**ಅದೃಷ್ಟ ನಮ್ಮ ಕೈಯಲ್ಲಿ ಇರುವುದೋ ಇಲ್ಲವೋ ಗೊತ್ತಿಲ್ಲ. ಆದರೆ ನಿರ್ಧಾರ ಮಾತ್ರ ಯಾವಾಗಲು ನಮ್ಮ ಕೈಯಲ್ಲಿ ಇರುತ್ತದೆ.**
ಅದೃಷ್ಟವನ್ನು ಯಾರೋ ಅಳೆದು ತೂಗಿ ಕೊಡಲಾಗದು.
ನಿನ್ನ ಶ್ರಮಕ್ಕೆ ತಕ್ಕಂತೆ ಫಲ ಸಿಕ್ಕಾಗ. ಅದನ್ನು ಅದೃಷ್ಟ ಎಂದರೆ ಶ್ರಮವಿಲ್ಲದೆಯೇ ಸಿಗುವ ಅಧಿಕಾರ, ಸ್ಥಾನಮಾನದ ಅದೃಷ್ಟವನ್ನು ಏನು ತಿಳಿಯಬೇಕು?
ಅಧ್ಯಾತ್ಮ ಮತ್ತು ಭೌತಿಕದಲ್ಲಿ ಅದೃಷ್ಟ ದುರಾದೃಷ್ಟವನ್ನು ವಿರುದ್ದವಾಗಿ ಅಳೆಯಲಾಗುತ್ತದೆ. ಶ್ರಮಪಟ್ಟವನಿಗೆ ಅದೃಷ್ಟ
ಎನ್ನದೆ ಶ್ರಮವಿಲ್ಲದೆ ಸಂಪಾದಿಸುವವನಿಗೆ ಅದೃಷ್ಟ ವಂತನೆಂದು ಪರಿಗಣಿಸುವುದು ಭೌತಿಕ ಜಗತ್ತು. ಅಧ್ಯಾತ್ಮ ಜಗತ್ತಿನಲ್ಲಿ ಅದೃಷ್ಟ ವೆನ್ನುವ ಪದವನ್ನು ಬಳಸುವುದು ಯಾವಾಗಧಾರ್ಮಿಕ ಪೀಠದಅಧಿಕಾರ,ಸ್ಥಾನಮಾನ,ಸನ್ಮಾನ
ಗಳು ಸುಲಭವಾಗಿ ಸಿಗುವುದೋ ಆಗ. ಅದೃಷ್ಟ ಎನ್ನಬಹುದು. ಕಾರಣ ಭೌತಿಕದಲ್ಲಿದ್ದು ಇಂತಹ ಅವಕಾಶ ಅಧಿಕಾರ ಎಲ್ಲರಿಗೂ ಸಿಗುವುದಿಲ್ಲ. ಎರಡೂ ಕಡೆಯಿಂದಲೂ
ಆ ಪರಮಾತ್ಮನ ಕೃಪೆ,ಆಶೀರ್ವಾದ ಅಗತ್ಯವಾಗಿದೆ. ಒಂದೆಡೆ
ಹೆಚ್ಚು ಅಧ್ಯಾತ್ಮ ಜ್ಞಾನದೆಡೆಗೆ ನಡೆದಿರಬೇಕು,ಇನ್ನೊಂದು ಕಡೆ ಭೌತಿಕ ವಿಜ್ಞಾನ ತಿಳಿದಿರಬೇಕಷ್ಟೆ. ಏನೂ ತಿಳಿಯದೆ,
ನಡೆಯದೆ ಯಾರೋ ಬಂದು ಹಣವಿದೆಯೆಂದು
ಅಧಿಕಾರಕ್ಕೆ ಏರಿಸಿದರೆ ಮಾತ್ರ ಕುಳಿತ ಸ್ಥಳದ ಜೊತೆಗೆ ಸುತ್ತಮುತ್ತಲಿನ ಪರಿಸರವೂ ಹಾಳಾಗುತ್ತಾ ಅದೃಷ್ಟ ಹೋಗಿ
