ಹಿಂದೂಗಳ ಮಹಾಗ್ರಂಥ ರಾಮಾಯಣ ರಚನಾಕಾರರಾದ ವಾಲ್ಮೀಕಿ ಮಹರ್ಷಿ ಗಳ ಜಯಂತಿಯ ಶುಭಾಶಯಗಳು.
ರತ್ನಾಕರನೆಂಬ ದಾರಿಕೋರ ವಾಲ್ಮೀಕಿಯಾಗಿದ್ದು, ನರೇಂದ್ರನೆಂಬ ಮಹಾತ್ಮ ವಿವೇಕಾನಂದರಾಗಿದ್ದು ಹೀಗೇ ಇನ್ನೂ ಅನೇಕ ಮಹಾತ್ಮರುಗಳು ಹುಟ್ಟುವಾಗ ಸಾಮಾನ್ಯರಂತಿದ್ದು ನಂತರ ಮಹಾತ್ಮರಾಗಿ,ದೇವರಾಗಿ ಗುರುವಾಗಿ, ಪೂಜನೀಯರಾಗಿದ್ದು ಅವರ ತಪಸ್ಸು ಯೋಗ ಜ್ಞಾನದಿಂದ ಇಂತಹ ಮಹಾತ್ಮರುಗಳು ನಮ್ಮ ದೇಶದಲ್ಲಿ ಮಹಾತ್ಮರಾಗಿರೋದು. ಅವರು,ಧರ್ಮ, ಪಂಗಡ,ಪಕ್ಷ ಕಟ್ಟಿಕೊಂಡು ರಾಜಕೀಯ ಮಾಡಿಲ್ಲ. ಇದನ್ನು ನಾವೀಗ ಅರ್ಥ ಮಾಡಿಕೊಳ್ಳದೆ ಇದ್ದರೆ ಇರುವ ಅಲ್ಪ ಸ್ವಲ್ಪ ಜ್ಞಾನವನ್ನೂ ಕಳೆದುಕೊಂಡು ಹಿಂದುಳಿಯೋದು ಸತ್ಯ.
ಭೂಮಿಯಲ್ಲಿ ಮೂರು ರೀತಿಯ ಜನರಿದ್ದಾರೆ.ದೇವಮಾನವರು,ಮಾನವರು,ಅಸುರರು. ದೇವಮಾನವರಲ್ಲಿ ಆತ್ಮಜ್ಞಾನವಿದ್ದು ಭೂಮಿಯಲ್ಲಿ ಧರ್ಮ ಸತ್ಯ ನೆಲೆಸಲು ಸಾಧಕರಾದರೆ ಮಾನವರು ಮಧ್ಯವರ್ತಿಗಳು, ಅಸುರರು ತನ್ನ ಸ್ವಾರ್ಥ ಸುಖಕ್ಕಾಗಿ ಪರರನ್ನು ಅಧರ್ಮ ಅನ್ಯಾಯದಲ್ಲಿ ತೊಡಗಿಸಿಕೊಂಡು ಭೂಮಿಯನ್ನು ದುರ್ಭಳಕೆ ಮಾಡಿಕೊಳ್ಳುವ ಅಜ್ಞಾನಿಗಳು.
