ನಮ್ಮ ಕಾಯಕ,ಕರ್ಮವು ಭಗವಂತನಿಗೆ ಮೀಸಲಾಗಿಟ್ಟರೆ
ಕೈಲಾಸ ಕಾಣಬಹುದು. ಕಾಯಕವೇ ಕೈಲಾಸ ಎನ್ನುವ ಮಂತ್ರದ ಅರ್ಥ ವಿಷ್ಟೆ.ಯಾರ ಕಾಯಕವು ಧರ್ಮ, ಸತ್ಯದ ಮಾರ್ಗದಲ್ಲಿ ಇರುವುದೋ ಅದು ಭಗವಂತನಿಗೇ ಮೀಸಲು.
ಮೀಸಲಾಗಿಟ್ಟುಕೊಂಡು ನಾವೆಷ್ಟೇ ರಾಜಕೀಯದೆಡೆಗೆ ಹೋದರೂ ಅದೊಂದು ಅಕರ್ಮ, ಅಧರ್ಮ, ಅಸತ್ಯದ ಜೀವನವಾದರೆ ಪರಕೀಯರ ವಶದಲ್ಲಿ ನಮ್ಮ ಜೀವಮೀಸಲಾದಂತೆಯೇ .ಶರಣಾಗೋದು ಎಂದಾಗ ಆ ಸತ್ಯಕ್ಕೆ ಧರ್ಮಕ್ಕೆ ಎನ್ನುವ ಅರ್ಥ ದಲ್ಲಿ ಇಂದಿನ ಸಮಾಜವು ಯಾವಮಾರ್ಗದಲ್ಲಿ ನಡೆಯುತ್ತಿದೆ? ಯಾವ ದಿಕ್ಕಿನೆಡೆಗೆ ಜನರನ್ನು ಎಳೆದುಕೊಂಡು ಆಳುತ್ತಿದ್ದಾರೆ. ನಿಜವಾಗಿಯೂ ಇಲ್ಲಿ ಶರಣರು,ದಾಸರು,ಭಕ್ತರು,ಜ್ಞಾನಿಗಳು,ಗುರುಗಳು ಯಾರು ಎನ್ನುವ ಪ್ರಶ್ನೆ ಹುಟ್ಟುತ್ತದೆ. ನಿಜ ಮಾನವನ ಆಸೆಗೆ ತಕ್ಕಂತೆ ಭಗವಂತನ ಸೃಷ್ಟಿ ಯೂ ಇದೆ.ಅದಕ್ಕೆ ತಕ್ಕಂತೆ ಸ್ಥಿತಿ ಕೊನೆಗೆ ಲಯವೂ ಆಗುತ್ತಿದೆ.ಇದನ್ನು ಯಾರಾದರೂ ತಡೆಯಲು ಸಾಧ್ಯವಾಗಿದ್ದರೆ ನಾವು ನಿಜವಾದ ದೇವರೆ ಎನ್ನಬಹುದು.ದೇವಾನುದೇವತೆಗಳು ಅವತಾರವೆತ್ತಿದ ಭೂಮಿ ಭಾರತದಲ್ಲಿ ಭಗವಂತನಿಗೆ ತಮ್ಮ ಜ್ಞಾನ,ಪ್ರತಿಭೆ,ಕರ್ಮ ವನ್ನರ್ಪಿಸುತ್ತಾ ಮುಕ್ತಿ ಪಡೆದವರು ಭಗವಂತನಿಗೆ ಮೀಸಲಾಗಿದ್ದರು.ಯಾವುದೇ ರಾಜರ ಹತ್ತಿರ
ಬೇಡದೆ,ಕಾಡದೆ ಸ್ವತಂತ್ರ ವಾಗಿದ್ದು ತಮ್ಮ ಜ್ಞಾನವನ್ನು ಲೋಕ ಕಲ್ಯಾಣಕ್ಕಾಗಿ ಮೀಸಲಾಗಿಟ್ಟು ಧರ್ಮ ರಕ್ಷಣೆ ಮಾಡಿದ ಮಹಾತ್ಮರನ್ನು ಮುಂದಿಟ್ಟುಕೊಂಡು ನಾನೇ ಮಹಾತ್ಮನೆಂದರೆ ಸತ್ಯವಲ್ಲ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು
ಸಮಸ್ಯೆಗಳು ಎದುರಿಸುತ್ತಿರುವುದು ಶ್ರೀಮಂತ ವರ್ಗವೆ ಇವರ ಜೊತೆಗೆ ಕಡುಬಡವರೂ ಯಾರಿಗೂ ಹೇಳಿಕೊಳ್ಳದ
