ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, October 11, 2022

ಮೊದಲು ಮಾನವನಾಗೋದೆಂದರೆ ಏನು?

ಮೊದಲು ಮಾನವನಾಗು ಎಂದಿರುವ  ಮಹಾತ್ಮರ ಹಿಂದಿನ ಸತ್ಯವನ್ನು ಅಧ್ಯಾತ್ಮ ದಿಂದ ತಿಳಿಯಬಹುದಷ್ಟೆ.ಇಲ್ಲಿ ಭೂಮಿ ಮೇಲಿರುವ  ಚರಾಚರಗಳಲ್ಲಿ  ಜೀವ ಪ್ರಾಣ ಶಕ್ತಿಯುಳ್ಳ  ಮಾನವನಿಗಷ್ಟೆ  ಆರನೇ ಅರಿವಿರೋದು. ಇದನ್ನು ಹೊರಗೆ ಹುಡುಕಿದರೆ ಸಿಗದು.ಒಳಗೇ ಅಡಗಿರುವುದರಿಂದ ಸಾಧ್ಯವಾದಷ್ಟು  ಮಟ್ಟಿಗೆ  ದೇಹ ಹಾಗುಮನಸ್ಸನ್ನು ಸ್ವಚ್ಚ ಮಾಡಿಕೊಂಡರೆ  ಅದರ ಅರಿವಾಗುತ್ತದೆ. ಹೀಗಾಗಿ ಮಹಾತ್ಮರುಗಳು ಆತ್ಮಜ್ಞಾನವನ್ನು ತನ್ನ ತಾನರಿತು ನಡೆಯಲು ಬಳಸಿಕೊಂಡು ಆಂತರಿಕ ಶುದ್ದಿಯಿಂದ ಮಾನವೀಯತೆ ಬೆಳೆಸಿಕೊಂಡು ಮಹಾತ್ಮರಾಗಿ ಮುಕ್ತ
ರಾದರು. ನೋಡುವುದಕ್ಕೆ ಮಾನವ, ನಡೆ ನುಡಿಯಲ್ಲಿ
ಅಸುರತೆಯ ಗುಣವಿದ್ದರೆ  ಸತ್ಯದ ಅರಿವಾಗದು.ತನ್ನ ದೇಹ ಸುಖಕ್ಕಾಗಿ ಸಂಸಾರ,ಸಮಾಜ,ದೇಶವನ್ನು  ಅಧರ್ಮದ ಕಡೆ
ತಿರುಗಿಸಿಕೊಂಡು  ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂದರೆ ಆ ಸಾಲದ ಹೊರೆ ಹೊತ್ತು ಮತ್ತೆ ಜನ್ಮ ತಳೆಯಲೇ
ಬೇಕು ಎನ್ನುವ ಕಾರಣಕ್ಕಾಗಿ  ಹಿಂದಿನ ಜ್ಞಾನಿಗಳು ಸಾಲ 
ತೀರಿಸುವ ಸನ್ಮಾರ್ಗ, ಸ್ವಧರ್ಮ, ಸತ್ಕರ್ಮ, ಸದಾಚಾರ,ಸತ್ಯ,
ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ವಾಗಿ  ನಡೆದರು.


