ಹಿಂದಿನ ಯುಗಯುಗದಿಂದಲೂ ಭೂಮಿ ಇದೆ.ಅದರ ಮೇಲೆ ದೇವತೆಗಳು, ಮಾನವರು ಅಸುರರೂ ಇದ್ದರು. ಈಗ ಇದರಲ್ಲಿ ನಾವ್ಯಾರು? ನಮ್ಮೊಳಗಿರುವ ಗುಣ ಜ್ಞಾನದಿಂದಲೇ
ಭೂಮಿಯಲ್ಲಿ ಬದಲಾವಣೆ ಆಗುತ್ತಿದೆ. ದೈವತ್ವ ದೇವ ತತ್ವ ಸತ್ಯ ಧರ್ಮ ಆಂತರಿಕವಾಗಿ ಬೆಳೆದರೆ ದೇವರು, ಮಾನವೀಯತೆ,ಮೌಲ್ಯಯುತ ಜೀವನ ಇದ್ದರೆ ಮಾನವರು
ಅಸುರೀ ಗುಣಗಳು ದ್ವೇಷ ಅಹಂಕಾರ ಅತಿಯಾದ ಸ್ವಾರ್ಥ ದ ರಾಜಕೀಯ ಬೆಳೆದರೆ ಭೂಕಂಪ,ಪ್ರಕೃತಿವಿಕೋಪ, ಪ್ರಳಯ,ಯುದ್ದ,ಹೋರಾಟ,ಕೊಲೆ,ಕ್ರಾಂತಿ ಮುಂತಾದವುಗಳಿಂದ ಜೀವ ಹೋಗುತ್ತದೆ. ಒಟ್ಟಿನಲ್ಲಿ ಎಲ್ಲಾ ಜೀವಕ್ಕೂ ಅಂತ್ಯವಿದೆ. ಜೀವನ ಹೇಗೆ ನಡೆಸಬೇಕೆಂಬ ಜ್ಞಾನ
ವಿಜ್ಞಾನದ ನಡುವಿನ ಸಾಮಾನ್ಯಜ್ಞಾನವಿದ್ದರೆ ನಾವು ಮಾನವರಾಗಿ ಮಹಾತ್ಮರ ನಡೆ ನುಡಿಯಲ್ಲಿದ್ದ ತತ್ವದೆಡೆಗೆ ನಿಧಾನವಾಗಿಯಾದರೂ ಹೆಜ್ಜೆ ಹಿಂದಿಟ್ಟುಕೊಂಡು ಹಿಂದಿನ ಧರ್ಮವಾದ ಹಿಂದೂ ಧರ್ಮ ವನ್ನರಿಯಲು ಸಾಧ್ಯ.
ಮುಂದೆ ಮುಂದೆ ನಡೆದಷ್ಟೂ ಹಿಂದಿನವರಿಂದ ದೂರವಾದರೆ
ತಿರುಗಿ ಬರೋದು ಕಷ್ಟ.ನಿಧಾನವೇ ಪ್ರಧಾನ. ಎಲ್ಲರ ಜೀವನ
ಸರಿಪಡಿಸಲಾಗದು.ನಮ್ಮ ಜೀವನಕ್ಕೆ ನಾವೇ ಕಾರಣರು.
ಇದು ದೇವತೆಗಳು, ಮಾನವರು,ಅಸುರರ ಜ್ಞಾನದ ಮೇಲಿದೆ
ಅಧ್ಯಾತ್ಮ ಭೌತಿಕದ ನಡುವಿರುವ ಭೂಮಿಯ ಜನರಿಗೆ ಇಲ್ಲಿ
ನಾನ್ಯಾರೆಂಬುದೇ ಗೊತ್ತಿಲ್ಲ ಆದರೂ ನಾನು ಎಲ್ಲರನ್ನೂ ಆಳಲು ಹೊರಟು ಆಳಾಗಿ ಹಾಳಾಗಿ ಹೋದರೆ ಬೇರೆಯವರು ಕಾರಣವೆನ್ನುವುದು ಮಾತ್ರ ಗೊತ್ತು. ಇನ್ನೊಬ್ಬರ ತಪ್ಪು ನಮ್ಮ ಕಣ್ಣಿಗೆ ಕಾಣುತ್ತದೆ. ನಮ್ಮ ತಪ್ಪು ಇನ್ನೊಬ್ಬರಿಗೆ ಕಾಣುತ್ತದೆ. ಅಧಿಕಾರ,ಹಣವಿದ್ದರೆ ಮಾತ್ರ ತಪ್ಪು ಎತ್ತಿಹಿಡಿಯಬಹುದಾದರೆ ಇಲ್ಲದವರು ಅಧಿಕಾರವಿದ್ದವರ ತಪ್ಪು ಹೇಳಲಾಗದೆ ತಪ್ಪಿತಸ್ಥ ರ ಸಂಖ್ಯೆ ಮೇಲೇರಿದೆ.
ಅವರ ಹಿಂದೆ ನಡೆದಷ್ಟೂ ನಮ್ಮದೇ ತಪ್ಪಾಗುವಾಗ ಇದ್ದಲ್ಲಿಯೇ ನಮ್ಮ ಜೀವನದಲಾಗುತ್ತಿರುವ
ತಪ್ಪನ್ನು ಸರಿಪಡಿಸಿಕೊಂಡರೆ ಮಾನವರಾಗಿರಬಹುದು.
