ದೇಶ ವಿದೇಶವಾದರೂ ಚಿಂತೆಯಿಲ್ಲ
ಧರ್ಮ ಅಧರ್ಮ ವಾದರೂ ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲವೆನ್ನುವವರ ರಾಜಕೀಯದಲ್ಲಿ ದೇಶ ನಡೆದಿದೆ. ಇದಕ್ಕೆ ಸಹಕಾರ ಕೊಟ್ಟು ನಮ್ಮತನವನ್ನು ಬಿಟ್ಟು
ನಡೆದಂತೆಲ್ಲಾ ಆತ್ಮಹತ್ಯೆಗಳೂ ಬೆಳೆಯುತ್ತದೆ.
ಆತ್ಮಹತ್ಯೆ ಎಂದರೆ ಜೀವ ಹೋಗುವುದೆಂದಲ್ಲ ಜೀವಾತ್ಮನಿಗೆ ಜ್ಞಾನೋದಯವಾಗದೆ ಹೋಗೋದು. ಎಲ್ಲಿಯವರೆಗೆ ಸತ್ಯ ಹಾಗು ಧರ್ಮ ವನ್ನು ತಿರುಚಿಕೊಂಡು ಭೌತಿಕದಲ್ಲಿ ರಾಜಕೀಯ ನಡೆಸುವರೋ ಅಲ್ಲಿಯವರೆಗೆ ಜೀವನ್ಮುಕ್ತಿಯಿಲ್ಲ ಎನ್ನಬಹುದಷ್ಟೆ. ಕೆಳಗಿನ ಫೋಟೊ ವಿಚಾರಗಳು ಸಾಮಾನ್ಯಜ್ಞಾನದ ಕಡೆಗಿದೆ.ಮಾನವ ಸಾಮಾನ್ಯಜ್ಞಾನದಿಂದ ನಿಧಾನವಾಗಿ ವಿಶೇಷಜ್ಞಾನ ಪಡೆದರೆ
ಅನುಭವದಿಂದ ಸತ್ಯ ದರ್ಶನ .ಇದು ಹಿಂದಿನ
ಮಹಾತ್ಮರುಗಳು ನಡೆದು ತೋರಿಸಿದ್ದಾರೆ.
ಅವರ ನಡೆ ಬಿಟ್ಟು ನುಡಿಯನ್ನು ಬಂಡವಾಳ ಮಾಡಿಕೊಂಡರೆ ಅವರು ಬೇರೆ ನಾವೇ ಬೇರೆ.ಧರ್ಮ ವೇ ಬೇರೆ ವ್ಯವಹಾರವೇ ಬೇರೆ.
ಧರ್ಮ ಕರ್ಮ, ಸತ್ಯ ಧರ್ಮ, ಜ್ಞಾನ ವಿಜ್ಞಾನ, ಹಣ ಜ್ಞಾನ, ಸ್ತ್ರೀ ಪುರುಷರ ನಡುವಿರುವ ಅಂತರದಲ್ಲಿ ಅಜ್ಞಾನದ ವ್ಯವಹಾರ ಬೆಳೆದು ಸಾಲವನ್ನು ತೀರಿಸಲಾಗದೆ ಜನನ ಮರಣದ ಮಧ್ಯೆ ನಿರಂತರ ಜೀವನ ಚಕ್ರ ತಿರುಗಿದೆ. ನೀವ್ಯಾಕೆ ಮಾಧ್ಯಮದಲ್ಲಿ ಇಂತಹ ವಿಚಾರ ಹಂಚಿಕೊಳ್ಳಬಾರದೆನ್ನುವ ಪ್ರಶ್ನೆಗೆ ಉತ್ತರ ಮಾಧ್ಯಮಗಳಿಗೆ ಸತ್ಯದ ಅಗತ್ಯವಿಲ್ಲ.ಧರ್ಮವಂತೂ ಬೇಡವೇಬೇಡ ಎನ್ನುವ ಹಂತದ ವ್ಯವಹಾರದಲ್ಲಿ ಮುಳುಗಿರುವಾಗ ಅಧ್ಯಾತ್ಮ ಸತ್ಯಕ್ಕೆ
ವಿರೋಧಿಗಳೇ ಹೆಚ್ಚು. ಹಣವುಳ್ಳವರಿಗೆ ಅರ್ಥ ವಾಗದು.
