ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, November 15, 2022

ಮತಾಂತರ ಡೇಂಜರ್

ಬಲವಂತದ ಮತಾಂತರ ಡೇಂಜರ್
ಯಾರನ್ನೂ ಬಲವಂತದಿಂದ ಆಳಬಾರದು.

ವಿಜಯವಾಣಿ ಪತ್ರಿಕೆ ಇಂದಿನ‌ ಮುಖ್ಯ ಸುದ್ದಿಯಾಗಿದೆ.
ಇದಕ್ಕೆ ರಾಜಕೀಯ ಪರಿಹಾರವಿದೆಯೇ ರಾಜಯೋಗದ ಪರಿಹಾರವೆ? ಒಟ್ಟಿನಲ್ಲಿ ಸಮಸ್ಯೆಗೆ ಪರಿಹಾರವಿರುತ್ತದೆ ಯಾವಾಗ ರಾಜಕೀಯದ ಪರಿಹಾರ ಹೆಚ್ಚುವುದೋ ರಾಜಯೋಗವಿಲ್ಲದೆ ಜೀವ ಹೋಗುತ್ತದೆ ಅಂತರ ಬೆಳೆಯುತ್ತದೆ. ಇಲ್ಲಿ ಜೀವಾತ್ಮ ಪರಮಾತ್ಮರ ನಡುವಿನ ಅಂತರವೇ ಸಮಸ್ಯೆಗಳಿಗೆ ಕಾರಣವೆನ್ನುವ ಯೋಗಿಗಳಿಲ್ಲ.
ಹಣದಿಂದಲೇ ಪರಿಹಾರ ಸೂಚಿಸುವ ಭೋಗಿಗಳ ಜಗತ್ತಿನಲ್ಲಿ
ಅಜ್ಞಾನದ ಅಂತರಗಳು ಬೆಳೆದು ನಿಂತಿವೆ.
ಒಂದು ಮಗು ಜನ್ಮತಾಳಿದ  ಸ್ಥಳ,ಧರ್ಮ ಕರ್ಮ ವು ಹಿಂದಿನ
ಕಾಲದಿಂದಲೂ  ಋಣ ಸಂಭಂದವಿದೆ ಎನ್ನುವ ಜ್ಞಾನದಿಂದ ಮಕ್ಕಳಿಗೆ ಅಲ್ಲಿಯ ಮೂಲವನ್ನು ಶಿಕ್ಷಣದಲ್ಲಿ ತಿಳಿಸುತ್ತಾ ಪೋಷಕರೂ ನಡೆಯುತ್ತಾ ಇದ್ದಲ್ಲಿಯೇ ಪರಮಾತ್ಮನ ಸೇವೆ ಮಾಡಿಕೊಂಡು  ಮುಕ್ತಿ ಪಡೆದಿದ್ದ ಹಿಂದೂ ಧರ್ಮ ಇಂದು ಹಿಂದುಳಿಯಲು ಕಾರಣವೇ ಹಿಂದಿನವರಿಂದ ಅಂತರ ಬೆಳೆಸಿಕೊಂಡು ಬಂದ ಶಿಕ್ಷಣದ ವಿಚಾರ. ವೈಚಾರಿಕತೆಯಲ್ಲಿನ
ವೈಜ್ಞಾನಿಕತೆಯನ್ನು ಗುರುತಿಸದೆ ತಮ್ಮದೇ ಆದ ಸಂಶೋಧನೆ
ಹೊರಗಿನಿಂದ ಬೆಳೆಸಿಕೊಂಡು  ಧರ್ಮಾಂತರ ಹೆಚ್ಚಾಯಿತು.
ಇನ್ನು ತತ್ವದ ವಿಚಾರದಲ್ಲಿಯೇ  ಅಂತರ ಸಾಕಷ್ಟಿದೆ. ತತ್ವವನ್ನು ತಂತ್ರವಾಗಿ ಬಳಸಿದಾಗ ಎಣಿಸಲಾಗದ ಅಂತರ.
