ಜೀವನದಲ್ಲಿ ಕೀಳರಿಮೆ ಮೇಲರಿಮೆ ಎನ್ನುವುದು ಅವರವರ ಅರಿವಿನಲ್ಲಿದೆ.
ಒಂದು ಸಂಸಾರ ಸಮಾಜ,ದೇಶದ ಒಳಗಿರುವಾಗ ಎಲ್ಲರಲ್ಲಿಯೂ ಒಂದೇ ಅರಿವಿರೋದು ಕಷ್ಟ.ಕಾರಣ ಅರಿವು ಎಂದರೆ ಜ್ಞಾನ ಜ್ಞಾನವು ಅವರವರ ಹಿಂದಿನ ಕರ್ಮ ಧರ್ಮದ ಮೇಲೇ ನಿಂತಿರುತ್ತದೆ. ಸಾಕಷ್ಟು ಜ್ಞಾನವನ್ನು ಹೊರಗಿನಿಂದ ಪಡೆದರೂ ಒಳಗೆ ಹೋಗಿ ಅರ್ಥ ಮಾಡಿಕೊಳ್ಳಲು ಅಸಾಧ್ಯ. ಅರ್ಥ ವಾದರೂ ನಡೆಯಲು ಕಷ್ಟ
ಇಲ್ಲಿ ಹೊರಗಿನ ಜ್ಞಾನ,ಒಳಗಿನ ಜ್ಞಾನಕ್ಕೆ ಹೊಂದಿಕೆಯಾದರೆ ಮಾತ್ರ ಶಾಂತಿ,ಸಮಾಧಾನ,ತೃಪ್ತಿ. ಯಾವಾಗ ವಿರುದ್ದವಿದ್ದು ಅನಿವಾರ್ಯವಾಗಿ ತಿಳಿಯಲೇಬೇಕಾಗುವುದೋ ಆಗಲೇ
ಮಾನವನಿಗೆ ಅಸಂತೋಷ, ಅತೃಪ್ತಿ,ಅಸಮಧಾನ ಹಾಗೇ ಅಜ್ಞಾನವೂ ಹೆಚ್ಚುವುದು.ಬೇಡದನ್ನು ಬೇಕಾದೆಡೆಗೆ ಹಾಕಿದರೆ
ತಿರಸ್ಕರಿಸುವುದು ಒಳಗಿನಮನಸ್ಸು.ಇದೇ ಕಾರಣದಿಂದ ಇಂದು ಮಕ್ಕಳು ಮಹಿಳೆಯರು ಸಾಕಷ್ಟು ನೊಂದು ಬೆಂದು ಹೊರಬರುತ್ತಿರುವುದೆನ್ನಬಹುದು. ಒಟ್ಟಿನಲ್ಲಿ ಕೀಳರಿಮೆಯಿದ್ದರೆ ಯಾವುದೇ ಸಾಧನೆ ಮಾಡಲು ಕಷ್ಟ. ಯಾರೋ ಹೆಸರುಮಾಡಿದ್ದಾರೆ,ಹಣಮಾಡಿದ್ದಾರೆಂದರೆ ನಮಗೆ ಕಷ್ಟವೆನಿಸುವುದಕ್ಕೆ ಕಾರಣವೆ ನಮ್ಮ ಕೀಳರಿಮೆ.
ಇದಕ್ಕೆ ಪರಿಹಾರ ಒಂದೇ ನಮ್ಮೊಳಗೇ ಅಡಗಿರುವ ಜ್ಞಾನವನ್ನು ಪರೀಕ್ಷಿಸಿಕೊಂಡು ನಮ್ಮ ಜೀವನಕ್ಕೆ ಸಾಕಾದಷ್ಟು ದುಡಿದು ಗಳಿಸಿ ಹೆಚ್ಚಾಗಿದ್ದರೆ ದಾನ ಧರ್ಮದಲ್ಲಿ ತೊಡಗಿಸಿಕೊಂಡರೆ ಯಾರೇನೇ ಹೇಳಲಿ ನಮ್ಮ ಆತ್ಮತೃಪ್ತಿ ನಮಗಿದ್ದರೆ ಹೇಳೋರಿಗೇ ಕಷ್ಟ ನಷ್ಟ.