ಹಿಂದೂ ಧರ್ಮ ಎಂದರೆ ನಮ್ಮ ನಮ್ಮ ಹಿಂದಿನವರ ಧರ್ಮ ವಾಗುತ್ತದೆ.ಅವರ ಕರ್ಮ ವನ್ನೇ ತಿರಸ್ಕರಿಸಿ ಮುಂದೆ ನಡೆದವರು ಧರ್ಮ ರಕ್ಷಣೆಗಾಗಿ
ಹೋರಾಟ ಮಾಡಿದರೂ ರಾಜಕೀಯವಾಗುತ್ತದೆ. ಮೊದಲು ನೀನು ನಿನ್ನ ಮೂಲ ಧರ್ಮವನ್ನರಿತು ನಡೆ,ನಿನ್ನ ನೀ ತಿಳಿದು ಆಂತರಿಕ ಶುದ್ದಿ ಪಡೆದು ಸಂಸಾರ ನಡೆಸು, ನಂತರ ಸಮಾಜವೇ ಶುದ್ದವಾಗುವುದು. ಪ್ರಜಾಪ್ರಭುತ್ವದ ಪ್ರಜೆಗಳಿಗೆ
ಧರ್ಮ ಪದಕ್ಕೆ ಅರ್ಥ ತಿಳಿಸುವ ಶಿಕ್ಷಣವೇ ಕೊಡದೆ ಆಳಿದರೆ
ಜ್ಞಾನ ಬರುವುದೆ? ಮಹಾತ್ಮರುಗಳು ಯಾರು?ಹೇಗಿದ್ದರು? ಎಲ್ಲಿದ್ದರು? ಅವರ ತತ್ವದ ನಡೆ ನುಡಿಯಲ್ಲಿದ್ದ ಸತ್ಯ ಧರ್ಮ ಈಗ ಎಲ್ಲಿದೆ? ಹಣದಿಂದ ಧರ್ಮರಕ್ಷಣೆ ಸಾಧ್ಯವೆ?
ದೇಶದ ಮೂಲವೇ ಹಿಂದುಳಿದರೆ ಮೇಲಿನ ರೆಂಬೆ ಕೊಂಬೆಗಳನ್ನು ಬೆಳೆಸಿರೋದು ಯಾರು? ನಮ್ಮ ಸಹಕಾರವೇ ಎಲ್ಲಾ ಬದಲಾವಣೆಗೆ ಕಾರಣವಾದಾಗ ಅದರ ಪ್ರತಿಫಲವೂ ಅನುಭವಿಸಬೇಕು. ಕರ್ಮಕ್ಕೆ ತಕ್ಕಂತೆ ಫಲ. ಎಷ್ಟೇ ಜಾತಿ ಹುಟ್ಟಿದರೂ ಮಾನವ ಜಾತಿ ಒಂದೇ. ಮಾನವೀಯತೆ ಮಾನವನಿಗೆ ಅಗತ್ಯ. ಇದನ್ನು ಸರ್ಕಾರ ಬೆಳೆಸಲಾಗದು. ಹಣದಿಂದ ಋಣ ಬೆಳೆಯುತ್ತದೆ.ಎಷ್ಟು ಪರಾವಲಂಬಿಗಳು ಹೆಚ್ಚುವರೋ ಅಷ್ಟೇ ಸ್ವಾತಂತ್ರ್ಯ ಹರಣವಾಗುತ್ತದೆ.. ಹಿಂದಿನ ಮಹಾತ್ಮರುಗಳು ಯೋಗಿಗಳು ಪರಮಾತ್ಮನೆಡೆಗೆ ಸಾಗಲು ಸ್ವತಂತ್ರ ಜ್ಞಾನದಿಂದ ಹಿಂದಿನ ಧರ್ಮದ ಪ್ರಕಾರ ನಡೆದು ಇದ್ದಲ್ಲಿಯೇ ಪರಮಾತ್ಮನ ದರ್ಶನ ಮಾಡಿಕೊಂಡರು.