ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, January 20, 2023

ತಾಯಂದಿರನ್ನು ರಕ್ಷಿಸಲು ನಾವ್ಯಾರು?

ಭಾರತಾಂಬೆಯ ಮಕ್ಕಳಾಗಿರುವ ಭಾರತೀಯರಿಗೆ ತಾಯಿಯ ಜ್ಞಾನಶಕ್ತಿ ಅರ್ಥ ವಾಗದ ಶಿಕ್ಷಣ ನೀಡುತ್ತಾ ಆಳುವ ರಾಜಕಾರಣಿಗಳಿಗೆ ತಾಯಂದಿರನ್ನು ರಕ್ಷಣೆ ಮಾಡಲು ಕಷ್ಟ.ಇಷ್ಟಕ್ಕೂ ತಾಯಿಯೇ ದೇವರಾದಮೇಲೆ ದೇವರನ್ನು  ರಕ್ಷಣೆ ಮಾಡಲು ನಾವ್ಯಾರು? ಈ ಪ್ರಶ್ನೆಗೆ ಉತ್ತರ ರಾಜಕೀಯದಿಂದ ಸಿಗದ ಕಾರಣವೇ ಇಂದು ಜನರನ್ನು ಹಣದಿಂದ  ಆಳಲು ಹೊರಟವರು  ದೊಡ್ಡ ದೊಡ್ಡ ವ್ಯಕ್ತಿಗಳಾಗಿ ನಿಜವಾದ ಶಕ್ತಿಯನ್ನು ಕಳೆದುಕೊಂಡ ಜನರು ದಾರಿತಪ್ಪಿ ಹೊರನಡೆದಿರೋದಲ್ಲವೆ? ಒಟ್ಟಿನಲ್ಲಿ  ವ್ಯವಹಾರ ಜ್ಞಾನ ಧರ್ಮವನ್ನು ಅರ್ಥ ಮಾಡಿಕೊಳ್ಳಲು ಸೋಲುತ್ತದೆ. ಧರ್ಮರಕ್ಷಕರಲ್ಲಿ  ರಾಜಕೀಯತೆಯನ್ನು ನಾವು ಕಾಣುತ್ತಿದ್ದೇವೆ ಎಂದರೆ  ನಮ್ಮನ್ನು ಆಳುವವರಲ್ಲಿ ಕೇವಲ ರಾಜಕೀಯವಿದೆ ರಾಜಯೋಗವಿಲ್ಲ. ಇದರಿಂದ  ಯಾರಿಗೂ ನಷ್ಟವೂ ಇಲ್ಲ ಲಾಭವೂ ಇಲ್ಲ ಕಾರಣವಿಷ್ಟೆ ಭಾರತಮಾತೆಯೊಳಗಿರುವ ಅಸಂಖ್ಯಾತ ಜ್ಞಾನಿಗಳ ಶಕ್ತಿ ಇನ್ನೂ ಒಳಗಿದೆ. ಇದಕ್ಕೆ ಪೂರಕ ಶಿಕ್ಷಣ ನೀಡುವ ಕೆಲಸವೂ ಒಂದೆಡೆ ಆಗುತ್ತಿದೆ. ನಿಧಾನವಾಗಿ ಅಂತಹ ಮಕ್ಕಳು  ಬೆಳೆಯುವಾಗ ಶೀಘ್ರವಾಗಿ ಮೇಲೇರಿ ಕಣ್ಮರೆಯಾಗುವ ಅಜ್ಞಾನಿಗಳ ರಾಜಕೀಯವೂ ಅರ್ಥ ಆಗುತ್ತದೆ. ಹೀಗಾಗಿ ನಾವು ನಾವಾಗಿದ್ದರೆ ಪರರು ಯಾಕೆ ನಮ್ಮನ್ನು ಆಳುವರು? ಎಲ್ಲಾ ಶಕ್ತಿ ನಮ್ಮ ಭಾರತೀಯ ನಾರಿಯಲ್ಲಿತ್ತು,ಇದೆ,