ದುರಾದೃಷ್ಟವೆ ಬೆಳೆಯೋದು. ಇಂದಿನ ರಾಜಕೀಯದಲ್ಲಿ ಯಾರು ಯಾವಾಗ ಮೇಲೇರುವರೋ ಕೆಳಗಿಳಿಯುವರೋ ಗೊತ್ತೇ ಆಗಲ್ಲ. ಅಜ್ಞಾನದ ಕೈಗೆ ಮತದಾನದ ಹಕ್ಕು ನೀಡಿ ಹಣದಿಂದ ಅದೃಷ್ಟ ಖರೀದಿಸಿ ಕೊನೆಗೆ ಅಧಿಕಾರವೂ ಹಣವೂ ನೀರುಪಾಲು.ಇದು ಒಬ್ಬ ವ್ಯಕ್ತಿಗಲ್ಲ ಇಡೀ ಸಮಾಜಕ್ಕೆ ಕಂಟಕಪ್ರಾಯವಾದರೆ ಇದರ ಪ್ರತಿಫಲವನ್ನು
ಎಲ್ಲಾ ಸೇರಿ ಅನುಭವಿಸಬೇಕು. ಹಾಗಾಗಿ,
ಭೂಮಿಯಲ್ಲಿ ಹುಟ್ಟುವುದೇ ಅದೃಷ್ಟವೆನ್ನಬಹುದು.ಕಾರಣ ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯದ ಲೆಕ್ಕಾಚಾರವನ್ನು ಜೀವ ಕಳೆದುಕೊಂಡು ಹೋಗುವುದಕ್ಕೆ ಜನನವಿದೆ. ಎಷ್ಟೋ
ಅತೃಪ್ತ ಆತ್ಮಗಳು ಜನ್ಮವಿಲ್ಲದೆ ಸುತ್ತಾಡುತ್ತಿರುವುದನ್ನು ಅರ್ಥ ಮಾಡಿಕೊಳ್ಳಲು ಜ್ಞಾನದಿಂದ ಸಾಧ್ಯ. ಜ್ಞಾನ ಸಂಪಾದನೆಗೆ ಜನ್ಮವಿದೆ. ಯಾವಾಗ ಜ್ಞಾನವನ್ನು ದುರ್ಭಳಕೆ
ಮಾಡಿಕೊಂಡು ಅಧಿಕಾರ,ಹೆಸರು,ಹಣ,ಸ್ಥಾನಮಾನ ಪಡೆದು
ನನ್ನ ಅದೃಷ್ಟ ವೆನ್ನುವ ಅಹಂಕಾರದಿಂದ ಮಾನವ ಮೆರೆಯುವನೋ ಆಗಲೇ ದುರಾದೃಷ್ಟವೂ ಹಿಂದಿನಿಂದ ಆವರಿಸುತ್ತದೆ.ಹೊರಗಿನ. ರಾಜಕೀಯ ವ್ಯಕ್ತಿಗಳನ್ನು
ಅದೃಷ್ಟವಂತರೆನ್ನಬಹುದೆ?
ಜನರನ್ನು ದೇಶವನ್ನು ಆಳುವುದು ಸಾಮಾನ್ಯರಿಗೆ ಕಷ್ಟ
ಹೀಗಿರುವಾಗ ಅಂತಹ ದೊಡ್ಡ ವ್ಯಕ್ತಿಗಳು ಅದೃಷ್ಟದ
ಕೆಲಸ ಮಾಡಿದ್ದರೆ ಮಾತ್ರ ರಾಜಕೀಯ ನಡೆಸಲು
ಸಾಧ್ಯ. ಇಲ್ಲಿ ಧರ್ಮದಿಂದ ರಾಜಕೀಯ ನಡೆಸುವುದು ಕಷ್ಟ.
