ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, January 29, 2023

ಕೆಟ್ಟದರಿಂದಲೇ ಒಳ್ಳೆಯದರ ಪರಿಚಯವೆ?

ಕೆಟ್ಟವರಿದ್ದಾಗಲೇ ಒಳ್ಳೆಯವರ ಪರಿಚಯ.ಕೆಟ್ಟವರನ್ನು ತಿದ್ದುವ ಆತ್ಮಶಕ್ತಿ ಜ್ಞಾನಶಕ್ತಿ ಒಳ್ಳೆಯವರಿಗಿದೆ. 
ಅಂಗುಲಿ ಮಾಲನು ಬುದ್ದನಿಂದ ಬದಲಾವಣೆ ಆಗಿಲ್ಲವೆ?  ಆದರೆ, ಯಾವಾಗ ಒಳ್ಳೆಯ ವೇಷಧಾರಿಗಳು ಕೆಟ್ಟವರ  ಸಹವಾಸದಲ್ಲಿದ್ದು ಜನರ ಕಣ್ಣಿಗೆ  ಮೋಸಮಾಡುವರೋ ಆಗಲೇ ಒಳ್ಳೆಯ ಶಕ್ತಿ ಹಿಂದುಳಿದು ಹಿಂದುಳಿದವರ ಸಂಖ್ಯೆಯನ್ನು ಮುಂದುವರಿದವರು ಆಳುವುದು.ಇದನ್ನು ರಾಜಕೀಯ ಎನ್ನಬಹುದು. ರಾ -ರಾವಣ, ಜ -ಜರಾಸಂಧ, ಕೀ -ಕೀಚಕ ಯ -ಯಮ, ಇದರಲ್ಲಿ ರಾವಣನಂತಹ ಮಹಾಶಿವಭಕ್ತ,
ಬಲಶಾಲಿಗೆ ಅಸುರರ  ಸಹವಾಸವಾದಂತೆ ಅಸುರನಾಗುತ್ತಾ   ಜರಾಸಂಧನಂತೆ ಎರಡೂ ಭಾಗದಲ್ಲಿ  ಆಕ್ರಮಣ ಮಾಡುತ್ತಾ ಕೀಚಕನಂತೆ ಸ್ತ್ರೀ ಯನ್ನು  ಕೆಟ್ಟದೃಷ್ಟಿಯಿಂದ ಕಂಡು  ಯಮಲೋಕಕ್ಕೆ ಹೋದಂತೆ ಇಂದೂ ನಾವು ರಾಜಕೀಯದ‌ ಕಪಿ ಮುಷ್ಟಿಯಲ್ಲಿದ್ದು ಸ್ವತಂತ್ರ ಭಾರತದ ಕನಸನ್ನು ಕಾಣುತ್ತಾ ಸ್ವತಂತ್ರವಾಗಿದ್ದ ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು ಜನರ ದಾರಿತಪ್ಪಿಸುವವರಿಗೆ ಕೊಡುವ ಸಹಕಾರದಿಂದ ಕೆಟ್ಟವರೆ ಬೆಳೆದಿರೋದು.
