*ಧರ್ಮಕ್ಕೆ ತಿಂದು ಅಭ್ಯಾಸ ಬೆಳೆಸಿಕೊಂಡವನು ದುಡಿದು ತಿನ್ನಲು ಮನಸು ಮಾಡಲಾರ.**
ದುಡಿದು ತಿನ್ನದೆ ಆತ್ಮನಿರ್ಭರ ಭಾರತವಾಗೋದಿಲ್ಲ. ನಮ್ಮ ಧರ್ಮ ಕರ್ಮ ಗಳಲ್ಲಿ ಸ್ವಚ್ಚತೆ, ಸತ್ಯ, ಸದಾಚಾರ, ಸ್ವಾಭಿಮಾನ ,ಸ್ವಾವಲಂಬನೆಯ ತತ್ವಜ್ಞಾನವಿದ್ದು ಪರಮಾತ್ಮನಿಗೆ ಮೀಸಲಾಗಿಟ್ಟವರಿಗೆ ಮೇಲಿನಮುಕ್ತಿ ಮೋಕ್ಷ
ಎನ್ನುವ ಅಧ್ಯಾತ್ಮ ಸತ್ಯ ಅರ್ಥ ವಾಗಲು ರಾಜಕೀಯದಿಂದ ಅಸಾಧ್ಯ. ರಾಜಯೋಗದಿಂದ ಸಾಧ್ಯವಿದೆ ಇದನ್ನು ಸ್ವಾಮಿ ವಿವೇಕಾನಂದರು ಭಾರತ ಸ್ವಾತಂತ್ರ್ಯ ಕಳೆದುಕೊಳ್ಳಲು ರಾಜಕೀಯವೆ ಕಾರಣವೆಂಬ ಸತ್ಯವನ್ನು ಅಂದೇ ತಿಳಿಸಿದ್ದರು.
ಅಂದಿನ ಧಾರ್ಮಿಕ ಗುರು ಹಿರಿಯರಲ್ಲಿದ್ದ ಧಾರ್ಮಿಕ ಜ್ಞಾನ
ಅಂದಿನ ರಾಜರಿಗೂ ಅನ್ವಯಿಸುತ್ತಿತ್ತು ಹಾಗೇ ಪ್ರಜೆಗಳೂ ನಡೆಯುವ ಅವಕಾಶವಿತ್ತು. ಕಾಲಾನಂತರದ ಭೌತಿಕ ಜ್ಞಾನದ ಅಹಂಕಾರ ಸ್ವಾರ್ಥ ಕ್ಕೆ ತತ್ವವೇ ತಂತ್ರವಾಗುತ್ತಾ ಮಾನವ ತನ್ನ ಅಸುರ ಶಕ್ತಿಯಿಂದ ಆಳಿದ ಪರಿಣಾಮವೇ ಇಂದಿಗೂ
ಅಜ್ಞಾನದ ಅಸಮಾನತೆಗೆ ಅಜ್ಞಾನದಿಂದಲೇ ಪರಿಹಾರದ ಹಣ ಕೊಟ್ಟು ಇನ್ನಷ್ಟು ಸಾಲದ ದವಡೆಗೆ ಮಾನವನ ಜೀವ
ಸಿಲುಕಿ ಸಾಯುತ್ತಿದೆ. ಸಾಲ ತೀರಿಸಲು ಬಂದ ಜೀವಕ್ಕೆ ಸಾಲದ ಹೊರೆ ಹಾಕಿದರೆ ಅವರವರ ಸಾಲಕ್ಕೆ ಅವರೆ ಜವಾಬ್ದಾರರೆನ್ನುವ ಹಾಗೇ ಕರ್ಮಕ್ಕೆ ತಕ್ಕಂತೆ ಪ್ರತಿಫಲ.
