ಯೋಗದ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳು ಪರೀಕ್ಷೆ ಗಳು ನಡೆದವು.ಆದರೆ ಯೋಗಿಯಾಗಲಾಗಲಿಲ್ಲ. ಎಲ್ಲಿಯವರೆಗೆ ಈ ಹೊರಗಿನ ಪ್ರಯೋಗ,ಪರೀಕ್ಷೆ ಇರುವುದೋ ಅಲ್ಲಿಯವರೆಗೆ ನಮ್ಮ ಮನಸ್ಸು ಆಂತರಿಕವಾಗಿ
ಶರಣಾಗಲು ಕಷ್ಟ. ಇಲ್ಲಿ ಜೀವಾತ್ಮಪರಮಾತ್ಮನೊಂದಿಗೆ ಸೇರುವ ಯೋಗವೇ ಅಂತಿಮ ಯೋಗ.ಇದನ್ನು ಜ್ಞಾನದಿಂದ ಭಕ್ತಿ ಯಿಂದ ಕರ್ಮ ದಿಂದ ಕಂಡುಕೊಂಡವರು ಪರಮಾತ್ಮನ ಪರೀಕ್ಷೆಗಳನ್ನು ಎದುರಿಸಬೇಕಾಗಿತ್ತು. ಹೀಗಾಗಿ ಆಂತರಿಕ ವಾಗಿ ಶುದ್ದವಾಗುತ್ತಾ ಆತ್ಮಸಾಕ್ಷಾತ್ಕಾರ ವಾಗಿ ಮುಕ್ತಿ ಮಾರ್ಗ ಹಿಡಿದರು. ಇಂದಿನ ಯೋಗ ಪರಕೀಯರೆಡೆಗೆ ಸಾಗಿದೆ. ವಿದೇಶಕ್ಕೆ ಯಾವಾಗ ಹೋಗುವುದು ಎನ್ನುವ ತಯಾರಿ ಮಕ್ಕಳಿರುವಾಗಲೇ ಶಿಕ್ಷಣದ ಮೂಲಕ ಪೋಷಕರೆ ಹೊರಗೆ ನಡೆದು ಸಾಕಷ್ಟು ವೈಜ್ಞಾನಿಕ ಪ್ರಯೋಗಗಳಾಗುತ್ತಿದೆ. ದೈಹಿಕವಾಗಿ ನಡೆಸುವ ಪ್ರಯೋಗದಲ್ಲಿ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಮಾನಸಿಕ ನೆಮ್ಮದಿಗಾಗಿ ಯೋಗಾಸನವನ್ನು ಬಳಸುತ್ತಾ ಪ್ರಯೋಗ ಮಾತ್ರ ಭೌತಿಕದಲ್ಲಿ ಯೇ ಹೆಚ್ಚಾದಂತೆ ಹೊರಗಿನ ಯೋಗ ಕೂಡಿಬರುತ್ತದೆ.
ವಿದೇಶ ಪ್ರಯಾಣವೂ ಒಂದು ಯೋಗ. ಸ್ವದೇಶದ ಋಣ ತೀರಿಸುವ ಯೋಗವನ್ನು ಅಧ್ಯಾತ್ಮ ತಿಳಿಸುತ್ತದೆ.
ಇಲ್ಲಿದ್ದು ಮಾಡಲಾಗದ್ದು ಅಲ್ಲಿ ಹೋಗಿ ಮಾಡಲು ಸಾಧ್ಯವೆಂದರೆ ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎನ್ನಬಹುದು.
