ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, November 6, 2022

ಗ್ರಹಣವನ್ನು ಹೀಗೂ ಅರ್ಥ ಮಾಡಿಕೊಳ್ಳಬಹುದು

ಗ್ರಹಣಗಳು  ಹೆಚ್ಚಾಗುವುದಕ್ಕೆ ಕಾರಣವೇ ಮಾನವನ ಅಜ್ಞಾನದ ಜೀವನ ಶೈಲಿ ಎನ್ನುತ್ತಾರೆ ತಿಳಿದವರು.
ಗ್ರಹ ದೋಷ ಗಳಿಗೆ ಸಾಕಷ್ಟು ಧಾರ್ಮಿಕ ಪರಿಹಾರ ಕಾರ್ಯ ಇದೆ. ಆದರೆ ಗ್ರಹಚಾರದ ಬಗ್ಗೆ ತಿಳಿಯುವ ಜ್ಞಾನದ ಕೊರತೆ ಮಾನವನಲ್ಲಿ ಬೆಳೆದು ನಿಂತಿದೆ. ಭೂಮಿ ಎನ್ನುವ ಗ್ರಹವನ್ನು
ಹೇಗೆ ಬಳಸಿಕೊಂಡರೆ  ಜ್ಞಾನ ಬೆಳೆಯುವುದೆನ್ನುವ ನಮ್ಮ ಹಿಂದಿನ ಧರ್ಮ ಕರ್ಮ  ಸಿದ್ಧಾಂತ ತತ್ವಗಳನ್ನು  ನಮ್ಮ ಮನಸ್ಸಿಗೆ ಬಂದಂತೆ  ಹೊರ ಹಾಕುವಾಗ ಇದೇ ಮುಂದಿನ ಪೀಳಿಗೆಗೆ ಗ್ರಹಚಾರ ಬೆಳೆಸಿದರೆ ವ್ಯರ್ಥ .ಆದರೆ  ಲೋಕ ಕಲ್ಯಾಣಾರ್ಥ ವಾಗಿ   ಭೂ ಗ್ರಹದಲ್ಲಿ ನಡೆಸುವ ಧಾರ್ಮಿಕ ಕಾರ್ಯಕ್ರಮ  ಜನಸಾಮಾನ್ಯರಿಗೆ ಅರ್ಥ ವಾಗುವಂತೆ ವಿವರಿಸುತ್ತಾ ಅವರವರ ಗ್ರಹಚಾರಕ್ಕೆ ಅವರ ಧರ್ಮ ಕರ್ಮ ಕಾರಣವೆನ್ನುವ ಸತ್ಯ ತಿಳಿಸುವತ್ತ  ನಮ್ಮ ಸೇವೆಯು ಶುದ್ದತೆ ಕಡೆಗಿದ್ದರೆ  ಶುದ್ದ ಮನಸ್ಸಿನಿಂದಲೇ ಎಲ್ಲಾ ಕಾರ್ಯಕ್ರಮ ನಡೆದು  ಗ್ರಹಗಳು ತಮ್ಮ ಸ್ವಸ್ಥಾನದಲ್ಲಿ ಚಲಿಸಬಹುದು. ಯಾವಾಗ  ಮನಸ್ಸು ಹೊರ ನಡೆದು ಸ್ವೇಚ್ಚಾಚಾರಕ್ಕೆ ತಿರುಗಿ
ಇತರರನ್ನು ದಾರಿತಪ್ಪಿಸಿ ಆಳುವುದೋ ಆಗಲೇ ಪ್ರಕೃತಿವಿಕೋಪ, ಗ್ರಹಣಗಳು, ಭೂ ಕಂಪಗಳು ಹೆಚ್ಚುತ್ತಾ  ಮನುಕುಲಕ್ಕೆ ಮಾರಕವಾಗುತ್ತದೆ. ಒಟ್ಟಿನಲ್ಲಿ ಭೂಮಿಯನ್ನು
