ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, November 14, 2022

ಮಾನವನಿಗೂ ದೇವಮಾನವನಿಗಿರುವ ವ್ಯತ್ಯಾಸ

ಮಾನವನಾಗೋದಕ್ಕೂ ದೇವ ಮಾನವನಾಗೋದಕ್ಕೂ ವ್ಯತ್ಯಾಸ ಮಾನವನಿಗೆ ಮಾನವೀಯತೆಯ ಗುಣ
ವಿರಬೇಕು.ದೇವಮಾನವನಿಗೆ ದೈವತತ್ವದ ಜ್ಞಾನವಿರಬೇಕು. ತತ್ವಜ್ಞಾನವೂ ಮಾನವೀಯತೆಯನ್ನು ಬೆಳೆಸುತ್ತದೆ. ಆದರೆ, ಮಾನವನ  ಆಂತರಿಕ ಶಕ್ತಿಯಿಂದಲೇ ಇದು ಬೆಳೆಯಬೇಕಷ್ಟೆ. ಮಾನವ ಕೋಟ್ಯಾಂತರ ರೂಪಾಯಿಗಳ ಸಹಾಯ,ದಾನ ಧರ್ಮಗಳನ್ನು ಮಾಡಬಹುದು.
ದೇವಮಾನವನಿಗೆ ಇದು ಕಷ್ಟವಾಗಬಹುದು ಕಾರಣ ಅವನ ದೈವತ್ವದ ಗುಣ ಜ್ಞಾನದಿಂದ ಹಣ ಸಂಪಾದನೆ ಇದ್ದರೂ
 ಅದು ಮಿತಿಮೀರಿ ಬೆಳೆದಿರುವುದಿಲ್ಲ. ತತ್ವದ ಪ್ರಕಾರ
ನಡೆದಾಗ  ಎಲ್ಲರಲ್ಲಿಯೂ ಅಡಗಿರುವ ಆ ಪರಮಾತ್ಮನಿಗೆ ಮೋಸ ,ವಂಚನೆ ಮಾಡಲಾಗದು.ಹೀಗಾಗಿ ದೇವ ಮಾನವರಾದವರಲ್ಲಿ ಎಷ್ಟೋ ಸಂಸಾರಿಗಳು,ಸಂನ್ಯಾಸಿಗಳು
ದೇವರನ್ನು ಕಂಡಿದ್ದರು ತೋರಿಸಲಾಗಿಲ್ಲ.ಇಂದು ಹೊರಗಿನ ದೇವರನ್ನು ತೋರಿಸುವುದಕ್ಕಾಗಿಯೇ  ಕೋಟ್ಯಾಂತರ ಹಣವನ್ನು ಬಳಸುತ್ತಾರೆ ಕಂಡವರಿಲ್ಲ.
ಹೀಗಾಗಿ ನಾವು ಭೌತಿಕದಲ್ಲಿ ಸಾಕಷ್ಟು ದೇವರನ್ನು ಸೃಷ್ಟಿಸಿ ಅಧ್ಯಾತ್ಮದಲ್ಲಿ ಹಿಂದುಳಿದಿರೋದೆಂದರೆ ತಪ್ಪೆನ್ನುವವರಿದ್ದಾರೆ.
ಯುಗಯುಗದಿಂದಲೂ ನಡೆದು ಬಂದಿರುವ ಈ ಜೀವ
ಕೋಟಿಯ ಒಳಗೂ ಹೊರಗೂ ಆ ಪರಮಾತ್ಮನಿದ್ದರೂ
ತತ್ವಜ್ಞಾನವನ್ನು  ಅರ್ಥ ಮಾಡಿಕೊಳ್ಳಲು ಸೋತಿರುವ ನಾವು ತಂತ್ರದಲ್ಲಿ  ಎಷ್ಟೇ ವ್ಯವಹಾರ,ವ್ಯಾಪಾರ, ರಾಜಕೀಯ ನಡೆಸಿ
ಜನಬಲ,ಹಣಬಲ ಅಧಿಕಾರ,ಸ್ಥಾನ ಪಡೆದರೂ ಒಳಗಿರುವ
ದೈವತ್ವದೆಡೆಗೆ ಹೋಗಲು  ತತ್ವಜ್ಞಾನಿಗಳ  ತತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ಸಾಧ್ಯ.
ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ಶಾಲೆ ಇನ್ನಿತರ ವಿದ್ಯಾ ಸಂಸ್ಥೆ ನಡೆಸುತ್ತಿದ್ದರೂ ಮಕ್ಕಳಿಗೆ ತತ್ವಜ್ಞಾನದ
ಶಿಕ್ಷಣ ನೀಡದೆ ತಂತ್ರದಿಂದ  ಆಳಿದರೆ ಸ್ವತಂತ್ರ ಜ್ಞಾನೋದಯ ಕಷ್ಟ.
ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು ಇದರಲ್ಲಿ ಎರಡರ್ಥವಿದೆ ಒಂದು ಮುಂದಿನ ದೇಶವೆಂದರೆ ನಮ್ಮದೇ ದೇಶ, ಇನ್ನೊಂದು ಹೊರದೇಶದ ಪ್ರಜೆಗಳು.
ಜ್ಞಾನ ವಿಜ್ಞಾನದ ಅಂತರವನ್ನು ಬೆಳೆಸಿಕೊಂಡು ಮಾನವ ಮಹಾತ್ಮನಾಗೋದು ಕಷ್ಟ. ದೇವರನ್ನು ಬೆಳೆಸುವ ಮೊದಲು ಒಳಗಿರುವ ದೈವತ್ವವನ್ನು ಬೆಳೆಸುವ ನೈತಿಕತೆ,ಧಾರ್ಮಿಕತೆ, ಸಂಸ್ಕಾರದ ಮೂಲಕ  ಶಿಕ್ಷಣದಲ್ಲಿಯೇ ನೀಡಿದರೆ ಇಂದಿನ ಮಕ್ಕಳೇ ಮುಂದಿನ ನಮ್ಮ ದೇಶದ ಪ್ರಜೆಯಾಗಿರುವರು.
ಆಚರಣೆಯು ಒಂದು ದಿನದ ಮಟ್ಟಿಗೆ ಆಗದೆ ಪ್ರತಿದಿನವೂ
ಪೋಷಕರಾದ ನಾವು ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತೇವೆ.ಆದರೆ ಮಕ್ಕಳೇ ಪೋಷಕರ ಭವಿಷ್ಯದ ಬಗ್ಗೆ  ಧಾರ್ಮಿಕ ಚಿಂತನೆ ನಡೆಸದೆ ದೂರ ದೂರ ಹೋದರೆ ತಪ್ಪು ಮೂಲದಲ್ಲಿದೆ. ದೇವಮಾನವರನ್ನು ಬೆಳೆಸಿದ ಭಾರತದ ಶಿಕ್ಷಣದಲ್ಲಿ  ಮಾನವೀಯ ಗುಣವನ್ನು ‌ತುಂಬಬಹುದಷ್ಟೆ.
ಅದನ್ನು ಅಳವಡಿಸಿಕೊಳ್ಳಲು ಪೋಷಕರ ಸಹಕಾರ ಬೇಕು. ಮಂತ್ರಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ ಅಸುರತೆ ಬೆಳೆಯುವುದು. ಹೀಗಾಗಿ ದೇವಾಸುರರ ಪ್ರತಿಬಿಂಬವಾಗಿ ಮಕ್ಕಳಿರುವಾಗ ದೈವತ್ವ,ತತ್ವ, ಸತ್ಯವನ್ನು ತಿಳಿಸುತ್ತಾ ಬೆಳೆಸುವ ಶಿಕ್ಷಣ ಅಗತ್ಯ.
 ಯಾವುದೂ ಅತಿಯಾದರೆ ಗತಿಗೇಡು ಇದು ಅಧ್ಯಾತ್ಮ ಹಾಗು ವೈಜ್ಞಾನಿಕ  ಚಿಂತನೆಗಳಿಂದ ದೇಶದ ಮಕ್ಕಳಿಗೆ  ಆಂತರಿಕ ಜ್ಞಾನದ ನಂತರ ಭೌತಿಕ ವಿಜ್ಞಾನ ನೀಡಬೇಕಿದೆ. ಧಾರ್ಮಿಕ ಕ್ಷೇತ್ರ ರಾಜಕೀಯ ಕ್ಷೇತ್ರದ ಹಿಂದೆ ನಡೆಯೋ ಬದಲಾಗಿ ರಾಜಕೀಯ ಕ್ಷೇತ್ರವನ್ನು ಧಾರ್ಮಿಕತೆ ಕಡೆಗೆ ತರುವ ಮೂಲಕ ದೇಶರಕ್ಷಣೆ ಮಾಡಬೇಕಿತ್ತು.
ಇತ್ತೀಚೆಗೆ ಕೆಲವು ಧಾರ್ಮಿಕ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಇದೆ.ಆದರೆ ಬದಲಾವಣೆಗೆ ತತ್ವಜ್ಞಾನವನ್ನು ಅಳವಡಿಸಿ
ಕೊಳ್ಳಲು ಬೇಕಿದೆ ಶಿಕ್ಷಣ. ಶಿಕ್ಷಣವನ್ನು ವಿದೇಶಿಗಳ ಕಡೆ ಬಿಟ್ಟು  ವಿದೇಶಿ ಬಂಡವಾಳದಲ್ಲಿ ದೇವಾಲಯ ಕಟ್ಟಿದರೆ ದೇವರು ಹೊರಗಿರುತ್ತಾರೆ.ತಂತ್ರವೇ ಕುತಂತ್ರಿಗಳಿಗೆ ವರವಾಗಿ
ಕುತಂತ್ರಿಗಳೇ ಆಳುವಾಗ ನಮ್ಮ ಸ್ವತಂತ್ರ ಜ್ಞಾನದ ಗತಿ ಅದೋಗತಿ.