ಅಧರ್ಮದಿಂದ ಸುಲಭ ಹೀಗಾಗಿ ಅಧರ್ಮಕ್ಕೆ ಅದೃಷ್ಟ ವೆಂದರೆ ತಪ್ಪು. ಒಂದು ಕಣ್ಣಿಗೆ ಕಾಣುವ ಅದೃಷ್ಟ ಇನ್ನೊಂದು ಕಣ್ಣಿಗೆ ಕಾಣದ ಅದೃಷ್ಟ.
ಹಿಂದಿನ ಮಹಾತ್ಮರುಗಳು ಅದೃಷ್ಟವಂತರೆ? ಅವರ ಜೀವನದಲ್ಲಿ ಭೌತಿಕ ಸುಖವಿರಲಿಲ್ಲ ಆದರೆ ಅಧ್ಯಾತ್ಮ ದ ಸುಖದಲ್ಲಿ ಮೈಮರೆತಿದ್ದರು. ಹೀಗಾಗಿ ಯಾವುದೋ ಒಂದು
ರೀತಿಯಲ್ಲಿ ಎಲ್ಲಾ ಅದೃಷ್ಟವಂತರೆ. ಯಾವ ರೀತಿಯ ಅದೃಷ್ಟ ನಮಗಿದೆ ಎನ್ನುವ ಸತ್ಯವನ್ನು ನಾವೇ ಅರಿತರೆ ಹೊರಗಿನವರಿಂದ ಅದೃಷ್ಟವಂತರು ಎನ್ನಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲರೊಳಗಿದ್ದೂ ನಡೆಸೋ ಮಹಾಶಕ್ತಿಯನ್ನು
ಎಲ್ಲಾ ಅದೃಷ್ಟವಂತರೂ ಗುರುತಿಸಲಾಗದು. ಆದರೂ ಇದು
ಸತ್ಯವಾದಾಗ ನಮ್ಮ ಈ ಜನ್ಮದ ಉದ್ದೇಶ ತಿಳಿದು ನಡೆದರೆ
ಅದೃಷ್ಟ. ಯಾರೋ ಒಬ್ಬರು ಅಧ್ಯಾತ್ಮ ದ ವಿಚಾರವನ್ನು ಬರೆಯುತ್ತಿರುವುದಕ್ಕೆ ನೀವು ಅದೃಷ್ಟವಂತರು ಎಂದಿದ್ದರು.
ಆದರೆ, ಅಂತಹ ಜ್ಞಾನವುಳ್ಳವರೊಡನೆ, ಸತ್ಸಂಗದೊಡನೆ
ಬೆರೆತು ಜೀವನ ನಡೆಸೋರೆ ಅದೃಷ್ಟವಂತರು.
ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂದಂತೆ. ಕೆಲವರಿಗೆ
ಜನ್ಮದಾರಂಭದಿಂದಲೇ ಅಂತಹ ಸಂಗವಿದ್ದು ಮುಂದೆ ಬಂದರೆ ಕೆಲವರಿಗೆ ಯಾವುದೇ ರೀತಿಯ ಸಂಗವಿಲ್ಲದೆ ಜ್ಞಾನ ಬರಬಹುದು.
ಮತ್ತೆ ಕೆಲವರಿಗೆ ಸಂಗವಿದ್ದರೂ ಅಜ್ಞಾನವೇಇರಬಹುದು.