ಮಾನವ ಹೇಗೆ ಬಳಸುವನೋ ಹಾಗೆ ಗ್ರಹಗಳ ಚಲನೆಯೂ
ನಡೆಯುತ್ತದೆ. ಭೂಮಿಯನ್ನು ಸುತ್ತುವ ಚಂದ್ರನಿಗೂ ಗ್ರಹಣ
ಭೂಮಿ ಸುತ್ತುವ ಸೂರ್ಯ ನಿಗೂ ಗ್ರಹಣ ಹಿಡಿಯುವುದು
ಯುಗಯುಗದಿಂದಲೂ ಇದೆ. ಅಂದರೆ ಗ್ರಹಣವನ್ನು ಮುಂದೆ ಇಟ್ಟುಕೊಂಡು ಹಣ ಮಾಡೋರೂ ಇದ್ದಾರೆ. ಗ್ರಹಣದಿಂದ ಹಣ ಕಳೆದುಕೊಳ್ಳುವ ಜನರೂ ಇದ್ದಾರೆ. ಗ್ರಹಣವು  ಹಿಡಿಯೋದು ಗ್ರಹಚಾರವಿದ್ದವರಿಗೆ .ಗ್ರಹಚಾರ ಮಾನವನಿಗೆ ಇದ್ದೇ ಇರುತ್ತದೆ. ಇದನ್ನು ಸರಿಯಾದ ಆಚಾರ,ವಿಚಾರ, ಪ್ರಚಾರದಿಂದ  ಅರ್ಥ ಮಾಡಿಕೊಳ್ಳಲು ನಮ್ಮಲ್ಲಿರಬೇಕು ಶಿಷ್ಟಾಚಾರ. ಶಿಷ್ಟರೆಂದರೆ  ಯಾರು? 
ಗುರುವಾದವರು ಶಿಷ್ಯರಿಗೆ ದಾರಿದೀಪವಾದಂತೆ, ಪ್ರಜೆಗಳಾದವರು ದೇಶಕ್ಕೆ ದಾರಿದೀಪಗಳು.ದಾರಿಹೋಕರನ್ನು ಬೆಳೆಸುವ ಭ್ರಷ್ಟಾಚಾರ ಕ್ಕೆ ಸರಿಯಾಗಿ ಗ್ರಹಣಹಿಡಿಯುತ್ತದೆ. ಜೀವವೇ ಅನುಭವಿಸಬೇಕು. ಒಟ್ಟಿನಲ್ಲಿ ಮಾಧ್ಯಮಗಳಿಗೆ ಹಿಡಿದಷ್ಟು ಗ್ರಹಣ  ಯಾರಿಗೂ ಹಿಡಿಯೋದಿಲ್ಲ.ಅದರ ಹಿಂದೆ ನಡೆದರೆನಮಗೂ ಗ್ರಹಣ ಹಿಡಿಯುವುದು. 
ಉತ್ತಮ ಸುದ್ದಿ ಪ್ರಸಾರಮಾಡಿದರೆ ಇಡೀ ದೇಶಕ್ಕೆ ವಿಶ್ವಕ್ಕೆ 
ಗ್ರಹಣ ದೋಷ ಇರದು.
ಸಾಧ್ಯವೆ? ಎಲ್ಲಿರುವರು ಗ್ರಹ ದೇವತೆಗಳು?
ಭಾನು,ಸೋಮ,ಮಂಗಳ,ಭುಧ,ಗುರು,ಶುಕ್ರ,ಶನಿ..ನಿರಂತರ
ವಾರದ ಏಳೂ ದಿನಗಳಂದು  ನೆನಿಸಿಕೊಳ್ಳುವ ಮಾನವನಿಗೆ
ಅವರೊಂದಿಗಿರುವ ಶಕ್ತಿವಿಶೇಷತೆ ಬಗ್ಗೆ ಅರಿವಿಲ್ಲದೆ ಕೇವಲ
ವಾರ ಎನ್ನುವ ಹಂತಕ್ಕೆ ಬಂದು ಮಾಡಬಾರದ ರಾಜಕೀಯ ಮಾಡುತ್ತಾ ಆಳಿದರೆ  ಗ್ರಹಣ ಹಿಡಿಯುವುದು ಸಹಜ.
