ತಪ್ಪು ಮಾಡದವರಿದ್ದಾರೆಯೆ?
ಸುಳ್ಳು ಹೇಳದವರಿದ್ದಾರೆಯೆ?
ಮಾನವನ ಜನ್ಮಕ್ಕೆ ಕಾರಣವೆ ಇದಾಗಿರುವಾಗ ಇದನ್ನು ಬಿಟ್ಟು ಜೀವನ ನಡೆಸಿದವರಿದ್ದಾರೆಯೆ?
ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಅಸತ್ಯಗಳು ಜೀವನದ ಅಂಗವಾಗಿ ಅದನ್ನು ಸರಿಪಡಿಸಿಕೊಂಡು ಮುಂದೆ ನಡೆಯುವುದು ಸಹಜ. ಎಲ್ಲಿಯವರೆಗೆ ತಪ್ಪು ತಿದ್ದಿಕೊಳ್ಳಲು
ಆಗದೆ ಅಸತ್ಯವನ್ನು ಬಂಡವಾಳವಾಗಿಟ್ಟುಕೊಂಡು ಜೀವನ ನಡೆಸುವರೋ ಅಲ್ಲಿಯವರೆಗೆ ಈ ನಾಟಕದ ಜೀವನದ ಸತ್ಯ ತಿಳಿಯಲು ಕಷ್ಟ. ನಮ್ಮ ತಪ್ಪು ನಮಗೆ ತಿಳಿಯದಿದ್ದರೂ ತಿಳಿಸುವವರು ಇರುತ್ತಾರೆ. ಅವರೆ ನಿಜವಾದ ಗುರು.
ತಾಯಿ,ತಂದೆ,ಬಂಧು ಬಳಗ,ಸ್ನೇಹಿತರುಗಳಿಂದ ಸಾಕಷ್ಟು ಕಲಿಯಬಹುದು ಆದರೆ ನಮ್ಮ ತಪ್ಪನ್ನು ತಿಳಿಸಿ ಹೇಳುವ ಹೊರಗಿನವರಿಂದ ತಪ್ಪು ತಿದ್ದುವ ಕೆಲಸ ಮಾಡಲಾಗದು. ಕಾರಣ, ತಪ್ಪು ಕಾಣುವುದು ತಪ್ಪು ಮಾಡಿದವರಿಗಷ್ಟೆ. ಮಕ್ಕಳ ತಪ್ಪು ಪೋಷಕರಿಗೆ ಕಂಡರೂ ಅದೇ ತಪ್ಪು ನಾವು
ಮಾಡುತ್ತಿದ್ದರೆ ಮಕ್ಕಳು ಸರಿಯಾಗೋದಿಲ್ಲ.ಮೂಲವನ್ನು
ಅರ್ಥ ಮಾಡಿಕೊಂಡರೆ ಅಲ್ಲಿ ಸರಿಪಡಿಸಿದರೆ ತಪ್ಪು ಬೆಳೆಯೋದಿಲ್ಲ. ನಾವೆಲ್ಲರೂ ತಪ್ಪಿರೋದೆಲ್ಲಿ? ಎಂದಾಗ ಶಿಕ್ಷಣದಲ್ಲಿ ಎನ್ನುವ ಉತ್ತರಕ್ಕೆ ಅನೇಕರ ವಿರೋಧವಿದ್ದರೂ
ಸತ್ಯ ಒಂದೇ. ಆ ಒಂದೇ ಸತ್ಯದೆಡೆಗೆ ತಿರುಗಿ ಬರೋವರೆಗೆ
ತಪ್ಪು ನಡೆಯುತ್ತಲೇ ಇರುತ್ತದೆ. ಅದಕ್ಕೆ ರಾಜಕೀಯದ ಕುಂಟು ನೆಪಗಳೂ ಬೆಳೆಯುತ್ತಾ ಕೊನೆಯಲ್ಲಿ ಪಶ್ಚಾತ್ತಾಪ ಪಟ್ಟರೂ ಹಿಂದಿರುಗಲಾಗದೆ ಜೀವ ಹೋಗುತ್ತದೆ.