ಯಾವಾಗ ರಾಜಕೀಯ ಬೆಳೆಯಿತೋ ಆಗ ತನ್ನ 
ತಾನರಿಯದೆ ಜನರನ್ನು ಆಳುವ‌ ಮಟ್ಟಿಗೆ ಹಣ,ಅಧಿಕಾರ, ಸ್ಥಾನಕ್ಕಾಗಿ ಅಧರ್ಮ, ಅಸತ್ಯ, ಅನ್ಯಾಯವನ್ನು  ನ್ಯಾಯ
ವೆನ್ನುವ   ಕಾನೂನನ್ನು ತಂದು ಜನರ ಸಹಕಾರದಿಂದಲೇ 
ಜನರನ್ನು ಆಳುವ ಅರಸರು ಹೆಚ್ಚಾದರು. ಈಗಲೂ ಪುರಾಣ,ಇತಿಹಾಸದ ರಾಜರನ್ನು  ರಾಜಕೀಯವನ್ನು  ಎತ್ತಿ ಹಿಡಿಯುತ್ತಾ ಹಿಂದಿನ ಧರ್ಮ ಸೂಕ್ಮವನ್ನು ಜ್ಞಾನದಿಂದ 
ಅರ್ಥ ಮಾಡಿಕೊಳ್ಳದೆ  ಆಳಿದರೆ  ಮಧ್ಯವರ್ತಿಗಳು ಮಾತ್ರ ಬೆಳೆಯೋದು.ಯಾರೇ ಇರಲಿ ಮಾನವರಾಗಿದ್ದು ಭೂಮಿಯ ಸೇವೆ ಮಾಡುತ್ತಾ ಋಣ ತೀರಿಸುವ ಸಾಮಾನ್ಯಜ್ಞಾನ  ಸರಿಯಾಗಿ ತಿಳಿಯದೆ ಹೊರನಡೆದರೆ  ನಮ್ಮನ್ನು, ನಮ್ಮತನ
ವನ್ನು ನಾವೇ ಸ್ವತಃ ಬಿಟ್ಟು ನಡೆದಂತೆ ಎನ್ನುತ್ತಾರೆ ಮಹಾತ್ಮ
ರು. 
ಹೀಗಾಗಿ ಮೊದಲ ಶಿಕ್ಷಣವು ಮಾನವೀಯತೆಯ ಕಡೆಗೆ  ಇತ್ತು.ನಂತರ ಮಹಾತ್ಮರ ಕಡೆಗೆ ಇತ್ತು. 
ಆದರೆ ಇಂದು ನಾವು ಮಕ್ಕಳ ಒಳಗಿನ ಆ ಸದ್ಗುಣ,ಸತ್ಯವನ್ನು ಗಮನಿಸಲಾಗದೆ ಹೊರಗಿನ ಶಿಕ್ಷಣಕ್ಕೆ ದಾಸರಾಗಿಸಿ ಹಣ
ನೀಡಿ  ಮಕ್ಕಳ ಮೇಲೇ ಸಾಲದ ಹೊರೆ ಹಾಕಿದರೆ ಅದನ್ನು 
ತೀರಿಸಲು ಅವರಿಗೆ ಜ್ಞಾನ ಬೇಕು.
ಹಣ ಸಂಪಾದನೆಯ‌ ಮಾರ್ಗ ಧರ್ಮ ಯುಕ್ತವಾಗಿದ್ದರೆ ಹಣದ ಕೊರತೆ.ಅಧರ್ಮ ದೆಡೆಗೆ ನಡೆದರೆ ಜ್ಞಾನದ ಕೊರತೆ
ಇವೆರಡರ ನಡುವಿನ‌ ಮಾನವನಿಗೆ ಈ ಕಡೆ ಸಾಲ
ಇನ್ನೊಂದು ಕಡೆ  ಧರ್ಮ ಸಂಕಟ.
ಇದಕ್ಕೆ ದಾರಿ  ಶಿಕ್ಷಣದ ಮೂಲಕವೇ ತೋರಿಸುವುದಾಗಿತ್ತು. ಕಷ್ಟಪಟ್ಟು ಮುಂದೆ ನಡೆದ ಮಹಾತ್ಮರಿಗೂ ಕಷ್ಟಪಡದೆ ಅಡ್ಡದಾರಿ ಹಿಡಿದ ಮಹಾ ಜನರಿಗೂ ವ್ಯತ್ಯಾಸವಿಷ್ಟೆ. ಆತ್ಮಜ್ಞಾನದೆಡೆಗೆ ಹೋಗಲು  ಆಂತರಿಕ ಶುದ್ದಿಯಿರಬೇಕು.
