ನವರಾತ್ರಿಯ ಸಮಯದಲ್ಲಿ ನನ್ನ ಜನ್ಮವಾಯಿತು. ಆದರೆ ಭಗವತಿಯ ಕೃಪಾಕಟಾಕ್ಷದಿಂದ ಲೇಖಕಿಯಾಗಿ 16 ವರ್ಷ ಆಯಿತು. ಹೀಗಾಗಿ ಭಗವತಿ ಇದು ನನ್ನ ಅಂಕಿತ ನಾಮ.
ಸತ್ಯದ ಹಿಂದೆ ನಡೆಯುತ್ತಾ ಹೋದಂತೆ ಹೊರಗಿನ ಅಸತ್ಯ ಅರ್ಥ ವಾಗುತ್ತದೆ.ಹೊರಗಿನ ಅಸತ್ಯ ಅರ್ಥ ವಾದಷ್ಟೂ ಒಳಗೇ ಅಡಗಿದ್ದ ಸತ್ಯವನ್ನು ಹೊರಹಾಕುವುದೂ ಕಷ್ಟ.
ಇದನ್ನು ಧರ್ಮ ಸಂಕಟವೆನ್ನುತ್ತಾರೇನೋ. ಕಾಣದ ಸತ್ಯವನ್ನು ಕಂಡವರಿಗಷ್ಟೇ ತಿಳಿಸಬಹುದು. ಕಾಣದವರಿಗೆ ತಿಳಿಸಿದರೆ ಇನ್ನಷ್ಟು ಅಸತ್ಯ ಬೆಳೆಯುತ್ತದೆ ಎನ್ನುವ ಕಾರಣಕ್ಕಾಗಿ ಅಧ್ಯಾತ್ಮ ಚಿಂತಕರು ಭೌತಿಕದ ಗೊಡವೆಗೆ ಹೋಗದೆ ತಮ್ಮ ಸಾಧನೆಯಲ್ಲಿದ್ದು ಮರೆಯಾದರು. ಆದರೆ ಇದರಿಂದ ಭೂಮಿಯಲ್ಲಿ ಆದ ಬದಲಾವಣೆ ? ಕೊನೆಪಕ್ಷ ತನ್ನ ತಾನರಿತು ನಡೆಯೋ ಜ್ಞಾನದ ಶಿಕ್ಷಣ ನೀಡಿದ್ದರೆ ಎಲ್ಲರೂ ಮಾನವರೆ ಆದರೂ ಜ್ಞಾನದಿಂದ ಸತ್ಯದ ಕಡೆಗೆ ನಡೆಯೋ ಶಕ್ತಿ ಸಿಗುತ್ತದೆ. ಭಾರತೀಯರ ರಾಜಕೀಯದಲ್ಲಿ ಯಾರಲ್ಲಿ ಸತ್ಯವಿದೆಯೋ ಕಾಣೋದಿಲ್ಲ.ಹಣ,ಅಧಿಕಾರ ಇದೆಯೋ ಕಾಣುತ್ತದೆ ಆದರೆ ಜ್ಞಾನವಿಲ್ಲದೆ ಅಧಿಕಾರವನ್ನು ಜನರ ಮೇಲೆ ಪ್ರಯೋಗಿಸಿ ಆಳಿದರೆ ಅಧರ್ಮ ವಾಗುತ್ತದೆ.
ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸಿಗಬೇಕಾದ ಜ್ಞಾನದ ಶಿಕ್ಷಣ ದ ಕೊರತೆ ಇಂದಿಗೂ ಭಾರತವನ್ನು ಪರಕೀಯರು ಆಳುತ್ತಿದ್ದಾರೆ. ಸರಸ್ವತಿಯನ್ನು ಲಕ್ಮಿ ಆಗಿಸಬಹುದು. ಆದರೆ ಲಕ್ಮಿಯನ್ನು ಸರಸ್ವತಿಯಾಗಿಸೋದು ಕಷ್ಟ. ಮೂಲವನ್ನರಿತು ಮೇಲೆ ಏರಿದರೆ ಜೀವನಕ್ಕೆ ಅರ್ಥ ವಿದೆ.
