ಕನ್ನಡ ರಾಜ್ಯೋತ್ಸವ ಶುಭಾಶಯಗಳು.
ಕನ್ನಡವನ್ನು ಕಟ್ಟಿ ಬೆಳೆಸಿ ಉಳಿಸಲು ನಾವು ಮಾಡಬೇಕಾಗಿರುವುದೇನು?
ಕರ್ನಾಟಕದಲ್ಲಿ ಇದ್ದವರು ಕನ್ನಡ ಕಲಿತರೆ ಕನ್ನಡಮ್ಮನಿಗೆ ಕೊಡುವ ಗೌರವ. ತಾಯಿಗೆ ನೀಡುವ ಗೌರವದಿಂದ ತಾಯಿ ಶಕ್ತಿ ಬೆಳೆಯುತ್ತದೆ. ಹಾಗೆಯೇ ಭಾರತಾಂಬೆಯ ಒಳಗಿನ ಧರ್ಮ ಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ದೇಶದೊಳಗಿದ್ದರೆ ದೇಶ ಸುರಕ್ಷಿತ. ಅದ್ವೈತ ತತ್ವದ ಪ್ರಕಾರ ಇಲ್ಲಿ ದೇಶ ಒಂದೇ ರಾಜ್ಯವೂ ಒಂದೇ. ದೇಶದೊಳಗಿರುವ ರಾಜ್ಯಗಳಿಗೆ ಅದರದೇ ಆದ ಮೂಲ ಭಾಷೆಯಿದೆ. ಯಾವಾಗ ಇದನ್ನು ಹೊರಗಿನವರು ಬಂದು ಅಳಿಸುವ ವ್ಯಾಪಾರಕ್ಕೆ ಇಳಿಯುವರೋ ಹಾಗೆ ಯಾವಾಗ ಮೂಲದವರೆ ಇದನ್ನು ಬಿಟ್ಟು ಹೊರನಡೆಯುವರೋ ಆಗ ಅಧರ್ಮ ಬೆಳೆಯುತ್ತದೆ. ಇದನ್ನು ನಮ್ಮ ನಮ್ಮ ಮೂಲದ ಧರ್ಮ ಕರ್ಮ, ಶಿಕ್ಷಣ,ಸ್ಥಳವನ್ನು ನಾವೇ ತಿಳಿದು ಅಲ್ಲಿದ್ದೇ
ಬೆಳೆಸಬಹುದೇ ಹೊರತು ಹೊರಗೆ ಹೋಗಿ ಒಳಗಿನ ಕಸವನ್ನು ,ತಪ್ಪನ್ನು, ದೋಷವನ್ನು ಹೇಳಿಕೊಂಡು ಹರಡಿದರೆ ಸಾಧ್ಯವಿಲ್ಲದ ಮಾತು. ಸತ್ಯ ಒಳಗಿದೆ ಅದನ್ನು ಹೊರಗಿನ ಸತ್ಯದಿಂದ ಮುಚ್ಚಿಟ್ಟು ರಾಜಕೀಯ ನಡೆಸಿದರೆ ಅಧರ್ಮ. ಹಾಗೆಯೇ ಅವರವರ ಧರ್ಮವನ್ನು ಅವರುಗಳೇ ಒಳಗೆ ಅಳವಡಿಸಿಕೊಂಡು ಸ್ವತಂತ್ರ ಜೀವನ ನಡೆಸುವಾಗ ಮೂಲದ ಭಾಷೆ ಮಾತೃಭಾಷೆ ಅಗತ್ಯವಾಗಿದೆ. ಯಾರದ್ದೋ ಭಾಷೆಯ ಮೂಲಕ ಎಷ್ಟೇ ವಿಚಾರ ತಿಳಿದರೂ ಸಂಪೂರ್ಣ ಅರ್ಥ ಆಗದೆ ಅನೇಕ ಭಾಷೆಗಳು ಜನ್ಮತಾಳುತ್ತವೆ.