ಹೆಚ್ಚು ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳುವುದರಿಂದ ಧರ್ಮ ಉಳಿಯೋದಿಲ್ಲ. ಕಾರಣ ನಮ್ಮ ತಲೆ ಸರಿಯಿದ್ದರೆ ಮಾತ್ರ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ತಲೆಗೆ ಅಧರ್ಮದ ವಿಚಾರ ಹಾಕಿಕೊಂಡು ಹೊರಗೆ ಧರ್ಮ ರಕ್ಷಣೆ ಮಾಡಲು ಹೊರಡರೆ ತಲೆ ನೋವು ಹೆಚ್ಚು.ಕಾರಣ ಧರ್ಮ ನಮ್ಮ ಹಿಂದಿನವರು ನಡೆಸಿದ್ದೇ ಬೇರೆ ನಾವೀಗ ತಿಳಿದು ನಡೆಯುವುದೇ ಬೇರೆಯಾದಾಗ ಭಿನ್ನಾಭಿಪ್ರಾಯ ವೇ ಹೆಚ್ಚು. ಭಿನ್ನಾಭಿಪ್ರಾಯ ದ್ವೇಷದೆಡೆಗೆ ಹೊರಟರೆ ಶಾಂತಿ ಎಲ್ಲಿರುವುದು? ಎಲ್ಲಿ ಶಾಂತಿಯಿರುವುದೋ ಅಲ್ಲಿ ಸತ್ಯಕ್ಕೆ ಬೆಲೆಯಿರುವುದು. ಅಧ್ಯಾತ್ಮ ಸತ್ಯ ಶಾಂತಿಯಿಂದ ತಿಳಿದರೆ ಭೌತಿಕಸತ್ಯದಲ್ಲಿ ಶಾಂತಿ ಕಾಣಲಾಗದೆ ಕ್ರಾಂತಿಯೇ ಹೆಚ್ಚು. ಹೀಗಾಗಿ ಧರ್ಮದಲ್ಲಿ ಮುಖ್ಯವಾದ ಮಾನವಧರ್ಮದ ಬಗ್ಗೆ ಮಾನವರಾಗಿ ತಿಳಿಯುವ ಪ್ರಯತ್ನ ಅವರವರೆ ಮಾಡಿದರೆ ಮನಸ್ಸಿಗೆ ಶಾಂತಿ,ನೆಮ್ಮದಿ, ತೃಪ್ತಿ ನಂತರವೇ ಮುಕ್ತಿ ಮೋಕ್ಷದ ದಾರಿಯಲ್ಲಿ ನಡೆಯಬಹುದಷ್ಟೆ.
ಇಷ್ಟಕ್ಕೂ ನಾವು ಸಾಮಾನ್ಯಜ್ಞಾನದಿಂದ ತಿಳಿಯಬಹುದಾದ ಸಾಮಾನ್ಯಸತ್ಯವನ್ನೇ ವಿರೋಧಿಸಿದರೆ ಅಸಮಾನ್ಯಸತ್ಯ ತಿಳಿದಾದರೂ ಏನು ಉಪಯೋಗ ವಿದೆ?
ಮೊದಲನೇ ಸತ್ಯ ನಮ್ಮ ಈ ಜನ್ಮಕ್ಕೆ ಕಾರಣ ನಮ್ಮ ಹಿಂದಿನ ಜನ್ಮದ ಋಣ ಮತ್ತು ಕರ್ಮ.
ಋಣ ತೀರಿಸಲು ಸತ್ಕರ್ಮ, ಸ್ವಧರ್ಮ, ಸುಜ್ಞಾನದಿಂದ ಮಾತ್ರ ಸಾಧ್ಯ.
ತಾಯಿಯ ಋಣ ತೀರಿಸಲು ಕಷ್ಟ.ಆದರೆ ಸೇವೆಯಿಂದ ಸಾಧ್ಯವೆಂದರೆ ಭೂ ಸೇವೆ ಸರ್ವ ಶ್ರೇಷ್ಠ ವಾಗಿದೆ.