ಇಲ್ಲಿ ಜ್ಞಾನದಿಂದ ಅದೃಷ್ಟ ಎನ್ನುವ ಬದಲು ಅಜ್ಞಾನದಲ್ಲಿ
ಅದೃಷ್ಟ ನೋಡುವವರ ಸಂಖ್ಯೆ ಹೆಚ್ಚು.ಹೀಗಾಗಿಸಾಮಾನ್ಯ
ಜ್ಞಾನ ಬಿಟ್ಟು ಅಜ್ಞಾನದಲ್ಲಿ ಅದೃಷ್ಟವನ್ನು ಅಳೆದು ಹಂಚಲಾಗುವ ರಾಜಕೀಯವಿದೆ. ರಾಜಯೋಗ ಹಿಂದುಳಿದು
ಹಿಂದುಳಿದವರನ್ನು ಅದೃಷ್ಟವಂತರೆಂದರೆ ತಪ್ಪು. ಹಿಂದಿನ ಧರ್ಮ ವೇ ಹಿಂದೂ ಧರ್ಮ. ಯಾರು ಅವರವರ ಹಿಂದಿನ ಧರ್ಮ ಕರ್ಮ ಕ್ಕೆ ತಲೆಬಾಗಿರುವರೋ ಅವರಿಗೆ ಜ಼ೀವನ್ಮುಕ್ತಿ
ಎಂದಾಗ ನಿಜವಾದ ಅದೃಷ್ಟವಂತರು ಯಾರು?
ಸಾಲ ತೀರಿಸಲು ಬಂದ ಜೀವಾತ್ಮನಿಗೆ ಹಣವಿಲ್ಲದೆಯೂ ಜ್ಞಾನದಿಂದ ಜೀವನ ನಡೆಸಿ ಮುಕ್ತಿ ಪಡೆದವರೆ ಶರಣರು..
ಪರಮಾತ್ಮನಿಗೆ ದಾಸರಾಗೋದು ಶರಣಾಗೋದೆಂದರೆ ಸತ್ಯ
ಮತ್ತು ಧರ್ಮದ ಪರ ನಡೆಯೋದು. ಇಲ್ಲಿ ಯಾರೋ ಬಂದು ಯಾರದ್ದೋ ದೇಶವನ್ನು ಧರ್ಮ ವನ್ನು ಹಾಳು ಮಾಡುತ್ತಿದ್ದಾರೆನ್ನುವ ಬದಲಾಗಿ ನಮ್ಮವರಲ್ಲಿಯೇ ಇರದ ಒಗ್ಗಟ್ಟಿನ ಕೊರತೆಯಿಂದಲೇ ನಾವು ಹಿಂದುಳಿದಿರುವು
ದೆನ್ನುವ ಸತ್ಯ ತಿಳಿದು ನಮ್ಮ ನಮ್ಮ ಅದೃಷ್ಟವನ್ನು ಅಧ್ಯಾತ್ಮದಿಂದ ಅರ್ಥ ಮಾಡಿಕೊಂಡರೆ ಉತ್ತಮ.
ಕಲಿಗಾಲದಲ್ಲಿ ಕರ್ಮ ಯೋಗಿಗಳು ಅದೃಷ್ಟ ವಂತರಂತೆ.
ಮಾಧ್ಯಮಗಳಲ್ಲಿ ಹಲವು ಪ್ರತಿಭಾವಂತರು ಒಮ್ಮೆಗೇ ಕಾಣಿಸಿಕೊಂಡರೂ ಕೊನೆಯವರೆಗೂ ಅವರನ್ನು ನೋಡಲು ಕಷ್ಟ. ಹೀಗಾಗಿ ಅದೃಷ್ಟ ವೆನ್ನುವುದು ಬದಲಾಗುತ್ತಾ ಹೋಗುತ್ತದೆ. ಇಂದಿನ ರಾಜ ಮುಂದಿನ ಬಿಕ್ಷುಕನಾಗಬಹುದು, ಬಿಕ್ಷುಕ ಬಿಕ್ಷುವಾಗಿಬದಲಾಗಬಹುದು.
ನಾಲ್ಕು ವರ್ಣ ಇಂದು ಒಡೆದು ಅಸಂಖ್ಯಾತ ಜಾತಿಗಳಾಗಿ
ಧರ್ಮ ವಾಗಿದೆ. ಇದನ್ನು ಅರ್ಥ ಮಾಡಿಕೊಂಡರೆ ವಾಸ್ತವದ ಸತ್ಯದರ್ಶನ. ಪ್ರಜಾಪ್ರಭುತ್ವದ ಪ್ರಜೆಗಳು ಭಾರತದಲ್ಲಿ ಜನ್ಮ ಪಡೆಯಲು ಅದೃಷ್ಟ ಮಾಡಿರಬೇಕೆಂಬ ಸತ್ಯ ತಿಳಿಯೋದಿಲ್ಲ.
