್ನು ಅಳವಡಿಸಿಕೊಂಡರೆ ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಜ್ಞಾನ ಹೆಚ್ಚುವುದು. ಸ್ತ್ರೀ ಯನ್ನು ತಾಯಿ,ಮಾತೆ,ದೇವಿ,ಶಕ್ತಿ,ಜ್ಞಾನಿ ಎನ್ನುವ ಗೌರವದಿಂದ ಕಂಡವರಷ್ಟೆ ಮಹಾತ್ಮರಾಗಿರೋದು. ಇದಕ್ಕೆ ಕಾರಣವೆ ಸ್ತ್ರೀ ಸಹಕಾರ ಧರ್ಮದ ಪರವಿತ್ತು.ಅಧರ್ಮದ ವಿರುದ್ದವಿತ್ತು.ಧಾರ್ಮಿಕ ವಿಚಾರಗಳೇ ಇಂದು ರಾಜಕೀಯತೆ ಬೆಳೆಸಿ ಜನಸಾಮಾನ್ಯರ ಮಹಿಳೆ,ಮಕ್ಕಳ ಸಾಮಾನ್ಯಜ್ಞಾನ ಕುಸಿಯುವಂತೆ ಮಾಡಿ ವೈಜ್ಞಾನಿಕ ಚಿಂತನೆಗಳಿಗೆ,ವಿದೇಶಿಗಳಿಗೆ, ವಿಜ್ಞಾನಕ್ಕೆ ಸಹಕರಿಸುತ್ತಾ ಕಂಕಳಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಟ ನಡೆದಿದೆ ಎಂದರೆ ತಪ್ಪಿಲ್ಲ.
ನಮ್ಮೊಳಗೇ ಇರುವ ಅತಿಯಾದ ಸ್ವಾರ್ಥ ಅಹಂಕಾರ ದ ಜೊತೆಗೆ ಅರಿಷಡ್ವರ್ಗ ವೆಂಬ ಹಿತಶತ್ರುಗಳೂ ಸೇರಿದರೆ ಮಾನವನ ಮನಸ್ಸು ಮರ್ಕಟದಂತೆ ಕುಣಿದು ಕುಣಿಸುವುದರಲ್ಲಿ ಆಶ್ಚರ್ಯವಿಲ್ಲ. ಭೂಮಿಯಿಲ್ಲದೆ ಮನುಕುಲವಿಲ್ಲ, ತಾಯಿಯಿಲ್ಲದೆ ಜನ್ಮವಿಲ್ಲ. ಸ್ತ್ರೀ ಗೆ ಆತ್ಮಜ್ಞಾನವಿಲ್ಲವಾದರೆ ಸೃಷ್ಟಿ ಯ ರಹಸ್ಯ ಅರ್ಥ ವಾಗದೆ ಸಂಸಾರದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಜೀವ ಹೋಗುತ್ತದೆ. ಜನ್ಮ ಜನ್ಮಂತರದ ಈ ಋಣ ಮತ್ತು ಕರ್ಮ ವನ್ನು ಯಾರೋ ತೀರಿಸುತ್ತಾರೆಂದರೆ