ಒಳ್ಳೆಯ ಶಕ್ತಿ ಹಿಂದುಳಿದು ಹಿಂದೂ ಧರ್ಮ  ಕುಸಿದರೂ  ನಾವು ಬದಲಾಗದೆ ದೇಶ ಬದಲಾಗದು. ದೇಹದೊಳಗೆ ಅಡಗಿರುವ ರಾಜಕೀಯತೆ  ನಮ್ಮನ್ನು ಭೌತಿಕದಲ್ಲಿ ಕುಣಿಸುತ್ತಿದೆ.ಅಧ್ಯಾತ್ಮ ಜಗತ್ತಿನಲ್ಲಿ  ಸತ್ಯ ಮರೆಯಾದರೆ ಮಿಥ್ಯವೇ ಬೆಳೆಯೋದು. ಹಾಗಾದರೆ ಸತ್ಯ ಯಾವುದು? ಎಲ್ಲಿದೆ? ಯಾರಲ್ಲಿದೆ?  ಸತ್ಯವೇ ದೇವರು. ಒಳಗೇ ಇರುವ ಆತ್ಮಸಾಕ್ಷಿ ಬಿಟ್ಟು ನಡೆದರೆ ಅಸತ್ಯ ದೇಹವನ್ನು ನಡೆಸುತ್ತಾ ಆಂತರಿಕ ಜಗತ್ತಿನಿಂದ ಮನಸ್ಸು ದೂರವಾಗಿ ಭೌತಿಕದೆಡೆಗೆ  ನಡೆದು  ಸಾಕಷ್ಟು ಹಣ,ಹೆಸರು,ಅಧಿಕಾರ ಪಡೆಯುವುದಕ್ಕಾಗಿ  ಅಧರ್ಮಕ್ಕೆ ಸಹಕಾರ ಕೊಟ್ಟಾಗ  ಮೂಲದ ಧರ್ಮ ಕರ್ಮಕ್ಕೆ ಚ್ಯುತಿ. ಪೋಷಕರ ಆಸ್ತಿ ಬೇಕು ಅವರ ಧರ್ಮ ಕರ್ಮ ಬೇಡ ಎಂದರೆ ಋಣ ತೀರದು. ಹೀಗಾಗಿ ಋಣ ತೀರಿಸಲು ಹಣದಿಂದ ಕಷ್ಟ.ಹಣವನ್ನು ಸುಜ್ಞಾನದಿಂದ ಸತ್ಕರ್ಮ,,ಸ್ವಧರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯದಿಂದ  ಗಳಿಸಿ ಅದರಿಂದ ಮಾಡಿದ ದಾನ ಧರ್ಮ ದಿಂದ ಮಾತ್ರ ಮುಕ್ತಿ ಮೋಕ್ಷವೆಂದು ತಿಳಿಸಿರೋದನ್ನು ತಿಳಿಸಬಹುದಷ್ಟೆ.ವಾಸ್ತವದಲ್ಲಿ ಎಲ್ಲರ ತಲೆ ಮೇಲೆ ಸಾಕಷ್ಟು ಸಾಲದ ಹೊರೆ ಹಾಕಿರುವ ಸರ್ಕಾರಗಳಿಗೆ ಸತ್ಯವೆಂದರೇನೆಂಬುದರ ಅರಿವಿಲ್ಲ. ಅರಿವಿನ ಶಿಕ್ಷಣವಿಲ್ಲ. ಮೂಲದ ಶಿಕ್ಷಣವೇ ಮೂಲೆ ಸೇರಿಸಿ ಹೊರಗಿನಿಂದ  ವಿಷಯ  ತಿಳಿಸಿದ ರಾಜಕೀಯ ಮಹಿಳೆ ಮಕ್ಕಳನ್ನು ಮನೆಯಿಂದ ಹೊರಬರುವಂತೆ ಮಾಡಿ  ಒಳಗಿದ್ದ ಆತ್ಮಬಲ ಕುಸಿದಿದೆ. ಅಧ್ಯಾತ್ಮ  ಶಿಕ್ಷಣವು  ಮಾನವನನ್ನುಆತ್ಮನಿರ್ಭರ ಮಾಡಿಸುವುದು ಸತ್ಯ. ಆದರೆ ಭಾರತದ ಶಿಕ್ಷಣವೇ ಮೂಲೆ ಸೇರಿಸಿ ಯಾರ ಆತ್ಮಬಲ ಹೆಚ್ಚಾಗಿದೆ ಎನ್ನುವ ಬಗ್ಗೆ ಆತ್ಮಾವಲೋಕನ ನಡೆಸಿಕೊಂಡರೆ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸಮಸ್ಯೆಗೆ ಪರಿಹಾರ ಒಳಗೇ ಸಿಗುತ್ತದೆ. ಆದರೆ ಇದಕ್ಕೆ ಸಾಕಷ್ಟು ಒಗ್ಗಟ್ಟಿನ ಅಗತ್ಯವಿದೆ,ತತ್ವದ ಅಗತ್ಯವಿದೆ,ಶಾಂತಿಯ ಅಗತ್ಯವಿದೆ, ಇದು ಮನುಕುಲಕ್ಕೆ ಅಗತ್ಯವಿದೆ.ಅವರವರ ದೇಶದ ಭವಿಷ್ಯ ಅವರ ಪ್ರಜೆಗಳ ಸತ್ಯಜ್ಞಾನದ ಮೇಲಿದೆ. ಇದನ್ನು ಭಾರತದ ಮಹಾತ್ಮರುಗಳು ನಡೆದು ತೋರಿಸಿರುವ ಕಾರಣ ಭಾರತ ವಿಶ್ವಗುರು ಆಗಿತ್ತು. 