ಈಗ ದೇಶ ಸುತ್ತು ಕೋಶ ಓದು ಎಂದು ಎಷ್ಟು ಸುತ್ತಿದರೂ ಓದಿದರೂ ಪರಮಾತ್ಮ ಕಾಣಲಿಲ್ಲ ಪರದೇಶ,ಪರಕೀಯರೆ ಬೆಳೆದು ಪರಾವಲಂಬನೆಯಲ್ಲಿದ್ದೂ ಸ್ವಾವಲಂಬಿ ಎನ್ನುವ ಭ್ರಮೆಯಲ್ಲಿ ಅಸಂಖ್ಯಾತ ಜನರು ಮೂಲ ಬಿಟ್ಟು ಹೊರಗೆ ಹೋದರೆ ಉಳಿಯೋದು ಯಾರು? ಇಲ್ಲಿ ಜ್ಞಾನವನ್ನು ಹೊರಗಿನಿಂದ ತುಂಬುತ್ತಾ ಒಳಗಿದ್ದ ಸಾಮಾನ್ಯಜ್ಞಾನ ಹಿಂದುಳಿದಿದೆ. ಹೀಗಾಗಿ ಎಲ್ಲಾ ಸರ್ಕಾರದ ಹಿಂದೆ ನಿಂತು ರಾಜಕೀಯದಲ್ಲಿ ಮೈ ಮರೆತು ದೇಶವನ್ನು ವಿದೇಶ ಮಾಡುವ
ವಿಜ್ಞಾನ ಜಗತ್ತು ಬೆಳೆದಿದೆ. ಯಾರೂ ಶಾಶ್ವತರಲ್ಲ.ಮಹಾತ್ಮ ನಾಗಲು ಆತ್ಮಾವಲೋಕನ ಆತ್ಮವಿಶ್ವಾಸ,ಆತ್ಮಜ್ಞಾನದ ಅಗತ್ಯವಿತ್ತು. ಆತ್ಮನಿರ್ಭರ ಭಾರತವನ್ನು ಅಧ್ಯಾತ್ಮ ದಿಂದ ಮಾಡಬಹುದಿತ್ತು.ಅಧ್ಯಾತ್ಮ ಎಂದರೆ ತನ್ನ ತಾನರಿತು ನಡೆಯೋದು.ಇದಕ್ಕೆ ಮಹಾತ್ಮರುಗಳು ಸ್ವತಂತ್ರ ಜ್ಞಾನದಿಂದ
ಸರಳ ಜೀವನದಲ್ಲಿ, ಸ್ವಾವಲಂಬನೆ ಜೊತೆಗೆ ಅವರ ಮೂಲ ಧರ್ಮ ಕರ್ಮಕ್ಕೆ ಒತ್ತುಕೊಟ್ಟು ರಾಜಕೀಯದಿಂದ ದೂರವಿದ್ದರು. ಈಗ ಎಲ್ಲಿರುವರು ಮಹಾತ್ಮರುಗಳು? ಧಾರ್ಮಿಕ ಕ್ಷೇತ್ರ ರಾಜಕೀಯ ಕ್ಷೇತ್ರದ ಹಿಂದೆ ನಡೆದರೆ ಪ್ರಗತಿಯೆ? ಭ್ರಷ್ಟಾಚಾರದ ಹಣದಲ್ಲಿ ಎಷ್ಟೇ ಸಾಧಕರಾದರೂ ಪರಮಾತ್ಮನೆಡೆಗೆ ಹೋಗಲು ಆಗದ ಮೇಲೆ
ವೈಭವ,ಆಡಂಬರಗಳಿಂದ ಜನರನ್ನು ಸೆಳೆಯೋ ಪ್ರಯತ್ನ ನಡೆಸಿದರೂ ಜ್ಞಾನದೊರೆಯದು. ಶಿಕ್ಷಣವೇ ವ್ಯಾಪಾರ
ವಾದರೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ ಅದೂ ಕೂಡ ಪರಕೀಯ ಭಾಷೆಯಲ್ಲಿ ಶಿಕ್ಷಣ ನೀಡಿ ಮಕ್ಕಳೇ ಪರಕೀಯರ ವಶವಾದರೆ ನಮ್ಮದೇನಿದೆ. ದೇಶ ರಕ್ಷಣೆ,ಭಾಷೆರಕ್ಷಣೆ,ಧರ್ಮ ರಕ್ಷಣೆ, ಸಂಸ್ಕೃತಿ ರಕ್ಷಣೆ..ಹೀಗೇ ಕೋಟ್ಯಾಂತರ ರೂ ವ್ಯರ್ಥ