ಇದನ್ನು ಸರಿಯಾದ ದಾನ,ಧರ್ಮ,ಪೂಜೆ,ದ್ಯಾನ,ಯೋಗದ ಮೂಲಕ ಕಳೆದುಕೊಳ್ಳಲು  ಪುರೋಹಿತರು,ಧಾರ್ಮಿಕ ಜನರು, ಗುರು ಹಿರಿಯರು, ಜ್ಞಾನಿಗಳು,ಭವಿಷ್ಯ ಹೇಳುವವರು ಇನ್ನಿತರ ಹಿಂದೂ ಧರ್ಮದವರು ತಿಳಿಸಿದ್ದಾರೆ
ಅವರು  ತತ್ವಜ್ಞಾನದಿಂದ ತಿಳಿದು ಪರಿಹಾರ ಸೂಚಿಸಿದ್ದಾರೆ
ನಮ್ಮದೇ ತಂತ್ರದಿಂದ ಅದನ್ನು ತಿಳಿದು ಇನ್ನಷ್ಟು ಗ್ರಹ ಗಳ ಸೃಷ್ಟಿ ಮಾಡುತ್ತಾ ಕಾಲಹರಣ ಮಾಡಿದರೆ ನಿಜವಾದ ಗ್ರಹಣ
ಹಿಡಿದವರೆ ಹೆಚ್ಚಾಗುತ್ತಾರೆ. ಸತ್ಯವಿದೆ ಧರ್ಮ ವಿದೆ.ಆದರೆ ಪೂರ್ಣವಾಗಿ ತಿಳಿದವರಿಲ್ಲದೆ ಅರ್ಧ ಸತ್ಯದಲ್ಲಿ ರಾಜಕೀಯ
ಬೆಳೆದಿದೆ. ಹಾಗಾದರೆ ನಾವ್ಯಾರು? ನಾನ್ಯಾರು ಪ್ರಶ್ನೆಗೆ ಉತ್ತರ
ಒಳಗಿರುವಾಗ ಹೊರಗೆ ಹುಡುಕಿದರೆ ಸಿಗುವುದೆ? ಗ್ರಹದೋಷ ಒಳಗಿರುವಾಗ ಒಳಗಿನ ಶುದ್ದಿಯಾಗಬೇಕಷ್ಡೆ.
ಒಳಗೇ  ಇರುವ ಅಂತರಾತ್ಮನ  ಅರಿವಿಲ್ಲದೆ ಹೊರಗಿನ ಪರಮಾತ್ಮನ ಕಾಣಬಹುದೆ? ಗ್ರಹಗಳ ಚಲನ ವಲನದಿಂದಲೇ ಮಾನವನ ಜೀವನ ನಡೆದಿರುವಾಗ ಅದರ ಬಗ್ಗೆ ಸರಿಯಾದ ಶಿಕ್ಷಣ ನೀಡದೆ ನಾವೇ ಗ್ರಹಗಳಾದರೆ ಮೇಲೆ ಇರುವ ಗ್ರಹಗಳಿಗೇನೂ ಸಮಸ್ಯೆಯಿಲ್ಲ. ಗ್ರಹದೋಷ
ಇದ್ದರೆ  ಮಾನವನಿಗಷ್ಟೆ. ಅಂದರೆ  ಎಲ್ಲದ್ದಕ್ಕೂ ಕಾರಣವೆ ಮಾನವನ ಸ್ವಾರ್ಥ ಅಹಂಕಾರಯುಕ್ತ ರಾಜಕೀಯ ಜೀವನ.