ರಾಜಯೋಗದ ವಿಚಾರದಲ್ಲಿ ತಪ್ಪಾಗಿ  ಅರ್ಥ ಮಾಡಿಕೊಂಡು  ಅಜ್ಞಾನದ  ಜನರನ್ನು   ಆಳಲು ಹೊರಟು ಸಾಲದ ಸುಳಿಯಲ್ಲಿ  ದೇಶವನ್ನು  ನಡೆಸುತ್ತಾ ವಿದೇಶದವರೆಗೂ ಭಾರತ  ನಡೆದಿದೆ.ಆದರೆ ಸ್ವದೇಶದಲ್ಲಿರುವ ಭಾರತೀಯ ತತ್ವಜ್ಞಾನ ಹಿಂದುಳಿದು ತಂತ್ರವೇ ಮುಂದೆ ಬಂದರೆ ಸ್ವತಂತ್ರ ರು ಯಾರು? 
ಬಡಬ್ರಾಹ್ಮಣನ ಶ್ರೀಮಂತ ಜ್ಞಾನ ಕಾಣಲಿಲ್ಲ, ಬಡರೈತನ ಶ್ರೀಮಂತ ಕರ್ಮ ಕಾಣಲಿಲ್ಲ. ನಡುವಿರುವ ರಾಜಕೀಯ ಹಾಗು ವ್ಯವಹಾರವೇ  ತನ್ನ ಸ್ಥಾನಮಾನ ಬೆಳೆಸಿಕೊಂಡು  ಜನರ ಜೀವನ  ಮಧ್ಯವರ್ತಿಗಳ ಕುತಂತ್ರದ ವಶದಲ್ಲಿದೆ. ಇದೊಂದು ಅಧ್ವೈತ, ದ್ವೈತ ವಿಶಿಷ್ಟಾದ್ವೈತ ದ  ಸಾಮಾನ್ಯಜ್ಞಾನವಾಗಿರುವ ಕಾರಣ ಇದಕ್ಕೆ ಬೆಲೆಯಿಲ್ಲದೆ ಸಾಮಾನ್ಯರಿಂದ ನಡೆದಿರುವ  ದೇಶದಲ್ಲಿ  ಸಾಮಾನ್ಯಜ್ಞಾನವಿಲ್ಲದ  ಪ್ರಜೆಗಳೇ  ಮೋಸಹೋಗಿರುವುದು ಸತ್ಯ. ಸ್ವಾಮಿ ವಿವೇಕಾನಂದರ ರಾಜಯೋಗವು ಸಂನ್ಯಾಸದಿಂದ ಯೋಗವೆಂದಿರಲಿಲ್ಲ. ಆಶ್ರಮ ದಿಂದ ಧರ್ಮ ರಕ್ಷಣೆ ಎಂದರು ಅಂದರೆ ಬಾಲ್ಯ,ಯೌವನ,ಗೃಹಸ್ಥ, ವಾನಪ್ರಸ್ಥದ ನಂತರದ ಸಂನ್ಯಾಸವೇ ನಿಜವಾದ ಸಂನ್ಯಾಸ ಧರ್ಮ ವಾಗಿತ್ತು.ಇಲ್ಲಿ ಯಾವ ಅಧಿಕಾರ,ಹಣ,ಸ್ಥಾನಮಾನವಿಲ್ಲದ ಯೋಗವಿತ್ತು.  ಜೀವನದ ಅನುಭವವು ಯೋಗದಿಂದ ತಿಳಿದು ಪರಮಾತ್ಮನ ದರ್ಶ ನಮಾಡಿದವರೆ ಭಾರತೀಯ ಯೋಗಿಗಳಾಗಿದ್ದರು.  ಪ್ರಜಾಪ್ರಭುತ್ವ ನಡೆದಿರೋದು ಪ್ರಜೆಗಳಹಣಬಲ
,ಜ್ಞಾನಬಲದಲ್ಲಿ ಎಂದಾಗ ಪ್ರಜೆಗಳಿಗೆ ಯಾವ ರೀತಿಯಲ್ಲಿ  ದೇಶೀಯ ಶಿಕ್ಷಣ ನೀಡಿ ಸಬಲರಾಗಿಸಿ ಆಳಿದ್ದಾರೆ? ಇದನ್ನು ಎಲ್ಲಾ ಕ್ಷೇತ್ರದವರೂ  ಅರ್ಥ ಮಾಡಿಕೊಂಡರೆ ನಮ್ಮ ಜೀವನ ಸ್ವತಂತ್ರ ವಾಗಿದೆಯೆ? ಅಥವಾ ಅತಂತ್ರಸ್ಥಿತಿಗೆ ತಲುಪಿದೆಯೆ ಇದೂ ತಿಳಿದು ನಮ್ಮೊಳಗೇ ಇರುವ ಸತ್ಯಜ್ಞಾನದೆಡೆಗೆ ನಡೆಯುವ ಸ್ವಾತಂತ್ರ್ಯ ಈಗಲೂ ಇದೆ. ಒಟ್ಟಿನಲ್ಲಿ ಕೆಟ್ಟವರಿಂದಲೂ ಪಾಠ ಕಲಿಯುವ ಅವಕಾಶ ಭಗವಂತ ನೀಡುತ್ತಾನೆ. ಕಾರಣ ಅವನಿಗೆ ಇಬ್ಬರೂ ಸರಿಸಮಾನರಲ್ಲವೆ? ನಾನು  ಒಳ್ಳೆಯವನೆಂದು ತೋರಿಸಿಕೊಳ್ಳಲು  ಒಳ್ಳೆಯ ಕೆಲಸ ಮಾಡಬೇಕು. ಇದನ್ನು ತೋರಿಕೆಗಾಗಿ ಮಾಡದೆ ನನ್ನ ಧರ್ಮ ವೆಂದು ಮಾಡುವುದು ಇನ್ನೂ ಒಳ್ಳೆಯದೆನ್ನುವರು. ಯಾರೂ ಗುರುತಿಸದಿದ್ದರೂ ಪರಮಾತ್ಮನು ಗುರುತಿಸುತ್ತಾನೆನ್ನುವ ಅರಿವೇ ಒಳ್ಳೆಯದು. ಅರಿವೇ ಗುರು,ಅರಿವೇ ದೇವರು ಅರಿವಿನ ಸದ್ಬಳಕೆಯಿಂದ ಲೋಕಕಲ್ಯಾಣ. ಇಷ್ಟಕ್ಕೂ  ನಾವ್ಯಾಕೆ ಒಳ್ಳೆಯದು ಮಾಡಬೇಕು? ಆತ್ಮೋನ್ನತಿಗಾಗಿ ಎಂದಾಗ ಇದಕ್ಕೆ ಹಣಕ್ಕಿಂತ ಮೊದಲು ಆತ್ಮಜ್ಞಾನದ ಶಿಕ್ಷಣವಿರಬೇಕೆನ್ನುವುದೇ ಹಿಂದೂ ಧರ್ಮ. ಪರಧರ್ಮ ವಿರೋಧಕ್ಕೆ ಕೊಡುವ ಸಮಯದಲ್ಲಿ ಸ್ವಧರ್ಮದವರನ್ನು  ಬಾಳಲು ಬಿಟ್ಟರೆ ಉತ್ತಮ. ಹಾಗೆಯೇ ವಿದೇಶಿಗಳ ಕೈ ಜೋಡಿಸಿ ದೇಶದೊಳಗೆ ಕರೆತರುವ ಮೊದಲು ನಮ್ಮವರ ಕೈ ಸ್ವಚ್ಚಗೊಳಿಸಿಕೊಂಡು ಉತ್ತಮ ಕೆಲಸ ಕೊಟ್ಟು ಬದುಕಲು ಬಿಟ್ಟಿದ್ದರೆ ನಮ್ಮ ದೇಶ ಈ ಸ್ಥಿತಿಗೆ ಬರುತ್ತಿರಲಿಲ್ಲ. ಈ ವಿಚಾರದಲ್ಲಿ  ಸಂಸಾರದೊಳಗಿನ ಎಲ್ಲಾ ಸದಸ್ಯರುಗಳ ಸಂಪಾದನೆಯು  