ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, November 1, 2022

ಕನ್ನಡದ ರಕ್ಷಣೆ ರಾಜಕೀಯದಿಂದ ಸಾಧ್ಯವೆ?

ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು. ಭಾಷೆಯ ರಕ್ಷಣೆ ಹಣದಿಂದ, ಅಧಿಕಾರದಿಂದ, ರಾಜಕೀಯದಿಂದ  ಮಾಡೋ ಮೊದಲು ಶಿಕ್ಷಣದಿಂದ ಧರ್ಮದಿಂದ ಮಾಡಿದ್ದರೆ ಇಂದು ಕರ್ನಾಟಕದಲ್ಲಿ ಇಷ್ಟೊಂದು ಹೋರಾಟ,ಹಾರಾಟ ಮಾರಾಟದ  ಗೋಳಾಟವಿರುತ್ತಿರಲಿಲ್ಲ. ಜ್ಞಾನದಿಂದ ಮಾತ್ರ ಧರ್ಮ ಸತ್ಯ ಬೆಳೆಯೋದು. ಇದು ಅವರವರ ರಾಜ್ಯ,ದೇಶ,
ಸ್ಥಳದ ಮೂಲವನ್ನು ಅನುಸರಿಸಿದ್ದರೆ ಬುಡ ಗಟ್ಟಿ. ಅದನ್ನು ಬಿಟ್ಟು ನೇರವಾಗಿ ಹೊರನಡೆದರೆ ರೆಂಬೆಕೊಂಬೆಗಳ ಆಯಸ್ಸು ಕ್ಷೀಣವೆನ್ನುತ್ತಾರೆ ಮಹಾತ್ಮರು.
ಹಿಂದೂ ಧರ್ಮದ ಆಳ ಅಗಲ ಹೇಗೆ ಅಳೆಯಲಾಗದೋ ಹಾಗೆ ಕನ್ನಡ ಹಾಗು ಸಂಸ್ಕೃತ ಭಾಷೆಯೂ ಆಳವಾಗಿರುವ ಜ್ಞಾನವನ್ನು  ಒಳಗಿನಿಂದ ಬೆಳೆಸಿದೆ. ಹೀಗಾಗಿ ಇದನ್ನು ಉಳಿಸಿ ಬೆಳೆಸೋದಕ್ಕೆ ಹೊರಗಿನ ಶಿಕ್ಷಣದ ಅಗತ್ಯವಿಲ್ಲ.ಒಳಗಿನ ಹಿಂದಿನ ಶಿಕ್ಷಣದ ಅಗತ್ಯವಿತ್ತು.  ಕನ್ನಡವನ್ನು  ವ್ಯವಹಾರಿಕ ದೃಷ್ಟಿಯಿಂದ ಅಳೆದರೆ ಈಗಲೂ ಸಾಕಷ್ಟು ಬೆಳೆದಿದೆ.ಆದರೆ ಧರ್ಮದ ದೃಷ್ಟಿಯಿಂದ ಹಿಂದುಳಿಯುತ್ತಿದೆ. ಕನ್ನಡದಿಂದ ನಮ್ಮ ಜೀವನ ನಡೆದಿದೆ.ನಮ್ಮಿಂದ ಕನ್ನಡ ಬೆಳೆದಿಲ್ಲ. ಇಲ್ಲಿ ನಮ್ಮ ಶಿಕ್ಷಣವು ವ್ಯವಹಾರಕ್ಕೆ ತಿರುಗಿದಂತೆಲ್ಲಾ  ಹೆಚ್ಚು ಹಣಗಳಿಸುವ ಸಾಧನವಾಗುತ್ತದೆ. ಅದೇ ಅದರಲ್ಲಿ ಧರ್ಮ ವಿದ್ದರೆ ಕನ್ನಡದಲ್ಲಿ ಧರ್ಮ ತಿಳಿಸಿ ಬೆಳೆಸುವ ವಿಷಯವಿರುತ್ತದೆ. ಕನ್ನಡದ ವಿಷಯ ಭಾಷಾಂತರ ಮಾಡಿ ಜ್ಞಾನ ಹೆಚ್ಚಿಸಲಾಗದು.ಭಾಷಾಂತರದಲ್ಲಿ ಸಾಕಷ್ಟು ಪದಗಳ ಅರ್ಥ ವ್ಯತ್ಯಾಸವಾಗುತ್ತದೆ. ಹೀಗಾಗಿ ಮೂಲ ಪ್ರತಿ ಯಾವತ್ತೂ ಶುದ್ದವಾಗಿರಬೇಕು. ವಿಷಯಗಳ ಬದಲಾವಣೆಯ ಜೊತೆಗೆ ಭಾಷೆಯೂ ಬದಲಾಗುತ್ತಾ ಮೂಲ ಧರ್ಮ ಭಾಷೆ ಹಿಂದುಳಿದು ಹೊರಗಿನ ಆಚರಣೆ ಮುಂದೆ ನಡೆಯಿತು. ಈಗಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ 
ವಿದೆ. ಶಾಸ್ತ್ರೀಯ ಶಿಕ್ಷಣದ ಕೊರತೆಯಿದೆ. ಕೆಲವು ವಿಚಾರಗಳನ್ನು  ನನ್ನ ಮೊದಲ ಪುಸ್ತಕದಲ್ಲಿ  ತಿಳಿಸಲಾಗಿತ್ತು. ಅನುಭವಕ್ಕೆ ಬರುವ ವರೆಗೂನಮಗೆ ಸತ್ಯ ಅರ್ಥ ವಾಗದು. 