ಇರುತ್ತದೆ. ಕಣ್ಣಿಗೆ ಕಾಣದ ಇದನ್ನು ಸ್ತ್ರೀ ಮನೆಯೊಳಗಿದ್ದೇ ಬೆಳೆಸಿಕೊಂಡರೆ ಯಾವ ರಾಜಕೀಯದ ಸಹಾಯ ಇಲ್ಲದೆಯೇ  ಸುರಕ್ಷಿತವಾಗಿರಬಹುದು. ಆದರೆ ಕೆಲವರಿಗೆ ಹೊರಗೆ ಹೋಗಿಯೇ  ತಮ್ಮ  ಸಂಸಾರ ನಡೆಸಲು ದುಡಿಯುವ ಪರಿಸ್ಥಿತಿ ಬಂದಿರುವುದು ಒಂದು ದುರಂತ. ಒಟ್ಟಿನಲ್ಲಿ ಸ್ತ್ರೀ ಶಕ್ತಿಯನ್ನು ಯಾವ ರಾಜಕೀಯ ಸಾಕುವ,ರಕ್ಷಿಸುವ ಅಗತ್ಯವಿಲ್ಲ.ಸ್ವಯಂ ಶಕ್ತಿಯನ್ನು ಭಾರತಮಾತೆ ಹೊಂದಿರುವಾಗ  ಹೊರಗಿನ ಭ್ರಷ್ಟಾಚಾರದ ಕೆಳಗೆ  ತಾನೇ ಸಿಲುಕಿರುವಾಗ ಹೇಗೆ ತಾನೇ  ದೇವರನ್ನು ತಾಯಿಯನ್ನು ಆಳಬಹುದು?
ಸ್ತ್ರೀ ಗೆ ಸ್ತ್ರೀ ವೈರಿಯಾದರೆ ಯಾರೂ ರಕ್ಷಣೆ ಮಾಡಲಾಗದು.
ಭೌತಿಕದಲ್ಲಿ ಹೆಸರು ಮಾಡಿದವರಿಗೆ ಅಧ್ಯಾತ್ಮದ ಸತ್ಯದ ಅರಿವಿದ್ದರೆ ಉತ್ತಮ ಸಾಧನೆ ಸಾಧ್ಯವಿದೆ.
ಸ್ತ್ರೀ ಶಕ್ತಿಯಿಲ್ಲದೆ ಭೂಮಿಯಿಲ್ಲ.ತಾಯಿಯಿಲ್ಲದೆ ಜನ್ಮವಿಲ್ಲ. ಜನನವಿಲ್ಲದೆ ಜೀವನವೇ ಇಲ್ಲ. ನಾವು ಜೀವಿಸುತ್ತಿರುವುದೆ ಜನನಿಯ  ಆಸರೆಯಿಂದ ಎಂದಾಗ ಅಂತಹ ಜನನಿಯನ್ನು ನಾನು ರಕ್ಷಿಸುವೆ ಎನ್ನುವ ವ್ಯಕ್ತಿಯ ಅಗತ್ಯವಿದೆಯೆ? ಇದ್ದರೂ ವ್ಯಕ್ತಿಯ ಹಿಂದಿನ ಶಕ್ತಿ ಯಾವುದು? ನಮ್ಮದೇ ಇರೋವಾಗ  ಇದರಲ್ಲಿ ರಾಜಕೀಯವಿದ್ದರೆ ನಾವು ನಮ್ಮ ಸ್ವಂತ ಶಕ್ತಿ ಕಳೆದುಕೊಂಡು  ಜೀವನದ ಉದ್ದೇಶ ಮರೆತು ನಡೆದಿರುವುದು ಸತ್ಯ. ಒಳಗೇ ಅಡಗಿರುವ ಅಮೃತವಾದ ಜ್ಞಾನ ಬಿಟ್ಟು ಹೊರಗಿನ ಸತ್ತ ಸತ್ಯವನ್ನು ನಂಬಿದರೆ ಸಿಗೋದು ಸಾವಷ್ಟೆ. ಎಲ್ಲರಿಗೂ  ಬರೋದನ್ನು  ತಡೆಯಲು ಅಸಾಧ್ಯ.