ದೇವಾಸುರರ ನಡುವಿರುವ ಮಾನವರು ಇರೋದೆಲ್ಲಿ?ಮನುಕುಲದ ಉದ್ದಾರ ಯಾರಿಂದಾಗಬೇಕಿದೆ? ದೈವತ್ವ ಯಾವುದು? ಅಸುರತ್ವ ಎಂದರೇನು? ಇವೆಲ್ಲವೂ ಸಾಮಾನ್ಯ ಜ್ಞಾನದಿಂದ ತಿಳಿಯುವುದು ಅಗತ್ಯ.
ಎಲ್ಲಿರುವರು ಮಹಾತ್ಮರು? ನಾನೆಂಬುದಿಲ್ಲ,ನಾನಿದ್ದೇನೆ, ಇವೆರಡರ ಮಧ್ಯೆ ಅಂತರ ಬೆಳೆಯುತ್ತಾ ಅಸುರ ಶಕ್ತಿಯೇ ನನ್ನ ನಡೆಸಿದರೆ ಕಷ್ಟ ನಷ್ಟ ನನ್ನ ಜೀವಕ್ಕೆ. ಇದು ಅಧ್ಯಾತ್ಮ ಸತ್ಯ. ದ್ವೇಷದ ರಾಜಕೀಯದಲ್ಲಿ ಯಾರು ಗೆದ್ದರೂ ಸೋತರೂ ಭಾರತೀಯರೆ ಎನ್ನುವುದಂತೂ ಸತ್ಯ. ಹಾಗೆಯೇ ಹಿಂದೂಗಳನ್ನು ತಮ್ಮೆಡೆ ಎಳೆದುಕೊಂಡು ಹಿಂದೂಸ್ತಾನ
ದಲ್ಲಿದ್ದರೂ ನಮ್ಮ ಋಣ ಇಲ್ಲಿದ್ದೇ ತೀರಿಸಬೇಕು. ನೆಲಜಲ ಬೇಕು ಧರ್ಮ ಬೇಡವೆ? ಯಾರನ್ನೋ ಆಳಲು ಹೋಗಿ ಕೆಡುವ ಬದಲಾಗಿ ನಮ್ಮನ್ನ ನಾವು ಆಳಿಕೊಳ್ಳುವ ಸ್ವತಂತ್ರಜ್ಞಾನವನ್ನು ಸಂಪಾದಿಸಲು ಮೂರನೆಯವರ ಅಗತ್ಯವಿಲ್ಲ.ನಮ್ಮ ಹಿಂದಿನವರ ಅಗತ್ಯವಿದೆ.ಅವರಲ್ಲಿದ್ದ ತತ್ವಜ್ಞಾನವನ್ನು ಅಳವಡಿಸಿಕೊಳ್ಳಲು ಬೇಕಾದ ಸತ್ಯದ ಅಗತ್ಯವಿದೆ.ಒಳಗೆ ಅಸತ್ಯ ಹೊರಗೆ ಸತ್ಯದ ನಾಟಕವಾಡಿದರೆ ಪರಮಾತ್ಮನಿಗೆ ಕಾಣೋದಿಲ್ಲವೆ?ವಿದೇಶಿಗಳ ಕರೆದು ಕೂರಿಸಿ ದೇಶ ನಡೆಸಿ ಎನ್ನುವ ಮೊದಲು ದೇಶದ ಭವಿಷ್ಯದ ಬಗ್ಗೆ
ಚಿಂತನೆ ನಡೆಸಲಾಗದ ಪ್ರಜಾಪ್ರಭುತ್ವದಲ್ಲಿ ನಮ್ಮದೇ ಸಹಕಾರವಿದೆ ಎನ್ನುವ ಸತ್ಯ ತಿಳಿದರೆ ಉತ್ತಮ .ಕರ್ಮಕ್ಕೆ ತಕ್ಕಂತೆ ಪ್ರತಿಫಲ.
ನಮ್ಮ ಜೀವ ಸರ್ಕಾರದೊಳಗಿದೆಯೋ ಅಥವಾ ನಮ್ಮ ದೇಹದಲ್ಲಿಯೋ? ದೇಶದೊಳಗಿರುವ ಪ್ರಜೆಗಳ ಸಹಕಾರ ವಿದೇಶಕ್ಕಿದ್ದರೆ ನಾವ್ಯಾರು? ಇದರಿಂದಾಗಿ ನಮ್ಮ ಆತ್ಮಜ್ಞಾನ
ಬೆಳೆಯಿತೆ? ಆತ್ಮಜ್ಞಾನದಿಂದ ಜೀವಕ್ಕೆ ಮುಕ್ತಿ ಎಂದರೆ ಎಲ್ಲಿದೆಆತ್ಮ? ಯಾವುದು ಶಾಶ್ವತಜ್ಞಾನ?
ದೇವರನ್ನು ಆಳುವುದೆ? ದೇವರೆ ಆಳುವುದೆ? ಅಳುವುದಷ್ಟೆ
ಮಾನವರ ಕೆಲಸವಾಗಬಾರದು. ತತ್ವವನ್ನು ತಂತ್ರವಾಗಿಸಿ ಆಳಬಹುದಷ್ಟೆ. ಸ್ವತಂತ್ರ ವಾಗಿರಲು ಕಷ್ಟವಿದೆ. ಸ್ವತಂತ್ರ ಭಾರತ ಅತಂತ್ರಸ್ಥಿತಿಗೆ ತಂದಿರೋದೆ ಅರ್ಧ ಸತ್ಯದ ಜೀವನ.
No comments:
Post a Comment