ಹಾಗೆ ಜಾಹಿರಾತುಗಳೂ ಸಿಗೋದಿಲ್ಲ. ಅವರವರ ಮಾಧ್ಯಮದ ಹೊಟ್ಟೆ ತುಂಬಲು ಜಾಹಿರಾತುಗಳಿರೋದು ಯಾರು ಏನಾದರೂ ಆಗಲಿ ನಾವು ಬದಲಾಗೋದಿಲ್ಲ ಎನ್ನುವ ಸತ್ಯ ಜನಸಾಮಾನ್ಯರಿಗೂ ಗೊತ್ತು. ಇನ್ನು ಕ್ರಾಂತಿಯ ಮೂಲಕ ಸತ್ಯ ಹೊರಬಂದರೂ ಅರ್ಥ ಮಾಡಿಕೊಳ್ಳಲು ಜನರಿಗೆ ಜ್ಞಾನವಿರಬೇಕು.ಶಿಕ್ಷಣವೇ ಕೊಡದೆ ಆಳಿದವರು ಹೆಚ್ಚಾಗಿರುವಾಗ ಹಿಂದೂ ಧರ್ಮ ಎಂದರೆ ನಮ್ಮ ನಮ್ಮ ಹಿಂದಿನ ಮಹಾತ್ಮರುಗಳು ನಡೆದ ತತ್ವಜ್ಞಾನದಿಂದ ತಿಳಿದ ಧರ್ಮ . ಇದು ಅವರವರ ಗುರು ಹಿರಿಯರು ತಮಗೆ ತಿಳಿದಂತೆ ಬದಲಾವಣೆ ಮಾಡಿಕೊಂಡರೆ ಈಗಿನಪರಿಸ್ಥಿತಿಗೆ ಅದೇ ದೊಡ್ಡ ಸಮಸ್ಯೆಯಾಗದಂತೆ ಮಾನವೀಯತೆಯನ್ನು,
ಮಕ್ಕಳು ಮಹಿಳೆಯರನ್ನು,ಉಳಿಸಿ ರಕ್ಷಿಸುವಂತಿರಬೇಕು. ಇದನ್ನು ತತ್ವಜ್ಞಾನ ತಿಳಿಸುತ್ತದೆ. ತಂತ್ರವಲ್ಲ. ತಂತ್ರ ಶಾಶ್ವತವಲ್ಲ.ತಂತ್ರದಿಂದ ರಾಜಕೀಯ ತತ್ವದಿಂದ ರಾಜಯೋಗ. ತತ್ವ ಒಳಗಿದೆ.ತಂತ್ರ ಹೊರಗಿದೆ. ಹಾಗಾದರೆ ನಾವ್ಯಾರು ತತ್ವಜ್ಞಾನಿಗಳೆ ?ತಂತ್ರಜ್ಞಾನಿಗಳೆ? ಇವೆರಡರ ನಡುವಿನ. ಸಾಮಾನ್ಯಜ್ಞಾನ ಇದ್ದರೆ ಸತ್ಯ ತಿಳಿಯಬಹುದಷ್ಟೆ.
ಶ್ರೀ ಕೃಷ್ಣ ಪರಮಾತ್ಮನ ಭಗವದ್ಗೀತೆ ಯಲ್ಲಿ ಎಲ್ಲಾ ಜ್ಞಾನವಡಗಿದೆ.ಯಾರಿಗೆ ಹೇಗೆ ತಿಳಿಯುವುದೋ ಹಾಗೇ ವಿವರಿಸಿದ್ದಾರೆ ಆದರೆ ಅಂದಿನ ವಾಸ್ತವ ಸ್ಥಿತಿಗೆ ತಕ್ಕಂತೆ ಅರ್ಜುನನಿಗೆ ಧರ್ಮ ಬೋಧನೆ ಮಾಡಿರುವುದು ಒಂದೇ ಸತ್ಯ. ಈಗಿನ ರಾಜಕೀಯದಲ್ಲಿ ಧರ್ಮ ಯಾವುದು? ಅಧರ್ಮ ಯಾವುದು? ದೇಶವನ್ನು ವಿದೇಶ ಮಾಡುವುದು ಧರ್ಮವೆ? ಪ್ರಜಾಪ್ರಭುತ್ವದ ಪ್ರಜೆಗಳನ್ನು ಅಜ್ಞಾನದಲ್ಲಿ ಬಿಟ್ಟು ಆಳುವುದೆಷ್ಟು ಧರ್ಮ? ಈ ಪ್ರಶ್ನೆಗೆ ಉತ್ತರವನ್ನು ನಾವೇ ಕಂಡುಕೊಳ್ಳಲು ಬೇಕಿದೆ ಆತ್ಮಾವಲೋಕನ.
No comments:
Post a Comment