ಮಾನವೀಯತೆ ,ನೈತಿಕತೆ,ಧಾರ್ಮಿಕತೆ ಬೇಕು. ಮಾನವನಾಗದೆ ಹೊರಗಿನಿಂದ ಮಹಾತ್ಮರನ್ನು  ಅರ್ಥ ಮಾಡಿಕೊಳ್ಳಲು ಕಷ್ಟವಿದೆ. ಯಾರಲ್ಲಿಯೇ ಆಗಲಿ ಅಧಿಕಾರ, ಹಣ,ಸ್ಥಾನ,ಪ್ರತಿಷ್ಟೆಗಳಿದೆ ಎಂದರೆ ಅವರ ಹಿಂದೆ ಸಾಕಷ್ಟು ಜನಬಲ,ಹಣಬಲ,ಅಧಿಕಾರಬಲವೂ ಇದೆ ಎಂದು.ಇದರಲ್ಲಿ ಸ್ವತಂತ್ರ ಎಲ್ಲಿದೆ? ಏಕತೆ  ,ಐಕ್ಯತೆ,ಒಗ್ಗಟ್ಟು ಸೂಚಿಸುವ ತತ್ವಕ್ಕೂ  ಬಿಕ್ಕಟ್ಟನ್ನು ಬೆಳೆಸಿ ಆಳುವತಂತ್ರಕ್ಕೂವ್ಯತ್ಯಾಸವಿದೆ. 
ಆದರೂ, ತತ್ವದ ನಂತರವೇ ತಂತ್ರಜ್ಞಾನದ ಬಳಕೆಯಾದರೆ ಉತ್ತಮ. ಕಾರಣ ಮಾನವನಾದ ಮೇಲೇ ಮಹಾತ್ಮರ ದರ್ಶನ ಸಾಧ್ಯ. ಮಾನವೀಯತೆಯ ಗುಣವನ್ನು ಒಳಗೇ 
ಬೆಳೆಸಿಕೊಳ್ಳುತ್ತಾ ಹೋದವರು ಮಹಾತ್ಮರಾದರು.
ಇವರುಗಳಿಗೆ ಯಾವುದೇ ಅಧಿಕಾರ, ಹಣ,ಸ್ಥಾನವಿರಲಿಲ್ಲ. ಇವು ನಶ್ವರ ಎನ್ನುವ ಜ್ಞಾನವಿತ್ತು. ಅಧಿಕಾರ ಹಣವನ್ನು ಧರ್ಮದೆಡೆಗೆ  ಬಳಸುವ ಜ್ಞಾನವಿತ್ತು.  ಹೀಗಾಗಿ ಕಾಣದ ದೇವರನ್ನು ಕಂಡರು, ಕಾಣದ ಆತ್ಮವನ್ನು ಅರ್ಥ ಮಾಡಿ
ಕೊಂಡರು. ಕಾಣದ ಬ್ರಹ್ಮನೆಡೆಗೆ ನಡೆದರು.  ಇಂದು ಕಾಣುವ ಹೊರಗಿನ ಸತ್ಯದ ಹಿಂದೆ ನಡೆದವರಿಗೆ ಕಾಣದ ಒಳಗಿನ ಸತ್ಯ
ಶೋಧನೆ ಕಷ್ಟ.ಹೀಗಾಗಿ ಅಂತರ ಬೆಳೆಯುತ್ತಾ  ಅಂತರದಲ್ಲಿ
ಅವಾಂತರಗಳು ಸೃಷ್ಟಿ ಯಾಗಿದೆ. ಎಷ್ಟೇ ಅಂತರವಿದ್ದರೂ
ಅದನ್ನು ಸತ್ಯ ಧರ್ಮದಿಂದ ಕಡಿಮೆ ಮಾಡಿದರೆ  ಉತ್ತಮ.
