ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, October 12, 2022

ನಾವ್ಯಾರು ಉತ್ತರ ನಾನ್ಯಾರು ಉತ್ತರ ಒಂದೇ?

ನಾವ್ಯಾರು?
ಈ ಪ್ರಶ್ನೆಗೆ ಮೊದಲ ಉತ್ತರ ಮಾನವರು ನಂತರದ ಉತ್ತರಗಳು  ಆ ದೇಶದ ಪ್ರಜೆಗಳು ಹಾಗೆಯೇ ಹಿಂದೂ,ಇಸ್ಲಾಂ, ಮುಸ್ಲಿಂ  ಪಂಗಡ ಜಾತಿಯ ಆಧಾರದಲ್ಲಿ
ಮತ್ತೆ ನಾನು ಹೆಚ್ಚಾಗುತ್ತಾ ಕೊನೆಯವರೆಗೂ ನಾನ್ಯಾರು ಎನ್ನುವ ಒಳಗಿನ ಪ್ರಶ್ನೆ ಹಾಕಿಕೊಳ್ಳಲಾಗದೆ ನಾವೆಲ್ಲರೂ ಹೋಗುತ್ತೇವೆ. ನಾನ್ಯಾರು ಪ್ರಶ್ನೆ  ಎಲ್ಲಿಯವರೆಗೆ ನನ್ನೊಳಗೆ
ಬರುವುದಿಲ್ಲವೋ ಅಲ್ಲಿಯವರೆಗೆ ಈ ಭೂಮಿಯ ಮೇಲಿದ್ದು  ಜೀವ  ತನ್ನ ಕರ್ಮಕ್ಕೆ ತಕ್ಕಂತೆ ಜನ್ಮ ಪಡೆಯುತ್ತಲೇ ಇರುತ್ತದೆ ಎನ್ನುವ ಸತ್ಯ ಮಾತ್ರ ಒಂದೇ. ಇದನ್ನು ಯಾವ ರಾಜಕೀಯದಿಂದಲೂ ಅರ್ಥ ಮಾಡಿಸಲು ಕಷ್ಟ.ಯಾವುದೇ ಒಂದು ಧರ್ಮದಿಂದಲೂ ತಿಳಿಯಲಾಗದು.ಕಾರಣ ನಾವೇ ಹುಟ್ಟಿಸಿಕೊಂಡಿರುವ ಅಸಂಖ್ಯಾತ ದೇವಾನುದೇವತೆಗಳು,ಧರ್ಮ, ಪಂಗಡ,ಜಾತಿ ಪದ್ದತಿ ಕಾನೂನು ಕಟ್ಟಳೆಗಳನ್ನು ಮೀರಿದ ಸತ್ಯಜ್ಞಾನದಿಂದ  ಈ  ಪ್ರಶ್ನೆಗೆ ಉತ್ತರ ಸಿಗೋವಾಗ ಇದನ್ನು ಓದಿ,ಕೇಳಿ,ನೋಡಿ
ತಿಳಿದಿದೆ ಎನ್ನುವುದು ಅಗತ್ಯವಾಗುತ್ತದೆ. ಯಾರಿಗೆ ಇದರ ಬಗ್ಗೆ ಸರಿಯಾದ ಜ್ಞಾನವಿದೆಯೋ ಅವರು ಈಗಿಲ್ಲ.ಇದ್ದರೂ ರಾಜಕೀಯಕ್ಕೆ  ಇಳಿಯೋದಿಲ್ಲ. ಹೀಗಾಗಿ ನಾವೆಲ್ಲರೂ ರಾಜಕೀಯದ ಹಿಂದೆ ನಡೆದಷ್ಟೂ ಈ ಪ್ರಶ್ನೆಯೂ ಒಳಗೇ
ಹಿಂದಕ್ಕೆ ಹೋಗುತ್ತಾ ಜೀವ ಹೋಗುತ್ತದೆ. ಜೀವ ಹೋದ ಮೇಲೆ ನಾನ್ಯಾರು ಎನ್ನುವ ಬಗ್ಗೆ ಯಾರಿಗೂ ತಿಳಿಯದು.