ಹೀಗಿರುವಾಗ ಇದ್ದಾಗಲೇ ಆತ್ಮಜ್ಞಾನದೆಡೆಗೆ ,ಸತ್ಯದ ಕಡೆಗೆ  ಸ್ವತಂತ್ರ ವಾಗಿ  ನಡೆಯಲು ಸಾಧ್ಯವಾದರೆ ಇದೇ ನಾವು ಆ ತಾಯಿಗೆ ಕೊಡುವ ಗೌರವವಾಗುತ್ತದೆ. ನಾನೇ ದೇಶಕ್ಕಿಂತ ವಿದೇಶದ ವ್ಯಾಮೋಹದಲ್ಲಿ,ವಿದೇಶಿಗಳ ಸಹಕಾರದಲ್ಲಿ,ವಿದೇಶಿಗಳ ಬಂಡವಾಳದಲ್ಲಿ,ಸಾಲದಲ್ಲಿ ಜೀವನ ನಡೆಸಿರುವಾಗ ಸ್ವದೇಶದ ಋಣ ತೀರಿಸಲು ಕಷ್ಟ.ಅದರಲ್ಲೂ ತಾಯಿಯ ಋಣ ತೀರಿಸಲು  ಜ್ಞಾನವೇ ಬಂಡವಾಳ. ಜ್ಞಾನದಿಂದ ಕಷ್ಟಪಟ್ಟು ಸಂಪಾದಿಸಿದ ಹಣವು ಧರ್ಮ ರಕ್ಷಣೆಗೆ ಬಳಸಿದರೆ ಋಣ ತೀರುವುದು.
ಹಿಂದಿನ ನಾಲ್ಕು ವರ್ಣಗಳ ಪ್ರಕಾರ ಮೇಲಿನವರ ಆತ್ಮಜ್ಞಾನವು ಕ್ಷತ್ರಿಯರಿಗೆ ಧರ್ಮ ದ ಕಡೆಗೆ ನಡೆಸಿತ್ತು, ಧರ್ಮದ ವ್ಯವಹಾರದಿಂದ ಸಮಾಜದಲ್ಲಿ  ಆರ್ಥಿಕವಾಗಿ ಸಬಲರಾಗಿದ್ದರು ಮುಂದೆ ಅದೇ ಸೇವಾಕಾರ್ಯ ವಾಗಿ ಸಮಾಜದಲ್ಲಿನ  ಸಮಾನತೆಯೆಡೆಗೆ ಕಾಯಕವೇ ಕೈಲಾಸ ಎನ್ನುವ ಮಂತ್ರವಾಯಿತು. ದಾಸ,ಶರಣರ ತತ್ವ ಬೇರೆಯಲ್ಲ ವೇದಸಾರಗಳ ತತ್ವ ಬೇರೆಯಲ್ಲ.ಯಾವಾಗ ಈ ತತ್ವಗಳು ತಂತ್ರವಾಗಿ ಬಳಸಿ ಜನರನ್ನು ಆಳಲು ಹೊರಟವೋ ರಾಜಕೀಯವು ರಾಜಯೋಗವನ್ನು ಮೆಟ್ಟಿ ನಿಂತಿತು.ಈಗಲೂ ನಾವು ಕಾಣುತ್ತಿರುವ ಸತ್ಯ ಇದೇ ಆಗಿದೆ.ಆದರೆ ಆ ಸೂಕ್ನ ಸತ್ಯವನ್ನು ಕಾಣುವ ಜ್ಞಾನ ಕಳೆದುಕೊಂಡಿರುವ ಜನರಿಗೆ ತಿಳಿಸಿ ಹೇಳುವವರಿಲ್ಲದೆ ದೇಶವೇ  ಅಧರ್ಮದವರ ಕೈ ಸೇರಿ ಹಿಂದುಳಿದರೆ ಇದಕ್ಕೆ ಕಾರಣವೇ ನಮ್ಮವರ ಸಹಕಾರವು ಅಧರ್ಮದ ರಾಜಕೀಯದ ವಶವಾಗಿರೋದು. ಇದರಿಂದ ನಮ್ಮದೇ ಜ್ಞಾನ ಕುಸಿದರೆ ನಮಗೇ ನಷ್ಟ ಎನ್ನುವ ಸತ್ಯಕ್ಕೆ ಸಾವಿಲ್ಲ. ಸತ್ಯ ಎಷ್ಟೇ ತಿರುಚಿದರೂ ಮೂಲಕ್ಕೆ ಚ್ಯುತಿ ಬರೋದಿಲ್ಲ. ಆಳವಾಗಿರುವ ಬೇರನ್ನು  ಕೀಳುವ ಶಕ್ತಿ ರೆಂಬೆಕೊಂಬೆಗಳಿಗೆ ಇರೋದಿಲ್ಲವಲ್ಲ.ಹಾಗೆಯೇ ಪರರು ಎಷ್ಟೇ  ಮೇಲಿನ ರಾಜಕೀಯ ನಡೆಸಿದರೂ ಒಳಗಿರುವ ರಾಜಯೋಗದ ಕಡೆಗೆ ನಡೆಯುವುದು ಕಷ್ಟ. ಹೀಗಾಗಿ  ಮಾನವರು ಅದರಲ್ಲೂ ಭಾರತೀಯರು ವಿವೇಕಾನಂದರ ರಾಜಯೋಗವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಮಗೆ ಸ್ವಾತಂತ್ರ್ಯ ರಾಜಯೋಗದಲ್ಲಿ ಸಿಗುತ್ತದೆ. ಈಗ ನಮ್ಮವರೆ ನಮಗೆ ಶತ್ರುಗಳಾಗಿರೋದೆ ಅಜ್ಞಾನದ ಶಿಕ್ಷಣದ ಪ್ರಭಾವ. ಶಿಕ್ಷಣವೇ ರಾಜಕೀಯದ ವ್ಯವಹಾರಕ್ಕೆ ಇಳಿದರೆ ಜ್ಞಾನ ಎಲ್ಲಿರುತ್ತದೆ?
ರಾಜಕೀಯವು ಯೋಗಿಗಳ ದೇಶವನ್ನು ರೋಗಿಗಳ ದೇಶ ಮಾಡುತ್ತಾ ತಾಯಿಯನ್ನೇ ಆಳಲು ಹೊರಟಿದೆ ಎಂದರೆ ಇದು ಜ್ಞಾನವೆ? ಅಜ್ಞಾನವೆ?
ಅವರವರ ತಾಯಿಯ ಜ್ಞಾನಶಕ್ತಿಯನ್ನು  ತಿಳಿಯದೆ  ಮುಂದೆ ನಡೆದವರಿಗೆ ವಿಜ್ಞಾನ ಜಗತ್ತು ಮಾತ್ರ ಕಾಣುತ್ತದೆ. ಅಧ್ಯಾತ್ಮ ಜಗತ್ತಿನಲ್ಲಿ  ತಾಯಿಯೇ ಮೊದಲ ಗುರು.ವಿಪರ್ಯಾಸವೆಂದರೆ ನಮ್ಮ ಭಾರತದಲ್ಲಿ  ಆ ಶಕ್ತಿಗೆ  ಬಂಧನವಿದ್ದು  ಅವಳನ್ನು ಆಳಲು ಹೊರಟವರಿಗೆ ಅಧಿಕಾರ ಸ್ಥಾನಮಾನ ಹೆಚ್ಚಾಗಿ  ಗಣಿದಣಿಗಳಾಗಿದ್ದರೂ ಚಿನ್ನದಂತ ಶುದ್ದ ಮನಸ್ಸಿಲ್ಲದೆ  ಹಣದಿಂದ  ಭೂಮಿಯನ್ನು ಆಳಲು ಹೊರಟವರೆ ಹೆಚ್ಚು. ಇದಕ್ಕೆ ನಮ್ಮ ದೇಶದ ಸ್ಥಿತಿ ಹೀಗಿದೆ.
ಇಂದು ಜನರಿಗೆ  ತಮ್ಮದೇ ಆದ  ರೀತಿಯಲ್ಲಿ ಎಲ್ಲಾ ಪಕ್ಷಗಳು ಉಚಿತಗಳ ಭರವಸೆಯನ್ನು ಉಚಿತವಾಗಿ ಕೊಡುತ್ತಿವೆ. ಈ ಉಚಿತ ಕೊಡಲು ತಾವೆಷ್ಟು ದುಡಿದು ಗಳಿಸಿರುವರೆನ್ನುವ ಜ್ಞಾನವಿಲ್ಲದವರಿಂದ ಜನರು ಉಚಿತ ಪಡೆದಷ್ಟೂ ತಮ್ಮ ಸಾಲದ ಹೊರೆ ತಾವೇ ಹೊತ್ತು ಹೋಗುವುದಂತೂ ಖಚಿತ ಎನ್ನುವ ಜ್ಞಾನವಿದ್ದವರು ಸರ್ಕಾರದ ಹಿಂದಿರುವ ಉದ್ದೇಶ ಅರ್ಥ ವಾಗುತ್ತದೆ. ಎಲ್ಲಿಯವರೆಗೆ ಕೊಡುವವರಿರುವರೋ ಅಲ್ಲಿಯವರೆಗೆ ಪಡೆಯುವವರೂ ಇರುತ್ತಾರೆ. ಎಷ್ಟು ಪಡೆಯುವರೋ ಅಷ್ಟು ಸಾಲ ಪಡೆಯುವರು.
ಹಿಂದೆ ರಾಜಪ್ರಭುತ್ವ ವಿತ್ತುಇಂದುಪ್ರಜಾಪ್ರಭುತ್ವವಿದೆ.ಅಂದು ಕ್ಷಾತ್ರ ಧರ್ಮವಿತ್ತು,ಇಂದು ಪ್ರಜಾಧರ್ಮ ವಿದೆ.ಅಂದು ಧಾರ್ಮಿಕ ಶಿಕ್ಷಣವಿತ್ತು.ಇಂದು ಭೌತಿಕ ಶಿಕ್ಷಣವೇ ಜನರನ್ನು ಆಳುತ್ತಿದೆ. ಅಂದಿನ ಜ್ಞಾನ ಆಂತರಿಕ ಶುದ್ದಿಮಾಡಿತ್ತು.ಇಂದು ಭೌತಿಕ ಶುದ್ದಿಗೆ ಹೆಚ್ಚು ಹಣ ವ್ಯಯಿಸುತ್ತಿದೆ.