ಅಸತ್ಯ ಅಧರ್ಮ ವೇ ಬೆಳೆದರೆ ಅಧಮ.ಇಂದಿನ ಪರಿಸ್ಥಿತಿ
 ಹಿಂದೆಯೂ ಇತ್ತು. ಹಿಂದಿನ‌  ಧರ್ಮ   ಪ್ರಚಾರದಲ್ಲಿ ಇದೆ ಆಚಾರವಂತರಾಗಬೇಕಷ್ಟೆ.   ಜ್ಧಞಾನ ಬಂದ ನಂತರ ಧರ್ಮವಿಲ್ಲದ  ಸ್ಥಿತಿಯಲ್ಲಿ ಬದುಕುವುದು ಕಷ್ಟ. ಧರ್ಮದ ಜೊತೆಗೆ ಸತ್ಯವಿಲ್ಲದಿರೋದೆ  ಕಷ್ಟ. ಇದಕ್ಕಾಗಿ ಪರಮಾತ್ಮನೆ ಧರ್ಮ ರಕ್ಷಣೆಗಾಗಿ ಅವತಾರ ಎತ್ತಿ ಬರೋದಾದರೆ ಯಾವ ರೂಪದಲ್ಲಿ ಬಂದರೂ  ಮಾನವನಾಗೇ ಕಾಣೋದು. 
 ಮಕ್ಕಳನ್ನು ದೇವರ ಸಮಾನವೆನ್ನುತ್ತಾರೆ.ಅವರಲ್ಲಿ ಅಸತ್ಯ,ಅಧರ್ಮ, ಅನ್ಯಾಯದ ಸುಳಿವಿರದೆ ಸ್ವಚ್ಚವಾದ ಮನಸ್ಸಿರುತ್ತಿತ್ತು. ಮಕ್ಕಳಿಗೆ ಸರಿಯಾದ ಧರ್ಮ ಶಿಕ್ಷಣವಿಲ್ಲದಿದ್ದರೆ ದೈವತ್ವ ಬೆಳೆಯದು. ದೇವರನ್ನು ಹೊರಗೆ ಹುಡುಕಿಕೊಂಡು ಬೆಳೆಸುವ ಬದಲಾಗಿ ಒಳಗಿರುವ‌ ದೈವ ಗುಣವನ್ನು ಬೆಳೆಸುವ ಶಿಕ್ಷಣ ನೀಡುವುದೇ  ಧರ್ಮ ಕಾರ್ಯ.
ಶಿಕ್ಷಣ ದಾಸೋಹವು ಇಡೀ ರಾಷ್ಟ್ರದ, ವಿಶ್ವದ ಮಾನವರಿಗೆ
ಕೊಡುವ  ವರದಾನವಾಗಿದೆ. ಪ್ರಜಾಪ್ರಭುತ್ವದ ದೇಶದಲ್ಲಿ ಪ್ರಜೆಗಳಿಗೆ ಅಜ್ಞಾನವನ್ನು ಉಣಬಡಿಸಿ ಆಳುವುದಕ್ಕಿಂತ ಜ್ಞಾನದಿಂದ ಹಿಡಿದೆತ್ತಿ ಸ್ವತಂತ್ರವಾಗಿ ಜೀವನ ನಡೆಸಲು ಸಹಕರಿಸುವವರೆ ನಿಜವಾದ ಮಹಾತ್ಮರು. ಈ ಕೆಲಸವನ್ನು ಸರ್ಕಾರ ಮಾಡಬಹುದೆ? ಸರ್ಕಾರ ನಡೆಸೋರಿಗೆ ಮೊದಲು ಅಂತಹ ಶಿಕ್ಷಣ ಸಿಕ್ಕಿದ್ದರೆ ಆಗುತ್ತದೆ. ಅದಕ್ಕೆ ಮೊದಲು ಪೋಷಕರಿಗೆ ಜ್ಞಾನವಿದ್ದರೆ ಸಾಧ್ಯವಿದೆ.ರಾಜಕೀಯವನ್ನು ರಾಜಯೋಗವೆಂಬ ಭ್ರಮೆಯಲ್ಲಿ  ತಿಳಿದು ಜನರನ್ನು ಅಡ್ಡ ದಾರಿಗೆಳೆದರೆ  ಇರುವ ಜ್ಞಾನವೂ ಹಿಂದುಳಿಯುತ್ತದೆ. ಆದರೆ
ಭಗವಂತನ  ಒಳಗಿರುವ  ಎಲ್ಲಾ ಒಂದೇ ದಾರಿಯಲ್ಲಿ ನಡೆಯಲು ಕಷ್ಟ.ಹೀಗಾಗಿ ದಾರಿ ತಪ್ಪಿಸಿ ನಡೆಸಿಕೊಂಡು  ದಾರಿ  ಕಾಣದೆ ಶರಣಾದಾಗ ಹಿಡಿದೆತ್ತುವ ಕೆಲಸವನ್ನು ಅವನೆ ಮಾಡೋದು.ಹಾಗಾದರೆ ಭಗವಂತ ಇರೋದೆಲ್ಲಿ?