ಸ್ಥಿತಿಯಲ್ಲಿದ್ದಾರೆ.ಇವರಿಬ್ಬರ ನಡುವಿನ ಮಧ್ಯವರ್ತಿಗಳು ಅತಂತ್ರಸ್ಥಿತಿಗೆ ಜನರನ್ನು ತಲುಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.ಅಂದರೆ ಶ್ರೀಮಂತ ರ ಹಣವನ್ನು ಬಡವರವರೆಗೆ ತಲುಪಿಸುವಕೆಲಸದಲ್ಲಿ ತಮ್ಮ ಪಾಲನ್ನು ಹಿಡಿದಿಟ್ಟುಕೊಂಡು ನಾವು ಬಹಳ ಶುದ್ದರೆನ್ನುವಂತೆ ನಾಟಕ ಆಡಿಕೊಂಡು ಜನರಲ್ಲಿದ್ದ ಸ್ವತಂತ್ರ ಜ್ಞಾನ ಹಿಂದುಳಿಯುತ್ತಿದೆ.
ಜನಸೇವೆಯೇ ಜನಾರ್ದನನನ ಸೇವೆ,ದೇಶ ಸೇವೆಯೇ ಈಶ ಸೇವೆ ಎಲ್ಲಾ ಸೇವಕರಾದರೂ ಯಾಕೆ ಭಗವಂತನ ದರ್ಶನ ಆಗಿಲ್ಲ? ದೇವಸ್ಥಾನ, ಮಠ,ಮಂದಿರ ಸುತ್ತಿದರೂ ದೈವತ್ವ ಯಾಕೆ ಜನರಲ್ಲಿಲ್ಲ? ಇಷ್ಟು ವರ್ಷಗಳಿಂದ ಮಾಡಿದ ಸೇವೆಗೆ
ತಕ್ಕಂತೆ ಪ್ರತಿಫಲವಾಗಿ ಜನರಿಗೆ ಏನು ಸಿಕ್ಕಿದೆ? ಬಡತನವು
ಮಾಯವಾಗುವಷ್ಟು ಸರ್ಕಾರದ ಸೇವಾಕೇಂದ್ರ,ಸಾಲ,ಸೌಲಭ್ಯ, ಉಚಿತ ಶಿಕ್ಷಣ,ಉಡುಗೆ,ತೊಡುಗೆ,ಉದ್ಯೋಗ ಇನ್ನಿತರ ಗೃಹಬಳಕೆ ವಸ್ತುಗಳನ್ನು ಬಡವರಿಗೆ ಹಂಚಲಾಗುತ್ತಿದೆ. ಆದರೂ ಯಾಕೆ
ಭಾರತದಲ್ಲಿರುವಷ್ಟು ಸಮಸ್ಯೆ ಬೇರೆ ದೇಶದಲ್ಲಿ ಕಾಣುತ್ತಿಲ್ಲ?
ಕಾರಣವಿಷ್ಟೆ. ಅವರವರ ದೇಶದ ಮೂಲ ಶಿಕ್ಷಣವನ್ನು ಅವರ ಭಾಷೆ,ಜ್ಞಾನಕ್ಕೆ ತಕ್ಕಂತೆ ಪ್ರಜೆಗಳಿಗೆ ವಿದೇಶಿಗಳಲ್ಲಿ
ಸರ್ಕಾರ ನೀಡುತ್ತಿದೆ ಇದಕ್ಕೆ ಅಲ್ಲಿಯ ಪ್ರಜೆಗಳೂ ಸಹಕಾರ ನೀಡಿ ಉತ್ತಮವಾದ ಆರ್ಥಿಕ ಸ್ಥಿತಿಗೆ ಬದ್ದರಾಗಿದ್ದಾರೆ. ಹಾಗೆ ಕಾನೂನು ಕೂಡ ಅಷ್ಟೇ ಕಟ್ಟುನಿಟ್ಟಾಗಿ ಅಚ್ಚುಕಟ್ಟಾಗಿ ದೆ. ಆದರೆ ಭಾರತದಲ್ಲಿ ಮೂಲದ ಶಿಕ್ಷಣವೇ ಕೊಡದೆ ವಿದೇಶಿ ಶಿಕ್ಷಣವನ್ನು ಮೂಲದಲ್ಲಿ ಕೊಡುತ್ತಾ ಭೌತಿಕದಲ್ಲಿ ಮುಂದೆ ನಡೆಯುತ್ತಾ ಅಧ್ಯಾತ್ಮ ದಲ್ಲಿ ಹಿಂದುಳಿದವರೆ ಹೆಚ್ಚುತ್ತಿದ್ದಾರೆ.