ಸತ್ಯವು ನಿಧಾನವಾಗಿ ಎದುರು ಬರುವಾಗ ಅಸತ್ಯವು ತನ್ನ ಪ್ರಭಾವದಿಂದಾಗಿ ಇಡೀ ಜಗತ್ತನ್ನು ಆಳಲು ಹೋಗಿ ಸೋತು ಹೋಗಿರುತ್ತದೆ. ಮಾನವನಿಗೆ ಅಸತ್ಯ ಪ್ರಿಯವಾಗಲು ಕಾರಣ
ಅವನ ತಪ್ಪುಗಳನ್ನು ಅದು ಮುಚ್ಚಿಡುತ್ತದೆ. ಮುಚ್ಚಿಟ್ಟರೂ ಆತ್ಮರಕ್ಷಣೆಗೆ ಸತ್ಯವೇ ಬೇಕು ಎನ್ನುವ ಜ್ಞಾನವಿದ್ದರೆ ಸತ್ಯದ ದಾರಿ ಹಿಡಿಯುತ್ತಾನೆ.
** ತಪ್ಪು ಮಾಡಿದಾಗಲಷ್ಟೇ ನಮಗೆ ನೆಪಗಳು, ಸಮರ್ಥನೆಗಳು ಬೇಕಾಗುತ್ತವೆ. ಪ್ರಾಮಾಣಿಕವಾಗಿದ್ದಾಗ ಅವ್ಯಾವುಗಳ ಅವಶ್ಯಕತೆಯೇ ಇರುವುದಿಲ್ಲ. ಎಲ್ಲ ಬೇಕೆಂಬ ಆಸೆಯಿಂದ ಶುರುವಾಗಿ,ಕೊನೆಗೆ ಏನು ಬೇಡವೆಂದು ಕೋರಿಕೊಳ್ಳುವುದೇ ಜೀವನ.*
** ನಿನ್ನೆಯವರೆಗೆ ಕಲಿತ ಪಾಠಗಳನ್ನೆಲ್ಲ ಮನನ ಮಾಡಲು ಇಂದು ಸರಿಯಾದ ಸಮಯ . ನಾಳೆಗಳನ್ನು ಎದುರಿಸಲು ಅದು ಸಹಾಯವಾಗುತ್ತದೆ. 🙏
🙏 ಅತ್ಯಂತ ಪ್ರಾಮಾಣಿಕರಾಗಿ ಇರುವುದೂ ಅಪಾಯಕಾರಿ. ನೇರವಾದ ಮರವೇ ಮೊದಲು ನೆಲಕ್ಕುರುಳುವುದು. ನಂತರ ಡೊಂಕು ಮರದ ಸರದಿ. ಸಜ್ಜನರ ಸಹವಾಸ, ಸುಗಂಧ ದ್ರವ್ಯಗಳ ಅಂಗಡಿಗೆ ಹೋದಂತೆ. ಅಲ್ಲಿ ನಾವು ಕೊಂಡುಕೊಳ್ಳದಿದ್ದರೂ ಪರಿಮಳದ ಸುವಾಸನೆ ಸಿಗುತ್ತದೆ.**
*ಬೇರೆಯವರಿಗೆ ಒಳಿತಾಗಲಿ ಅಂತಾ ಸದಾ ಹಂಬಲಿಸೋರಿಗೆ ಬರಸಿಡಿಲು ಬಂದರೆಗಿದಾಗ ಯಾವುದೇ ವ್ಯಕ್ತಿ ಮಾನಸಿಕವಾಗಿ ಕುಗ್ಗುತ್ತಾನೆ. ಆಗ ಆತನ ಆತ್ಮವಿಶ್ವಾಸವೇ ಅವನಿಗೆ ಶ್ರೀರಕ್ಷೆ.🙏
