ಕನ್ನಡದ ಉಳಿವಿಗಾಗಿ ಸಾಕಷ್ಟು ಹೋರಾಟಗಳೇನೋ ನಡೆದಿದೆ ನಡೆಯುತ್ತಿದೆ ನಡೆಯುತ್ತದೆ ಆದರೆ,ಕನ್ನಡ ಉಳಿಸಲು ನಾವ್ಯಾರು ? ಎನ್ನುವ ಪ್ರಶ್ನೆ ಕನ್ನಡಿಗರಿಗೆ ಕೇಳಿದರೆ ಉತ್ತರ ಸಿಗೋದಿಲ್ಲವೇನೋ ಕಾರಣ ಕರ್ನಾಟಕದಲ್ಲಿ ಇರುವವರೆಲ್ಲರೂ ಕನ್ನಡಿಗರಲ್ಲ, ಕನ್ನಡದವರೆಲ್ಲರೂ ಕರ್ನಾಟಕದಲ್ಲಿಲ್ಲ. ಪರರಾಜ್ಯ ಪರದೇಶದಲ್ಲಿಯೂ ಕನ್ನಡ ಸಂಘಟನೆಗಳಿವೆ.ಹಾಗಂತ ಕರ್ನಾಟಕವಾಗೋದಿಲ್ಲವಲ್ಲ. ಇದು ಭಾರತೀಯರಿಗೂ ಅನ್ವಯಿಸುತ್ತದೆ. ಭಾರತವನ್ನು ಉಳಿಸಲು ಮೊದಲುನಾವುಭಾರತೀಯತೆಯನ್ನರಿಯಬೇಕು.
ಭಾರತಮಾತೆಯ ಜ್ಞಾನ ಪಡೆದಿರಬೇಕು. ಶಿಕ್ಷಣದಲ್ಲಿಯೇ ಪರಕೀಯರಾಗಿದ್ದರೆ ಹೇಗೆ ಸಾಧ್ಯ?
ಕನ್ನಡ ಸಂಘಟನೆಗಳಾಗಲಿ,ಸಂಘ ಸಂಸ್ಥೆ, ಇನ್ನಿತರ ಗುಂಪುಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರಿಗೂ ಆಸಕ್ತಿ.ಆದರೆ ಭಾಗವಹಿಸುವುದು ಕೆಲವರಷ್ಟೆ.ಅದರಲ್ಲೂ ಹೆಚ್ಚಿನಹೆಸರು ಹಣ,ಅಧಿಕಾರ ಪಡೆದವರಿಗೆ ಮೊದಲ ಸ್ಥಾನಮಾನ. ಎಲ್ಲಾ ಸರಿ ಕರ್ನಾಟಕಕ್ಕೆ ಸಿಕ್ಕಿದ ಶಾಸ್ತ್ರೀಯ ಸ್ಥಾನಮಾನಕ್ಕೆ ಕಾರಣಕರ್ತರು ನಮ್ಮಕನ್ನಡದ ಹಿಂದಿನ ಮಹಾಕವಿಗಳು,ಸಾಹಿತಿಗಳು ಮಹಾತ್ಮರ ಸಾಧನೆಗಳೆಂದರೆ ಅವರ ಜ್ಞಾನ ನಮ್ಮಲ್ಲಿದೆಯೆ ಎನ್ನುವ ಪ್ರಶ್ನೆ ನಾವು ಹಾಕಿಕೊಳ್ಳಲು ಕಷ್ಟ.ಕಾರಣ ನಮಗೆ ಕನ್ನಡ ಉಳಿಸುವ ಹೋರಾಟಕ್ಕೆ ಸಮಯವಿಲ್ಲ ಇನ್ನು ಜ್ಞಾನವನ್ನು ಹೆಚ್ಚಿಸುವತ್ತ
ಶಾಲೆ ಕಾಲೇಜ್ ಮಕ್ಕಳವರೆಗೆ ಕನ್ನಡವನ್ನು ಕಲಿಸಿ ಬೆಳೆಸಲು ಎಲ್ಲಿದೆ ಸಮಯ? ಈ ಕಾರಣದಿಂದಾಗಿ ಸಾಕಷ್ಟು ಕನ್ನಡ ಭಾಷೆ ಶಿಕ್ಷಣದಲ್ಲಿಯೇ ಹಿಂದುಳಿಯುತ್ತಾ ಪರರಾಜ್ಯದವರಿಗೆ ಕಲಿಸುವ ಹೊರಗಿನ ಕಾರ್ಯಕ್ರಮದಲ್ಲಿ ಸರ್ಕಾರದ ಹಣ ಬಳಕೆಯಾದರೂ ಯಾವ ಉಪಯೋಗವಿಲ್ಲ.