ಭೂ ತಾಯಿಯ ಮಕ್ಕಳಾದ ಮಾನವರಲ್ಲಿ ಭೂ ಸೇವೆಗೆ ಹತ್ತಿರವಾದವರಲ್ಲಿ ಪ್ರಮುಖರಾದವರೆ ರೈತರು.ನಿಸ್ವಾರ್ಥ ನಿರಹಂಕಾರದ ಪ್ರತಿಫಲಾಪೇಕ್ಷೆ ಯಿಲ್ಲದ ಎಲ್ಲಾ ಕರ್ಮ ಭಗವಂತನ ಸೇವೆಯಾದಾಗ ಭೂ ತಾಯಿಯ ಋಣ ತೀರಿದಂತೆ.
ಭಗವಂತನ ಸೊಂಟದ ಭಾಗದಲ್ಲಿರುವ ಭೂಮಿಯ ಮೇಲೆ ಮನುಕುಲವಿದೆ ಎಂದರೆ ಭೂ ತಾಯಿಯ ಋಣ ತೀರಿಸಲು ಮಾನವರು ತತ್ವಜ್ಞಾನ ಅರ್ಥ ಮಾಡಿಕೊಂಡು ಒಗ್ಗಟ್ಟಿನಿಂದ ಬಾಳಿ ಬದುಕುವ ಜ್ಞಾನ ಪಡೆಯಬೇಕು.
ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ ವೆಂದರು ಕಾರಣವಿಷ್ಟೆ ವಿದ್ಯೆ ಹೊರಗಿನ ವಿಷಯದ ಕಲಿಕೆ ಆ ಕಲಿಕೆಯು ಆಂತರಿಕ ಶಕ್ತಿಯನ್ನು ಬೆಳೆಸುವುದೇ ಜ್ಞಾನ. ಸತ್ಯ ಒಂದೇ ಅದರ ಅನುಭವ ಬೇರೆ ಬೇರೆ ಇದ್ದಂತೆ ಒಂದೇ ವಿದ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿ ಬದುಕುವ ಜ್ಞಾನದಿಂದ ಧರ್ಮ ಉಳಿಯಬೇಕಷ್ಟೆ.
ಭೂಮಿಯ ತತ್ವವನ್ನರಿಯದೆ ಆಕಾಶತತ್ವ ತಿಳಿದರೆ ವ್ಯರ್ಥ.
ಜೀವ ಇದ್ದರೆ ಜೀವನ. ಜೀವಕೊಟ್ಟು ಹೊತ್ತು ಹೆತ್ತ ತಾಯಿ ಜೀವನದ ದಾರಿ ತೋರಿಸಿದ ತಂದೆಯ ಋಣ ತೀರಿಸಲು
ಅವರ ಧರ್ಮ ಕರ್ಮ ಸಿದ್ಧಾಂತ ತತ್ವಜ್ಞಾನ ಮಕ್ಕಳಿಗೆ ತಿಳಿಸಿ ಕಲಿಸಿದ್ದರೆ ಮಾತ್ರ ಸಾಧ್ಯ. ಇಲ್ಲವಾದರೆ ಮುಕ್ತಿ ಯ ಮಾರ್ಗ ಹೊರಗಿನ ಜಗತ್ತಿನಲ್ಲಿ ಹುಡುಕುವ ಹುಡುಕಾಟವಾಗುತ್ತದೆ.
ಭಾರತೀಯರ ಜ್ಞಾನ ಶಕ್ತಿ ಭಾರತೀಯ ಶಿಕ್ಷಣದಲ್ಲಿಯೇ ಕಲಿಸಿ ಬೆಳೆಸಬೇಕು.ವಿದೇಶದಲ್ಲಿ, ವಿದೇಶ ಶಿಕ್ಷಣವಿದ್ದಂತೆ
ಭಾರತದಲ್ಲಿ ಭಾರತೀಯ ಶಿಕ್ಷಣವೇ ಹಿಂದಿನವರ ಬಂಡವಾಳ.