ಸತ್ಯವಲ್ಲ. ನಮ್ಮಲ್ಲಿ ದೈವತ್ವದ ಸಾತ್ವಿಕ ಜ್ಞಾನವಿದ್ದರೆ ಮಾತ್ರ ಈ ಭೂಮಿಯ ಋಣ ತೀರಿಸುವ ಯೋಗ.ಯೋಗವೆಂದರೆ ಸೇರುವುದು.ಜೀವಾತ್ಮ ಪರಮಾತ್ಮನ ಸೇರುವ ಮಹಾಯೋಗವೇ ರಾಜಯೋಗ. ರಾಜಕೀಯದಲ್ಲಿ ಇನ್ನೊಬ್ಬರನ್ನು ಆಳಬಹುದು ಸೇರಲಾಗದು. ಆಕಾಶದಲ್ಲಿದೆ ಭೂಮಿ,ಭೂಮಿಯಲ್ಲಿ ಸ್ತ್ರೀ ಶಕ್ತಿಅಡಗಿದೆ,ಸ್ತ್ರೀ ಯಿಂದಲೇ ಮನುಕುಲ ನಡೆದಿದೆ, ಮಾನವನೊಳಗೆ ಆತ್ಮಶಕ್ತಿಯಿದೆ ಆತ್ಮಶಕ್ತಿಯೇ ದೇವರಾಗಿದೆ, ದೈವತ್ವವು ತತ್ವದಲ್ಲಿದೆ, ತತ್ವಜ್ಞಾನದಿಂದ ಶಾಂತಿ.ಭೂಮಿಯು ಇಂದು ತಂತ್ರಜ್ಞಾನದೆಡೆಗೆ ನಡೆದಿದೆ.ತಂತ್ರದಲ್ಲಿ ರಾಜಕೀಯವಿದೆ. ಸ್ತ್ರೀ ತನ್ನ ತಾನು ಆಳಿಕೊಳ್ಳಲು ರಾಜಯೋಗದ ಸದ್ವಿಚಾರ ತಿಳಿಯುವುದು ಅಗತ್ಯ.ಮೊದಲು ಪುರುಷರಿಗೆ ಇದರ ಅಗತ್ಯವಿದೆ.ಕಾರಣವೇನೆಂದರೆ ಭೂಮಿಯಲ್ಲಿ ಹೇಗೆ ಜೀವನ ನಡೆಸಿದರೆ ಭೂಮಿಯ ಋಣ ತೀರಿಸಿ ಮುಕ್ತಿ ಪಡೆಯಬಹುದೆನ್ನುವುದು ಪುರುಷ ತಿಳಿದರೆ ಸ್ತ್ರೀ ಶಕ್ತಿ ದುರ್ಭಳಕೆ ಆಗದೆ ಅಸುರ ಶಕ್ತಿ ಹಿಂದುಳಿಯಬಹುದು.ಆದರೆ ಇದು ಕಷ್ಟ ಕಾರಣ ಸ್ತ್ರೀ ಮನಸ್ಸು ಚಂಚಲ ಎನ್ನುವ ಕಾರಣಕ್ಕಾಗಿ ಅವಳಿಗೆ ಲಕ್ಮಿ ಯಾಗಿಸಿ ಸರಸ್ವತಿಯ ಪರಿಚಯ ಮಾಡಿಕೊಡಲು ಸೋತಿರುವುದಾಗಿದೆ. ಇದರ ಫಲವೇ ಇಂದು ಹಣವಿದೆ ಜ್ಞಾನದ ಕೊರತೆ ಹೆಚ್ಚಾಗಿ ಅಸುರರ ಸಂಖ್ಯೆ ಬೆಳೆದಿದೆ. ಇದಕ್ಕೆ ಪರಿಹಾರ ಒಳಗಿದೆ ಹೊರಗಿಲ್ಲ .
ರೋಗದ ರೂಪದಲ್ಲಿರುವ ಕೊರೊನಮಾರಿಯ ದರ್ಶನ ಆಗುತ್ತಿದೆ. ಇದಕ್ಕೆ ಪರಿಹಾರ ರಾಜಯೋಗದಲ್ಲಿ ಕಾಣಬಹುದು.
ಕೊ ರೊ ನ ಎಂದರೆ ಕೂತು ರೋಗದಿಂದ ನರಳುವುದು. ಸ್ತ್ರೀ ಯ ಸಹಕಾರ ಭ್ರಷ್ಟರಿಗೆ ದೊರೆತರೆ ಹಣಕ್ಕಾಗಿ ಅಧಿಕಾರಕ್ಕಾಗಿಜನರಿಗೆ ಶಿಕ್ಷಣ ನೀಡದೆ ಕೂರಿಸಿ ತಿನ್ನಿಸಿ ಬೆಳೆಸಿದರೆ ರೋಗ ಹೆಚ್ಚುವುದು.