ಯಾವುದೇ ಧರ್ಮ, ಸತ್ಯ,ನ್ಯಾಯ,ನೀತಿ,ಸಂಸ್ಕೃತಿ, ಭಾಷೆಯ ಬೆಳವಣಿಗೆ ರಾಜಕೀಯ ದಿಂದ ಬೆಳೆಸಲಾಗದೆನ್ನುವ ಕಾರಣಕ್ಕಾಗಿ ಹಿಂದೆ ಗುರುಕುಲ ಪದ್ದತಿಯ ಶಿಕ್ಷಣದಲ್ಲಿ 
ಮಕ್ಕಳನ್ನು ರಾಜಕೀಯತೆ ಬಿಟ್ಟು ರಾಜರೂ ಕೂಡ  ಗುರುಕುಲದಲ್ಲಿ ಬಿಟ್ಟು ಕಲಿಸುತ್ತಿದ್ದರು. ಕಾರಣವಿಷ್ಟೆ ರಾಜಕೀಯವೆಂಬುದು ನನ್ನ ಬೆಳೆಸುತ್ತದೆ .ನಾನೆಂಬ ಅಹಂಕಾರ ಸ್ವಾರ್ಥ ನನ್ನ ಹಾಳೂ ಮಾಡುತ್ತದೆ.ಮಕ್ಕಳಿಗೆ ಮೂಲದಲ್ಲಿ ಜೀವನದ ಸತ್ಯ ತಿಳಿದರೆ ಮುಂದೆ ಸ್ವತಂತ್ರ
 ಜ್ಞಾನದಿಂದ ಜೀವನ ಸಾಗಿಸುತ್ತಾರೆ ಎನ್ನುವ ಸತ್ಯ ತಿಳಿಯಬಹುದು.
ಮಾತೃಭಾಷೆಗೆ ಮಾತೆಯರೆ ವಿರೋಧ ವ್ಯಕ್ತಪಡಿಸಿದರೆ ಮಕ್ಕಳು ಕಲಿಯಲು ಕಷ್ಟ. ನಾವಿರುವ ನಾಡು ನುಡಿಯನ್ನು
ಬೆಳೆಸಿ ಉಳಿಸುವುದು ಎಲ್ಲರ ಧರ್ಮ. ಹೊರಗಿನಿಂದ ಬಂದು  ಮೂಲವನ್ನು ಅಳಿಸೋದು ಅಧರ್ಮ.ಇಲ್ಲ ಹೊರಗೆ ಹೋಗಿ ಮೂಲವನ್ನು ಮರೆಯುವುದೂ ಅಧರ್ಮ. ನಮ್ಮ ಜೀವನಕ್ಕೆ ಬೇಕಾದಷ್ಟು  ಹಣ ಸಂಪಾದನೆಗೆ ಮೂಲ ಭಾಷೆ
ಯಲ್ಲಿ ಸಾಧ್ಯ ಇದ್ದವರೂ  ಪರಭಾಷಾ ವ್ಯಾಮೋಹದಿಂದ 
ದೂರಹೋಗಿ ದುಡಿದು ಸಂಪಾದಿಸಿದರೂ  ಮೂಲದ ಋಣ ತೀರಿಸದಿದ್ದರೆ ತೃಪ್ತಿ ಸಿಗೋದಿಲ್ಲವೆನ್ನುವ ಕಾರಣಕ್ಕಾಗಿ
 ಹಿಂದೆ ಇದ್ದಲ್ಲಿಯೇ ಅವರವರ ಧರ್ಮಭಾಷೆಯ ತತ್ವಜ್ಞಾನ
ದಿಂದ ಒಗ್ಗಟ್ಟು, ಏಕತೆ, ಐಕ್ಯತೆ,ಸಮಾನತೆಯನ್ನು  ಸಾರಿದರು. ಕಾಲ ಬದಲಾದಂತೆ ಶಿಕ್ಷಣವೂ ಬದಲಾಯಿತು ತತ್ವ ತಂತ್ರವಾಯಿತು ತತ್ವದಿಂದ ರಾಜಯೋಗ ತಂತ್ರದಿಂದ
 ರಾಜಕೀಯ  ಬೆಳೆಯಿತು.ಅಂತರದಲ್ಲಿ  ಮಧ್ಯವರ್ತಿಗಳು ನಿಂತು ಇದೂ ಸರಿ ಅದೂ ಸರಿ ಎಂದರು. ಆದರೆ  ಈಗ ಸರಿಯಾಗಿರುವುದು  ಯಾವುದು?