ಜಗತ್ತಿನಲ್ಲಿ  ಎಲ್ಲಾ ಶಾಶ್ವತವಲ್ಲವೆನ್ನುವ ಸತ್ಯಎಲ್ಲರಿಗೂ 
ಅರ್ಥ ವಾದರೂ ಎಲ್ಲದರ ಹಿಂದೆ ನಡೆಯೋದು ತಪ್ಪಿಲ್ಲ. ಎಲ್ಲರಿಗೂ ಮುಕ್ತಿ ಕೊಡುತ್ತೇನೆ ಎನ್ನುವವರಿಗೆ ನಾನ್ಯಾರು ಎನ್ನುವ ಸತ್ಯದ ಅರಿವಿಲ್ಲ.ಹಾಗಾದರೆ ಮುಕ್ತಿ ಎನ್ನುವ ಹೆಸರಲ್ಲಿ  ನಡೆದಿರೋದು ಏನು? ವ್ಯವಹಾರವೆ ಧರ್ಮ ವೆ? 
ಅವರವರ ಜನ್ಮಕ್ಕೆ ತಕ್ಕಂತೆ ಧರ್ಮಕರ್ಮ ಗಳಿವೆ. ಹಿಂದಿನ
ಗುರು ಹಿರಿಯರ ಹಾದಿಯಲ್ಲಿ ನಡೆದವರಿಗೆ ಮುಕ್ತಿ ಸಿಗುತ್ತದೆ
ಎನ್ನುವ ಹಿಂದೂ ಧರ್ಮ  ಇಂದು ಹಿಂದೆ ತಿರುಗಿ ನೋಡದೆ
ಮುಂದೆ ನಡೆದರೆ  ಹೊರಗಿನ ಸತ್ಯವಷ್ಟೆ ಕಾಣೋದು.ಹಿಂದೆ
ಕಷ್ಟವಿತ್ತು ಈಗ ಸುಖವಿದೆ ಎಂದು ಮಂತ್ರ,ತಂತ್ರ ಯಂತ್ರದ ಸಹಾಯದಿಂದ  ಸ್ವತಂತ್ರವಾಗಿ ಮುಂದೆ ನಡೆದರೂ ಈಗಿನ
ಪರಿಸ್ಥಿತಿಯನ್ನು ನೋಡಿದಾಗ ಯಾರಿಗೆ ಸುಖ,ಯಾರಿಗೆ ದು:ಖ ಎಂದರೆ ಅಧಿಕಾರ,ಹಣ,ಸ್ಥಾನ ಪಡೆದವರಿಗೆ ಸುಖ
ಎಂದು  ಬಡವರು ಹೇಳಿದರೆ, ಬಡವರಾದರೂ ತನ್ನ ಪಾಡಿಗೆ
ತಾನು ದುಡಿದು ಸುಖನಿದ್ರೆ ಮಾಡುತ್ತಾ ಎಲ್ಲರೊಳಗೊಬ್ಬರಾಗಿ  ಸಂತೋಷದಿಂದ ಬದುಕುವಂತಹ
ಸ್ಥಿತಿ ಶ್ರೀಮಂತ ಪಡೆದಿಲ್ಲವಾದರೆ ಅವನು ದು:ಖಿಯೆ? ದೂರದ ಬೆಟ್ಟ ನುಣ್ಣಗೆ ಎಂದಂತೆ  ಹತ್ತಿರದವರ ಕಷ್ಟಕ್ಕೆ  ಸ್ಪಂದಿಸುವ ಜ್ಞಾನವಿದ್ದರೆ  ಕಷ್ಟ ಬಂದರೂ ಸಹಿಸಿಕೊಂಡು ಹೋಗುವ ಶಕ್ತಿಯಿರುತ್ತದೆ. ನಂತರ  ಸುಖವಿರುತ್ತದೆ.