ಎಲ್ಲರ  ಒಗ್ಗಟ್ಟನ್ನು ಬೆಳೆಸುವತ್ತ ನಡೆಸಿದ್ದ ಹಿಂದಿನ ಕುಟುಂಬವು ಇಂದು ಬೇರೆ ಬೇರೆಯಾಗಿ ಹೊರಬಂದು ಬಿಕ್ಕಟ್ಟಿನ ಸಂಸಾರವಾಗಿರುವಾಗ ಸರ್ಕಾರ ಕಾರಣವಾಗದು. ನಮ್ಮದೇ ಅಜ್ಞಾನದ ಸಹಕಾರವೇ ಕಾರಣ. ಯೋಗಿಗಳ ದೇಶವನ್ನು ಭೋಗದೆಡೆಗೆ ನಡೆಸಿಕೊಂಡು ರೋಗ ಹರಡುವ ಮಧ್ಯವರ್ತಿಗಳು ,ಮಾನವರು,
ಮಹಿಳೆಯರು, ಮಕ್ಕಳು  ದೇಶಕ್ಕಾಗಿ ನಾವೇನು ಮಾಡಬಹುದು ಎನ್ನುವ ಪ್ರಶ್ನೆ ಹಾಕಿಕೊಳ್ಳುವ ಬದಲು ದೇಶದಿಂದ ನನಗೇನು ಲಾಭ ಎನ್ನುವ ಪ್ರಶ್ನೆ ಮಾಡುವುದು ಅಜ್ಞಾನವೆನ್ನುವರು. ಇಲ್ಲಿ ಎಲ್ಲಾ ಬಡವರೆ ಕಾರಣ ಎಲ್ಲರೂ ಸರ್ಕಾರದ ಹಿಂದೆ ನಡೆದವರೆ.ಸರ್ಕಾರ ವಿದೇಶದ ಹಿಂದೆ ನಡೆದಿದೆ.ಹಾಗಾದರೆ ನಮ್ಮ ದೇಶ ನಡೆದಿರೋದು  ಯಾರಿಂದ? ದೇಶದೊಳಗೆ  ಜನ್ಮಪಡೆದ ಪರಧರ್ಮದವರು ನಮಗೆ ಶತ್ರುವಾದರೆ ವಿದೇಶದಿಂದ ಬಂದವರು ಮಿತ್ರರಾಗಲು ಸಾಧ್ಯವೆ? ನಮ್ಮೊಳಗೇ ಇರುವ ಅತಿಯಾದ ಅಹಂಕಾರ ಸ್ವಾರ್ಥ ಎನ್ನುವ ಶತ್ರುಗಳಿಂದ ಮುಕ್ತಿ ಪಡೆದರೆ ಯೋಗ ಕೂಡಿ ಬರುತ್ತದೆ. ಸೃಷ್ಟಿ ಗೆ ತಕ್ಕಂತೆ ಸ್ಥಿತಿ,ಸ್ಥಿತಿಗೆ ತಕ್ಕಂತೆ ಲಯ ಕಾರ್ಯ ನಿರಂತರ ನಡೆಯುತ್ತಿದ್ದರೂ ಎಲ್ಲಾ ನನ್ನಿಂದಲೇ ಎನ್ನುವ ಮಾನವನ ಅಜ್ಞಾನಕ್ಕಿಂತ ದೊಡ್ಡ ಕೆಟ್ಟದ್ದು ಯಾವುದೂ ಇಲ್ಲವೆನ್ನುವರು. ಬದಲಾವಣೆ  ಆಗದಿದ್ದರೆ  ನಷ್ಟವಿಲ್ಲ. ಬದಲಾವಣೆ ಮಾಡೋರಿಗೆ ಸುಖವಿಲ್ಲ. ಸುಖವಾಗಿರೋರು ಬದಲಾಗೋದಿಲ್ಲ. ಸುಖ ಶಾಶ್ವತವಲ್ಲ.

No comments:

Post a Comment