ಬಂಡವಾಳವನ್ನು ಸದ್ಬಳಕೆ ಮಾಡಿಕೊಂಡು ಬೆಳೆಸಬೇಕು. ವ್ಯವಹಾರಕ್ಕೆ ಸೀಮಿತವಾಗಿಸಿಕೊಂಡರೆ ಹಣ,ಅಧಿಕಾರ,ಸ್ಥಾನಮಾನದ ರಾಜಕೀಯವಾಗುತ್ತಾ ಬಂಡವಾಳ ಕರಗಿ ಹೋಗುತ್ತದೆ ಅಂದರೆ ಜ್ಞಾನ ಹಿಂದುಳಿದು ಅಜ್ಞಾನ ಹೆಚ್ಚುವುದು.
ಸತ್ಯಯುಗದಿಂದ ಕಲಿಯುಗದವರೆಗೂ ನಡೆದು ಬಂದ ಈ ಜೀವಾತ್ಮನಿಗೆ ಪರಮಾತ್ಮನ ದರ್ಶನವಾಗಲು ಸತ್ಯದೆಡೆಗೆ ನಡೆಯಬೇಕಷ್ಟೆ. ಧರ್ಮ ಎನ್ನುವುದು ಒಂದೇ ಇದ್ದಾಗ ಸಮಸ್ಯೆಗಳಿರಲಿಲ್ಲ. ಹಾಗೆ ಸತ್ಯವೂ ಒಂದೆ ಆದಾಗ ಎಲ್ಲಾ ಒಂದೇ ಕಾಣುತ್ತದೆ.ಯಾವಾಗ ಅಧ್ಯಾತ್ಮ ಹಾಗು ಭೌತಿಕದ ಸತ್ಯಾಸತ್ಯತೆಯನ್ನು ರಾಜಕೀಯವಾಗಿ ಎಳೆದುಕೊಂಡು ಹೋದರೋ ಆಗಲೇ ಅಧರ್ಮ ಬೆಳೆದು ಧರ್ಮಕುಸಿದಿದೆ. ಯಾರನ್ನೂ ಯಾರೋ ಆಳುವುದಕ್ಕಿಂತ ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಸ್ವತಂತ್ರ ಇಂದಿನ ಪ್ರಜಾಪ್ರಭುತ್ವ ದೇಶ ಪಡೆದಿತ್ತು.ಆದರೆ, ಹಿಂದಿನ ರಾಜಕೀಯವನ್ನು ಮತ್ತೆ ಬಂಡವಾಳ ಮಾಡಿಕೊಂಡು ಜ್ಞಾನ ನೀಡದ ಶಿಕ್ಷಣದೆಡೆಗೆ ಹೊರಟವರಿಗೆ ಸತ್ಯದರ್ಶನ ವಾಗದೆ ರಾಜಕೀಯತೆ ಬೆಳೆದಿದೆ. ಇದೀಗ ಅದೇ ದೊಡ್ಡ ಸಮಸ್ಯೆ ಕಡೆಗೆ ಜನರನ್ನು ಸಾಲದ ಸುಳಿಗೆ ಎಳೆದು ಆಳುವಾಗ ಪ್ರಜಾಧರ್ಮ ಯಾವುದು? ಎಲ್ಲಿರುವುದು?
ಒಬ್ಬೊಬ್ಬ ಪ್ರಜೆಗಳ ತಲೆಯ ಮೇಲೇ ಸಾಲದ ಹೊರೆ ಏರಿಸಿ ದೇಶ ನಡೆಸಲು ವಿದೇಶಿ ಸಾಲ,ಬಂಡವಾಳ,ವ್ಯವಹಾರಕ್ಕೆ ಕೈಚಾಚಿದರೆ ಇದರಲ್ಲಿ ಸ್ವದೇಶದವರ ಜ್ಞಾನ ಎಲ್ಲಿದೆ? ಧರ್ಮ ಹೇಗೆ ಉಳಿಯುತ್ತದೆ? ಸಾಲ ಹೇಗೆ ತೀರಿಸುವುದು ಎಂದರೆ ನಮ್ಮವರು ಪರಕೀಯರ ಆಳಾಗಿ ದುಡಿಯುವುದು ಪ್ರಗತಿ ಎನ್ನಬಹುದೆ?