ಇವರನ್ನು ಆಳೋದಕ್ಕೆ ವಿದ್ಯಾವಂತರೇನೂ ಇದ್ದರೂ ಜ್ಞಾನ ಇಲ್ಲದೆ ತಾನೇ ಅಜ್ಞಾನದಲ್ಲಿದ್ದರೂ ಮಕ್ಕಳನ್ನೂ ಅಜ್ಞಾನಕ್ಕೆ
ಮೀಸಲಾಗಿಟ್ಟುಕೊಂಡು ಆಂತರಿಕ ಸತ್ಯ,ಸತ್ವವಿಲ್ಲದ ಶಿಕ್ಷಣ
ನೀಡುತ್ತಾ ಹೊರಜಗತ್ತಿಗೆ ಒಂದು ಪ್ರದರ್ಶನದ ವಸ್ತುವಂತೆ
ಕುಣಿಸಿದರೆ ಇದೊಂದು ದೊಡ್ಡ ಪಿಡುಗು. ಅಜ್ಞಾನದ ರೋಗಕ್ಕೆ ಮದ್ದು ಜ್ಞಾನದ ಶಿಕ್ಷಣ.ಅದರಲ್ಲೂ ರಾಜಕೀಯ
ತೂರಿಸಿದರೆ ಮಾನವನಿಂದ ಬದಲಾವಣೆ ಕಷ್ಟವಾದರೂ
ಆ ದೈವಶಕ್ತಿಯಿಂದ ಸಾಧ್ಯ. ಇದಕ್ಕಾಗಿ ಭೂಮಿ ಶುದ್ದಿಗಾಗಿ
ಪ್ರಕೃತಿವಿಕೋಪ,ರೋಗ,ಯುದ್ದ,ಹೋರಾಟ,ಕೊಲೆ,ಸುಲಿಗೆ
ಭಯೋತ್ಪಾದನೆ ಹೆಚ್ಚುತ್ತಿದೆ. ಇವರೆಲ್ಲರೂ ಆ ಭಗವಂತನ
ಪ್ರೇರಕರೆ ಆದಾಗ ಭಗವಂತನಿರೋದೆಲ್ಲಿ? ಚರಾಚರದಲ್ಲಿಯೂ ಅಡಗಿರುವ ಈ ಅಣು ಪರಮಾಣುಗಳ
ಒಕ್ಕೂಟ ಒಂದು ಜೀವಿಯಾಗಿ,ಪ್ರಾಣಿಯಾಗಿ,ಗಿಡ,ಮರ ಇನ್ನಿತರ ಚರಾಚರದಲ್ಲಿಯೂ ಅಡಗಿದ್ದು ಮಾನವನಿಗೆ ಕಂಡೂ ಕಾಣದಂತೆ ತನ್ನಕೆಲಸ ಮಾಡುತ್ತಿರುವುದೇ ಆ ಮಹಾಶಕ್ತಿ. ಭೂಮಿತಾಯಿಯ ಋಣ ತೀರಿಸಲು ನಮ್ಮ ಸೇವೆಯು ದೇವರಿಗೆ ಮೀಸಲಿಟ್ಟ ಹಿಂದಿನ ಮಹಾತ್ಮರುಗಳು
ಎಲ್ಲಿರುವರು? ಅವರನ್ನು ಮಧ್ಯೆ ನಿಲ್ಲಿಸಿ ಜನರನ್ನು ದಾರಿ ತಪ್ಪಿಸಿ ಆಳುವವರನ್ನು ನಾವು ದೇವರೆನ್ನಬಹುದೆ? ಒಟ್ಟಿನಲ್ಲಿ ದೈವತ್ವವು ತತ್ವದಿಂದ ಬೆಳೆದಾಗಲೇ ದೇವರಿಗೆ ನಮ್ಮ ಸೇವೆ ಮೀಸಲಾಗುತ್ತದೆ. ತಂತ್ರದಿಂದ ಬೆಳೆದದ್ದು ಅಸುರರ ಪಾಲಾಗಿ ಕಷ್ಟ ನಷ್ಟ ಇನ್ನಷ್ಟು ಬೆಳೆಯುತ್ತದೆ. ತಂತ್ರಜ್ಞಾನವು
