ಹೊಸವರ್ಷ ಯಾವುದು? ಯಾಕೆ?
ವರ್ಷಗಳೇನೂ ಉರುಳುತ್ತಿದೆ ಆದರೆ ಮಾನವನ ಹೊಸ ಚಿಂತನೆಯು ಬದಲಾಗಿಸುವುದು ಬಹಳ ಕಷ್ಟ. ಭೌತಿಕದಲ್ಲಿ ನಡೆಸುವ ವರ್ಷಾಚರಣೆಯಲ್ಲಿಯೇ ಇದರ ಹೆಚ್ಚು ಪ್ರಭಾವ ಪ್ರಕೃತಿಯ ಮೇಲಾಗುತ್ತಿದೆ. ಪ್ರಕೃತಿಯಿಲ್ಲದೆ ಪುರುಷನಿಲ್ಲ. ಆತ್ಮನಿಲ್ಲದ ಮಾನವನಿಲ್ಲ. ಹೀಗಾಗಿ ಒಂದೊಂದು ಹೊಸ ವಿಚಾರವು ಆತ್ಮನೆಡೆಗೆ ಕಳುಹಿಸುವ ಪ್ರಯತ್ನ ಮಾನವ ಮಾಡಿಕೊಂಡರೆ ಮಾತ್ರ. ಹೊಸತನ, ಹೊಸಹುರುಪು,
ಹೊಸಹರುಷ,ಹೊಸವರುಷಕ್ಕೆ ಅರ್ಥ ವಿರುತ್ತದೆ. ಕ್ಯಾಲೆಂಡರ್ ಪ್ರಕಾರದ ಹೊಸವರುಷದಲ್ಲಿ ಮಾನವನ ಮನಸ್ಸಿಗೆ ಮನರಂಜನೆ ನೀಡುವ ಕಾರ್ಯಕ್ರಮಗಳು ನಡೆಯುತ್ತವೆ. ಆನಂತರ ಬರುವ ಹಿಂದೂ ತಾತ್ವಿಕ ಎತ್ತಿ ಹಿಡಿಯುವ ಹೊಸ ವರುಷ ಹಿಂದೂಗಳೆ ಒಟ್ಟಾಗಿ ಮಾಡದಿರುವ ಕಾರಣದಿಂದಾಗಿ ಪ್ರಕೃತಿಯಲ್ಲಿ ಸಾಕಷ್ಟು ಏರು ಪೇರುಗಳಾಗುತ್ತದೆ. ಇಲ್ಲಿ ಹೊಸವರುಷವು ನಮ್ಮ ಪ್ರಕೃತಿಯ ಬದಲಾವಣೆಯ ಮೇಲೆ ಯುಗಾದಿಯ ಆಚರಣೆಯಿದೆ. ಈ ಹಬ್ಬವನ್ನು ಎಲ್ಲಾ ಭಾರತೀಯರೂ ಭಾರತದೊಳಗಿರುವವರು ಆಚರಣೆ ಮಾಡೋದಿಲ್ಲ. ಕೆಲವರು ದೀಪಾವಳಿ ಎನ್ನುವರು,ಕೆಲವರು ಸಂಕ್ರಾಂತಿ ಎಂದರೆ ಕೆಲವರು ಯುಗಾದಿ ಹೀಗೇ ಬೇರೆ ಬೇರೆ ದಿನದಲ್ಲಿ ಆಚರಿಸುವರು.ಒಟ್ಟಿನಲ್ಲಿ ಆಚರಣೆಯಿದೆ ಒಂದೆ ರೀತಿಯಲ್ಲಿ ಒಂದೇ ದಿನದಲ್ಲಿ ಮಾಡಲಾಗದೆ ಅವರವರ ಹೊಸವರ್ಷಕ್ಕೆ ದೇಶ ನಡೆದಿದೆ. ಆದರೆ ಕ್ಯಾಲೆಂಡರ್ ಹೊಸವರ್ಷವು ಬೇರೆ ಬೇರೆ ದೇಶದವರೂ ಆಚರಿಸುವ ಜೊತೆಗೆ ಹಿಂದೂಗಳೂ ಸೇರಿ ಅದಕ್ಕೆ ಶಕ್ತಿ ನೀಡುತ್ತಾರೆ. ಈ ಶಕ್ತಿ ಭೌತಿಕಾಸಕ್ತಿಯೆಡೆಗೆ ಹೆಚ್ಚಾಗಿ ನಡೆಸುವುದಂತೂ ಸತ್ಯ. ಅಧ್ಯಾತ್ಮದ ಪ್ರಕಾರ ಯಾವ ಆಚಾರ,ವಿಚಾರ,ಪ್ರಚಾರದಿಂದ ಮಾನವನ ಆತ್ಮಶುದ್ದಿ ಆಗುವುದೋ ಅದೇ ನಿಜವಾದ ಧರ್ಮ. ಇಲ್ಲಿ ನಾವು ಪರರಿಗೆ ಸಹಕರಿಸುವುದು ತಪ್ಪಲ್ಲ ಆದರೆ ನಾವೇ ಪರಕೀಯರಾಗಿ ನಮ್ಮತನ ನಮ್ಮ ದೇಶ,ನಮ್ಮ ವರ್ಷದ ಜೊತೆಗೆ ಹರುಷವನ್ನು ಅರ್ಥ ಮಾಡಿಕೊಳ್ಳಲು ಸೋತರೆ ಇದು ಯಾರ ತಪ್ಪು? ಇದಕ್ಕೆ ಪ್ರತಿಫಲ ಯಾರು ಉಣ್ಣಬೇಕು?
ನಮ್ಮಜೊತೆಗೆ ಹೆಜ್ಜೆ ಹಾಕುವ ಮಕ್ಕಳನ್ನು ತಪ್ಪು ದಾರಿ ಹಿಡಿದರು ಎಂದರೆ ಅದಕ್ಕೆ ಸಹಕರಿಸಿದವರು ಯಾರು?
ಪ್ರಕೃತಿ ಈ ಸಮಯದಲ್ಲಿ ತನ್ನ ಹಸಿರನ್ನು ಕಳೆದುಕೊಂಡು ಒಣಗುತ್ತಿರುವಾಗ ಅದರ ಜೊತೆಗೆ ಇರುವಮಾನವ ಸಂತೋಷದಿಂದ ಕಾರ್ಯಕ್ರಮ ಮಾಡಿಕೊಂಡು ಮನರಂಜನೆಯಲ್ಲಿ ಕಾಲಕಳೆದರೆ ಪ್ರಕೃತಿಗೆ ವಿರುದ್ದ ನಡೆದಂತೆ ಎನ್ನುವುದು ಹಿಂದೂ ಧರ್ಮ ಶಾಸ್ತ್ರ ಜ್ಞಾನ.
ಇದನ್ನು ಒಪ್ಪಿಕೊಂಡು ಹಿಂದೂಗಳು ಈ. ಸಮಯದಲ್ಲಿ ಹೆಚ್ಚು ಹೆಚ್ಚು ದೇವತಾರಾಧನೆಯಲ್ಲಿರುತ್ತಿದ್ದರು. ಚಳಿಗಾಲದ
ಚಳಿಗೆ ಸೋಮಾರಿತನ ಆವರಿಸುವ ಕಾರಣದಿಂದ ಕೆಲವು ಆಚರಣೆಗಳಿಂದ ಮನಸ್ಸನ್ನು ಶುದ್ದವಾಗಿಡಲು ಯೋಗ ಮಾರ್ಗ ತಿಳಿಸಿದರು. ಭೋಗದ ಜೀವನದಲ್ಲಿ ಯೋಗವನ್ನು
ಹಿಡಿಯಲಾಗದವರು ಆ ಸಮಯದಲ್ಲಿ ಇನ್ನಷ್ಟು ಭೌತಿಕ ಆಚರಣೆಯಲ್ಲಿ ಮನಸ್ಸನ್ನು ಎಚ್ಚರವಾಗಿಟ್ಟುಕೊಳ್ಳಲು ಕಾರ್ಯಕ್ರಮ ನಡೆಸುತ್ತಾರೆ.ಒಟ್ಟಿನಲ್ಲಿ ಮಾನವ ಸೋಮಾರಿ ಆಗದಿರೋದೆ ಇದಕ್ಕೆ ಕಾರಣ. ಇದರ ಜೊತೆಗೆ ಪ್ರಕೃತಿಯನ್ನು ಅರ್ಥ ಮಾಡಿಕೊಂಡರೆ ಉತ್ತಮ ಜೀವನವೆನ್ನಬಹುದು.