ನಾವು ಪುರಾಣ ಕಥೆಗಳಲ್ಲಿದ್ದ ಧರ್ಮ ಸತ್ಯ, ನ್ಯಾಯ, ನೀತಿ ಸಂಸ್ಕೃತಿಯ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದರೂ ನಮ್ಮೆದುರೇ ನಡೆಯುವ ಅಧರ್ಮ, ಅಸತ್ಯದ ಭ್ರಷ್ಟಾಚಾರ ನಮ್ಮ ಸಹಕಾರವಿಲ್ಲದೆ ಬೆಳೆದಿಲ್ಲವೆನ್ನುವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಆತ್ಮಾವಲೋಕನ ಬೇಕಷ್ಟೆ. ಇದನ್ನು ಸರ್ಕಾರವಾಗಲಿ, ಹಣ,ಅಧಿಕಾರ,ಸ್ಥಾನಮಾನವಾಗಲಿ ಸರಿಪಡಿಸಲಾಗದು.ಕಾನೂನಿನ ಪ್ರಕಾರ ನಮ್ಮ ದೇಶದ ಸಂವಿಧಾನವು ಪ್ರಜಾಪ್ರಭುತ್ವದ ಧರ್ಮ ವನ್ನು ಎತ್ತಿಹಿಡಿದು ದೇಶವನ್ನು ಕಟ್ಟುವ ಕೆಲಸ ಮಾಡುವ ಉದ್ದೇಶ ವಿದ್ದರೂ ಅದನ್ನು ಅರ್ಥ ಮಾಡಿಕೊಳ್ಳಲು ಸೋತವರು ದೇಶವನ್ನೇ ವಿದೇಶಮಾಡಿ ಜನರನ್ನು ವಿದೇಶದೆಡೆಗೆ ಸಾಗಿಸುತ್ತಾ ದೇಶದ ಮೂಲ ಶಿಕ್ಷಣವನ್ನು ಹಿಂದುಳಿಸಿ ಪರಕೀಯರ ಜ್ಞಾನದಲ್ಲಿ ಸ್ವದೇಶದ ವೈಜ್ಞಾನಿಕಪ್ರಗತಿಯ ಕಡೆಗೆ ಹೋಗಿದ್ದರೂ ಇದರಿಂದಾಗಿ ಪ್ರಜಾಪ್ರಭುತ್ವ ಸ್ವತಂತ್ರ ವಾಗಿದೆಯೆ?
ಯಾವ ದೇಶದ ಸತ್ಯ,ಧರ್ಮ, ನ್ಯಾಯ ನೀತಿ,ಶಿಕ್ಷಣವು ವ್ಯಾಪಾರದ ಸಗಟಾಗಿರುವುದೋ ಅಲ್ಲಿ ವ್ಯವಹಾರವೇ ಮುಖ್ಯವಾಗಿ ಮೂಲದ ಧರ್ಮ ಕುಸಿದಿರುತ್ತದೆ.ಹಾಗಂತ ಯಾರೂ ಮೂಲ ಬೇರನ್ನು ಕಿತ್ತು ಆಳಲು ಸಾಧ್ಯವಿಲ್ಲ. ಈ ಅರಿವು ಆಳವಾಗಿದ್ದಷ್ಟೂ ಉತ್ತಮ ಪ್ರಗತಿ ಸಾಧ್ಯ.ಇದನ್ನು ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ ವಾಗಿ ಹಿಂದಿನ ಮಹಾತ್ಮರುಗಳು ತಿಳಿದು,ತಿಳಿಸಿ,ಕಲಿಸಿ,ಬೆಳೆಸುವುದರ ಮೂಲಕ ದೇಶವನ್ನು ಜ್ಞಾನದಿಂದ ಕಟ್ಟುವ ಕೆಲಸಮಾಡಿ ಮಹಾತ್ಮರಾಗಿದ್ದರು. ಅವರ ಹೆಸರಿನಲ್ಲಿಯೂ ರಾಜಕೀಯ ಬೆಳೆಸಿಕೊಂಡರೆ ರಾಜಯೋಗದ ಅರ್ಥ ವಾಗೋದು ಕಷ್ಟ.