ಮಾನವನ ಸೃಷ್ಟಿ. ತತ್ವಜ್ಞಾನ ದೈವಸೃಷ್ಟಿ.ತತ್ವಜ್ಞಾನಿಗಳ ನಡೆ ನುಡಿ ಯು ಸತ್ಯ ಧರ್ಮದಡಿಯಿತ್ತು.ಹೀಗಾಗಿ ಬಹಳ ಕಷ್ಟಪಟ್ಟು ಭೂಮಿಯಲ್ಲಿದ್ದೇ ಆತ್ಮಸಾಕ್ಷಾತ್ಕಾರ ಮಾಡಿ ಕೊಂಡು ಅಮರರಾದರು.ಇಲ್ಲಿ ಜೀವವಿರೋವಾಗಲೇ ಆತ್ಮಸಾಕ್ಷಿಯಂತೆ ನಡೆಯುವುದು ಕಷ್ಟ.ಅಜ್ಞಾನಿಗಳ ಮಧ್ಯೆ ಜೀವನ ನಡೆಸುವಾಗ ಸತ್ಯವನ್ನು ಅಸತ್ಯವೆನ್ನುವವರೆ ಹೆಚ್ಚು.
ಹಾಗಂತ ಅಂತರಾತ್ಮದ ವಿರುದ್ದ ನಡೆಯುವುದೂ ಸಂಕಟ
ಈ ಕಾರಣಕ್ಕಾಗಿ ಹೆಚ್ಚು ಮಂದಿ ಸಂನ್ಯಾಸಸ್ವೀಕರಿಸಿ ಮುಂದೆ ನಡೆದರು. ಆದರೆ ಸಂಸಾರದಲ್ಲಿದ್ದೂ ಸಾಧನೆ ಮಾಡಿದ ಮಹರ್ಷಿಗಳೂ ಇದ್ದರು. ಹಿಂದಿನ ಕಾಲದಲ್ಲಿದ್ದ ಶಿಕ್ಷಣವೇ
ಜ್ಞಾನದ ಸೋಪಾನವಾಗಿತ್ತು.ಇಂದು ಶಿಕ್ಷಣವೇ ಅಜ್ಞಾನದ ಸೋಪಾನವಾಗಿ ಮಾನವನ ಮಾನವನನ್ನು ಆಳೋದಕ್ಕೆ ಹೋಗಿ ಅಳುವ ಪರಿಸ್ಥಿತಿಯನ್ನು ತಲುಪಿದ್ದಾನೆ.ಇಷ್ಟಕ್ಕೂ ನಮ್ಮ ಈ ಸಣ್ಣ ಬಿಂದು ಮಾತ್ರದ ಜೀವ ರಕ್ಷಣೆಗಾಗಿ ಇಷ್ಟು
ಕಷ್ಟಪಡಬೇಕೆ? ಯಾರಿಗಾಗಿ ಯಾತಕ್ಕಾಗಿ ಇಲ್ಲಿಗೆ ಬಂದಿದೆ ಎಂದಾಗ ಅನೇಕ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು
ಬಂದಿದೆ.ಇದು ಹಿಂದಿನ ಜನ್ಮದ ಆಸೆಯಾಗಿರಬಹುದು,ಈಗಿನತಂದೆ ತಾಯಿಯರಿಂದ,ಸಮಾಜದಿಂದ ಬೆಳೆದಿರಬಹುದು. ಆಸೆಯೇ ದು:ಖಕ್ಕೆ ಕಾರಣವೆಂದರೆ ಯಾವ ಆಸೆ ಭೌತಿಕದಲ್ಲಿ ಮುಳುಗಿಸುತ್ತಿದೆಯೋ ಅ ದೇ ದು:ಖಕ್ಕೆ ಕಾರಣ
ಎನ್ನಬಹುದಷ್ಟೆ.ನಿರಾಸೆಯಿಂದ ಸಾದು,ಸಂತ,ದಾಸ,ಶರಣರು ಇದ್ದರೆ ಅದು ಸಾತ್ವಿಕ ಆಸೆ. ರಾಜಸ,ತಾಮಸ ಗುಣವನ್ನು ಹೆಚ್ಚಿಸುವ ಆಸೆಯಿಂದ ಹೆಚ್ಚು ದು:ಖವಿರುತ್ತದೆ ಎನ್ನುವ
ಅನುಭವ ಕಂಡುಕೊಂಡ ಎಷ್ಟೋ ಮಹಾರಾಜರುಗಳು ಕೊನೆಗೆ ವಾನಪ್ರಸ್ತ, ಸಂನ್ಯಾಸ ಸ್ವೀಕರಿಸಿ ಮುಕ್ತರಾಗಿದ್ದರು.