ಆದರೆ ಮೂಲ ಭಾಷೆ ಹಿಂದುಳಿಯುತ್ತದೆ. ಇದು ಸರ್ವ ಕಾಲಿಕ ಸತ್ಯ. ಸರ್ವರಿಗೂ ಅನ್ವಯಿಸುವ ಸತ್ಯ. ಶಿಕ್ಷಣದಲ್ಲಿ ಸಾತ್ವಿಕತೆ ಇಲ್ಲದೆ ರಾಜಕೀಯತೆ ಬೆಳೆಸಿ ತಾಮಸ ಗುಣವನ್ನು ಹೆಚ್ಚಿಸಿ ಆಳಿದಷ್ಟೂ ಹಿಂದುಳಿಯುವುದು ನಾವೇ ಎನ್ನುವ ಸತ್ಯ ತಿಳಿದರೆ ಇಂದಿನ ನಮ್ಮ ಹೊರಗಿನ ಆಚರಣೆಯಲ್ಲಿ ಬದಲಾವಣೆ ತರಬಹುದು. ಆಚರಣೆಯು ಆಂತರಿಕ ಶುದ್ದಿಯ ಕಡೆಗಿದ್ದರೆ ಜ್ಞಾನ, ಭೌತಿಕದ ತೋರುಗಾಣಿಕೆ
ಯಾದರೆ ಕರ್ -ನಾಟಕ. ನಾಟಕದ ಜೀವನದೊಳಗೊಂದು ನಮ್ಮದೇ ನಾಟಕ ಸೃಷ್ಟಿ ಮಾಡಿಕೊಂಡಿದ್ದರೆ ನೋಡುಗರಿಗೊಂದು ಮನರಂಜನೆ ಆದರೆ ಅದು ನಮ್ಮ ಆತ್ಮವಂಚನೆ ಆಗದಂತಿದ್ದರೆ ಉತ್ತಮ.
ಕರ್ನಾಟಕದಲ್ಲಿ ಕನ್ನಡದ ಹೆಸರಲ್ಲಿ, ಧರ್ಮ,ಸಂಸ್ಕೃತಿ, ಭಾಷೆ ಹೆಸರಲ್ಲಿ ಸಾಕಷ್ಟು ಕಾರ್ಯಕ್ರಮ ಗಳು ಸಂಘ ಸಂಸ್ಥೆಗಳಿಂದ ವರ್ಷ ಪೂರ್ತಿ ನಡೆಯುತ್ತಿದೆ ಆದರೂ ಯಾಕೆ ಧರ್ಮ,
ಸಂಸ್ಕೃತಿ, ಭಾಷೆಯ ಜ್ಞಾನವಿಲ್ಲದೆ ಯುವಕರು ಹೊರ
ನಡೆದಿದ್ದಾರೆ? ದಾರಿತಪ್ಪುತ್ತಿದ್ದಾರೆ? ಅಧರ್ಮ ಬೆಳೆದು ಭ್ರಷ್ಟಾಚಾರ ಹೆಚ್ಚಾಗಿದೆ? ಉತ್ತರ ಕಾರ್ಯಕ್ರಮ,ಉತ್ಸವ ನಡೆಸೋರು ತಿಳಿಸೋದು, 'ಸರ್ಕಾರ ಸರಿಯಿಲ್ಲ 'ಎಂದು.
ಸರ್ಕಾರ ಎಂದರೇನು? ಸಹಕಾರವಲ್ಲವೆ? ಹಾಗಾದರೆ ಯಾರ ಸಹಕಾರ ಸರಿಯಿಲ್ಲ? ಮಕ್ಕಳ ಸಹಕಾರವಿಲ್ಲವಾದರೆ ಅವರಿಗೆ ನೀಡಿದ ಶಿಕ್ಷಣ ಸರಿಯಿಲ್ಲವೆಂದರ್ಥ. ಅವರಿಗೆ ನೀಡದ ಸಂಸ್ಕಾರವೇ ಕಾರಣ ಸಂಸ್ಕಾರ ಕಲಿಸಲು ಪೋಷಕರಲ್ಲಿರಬೇಕು . ಪೋಷಕರಿಗೇ ಅಂತಹ ಶಿಕ್ಮೂಷಣ ಸಿಗಲಿಲ್ಲಲವೆಂದರೆ ಹೊರಗಿನ ಗುರುಗಳು ಅಂತಹ ಶಿಕ್ದಷಣ ನೀಡುವುದು ಧರ್ಮ ವಾಗಿತ್ತು. ದೇಶದ ತುಂಬಾ ದೇವಸ್ಥಾನವಿದೆ ದೈವತ್ವದ ಶಿಕ್ಷಣವಿಲ್ಲವಾದರೆ ಹೇಗೆ? ಧರ್ಮ ಕರ್ಮ ಭಾಷೆ,ಸಂಸ್ಕೃತಿ ಬಗ್ಗೆ ಮನೆಯೊಳಗೇ ಶಿಕ್ಷಣ ನೀಡದೆ ಹೊರಗಿನ ಪರಕೀಯರ ಶಿಕ್ಷಣ ನೀಡಿರುವಾಗ ಒಳಗೆ ಹಾಕಿದ ವಿಚಾರವೇ ದೇಹವನ್ನು ದೇಶವನ್ನು,ರಾಜ್ಯವನ್ನು ಆಳುತ್ತಿದೆ.