ಪೋಷಣೆ ಮಾಡಬೇಕಾಗಿರೋದು ತತ್ವಜ್ಞಾನವನ್ನು ತಂತ್ರವಲ್ಲ.ರಾಜಕೀಯ ಬೆಳೆದಿರೋದೆ ತಂತ್ರದಿಂದ. ಇದರಲ್ಲಿ
ಸ್ವತಂತ್ರ ಜ್ಞಾನ ಬೆಳೆಯಿತೆ? ಬೆಳೆದರೂ  ಅದರಿಂದಾಗಿ ದೇವ ಮಾನವರೆಷ್ಟು? ಮಹಾತ್ಮರೆಷ್ಟು? ಸಂತರು,ಸಾದು,ಸಂನ್ಯಾಸಿ,ದಾಸ,ಶರಣರು ಎಲ್ಲಿರುವರು?
ಪ್ರಶ್ನೆಗೆ ಉತ್ತರ  ನಿಜವಾದ ದೇವಮಾನವರು ನೀಡಬಹುದು.
ಮೊದಲು ಮಾನವ  ತತ್ವಜ್ಞಾನಿಂದ ದೇವಮಾನವ ಆಗುವುದು. ಅದೂ  ಒಳಗೆ ಅಳವಡಿಸಿಕೊಂಡು  ಸ್ಥಿತಪ್ರಜ್ಞಾವಂತರಾದರೆ ಸಾಧ್ಯ. ಓದಿ ಪ್ರಚಾರಕ್ಕೆ ಸೀಮಿತ ಆಗಿದ್ದರೆ  ನೋಡುಗರ ಕಣ್ಣಿಗೆ  ದೇವಮಾನವರಾಗಬಹುದು
ಬಹಳ ಕಷ್ಟಪಡಲು ಕಷ್ಟ. ಹೀಗಾಗಿ ಇಂದಿಗೂ ನಮಗೆ ದೈವತ್ವ ಪದಕ್ಕೆ ಪೂರ್ಣ ಅರ್ಥ ತಿಳಿದಿಲ್ಲ. 
ಜೀವವಿರೋವಾಗ ನಾನುಹೋಗಲ್ಲ. ನಾನು ಹೋದಾಗಲೇ
 ದೇವರು ಕಾಣೋದು ಎಂದರೆ  ಜೀವಾತ್ಮ ಪರಮಾತ್ಮನಿಗೆ ಶರಣಾಗಿ,ದಾಸನಾಗಿದ್ದರೆ ದೇವಮಾನವ.ಇಲ್ಲಿ ನಾನೆಂಬುದಿಲ್ಲ  ಎನ್ನುವ ಅಧ್ವೈತ,ನಾನಿದ್ದೇನೆ ಎನ್ನುವ 
ದ್ವೈತ, ವಿಶಿಷ್ಟಾದ್ವೈತ  ಎಲ್ಲಾ ತತ್ವಗಳಿವೆ ಆದರೆ ಎಲ್ಲಾ ಒಂದಾಗದೆ ಅತಂತ್ರಸ್ಥಿತಿಗೆ ಮನುಕುಲ ತಲುಪಿದೆ.  ಬೇಧ ಭಾವ ಸರ್ವ ಕಾಲದಲ್ಲಿಯೂ ಇದ್ದದ್ದೇ. ಹೀಗಾಗಿ ಇದೇ
 ಹೆಚ್ಚಾದರೆ  ಅಜ್ಞಾನವಷ್ಟೆ.
ಮಕ್ಕಳ ಸೂಕ್ಮವಾದ  ಮನಸ್ಸು  ಬಯಸುವುದು  ಸಂತೋಷ ಮಾತ್ರ. ಆತ್ಮಸಂತೋಷಕ್ಕೆ ಅವರಿಗೆ ಆತ್ಮಜ್ಞಾನವಿರಬೇಕು.
ಭೌತಿಕ ಸಂತೋಷದಲ್ಲಿ  ಆತ್ಮವಂಚನೆಯಾಗದಂತೆ  ಪೋಷಕರು  ಮಕ್ಕಳನ್ನು ದೈವತ್ವದೆಡೆಗೆ ನಡೆಸಿದರೆ ಪೋಷಕರು ದೇವರಾಗುತ್ತಾರೆ. ಇಲ್ಲವಾದರೆ ಅಸುರೀ ಶಕ್ತಿಯೇ ಪೋಷಕರ ಶೋಷಣೆ ಮಾಡುತ್ತದೆ. 
ಎಲ್ಲಿರುವುದು  ದೇವರು ?ಅಸುರರು?

No comments:

Post a Comment