ಇರಲಿ ಆಚರಣೆ ಬೇಡ ಭ್ರಷ್ಟಾಚಾರ. ಇರಲಿ ಮನರಂಜನೆ ಬೇಡ ಆತ್ಮವಂಚನೆ, ಇರಲಿ ಆರೋಗ್ಯ ಬೇಡ ರೋಗಕ್ಕೆ ಕಾರಣವಾಗುವ ಅನಾವಶ್ಯಕ ಆಹಾರ,ವಿಹಾರ. ಇತಿಮಿತಿ ಮಾನವನಿಗೆ ಅಗತ್ಯ. ಇಲ್ಲಿ ನಮ್ಮೊಳಗೇ ದೇವರ ತತ್ವದ ಜೊತೆಗೆ ಅಸುರರ ತಂತ್ರವೂ ಇದೆ ಎನ್ನುವ ಸತ್ಯ ನಾವೇ ಕಂಡುಕೊಳ್ಳಲು ಮೊದಲು ನಾವು ನಾವಾಗಿರಲು ನಮ್ಮತನ ಉಳಿಸಿಕೊಳ್ಳಲು ನಮ್ಮವರ ಹಿಂದಿನ ಆಚರಣೆಯ ಉದ್ದೇಶ
ಅರ್ಥ ಮಾಡಿಕೊಂಡರೆ ಸಾಕು ಹಿಂದೂ ಧರ್ಮ ಬೇರೆ ದೇಶದವರೆಗೂ ಹರಡಿರಬಹುದು.ನಮ್ಮಲ್ಲೇ ಇಲ್ಲದಿದ್ದರೆ ಹಿಂದೂ ದೇಶ ಎನ್ನುವ ಅಧಿಕಾರ ನಮಗಿಲ್ಲ. ಯಾರೂ ಯಾವುದನ್ನೂ ಬೆಳೆಸಿಲ್ಲ. ಹೀಗಾಗಿ ಅಳಿಸೋದಕ್ಕೆ ನಾವ್ಯಾರು? ಸತ್ಯ ಒಂದೇ ದೇಶ ಒಂದೇ, ಧರ್ಮ ಒಂದೇ ಆಚರಣೆಗಳು ಅಸಂಖ್ಯಾತ ವಾದರೆ ಒಂದೇ ದೇವರಾಗಲಿ, ಒಗ್ಗಟ್ಟಾಗಲಿ, ತತ್ವದ ಉದ್ದೇಶವಾಗಲು ಸಾಧ್ಯವಿಲ್ಲ.
ಮೊದಲು ಮಾನವನಾಗೆಂದರೆ ಮೊದಲು ಮಾನವೀಯ ತತ್ವ ಅರ್ಥ ಮಾಡಿಕೊಳ್ಳಬೇಕು. ತಂತ್ರದಿಂದ ಎಷ್ಟೇ ಆಳಿದರೂ ಜೀವ ಅತಂತ್ರವೇ.ಹೀಗಾಗಿ ಶುದ್ದ ಮನಸ್ಸಿಗೆ ಬೇಕಾದ ತತ್ವವನ್ನು ಒಳಗೆ ಅಳವಡಿಸಿಕೊಂಡರೆ ಹೊರಗಿನ ಆಚರಣೆಯ ಅಗತ್ಯವೇ ಇರದು.ಇದ್ದರೂ ಶುದ್ದವಾಗಿರುವುದು.