ಇಷ್ಟು ಸಾಮಾನ್ಯಜ್ಞಾನ ನಮಗಿದ್ದರೆ ನಮ್ಮ ಸಹಕಾರದ ಪ್ರತಿ ಫಲವೇ ಇಂದಿನ ಸ್ಥಿತಿಗೆ ಕಾರಣವಾದಾಗ ನಾವೇ ಕಾರಣ.
ನಮ್ಮ ಜೀವ ಒಳಗಿದೆ. ಜೀವ ರಕ್ಷಣೆ ಸರ್ಕಾರ ಮಾಡುವುದೆ?
ನಮ್ಮ ಜ್ಞಾನ ಒಳಗಿದೆ ಅದಕ್ಕೆ ಪೂರಕದ ಶಿಕ್ಷಣ ನೀಡುವುದು ನಮ್ಮ ಧರ್ಮ ಕರ್ಮ. ಇದಕ್ಕೆ ನಮ್ಮದೇ ವಿರೋಧವಿದ್ದರೆ ಸರ್ಕಾರ ಕಾರಣವೆ? ನಮ್ಮವರನ್ನೇ ನಾವು ಮನೆಯಿಂದ ಹೊರ ಕಳಿಸುತ್ತಾ ಹೊರಗಿನವರನ್ನು ಸ್ವಾಗತಿಸಿದರೆ ಹೊರಗಿನವರೆ ನಮ್ಮನ್ನು ಆಳುತ್ತಾರಲ್ಲವೆ? ಜನ್ಮಕ್ಕೆ ಕಾರಣ ಹಿಂದಿನ ಜನ್ಮದ ಋಣ ಹಾಗು ಕರ್ಮ. ಯಾವ ಕುಟುಂಬ
ದಲ್ಲಿ, ಸ್ಥಳದಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಜೀವ ಹುಟ್ಟಿದೆಯೋ ಅದರ ಬಗ್ಗೆ ಸರಿಯಾಗಿ ತಿಳಿದು ಅದರ ಋಣ ತೀರಿಸುವ ಜ್ಞಾನ ಪಡೆದರೆ ಅಲ್ಲಿಯೇ ಮುಕ್ತಿ ಪಡೆಯಬಹುದು. ಇದು ಹಿಂದಿನ ಕಾಲದಲ್ಲಿದ್ದ ವ್ಯವಸ್ಥಿತ ಕುಟುಂಬ ಪದ್ದತಿ. ಅದರಿಂದ ಹೊರಬಂದು ಹೊರಗಿನ ಅವ್ಯವಸ್ಥೆ ಯನ್ನು ಎಷ್ಟೇ ತಿದ್ದಲು ಹೋದರೂ ಇನ್ನಷ್ಟು ಸಮಸ್ಯೆಗಳೇ ಬೆಳೆಯೋದಲ್ಲವೆ?
ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದಿರುವ ದಾಸಶರಣರ ತತ್ವಜ್ಞಾನವನ್ನು ನಾವು ತಂತ್ರದಿಂದ ತಿಳಿದು ಸ್ವತಂತ್ರ ಜೀವನ ನಡೆಸುತ್ತಿದ್ದವರನ್ನೂ ಅತಂತ್ರಸ್ಥಿತಿಗೆ ಎಳೆದು ಆಳಿದರೆ ನಮ್ಮ ಸ್ಥಿತಿಗೆ ನಮ್ಮ ರಾಜಕೀಯವೇ ಕಾರಣವಲ್ಲವೆ? ಇಲ್ಲಿ ರಾಜಕೀಯ ಬೆಳೆದಿರೋದು ನಮ್ಮ ಸ್ವಾರ್ಥ ಅಹಂಕಾರದಿಂದ
ಇದೇ ನಮ್ಮ ಶತ್ರುವಾದಾಗ ಹೊರಗಿನಿಂದ ಎಷ್ಟೇ ಶತ್ರುಗಳ ನಾಶ ಮಾಡೋದಕ್ಕೆ ನಮಗೆ ಸಾಧ್ಯವಿಲ್ಲ. ನಮ್ಮವರನ್ನೇ ನಾವು ದ್ವೇಷಿಸುವಾಗ ಹೊರಗಿನವರಿಗೆ ಇನ್ನಷ್ಟು ಶಕ್ತಿ ನಾವೇ ಕೊಡುತ್ತಿದ್ದೇವೆ. ಒಟ್ಟಿನಲ್ಲಿ ಒಗ್ಗಟ್ಟಿನಿಂದ ಬಾಳುವುದಕ್ಕಾಗಿ ಭೂಮಿಗೆ ಬಂದ ಜೀವಕ್ಕೆ ಸರಿಯಾದ ಶಿಕ್ಷಣ ನೀಡದೆ ಆಳಿ ಅಳಿಸಿದವರೆ ಆಳಾಗಿ ಮತ್ತೆ ಮತ್ತೆ ಜನ್ಮ ತಾಳುವುದನ್ನು ತಪ್ಪಿಸಲು ರಾಜಯೋಗದ ಶಿಕ್ಷಣದ ಅಗತ್ಯವಿದೆ.
ರಾಜಯೋಗ ಎಂದರೆ ನಮ್ಮನ್ನು ನಾವು ಸರಿಯಾಗಿ ತಿಳಿದು ಬದಲಾಯಿಸಿಕೊಂಡು ಬದುಕೋದಷ್ಟೆ. ಜೀವನ ಶಾಶ್ವತವಲ್ಲ ಜೀವವೂ ಶಾಶ್ವತವಲ್ಲ.
ಆತ್ಮಜ್ಞಾನ ಶಾಶ್ವತ.ಆತ್ಮಜ್ಞಾನಕ್ಕೆ ಮೂಲದ ಧರ್ಮ, ಸಂಸ್ಕೃತಿ, ಭಾಷೆಯ ಶಿಕ್ಷಣದ ಅಗತ್ಯವಿತ್ತು. ಇದೀಗ ವ್ಯವಹಾರಿಕ ರೂಪ ಪಡೆದು ರಾಜಕೀಯವಾಗಿ ಬೆಳೆದು ದೇಶ ವಿದೇಶದೆಡೆಗೆ ಪ್ರಚಾರಕ್ಕೆ ಸೀಮಿತವಾಗಿದ್ದರೆ ಸ್ವದೇಶ
ದೊಳಗಿದ್ದು ಬೆಳೆಸೋರು ಯಾರು?
ದೇಶದಿಂದ ರಾಜ್ಯದಿಂದ ಸಾಕಷ್ಟು ಹಣ,ಹೆಸರು,ಸ್ಥಾನ
,ಅಧಿಕಾರ ಪಡೆದರೂ ಅದರ ಋಣ ತೀರಿಸುವ ಜ್ಞಾನವಿಲ್ಲವಾದರೆ ವ್ಯರ್ಥ. ಇದೇ ಇಂದಿನ ಸಮಸ್ಯೆಗಳಿಗೆ ಕಾರಣವೆಂದರೆ ತಪ್ಪು ಎನ್ನುವವರೆ ಹೆಚ್ಚು.
ಕಾರಣವಿಷ್ಟೆ ಸಾಧನೆ ಭೌತಿಕದಲ್ಲಿ ಬೆಳೆದಿದೆ ಅಧ್ಯಾತ್ಮ ಸಾಧನೆ
ಕುಸಿದಿದೆ.ಓದಿ ತಿಳಿದವರಿಗೆ ಅಳವಡಿಸಿಕೊಳ್ಳಲು ಕಷ್ಟ.