ಪರಮಾತ್ಮನಿಗೇನೂ ನಷ್ಟವಿಲ್ಲ. ಮೇಲಿದ್ದವರು ಕೆಳಗಿಳಿಯುತ್ತಾರೆ.ಕೆಳಗಿದ್ದವರು ಮೇಲೆ ಹೋಗುತ್ತಾರೆ. ಮಧ್ಯದಲ್ಲಿ ಸಿಕ್ಕಿಹಾಕಿಕೊಂಡವರು ಅತಂತ್ರಸ್ಥಿತಿಗೆ ತಲುಪುತ್ತಾರೆ. ಇಷ್ಟೇ ಜೀವನ.
ಧರ್ಮವನ್ನು ತಿನ್ನಬಾರದು ಆಗೋದಿಲ್ಲ. ಧರ್ಮಧಾರಣೆ ಮಾಡಿಕೊಂಡರೆ ಧರ್ಮ ರಕ್ಷಣೆ. ಹಾಗಾದರೆ ಧರ್ಮ ಯಾವುದು? ಎಲ್ಲಿದೆ? ಎಷ್ಟಿದೆ? ಯಾಕಿದೆ? ಯಾರಲ್ಲಿದೆ?
ಪ್ರಶ್ನೆಗೆ ಉತ್ತರ ಸರ್ಕಾರದಲ್ಲಿದೆಯೆ? ಸರ್ಕಾರ ನಡೆದಿರೋದೆ ಅಧರ್ಮ ದಿಂದ ಅದರ ಹಿಂದೆ ನಡೆದರೆ ನಮ್ಮ ಮೂಲ ಧರ್ಮದ ಗತಿ ಅಧೋಗತಿ. ಅವರವರ ಹಿಂದಿನ ಗುರು ಹಿರಿಯರಲ್ಲಿದ್ದ ಸತ್ಕರ್ಮ ,ಸ್ವಧರ್ಮದಿಂದ ಸರಳವಾಗಿ ಸ್ವತಂತ್ರ ವಾಗಿ ಜೀವನ ನಡೆಸಿ ಒಗ್ಗಟ್ಟಿನಿಂದ ಬದುಕುತ್ತಿದ್ದವರನ್ನು ಬಡವರೆಂದು ಹೊರಗೆಳೆದು ಬೇರೆ ಮಾಡಿ ಸಾಲದ ರುಚಿ ತೋರಿಸಿ ,ಉಚಿತವಾಗಿ ತಿನ್ನಿಸಿದರೆ
ನಿಜವಾದ ಶ್ರೀಮಂತ ಜ್ಞಾನ ಬೆಳೆಯುವುದು ಅಸಾಧ್ಯ.
ಈಗಲೂ ಜ್ಞಾನದ ಹೆಸರಲ್ಲಿ ರಾಜಕೀಯ ಬೆಳೆಸಿಕೊಂಡರೆ
ಅದೂ ಅಜ್ಞಾನವೇ ಆಗುತ್ತದೆ. ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಯಾರಿಗೆ ಹೋಗುತ್ತಿದೆ? ಜನಸಾಮಾನ್ಯರಂತೂ
ಸರ್ಕಾರದ ಹಿಂದೆ ನಿಂತು ಬೇಡೋದು ತಪ್ಪಿಲ್ಲ.ಸರ್ಕಾರ ಕ್ಕೆ ಜನರಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ.ಜ್ಞಾನವೇ ಇಲ್ಲದವರನ್ನು ಆಳಬಹುದು.ಜ್ಞಾನಿಗಳನ್ನು ಆಳಲಾಗದು.
ಅದಕ್ಕೆ ಅಜ್ಞಾನವನ್ನು ಹೆಚ್ಚಿಸುತ್ತಾ ರಾಜಕೀಯ ಮಿತಿಮೀರಿ ಬೆಳೆಸಿದ್ದಾರೆ. ಯಾರದ್ದೋ ಹಣ ಯಲ್ಲಮ್ಮನ ಜಾತ್ರೆ. ದೇವರು ಕಾಣುವನೆ? ನಾನೇ ದೇವರೆ?