ಕ್ಯಾಲೆಂಡರ್ ಪ್ರಕಾರ ಆಚರಿಸುವ ಹೊಸ ವರ್ಷ ನಮ್ಮ ವ್ಯವಹಾರಿಕ ಜೀವನವಾದರೆ, ಹಿಂದೂ ಪಂಚಾಂಗದ ಹೊಸ ವರ್ಷವು ನಮ್ಮ ಧಾರ್ಮಿಕ ಜೀವನವಾಗಿರುತ್ತದೆ. ಮೊದಲು ಧರ್ಮ ನಂತರವೇ ವ್ಯವಹಾರ ಬೆಳೆದಿರುವಾಗ ಈಗ ನಾವು ವ್ಯವಹಾರದಿಂದ ಧರ್ಮ ರಕ್ಷಣೆ ಮಾಡಬಹುದೆ? ವ್ಯವಹಾರದಲ್ಲಿ ಹಣ ಮೊದಲು ಧರ್ಮದಲ್ಲಿ ಜ್ಞಾನವೇ ಮೊದಲು, ಹಣಕಣ್ಣಿಗೆ ಕಾಣುತ್ತದೆ ಜನಬಲ ಹೆಚ್ಚು,ಜ್ಞಾನ ಕಣ್ಣಿಗೆ ಕಾಣದಿದ್ದರೂ ಆತ್ಮಬಲ ಹೆಚ್ಚುವುದು. ಇದೇ ಕಾರಣಕ್ಕೆ ಹಿಂದೂ ಧರ್ಮ ಹಿಂದುಳಿದಿದೆ. ಹಿಂದೂಗಳಾದವರೆ ಇದನ್ನು ವಿರೋಧಿಸಿದರೆ ಪರಧರ್ಮಕ್ಕೆ ಬಲ ಹೆಚ್ಚುವುದಲ್ಲವೆ? ಒಟ್ಟಿನಲ್ಲಿ ಎಲ್ಲಾ ಮಾನವರೆ ಮಾನವ ಧರ್ಮ ದೊಡ್ಡದು. ಹಿಂದೆ ಎಷ್ಟೋ ಮಹಾತ್ಮರುಗಳು ಯಾವ ಆಚರಣೆಯಿಲ್ಲದೆಯೇ ಮುಕ್ತಿ ಪಡೆದರು ಎಂದರೆ ಆತ್ಮಶುದ್ದವಿದ್ದರೆ ಮಾನವ ಮಹಾತ್ಮನಾಗಿ ಮುಕ್ತಿ ಪಡೆಯುತ್ತಾನೆ. ಆತ್ಮಶುದ್ದಿಯೇ ಇಲ್ಲದ ಮೇಲೆಆಚರಣೆಯು ವ್ಯರ್ಥ ಎನ್ನುವ ವಿಚಾರವೆ ದಾಸರು,
ಶರಣರು ತಮ್ಮ ವಚನಸಾಹಿತ್ಯದಲ್ಲಿ ತಿಳಿಸಿದ್ದರು. ಭೌತಿಕ ವಿಜ್ಞಾನ ಬೆಳೆದಂತೆಲ್ಲಾ ಧಾರ್ಮಿಕ ಜ್ಞಾನ ಕುಸಿಯುತ್ತಾ ಸತ್ಯ ತಿಳಿಯದೆದಾರಿತಪ್ಪಿ ನಡೆದವರ ಹಿಂದೆ ಮತ್ತಷ್ಟು
ಜನರು ನಡೆಯುತ್ತಾ ದೈವತ್ವ ಒಳಗಿದ್ದರೂ ಹೊರಗೆ ಹುಡುಕಿದರೆ ಸಿಗದೆ ತಂತ್ರಕ್ಕೆ ಬಲಿಯಾಗಿ ತತ್ವ ಕೇವಲ ಪ್ರಚಾರಕ್ಕೆ ಸೀಮಿತವಾಗುತ್ತದೆ.
ಹೊಸವರ್ಷಕ್ಕೆ ಸಹಕರಿಸುವ ಸರ್ಕಾರ ನಮ್ಮ ಆಚರಣೆಯ ಉದ್ದೇಶ ತಿಳಿಸಿ ಬೆಳೆಸುವ ಶಿಕ್ಷಣದ ಬದಲಾವಣೆಯಲ್ಲಿ ಸೋತಿರುವುದಕ್ಕೆ ಕಾರಣವೇ ನಮ್ಮ ಅಜ್ಞಾನದ ಅಸಹಕಾರ.
No comments:
Post a Comment