ಇಂದು ರಾಜಕಾರಣಿಗಳಾಗಲಿ ಶ್ರೀಮಂತ ಮಂದಿ,ಗುರು,
ಪ್ರತಿಷ್ಠಿತ ರು ಕೊನೆಯವರೆಗೂ ತಮ್ಮ ಸ್ಥಾನ ಪ್ರತಿಷ್ಟೆ ಗಾಗಿ
ಹೋರಾಟ ನಡೆಸುವವರಿದ್ದಾರೆ.
ಇದಕ್ಕೆ ಸಹಕರಿಸುವ ಮಧ್ಯವರ್ತಿಗಳಿಗೂ ಪೂರ್ಣ ಸತ್ಯದ ಅರಿವಿಲ್ಲದೆ ಪ್ರಚಾರಕರಾಗಿದ್ದರೆ ಜೀವನ ನಡೆಸಬಹುದು.
ಆದರೆ ಆತ್ಮಜ್ಞಾನದ ಸಾಧನೆಗೆ ಇದೇ ತೊಡಕಾಗುತ್ತದೆ.
ಮಕ್ಕಳಿಗೆ ಸತ್ಯಜ್ಞಾನದ ಶಿಕ್ಷಣ ಮೀಸಲಿಟ್ಟು ಜೀವನದ
ಸತ್ಯಾಸತ್ಯತೆಯನ್ನು ಅವರೆ ಅನುಭವಿಸುತ್ತಾ ಸ್ವತಂತ್ರ ಜ್ಞಾನವನ್ನು ಬೆಳೆಸಿಕೊಂಡರೆ ಇದು ಆತ್ಮನಿರ್ಭರ
ಭಾರತವಾಗುತ್ತದೆ.ಇದು ಬಿಟ್ಟು ಕೇವಲ ವಿರೋಧಿಗಳನ್ನು
ಬೆಳೆಸುತ್ತಾ ಅಧರ್ಮ, ಅನ್ಯಾಯ ಅಸತ್ಯದ ಭ್ರಷ್ಟಾಚಾರದ
ಹಣದಲ್ಲಿ ಭಗವಂತನಿಗೆ ಸೇವೆ ಮಾಡಿದರೆ ಏನು ಕೊಡುವೆವೋ ಅದೇ ತಿರುಗಿ ಬರೋದಾದರೆ ಭ್ರಷ್ಟಾಚಾರವೆ
ಗಟ್ಟಿಯಾಗೋದು. ಒಟ್ಟಿನಲ್ಲಿ ಮೀಸಲನ್ನು ಸತ್ಯ ಧರ್ಮ, ನ್ಯಾಯ,ನೀತಿ, ಸಂಸ್ಕೃತಿ, ಸಂಪ್ರದಾಯ,ಕಲೆ,ಯೋಗವು
ಹಿಂದಿನ ಶಿಕ್ಷಣವೇ ಬೆಳೆಸಿತ್ತು.ಈಗಿದುಅಳಿಸಿ ಆಳುವಮಟ್ಟಿಗೆ
ಬೆಳೆದುನಿಂತಿದ್ದರೂ ನಮ್ಮ ಮಕ್ಕಳಿಗೆ ನಾವೇ ಶತ್ರುವಾಗಿದ್ದು
ಅನಾವಶ್ಯಕ ವಿಚಾರಗಳನ್ನು ತಲೆಗೆ ತುಂಬಿ ಬುದ್ದಿವಂತರ ಸಾಲಿಗೆ ನಿಲ್ಲಿಸುತ್ತಿರುವುದು ಪ್ರಗತಿಯೇ ಅದೋಗತಿಯೆ?