ಮಹಾತ್ಮರಲ್ಲಿ  ಹತ್ತಿರವಿದ್ದರೆ ಅಸುರರಲ್ಲಿ ದೂರವಿದ್ದು ನಡೆಸುತ್ತಾನೆ ಎನ್ನುವರು. ಹತ್ತಿರವಿದ್ದವರಿಗೆ ಕಷ್ಟಕೊಟ್ಟು ಸುಖ ನೀಡಿದರೆ,ದೂರವಿದ್ದವರಿಗೆ ಸುಖದ ನಂತರ ಕಷ್ಟ.
ಹೀಗಾಗಿ  ಯಾರು ಯಾವಾಗ ಹೇಗೆ,ಎಲ್ಲಿ,ಯಾಕೆ ಬದಲಾಗುವರೋ ಅವರಿಗೇ ಗೊತ್ತಿರುವುದಿಲ್ಲ.ಮಾನವರು
ತನ್ನ  ತಾನರಿತು ನಡೆಯೋದಷ್ಟೆ  ಉತ್ತಮ ಮಾರ್ಗ.ಇದು ನಮಗೆ ಬಿಟ್ಟ ವಿಚಾರ.ಬೇರೆಯವರ ಹಿಂದೆ ನಡೆದರೆ ಅದು
ಉತ್ತಮ ಮಾರ್ಗ ವಿದ್ದರೆ ಸರಿ. ಬರೋವಾಗ ಒಬ್ಬರೆ ಹೋಗುವಾಗ ಒಬ್ಬರೆ ಇದರ‌ ನಡುವೆ ಬಂದು ಹೋಗುವವರು  ಹಲವರು. ದೇವನೊಬ್ಬನೆ  ಆದರೂ ಅಸಂಖ್ಯಾತ ದೇವರುಗಳ ಸೃಷ್ಟಿ ಮಾನವನೇ ಮಾಡಿಕೊಂಡರೆ ಅವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಎಲ್ಲಾ  ಒಂದೇ ಶಕ್ತಿಯ ಅಂಗಗಳು.ಒಂದಕ್ಕೆ ನೋವಾದರೂ
ಇಡೀ ದೇಹ ನೋವು ಅನುಭವಿಸುತ್ತದೆ.ಹಾಗೆ ದೇಶದ ಒಂದೊಂದು ಭಾಗವೂ  ಸೂಕ್ಮವಾಗಿದೆ. ಇದನ್ನು ಸರಿಯಾಗಿ
ತಿಳಿಯದೆ ದುರ್ಭಳಕೆ ಮಾಡಿಕೊಂಡರೆ  ಅದರ ಪರಿಣಾಮ