ಇದರಲ್ಲಿನ  ಅಧ್ವೈತ ತತ್ವವನ್ನು ರಾಜಯೋಗದಿಂದ ಮಾತ್ರ ತಿಳಿಯಬಹುದು. ಅಂದರೆ ಯಾವ ಪ್ರಜೆಗಳು ಸ್ವತಂತ್ರ ಜ್ಞಾನದಿಂದ  ದೇಶವನ್ನು  ಕಾಣುತ್ತಿರುವರೋ ಅವರಿಗೆ ಸತ್ಯ ಅರ್ಥ ವಾಗುತ್ತದೆ. ಪೂರ್ಣ ಸತ್ಯ ತಿಳಿಯದೆ ಮಧ್ಯವರ್ತಿ ಆಗಿರುವವರಿಗೆ  ವ್ಯವಹಾರವೇ ಮುಖ್ಯವಾಗುತ್ತದೆ. ವ್ಯವಹಾರದಲ್ಲಿ ಹಣವೇ ಮುಖ್ಯ.ಆತ್ಮ ಜ್ಞಾನವಲ್ಲ. ಇದು ಎಲ್ಲಾ ಕ್ಷೇತ್ರವನ್ನು  ರಾಜಕೀಯದೆಡೆಗೆ ನಡೆಸಿದರೆ ರಾಜಯೋಗ ಹಿಂದುಳಿದು ಹಿಂದೂ ಧರ್ಮ ಹಿಂದುಳಿದ ಧರ್ಮ ಆಗುವುದು ಸಹಜ. ನಮ್ಮ ಹಿಂದಿನ ಮಹಾತ್ಮರ  ಹಿಂದಿನ ಉದ್ದೇಶ  ಜೀವನ್ಮುಕ್ತಿ ಆಗಿದ್ದ ಕಾರಣ ತಮ್ಮ ಕರ್ಮ ವನ್ನು ಸತ್ಯ ಧರ್ಮದಿಂದ ತಿಳಿದು ನಡೆದು ನಡೆಸಿಕೊಂಡು ಬಂದ ಹಣವನ್ನು ಪರಮಾತ್ಮನ ಸೇವೆಗಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಬಳಸಿದ್ದರು. ಭಗವದ್ಗೀತೆ ಯೂ ಇದನ್ನು ತಿಳಿಸಿದೆ ಹಾಗಾದರೆ ಎಷ್ಟು ಭಾರತೀಯರು ಈ ಮಾರ್ಗ ಹಿಡಿದು ದೇಶ ಸೇವೆ ಮಾಡಿದ್ದಾರೆ.ಸರಳ ಜೀವನ, ಸ್ವಾವಲಂಬನೆ, ಸತ್ಯ ಧರ್ಮ, ನ್ಯಾಯ,ನೀತಿ,ಸಂಸ್ಕೃತಿ, ಸದಾಚಾರದಿಂದ ಆತ್ಮ ನಿರ್ಭರ ಭಾರತ ಸಾಧ್ಯವಾದರೂ ಅದು  ಆಂತರಿಕ ಜ್ಞಾನದಿಂದ  ಬೆಳೆದಾಗಲೇ ಸಾಧ್ಯ. ಹೊರಗಿನ ವಿಜ್ಞಾನದಿಂದ ತಾತ್ಕಾಲಿಕ  ಬದಲಾವಣೆ ಆದರೂ ಮೂಲ ಶುದ್ದಿಯಾಗದೆ ಸ್ವಚ್ಚಭಾರತ ಸಾಧ್ಯವೆ?  ಇದಕ್ಕಾಗಿ ಪ್ರಜೆಗಳೆ ಹಿಂದಿರುಗಿ ಒಳಹೊಕ್ಕು ಸತ್ಯ ತಿಳಿಯುವುದು ಅಗತ್ಯವಿತ್ತು. ಆದರೆ ಈ ಸತ್ಯ ಕಣ್ಣಿಗೆ ಕಾಣೋದು ಕಷ್ಟವಾಗಿ ನಮ್ಮವರೆ ನಮಗೆ ಶತ್ರು ಆದರೆ ನಮಗೆ ನಾವೇ ಶತ್ರುಗಳಷ್ಟೆ. ಇದಕ್ಕೆ ಪರಿಹಾರ ಹಣವಲ್ಲ.ಜ್ಞಾನದ ಶಿಕ್ಷಣ. ನಿಮ್ಮ ನಿಮ್ಮ ಮನೆಯ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ.

ಗೊತ್ತಿಲ್ಲದೆ ಮಾಡಿದ ಪಾಪಕ್ಕೆ ಕ್ಷಮೆಯಿದೆ.ಗೊತ್ತಿದ್ದೂ ಮಾಡಿದ ಪಾಪಕ್ಕೆ ಶಿಕ್ಷೆಯಿದೆ.

No comments:

Post a Comment