ಸರಸ್ವತಿ,ಲಕ್ಮಿ ದುರ್ಗೆ ಯರು ಎಲ್ಲೋ ಮರೆಯಾಗಿಲ್ಲ. ನಮ್ಮ ಸುತ್ತಮುತ್ತಲೇ ಇರೋದು.ನಿಜವಾದ ಜ್ಞಾನವನ್ನು ಗುರುತಿಸದೆ ಹಣದ ಹಿಂದೆ ನಡೆದರೆ ದುರ್ಗೆ ಯಾಗಿ ಸಂಹಾರ
ಮಾಡಲು ಮುಂದಾಗುವಳು.ಒಟ್ಟಿನಲ್ಲಿ ದೇವನೊಬ್ಬನೆ ನಾಮ ಹಲವು ಎಂದಂತೆ ದೇವಿ ಒಬ್ಬಳೇ ನಾಮ ಹಲವು.
ದೇಶ ಒಂದೇ ಆದರೂ ಪ್ರಜೆಗಳ ಜ್ಞಾನ ವಿಜ್ಞಾನದ ರಾಜಕೀಯ ಹಲವಾಗಿ ನಿಂತು ರಾಜಯೋಗದಿಂದ ಮುಂದೆ ನಡೆದ ಭಾರತ ರಾಜಕೀಯದಲ್ಲಿ ಮುಂದೆ ವಿದೇಶದತ್ತ ನಡೆದಿದೆ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ನಮ್ಮ ಜ್ಞಾನಿಗಳನ್ನಾಗಲಿ,ಮಹಾತ್ಮರನ್ನಾಗಲಿ,ದೇವರನ್ನಾಗಲಿ
ಮೆರೆಸುವ ಅಗತ್ಯವಿಲ್ಲವಾದರೂ ಅವರ ಹೆಸರಲ್ಲಿ ನಮ್ಮ ಮೆರೆದಾಟ ಇಲ್ಲವಾದರೆ ಅವರ ಜ್ಞಾನಕ್ಕೆ ಬೆಲೆಯಿದೆ.
.ಶಿಕ್ಷಣದಲ್ಲಿಯೇ ಅಧರ್ಮ ಇರೋವಾಗ ಅದನ್ನುಪಡೆದ
ಪ್ರಜೆಗಳಿಗೆ ಹಿಂದೂಧರ್ಮದ ಉದ್ದೇಶ ಕಾಣೋದು ಕಷ್ಟ. ಇಲ್ಲಿ ಅಜ್ಞಾನವೆಂದರೆ ಪೂರ್ಣ ಸತ್ಯದ ಅರಿವಿಲ್ಲದಿರೋದಷ್ಟೆ.
ಹಾಗೆ ಅಧರ್ಮ ಎಂದರೆ ಧರ್ಮದ ಮೂಲವನ್ನರಿಯದೆ ಹೊರಗೆ ಬೆಳೆಸಿರೋದು. ಒಟ್ಟಿನಲ್ಲಿ ಬದಲಾವಣೆ ಜಗದ ನಿಯಮ.
ಸೃಷ್ಟಿ ಗೆ ತಕ್ಕಂತೆ ವಿದ್ಯೆ,ಸ್ಥಿತಿಯನ್ನು ಲಯವನ್ನು ಮಾಡುತ್ತದೆ.
ತ್ರಿಮೂರ್ತಿಗಳನ್ನು ನಡೆಸೋ ಮಹಾಶಕ್ತಿಯನ್ನು ಮರೆತು ಭೂಮಿ ಆಳಿದರೆ ಮಾರಿಯೇ ಸಂಹಾರ ಕಾರ್ಯ ನಡೆಸೋದು. ಯಾರೂ ಶಾಶ್ವತವಲ್ಲ.ಆತ್ಮ ಶಾಶ್ವತ.ಯಾರಿಗೆಗೊತ್ತು ಯಾವ ದೇಹದಲ್ಲಿ ಯಾವ ಮಹಾತ್ಮರಿರುವರೋ? ಗುರುತಿಸುವ ಜ್ಞಾನ ಬೇಕು.ಗುರು ಬೇಕು. ಅಧ್ಯಾತ್ಮ ದ ಗುರಿಯೇ ಬೇರೆ ಭೌತಿಕದ ಗುರಿಯೇ ಬೇರೆ ಆದರೂ ಎರಡೂ ಇರೋದು ಭೂಮಿ ಮೇಲೇ.ಒಂದೆ ಭೂಮಿ,ಒಂದೇ ಸತ್ಯ ಒಂದೇ ದೇಶ,ಧರ್ಮ.....