ಹಿಂದಿನ ಜನ್ಮದ ಋಣ ಮತ್ತು ಕರ್ಮ ಫಲ. ಜನ್ಮ ಜನ್ಮಾಂತರದವರೆಗೂ ಹರಿದು ಬಂದಿದೆ.ಭೂಮಿಯಲ್ಲಿದ್ದೇ ಕಳೆದುಕೊಳ್ಳಲು ಬೇಕಿದೆ ಆತ್ಮ ಜ್ಞಾನ. ಆತ್ಮನಿರ್ಭರ ಭಾರತ  ಆತ್ಮಜ್ಞಾನದಿಂದ ಸಾಧ್ಯವಿದೆ. ಆತ್ಮಜ್ಞಾನಿಗಳ ಶುದ್ದತೆಗೆ ಗ್ರಹಗಳು ಶಾಂತವಾಗಿರುತ್ತದೆ.ಗ್ರಹಶಾಂತಿ ಮಾಡಲು ಹಣ ಬೇಕು.ಅದೂ ಶಿಷ್ಟಾಚಾರ ದ ಹಣವಿರಬೇಕು.ಭ್ರಷ್ಟಾಚಾರ ದ ಹಣದಲ್ಲಿ ಏನೇ ಧರ್ಮ ಕಾರ್ಯ ಮಾಡಿದರೂ ನಮ್ಮ
ಕರ್ಮ ಶುದ್ದಿಯಾಗದೆ ಯಾವ ಗ್ರಹಚಾರವೂ  ಹೋಗದು.
ಇದೇ ಕಾರಣದಿಂದ ಮಹಾತ್ಮರುಗಳು ಪ್ರತಿಯೊಂದು ಆಚಾರ ವಿಚಾರ, ರೀತಿ ನೀತಿ ಸಂಸ್ಕೃತಿ ಸಂಪ್ರದಾಯವು ಶಾಸ್ತ್ರ ದ ಮೂಲಕ ತಿಳಿಸಿ ನಡೆಯಲು ದಾರಿತೋರಿದರು.
ಆದರೀಗ ಶಾಸ್ತ್ರ ದ ಮೂಲ ಉದ್ದೇಶ ಅರ್ಥ ಆಗದೆ ಕಾಟಾಚಾರ ಬೆಳೆದು ಹಣಕ್ಕಾಗಿ  ಜನರ ದಾರಿತಪ್ಪಿಸಿ ಕೆಲವು ಭೌತಿಕ ಆಚರಣೆಯಲ್ಲಿ ಭ್ರಷ್ಟಾಚಾರ ತುಂಬಿಹೋಗಿದೆ.ಇದೇ
ಗ್ರಹಣಗಳು, ಪ್ರಕೃತಿವಿಕೋಪ,ರೋಗರುಜಿನ,ಪರಿಸರ ನಾಶಕ್ಕೆ  ಕಾರಣವಾದರೆ  ಪರಿಹಾರವಾಗಿ ಮಾನವ ಹಿಂದೆ ತಿರುಗಿ ಸತ್ಯವನ್ನು  ತನ್ನಲ್ಲಿ ಅಳವಡಿಸಿಕೊಂಡು  ಮೂಲ ಉದ್ದೇಶ ಅರ್ಥ ಮಾಡಿಕೊಳ್ಳುವ ಪ್ರಯತ್ನ ಪಡಬೇಕಿತ್ತು.
ಶಂಖದಿಂದ ಬಂದದ್ದೇ  ತೀರ್ಥ .ಅಂದಿನ ಶಂಖ ಶುದ್ದ ಸತ್ಯ ಧರ್ಮ ದಲ್ಲಿತ್ತು.ಇಂದು  ಕಲುಷಿತ ವಾಗಿದೆ.ಕೆಲವಷ್ಟೇ ಶುದ್ದ ಇದ್ದರೂ  ಮಾನವನಿಗೆ ಅರಿವಿಲ್ಲದೆ ಎಲ್ಲಾ ಶುದ್ದವಾಗಲು ಕಷ್ಟ.ಅವರವರ ಮನಸ್ಸಿನ ಶುದ್ದತೆಗೆ ಸ್ವಚ್ಚ ಶಿಕ್ಷಣಬೇಕು.
ವಿದೇಶಿಗಳು ಭಾರತೀಯತೆಯನ್ನು ಅಳವಡಿಸಿಕೊಂಡು ಅವರ ದೇಶವನ್ನು ಬೆಳೆಸಿಕೊಂಡರೆ  ಸಂತೋಷಪಡುವ ನಾವು ನಮ್ಮಮಕ್ಕಳಿಗೆ ಕಲಿಸಲಾಗದಿದ್ದರೆ ನಮ್ಮದೇ ದೋಷ.