.ಅಳವಡಿಸಿಕೊಂಡವರನ್ನು ಓದಿದವರು ಸಹಕರಿಸೋದಿಲ್ಲ. ನಮ್ಮ ಜೀವನ ಶೈಲಿಯೇ ಆಧುನಿಕತೆಯ ವಶದಲ್ಲಿರುವಾಗ
ಅಧ್ಯಾತ್ಮ ಚಿಂತನೆ ಕಷ್ಟ. ಒಟ್ಟಿನಲ್ಲಿ ಕನ್ನಡ ಭಾಷೆಯಾಗಲಿ ಇತರ ಭಾಷೆಯಾಗಲಿ ಅದರ ಜನ್ಮಸ್ಥಳದಲ್ಲಿ ಬೆಳೆಸದೆ
ಹೊರಗೆ ಹರಡಿದರೆ ಶಕ್ತಿಹೀನವಾಗುತ್ತದೆ.ಅದರ ಅಂತರ
ದಲ್ಲಿ ಪರಭಾಷೆಗಳು ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿ
ಕೊಂಡರೂ ಅಧರ್ಮಕ್ಕೆ ತಕ್ಕಂತೆ ಪ್ರತಿಫಲವಿದೆ.ಇಲ್ಲಿ ಯಾರೂ ಸ್ವತಂತ್ರ ರಲ್ಲ.ಅವರವರ ಮೂಲವನ್ನರಿತರೆ ಒಳಗೆ ಸ್ವತಂತ್ರ ಜ್ಞಾನವಿದೆ. ಅದರಿಂದ ನಿಜವಾದ ಸ್ವತಂತ್ರ ಜೀವನ ಅಡಗಿದೆ.ಹಿಂದೂ ಧರ್ಮವನ್ನು ಓದಿಕೊಂಡು ತಿಳಿಯ
ಲಾಗದು. ಅಳವಡಿಸಿಕೊಂಡು ಅನುಭವದಿಂದ ತಿಳಿದರೆ ಮಾನವ ಮಹಾತ್ಮರಾಗಬಹುದಷ್ಟೆ. ಯುಗಯುಗದಿಂದಲೂ ಈ ಭೂಮಿಯ ಮೇಲೆ ನಡೆದು ಬಂದ ಮನುಕುಲಕ್ಕೆ ತತ್ವಜ್ಞಾನದಿಂದ ಸ್ವತಂತ್ರ ಸಿಕ್ಕಿದೆ.ತಂತ್ರಜ್ಞಾನದ ಯುಗದಲ್ಲಿ ನಾವು ಸತ್ಯ ಹುಡುಕಿದರೆ ಸಿಗೋದಿಲ್ಲ. ಸತ್ಯ ಒಳಗಿದೆ ಮಿಥ್ಯ ಹೊರಗಿದೆ.ಬದಲಾವಣೆ ಜಗದ ನಿಯಮ.ನಾವು ಬದಲಾಗದೆ ಪರರನ್ನು ಬದಲಾಯಿಸಲಾಗದು. ನಮ್ಮದೇ ಭ್ರಷ್ಟಾಚಾರದ ಹಣದಲ್ಲಿ ಮಕ್ಕಳಿಗೆ ಶಿಷ್ಟಾಚಾರದ ಶಿಕ್ಷಣ ನೀಡಲು ಸಾಧ್ಯವೆ?
ಋಣ ಎಂದರೆ ಸಾಲ, ಕರ್ಮ ಎಂದರೆಕೆಲಸ ಕಾಯಕ ಎಂದಾಗ ಸತ್ಕರ್ಮದಿಂದ,ಸ್ವಧರ್ಮದಿಂದ,ಸತ್ಯದಿಂದ, ನ್ಯಾಯ,ನೀತಿ,ಸಂಸ್ಕೃತಿ ಸದಾಚಾರದಿಂದ ಋಣ ಮುಕ್ತರಾಗಲು ಅಂತಹ ಜ್ಞಾನದ ಅಗತ್ಯವಿದೆ.ಜ್ಞಾನ ನೀಡದೆ ಆಳಿದರೆ ಅಧರ್ಮ ವೇ ಬೆಳರಯೋದಷ್ಟೆ. ಇಲ್ಲಿ ನಾಟಕ
ವಿದ್ದರೂ ಅದರಲ್ಲಿ ಉತ್ತಮ ಪಾತ್ರವಿದ್ದು ಜನರನ್ನು ಸನ್ಮಾರ್ಗದಲ್ಲಿ ನಡೆಸುವಂತಿದ್ದರೆ ಉತ್ತಮ. ಅದು ಬಿಟ್ಟು ನಮ್ಮ ಸ್ವಾರ್ಥ ಸುಖಕ್ಕಾಗಿ ಅಧರ್ಮ, ಅನ್ಯಾಯ, ಅಸತ್ಯ ಹಿಂಸೆ,ಭ್ರಷ್ಟಾಚಾರ ವೇ ಜನರೊಳಗೆ ತುಂಬುವ ಪ್ರಯತ್ನದಲ್ಲಿ
ಕೇವಲ ಹಣಸಂಪಾದನೆಗೆ ತೊಡಗಿಸಿಕೊಂಡರೆ ಒಮ್ಮೆ ಹೆಣ ಆಗೋದು ಸತ್ಯ. ಆದರೆ ಮಹಾತ್ಮರಾಗದೆ ಹೋದರೆ ಅದೇ ಮುಂದೆ ಪ್ರೇತಾತ್ಮವಾಗಿ,ಭೂತ,ದೆವ್ವಗಳಾಗಿ ಕಾಡುವುದಲ್ಲವೆ? ದೆವ್ವ ಭೂತ,ದೇವರು ......ಇರುವುದೆ?