ದೇಶವಾಸಿಗಳೇ ಎದುರಿಸಬೇಕಷ್ಟೆ.ಪರಮಾತ್ಮನಿಗೇನೂ ನಷ್ಟವಿಲ್ಲ.ಜೀವಾತ್ಮನಿಗೇ ಕಷ್ಟ ನಷ್ಟ.ಹಾಗೆಯೇ ಭಾರತಮಾತೆಯೊಳಗಿರುವಾಗ ಆ ತಾಯಿಯ ಮಹಾತ್ಮೆ ಜ್ಞಾನದಿಂದ ತಿಳಿಯದೆ ಅಜ್ಞಾನದಲ್ಲಿಯೇ ಇದ್ದರೆ  ಇದರ ಪ್ರತಿಫಲ ಜೀವವೇ  ಅನುಭವಿಸೋದು. ಹೆತ್ತ ತಾಯಿಯನ್ನು
ಸಾಕುವ ಮಕ್ಕಳು ದೊಡ್ಡವರೆನಿಸಿಕೊಳ್ಳುವರು.ಹಾಗೇ ಹೊತ್ತ ಭೂ ಸೇವೆ ಮಾಡುವವರೂ ಮಹಾತ್ಮರೆ. ಸೇವೆಯು
ಜ್ಞಾನದಿಂದ ಮಾನವೀಯತೆಯಿಂದ ನಡೆಸುವುದಕ್ಕೆ ಜ್ಞಾನ
ಬೇಕಷ್ಟೆ.ಸ್ವಾರ್ಥ ಅಹಂಕಾರದಿಂದ  ಸೇವೆ ಮಾಡುವ ನಾಟಕ
ನಾಟಕವಾಗೇ ಉಳಿಯುತ್ತದೆ. ಜೀವನವೇ ಒಂದು ನಾಟಕ
ಅದರ ಪಾತ್ರಧಾರಿ ಮಾನವ. ನಾಟಕದೊಳಗೆ ನಾಟಕ ಮಾಡುವಾಗ ಪಾತ್ರ ಉತ್ತಮವಾಗಿರಬೇಕು.  ನೋಡದವರು
ಉತ್ತಮ ರೀತಿಯಲ್ಲಿ ಜೀವನ ನಡೆಸಬೇಕು.  ಜೀವನ ಎಂದರೆ ಜೀವಿಗಳ ವನ. ಎಲ್ಲಾ ಜೀವಕ್ಕೂ ತನ್ನದೇ ಆದ ಅಸ್ತಿತ್ವ ಇದೆ. ಅಸ್ತಿತ್ವಕ್ಕೆ  ಹೋರಾಟ ಮಾಡುವುದು ಮಾನವ‌ ಮಾತ್ರ.ಹೋರಾಟವು ಆಂತರಿಕವಾಗಿದ್ದರೆ ಶಾಂತಿ,ತೃಪ್ತಿ, ಮುಕ್ತಿ. ಅಧರ್ಮದಿಂದ ದೂರವಾದಷ್ಟು ಧರ್ಮ ರಕ್ಷಣೆ.ರಾಜಕೀಯದಿಂದ ದೂರವಾದಷ್ಟು ರಾಜಯೋಗ.
ಅಜ್ಞಾನದಿಂದ ದೂರವಾದಷ್ಟು ಜ್ಞಾನೋದಯ.
ಅಹಂಕಾರದಿಂದ ದೂರವಾದಷ್ಟೂ ಆತ್ಮವಿಶ್ವಾಸ. ಅಸತ್ಯದಿಂದ ದೂರವಾದಷ್ಟೂ ಸತ್ಯದರ್ಶನ.
ಸತ್ಯವೇ ದೇವರಾದಾಗ ಅಸತ್ಯವನ್ನು ಏನೆನ್ನಬೇಕು?