ಕನ್ನಡವನ್ನು ಉಳಿಸಲು ರಾಜಕೀಯದ ಅಗತ್ಯವಿರಲಿಲ್ಲ. ಕನ್ನಡ ಬಲ್ಲವರಿಗೆ ಗೌರವ ತೋರಿಸುವ ಕೃಪೆ ಕನ್ನಡಿಗರು ಮಾಡಿದರೆ ಸಾಕು. ಶಾಲೆಗಳಲ್ಲಿ ಕನ್ನಡ ಮಾತನಾಡುವ ಮಕ್ಕಳಿಗೆ ಶಿಕ್ಷೆ ನೀಡಿ ಶುಲ್ಕ ವಿಧಿಸುವ ದೌರ್ಜನ್ಯದ ವ್ಯವಹಾರ ಸಾಹಿತಿಗಳಿಗೆ,ಕನ್ನಡಾಭಿಮಾನಿಗಳಿಗೆ, ಕನ್ನಡ ಸಾಹಿತ್ಯ ಪರಿಷತ್ತಿಗೆ,ಕನ್ನಡ ಪ್ರಾಧಿಕಾರಕ್ಕೆ ಹಾಗು ಎಲ್ಲಾ ಕನ್ನಡ ಸಂಘಟನೆಗಳಿಗೆ ತಿಳಿಯದ ವಿಚಾರವಾಗಿದ್ದರೆ ಇದರ ಬಗ್ಗೆ ಗಮನಕೊಟ್ಟರೆ ನಮ್ಮವರೆ ನಮ್ಮ ಭಾಷೆಗೆ ವಿರುದ್ದ ನಿಂತು ವ್ಯವಹಾರಕ್ಕೆ ಇಳಿದಿರುವಾಗ ಹೊರಗಿನವರಿಂದ ಭಾಷೆ ಹಾಳಾಗಿಲ್ಲ. ಹಾಗೆಯೇ ಭಾರತವೂ ಹಿಂದುಳಿಯುತ್ತಿರುವುದು ನಮ್ಮವರ ವಿದೇಶಿ ವ್ಯಾಮೋಹ, ವ್ಯವಹಾರ,ಶಿಕ್ಷಣದಿಂದ ಎಂದಾಗ ಬೇರೆಯವರನ್ನು ದೂರಿಕೊಂಡು ನಮ್ಮ ಬೇಳೆ ಬೇಯಿಸಿಕೊಂಡಿರುವುದನ್ನು ಜನಸಾಮಾನ್ಯರಷ್ಟೆ ಗುರುತಿಸಬಹುದು.ಕಾರಣ, ಜನಸಾಮಾನ್ಯರಲ್ಲಿರುವ ಕನ್ನಡದ ಮೇಲಿನ ಗೌರವ ಕನ್ನಡ ರಕ್ಷಣೆಗಾಗಿ ಹೋರಾಟ ನಡೆಸುವವರಲ್ಲಿ ಕಾಣುತ್ತಿಲ್ಲ.
ಹಣದಿಂದ, ಹಣಕ್ಕಾಗಿ ಹಣವೇ ಎಲ್ಲವನ್ನೂ ಸರಿಮಾಡೋದಾಗಿದ್ದರೆ ಇಷ್ಟು ಸಮಸ್ಯೆ ಬೆಳೆಯುತ್ತಲಿರಲಿಲ್ಲ.
ಜ್ಞಾನದಿಂದ ಮಾತ್ರ ಸಮಸ್ಯೆಗೆ ಪರಿಹಾರ. ಆಂತರಿಕ ಶುದ್ದಿಗೆ ನಮ್ಮೊಳಗಿನ ರಾಜಕೀಯ ಬಿಟ್ಟು ಚಿಂತನೆ ನಡೆಸಬೇಕಷ್ಟೆ.
ಒಂದೊಂದು ಸಮಾರಂಭ,ಸಮಾರಾಧನೆ, ಸಮಾವೇಶಕ್ಕೆ ಬಳಸಲಾಗುತ್ತಿರುವ ಕೋಟ್ಯಾಂತರ ರೂಪಾಯಿ ಭಾಷೆಯನ್ನಾಗಲಿ, ಧರ್ಮ ವನ್ನಾಗಲಿ,ಸಂಸ್ಕಾರವನ್ನಾಗಲಿ ದೇಶವನ್ನಾಗಲಿ ಉಳಿಸಿತೆ? ಅಳಿಸಿತೆ?