ಕೆಲವರಿಗೆ ಅಗೋಚರ ಶಕ್ತಿ ಕಾಣೀದಿಲ್ಲ.ಕೆಲವರಿಗೆ ಕಂಡರೂ ತೋರಿಸಲಾಗದು. ಹೀಗಾಗಿ ಕಣ್ಣಿಗೆ ಕಂಡದ್ದೇ ಸತ್ಯವೆಂಬ ಭ್ರಮೆಯಲ್ಲಿ ನಾನೇ ದೇವರು ಎಂದು ಮಾನವ ಮುಂದೆ ನಡೆದು ದೈವತ್ವ ಕಳೆದುಕೊಂಡು ಮೂಲವನ್ನು ಅರ್ಥ ಮಾಡಿಕೊಳ್ಳಲು ಸೋತಿರುವುದಾಗಿದೆ. ಶಾಶ್ವತ ಯಾವುದು?
ಭೂಮಿಯ ಮೇಲಿರೋವಾಗ ಭೂ ತತ್ವ ,ರಾಜ್ಯದೊಳಗಿನ
ಧರ್ಮ,ಸಂಸ್ಕೃತಿ, ಭಾಷೆ,ದೇಶದ ಮೂಲ ಶಿಕ್ಷಣವನ್ನು ಯಾರೂ ಆಳಬಾರದಷ್ಟೆ. ಆಳಿದವರು ಅಳುವುದಂತೂ ಸತ್ಯ.
ಕಾರಣ ಆಶ್ರಯ ಕೊಟ್ಟವರನ್ನು ಆಳುವ ಅಧಿಕಾರ ಮಾನವ ಪಡೆದಿಲ್ಲವಲ್ಲ. ಇದನ್ನು ಆ ಆ ಮೂಲ ತಿಳಿದು ನಡೆದವರೆ ತಿಳಿದು ತಿಳಿಸಿರುವುದಾಗಿದೆ. ವಿದೇಶದೊಳಗೆ ದೇಶವಿದೆ. ಅದ್ವೈತ ದೊಳಗೆ ದ್ವೈತವಿದೆ, ಅಧರ್ಮದೊಳಗೆ ಧರ್ಮ ಸೇರಿದೆ, ಅಜ್ಞಾನದೊಳಗೇ ಜ್ಞಾನ ಸಿಕ್ಕಿಹಾಕಿಕೊಂಡಿದೆ ಕಾರಣ
ಮಾನವ ತನ್ನೊಳಗಿರುವ ಸತ್ಯ ಬಿಟ್ಟು ಹೊರಗಿನ ಸತ್ಯದ ಹಿಂದೆ ನಡೆದಿರೋದಷ್ಟೆ. ನಾನೇ ನನ್ನ ಅರ್ಥ ಮಾಡಿಕೊಳ್ಳಲು ಸೋತಿರುವಾಗ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಕಷ್ಟ.ಅದಕ್ಕೆ ಪರದೇಶ,ಪರಧರ್ಮ, ಪರಭಾಷೆ ಪರಕೀಯರು
ಬೆಳೆದು ಪರತಂತ್ರದಲ್ಲಿ ಸ್ವತಂತ್ರ ಕಳೆದುಕೊಂಡಿರೋದು. ಇಲ್ಲಿ ಸತ್ಯ ಕಠೋರವೆನಿಸಿದರೂ ಸತ್ಯವೇ ದೇವರು. ದೈವತ್ವ ತತ್ವದಿಂದ ಬೆಳೆಯುತ್ತದೆ ತಂತ್ರದಿಂದ ಅಳಿಯುತ್ತದೆ.
