ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, November 23, 2022

ವಿಗ್ರಹಪೂಜೆಯ ಮಹತ್ವ

ದೇವರನ್ನು ವಿಗ್ರಹದಲ್ಲಿ ಪೂಜಿಸುವುದೇಕೆ?
ಭಗವಂತ ನಿರಾಕಾರನಾದರೂ ಮಾನವನಿಗೆ ಭಕ್ತಿ,ಶ್ರದ್ದೆ,ನಂಬಿಕೆ ಹೆಚ್ಚಾಗಬೇಕಾದರೆ ಆಕಾರ ಅಗತ್ಯವಿದೆ.
ವಿಗ್ರಹದಲ್ಲಿ ಸ್ಪಷ್ಟರೂಪ,ಕಲ್ಪನೆ ಹೆಚ್ಚಿದ್ದು ಚೈತನ್ಯದೇವತಾ ಸಾನಿದ್ಯ ಉಂಟಾಗುತ್ತದೆ . ಅದರಲ್ಲೂ ಗರ್ಭಗುಡಿಯಲ್ಲಿ ಸೂಕ್ಷ್ಮ ವಾದ ದೈವೀಶಕ್ತಿ ಹೆಚ್ಚು ಅದರ ಒಳ ಪ್ರಕಾರದಲ್ಲಿ ಧಾರಾಳವಾಗಿ ಹೊರಸುತ್ತಿನಲ್ಲಿ ಸ್ವಲ್ಪ ಕಡಿಮೆಯಿದ್ದರೂ ಜನರ ದುಷ್ಟ ಬಾವನೆ,ಅಶುದ್ದತೆ ಕಡಿಮೆಯಾಗಿ ಮನಸ್ಸಿಗೆ ಪುಷ್ಟಿ, ದೇಹಕ್ಕೆ ಉಲ್ಲಾಸ ಹೆಚ್ಚುವುದು.
ವೈಜ್ಞಾನಿಕವಾಗಿ ವಿಗ್ರಹಗಳು ನಮ್ಮ ಉತ್ತಮವಾದ ಮನಸ್ಸು ಜಾಗೃತಗೊಳಿಸಿ ಸಾತ್ವಿಕವಾದ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ವಿಗ್ರಹ ದ ಅಭಿಷೇಕದಿಂದ ಆಮ್ಲೀಯ ಶಕ್ತಿ ರೋಗನಿರೋಧಕ ಶಕ್ತಿ ಉಂಟಾಗಿ ಅದರ ಅಯಸ್ಕಾಂತೀಯ ಗುಣದಿಂದ ಆ ತೀರ್ಥ ಸೇವನೆ ಮಾಡುವುದರಿಂದ ಕೆಲವು ರೋಗಾಣುಗಳು ಶರೀರಕ್ಕೆ ಸೇರದಂತೆ ತಡೆಯುತ್ತದೆ. ವಿಗ್ರಹಕ್ಕೆ ಹಾಕಿದ ಹೂವಿನ ಧಾರಣೆ,ಗಂಧದ ಲೇಪನದಿಂದ ಶರೀರದ ಉಷ್ಣತೆ ಕಡಿಮೆಯಾಗುತ್ತದೆ. ಹಾಗೆ ವಿಗ್ರಹವನ್ನು ಏಕಚಿತ್ತದಿಂದ ನೋಡಿದಾಗ ಅದರ ಅಯಸ್ಕಾಂತೀಯ ಶಕ್ತಿ ನಮ್ಮ ಹುಬ್ಬುಗಳ ಮಧ್ಯೆ ಕೇಂದ್ರೀಕರಿಸುವುದರಿಂದ ಮೆದುಳಿನ ನರಮಂಡಲಗಳನ್ನು ಜಾಗೃತಗೊಳಿಸುತ್ತದೆ. ವಿಗ್ರಹದ ಅಲಂಕಾರದಿಂದ ಆನಂದವಾಗಿ ಕಲೆಯೂ ವೃದ್ದಿಸುವುದು.ಜನರ ಒಡನಾಟಕ್ಕೆ ಅವಕಾಶವಿದ್ದು,
ಬಗೆಬಗೆಯ ಲೋಹದ ಪರಿಚಯ ಅದರ ಗುಣಧರ್ಮ ತಿಳಿಯುವುದು. ಇದರಿಂದ  ಹಲವರ ಜೀವನ ನಡೆಯುವುದು.
ಸಂಗ್ರಹ ಬರಹ
ಮುಖ್ಯವಾಗಿ ವಿಗ್ರಹಾರಾಧನೆಯು  ಪರಮಾತ್ಮನೆಡೆಗೆ ಜೀವಾತ್ಮ ಹೋಗುವ ಒಂದು ಮೆಟ್ಟಿಲು. ಮಾನವ ಮಹಾತ್ಮನಾದಾಗ ಆತ್ಮಸ್ವರೂಪದಲ್ಲಿರುವ ಆ ಪರಮಾತ್ಮನ ಎಲ್ಲೆಡೆಯೂ ಕಾಣುತ್ತಾನೆ. ಮೆಟ್ಟಿಲನ್ನು  ಹತ್ತುವಾಗ  ಪ್ರತಿಕ್ಷಣವೂ ಪರಮಾತ್ಮನ ಕಂಡವರಷ್ಟೇ ಕೊನೆಮೆಟ್ಟಿಲ
ವರೆಗೆ ಏರಿರುವುದು ನಮ್ಮ ಹಿಂದಿನ ಮಹಾತ್ಮರಲ್ಲಿ ಕಾಣಬಹುದು. ಆಚರಣೆಗಳು  ಶುದ್ದ ಹೃದಯವಂತರನ್ನು ಬೆಳೆಸಬೇಕು ಹೊರಗಿನ ಹೃದಯವನ್ನು ಮಾರಿಕೊಳ್ಳುವ 
ಹಂತಕ್ಕೆ ಬರಬಾರದು.ವೈಜ್ಞಾನಿಕ ಪೂಜೆ ಹೃದಯದ ಕಸಿ ಮಾಡುತ್ತದೆ.ವೈಚಾರಿಕತೆಯ ಪೂಜೆ ಹೃದಯವಂತರನ್ನು ಬೆಳೆಸುತ್ತದೆ. ಜೀವವಿರೋದು ಹೃದಯದಲ್ಲಾದರೂ ಪರಮಾತ್ಮನಿರೋದು ಹೃದಯವಂತರಲ್ಲಷ್ಟೇ ಇದೇ ಜ್ಞಾನ ವಿಜ್ಞಾನದ ವಿಶೇಷ ಪೂಜೆ.
ವಿಗ್ರಹಗಳಿಟ್ಟುಕೊಂಡು ಪರಮಾತ್ಮನಿಗೆ ಆಗ್ರಹ ಮಾಡಬಾರದು. ಪರಮಾತ್ಮನ ಆಗ್ರಹವನ್ನು ಆಲಿಸುವ ಜ್ಞಾನ ಶಕ್ತಿ  ಬರಬೇಕೆನ್ನುವುದೆ  ಪೂಜೆಯ ಉದ್ದೇಶ. ಸಾಕಾರದಿಂದ ನಿರಾಕಾರವಾದರೆ  ಅಧ್ವೈತ.

No comments:

Post a Comment