ಅಧ್ಯಾತ್ಮ ದ ಮೂಲ ಮನೆಯಿಂದ ಹೊರಟ ಜೀವ ಭೌತಿಕಾಸಕ್ತಿ ಬೆಳೆದಂತೆಲ್ಲಾ ಮೂಲ ಮನೆ ಬಿಟ್ಟು ಹೊರನಡೆದು ಯೋಗವಿಲ್ಲದೆ ತಿರುಗಿ ತಿರುಗಿ ಎಲ್ಲೋ ಮರೆಯಾಗುತ್ತದೆ. ಯೋಗವನ್ನು ಮಾನವ ಮನಸ್ಸಿಗೆ ಬಂದಂತೆ ತಿಳಿಯಲಾಗದು. ಅದನ್ನು ಅಧ್ಯಾತ್ಮ ದ ಪ್ರಕಾರ ತಿಳಿಯುತ್ತಾ ಅಳವಡಿಸಿಕೊಂಡರೆ ಇದ್ದಲ್ಲಿಯೇ ಮಹಾಯೋಗ. ಅಳವಡಿಸಿಕೊಳ್ಳುವುದೇ ಕಷ್ಟ. ಇದಕ್ಕೆ ಬೇಕಿದೆ ಯೋಗ ಶಿಕ್ಷಣ,ಯೋಗ್ಯ ಶಿಕ್ಷಣ,ಯೋಗ್ಯ ಗುರು.
ಭಗವದ್ಗೀತೆ ತಿಳಿಸುವ ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮ ಯೋಗವು
ರಾಜಕೀಯದಿಂದ ಬೆಳೆಸಲಾಗದು. ಹೊರಗೆ ಬೆಳೆಸುವುದು ಕೇವಲ ರಾಜಕೀಯ. ಒಳಗೇ ಅಡಗಿರುವ ಶಕ್ತಿಯನ್ನು ಒಳಗೇ ತಿಳಿದು ಅಧ್ಯಾತ್ಮ ದಿಂದ ಬೆಳೆಸಿಕೊಂಡು ಯೋಗಿ ಆಗುವುದನ್ನು ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ತಿಳಿಸಿದ ರಾಜಯೋಗವಾಗಿತ್ತು. ತನ್ನ ಧರ್ಮ, ಕರ್ಮ ವನ್ನು
ಯೋಗ್ಯರೀತಿಯಲ್ಲಿ ಅರಿತು ಅಳವಡಿಸಿಕೊಂಡು ಸ್ವತಂತ್ರ ಜೀವನ ನಡೆಸುವ ಯೋಗವು ಮಹಾಯೋಗ. ಹಿಂದಿನ ಮಹಾರಾಜರಿಗೆ ಕೊಡುತ್ತಿದ್ದ ಕ್ಷತ್ರಿಯ ಧರ್ಮದ ಶಿಕ್ಷಣವನ್ನು
ಇಂದಿನ ರಾಜಕಾರಣಿಗಳಿಗೆ ಕೊಟ್ಟರೂ ಅಂದಿನ ರಾಜಪ್ರಭುತ್ವ ಇಂದಿಲ್ಲ. ಹೋರಾಟ,ಯುದ್ದವೂ ರಾಜಕಾರಣಿಗಳು ಮಾಡೋದಿಲ್ಲ.ಏನಿದ್ದರೂ ನಮ್ಮ ಸೈನಿಕರೆ
ಇಂದಿನ ರಾಜರು. ಆದರೆ ಅವರನ್ನೇ ತಮ್ಮ ವಶದಲ್ಲಿ ಬಳಸಿ
ವಿದೇಶಿಗರನ್ನು ಸ್ವಾಗತಿಸುವ ಮಟ್ಟಿಗೆ ವಿದೇಶದ ಯೋಗ ಬೆಳೆದಿದೆ. ಎಲ್ಲಾ ಮಾನವರೆ ಆದರೂ ಯೋಗಿಗಳಲ್ಲ.