ಇಲ್ಲಿ ಯಾರೋ ಯಾರನ್ನೋ ಆಳುವಷ್ಟು  ಆತ್ಮಜ್ಞಾನಿಗಳಿಲ್ಲ
ಆದರೆ ಅಜ್ಞಾನಿಗಳಿರುವುದರಿಂದಲೇ ಸಾಕಷ್ಟು ರಾಜಕೀಯ ಬೆಳೆಯುತ್ತಿದೆ. ಇದಕ್ಕೆ ಸಹಕರಿಸಿದಷ್ಟೂ ಅಧರ್ಮ ಬೆಳೆದು ಇನ್ನಷ್ಟು ಸಮಸ್ಯೆಗಳು ಮನುಕುಲವನ್ನು ಆವರಿಸುವ ಮೊದಲು ಮಾನವರು ಎಚ್ಚರವಾದರೆ ನಮ್ಮೊಳಗೇ ಇರುವ
ದೇವಾಸುರರ ಗುಣವನ್ನು ನಾವೇ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ನಮಗೆ ನಾವೇ ಮೋಸಹೋಗಿರುವಾಗ,ನಮಗೆ ನಾವೇ ಶತ್ರುವಾಗಿರುವಾಗ ಹೊರಗಿನವರು ಏನು ಮಾಡಲು ಸಾಧ್ಯ? ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ. ಕೆಟ್ಟವರಿಗೆ ಕೆಟ್ಟದ್ದೇ ಆಗುತ್ತದೆ ಎಂದರೆ ಕೆಟ್ಟವರಿಗೆ ಕೆಟ್ಟಬುದ್ದಿ  ಬಿಡಿಸಲು
ಒಳ್ಳೆಯವರಿಗೆ ಸಾಧ್ಯವೆ? ಶಿಕ್ಷಣದಲ್ಲಿಯೇ ಇದನ್ನು ತಿಳಿಸುವ
ಮೂಲಕ  ಒಳ್ಳೆಯವರನ್ನು ಬೆಳೆಸಬಹುದು. ಕಲಿಸುವವರಲ್ಲಿ
ಮೊದಲು ಒಳ್ಳೆಯದು ಕೆಟ್ಟದ್ದು ಎನ್ನುವ ಜ್ಞಾನವಿರಲು ಸರಿಯಾದ ಗುರುಗಳ ಅಗತ್ಯವಿದೆ. ಸ್ವತಂತ್ರ ಜೀವನ ನಡೆಸಿ
ಗುರುಕುಲದಲ್ಲಿ ಶಿಷ್ಯರನ್ನು ತಯಾರಿಸುತ್ತಿದ್ದ ಹಿಂದಿನ ಮಹರ್ಷಿಗಳು  ಭಾರತವನ್ನು ಆಧ್ಯಾತ್ಮ ದಿಂದ  ವಿಶ್ವಗುರು
ಮಾಡಿದ್ದರು. ಈಗ ಶಿಕ್ಷಣದಲ್ಲಿಯೇ ವಿದೇಶ ಮಾಡುವ ತಯಾರಿ ನಡೆದಿರೋದೆ ದೊಡ್ಡ ದುರಂತ. ಬದಲಾವಣೆ ಆಗುತ್ತಿದೆ. ಜನಸಹಕಾರ ಅಗತ್ಯವಿದೆ. ರಾಜಕೀಯ ಬಿಟ್ಟು
ರಾಜಯೋಗದ ಸತ್ಯ ತಿಳಿಯುವುದು ಅತ್ಯವಶ್ಯಕ. ಕೇವಲ ಪ್ರಚಾರದಿಂದ ಸಾಧ್ಯವಿಲ್ಲ.ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದಂತೆ ಗುರು ಮೊದಲು ಸರಿಯಿದ್ದರೆ ಶಿಷ್ಯರೂ ಅವರ ದಾರಿಯಲ್ಲಿ ನಡೆಯುತ್ತಾರೆ. ಯಥಾ ರಾಜ ತಥಾ ಪ್ರಜಾ ಕಾಲ ಹೋಗಿದೆ.ಯಥಾ ಪ್ರಜಾ ತಥಾ ಪ್ರಜಾಪ್ರಭುತ್ವ.

No comments:

Post a Comment