ಮಹಿಳೆ ಮಕ್ಕಳನ್ನು ಹೊರಗೆಳೆದು ಆಳುವುದರಲ್ಲಿ ಯಾವ ಪುರುಷಾರ್ಥ ವಿದೆ? ಸ್ತ್ರೀ ಶಕ್ತಿಯ ಆತ್ಮಜ್ಞಾನದಿಂದ ಅಧ್ಯಾತ್ಮ
ಸತ್ಯ ತಿಳಿಯಬಹುದು. ಸತ್ಯ ತಿಳಿಸದೆ ಅಧರ್ಮ ದಲ್ಲಿ ನಡೆಸಿ
ಸ್ತ್ರೀ ದುಡಿಮೆಯಲ್ಲಿಯೇ ಪುರುಷ ಜೀವನ ನಡೆಸುವಷ್ಟು ಕೆಳಮಟ್ಟಕ್ಕೆ ಭಾರತ ಹಿಂದುಳಿಯುತ್ತಿದೆಯೆ? ಸರ್ಕಾರದ ಹಿಂದೆ ನಡೆದರೆ ಪರಮಾತ್ಮ ಕಾಣುವನೆ?
ದೇವತೆಗಳ ಸೇನಾಧಿಪತಿಯಾಗಿರುವ ಶ್ರೀ ಸುಬ್ರಮಣ್ಯ ಷಷ್ಠಿ ಇಂದಿನ ವಿಶೇಷ. ಗಂಡು ಮಕ್ಕಳ ಭಾಗ್ಯೋದಯ ಮಾಡುವ ದೇವತೆ. ಗಂಡು ಮಕ್ಕಳಿಲ್ಲದವರಿಗೆ ಮುಕ್ತಿ ಇಲ್ಲ ಎನ್ನುವ ನಂಬಿಕೆಯೂ ಇದೆ.ಕಾರಣವಿಷ್ಟೆ ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು ಆತ್ಮಜ್ಞಾನದೆಡೆಗೆ ಧರ್ಮದೆಡೆಗೆ ಹೋಗುವ ಶಕ್ತಿ ಪುರುಷನಿಗಿರುವಷ್ಟು ಸ್ತ್ರೀ ಗಿಲ್ಲ. ಅದರಲ್ಲೂ ಭೂಮಿಯ ಮೇಲಿದ್ದು ಅವಳನ್ನರಿತು ಜೀವನ ನಡೆಸುವಾಗ ಆತ್ಮಜ್ಞಾನ ಅಗತ್ಯವಿದೆ. ಅಂತಹವರಿಗೆ ಮೇಲಿರುವ ದೈವ ಸಾನಿದ್ಯ ದೊರೆತಾಗ ಅವರ ಪಿತೃಗಳಿಗೂ ಮುಕ್ತಿ ಗೆ ದಾರಿಯಾಗುತ್ತದೆ.
ಇದರರ್ಥ ಸ್ತ್ರೀ ಗೆ ಅಸಾಧ್ಯವೆನ್ನುವುದು ತಪ್ಪು. ಹಿಂದಿನ ಎಷ್ಟೋ ಮಹಾಸತಿಯರು,ಪತಿವ್ರತೆಯರು,ಧರ್ಮ ಪತ್ನಿಯರು ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸುತ್ತಾ,ಸಹಕರಿಸುತ್ತಾ ಮುಕ್ತಿ ಮಾರ್ಗ ಹಿಡಿದಿದ್ದಾರೆ. ಜ್ಞಾನಕ್ಕೆ ಅಧಿಕಾರ ಕೊಡುವುದೂ ಸ್ತ್ರೀ ಶಕ್ತಿಯೇ ಆದ್ದರಿಂದ
ಮದುವೆಯನ್ನು ವ್ಯಾಪಾರ ದೃಷ್ಟಿಯಿಂದ ಅಳೆಯದೆ ಪವಿತ್ರ ದೃಷ್ಟಿಯಿಂದ ತಿಳಿದವರಿಗೆ ಇಹ ಪರದಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ. ಹಣದಿಂದ ಸ್ತ್ರೀ ಗೆ ಬೆಲೆಕಟ್ಟುವ ಮೊದಲು
ಸ್ತ್ರೀ ಸ್ವಯಂ ಲಕ್ಮಿಯೇ ಎನ್ನುವ ಸತ್ಯ ತಿಳಿದರೆ ಉತ್ತಮ.