ಆ ದೋಷವೇ ಗ್ರಹವಾಗಿ  ತಿರುಗಿ ಹೊಡೆಯುವಾಗ  ಯಾರೂ ಇರೋದಿಲ್ಲ. ಒಟ್ಟಿನಲ್ಲಿ ಮಾನವನಿಗೆ ತನ್ನ ತಾನು ಬದಲಾಯಿಸಿಕೊಳ್ಳುವುದೇ ಕಷ್ಟ. ಕಾರಣ ಅವನೊಳಗೆ ದೇವಾಸುರರ ಶಕ್ತಿಯಿದೆ. ಅವರಿಬ್ಬರಲ್ಲಿ ಯಾರು ಶ್ರೇಷ್ಠ ಕನಿಷ್ಟವೆನ್ನುವ  ಪೈಪೋಟಿಯಿದೆ. ಜ್ಞಾನವಿಜ್ಞಾನದ ನಡುವೆ ಸಾಮಾನ್ಯಜ್ಞಾನ ಇದ್ದ ಹಾಗೆ ಮಾನವನಿಗೆ ತನ್ನದೇ ಆದ ಸಾಮಾನ್ಯಜ್ಞಾನ  ಇದ್ದು ಅದರ ಮೂಲಕ  ತನ್ನ‌ಜೀವಾತ್ಮನಿಗೆ
ಮುಕ್ತಿ ಸಿಗುವವರೆಗೆ ಸುಖವಿಲ್ಲ. ಇದಕ್ಕಾಗಿ ಆಂತರಿಕ ಶುದ್ದಿಅಗತ್ಯ.ಕಷ್ಟಪಟ್ಟು ಆಂತರಿಕ ಶಕ್ತಿ ಬೆಳೆಸಿಕೊಳ್ಳಲು ರಾಜಯೋಗ ಬೇಕು. ಯೋಗವೆಂದರೆ ಸೇರುವುದೆಂದರ್ಥ ಒಳ್ಳೆಯದಕ್ಕೆ ನಮ್ಮ‌ಮನಸ್ಸು ಸೇರಿದರೆ ಯೋಗ.ಸತ್ಯಕ್ಕೆ ಸೇರಿದರೆ ಯೋಗ,ಧರ್ಮ ಕರ್ಮ ಕ್ಕೆ ತತ್ವಜ್ಞಾನ ಸೇರಿದರೆ ಮಹಾಯೋಗ. ಇದನ್ನು ಪುರಾಣ ಇತಿಹಾಸದ ಕಥೆ ತಿಳಿಸುವುದೆ? ಅದರಲ್ಲೂ ಇದೇ ಅಡಗಿರೋದಾಗಿದೆ.
ವಾಸ್ತವದಲ್ಲಿ ಪ್ರಜಾಪ್ರಭುತ್ವದ  ದೇಶದ ಈ ಸ್ಥಿತಿಗೆ ಪ್ರಜೆಗಳ 
ಅಜ್ಞಾನದ ಜೀವನ ಶೈಲಿ ಕಾರಣ. ಜೀವನಶೈಲಿಗೆ ಶಿಕ್ಷಣದ ವಿಷಯಗಳೇ ಕಾರಣ. 'ವಿಷ'ಯ ವಿಷವನ್ನು ಉಣ್ಣಿಸಿದರೆ ಅಮೃತ ತತ್ವ ಅರ್ಥ ವಾಗದು.ಸ್ವಾಮಿ ವಿವೇಕಾನಂದರು ಶಿಕ್ಷಣದಲ್ಲಿಯೇ ಅಮೃತ ತತ್ವ ಅಳವಡಿಸಲು ಹೇಳಿದ್ದರು.
ಅವರ  ಹೆಸರು ಅಮೇರಿಕಾದಂತಹ ಮಹಾದೇಶದವರೆಗೂ
ಹರಡಿದ್ದರೂ  ಭಾರತದಲ್ಲಿನ ಶಿಕ್ಷಣ ಮಾತ್ರ ಅಮೇರಿಕದ ವಿಷಯವನ್ನು ಬೆಳೆಸಿ ಮಕ್ಕಳಿಗೆ ವಿದೇಶ ವ್ಯಾಮೋಹ ಹೆಚ್ಚಿಸಿ
ತಂತ್ರಜ್ಞಾನದಿಂದ ದೇಶ ಆಳಲು ಹೋದರೆ ಮೂಲದ ತತ್ವಕ್ಕೆ
ಮಾಡಿದ ಅವಮಾನ. ಇದಕ್ಕೆ ಗ್ರಹಣವನ್ನು  ತಪ್ಪಿಸಲಾಗದು.