ಹೀಗೇ  ಪ್ರತಿಯೊಂದರಲ್ಲೂ ನಾವು ಸೂಕ್ಮವಾಗಿ ನೋಡಿದರೆ
ಭೂಮಿಯಲ್ಲಿ  ಸುಖವಾಗಿರೋದೆಂದರೆ ಜ್ಞಾನದಿಂದ ಮಾತ್ರ
ಜ್ಞಾನ ಪಡೆಯಲು ಕಷ್ಟಪಡಲೇಬೇಕು. ಹಿಂದಿನ ಮಹಾತ್ಮರುಗಳು ಮುಕ್ತಿ ಪಡೆದರೆಂದರೆ ಅವರ ನಡೆ ನುಡಿ
ರಾಜಕೀಯದೆಡೆಗೆ ಇರಲಿಲ್ಲ.ಸ್ವತಂತ್ರವಾಗಿ ಸರಳವಾಗಿ,ಸತ್ಯ ಧರ್ಮದಲ್ಲಿದ್ದ ಕಾರಣ ಆತ್ಮಕ್ಕೆ ಮುಕ್ತಿ ಸಿಕ್ಕಿತು ಎಂದಾಗ ನಾವ್ಯಾರು? ಎಲ್ಲಿಂದ ಬಂದೆವು? ಎಲ್ಲಿಗೆ ಹೋಗುವೆವು? ಏನು ಮಾಡಿದರೆ ಸರಿ? ತಪ್ಪು? ಇವೆಲ್ಲವೂ ಅವರವರ ಮೂಲವೇ ತಿಳಿಸಬಹುದು.ಪ್ರತಿಯೊಂದು ಮನೆಯೊಳಗೆ ಸಮಸ್ಯೆ ಯಿದೆ.ಪರಿಹಾರವೂ ಒಳಗೇ ಇದ್ದರೂ ಒಗ್ಗಟ್ಟು ಇಲ್ಲದೆ ಹೊರಗೆ ಬಂದು ಎಲ್ಲರಿಗೂ ಹೇಳುತ್ತಾ,ಬೇಡುತ್ತಾ
ಕಾಡುತ್ತಿದ್ದರೆ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಭೂಮಿಯ ಋಣ ತೀರಿಸಲು ಬಂದಿರುವ ಜೀವಾತ್ಮ ಪರಮಾತ್ಮನ ಕಡೆಗೆ ಸತ್ಯದ ಕಡೆಗೆ ಧರ್ಮದ ಕಡೆಗೆ ನಡೆದಂತೆಲ್ಲಾ ಋಣ ತೀರುತ್ತಾ ಹಗುರವಾಗಿ ಮೇಲೆ ಮೇಲಕ್ಕೆ ಹೋಗಿ ಮೇಲಿರುವ ಆ ಮಹಾಶಕ್ತಿಯಲ್ಲಿ ಲೀನವಾದರೆ ಮುಕ್ತಿ ಎನ್ನುವುದು ಸತ್ಯ.
ಆದರೆ ಭೂಮಿಯಲ್ಲಿ ಹೇಗೆ ಜೀವನ‌ನಡೆಸಬೇಕೆಂಬ ಜ್ಞಾನವೇ ಇಲ್ಲದೆ ಎಷ್ಟೇ  ಹಣಸಂಪಾದಿಸಿ  ನಾನು ಬೆಳೆದರೂ
ನಾನು ಹೋಗುವವರೆಗೂ ಎಲ್ಲಾ ಕರ್ಮವೂ  ವಿಕರ್ಮ ವಾಗಿ ವಿಕೃತ ಬುದ್ದಿಯಿಂದ ಆತ್ಮಶುದ್ದಿಯಾಗದೆ ಜಡತ್ವ ಹೆಚ್ಚಾಗಿ ಆತ್ಮಕ್ಕೆ ಮುಕ್ತಿ ಸಿಗದೆ ಮತ್ತೆ ಋಣ ತೀರಿಸಲು ಜನ್ಮ ಪಡೆದರೂ ಹಿಂದಿನ ಜನ್ಮದ ನೆನಪಿಲ್ಲದೆ ಕೇವಲ ಮಾಡಿದ ಪಾಪ ಪುಣ್ಯಕ್ಕೆ ತಕ್ಕಂತೆ ಜೀವನ  ನಡೆಯುತ್ತದೆ. ಇದನ್ನು ಸರ್ಕಾರ ಸರಿಪಡಿಸಬಹುದೆ? ಜ್ಞಾನದ ಶಿಕ್ಷಣವೇ ಕೊಡದೆ
ಆಳುವುದೇ ಅಧರ್ಮ. ಪರಕೀಯರನ್ನು ಓಲೈಸಿಕೊಂಡು ಎಷ್ಟೇ ವ್ಯಾಪಾರ,ವ್ಯವಹಾರದಿಂದ ದೇಶ ನಡೆಸಿದರೂ ಸಾಲ ತೀರಿಸುವ ಜ್ಞಾನವಿಲ್ಲವಾದರೆ  ಸಮಸ್ಯೆಗೆ ಪರಿಹಾರವಿಲ್ಲ.
ನಾವ್ಯಾರು  ಎನ್ನುವ ಪ್ರಶ್ನೆಗೆ ಉತ್ತರ ಭಾರತೀಯರಾದರೆ ನಮ್ಮೊಳಗೆ ಭಾರತಾಂಬೆಯ ಜ್ಞಾನವಿದೆಯೆ?
ಇನ್ನು ನಾವು ಹಿಂದೂಗಳಾದರೆ ನಮ್ಮೊಳಗೆ ಹಿಂದಿನವರ ಧರ್ಮ, ಕರ್ಮ, ಶಿಕ್ಷಣ,ಜ್ಞಾನವಿದೆಯೆ?