ಯೋಗಿಗಳ ದೇಶವನ್ನು ಭೋಗಿಗಳ ದೇಶವಾಗಿ ಬದಲಾವಣೆ
ಮಾಡಲು ಹೋದರೆ ರೋಗಿಗಳ ದೇಶವಾಗುತ್ತದೆ.ಅವರವರ ಮೂಲ ಶಕ್ತಿಯೇ ಅವರನ್ನು ರಕ್ಷಿಸುವಾಗ ಹೊರಗಿನಿಂದ ತೇಪೆ ಹಾಕಿ ಬದಲಾಯಿಸಹೋದರೆ ಇರುವ ಯೋಗವೂ
ಹಿಂದುಳಿಯುತ್ತದೆ.
ಒಟ್ಟಿನಲ್ಲಿ ಯೋಗವು ಕಾಲಬಂದಾಗ ಕೂಡಿ ಬರಬೇಕು.
ಇದರಲ್ಲಿ ಸಾಕಷ್ಟು ವಿಚಾರವಿದೆ. ಮನೆ,ಮದುವೆ,ಮಕ್ಕಳು, ವಿದೇಶ, ಶಿಕ್ಷಣ,....ಇನ್ನಿತರ ಭೌತಿಕ ಯೋಗಕ್ಕೆ ಹೊರಗಿನ ಪ್ರಯತ್ನ ವಾದರೆ, ಪರಮಾತ್ಮನ ಸೇರುವ ಯೋಗಕ್ಕೆ ಒಳಗಿನ
ಪ್ರಯತ್ನ,ಪರೀಕ್ಷೆ,ಶೋಧನೆ,ಪ್ರಯೋಗಗಳು ಅಗತ್ಯ. ಎಷ್ಟೇ ಹೊರಗಿನಪ್ರಯೋಗ ಯಶಸ್ವಿಯಾದರೂ ಒಳಗಿನ ಶೋಧನೆ
ಆಗದಿದ್ದರೆ ಸಂಶೋಧನೆಗಳೇ ಬೆಳೆಯೋದು.
ಕಾಲಮಾನಕ್ಕೆ ತಕ್ಕಂತೆ ಎಲ್ಲಾ ನಡೆಯುತ್ತದೆ. ಆದರೆ ಕಾಲದ ಮಿತಿ ಇದೆ. ಇತಿಮಿತಿಗಳನ್ನು ತಿಳಿದು ಯೋಗ ಬೆಳೆದರೆ ಉತ್ತಮ ಪರಿಸ್ಥಿತಿ. ಜೀವನಿರೋವಾಗಲೇ ಪರಜೀವ ಕಾಣೋದು. ಹಾಗೆಯೇ ಆತ್ಮ ದೇಹದೊಳಗಿರುವಾಗಲೇ ಪರಮಾತ್ಮನ ಕಾಣೋದೆ ಯೋಗ ಎಂದರು ಮಹಾ
ಜ್ಞಾನಿಗಳು.
ಮಹಾಭಾರತ ಯುದ್ದದ ಸಮಯದಲ್ಲಿ ಶ್ರೀ ಕೃಷ್ಣ ನ ಸಹಕಾರಕ್ಕಾಗಿ ಅರ್ಜುನನ ಜೊತೆಗೆ ದುರ್ಯೋಧನನೂ ತನ್ನ ಜೊತೆಗೆ ಇರಲು ಕೇಳಿಕೊಂಡಾಗ ಶ್ರೀ ಕೃಷ್ಣ ಇಬ್ಬರಿಗೂ ಸಹಾಯ ಮಾಡಲು ಒಂದೆಡೆ ಶಸ್ತ್ರ ಸಹಿತ ಸೈನ್ಯ ,ಇನ್ನೊಂದು ಕಡೆ ಶಸ್ತ್ರ ರಹಿತ ಸ್ವಯಂ ಶ್ರೀ ಕೃಷ್ಣ ಪರಮಾತ್ಮ.ಅಜ್ಞಾನಿ ದುರ್ಯೋಧನ ಕೇಳಿದ್ದು ಸೈನ್ಯವನ್ನು ಜ್ಞಾನಿಯಾದ ಅರ್ಜುನ ಬೇಡಿದ್ದು ಸ್ವಯಂ ಶ್ರೀ ಕೃಷ್ಣನನ್ನು.ಇಲ್ಲಿ ಗೆದ್ದ ಅರ್ಜುನ ಯೋಗಿಯಾದ.