ಸರಸ್ವತಿಯ ಜ್ಞಾನವನ್ನು ಕೊಡದೆ ಲಕ್ಮಿಯನ್ನು ದುರ್ಭಳಕೆ ಮಾಡಿಕೊಂಡರೆ ಲಕ್ಮಿಯಿದ್ದರೂ ಸಂಸಾರದಲ್ಲಿ ಸುಖವಿಲ್ಲದೆ
ಜೀವ ಹೋಗುತ್ತದೆ. ಇದನ್ನು ಇಂದಿಗೂ ಮಾನವ ಅರ್ಥ ಮಾಡಿಕೊಳ್ಳಲು ಸೋತಿರುವುದಕ್ಕೆ ಕಾರಣ ಅಜ್ಞಾನ.
ಎಲ್ಲವನ್ನೂ ಹಣದಿಂದ ಖರೀದಿಸುವಷ್ಟು ಅಜ್ಞಾನ ಭಾರತಾಂಬೆಯ ಮಕ್ಕಳಿಗೆ ಬರಬಾರದಿತ್ತು. ಅಜ್ಞಾನವೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.ಸರ್ಕಾರ ಅಜ್ಞಾನಿಗಳಿಗೆ ಮಣೆ ಹಾಕಿ ಜ್ಞಾನವನ್ನು ಹಿಂದುಳಿಸಿದರೆ ಲಾಭ ಯಾರಿಗೆ? ನಷ್ಟ ಯಾರಿಗೆ? ಶಾಶ್ವತ ಯಾವುದು? ಯಾರು ಶಾಶ್ವತ?
ಮದುವೆಯಾದ ನಂತರ ಹಣವಿರುವುದೆ? ಜ್ಞಾನವೇ? ಎಲ್ಲಿರುವರು ಜ್ಞಾನಿಗಳು? ಸರ್ಕಾರದ ಬೊಕ್ಕಸದ ಹಣ ಕಸಕ್ಕೆ ಸಮಾನವೆನ್ನುವ ಜ್ಞಾನಿಗಳಿಂದ ಕೂಡಿದ ಪ್ರಜೆಗಳಿದ್ದರೆ ಮಾತ್ರ ದೇಶದಲ್ಲಿ ಧರ್ಮ ರಕ್ಷಣೆ. ಆಗ ಸರ್ಕಾರದ ಹಣವೂ ಸದ್ಬಳಕೆ ಆಗಬಹುದು. ಆದರೆ ಜ್ಞಾನದ ಶಿಕ್ಷಣ ಕೊಡದೆ ಆಳುವವರಿಗೆ ಸಹಕಾರವಿರೋವಾಗ
ಇದಕ್ಕೆ ಕಾರಣವೆ ನಾವು.
ಇದರ ಫಲವೇ ಮುಂದಿನ ಪೀಳಿಗೆ ಅನುಭವಿಸುವುದು.
ಮಗು ಹುಟ್ಟುವಾಗಲೇ ಸಾಲದ ಹೊರೆ ಹಾಕುವ ಪೋಷಕರಿಗೆ ಮದುವೆಗೂ ಸರ್ಕಾರದ ಋಣದ ಅಗತ್ಯ ಬಂತೆ? ಎಲ್ಲಿಗೆ ಹೋಗುತ್ತಿದೆ ಮನುಕುಲ? ಅಸಮಾನತೆಯು
ಜ್ಞಾನದಲ್ಲಿದೆ. ಸತ್ಯಜ್ಞಾನದ ಶಿಕ್ಷಣದ ಕೊರತೆಯಿದೆ.
ಸರಸ್ವತಿಗೆ ಲಕ್ಮಿಯ ಅಲಂಕಾರ ಮಾಡಬಹುದು. ಲಕ್ಮಿಗೆ ಸರಸ್ವತಿಯ ಜ್ಞಾನ ಬೇಡವೆ?
No comments:
Post a Comment