ನಾನು ಮಾನವನಾದರೆ ಮಾನವೀಯತೆಯ ಗುಣವಿದೆಯೆ?
ನಾನು ಒಂದು ಜಾತಿಗೆ ಸೀಮಿತವಾಗಿದ್ದರೆ ನಾನು ಬೇರೆ ಜಾತಿಯವರೊಡನೆ ವ್ಯವಹಾರ ನಡೆಸಿಲ್ಲವೆ?
ನಾನು ಒಂದು ಧರ್ಮಕ್ಕೆ ಸೀಮಿತವಾಗಿದ್ದರೆ ಅದೇ ಧರ್ಮದ ಪ್ರಕಾರ ನಡೆಯಲು ಸಾಧ್ಯವಾಗಿದೆಯೆ? ಪರಧರ್ಮದವರ
ವ್ಯವಹಾರ,ಶಿಕ್ಷಣ,ಸಾಲದಲ್ಲಿ ನನ್ನ ಜೀವನ ಇಲ್ಲವೆ?
ನಾನು  ಹೋದರೆ ಮುಕ್ತಿ ಎಂದಾಗ ಯಾರಲ್ಲಿ ನಾನಿಲ್ಲ?
ಭಾರತಾಂಬೆಯ ಒಳಗಿದ್ದವರೆಲ್ಲರೂ ಭಾರತೀಯ ರಾಗಿದ್ದರೆ ಯಾಕಿಷ್ಟು  ಅಶಾಂತಿ? ಅಧರ್ಮ, ಅನ್ಯಾಯ, ಭ್ರಷ್ಟಾಚಾರ?
ಭಾರತಮಾತೆ ವಿಶ್ವಗುರು ಆಗಿದ್ದರೆ  ಗುರುವಿದ್ದ ಕಡೆ ಶಾಂತಿ ಇರಬೇಕಿತ್ತಲ್ಲವೆ? ಹಾಗಾದರೆ ಇಲ್ಲಿ ಕೇವಲ ನಾಟಕವಿದೆ.
ಆಟವಿದೆ,ಮನರಂಜನೆಯಿದೆ,ರಾಜಕೀಯವಿದೆ ಎಂದರ್ಥ.
ಇದರ ಹಿಂದೆ ನಡೆದಷ್ಟೂ ದಾರಿತಪ್ಪಿಸಿಕೊಂಡು ಅತಂತ್ರರಾಗಿ
ಜೀವನದ ಮೂಲ ಸತ್ಯವನ್ನರಿಯದೆ  ಹೋಗುವವರೆ ಹೆಚ್ಚು
ಹೀಗಾಗಿ ನಮ್ಮ ಹಿಂದಿನ ಮಹಾತ್ಮರುಗಳು  ನಾಲ್ಕು ವರ್ಣ, ನಾಲ್ಕು ವೇದಗಳ ಮೂಲಕ ಧರ್ಮ ಕರ್ಮ ವನ್ನು ವಿಂಗಡಣೆ
ಮಾಡುತ್ತಾ ಆ ಭಗವಂತನ ಸೇರುವ ಬಗೆಯನ್ನು ಅವರವರ ಜನ್ಮದ ಪ್ರಕಾರ  ಶಿಕ್ಷಣದಲ್ಲಿಯೇ ಸರಿಯಾದ ಸಂಸ್ಕಾರ,ರೀತಿ ನೀತಿ,ಸಂಸ್ಕೃತಿ ಕಲಿಸುತ್ತಾ ಸ್ವತಂತ್ರವಾಗಿ ಜೀವಿಸಲು ಬಿಟ್ಟು
ಮಾನವ ಮಹಾತ್ಮನಾಗಲು  ಜ್ಞಾನ ನೀಡುತ್ತಿದ್ದರು.ಆದರೆ ಕಲಿಗಾಲದ ಅಜ್ಞಾನದ ಕಣ್ಣಿಗೆ ಇದೊಂದು  ಅಜ್ಞಾನವಾಗಿ
ಕಂಡು ಕಣ್ಣಿಗೆ ಕಾಣೋದರ ಹಿಂದೆ ಹೋಗಿ ಕಾಣದ ಹಿಂದಿನ ಶಕ್ತಿಯಿಂದ ದೂರವಾಗಿ ಈಗ ಜೀವಾತ್ಮನಿಗೆ ಒಳಗೇ ಇದ್ದ ಪರಮಶಕ್ತಿಯ ಪರಿಚಯವಿಲ್ಲ.ಹೊರಗಿನ ಶಕ್ತಿಯ ಪರಿಚಯ ಮಾಡಿಕೊಂಡು ಹಿಂದೆ ಹೋದಷ್ಟೂ ಸಾಲದ ಹೊರೆ ಜೀವ ಹೊತ್ತು ನಡೆಯಬೇಕಿದೆ. ಇದನ್ನು ತತ್ವಜ್ಞಾನದ
ಪ್ರಕಾರ ತಿಳಿಸುವುದರ ಮೂಲಕ ಅನೇಕ ಜ್ಞಾನಿಗಳು ಬಂದು ಹೋದರು. ಈಗ ಆ ತತ್ವವನ್ನು ಅಪಾರ್ಥ ಮಾಡಿಕೊಂಡು ತಂತ್ರದಿಂದ ಜನರನ್ನು ಆಳುವುದರ ಮೂಲಕ ಸ್ವತಂತ್ರ ಜ್ಞಾನ
ಹಿಂದುಳಿದಿದೆ. ಅಂದರೆ ಅದ್ವೈತ ದೊಳಗೇ ಧ್ವೈತವಿದೆ.