ಇದಕ್ಕೆ ನಮ್ಮದೇ ಸಹಕಾರವಿದ್ದರೆ ಅಜ್ಞಾನವೇ
ಬೆಳೆಯೋದಲ್ಲವೆ? ಮುಳ್ಳಿನ ನಡುವೆ ಒಳ್ಳೆಯ ಹೂವು ಗಿಡದಲ್ಲಿ ಬಂದರೂ ಅದು ಪರಮಾತ್ಮನ ಪಾದಕ್ಕೆ ಮೀಸಲಿಡದೆ ಮಾನವನ ಕೊರಳಿಗೇ ಸೇರಿದರೆ ವ್ಯರ್ಥ.
ಹೀಗೇ ಭಕ್ತ ಪ್ರಹ್ಲಾದನು ರಕ್ಕಸರ ವಂಶದಲ್ಲಿ ಜನ್ಮ ತಾಳಿದರೂ ಅವನ ಜೀವಾತ್ಮನು ಪರಮಾತ್ಮನಿಗೆ ಮೀಸಲಾಗಿತ್ತು ಇದರಿಂದಾಗಿ ಎಷ್ಟೋ ಕಷ್ಟವನ್ನನುಭವಿಸಿ
ಕೊನೆಗೆ ಮಹಾವಿಷ್ಣುವಿನ ದರ್ಶನ ವಾಯಿತು.ಹೀಗೆಯೇ
ಎಷ್ಟೋ ಸತ್ಪರುಷ,ಸ್ತ್ರೀ ಶಕ್ತಿ ಜನ್ಮ ತಾಳಿದ್ದರೂ ಯಾರದ್ದೋ
ರಾಜಕೀಯಕ್ಕೆ ಸಿಲುಕಿ ಇರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸೋತರೆ ಪರಮಾತ್ಮ ಕಾಣೋದಿಲ್ಲ.
ಇವೆಲ್ಲವೂ ಅಸುರ ಶಕ್ತಿಯ ವಶವಾಗುತ್ತದೆ.
ಮಾನವನೊಳಗೇ ಇರುವ ದೇವಾಸುರರ ಗುಣ ಜ್ಞಾನವು ಅವನಿಗೆ ತಿಳಿಯಲು ಉತ್ತಮ ಗುರು ಬೇಕುಶಿಕ್ಷಣ ಬೇಕಿದೆ.
ಇದನ್ನು ಕೊಡುವುದಷ್ಟೆ ಮಾನವನ ಧರ್ಮಉಳಿದದ್ದು
ಅವರವರ ಕರ್ಮ ಕ್ಕೆ ತಕ್ಕಂತೆ ಜನ್ಮವಿರುತ್ತದೆ.
ಮನರಂಜನೆಯಿರಲಿ ಆತ್ಮವಂಚನೆಯಲ್ಲ. ಇಷ್ಟು ದೊಡ್ಡ ದೇಹವನ್ನು ಹಿಡಿದಿಟ್ಟುಕೊಂಡ ಆತ್ಮವೇ ದೇವರು.ಸತ್ಯವೆ ದೇವರು, ಧರ್ಮವೆ ದೇವರು.ಇದು ತತ್ವಜ್ಞಾನದಿಂದ ಕಂಡು ಕೊಂಡಿರುವ ಮಹಾತ್ಮರುಗಳು ಯಾವುದೇ ರಾಜಕೀಯಕ್ಕೆ
ಒಳಗಾಗದೆ ಸ್ವತಂತ್ರವಾಗಿ ದ್ದರು.ಕಾರಣ ಒಂದೆ ಸತ್ಯ,ಒಂದೇ ತತ್ವವನ್ನು ಅರ್ಥ ಮಾಡಿಕೊಳ್ಳಲು ಒಬ್ಬರಿಗೆ ಸಾಧ್ಯ. ಎಲ್ಲರಿಗೂ ತಿಳಿಸಬಹುದಾದರೂ ಅದರೊಳಗೆ ಹೊಕ್ಕಿ ನೋಡಲು ಒಬ್ಬರೆ ಹೋಗಬೇಕು. ಅದೇ ನಾನು. ನಾನು ಹೋಗುತ್ತಿದೆ ಅಹಂಕಾರ ಅಳಿಯುತ್ತಿದೆ ಎನಿಸಿದರೆ ಅಧ್ಯಾತ್ಮ ಸಾಧನೆ ಎನ್ನಬಹುದು.ಇದು ಹೆಚ್ಚುತ್ತಿದೆ ಎಂದರೆ
ಭೌತಿಕವಾಗಿದೆ.ಇವೆರಡರ ಉದ್ದೇಶ ಒಂದೇ ಆಗಿತ್ತು.ಹಿಂದೆ
ಅಧ್ಯಾತ್ಮ ದಲ್ಲಿಯೇ ವಿಶೇಷಜ್ಞಾನಿಗಳಿದ್ದರು.ಪರಕೀಯರು ದೂರವಿದ್ದು ನಮ್ಮದೇ ಶಿಕ್ಷಣದಿಂದ ನಮ್ಮಸಂಸಾರ,
ಸಮಾಜ, ದೇಶ ನಡೆಸೋ ಮಹಾತ್ಮರು ಇದ್ದರು.