ಹೀಗೇ ಒಂದೇ ಭೂಮಿ,ದೇಶ,ಧರ್ಮ, ಜಾತಿ, ಪಂಗಡ,ಪಕ್ಷ
ವಿಲ್ಲದೆ ಅನೇಕ ದೇವರಿದ್ದರೂ ಮಾನವನಲ್ಲಿ ದೈವತ್ವದ ಕೊರತೆಯಿದೆ. ಹಾಗಾದರೆ ಅಂತರಿಕ ಶುದ್ದಿಯಿಂದ
ಅಂತರವನ್ನು  ಕಡಿಮೆಗೊಳಿಸಲು ಪ್ರಯತ್ನಪಟ್ಟ ಶರಣರು,ದಾಸರು,ಸಂತರು,ಮಹಾತ್ಮರುಗಳು ಎಲ್ಲಿರುವುದು?
ಅವರನ್ನು ರಾಜಕೀಯದ ದಾಳ ಮಾಡಿಕೊಂಡು  ತತ್ವ ಬಿಟ್ಟು ತಂತ್ರ ನಡೆಸಿದರೆ ಆತ್ಮನಿರ್ಭರ ಭಾರತವಾಗಲು ಸಾಧ್ಯವೆ?
ಸ್ತ್ರೀ ಶಕ್ತಿಯನ್ನು  ರಾಜಯೋಗದೆಡೆಗೆ ಕರೆದೊಯ್ಯುವ ಶಿಕ್ಷಣ ಇಲ್ಲದೆ ಜ್ಞಾನದೇವತೆಯನ್ನು ಪೂಜಿಸಿ,ಬೇಡಿದರೂ ವ್ಯರ್ಥ.
ಹೀಗಾಗಿ ಪ್ರಜಾಪ್ರಭುತ್ವದ ವ್ಯವಸ್ಥೆ ಅವಸ್ಥೆ ಯಾಗುತ್ತಿದೆ.
ಪ್ರಜೆಗಳ ಜ್ಞಾನದಿಂದ ಅಂತರ ಕಡಿಮೆಯಾಗಿದ್ದರೆ ತತ್ವಜ್ಞಾನ.
ಹೆಚ್ಚಾಗಿದ್ದರೆ ತಂತ್ರಜ್ಞಾನ. ವಿಪರೀತ ವಾಗಿದ್ದರೆ ಯಂತ್ರಜ್ಞಾನ
ಯಾಂತ್ರಿಕ ಜೀವನದಲ್ಲಿ ನಾವು ಯಂತ್ರಗಳನ್ನು ಪ್ರೀತಿಸುವಷ್ಟು  ನಮ್ಮ ಸ್ವತಂತ್ರ ಜ್ಞಾನವನ್ನು ಪ್ರೀತಿಸದೆ ಮುಂದೆ ನಡೆದರೆ ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.
ಬ್ರಹ್ಮನ ಸೃಷ್ಟಿ ವಿಷ್ಣು ವಿನ ಸ್ಥಿತಿ, ಶಿವನ ಲಯ ಕಾರ್ಯವನ್ನು
ಪ್ರಶ್ನೆ ಮಾಡಲು ನಾವ್ಯಾರು? ಮಹಾದೇವತೆಗಳನ್ನೇ ಮೇಲು ಕೀಳೆಂದು ನೋಡುವ‌ಮಹಾಜ್ಞಾನಿಗಳು ತಂತ್ರವನ್ನು ಬಳಸಿ ತತ್ವವನ್ನು  ಹಿಂದುಳಿಸಿದರೆ ಸಾಮಾನ್ಯರ ಗತಿ ಏನು? 
