ದೇವರ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ ಯಾಕೆ ಬೇಕು?
ಪಂಚಾಮೃತ ಎಂದರೆ ಪಂಚ ಅಮೃತ ಸಮಾನವಾಗಿರುವ
ಗೋವಿನ ಹಾಲು, ಮೊಸರು, ತುಪ್ಪ ,ಜೇನಿನ ತುಪ್ಪ, ಸಕ್ಕರೆ.
ಪವಿತ್ರವಾಗಿರುವ ಗೋವಿನ ಹಾಲು ಎಷ್ಟು ಬೆಳ್ಳಗೆ ಶುದ್ದ ನಿರ್ಮ ಲವಾಗಿದೆಯೋ ಅಷ್ಟು ನಮ್ಮಮನಸ್ಸೂ ನಿಷ್ಕಲ್ಮಶ
ಆಗಿರಲೆಂದು, ಇನ್ನು ,ಮೊಸರು ಅಜೀರ್ಣತೆ ನಿವಾರಣೆ ಮಾಡುವ ಶಕ್ತಿ ಹೊಂದಿದೆ ಇನ್ನೊಂದು ಅರ್ಥದಲ್ಲಿ ಮಾನವನಿಗೆ ಎಲ್ಲಾ ಜೀರ್ಣಿಸಿಕೊಳ್ಳಲು ಕಷ್ಟ ಹೀಗಾಗಿ ಇತರರಿಗೆ ಹಂಚಿಕೊಂಡು ಬಾಳುವ ಶುದ್ದ ಬುದ್ದಿ ಬರಲಿ ಎಂದು ಆಗಿದೆ,
ತುಪ್ಪ ದ ಅಭಿಷೇಕದಿಂದ ಮಾನವನಲ್ಲಿ ಅರಿಷಡ್ವರ್ಗ ವೈರತ್ವ ಹೋಗಿ ಜ್ಞಾನ ಭಕ್ತಿ ವೈರಾಗ್ಯ ಹೆಚ್ಚುವುದೆನ್ನುವುದಾಗಿದೆ.
ಜೇನುತುಪ್ಪ ದ ಅಭಿಷೇಕದಿಂದ ದೇವರು ತೃಪ್ತಿ ಹೊಂದುವರು ಯಾಕೆಂದರೆ ಸರ್ವ ಔಷಧ ಗುಣ ಇದರಲ್ಲಿದೆ ಇದರಿಂದಾಗಿ ನಮ್ಮ ಎಲ್ಲಾ ದುರ್ಗುಣಗಳು ದೂರವಾಗಿ ದೈವೀಗುಣ ಭಕ್ತಿ ಜ್ಞಾನಶಕ್ತಿ ದೇವರು ಕರುಣಿಸಲೆನ್ನುವುದಾಗಿದೆ. ಹಾಗೆಯೇ ಸಕ್ಕರೆಯನ್ನು ಕಬ್ಬು ಅರೆದು ತಯಾರಿಸುವ ಹಾಗೆ ,ನಮ್ಮ ಈ ಶರೀರ ಕಬ್ಬಿನಂತೆ ಅದನ್ನು ಅರೆದು ಅಂದರೆ ಭಕ್ತಿಗೆ ಸಿಲುಕಿಸಿ ಜ್ಞಾನ,ವೈರಾಗ್ಯ ಸದ್ಗುಣ ಪಡೆದೆ ಅದನ್ನು ನಿನ್ನಪಾದಕ್ಕೆ ಅರ್ಪಿಸಿ ದ ನನಗೆ ಪಾರಮಾರ್ಥಿಕ ಮೋಕ್ಷವನ್ನು ಕರುಣಿಸು ಭಗವಂತ ಎನ್ನುವ ಭಾವನೆ ಅಡಗಿದೆ. ಒಟ್ಟಿನಲ್ಲಿ ಪಂಚಾಮೃತಗಳ ಅಭಿಷೇಕವು
ಪರಮಾತ್ಮನೆಡೆಗೆ ಜೀವಾತ್ಮನು ಸೇರಿಕೊಳ್ಳುವಾಗ ಅಮೃತ
ಸಮಾನವಾಗಿರುವ ಪಂಚ ಅಮೃತದ ಬಗ್ಗೆ ತಿಳಿದರೆ ಪ್ರತಿ
ಸೇವೆಯ ಹಿಂದಿರುವ ವೈಜ್ಞಾನಿಕ ವೈಚಾರಿಕತೆ ನಂಬಿಕೆಯು
ಅರ್ಥ ವಾಗಬಹುದು.
ಇಲ್ಲಿ ವಿಗ್ರಹ ಬಿಂಬ ,ಶರೀರ ಅದರ ಪ್ರತಿಬಿಂಬ ಆದ್ದರಿಂದ ವಿಗ್ರಹಕ್ಕೆ ಅರ್ಪಿಸಿದ ಅಭಿಷೇಕ ಮಾಡಿದ ಪಂಚಾಮೃತವನ್ನು
ಪರೋಕ್ಷವಾಗಿ ಈ ಶರೀರದ ಒಳಗಿನಪರಮಾತ್ಮನಿಗೆ ನಾವು ಸಲ್ಲಿಸುವಾಗ ಶುದ್ದ ಸ್ವಚ್ಚವಾದ ಮನಸ್ಸಿನಿಂದ ಇದ್ದರೆ ಪರಮಾತ್ಮನಿಗೆ ತಲುಪುತ್ತದೆ.
ಆಚರಣೆಗಳಲ್ಲಿ, ದೇವತಾರಾಧನೆಯಲ್ಲಿರುವ ಸೂಕ್ಷ್ಮ ವಾದ
ವಿಚಾರಗಳನ್ನು ತಿಳಿಸುತ್ತಾ,ತಿಳಿಯುತ್ತಾ ಮುಂದೆ ಬಂದರೆ
ಪ್ರಕೃತಿಯನ್ನು ಬಳಸಿಕೊಂಡು ಜೀವನ ನಡೆಸುತ್ತಾ
ಪರಮಾತ್ಮನೆಡೆಗೆ ಸಾಗಬಹುದು. ದುರ್ಭಳಕೆ ಮಾಡಿಕೊಂಡರೆ ತಕ್ಕ ಪ್ರತಿಫಲವೂ ಜೀವನೆ ಅನುಭವಿಸಬೇಕೆನ್ನುವುದಾಗಿದೆ. ವೈಭವದ ,ಕಾಟಾಚಾರದ
ಭ್ರಷ್ಟಾಚಾರದ ,ಆಚರಣೆಗಳಿಂದ ದೇವರಾಗಲಿ,ಧರ್ಮ ವಾಗಲಿ ಸತ್ಯವಾಗಲಿ ಕಾಣೋದಿಲ್ಲ.
ಪಂಚಾಮೃತವು ಮಾನವನಿಂದ ಸೃಷ್ಟಿ
ಮನೆಯಲ್ಲಿನ ಗೋವಿನಹಾಲು,ಮೊಸರು,ತುಪ್ಪ. ಶುದ್ದ ಜೇನುತುಪ್ಪ, ಶುದ್ದವಾದ ಸಕ್ಕರೆ ಹಿಂದೆ ಮನೆಯಲ್ಲಿಯೇ
ಸಿಗುತ್ತಿತ್ತು. ಆದರೂ ಭಕ್ತಿ ಅಗತ್ಯವಿದೆ.
No comments:
Post a Comment