ಆದರೆ ಒಗ್ಗಟ್ಟು ಇಲ್ಲದೆ ತತ್ವಹೋಗಿ ತಂತ್ರ ಬೆಳೆದಿದೆ. ಇದೇ ಮಾನವನನ್ನು ಯಂತ್ರಮಾನವನಾಗಿಸಿದೆ. ಶ್ರೀಮಂತ ದೇವ ದೇವಿಯರಿಗೇನೋ ಕೊರತೆಯಿಲ್ಲ.ಹಾಗೆಯೇ ಶ್ರೀಮಂತ ಮಾನವರೂ ಇದ್ದಾರೆ. ದೇಶದ ಸಾಲ ತೀರಿಸಲಾಗದೆ ಜನರ
ಸಮಸ್ಯೆ ಬೆಳೆಯುತ್ತಿದೆ. ಹಾಗಾದರೆ ದೇವರಿರೋದೆಲ್ಲಿ? ದೈವತ್ವವನ್ನು ತತ್ವಜ್ಞಾನದಿಂದ ಪಡೆದ ಹಿಂದಿನ ಮಹಾತ್ಮರು ಎಲ್ಲಿ? ಯೋಗಿಗಳ ದೇಶ ರೋಗಿಗಳ ದೇಶವಾಗಲು ಶಿಕ್ಷಣವೆ
ಕಾರಣವೆಂದಾಗ ಶಿಕ್ಷಣ ಯಾರುಕೊಡಬೇಕಿತ್ತು? ಹೇಗೆ ಯಾಕೆ ಯಾರಿಗೆ ಎಲ್ಲಿ ಕೊಡಬೇಕಿತ್ತು?
ಆಳುವವರೂ ಆಳಾಗಿದ್ದು ಕಷ್ಟ ಅನುಭವಿಸಲೇಬೇಕೆನ್ನುವ ಕರ್ಮ ಸಿದ್ದಾಂತವನ್ನು ಅರ್ಥ ಮಾಡಿಕೊಳ್ಳಲು ಯೋಗಿಯಾಗಬೇಕಂತೆ.ಅಂದರೆ ಜೀವಾತ್ಮ ಪರಮಾತ್ಮನೆಡೆಗೆ ಹೋಗಿ ಸೇರೋದೆ ಯೋಗ.
ಇದನ್ನು ಜ್ಞಾನ ಯೋಗ,ರಾಜಯೋಗ,ಭಕ್ತಿ ಯೋಗ,ಕರ್ಮ ಯೋಗದ ಮೂಲಕ ಪಡೆಯಲು ಭಗವದ್ಗೀತೆ ತಿಳಿಸುತ್ತದೆ.
ಈಗಿನ ಪರಿಸ್ಥಿತಿಯಲ್ಲಿ ಎಲ್ಲಾ ಒಂದು ರೀತಿಯ ಸಾಲಗಾರರೆ.
ಮೂಲದ ಧರ್ಮ ಕರ್ಮವನ್ನರಿತು ಜ್ಞಾನದಿಂದ ನಡೆದರೆ ಇದ್ದ ಕಡೆಯೇ ಮುಕ್ತಿ. ಹೊರಗೆ ನಡೆದಷ್ಟೂ ಸಾಲದ ಹೊರೆ.ಇಷ್ಟೇ ಭೂಮಿಯ ಋಣ ತೀರಿಸಲು ಬಂದ ಜೀವಾತ್ಮನ ಮೇಲೆ ಇನ್ನಷ್ಟು ಸಾಲದ ಹೊರೆ ಹಾಕಿದರೆ ತೀರಿಸಲು ಕಷ್ಟಪಡಲೇಬೇಕು.ಕಷ್ಟಪಟ್ಟವರಿಗಷ್ಟೆ ಸುಖ.ಇದು ಆಂತರಿಕ ಸುಖ,ಭೌತಿಕ ಸುಖ ಕೇವಲ ಕ್ಷಣಿಕವಾದರೂ ಪರಮಾತ್ಮನ ಭಕ್ತರಿಗೆ ಇದರಲ್ಲಿ ಆಸಕ್ತಿ ಕಡಿಮೆ. ಹೀಗಾಗಿ ಸಮಾಜದಲ್ಲಿ ನಿರ್ಲಕ್ಷ್ಯ ಗೊಳಗಾದರು. ಅವರ ಪ್ರತಿಮೆ ಮಧ್ಯೆ ನಿಲ್ಲಿಸಿ ವ್ಯವಹಾರಕ್ಕೆ ಬಳಸಿದರೆ ಜ್ಞಾನಸಿಗದೆ ಹಣದ. ಜೊತೆಗೆ ಅಜ್ಞಾನದ ಅಹಂಕಾರ ಸ್ವಾರ್ಥ ಬೆಳೆದರೆ ನಷ್ಟ.