ಆತ್ಮಾವಲೋಕನ ಮಾಡಿಕೊಂಡರೆ ಸಾಮಾನ್ಯಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಯಾರಿಗಾಗಿ ಕಾರ್ಯಕ್ರಮ? ಕನ್ನಡಮ್ಮನಿಗೆ ಬೇಕೆ? ಭಾರತಮಾತೆಗೆ ಬೇಕೆ?
ನಡೆಸೋದಾದರೆ ಜನಸಾಮಾನ್ಯರವರೆಗೆ ಜ್ಞಾನ ತಲುಪಬೇಕು. ರಾಜಕೀಯವೇ ಎದ್ದು ನಿಂತರೆ ರಾಜಯೋಗ ಎಲ್ಲಿರುತ್ತದೆ? ಹಿಂದಿನ ಮಹಾತ್ಮರುಗಳಲ್ಲಿದ್ದ ಸಾತ್ವಿಕ ಜ್ಞಾನಕ್ಕೆ ತಕ್ಕಂತೆ ಧರ್ಮ, ಸತ್ಯವಿತ್ತು.ಹಾಗೆ ಪ್ರತಿಯೊಬ್ಬರಲ್ಲಿಯೂ ಈಗಲೂ ಇದೆ ಆದರೆ ಜನಸಾಮಾನ್ಯರ ಸಾಮಾನ್ಯಜ್ಞಾನಕ್ಕೆ ಸರಿಯಾದ ಶಿಕ್ಷಣವಿಲ್ಲದೆ ವಿಶೇಷಜ್ಞಾನಕ್ಕೆ ಸಾಲ ಮಾಡಿ ಕಲಿಸುವ ಪರಿಸ್ಥಿತಿ ಬಂದಿದೆ.
ಸಾಹಿತ್ಯ ಎಂದರೆ ಸಾಮಾಜಿಕ ಹಿತಕ್ಕಾಗಿ ಸತ್ಯವನ್ನು ಬರವಣಿಗೆ ಮೂಲಕ ಹೊರಹಾಕುವ ಒಂದು ಪ್ರಾಕಾರ.
ಮೂಲದ ಸತ್ಯ ಹಿಂದುಳಿದಿದೆ ವಾಸ್ತವದ ರಾಜಕೀಯ ಮುಂದೆ ನಡೆದಿದೆ ಮುಂದಿನ ಪೀಳಿಗೆಗೆ ಶಿಕ್ಷಣದಲ್ಲಿಯೇ ತಡೆ ಹಾಕಲಾಗಿದೆ. ಸರಿಯಾದ ಜ್ಞಾನಿಗಳು, ನಿಜವಾದ ಭಕ್ತರು ಕಣ್ಮರೆಯಾಗಿದ್ದಾರೆ. ಒಟ್ಟಿನಲ್ಲಿ ಸಾಹಿತ್ಯದ ಸಾಕಷ್ಟು ಪುಸ್ತಕಗಳು ಮಾರಾಟವಾಗುತ್ತದೆ.ಒಂದಷ್ಟು ಪ್ರಶಸ್ತಿ, ಪದಕ,ಬಿರುದುಗಳು ಕೊಡಲಾಗುತ್ತದೆ. ಊಟ ಉಪಚಾರಕ್ಕೆ ಕೊರತೆಯಿಲ್ಲದೆ ಉತ್ಸವಗಳು ನಡೆಯುತ್ತದೆ.ಇದರಿಂದ ಕನ್ನಡ ಭಾಷೆ ಉಳಿಯುವುದೆ?ಇಷ್ಟು ವರ್ಷದಿಂದಲೂ ನಡೆದು ಬಂದಿದ್ದರೂ ಯಾಕೆ ಈ ಸ್ಥಿತಿಗೆ ಕರ್ನಾಟಕವಿದೆ?
ಕರ್ನಾಟಕದ ಹೆಸರಲ್ಲಿ ನಾಟಕ ಮಾಡುವ ಸಾಕಷ್ಟು ಪರರಾಜ್ಯದವರಿಗೆ ಸನ್ಮಾನಗಳಿವೆ.ಆದರೆ ನಿಜವಾದ ಕನ್ನಡಿಗರ ಸತ್ಯಕ್ಕೆ ಬೆಲೆಕೊಡದೆ ಅವಮಾನ ಮಾಡುವವರೂ ನಮ್ಮವರೆ. ಇದೇ ನಮ್ಮ ರಾಜ್ಯದ ಹಾಗು ದೇಶದ ಸಮಸ್ಯೆಗೆ ಕಾರಣವೆಂದರೆ ಅವಮಾನವಾಗುವುದೂ ನಮಗೇ.