ಹಾಗೆಯೇ ಇಂದಿನ ಭಾರತದ ಪ್ರಜೆಗಳಿಗೆ ಒಳಗಿರುವ ಯೋಗ ಶಕ್ತಿಯ ಜ್ಞಾನವಿಲ್ಲದೆ ಹೊರಗಿನ ಭೋಗ ಶಕ್ತಿಯ ಹಿಂದೆ ನಿಂತು ಬೇಡುವ ಪರಿಸ್ಥಿತಿಯಿದೆ. ಸಾಲ ತೀರಿಸಲು ಯೋಗವಿರಬೇಕು. ಭೋಗದಿಂದ ಸಾಲ ಬೆಳೆದು ನಿಂತರೆ ರೋಗವೇ ಹೆಚ್ಚುತ್ತದೆ. ಮನಸ್ಸು ಹೊರನಡೆದಷ್ಟೂ ನಾನೇ ಬೆಳೆಯುವಾಗ ಯೋಗ ಕೂಡಿ ಬರಲು ನಾನು ಹೋಗಬೇಕೆನ್ನುವ ಮಹಾತ್ಮರಾಗಲಿ,ದೇವರಾಗಲಿ,
ತತ್ವವಾಗಲಿ ಕಾಣದು. ನಾನೇ ದೇವರಾದರೆ ನನಗೆ ಮರಣ ಇಲ್ಲವೆ? ಆತ್ಮಕ್ಕೆ ಸಾವಿಲ್ಲ.ಪರಮಾತ್ಮನ ಸೇರೋದೆ ಮಹಾಯೋಗವೆಂದರೆ ಆತ್ಮವೆ ನಾನೇ? ನಾನೆಂಬುದಿಲ್ಲ ಎಂದರೆ ಅರ್ಥ ವೇನು? ಅದ್ವೈತ ಸಂಶೋಧನೆ ಒಳಗಿದ್ದು ಮಾಡಿದರೆ ಉತ್ತರವಿದೆ. ..ಹೊರಗೆ ನಡೆದಷ್ಟೂ ಉತ್ತರ ಸಿಗದು.. ಯೋಗಿಯಾಗೋದೂ ಕಷ್ಟವೆನ್ನುವ ಹಿಂದೂ ಧರ್ಮದ ರಕ್ಷಣೆ ಯೋಗಿಗಳಿಂದ ಸಾಧ್ಯ. ರಾಜಯೋಗವನ್ನು ರಾಜಕೀಯವನ್ನಾಗಿಸಹೋದರೆ ಅಧರ್ಮ. ನಾನೇ ಸರಿಯಿಲ್ಲದೆ ಪರರನ್ನು ಸರಿಪಡಿಸ
ಬಹುದೆ?
ಅಂದು ಕೌರವರ ಅಧರ್ಮಕ್ಕೆ ಯುದ್ದ ನಡೆದು ಧರ್ಮ ಕ್ಕೆ ಜಯ ತಂದು ಕೊಟ್ಟ ಮಹಾಯೋಗಿ ಶ್ರೀ ಕೃಷ್ಣ ತನ್ನ ಜೀವನದಲ್ಲಿ ಭೋಗವನ್ನೂ ಯೋಗದಲ್ಲಿಯೇ ಕಂಡಿದ್ದನು.
ಅತಿಯಾದ ರಾಜಕೀಯ ದ್ವೇಷದಿಂದ ಯೋಗಿ ಆಗೋದಿಲ್ಲ.
ನಾನೇ ರಾಜನಾದರೆ ಪ್ರಜಾಪ್ರಭುತ್ವ ಎಲ್ಲಿದೆ?
No comments:
Post a Comment