ಒಳಹೊಕ್ಕಿ ನೋಡುತ್ತಿಲ್ಲ.ನಾನೇ ಬೇರೆ ನೀನೇ ಬೇರೆ ಎಂದಾಯಿತು,ಕೊನೆಯಲ್ಲಿ ವಿಶಿಷ್ಟಾದ್ವೈತ ದೊಳಗೂ ವಿಶೇಷವಾದ ಅದ್ವೈತ ಇರೋವಾಗ ಮೂರು ಕಂಡರೂ
ಒಂದೇ ಭೂಮಿಯಲ್ಲಿ ಮೂವರೂ ಇರೋದಲ್ಲವೆ? ಭೂ ತಾಯಿ ಸೇವೆ ಮಾಡೋ ಬದಲಾಗಿ ತಾಯಿಯನ್ನೇ ಆಳುವ
ಮಟ್ಟಿಗೆ ರಾಜಕೀಯ ಬೆಳೆದಿದೆ. ಯಾಕೆ ತಾಯಿಯ ಜ್ಞಾನಪಡೆಯಲು ಅವಳಿಗೆ ಶಿಕ್ಷಣ ನೀಡಿಲ್ಲವೆಂದರೆ  ಜ್ಞಾನ ಬಂದರೆ ನಮ್ಮ ರಾಜಕೀಯಕ್ಕೆ ಪೆಟ್ಟು. ಇದೀಗ ಇಡೀ ಮನುಕುಲಕ್ಕೆ  ಕಷ್ಟ ನಷ್ಟವಾದರೂ ಹೊರಗಿನಿಂದ ಹೆಸರು,ಹಣ,ಅಧಿಕಾರ,ಸ್ಥಾನವಿದ್ದರೆ ಅದೃಷ್ಟ ವೆನ್ನುವುದು
ಅರ್ಧ ಸತ್ಯ. ಅದೇ ಆತ್ಮನಿಗೆ  ಸಾಲದ ಹೊರೆ ಏರಿಸುವ ಸಾಧನ ಎನ್ನುವರು ಮಹಾತ್ಮರು.ಈ ಕಾರಣಕ್ಕಾಗಿ ಹಿಂದಿನ ಮಹಾತ್ಮರುಗಳು ಯಾವುದೇ ಅಧಿಕಾರ,ಹಣ,ಸ್ಥಾನಕ್ಕೆ ಹೋರಾಟ ನಡೆಸದೆ ಭಗವಂತ ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಾಮಾನ್ಯರಂತೆ ಜೀವನ‌ ನಡೆಸಿ ಮಹಾತ್ಮರಾದರು. ಈಗ ಅಂತಹವರನ್ನು ಸಮಾಜವೇ ತಿರಸ್ಕಾರದಿಂದ ಕಾಣುತ್ತದೆ. ಸರ್ಕಾರ ಹಣ ನೀಡಿ ಸಾಲದ ಹೊರೆ ಹಾಕುತ್ತಿದೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಹೆಚ್ಚುತ್ತಿದೆ. ಶಿಕ್ಷಣವನ್ನೇ ಬುಡ ಮೇಲು ಮಾಡಲು ಹೋಗಿ ಜ್ಞಾನ ಬಿಟ್ಟು ಅಜ್ಞಾನವೇ ತಾಂಡವವಾಡುತ್ತಿದೆ. ಹಿಂದಿನ ಶಿಕ್ಷಣ ಹಿಂದೂ ಶಿಕ್ಷಣ,ಇಂದಿನ ಶಿಕ್ಷಣ ಇಸ್ಲಾಂ ಶಿಕ್ಷಣ,ಮುಂದಿನ ಶಿಕ್ಷಣ   ಮುಸ್ಲಿಂ ಶಿಕ್ಷಣ. ಅಂದರೆ ಇಲ್ಲಿ ಶಿಕ್ಷಣದಿಂದಲೇ ಎಲ್ಲಾ ಬದಲಾವಣೆ ಆಗಿರುವಾಗ  ನಾವು ಯಾರು? ಮೂರೂ ಶಿಕ್ಷಣದ ವಿಚಾರ ನಮ್ಮೊಳಗಿದೆ. ಅದನ್ನು ಬಳಸಿಕೊಂಡೆ ಬೆಳೆಸಿಕೊಂಡೇ ದೇಶ ನಡೆದಿದೆ. ಯಾರ ಶಿಕ್ಷಣದಿಂದ ಏನು ಸಿಗುತ್ತದೆ ಎನ್ನುವ ಜ್ಞಾನವಿಲ್ಲದೆ ಎಲ್ಲವನ್ನೂ ಎಲ್ಲರನ್ನೂ ಎಲ್ಲೆಡೆಯೂ ಹರಡಿಕೊಂಡು ನಾವೆಲ್ಲ ಒಂದೇ ದೇಶದ ಪ್ರಜೆಗಳು, ಸರ್ವಧರ್ಮ ಸಮ್ಮೇಲನಗಳು, ಧಾರ್ಮಿಕ ಆಚರಣೆಗಳು, ದೇವಸ್ಥಾನ,ಚಚ್೯, ಮಸೀದಿ,ಮಂದಿರ,ಮಠಗಳು  ಬೆಳೆದಿದ್ದರೂ  ಈವರೆಗೆ ದೇವರು ಯಾರಿಗೂ ಕಂಡಿಲ್ಲವೆಂದರೆ ಯಾರಿಗಾಗಿ ಎಲ್ಲಾ ಮಾಡುತ್ತಿರುವುದು ಎಂದಾಗ ನನಗಾಗಿ,ನನ್ನ ಸಂಸಾರಕ್ಕಾಗಿ,ನನ್ನ ಸಮಾಜಕ್ಕಾಗಿ,ನನ್ನ ದೇಶಕ್ಕಾಗಿ ಎನ್ನಬಹುದು.ಶಾಂತಿ ಸಿಗಬೇಕಾದ ಸ್ಥಳದಲ್ಲಿ ಕ್ರಾಂತಿ ಬೆಳೆದಿದೆ ಎಂದರೆ ನಮ್ಮ  ದಾರಿ ಸರಿಯಿಲ್ಲವೆಂದರ್ಥ. ಮೊದಲು ಮಾನವನಾಗು ನಂತರ ಮಹಾತ್ಮನಾಗಬಹುದು ಎಂದರೆ ಮಾನವೀಯತೆ ಬೆಳೆಸೋ ಶಿಕ್ಷಣವೇ ಸಂಸ್ಕಾರವೇ ಮಕ್ಕಳಿಗೆ ಕೊಡದೆ ಆಳಿದರೆ ನಾವು ಪೋಷಣೆ ಮಾಡಿರೋದೆ ನಮಗೆ ತಿರುಗಿ ಸಿಗುತ್ತಿದೆ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಪ್ರಚಾರಕ್ಕಷ್ಟೆನಾವು ಬಂದಿರೋದು. ಹಿಂದಿನ  ಆಚರಣೆಯ ಉದ್ದೇಶ ಸತ್ವಯುತ,ಸತ್ಯದಿಂದ ಕೂಡಿತ್ತು.
ಪರಿಸರ ಮಾಲಿನ್ಯವೇ ಹೆಚ್ಚಾಗಿ ಪ್ರಕೃತಿಯನ್ನು ದುರ್ಭಳಕೆ ಮಾಡಿಕೊಂಡು ಎಷ್ಟುದೇವಸ್ಥಾನ ಕಟ್ಟಿದರೂ ದೈವ ಗುಣಕ್ಕೆ ಬೇಕಾದ  ಶಿಕ್ಷಣವೇ ಕೊಡದೆ ಆಳಿದರೆ ದೇವರು
ಒಲಿಯೋದಿಲ್ಲ. ಶಿವಶರಣರ ವಚನಗಳು ದಾಸಸಾಹಿತ್ಯ ಇನ್ನಿತರ. ಸಾಹಿತ್ಯಗಳು ಪ್ರಚಾರವಾದರೂ ಮಕ್ಕಳು ಮಹಿಳೆಯರವರೆಗೆ ತಲುಪದೆ ವ್ಯವಹಾರಕ್ಕೆ ಇಳಿದಾಗ ಹಣ,ಅಧಿಕಾರ,ಸ್ಥಾನವೇನೂ ಹೊರಗೆ ಸಿಕ್ಕಿತು.ಒಳಗಿದ್ದ ಆತ್ಮಸಾಕ್ಷಿ  ಹಿಂದುಳಿಯಿತು. ಇದೇ ಹಿಂದೂ ಧರ್ಮದ ಹಿಂದುಳಿಯುವಿಕೆಗೆ ಕಾರಣವಾಯಿತು.ಈಗಲೂ ರಾಜಕೀಯ ಬಿಡದೆ ಹೊರಗೆ ಹೋರಾಟದಿಂದ ಧರ್ಮ ರಕ್ಷಣೆ ಮಾಡಿದರೂ  ಪರಧರ್ಮವೂ ಹೋರಾಡುತ್ತದೆ.