ಒಟ್ಟಿನಲ್ಲಿ ಅಂತರಕ್ಕೆ ಕಾರಣವೇ ಅಜ್ಞಾನ.ಅಜ್ಞಾನಕ್ಕೆ ಮದ್ದು  ಸತ್ಯಜ್ಞಾನ ದ ಶಿಕ್ಷಣ. ಶಿಕ್ಷಕರು,ಗುರು ಹಿರಿಯರು ಮೊದಲು ಸತ್ಯವಂತರಾಗಿ ಅಂತರವಿಲ್ಲದೆಯೇ ಶಿಷ್ಯರ ಜ್ಞಾನವನ್ನು ತಿಳಿದು ಬೆಳೆಸಿದರೆ  ಪರಿಹಾರವಿದೆ. ಇದು ಧಾರ್ಮಿಕ ಕ್ಷೇತ್ರದ
ಧರ್ಮ. ವಿದೇಶದಲ್ಲಿ  ಹಿಂದೂಗಳಿಗೆ ಗೌರವವಿದೆ, ಜ್ಞಾನಕ್ಕೆ ಬೆಲೆಯಿದೆ ಆದರೆ ನಮ್ಮಲ್ಲೇ ನಮ್ಮವರೆ ಶತ್ರುಗಳಾದರೆ  ಅಂತರದಿಂದ. ಅವಾಂತರವೇ ಬೆಳೆಯೋದು. ಮೊದಲು ನಾವಿರುವ ಭೂಮಿ,ದೇಶ,ಭಾಷೆ,ಧರ್ಮ,ಕರ್ಮದ ಮೂಲ ಉದ್ದೇಶ ತಿಳಿದರೆ ಹೊರಗಿನಿಂದ ಬೆಳೆಸಿದ ಅಸಂಖ್ಯಾತ ದೇವರು,ಧರ್ಮ, ಜಾತಿ,ಪಕ್ಷ,ಪಂಗಡಗಳ ಉದ್ದೇಶ ತಿಳಿಯಲು ಸಾಧ್ಯ.ಒಳಗೇ ಅಜ್ಞಾನವಿಟ್ಟುಕೊಂಡು ಹೊರಗೆ ಹೋರಾಟ,ಹಾರಾಟ,ಮಾರಾಟ ಮಾಡಿದರೆ  ಅಂತರವೇ ಬೆಳೆಯೋದಲ್ಲವೆ? ಇದರಲ್ಲಿ ಸಾಮಾನ್ಯ ಜ್ಞಾನವಿದೆ. ಇದನ್ನು
ಆಳುವವರು  ಅರ್ಥ ಮಾಡಿಕೊಳ್ಳದೆಯೇ  ರಾಜಕೀಯ ಕ್ಕೆ ಇಳಿದರೆ ಹಾಳಾಗೋದು ಯಾರು?
ಮಾನವನ ಶತ್ರುವೇ ಅವನೊಳಗಿನ ಅಹಂಕಾರ ಸ್ವಾರ್ಥ.
ಇವೆರಡಕ್ಕೂ ಅಂತರ ಬೆಳೆಸಿಕೊಂಡರೆ ಸಾಕು. ಅಹಂಕಾರ ಬಿಟ್ಟರೆ  ಸ್ವಾರ್ಥ ವೂ ದೂರವಾಗುತ್ತದೆ. ಇದೇ ನಿಜವಾದ ಆತ್ಮಜ್ಞಾನ. ಆತ್ಮನಿರ್ಭರ ಭಾರತಕ್ಕೆ ಆತ್ಮಜ್ಞಾನದ ಅಗತ್ಯವಿದೆ.
ವೈಜ್ಞಾನಿಕ ಚಿಂತನೆ ಇರಲಿ ಆದರೆ ಆತ್ಮಹತ್ಯೆ ಆಗದಿರಲಿ.
ಜ್ಞಾನದೇವತೆಯನ್ನು ಆರಾಧಿಸಿ,ಪೂಜಿಸಿ,ಗೌರವಿಸಿ ಆಳಲು ಹೋಗಬೇಡಿ.
ಆಳಿದರೆ ಅಂತರ ಹೆಚ್ಚುವುದು. ತಾಯಿಯ ಋಣ ತೀರಿಸಲು ಜ್ಞಾನಬೇಡವೆ?

No comments:

Post a Comment