ಈ ಹೊರಗಿನ ಶ್ರೀಮಂತ ರ ಹಿಂದೆ ನಡೆದಷ್ಟೂ ನಮ್ಮ ಒಳಗಿನ ಶ್ರೀಮಂತಿಕೆ ದೂರವಾಗುತ್ತದೆ.ನಿಜವಾದ ಕೀಳರಿಮೆ
ಇವರದ್ದಾಗಿರುತ್ತದೆ. ಸ್ವಾರ್ಥ ಸುಖಕ್ಕಾಗಿ ಪರರನ್ನು ಆಶ್ರಯಿಸಿ ನಡೆದಷ್ಟೂ ಪರಕೀಯರಿಗೆ ಶಕ್ತಿ ಹೆಚ್ಚುವುದು.
ವಿದೇಶಿಗಳನ್ನು ಹಿಂದೆ ಪರದೇಶಿಗಳು ಎನ್ನುವ ಕೆಟ್ಟ ಭಾವನೆಯಲ್ಲಿ ಕರೆಯುತ್ತಿದ್ದರು.ಈಗ ಕಾಲಬದಲಾಗಿದೆ ನಮ್ಮಮಕ್ಕಳು ವಿದೇಶಕ್ಕೆ ಹೋಗುವರೆಂದರೆ ಎಲ್ಲಿಲ್ಲದ ಮೇಲರಿಮೆ. ಅಂದರೆ ಭೌತಿಕದ ಸತ್ಯ ಇಂದು ಮುಂದಾಗಿ ಮೇಲೆ ಏರಿ ಅಧ್ಯಾತ್ಮ ಸತ್ಯ ಕೀಳಾಗಿ ಕಾಣುವವರಿಂದ ಆತ್ಮನಿರ್ಭರ ಭಾರತ ಸಾಧ್ಯವಿಲ್ಲ. ಸಾಧ್ಯವಾದರೆ ಮೊದಲು ಭಾರತೀಯರಾಗಬೇಕು. ಇದು ಜನಸಾಮಾನ್ಯರಿಗೆ ಸಾಧ್ಯವಿದೆ. ನಮ್ಮ ಕೀಳರಿಮೆಯಿಂದ ಮೇಲೆ ಬಂದು ನಮ್ಮ ಆತ್ಮಸಾಕ್ಷಿಗೆ ಬೆಲೆಕೊಡಲು ಹೊರಗಿನ ಸರ್ಕಾರದ ರಾಜಕೀಯ ಬೇಡ. ನಮ್ಮೊಳಗೇ ಇರುವ ರಾಜಯೋಗ ಬೇಕಿದೆ.ಯೋಗ್ಯ ಶಿಕ್ಷಣದಿಂದ ಯೋಗಿಗಳಿಂದ ಯೋಗದಿಂದ ಮಾತ್ರ ಸಾಧ್ಯ.ಯೋಗ ಎಂದರೆ ಜೀವಾತ್ಮಪರಮಾತ್ಮನೆಡೆಗೆ ಹೋಗಿ ಸೇರುವುದು.ಈಗಿನ ವಿದೇಶ ಯೋಗ ದೇಶವನ್ನು ಸಾಲದ ಕಡೆಗೆ ನಡೆಸುತ್ತಾ ಇನ್ನಷ್ಟು ಜ್ಞಾನಿಗಳನ್ನು ಹಿಂದುಳಿಸಿ ಆಳುತ್ತಿದೆ.ಒಟ್ಟಿನಲ್ಲಿ ಜ್ಞಾನದಿಂದ ಕೀಳರಿಮೆ ಕಡಿಮೆಯಾಗುತ್ತದೆ. ನಾವೆಷ್ಟೇ ವೈಜ್ಞಾನಿಕ ಸಂಶೋಧನೆ ನಡೆಸಿದರೂ ಅರಿವು ಹೊರಗಿನ ಸತ್ಯ ಮಾತ್ರ ತಿಳಿಸಬಹುದು.
ಒಳಗೇ ಅಡಗಿರುವ ಹಿಂದಿನ ಎಲ್ಲಾ ಸತ್ಯವನ್ನು ಧಾರ್ಮಿಕವಾಗಿ ಅರ್ಥ ಮಾಡಿಕೊಳ್ಳಲು ಬೇಕಿದೆ ಆತ್ಮಜ್ಞಾನ.
ಆತ್ಮನಿರ್ಭರ ಭಾರತ ಆತ್ಮಜ್ಞಾನದಿಂದ ಮಾತ್ರ ಸಾಧ್ಯ.