ನಾವೇನೂ ಬೆಳೆಸಿಲ್ಲ,ಬೆಳೆಸಲಾಗಿಲ್ಲ ಪರವಾಗಿಲ್ಲ ಕೊನೆಪಕ್ಷ ಅಳಿಸುವ ಕೆಲಸಕ್ಕೆ ಸಹಕರಿಸದಿದ್ದರೆ ಉತ್ತಮ. ನಮ್ಮ ಸಹಕಾರವೇ ಎಲ್ಲಾ ಸಮಸ್ಯೆಗಳಿಗೆ ಕಾರಣ. ಯಾರ ಋಣ ಯಾರೋ ತೀರಿಸಲಾಗದು.ಯಾರದ್ದೋ ಧರ್ಮವನ್ನು ಯಾರೋ ಉಳಿಸಲಾಗದು.ಯಾರದ್ದೋ ದೇಶದ ಸಾಲವನ್ನು ಯಾರೋ ಬಂದು ತೀರಿಸಲಾಗದು. ಹೀಗಾಗಿ ನಮ್ಮ ಜೀವದ ಋಣವನ್ನು ನಾವೇ ಸತ್ಕರ್ಮದಿಂದ ತೀರಿಸಲು ಮೂಲ
ದೆಡೆಗೆ ನಡೆದರೆ ಇದ್ದಲ್ಲಿ ಜ್ಞಾನೋದಯವಾಗಿ ಶಾಂತಿ ತೃಪ್ತಿ, ಮುಕ್ತಿ ಸಿಗುತ್ತದೆ ಎನ್ನುವುದೇ ಹಿಂದಿನವರ ನಡೆ ನುಡಿಯ ತತ್ವವಾಗಿತ್ತು.
ಧರ್ಮ ರಕ್ಷಕರು ರಾಜಕೀಯ ವ್ಯಕ್ತಿಗಳ ಹಿಂದೆ ನಿಂತು ಬೇಡೋ ಪರಿಸ್ಥಿತಿ ಬರಬಾರದು.ಅವರ ಜ್ಞಾನವನ್ನು ರಾಜಕೀಯ ವ್ಯಕ್ತಿಗಳು ಸದ್ಬಳಕೆ ಮಾಡಿಕೊಂಡು ಸರ್ಕಾರ ನಡೆಸಲು ಪ್ರಜೆಗಳಿಗೆ ಸರಿಯಾದ ಶಿಕ್ಷಣ ನೀಡುವುದಷ್ಟೆ ಈಗ ಮುಖ್ಯವಾಗಿದೆ. ಇದೊಂದು ಸಾಮಾನ್ಯಜ್ಞಾನದ ಸಾಮಾನ್ಯ
ಪ್ರಜೆಯ ವಿಚಾರವಾಗಿದೆ .ಇದನ್ನು ಜನಸಾಮಾನ್ಯರೆ ವಿರೋಧಿಸಿದರೆ ಸಿಗೋದು ಜ್ಞಾನವಲ್ಲ ಅಜ್ಞಾನವಷ್ಟೆ.ಅಜ್ಞಾನದಲ್ಲಿ ಯಾರಿಗೂ ಜೀವನ್ಮುಕ್ತಿ ಪಡೆದಿಲ್ಲವಲ್ಲ? ಎಲ್ಲಿಗೆ ಹೊರಟಿದೆ ರಾಜ್ಯ ದೇಶದ ಆಚರಣೆ?
ಒಳಗಿನ ಶುದ್ದಿಯ ಕಡೆಗೆ ಇದ್ದರೆ ಉತ್ತಮ ಪ್ರಗತಿ ಸಾಧ್ಯ.