*ಶ್ರೇಷ್ಠರಾಗುವುದಕ್ಕೆ ಪ್ರಯತ್ನಿಸಬೇಕು. ಆದರೆ ಬೇರೆಯವರನ್ನು ಕುಬ್ಜರಾಗಿಸುವ ಮೂಲಕ ಯಾರೂ ಶ್ರೇಷ್ಠರಾಗಲಾರರು ಎಂಬುದನ್ನು ನೆನಪಿಡಬೇಕು. ***
*ಜೀವನದಲ್ಲಿ ಎದುರಾಳಿ ಇದ್ದರೆ ಚೆಂದ ಅದು ನಮಗೆ ಸಮನಾದ ಪ್ರತಿಸ್ಪರ್ದಿ ಇದ್ದರೆ ಇನ್ನೂ ಚೆಂದ. ಎದುರಾಳಿ ಇದ್ದರೇನೆ ಜೀವನದಲ್ಲಿ ಒಂದು ಮಜಾ, ಲಯ ,ಸ್ಪೂರ್ತಿ ಹುಟ್ಟೋದು ಗೆಲ್ಲಲ್ಲೇಬೇಕೆಂಬ ಛಲ, ಹುಮ್ಮಸ್ಸು ಗಟ್ಟಿಗೊಳ್ಳುವುದು ಮತ್ತು ಮನಸ್ಸು ಏಕಾಗ್ರತೆಗೊಂಡು ಕಠಿಣ ಪರಿಶ್ರಮಕ್ಕೆ ನಾಂದಿ ಹಾಡುವುದು. ಆದುದರಿಂದ ಯಾವಾಗಲೂ ನಮ್ಮ ಪ್ರತಿಸ್ಪರ್ಧಿಯನ್ನು ಗೌರವಿಸಬೇಕು***
🙏ಬೇರೆಯವರನ್ನು ಮೆಚ್ಚಿಸಲು ನೀನು ಎಂದಿಗೂ ಜೀವಿಸಬೇಡ. ಯಾಕೆಂದರೆ ಪ್ರತಿಯೊಬ್ಬರ ಅಭಿಪ್ರಾಯಗಳು ಸಂದರ್ಭಕ್ಕನುಸಾರ ಹೇಗೆ ಬದಲಾಗುತ್ತದೆ. ಬದುಕು ವರ್ಣಮಯವಾಗಿರಬೇಕೆ ಹೊರತು,ಇಡಿ ಜೀವನ ನಾಟಕೀಯವಾಗಿರಬಾರದು.
ಹೊಟ್ಟೆಪಾಡಿಗಾಗಿ ರಾಜನ ವೇಷ ಹಾಕಿ ನಟಿಸಬಹುದು.ಆದರೆ ನಾನೇ ರಾಜನೆಂದು ಬದುಕಲಾಗದು.
ಹಾಗೇನಾದರೂ ಹೇಳಿಕೊಂಡರೆ ತಪ್ಪು ಅಸತ್ಯ ಎರಡೂ ಹೆಚ್ಚುತ್ತದೆ.
ನಾಟಕದೊಳಗೊಂದು ನಾಟಕವಾಡಿ ತಾನೊಬ್ಬ ಶ್ರೀಮಂತ, ರಾಜ,ಮಹಾತ್ಮ,ದೇವರು, ಸಾದು,ಸಂತ,ಸಂನ್ಯಾಸಿ, ಜ್ಞಾನಿ
ಎನ್ನುವವರ ಹಿಂದಿನ ನಾಟಕೀಯ ಗುಣ ಸ್ವಭಾವ ತಕ್ಷಣ ಕಾಣದಿದ್ದರೂ , ನಿಜ ಜೀವನದಲ್ಲಿಯೂ ಅದೇ ರೀತಿ ನಡೆಯಲಾಗದೆ ತಪ್ಪನ್ನು ಮಾಡಿದರೂ ಅಜ್ಞಾನಿಗಳು ಕ್ಷಮಿಸಬಹುದು ದೇವರಲ್ಲ.
ಗೊಂಬೆಯಾಟವಯ್ಯಾ ಆ ದೇವನಾಡುವ ಗೊಂಬೆಯಾಟವಯ್ಯಾ
No comments:
Post a Comment