ಆದರೆ,ಅವರಿಗೆ ಪೂರ್ಣ ಸತ್ಯ ತಿಳಿಯದ ಕಾರಣ  ಮತ್ತೆ ಮತ್ತೆ ಜನ್ಮ ಪಡೆದು ಇದೇ ಹೋರಾಟದಲ್ಲಿ ಜೀವನ
ವಿರುತ್ತದೆ.ಹೋಗೋದು ಜೀವ ಮಾತ್ರ.ಸಣ್ಣ ಇರುವೆಯೂ ಜೀವನ‌ ನಡೆಸುತ್ತದೆ.ನಿರಂತರವಾಗಿ ತನ್ನ ಆಹಾರ ಹುಡುಕಾಟದಲ್ಲಿ ನಡೆಯುತ್ತಾ ತನ್ನ ಬಳಗದೊಡನೆ ಒಗ್ಗಟ್ಟಿನಿಂದ ಇರುತ್ತದೆ. ಆದರೆ ಮಾನವನಿಗೆ ಆ ಇರುವೆಗೆ
ಇರುವ ಜ್ಞಾನವಿಲ್ಲವಾದರೆ  ದೈಹಿಕವಾಗಿ ಬಲಶಾಲಿ ಆತ್ಮಶಕ್ತಿ
ಇಲ್ಲವಾದರೆ ಜೀವನವೇ  ವ್ಯರ್ಥ ಎನ್ನುವರು ಮಹಾತ್ಮರು. 
ಇಡೀ ವಿಶ್ವವೇದೇವಾಲಯವಾದರೂ ದೈವತ್ವದ ಗುಣವುಳ್ಳ ಮಾನವರಿಲ್ಲದೆ  ಯಾತ್ರಸ್ಥಳ,ಪ್ರವಾಸಿತಾಣವಾಗುತ್ತಿದೆ.
ಮನರಂಜನೆಯ ಮಾಧ್ಯಮಗಳು,ಮಧ್ಯವರ್ತಿಗಳು ಆತ್ಮವಂಚನೆಯಲ್ಲಿದ್ದರೂ ನಾಟಕವಾಡುತ್ತಿದ್ದಾರೆ.ಆದರೆ
ಮೇಲಿರುವ ಆ ಮಹಾ ಶಕ್ತಿಯ ಮುಂದೆ ಯಾವ ನಾಟಕವೂ ನಡೆಯೋದಿಲ್ಲವೆನ್ನುವ ಅರಿವಿದ್ದರೆ ಜೀವನವೆಂಬ ಒಂದು ನಾಟಕರಂಗದಲ್ಲಿ ಉತ್ತಮವಾದ ಪಾತ್ರಧಾರಿಯಾಗಿದ್ದು ಮುಂದೆ ಹೋಗಬಹುದು.ಹೀಗಾಗಿ ನಾವೆಲ್ಲರೂ ಆ ದೇವರ ಪ್ರತಿನಿಧಿಗಳಷ್ಟೆ. ಪಾತ್ರವಹಿಸುವಾಗ  ಉತ್ತಮ ಪಾತ್ರವಿದ್ದರೆ  ಸದ್ಗತಿ. ಇಲ್ಲವಾದರೆ ದುರ್ಗತಿ. ದುರ್ಗಾದೇವಿ ಯನ್ನು,
ಕಾಳಿಯನ್ನು,ಶಿವನನ್ನು  ಆಹ್ವಾನಿಸುವಾಗ  ಅವರ ಉಗ್ರ ರೂಪವನ್ನು  ಅರ್ಥ ಮಾಡಿಕೊಂಡರೆ ಉತ್ತಮ. ಜೀವ ಶಾಶ್ವತವಲ್ಲ. ಆತ್ಮಶಾಶ್ವತ.ಆತ್ಮಾನುಸಾರ ನಡೆದಾಗಲೇ ಆತ್ಮನಿರ್ಭರ ಭಾರತವಾಗುತ್ತದೆ. ಒಟ್ಟಿನಲ್ಲಿ ನಮಗೆ ಸುಖ ಬೇಕು,ಶಾಂತಿಯೂ ಬೇಕು ಎಂದಾಗ ಕಷ್ಟಪಟ್ಟು ಜ್ಞಾನದ ಕಡೆಗೆ ನಡೆಯಲೇಬೇಕು.ಸುಖವಾಗಿದ್ದು ಜ್ಞಾನಿಗಳಾಗಲು  ಅಸಾಧ್ಯ.ಯಾರಾದರೂ  ಹೀಗಿದ್ದರೆ ಜನರು ಎಚ್ಚರವಾದರೆ ಉತ್ತಮ. ನಾವೇ ನಾಟಕದಲ್ಲಿರುವಾಗ ನಮ್ಮ‌ಪಾತ್ರವನ್ನು