ಈಗಲೂ ಇದ್ದರೂ ಕಣ್ಣಿಗೆ ಕಾಣದೆ ಮರೆಯಲ್ಲಿದ್ದಾರೆ.
ಹೀಗಾಗಿ ಸ್ವಲ್ಪ ಮಳೆ,ಬೆಳೆ,ಶಾಂತಿ ಒಳಗಿದೆ. ಇದಕ್ಕೆ ಸರ್ಕಾರದ ಮೀಸಲಿಗಿಂತ ಭಗವಂತನಿಗೆ ನಮ್ಮ ಕಾಯಕ
ವನ್ನು ಭಕ್ತಿ,ಶ್ರದ್ಧೆಯಿಂದ ಮೀಸಲಿಟ್ಟರೆ ಮುಕ್ತಿ. ಇದ್ದಲ್ಲಿಯೇ ಸಿಗುತ್ತದೆ. ಕನಕದಾಸ,ಪುರಂಧರ ದಾಸಶರಣಾಧಿಯಾಗಿ ಎಲ್ಲಾ ರಾಜಕೀಯದಿಂದ ದೂರವಿದ್ದು ಅಧ್ಯಾತ್ಮ ಸಾಧಕರಾಗಿದ್ದರು.ಅಂದರೆ ತಮ್ಮ ಸೇವೆಯನ್ನು
ಪರಮಾತ್ಮನ ದ್ಯಾನದಲ್ಲಿ ಮಾಡುತ್ತಾ ಪರಮಾತ್ಮನಿಗೇ ಮೀಸಲಾಗಿಟ್ಟಿದ್ದರು. ನಾವೀಗ ಎಲ್ಲಿ ಎಡವಿರೋದು?
ನಿಜವಾದ ಗುರು ಹಿರಿಯರು ಶಿಕ್ಷಕರು, ರಾಜರು ಎಲ್ಲಿರುವರು? ಬೇಲಿಯೇ ಎದ್ದು ಹೊಲ ಮೇಯ್ದರೆ ಅಧರ್ಮ. ಬೇಲಿ ಇಲ್ಲದ ಹೊಲದಲ್ಲಿ ಉತ್ತಮ ಸಸಿ
ಇರೋದಿಲ್ಲ ಇದ್ದರೂ ದುಷ್ಟರ ಪಾಲಾಗುತ್ತದೆ ಎನ್ನುವರು.
ಸತ್ಯ ತಿರುಚಿ ಆಳಿದರೂ ಸತ್ಯಕ್ಕೆ ಸಾವಿಲ್ಲ. ಜ್ಞಾನ ವಿಜ್ಞಾನದ ಅಂತರದಲ್ಲಿ ಅಜ್ಞಾನ ಮನೆ ಮಾಡಿದೆ. ಅಜ್ಞಾನದಲ್ಲಿ ರುವ ಜೀವಿಗಳು ಪರಕೀಯರ ವಶವಾಗಿ ಸಾಯುತ್ತಿದೆ. ಅಂದರೆ
ಅಜ್ಞಾನಿಗಳನ್ನು ಬಳಸಿಕೊಂಡು ದುಷ್ಟಶಕ್ತಿಗಳು ಬೆಳೆದಿದೆ.
No comments:
Post a Comment