ಕಾರಣ ಇಲ್ಲಿ ಸತ್ಯವೇ ಇಲ್ಲ. ಹೀಗಾಗಿ ವಿದೇಶಗಳಿಗೆ ಹೋಗಿ
ಅದೃಷ್ಟವನ್ನು ಕೊಂಡಾಡುತ್ತಾರೆ. ಹೀಗಾದರೆ ಅದೃಷ್ಟ ಕೇವಲ
ಹಣದ ಆಧಾರದ ಮೇಲೆ ಅಳೆಯಲಾಗುತ್ತಿದೆ. ಜ್ಞಾನವಲ್ಲ.
ಅಧ್ಯಾತ್ಮ ದಲ್ಲಿ ಜ್ಞಾನವೇ ಅದೃಷ್ಟವನ್ನು ತೋರಿಸುತ್ತದೆ.
ಎಲ್ಲೇ ಇರು ಹೇಗೇ ಇರು ಭಾರತೀಯನಾಗಿರು,
ಕನ್ನಡಿಗನಾಗಿರು ಎನ್ನುವ ಬದಲು ಮಾನವನಾಗಿರು ಎನ್ನಬಹುದು. ಅದೃಷ್ಟವಂತರು ಅವರವರ ಧರ್ಮ, ಕರ್ಮ ,ದೇಶ,ರಾಜ್ಯ,ಭಾಷೆ,ಸಂಸ್ಕೃತಿಯ ಒಳಗಿದ್ದರೆ
ಉತ್ತಮ.ಹೊರಗೆ ಹೋಗಿದ್ದರೆ ಅಧಮ.ದೂರ ಹೋದಷ್ಟೂ ಅದೃಷ್ಟ ಹಿಂದುಳಿಯುತ್ತದೆ. ಹಿಂದೂ ಧರ್ಮ
ಹಾಳಾಗಿಲ್ಲ. ಇಡೀ ವಿಶ್ವ ಹರಡಿದೆ ಆದರೆ ಹಿಂದೂಸ್ತಾನ್ ಹೆಸರಿನಲ್ಲಿದೆ ,ಹಿಂದೂಸ್ತಾನದಲ್ಲಿ ಹಿಂದೂಗಳಿಲ್ಲ. ಕಾರಣ ಇಲ್ಲಿ ಹಿಂದಿನ ಶಿಕ್ಷಣ ಪ್ರಜೆಗಳಿಗೆ ಕೊಟ್ಟಿಲ್ಲ.ಅವರವರ ಹಿಂದಿನ ಧರ್ಮ ಬಿಟ್ಟು ಹೊರಗಿನ ಹೋರಾಟ,ಹಾರಾಟ,
ಮಾರಾಟದಿಂದ ಧರ್ಮ ರಕ್ಷಣೆ ಆಗದೆ ತಮ್ಮ ತಮ್ಮ
ಅದೃಷ್ಟವನ್ನು ಅಳೆಯಲಾಗಿದೆ. ಅಧಿಕಾರ,ಹಣ,ಸ್ಥಾನವಿದ್ದವರಿಗೆ ವಾಸ್ತವ ಸತ್ಯದ ಅರಿವಿಲ್ಲ. ಅರಿವಿದ್ದವರಿಗೆ ಹೇಳುವ ಅಧಿಕಾರವಿಲ್ಲ.
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ. ಯಾರು ಅದೃಷ್ಟವಂತರು? ಮೂರನೆಯವರು ಯಾರು?
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಪರಮಾತ್ಮನ ಜೊತೆಗಿರೋದು ಅದೃಷ್ಟ. ಇದಕ್ಕೆ ಪರಮ ಸತ್ಯದ ಅಗತ್ಯವಿದೆ.
No comments:
Post a Comment