ಇಂತಹ ಲೇಖನಗಳು ಸಾಧ್ಯವಾದಷ್ಟು ಜನಸಾಮಾನ್ಯರು ಹಂಚಿಕೊಳ್ಳಬೇಕಿತ್ತು.ವಿಪರ್ಯಾಸವೆಂದರೆ ಇತ್ತೀಚೆಗೆ ಮುಖ ಚಿತ್ರವೇ ಮುಖ್ಯವಾಗಿ ಮುಖನೋಡಿ ಮಣೆಹಾಕುವವರ ಸಂಖ್ಯೆ ಬೆಳೆದು ಸತ್ಯ ಮುಚ್ಚಿಹೋಗುತ್ತಿದೆ. ಬೂದಿಮುಚ್ಚಿದ ಕೆಂಡದೊಳಗೆ ಕಾಲಿಟ್ಟು ಸುಟ್ಟ ಮೇಲೇ ಬುದ್ದಿ ಕಲಿಯ
ಬೇಕಿದೆ. ಸತ್ಯ ಕಠೋರವಾಗುವುದು ಅದನ್ನು ತಡೆದು ನಿಲ್ಲಿಸಿದಾಗಷ್ಟೆ. ನಮ್ಮ ಸತ್ಯಕ್ಕೆ ನಾವು ತಲೆಬಾಗಿದರೆ ಅದೇ ಧರ್ಮದೆಡೆಗೆ ನಡೆಸುತ್ತದೆ. ಧರ್ಮದೆಡೆಗೆ ನಡೆದಂತೆಲ್ಲಾ ಜೀವಕ್ಕೆ ಶಾಂತಿ ತೃಪ್ತಿ ಮುಕ್ತಿ ಸಿಗುತ್ತದೆ. ಇದು ಹೊರಗಿಲ್ಲ ಒಳಗೇ ಇದೆ. ನಮ್ಮ ಕಾಲುಬುಡವಿದೆ.ನಡೆಯಬೇಕಷ್ಟೆ.
ಕೈ ಕೆಸರಾದರೆ ಬಾಯಿ ಮೊಸರು ಎಂದರು. ಆದರೆ ಇಂದಿನಕೈ
ಕೆಸರಲ್ಲಿದ್ದ ಕಮಲವನ್ನು ನೇರವಾಗಿ ಕಿತ್ತು ಲಕ್ಮಿ ಪೂಜೆ ಮಾಡಿ ಮೈಯನ್ನು ಸರಿಯಾಗಿ ತೊಳೆದುಕೊಳ್ಳದೆ ಶುದ್ದವೆನ್ನುವ ಭ್ರಮೆಯಲ್ಲಿ ರಾಜಕೀಯ ನಡೆಸುತ್ತಾ ಸ್ವಚ್ಭಭಾರತದಲ್ಲಿ ತಂತ್ರಜ್ಞಾನವನ್ನು ಬೆಳೆಸುತ್ತಾ ಹೊರಗೆ ನಡೆದರೆ ಮೂಲದ ತತ್ವ ತಿಳಿಯಲಾಗದೆ ಅಜ್ಞಾನದ ಅಮಲಿನಲ್ಲಿಯೇ ಜೀವ ಹೋಗುತ್ತದೆ. ಸತ್ಯವನ್ನು ಎಷ್ಟೇ ತಿರುಚಿದರೂ ಇರೋದು ಒಂದೇ ಸತ್ಯ,ತತ್ವ,ಭೂಮಿ,ದೇಶ,ರಾಜ್ಯ,ಧರ್ಮ, ಜಾತಿ ದೇವರು .ಇದನ್ನು ಮಹಾತ್ಮರುಗಳು ಆತ್ಮಜ್ಞಾನದಿಂದ ತಿಳಿದರು.ವಿಜ್ಞಾನ ಜಗತ್ತಿನಲ್ಲಿ ಇದನ್ನು ಒಪ್ಪದಿದ್ದರೂ ಸತ್ಯ ಸತ್ಯವೇ ಮಿಥ್ಯ ಮಿಥ್ಯವೇ ಅಲ್ಲವೆ?
ದೇಶ ವಿದೇಶ ಮಾಡೋದು ಅಧರ್ಮ. ಮಂತ್ರ,ತಂತ್ರ,ಯಂತ್ರಗಳಿಂದ ಸ್ವತಂತ್ರ ಜ್ಞಾನ ಬೆಳೆಯಬೇಕು.ಸಾಧ್ಯವೆ? ಸದ್ಬಳಕೆ ಮಾಡಿಕೊಂಡರೆ ಸಾಧ್ಯ.
No comments:
Post a Comment