ನಮಗೆ ನಾವೇ ಪ್ರಶ್ನೆ ಮಾಡಿಕೊಂಡರೆ ಬರುವ ಉತ್ತರ ನಾನೇ ಸರಿ ಎಂದು. ಎಲ್ಲಾ ಸರಿಯಾಗೇ ಇದೆ ತಪ್ಪು ಎಲ್ಲಿದೆ? ನಡೆಯೋದನ್ನು  ತಡೆಯಲಾಗದು.ಯಾಕೆ ನಡೆದಿದೆ
ಎಂದು ಪ್ರಶ್ನೆ ಮಾಡೋಹಾಗಿಲ್ಲ.ನಡೆದ ಮೇಲೇ ಯಾಕೆ ಹೀಗಾಯಿತೆಂದು  ತಿಳಿಯಲು ಹಿಂದಿರುಗಿಬರಬೇಕಷ್ಟೆ. ಇದು ಹಿಂದಿನಿಂದಲೂ ನಡೆದು ಬಂದ ಹಿಂದೂ ಧರ್ಮ. ಹಿಂದಿನ ಶಿಕ್ಷಣ ಹಿಂದೂ ಧರ್ಮ, ಇಂದಿನ ಶಿಕ್ಷಣ ಇಸ್ಲಾಂ ಮುಂದಿನ ಶಿಕ್ಷಣ ಮುಸ್ಲಿಂ ಧರ್ಮ ಎಂದರೆ ತಪ್ಪೆ?
ಎಷ್ಟೇ ಮುಂದುವರಿದರೂ ಯಂತ್ರಮಾನವರಾಗಿರಬೇಕಷ್ಟೆ
ಸ್ವತಂತ್ರ ಜ್ಞಾನ ಹಿಂದಿತ್ತು. ಈಗ ತಂತ್ರವಾಗಿದೆ ಮುಂದೆ ಯಂತ್ರದ ದಾಸರಾಗಬೇಕು. ಪ್ರತಿಯೊಂದು ಆ ಪರಮಾತ್ಮನ
ಅಂಶವೇ ಆದರೆ , ಧಾರ್ಮಿಕ ದೃಷ್ಟಿಯಿಂದ ಬೇರೆ ಬೇರೆ ಕಾಣುತ್ತದೆ. ದೇವನೊಬ್ಬನೆ ನಾಮ ಹಲವು,ದೇಶ ಒಂದೇ ಭಾಷೆ ಹಲವು...ತತ್ವ ಒಂದೇ ತಂತ್ರ ಹಲವು...
 ನರೇಂದ್ರರು ವಿವೇಕಾನಂದರಾಗಿದ್ದು ತತ್ವಜ್ಞಾನದಿಂದ ಇಂದಿನ ತಂತ್ರದಿಂದ  ತತ್ವ ಹಿಂದುಳಿಯುತ್ತಿದೆ ಇಷ್ಟೇ ವ್ಯತ್ಯಾಸ.
ಮೇಲೇರಿದವರು ಕೆಳಗಿಳಿಯಬೇಕು.ಕೆಳಗಿದ್ದವರು ಮೇಲೆ ಹೋಗಲೇಬೇಕು.  ಕಾಲಚಕ್ರ ನಿಲ್ಲೋದಿಲ್ಲ.ನಿಲ್ಲಿಸುವ ಶಕ್ತಿ ವಿಜ್ಞಾನಕ್ಕಿಲ್ಲ.

No comments:

Post a Comment