2.ಕೊಂದು ರೋಗದಿಂದ ನರಳುವುದು- ಮನೆಯೊಳಗಿನ ಸ್ತ್ರೀ ಮನಸ್ಸನ್ನು ನೋಯಿಸಿ, ಕೊಂದು ತನ್ನ ಆಸೆ ಪೂರೈಸಿಕೊಂಡರೆ ಅದೇ ಮಾರಿ ರೂಪದಲ್ಲಿ ತಿರುಗಿ ಬರುವಾಗ ಕಾಣೋದಿಲ್ಲ.ಹಾಗೆಯೇ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇತರ ಪ್ರಾಣಿ,ಜೀವಿಗಳನ್ನು ಕೊಂದು ತಿಂದರೆ ರೋಗ.ಇದು ಚೀನಾದಿಂದ ಹರಡಿರುವ ರೋಗಕ್ಕೆ ಕಾರಣ ಅವರ ಆಹಾರ ಪದ್ದತಿ ಎನ್ನುವುದೂ ಕಾರಣ.ಇದಕ್ಕೆ ಸ್ತ್ರೀ ಸಹಕಾರವಿದ್ದರೆ ಜೀವ ಕೊಟ್ಟು ಬದುಕುವ ಶಕ್ತಿಯೇ ಜೀವತೆಗೆದು ಆಳಿದಂತೆ.ಇದೊಂದು ಸೂಕ್ಮವಾದ ಅಧ್ಯಾತ್ಮ ಸತ್ಯವಾಗಿದೆ. ಈ ಕಾರಣಕ್ಕಾಗಿ ಹಿಂದೂ ಋಷಿಮುನಿಗಳ ಆಹಾರ ಸತ್ವಯುತವಾಗಿತ್ತು.
ಕೊಟ್ಟು ರೋಗದಿಂದ ನರಳುವುದು .ಉಚಿತ ಕೊಟ್ಟಷ್ಟೂ ಸಾಲ ಖಚಿತ,ಸಾಲ ತೀರಿಸಲು ಭ್ರಷ್ಟಾಚಾರ ಕ್ಕೆ ಸಹಕಾರ,ಭ್ರಷ್ಟಾಚಾರ ಬೆಳೆದರೆ ಪ್ರಕೃತಿ ವಿಕೋಪ ಹೆಚ್ಚು.
3.ಕೊಡದೆ ರೋಗದಿಂದ ನರಳುವುದು. ಸಮಾನವಾಗಿ ಹಂಚಿ ತಿನ್ನುವ ಜ್ಞಾನದ ಕೊರತೆಯಿಂದ ಸಾಕಷ್ಟು ಶ್ರೀಮಂತ ಜನರಿಗೆ ರೋಗವೇ ಹೆಚ್ಚು.
4. ಕೂಗಿ ರೋಗದಿಂದ ನರಳುವುದು ಮಧ್ಯವರ್ತಿಗಳ ರೋಗ. ಈಕಡೆ ತಾವೂ ಬದಲಾಗದೆ ಇತರರನ್ನು ಬದಲಾವಣೆಗೆ ಬಿಡದೆ ಮಧ್ಯೆನಿಂತು ಸರಿಯಿಲ್ಲ ಎಂದು ಕೂಗಿದರೂ ರೋಗವೇ.ನಮ್ಮ ಜೀವ,ಜೀವನ ಎಲ್ಲಾ ಭೂಮಿ ಮೇಲಿದೆ ತಾಯಿಯ ಋಣ ತೀರಿಸಲು ನಿಸ್ವಾರ್ಥ ಸೇವೆಯ ಅಗತ್ಯವಿದೆ.ಯೋಗದಿಂದ ರೋಗನಿವಾರಣೆ ಸಾಧ್ಯ. ಯೋಗವೆಂದರೆ ಸೇರುವುದು.ಜೀವಾತ್ಮ ಪರಮಾತ್ಮನ ಸೇರುವುದು ಇದಕ್ಕೆ ಸತ್ಯ ಧರ್ಮದ ಆತ್ಮಜ್ಞಾನ ಅಗತ್ಯವಿದೆ.
ವಿವೇಕಾನಂದರ ರಾಜಯೋಗಕ್ಕೂ ಇಂದಿನ ರಾಜಕೀಯಕ್ಕೂ ಅಂತರ ಬೆಳೆಸಿಕೊಂಡಷ್ಟೂ ಮಧ್ಯವರ್ತಿ ಮಹಿಳೆ ಮಕ್ಕಳ ಗತಿ ಅಧೋಗತಿ. ಸಾಮಾನ್ಯ ಜ್ಞಾನವಿಲ್ಲದ ವಿಜ್ಞಾನ ಅಜ್ಞಾನದ ಅಸುರರ ಜ್ಞಾನವಾಗಬಹುದು.
No comments:
Post a Comment