ನಾವು ಸರಿಯಾಗಿ ನಡೆಸುವುದಕ್ಕಾಗಿ ಪ್ರಯತ್ನಪಟ್ಟರೆ ಉತ್ತಮ.ಪರರು ದಾರಿತಪ್ಪುವ ಅಗತ್ಯವಿರೋದಿಲ್ಲ. ಪರರನ್ನು ದಾರಿತಪ್ಪಿಸಿ ಮನರಂಜನೆ ಹೆಚ್ಚಿಸಿಕೊಂಡರೆ ಸರಿಯಾದ ಆತ್ಮವಂಚನೆಗೆ ಪ್ರತಿಫಲವೂ ಸಿಗುತ್ತದೆ. ಇದನ್ನು ಯಾವ ಸರ್ಕಾರವೂ ತಡೆಯಲಾಗದು.
ದೇವರ ಸರ್ಕಾರ, ಮಾನವರ ಸರ್ಕಾರ, ಅಸುರರ ಸರ್ಕಾರದಲ್ಲಿ ಮಧ್ಯದಲ್ಲಿರುವ ಮಾನವರ ಸಹಕಾರ ವೇ ಮುಖ್ಯ. ತನ್ನ ಮನಸ್ಸನ್ನು ಹಿಡಿದಿಟ್ಟುಕೊಳ್ಳಲಾಗದವರು ಬೇರೆಯವರ ಮನಸ್ಸನ್ನು ಕದ್ದು ಆಳುವುದರಿಂದ ಅಧರ್ಮ ,ಅನ್ಯಾಯ,ಅಸತ್ಯ,ಭ್ರಷ್ಟಾಚಾರ ನಡೆಸೋ ಅಸುರರ ಸರ್ಕಾರ  ಬೆಳೆಸುತ್ತಾರೆ. 
ಒಂದೇ ಭೂಮಿಯಲ್ಲಿ,ಒಂದೇ ದೇಶದಲ್ಲಿ,ಒಂದೇ ತತ್ವದಲ್ಲಿ
ಒಂದೇ ಜನ್ಮದಲ್ಲಿ  ಎಲ್ಲವನ್ನೂ ಒಂದಾಗಿಸಲಾಗದು.ಇದಕ್ಕೆ
ಮೂರೂ  ಒಂದೇ ಆದರೂ ಮೂರರ ಒಳಗಿರುವ ಉದ್ದೇಶ
ಒಂದಾಗಿಲ್ಲ. 
ದೇವರು,ಮಾನವರು,ಅಸುರರು
ಆಕಾಶ,ಭೂಮಿ,ಪಾತಾಳ, ಸೃಷ್ಟಿ, ಸ್ಥಿತಿ,ಲಯ,  ತಂದೆ,ತಾಯಿ ಮಕ್ಕಳು,  ವಿಶ್ವ,ದೇಶ,ವಿದೇಶ,   ಭೂಮಿಯ ಋಣ ತೀರಿಸಲು ಮಧ್ಯದಲ್ಲಿ ರುವವರನ್ನು ಮಧ್ಯವರ್ತಿಗಳನ್ನು
ಹಿಡಿದು ನಡೆಯುವಾಗ ಸತ್ಯಾಸತ್ಯತೆಯನ್ನು ಜ್ಞಾನದಿಂದ ಅರ್ಥ ಮಾಡಿಕೊಂಡರೆ ಉತ್ತಮ ಜೀವನ ಯಾತ್ರೆ ಸಾಧ್ಯ.


No comments:

Post a Comment