ಮಾಡಿ ಯಾರ ರಕ್ಷಣೆ ಆಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ನಮ್ಮ ರಕ್ಷಣೆ ನಾವು ಮಾಡಿಕೊಳ್ಳಲು ಬೇಕಿದೆ ಆತ್ಮರಕ್ಷಣೆ.ಜೀವ ಶಾಶ್ವತವಲ್ಲ ಆತ್ಮಶಾಶ್ವತವೆನ್ನುವ ಮಹಾತ್ಮರ ದೇಶವನ್ನು ಮಹಾತ್ಮರೆ ರಕ್ಷಣೆ ಮಾಡಬೇಕಾದರೆ ಅಧ್ಯಾತ್ಮ ಶಿಕ್ಷಣವು
ಪ್ರಜೆಗಳಿಗೆ ನೀಡುವುದು ಧರ್ಮ ವಾಗಿತ್ತು. ಇದನ್ನು ಸರ್ಕಾರ ಕೊಡುವ ಬದಲಾಗಿ ಧಾರ್ಮಿಕ ಕ್ಷೇತ್ರದವರೆ ಕೊಡಬೇಕಿತ್ತು. ಆದರೆ ಅಲ್ಲಿಯೇ ಹೇಳಿಕೊಳ್ಳಲಾಗದ ರಾಜಕೀಯದಲ್ಲಿ ದೇವರೆ ಬಂಧನದಲ್ಲಿರುವರೆ? ದೈವತ್ವ ಪಡೆಯಲು ದೈವ ಗುಣ ಬೆಳೆಸೋ ಶಿಕ್ಷಣ ಬೇಕು.ಗುರು ಬೇಕು.ಮೊದಲ ಗುರು ತಾಯಿಯನ್ನೇ ಇದರಿಂದ ದೂರವಿಟ್ಟಿದ್ದರೆ ಮಕ್ಕಳ ಗತಿ?
ಭಾರತಮಾತೆ ಆತ್ಮಜ್ಞಾನಿಯಾಗಿದ್ದಳು. ಇಂಗ್ಲೇಂಡಿನ ರಾಣಿ ಭೌತಿಕ ವಿಜ್ಞಾನಿ. ಇದರಲ್ಲಿ ಸ್ಮಾರ್ಟ್ ಆಗಿರೋರ ಹಿಂದೆ ನಡೆದರೆ ಹೊರಗಿನ ಸುಂದರದಲ್ಲಿ ಒಳಗಿನ ಸುಂದರವನ್ನು ಗುರುತಿಸಲಾಗದು.ಇದನ್ನು ಅಜ್ಞಾನವೆಂದರು. ಅಜ್ಞಾನ ಎಂದರೆ ಜ್ಞಾನವಿಲ್ಲ ಎಂದಲ್ಲ ಜ್ಞಾನವನ್ನು ಸರಿಯಾಗಿ ತಿಳಿದಿಲ್ಲ
ಅರ್ಧ ಸತ್ಯವಷ್ಟೆ ಹೊರಗೆ ಕಾಣೋದು. ಉಳಿದರ್ದ ಒಳಗೇ ಇರುತ್ತದೆ.ನಾವೇ ಬೆಳೆಸಿಕೊಂಡರೆ ಉತ್ತರ ಸಿಗುತ್ತದೆ.
ನಾವ್ಯಾರು? ನಾನ್ಯಾರು ? ಪ್ರಶ್ನೆಗೆ ನಾವು ಮಾನವರು ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಒಳಗಿನ ಜ್ಞಾನ ಮಾತ್ರ ಉತ್ತರಿಸಬಹುದು. ಯಾರಿಗೆ ಗೊತ್ತು ಯಾರಲ್ಲಿ ಯಾವ ಮಹಾತ್ಮನಿರುವರೋ? ನಾವು ನೋಡುವ,ಕೇಳುವ,ಓದುವ,
ಹೋಗುವ ದಾರಿ ಸರಿಯಿದ್ದರೆ ಉತ್ತರ ಸರಿಯಾಗಿರುತ್ತದೆ.