ಬದಲಾವಣೆ ಆಗುತ್ತಿದೆ, ಆಗುತ್ತದೆ,ಆಗಬೇಕಾದರೆ ನಮ್ಮ ಸಹಕಾರದ ಅಗತ್ಯವಿದೆ.
ಶಿಕ್ಷಣದಲ್ಲಿಯೇ ಮಕ್ಕಳ ಪ್ರತಿಭೆ, ಜ್ಞಾನ,ಆಸಕ್ತಿ ಗುರುತಿಸಿ ಸುಶಿಕ್ಷಣ ನೀಡುವುದಷ್ಟೆ ಪ್ರಜಾಧರ್ಮ. ದೇಶದ ನೆಲ ಜಲ ಬೇಕು ಧರ್ಮಶಿಕ್ಷಣ ಬೇಡವೆ? ಅಧ್ಯಾತ್ಮ ಎಂದರೆ ನಮ್ಮನ್ನು ನಾವರಿತು ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯೋದು. ಇದು ಒಳಗಿನ ಸತ್ಯ,ಧರ್ಮ ಶಿಕ್ಷಣದಲ್ಲಿತ್ತು ಹೊರಗಿರಲಿಲ್ಲ.
ಹೊರದೇಶದ ಶಿಕ್ಷಣ ಹೊರದೇಶವನ್ನು ಬೆಳೆಸುತ್ತದೆ. ನಮ್ಮ ಶಿಕ್ಷಣ ಅವರ ದೇಶದ ಪ್ರಜೆಗಳಿಗೆ ಕೊಡುವರೆ? ಕೊಟ್ಟರೆ ಅಲ್ಲಿಯ ಪ್ರಜೆಗಳೇ ಶ್ರೇಷ್ಠ ವ್ಯಕ್ತಿಗಳಾಗೋದರಲ್ಲಿ ಸಂಶಯವಿಲ್ಲ. ಕಾರಣ ಭಾರತ ಮಾತೆ ವಿಶ್ವಕ್ಕೆಗುರು.ವಿಶ್ವವೇ ಒಪ್ಪಿಕೊಂಡರೂ ಭಾರತೀಯರೆ ವಿರೋಧಿಸಿ ನಡೆದಿರೋದು ದುರಂತವಷ್ಟೆ.
ಕಾಲಮಾನಕ್ಕೆ ತಕ್ಕಂತೆ ಜೀವನವಿದೆ.ಹಾಗೆಯೇ ಧರ್ಮ ವೂ ಬದಲಾಗಿದೆ. ಪ್ರಜಾಧರ್ಮ ಇಂದಿನ ಭಾರತದಂತಹ ಪವಿತ್ರ ದೇಶಕ್ಕೆ ಅಗತ್ಯವಾಗಿದೆ.ಇದಕ್ಕೆ ಜ್ಞಾನದ ಶಿಕ್ಷಣ ಕೊಡಬೇಕಿದೆ.ಆತ್ಮಜ್ಞಾನದ ನಂತರವೇ ಭೌತಿಕ ವಿಜ್ಞಾನದ ವಿಚಾರ ಮಾನವ ತಿಳಿದಾಗಲೇ ಸತ್ಯದರ್ಶನ ಸಾಧ್ಯವಿದೆ.
No comments:
Post a Comment