ಹರಿ ದೊಡ್ಡವನೋ ಹರನೋ ಎನ್ನುವ ವಾದ ವಿವಾದದಲ್ಲಿ ಅಂತರಗಳೇ ದೊಡ್ಡದಾಗಿ ಬೆಳೆದಿದೆ. ಯಾರು ದಡ್ಡರು? ದೊಡ್ಡವರು ಎಲ್ಲಿರುವರು? ಕೇಳೋದಕ್ಕೆ ನಾವ್ಯಾರು? ಹೇಳೋದಕ್ಕೆ ನಾನ್ಯಾರು? ಪ್ರಶ್ನೆಗೆ ಉತ್ತರ ಒಳಗಿತ್ತು.ಹೊರಗೆ ಹುಡುಕುತ್ತಾ ದೂರ ದೂರ ನಡೆದು ಸುಸ್ತಾಗಿದ್ದೇವಷ್ಟೆ. ಅಂತರ ಬೆಳೆಸುವುದು ಸುಲಭದ ಕೆಲಸ.ಜೋಡಿಸುವುದೇ ಕಷ್ಟ. ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ ಎಂದಂತಾಗಿದೆ.
ಭೂಮಿಯ ಮೇಲಿದ್ದ ದೇವಾನುದೇವತೆಗಳು ಎಲ್ಲಿರುವರು?
ಭೂಮಿಯಲ್ಲಿ ಮಾತ್ರ ಮನುಕುಲವಿರೋವಾಗ ಯಾರು ಶ್ರೇಷ್ಠ ರು? ಭೂ ತಾಯಿಯ ಋಣ ತೀರಿಸಲು ನಮ್ಮ ಸೃಷ್ಟಿ ಆಗಿದೆ.
ಸೃಷ್ಟಿಯಂತೆ ಸ್ಥಿತಿ ನಂತರ ಲಯವೂ ಆಗುತ್ತದೆ. ಇದನ್ನು ನಮ್ಮ ಜ್ಞಾನದಿಂದಲೇ ತಿಳಿಯಬಹುದಷ್ಟೆ. ಜ್ಞಾನವು ಆಂತರಿಕ ಸತ್ಯದೊಡನಿದ್ದರೆ ಉತ್ತಮ ಸೃಷ್ಟಿ. ಭೌತಿಕ ಸತ್ಯದಲ್ಲಿದ್ದು ಆಂತರಿಕ ಸತ್ಯದಿಂದ ದೂರವಾದಷ್ಟು ಲಯವೇ ಹೆಚ್ಚುತ್ತದೆ. ಅವರವರ ಸ್ಥಿತಿಗೆ ಅವರವರ ಸೃಷ್ಟಿ ಕಾರಣವಾದಾಗ ಮೂಲದ ಸೃಷ್ಟಿ ಯನ್ನರಿತವರಿಗೆ ಲಯದ ಬಗ್ಗೆ ಚಿಂತೆಯಿಲ್ಲ. ತಿಳಿಯದವರಷ್ಟೆ ಲಯವನ್ನು ವಿರೋಧಿಸಿ
ಕ್ರಾಂತಿಯ ಬೀಜ ಬಿತ್ತುವುದು.
ಸೃಷ್ಟಿಯ ರಹಸ್ಯ ಸೃಷ್ಟಿಕರ್ತ ನಿಗೇ ಗೊತ್ತು. ಸೃಷ್ಟಿ ಮಾಡಲಾಗದ ಮಾನವನಿಗೇನು ಗೊತ್ತು .ಗೊತ್ತಾದರೂ ತೋರಿಸಲಾಗದು ನಿರಾಕಾರ ಬ್ರಹ್ಮನ ನಿರಾಕಾರದ ಜೊತೆಗೆ ನಿರಹಂಕಾರದಿಂದ ಕಂಡುಕೊಂಡವರೆ ಮಹಾತ್ಮರು.ಇದನ್ನು
ರಾಜಕೀಯದಿಂದ ತಿಳಿಯಲಾಗದ ಮೇಲೆ ರಾಜಯೋಗದ ಕಡೆಗೆ ನಡೆಯುವುದೇ ಧರ್ಮ.
No comments:
Post a Comment