ಹಣದ ಹಿಂದೆ ಬಿದ್ದರೆ ಜ್ಞಾನದ  ನಷ್ಟ.ಜ್ಞಾನದ ಹಿಂದೆ ಬಿದ್ದರೆ ಹಣದ ನಷ್ಟ. ಇವೆರಡನ್ನೂ ಸರಿಸಮನಾಗಿ ಕಂಡರೆ ಉತ್ತಮ ಸ್ಥಿತಿ. ಸೃಷ್ಟಿ ಸರಿಯಾಗಿದ್ದರೆ  ಉತ್ತಮಸ್ಥಿತಿ ನಂತರ ಮುಕ್ತಿ.
ಸೃಷ್ಟಿ  ಸರಿಯಿಲ್ಲದೆ ಸ್ಥಿತಿಗೆ  ಹಳಿಯುತ್ತಾ  ಲಯವನ್ನು ಹೆಚ್ಚಿಸಿ ಜೀವ ಹೋದರೆ  ಯಥಾ ಪ್ರಕಾರ ಸೃಷ್ಟಿ ಯಾಗುತ್ತದೆ. ಉತ್ತಮ ಶಿಕ್ಷಣದಿಂದ ಸೃಷ್ಟಿ ಯನ್ನು ಅರ್ಥ ಮಾಡಿಕೊಂಡು
ಜನರ ಸ್ಥಿತಿಗೆ ಕಾರಣವನ್ನು ತಿಳಿಯುತ್ತಾ ಸತ್ಯಜ್ಞಾನದಿಂದ ಮುಕ್ತಿ ಪಡೆದ ದೇಶವೇ ಭಾರತ. ಇದು ಭಾರತೀಯ ಹಿಂದಿನ
ಶಿಕ್ಷಣದಲ್ಲಿತ್ತು. ಬದಲಾವಣೆ ಶಿಕ್ಷಣದಲ್ಲಿಯೇ ಆಗಬೇಕಿತ್ತು.
ಅದರಲ್ಲೂ ರಾಜಕೀಯ ಬೆಳೆದು ಭ್ರಷ್ಟಾಚಾರ ತುಂಬಿದರೆ ಮಕ್ಕಳು  ಎತ್ತ ಹೋಗಬೇಕು? ಪೋಷಕರಾದವರೆ ಶೋಷಣೆ ಮಾಡುವವರಾದರೆ  ಬೇಲಿಯೇ ಎದ್ದು ಹೊಲಮೇಯ್ದರೆ  ಕಾಯೋರು ಯಾರು? ದೇವರು ವ್ಯಕ್ತಿ ಯಲ್ಲ ಶಕ್ತಿ.ಅಣು ಪರಮಾಣುಗಳ ವಿಜ್ಞಾನ ಜಗತ್ತಿನಲ್ಲಿ ಜೀವಾತ್ಮ ಪರಮಾತ್ಮ
ಕಾಣದೆ  ಜಗತ್ತಿನಲ್ಲಿ ಗ್ರಹಗಳ‌ಮೇಲೆ ಲಗ್ಗೆ ಹಾಕುವ ವ್ಯಕ್ತಿ ಯ ಬುದ್ದಿಶಕ್ತಿಯಿದೆ.ಆದರೆ ಜ್ಞಾನಶಕ್ತಿಯಿಲ್ಲ. ಸಾಮಾನ್ಯಜ್ಞಾನ ದ
ಕೊರತೆಯೇ ಎಲ್ಲಾ ಸಮಸ್ಯೆಗಳಿಗೆ ಕಾರಣವೆನ್ನಬಹುದಷ್ಟೆ.

No comments:

Post a Comment