ಹೊರಗಿನಿಂದ ಬರುವ ಎಲ್ಲರಿಗೂ ಭಾರತೀಯತೆಯ ಶಿಕ್ಷಣ ನೀಡುವುದರ ಮೂಲಕ ಭಾರತ ವಿಶ್ವಗುರು ಆಗಬಹುದಷ್ಟೆ.ಹೊರಗಿನಿಂದ ಬಂದವರ ಶಿಕ್ಷಣ, ಧರ್ಮ, ಸಂಸ್ಕೃತಿ, ಭಾಷೆಗಳನ್ನು ನಾವೇ ಕಲಿಯುತ್ತಾ ಅವರವ್ಯವಹಾರಕ್ಕೆ ಕೈ ಜೋಡಿಸಿಕೊಂಡಿದ್ದರೆ ಆತ್ಮದುರ್ಭಲ ಭಾರತ.ಇದರಿಂದಾಗಿ ನಾವೇ ಅವರ ಮುಂದೆ ಕೀಳಾಗಬೇಕು.
ಮೊದಲು ನಮ್ಮತನ ಉಳಿಸಿಕೊಂಡು ನಂತರ ಹೊರಗಿನವರಿಗೆ ಕಲಿಸಬೇಕಿದೆ.ಇದು ನಿಜವಾದ ಮೇಲಿನ ಅರಿವು. ಹಾಗಾದರೆ ಈಗ ನಡೆಯುತ್ತಿರುವುದೇನು? ಶಿಕ್ಷಣ ಯಾರದ್ದು? ಯಾರಿಗೆ? ಯಾಕೆ? ಹೇಗೆ? ಯಾರು? ನೀಡುತ್ತಿರುವುದು.ಇದಕ್ಕೆ ನಮ್ಮದೇ ಸಹಕಾರ ಇದ್ದರೆ ನಾವ್ಯಾರು? ಮೇಲಿನವರೆ ?ಕೆಳಗಿನವರೆ ?ಒಳಗಿನವರೆ? ಹೊರಗಿನವರೆ??
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ ಎಂದಂತೆ ಯೋಗಿಗಳ ದೇಶವನ್ನು ಯೋಗಿಗಳಾಗಿ ಬೆಳೆಸುವುದೇ ಮೇಲರಿಮೆ. ಇದಕ್ಕೆ ವಿರುದ್ದ ನಡೆದು ನಾವೇ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧರ್ಮ, ಕರ್ಮದ ಶಿಕ್ಷಣ ನೀಡಲು ಕೀಳರಿಮೆ ಹೊಂದಿದರೆ ಬೇಲೆಯೇ ಎದ್ದು ಹೊಲಮೇದ್ದಂತೆ ಎನ್ನುವಂತಾಗುವುದು ಸಹಜ.ಇದರಲ್ಲಿ ತಪ್ಪು ನಮ್ಮ ಒಳಗಿರುವ ಕೀಳರಿಮೆಯದ್ದೆ ಎಂದರೆ ನಾವೇ ಕಾರಣವಾದಾಗ ಹೊರಗೆ ಹೋರಾಟ ಮಾರಾಟ,ಹಾರಾಟ ಮಾಡಿದರೆ ಅರಿವು ಬೆಳೆಯುವುದೆ? ಕುಸಿಯುವುದೆ?
ಈವರೆಗೆ ಲೇಖನಗಳಲ್ಲಿ ಎಷ್ಟು ಮಂದಿಗೆ ಕೀಳರಿವು ಕಂಡಿದೆಯೋ ಮೇಲರಿವು ಕಾಣಿಸಿದೆಯೋ ಅವರವರ ಅರಿವಿಗಷ್ಟೆ ಗೊತ್ತು. ಇಲ್ಲಿ ಯಾರೂ ಮೇಲೂ ಇಲ್ಲ ಕೆಳಗೂ ಇಲ್ಲ.ಎಲ್ಲಾ ಇರೋದು ಮಧ್ಯದ ಭೂಮಿ ಮೇಲಷ್ಟೆ.
ಆಕಾಶ ಪಾತಾಳದ ನಡುವಿನ ಭೂಮಿಯಲ್ಲಿ ಮಾತ್ರ ಮನುಕುಲ ಇರೋದಲ್ಲವೆ? ಭೂಮಿ ತಾಯಿಯೇ ಎಲ್ಲರ ಆಶ್ರಯದಾತಳು. ಅವಳೇ ಮೇಲೆ ಕೆಳಗೆ ತಳ್ಳುವ ನಾಯಕಿ.
ನಾವು ಕಾರಣಮಾತ್ರರಷ್ಟೆ.
No comments:
Post a Comment