ದೇವತೆಗಳು ಕೇಳಿದ್ದೆಲ್ಲಾ ಕೊಡಬಹುದು. ಜ್ಞಾನ ಪಡೆಯಲು ಕಷ್ಟಪಡಬೇಕಷ್ಟೆ.ಹಣ ಪಡೆಯಲು ಸತ್ಯದಿಂದ ಕಷ್ಟ. ಹೀಗಾಗಿ ಜ್ಞಾನದ ನಂತರ ಹಣಸಂಪಾದಿಸಿ ದಾನ ಧರ್ಮ ಮಾಡುವ ಹಿಂದೂ ಧರ್ಮದಲ್ಲಿ ಮುಕ್ತಿ ಮೋಕ್ಷ ಕಾಣಬಹುದೆನ್ನುವರು. ಪರಧರ್ಮದ ಶಿಕ್ಷಣ,ಹಣ ಪಡೆದರೆ
ಬೆಳೆಯೋದು ಅದೇ ಧರ್ಮ. ಒಟ್ಟಿನಲ್ಲಿ ಯಾವುದೇ ಇರಲಿ ಅದು ಮಾನವನ ಮಹಾತ್ಮನಾಗಿಸುವತ್ತ ನಡೆಸಿದರೆ ಅದೇ
ನಿಜವಾದ ಧರ್ಮ. ಮನಸ್ಸಿಗೆ ಶಾಂತಿ, ಸಮಾಧಾನ,ತೃಪ್ತಿ ಸಿಕ್ಕರೆ ಜೀವಕ್ಕೆ ಮುಕ್ತಿ. ಇವು ಒಳಗೆ ಇರೋವಾಗ ಹೊರಗೆ ಹುಡುಕಿದರೆ ಸಿಗೋದಿಲ್ಲವಲ್ಲ. ಹಿಂದೂಸ್ತಾನ್ ಒಳಗಿರುವ ಎಲ್ಲಾ ಹಿಂದೂಗಳೆ.ದೇಶದ ಋಣ ತೀರಿಸಲು ವಿದೇಶದವರೆಗೆ ಹೋಗುವ ಅಗತ್ಯವಿಲ್ಲ. ದೇಶದ ಶಿಕ್ಷಣ ನೀಡಿ ಸಂಸ್ಕಾರ ಕೊಟ್ಟು ಶುದ್ದಗೊಳಿಸಿಕೊಳ್ಳವುದೇ ಶುದ್ದಾತ್ಮನೆಡೆಗೆ ಹೋಗುವ ದಾರಿ. ಇದು ಹೊರಗಿನಿಂದ ಒಳಗೆ ನಡೆಸಬೇಕಿತ್ತು
ಈಗ ನಮ್ಮವರೆ ನಮಗೆ ಶತ್ರುವಾಗಿ ಒಳಗಿನವರೆ ಹೊರಗಿನವರ ಹಿಂದೆ ಹೊರಟರೆ ಮನಸ್ಸು ಹೊರಗೇ ಇರುತ್ತದೆ. ಬದಲಾವಣೆ ಆಗುತ್ತದೆ,ಆಗುತ್ತಿದೆ,ಆಗಲೇಬೇಕಿದೆ.
ಜನ್ಮದಿನವನ್ನು ಅವರವರ ತಿಥಿ ನಕ್ಷತ್ರಕ್ಕನುಸಾರ ಹಿಂದಿನ
ಹಿಂದೂಗಳು ಆಚರಿಸಿಕೊಳ್ಳುತ್ತಿದ್ದರು. ಆದರೂ ಹೊರಗಿನ
ಎಲ್ಲಾ ಸ್ನೇಹಿತರಿಗೆ ಇದನ್ನು ತಿಳಿಸಲಾಗದು ಅವರ ಪ್ರೀತಿ ವಿಶ್ವಾಸವೂ ಬಹಳ ಮುಖ್ಯ.ಆಶೀರ್ವಾದದಿಂದ ಏನಾದರೂ
ಶುಭಾಶಯಗಳನ್ನು ತಿಳಿಸಿದ ಎಲ್ಲಾ ಆತ್ಮೀಯರಿಗೆ ಧನ್ಯವಾದಗಳು.
No comments:
Post a Comment