ರಾಜ್ಯದ ನೆಲಜಲ ಬೇಕು ಧರ್ಮ ಸಂಸ್ಕೃತಿ, ಭಾಷೆ ಶಿಕ್ಷಣ ಬೇಡವೆಂದರೆ ಅಧರ್ಮ. ಹಾಗೆಯೇ ಭಾರತದ ನೆಲದಲ್ಲಿದ್ದು ಜಲದಲ್ಲಿ ಜೀವಿಸಿ ಇದರ ವಿರುದ್ದವೇ ವ್ಯವಹಾರ ನಡೆಸುತ್ತಾ ರಾಜಕೀಯ ನಡೆಸೋರಿಗೆ ಜ್ಞಾನದ ಅಭಾವವಿದೆ. ಜ್ಞಾನವನ್ನು ಶಿಕ್ಷಣದಲ್ಲಿಯೇ ಕೊಡಬೇಕಾಗಿದ್ದ ಸರ್ಕಾರಗಳು ಈಗಲೂ ರೆಂಬೆ ಕೊಂಬೆಗಳನ್ನು ಪೋಷಿಸುವುದಕ್ಕೆ ಸಾಕಷ್ಟು ಸಾಲ ಮಾಡಿ ಮೂಲವನ್ನರಿಯದ ಜನರನ್ನು ಆಳುತ್ತಿದೆ. ಒಟ್ಟಿನಲ್ಲಿ
ಯಾವುದೇ ರಕ್ಷಣೆಗೆ ಮೊದಲು ನಮ್ಮ ಆತ್ಮರಕ್ಷಣೆಗಾಗಿ ಮುಂದೆ ನಡೆಯಬೇಕು. ಆತ್ಮವಿರೋದು ಒಳಗಿನ ಸತ್ಯದಲ್ಲಿ. ಒಳಗೆ ಸತ್ಯವಿದ್ದರೆ ಹೊರಗಿನ ಮಿಥ್ಯದ ಪರಿಚಯವಾಗುತ್ತದೆ.
ಇದನ್ನು ಕರ್ನಾಟಕದ ಜನತೆ ಭಾರತೀಯರು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತರೆ ಬೇರೆಯವರನ್ನು ಆಳುವ ರಾಜಕೀಯದಿಂದ ಏನೂ ಬದಲಾವಣೆ ಆಗೋದಿಲ್ಲವಲ್ಲ.
ಕ್ಷಮಿಸಿ ಇದರಲ್ಲಿರುವ ಸೂಕ್ಮವಾದ ಸತ್ಯ ಜನಸಾಮಾನ್ಯರಿಗೆ ಅರ್ಥ ವಾಗಬಹುದು. ಆದರೂ ಅವರೇನೂ ಮಾತನಾಡರು.
ಅವರ ಕನ್ನಡದ ಮೇಲಿನ ಭಕ್ತಿ,ಪ್ರೀತಿಗೇನೂ ಕೊರತೆಯಿಲ್ಲ. ಕನ್ನಡಮ್ಮನ ರಕ್ಷಣೆಗೆ ಬೇಕಾಗಿರೋದು ಹೊರಗಿನ ಕಾರ್ಯಕ್ರಮವಲ್ಲ.ಒಳಗಿನ ಕಾರ್ಯ ನೀತಿ,ನಿಯಮ,
ಸಂಯಮ, ಜ್ಞಾನ.ಯಾರು ಎಷ್ಟೇ ಕನ್ನಡದ ಹೆಸರಲ್ಲಿ ಹಣ,ಅಧಿಕಾರ,ಸ್ಥಾನಮಾನ ಪಡೆದರೂ ಅದೊಂದು ಸಾಲವಷ್ಟೆ. ನಿಸ್ವಾರ್ಥ ಸೇವೆ,ಧಾರ್ಮಿಕ ಸೇವೆಯೇ ತಾಯಿಯ ಋಣ ಸಂದಾಯ ಮಾಡುವಾಗ ಯಾಕೆ ಇವೆಲ್ಲ? ಅದೂ ಈ ಸಂಕಷ್ಟದ ಸಮಯದಲ್ಲಿ ಬೇಕೆ?
ರಾಜಕೀಯದ ಹೋರಾಟಕ್ಕೆ ಬದಲಾಗಿ ರಾಜಯೋಗದ ಹೋರಾಟವು ಧರ್ಮ, ಸತ್ಯ, ಸಂಸ್ಕೃತಿ, ಭಾಷೆ ಉಳಿಸುತ್ತದೆ
ಎಂದು ನಡೆದು ನುಡಿದು ತೋರಿಸಿದ್ದಾರೆ ನಮ್ಮಹಿಂದಿನ ಮಹಾತ್ಮರುಗಳು,ಮಹಾಜ್ಞಾನಿಗಳು,ಮಹಾಸಾಹಿತಿಗಳು,
No comments:
Post a Comment