ತಪ್ಪಿದ್ದರೆ ಹಿಂದಿನವರಿಗಿಂತ ವಿರುದ್ದವಿದ್ದರೆ ತಿರುಗಿ ಬರೋವರೆಗೂ ಉತ್ತರ ಸಿಗೋದಿಲ್ಲ. ಯಾರೋ ಬರೆದಿಟ್ಟದ್ದು ನಮ್ಮದಾಗದು.ಯಾರದ್ದೋ ಕಥೆ ಬರೆದು ನನ್ನ ಕಥೆ ಎಂದರೆ ಸರಿಯೆ? ನಾವೇ ಮೋಸಹೋಗಿ ಯಾರಿಗೋ
ಮೋಸ ಮಾಡೋದರಲ್ಲಿಯೇ ಮಾನವ ಕಾಲ ಕಳೆದರೆ ಮಹಾತ್ಮರನ್ನು ಅರಿಯಲಾಗದು. ದೇಶ ಒಂದೇ ಅದರೊಳಗೆ ಇರುವ ಈ ಅಸಂಖ್ಯಾತ ದೇವರು,ಧರ್ಮ ಜಾತಿ ಪಕ್ಷ ಪಂಗಡಗಳು ಒಂದಾಗಲು ಅಸಾಧ್ಯವಾದರೆ ಅದ್ವೈತ ತತ್ವ, ದ್ವೈತ,ವಿಶಿಷ್ಠಾದ್ವೈತದ ಒಗ್ಗಟ್ಟು ಎಲ್ಲಿರುತ್ತದೆ. ಭೂಮಿ ಮೇಲೆ ಬಂದಿರುವಮೂಲ ಉದ್ದೇಶ ಋಣ ತೀರಿಸಿ ಮುಕ್ತಿ ಪಡೆಯೋದು.ಸರ್ಕಾರದ ಹಿಂದೆ ನಡೆದಷ್ಟೂ ಸಾಲ ಬೆಳೆದರೆ
ಇದನ್ನು ತೀರಿಸಲು ಜ್ಞಾನ ಬೇಡವೆ? ಸರಸ್ವತಿಯನ್ನು ಲಕ್ಮೀಯಾಗಿ ತೋರಿಸುವ ವೈಭವವಿದ್ದರೂ ದೇಶದೊಳಗಿರುವ ಸಾಲಕ್ಕೆ ಅಜ್ಞಾನವೇ ಕಾರಣವೆನ್ನುವ ಸಾಮಾನ್ಯಜ್ಞಾನ ಪ್ರಜೆಗಳಿಗೆ ಇಲ್ಲವಾದರೆ ಯಾವ ದೇವರೂ ಏನೂ ಮಾಡಲಾಗದು.ಮಧ್ಯವರ್ತಿಗಳು ಮಾನವ ದೇವರ ನಡುವೆ ತಮ್ಮ ವ್ಯವಹಾರ ನಡೆಸಿದ್ದರೂ ಹಣದಿಂದ ಧರ್ಮ ರಕ್ಷಣೆ ಮಾಡಬಹುದೆ? ಆಂತರಿಕ ಜ್ಞಾನ ಭೌತಿಕ ಜ್ಞಾನದ ನಡುವೆ ಸಾಮಾನ್ಯಜ್ಞಾನ ಸಿಕ್ಕಿ ಗೊತ್ತು ಗುರಿ ಯಿಲ್ಲದೆ ನಿಂತ ನೀರಾಗಿ ಕೊಳಕಾದರೆ ಶುದ್ದ ಮಾಡೋದು ಕಷ್ಟ. ಸ್ವಚ್ಚಭಾರತ
ಸ್ವಚ್ಚ ಶಿಕ್ಷಣದಲ್ಲಿದೆ.
ರಾಜಕೀಯದಲ್ಲಿಲ್ಲ.ರಾಜಯೋಗದಲ್ಲಿತ್ತು.
No comments:
Post a Comment