ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, September 27, 2022

ನವರಾತ್ರಿಯನ್ನು ಹೀಗೆ ತಿಳಿದರೆ?

ನವರಾತ್ರಿಯಲ್ಲಿ ನವದುರ್ಗೆಯರನ್ನು ನವಶಕ್ತಿಯ ರೂಪದಲ್ಲಿ ಆರಾಧಿಸುತ್ತಾರೆ. ಇಲ್ಲಿ ರಾತ್ರಿಯ ವೇಳೆಯಲ್ಲಿ ಬರುವ ಈ ಶಕ್ತಿಯನ್ನು ಪೂಜಿಸುವುದರಿಂದ  ನಕಾರಾತ್ಮಕ ಶಕ್ತಿ  ಕುಸಿದು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ದಿನದ ಬೆಳಕಿಗೂ ರಾತ್ರಿಯ ಬೆಳಕಿಗೂ ಬಹಳ ವ್ಯತ್ಯಾಸವಿದೆ. ರಾತ್ರಿಯಲ್ಲಿ ಸಣ್ಣ ಬೆಳಕಿದ್ದರೂ ಮನಸ್ಸಿಗೆ ಆನಂದ ಕೊಡುತ್ತದೆ.ಹಾಗೆ  ಬೆಳಿಗ್ಗೆ ಯ ಕತ್ತಲು ಅಷ್ಟೇ ದು:ಖವನ್ನು ಕೊಡುತ್ತದೆ. ಅಂದರೆ ನಮ್ಮ ಆತ್ಮ ಜ್ಯೋತಿ ಯೆಡೆಗೆ ಸಾಗಲು
ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಅಧ್ಯಾತ್ಮ ಸಾಧನೆ ಬೇಕು.
ಆತ್ಮಜ್ಞಾನದಿಂದ ಮಾತ್ರವೇ ಆತ್ಮಜ್ಯೋತಿಯ ದರ್ಶನ. ಇದು
ಹೊರಗಿನ ಬೆಳಕಿನಲ್ಲಿ ಕಾಣಲಾಗದು.ಒಳಗಿನ  ಬೆಳಕನ್ನು
ತೋರಿಸುವ ಮಹಾಶಕ್ತಿಯೇ  ಆ ತಾಯಿ. ತಾಯಿಯನ್ನು ಹೊರಗಿನ‌ಕಣ್ಣಿನಿಂದ ನೋಡುವುದಕ್ಕೆ ಎಲ್ಲರಿಗೂ ಸಾಧ್ಯ .ಆದರೆ ಒಳಗಣ್ಣಿನಿಂದ ಅವಳನ್ನು ಅರ್ಥ ಮಾಡಿಕೊಳ್ಳಲು ಜ್ಞಾನಿಗಳಿಗಷ್ಟೇ ಸಾಧ್ಯ. ನವರಾತ್ರಿಯಲ್ಲಿ ಆ ತಾಯಿಯು ಈ ರಾತ್ರಿಯಲ್ಲಿರುವ ಅಸುರರ ಸಂಹಾರ ಮಾಡಿ  ಜಗತ್ತಿಗೆ ಬೆಳಕನ್ನು ತೋರಿಸುವತ್ತ ನಡೆಯುತ್ತಾಳೆ.
ಅಸುರ ಗುಣವನ್ನು ಮಾನವರು ಎಷ್ಟು ತಿಳಿದು ದೈವೀ ಗುಣಗಳನ್ನು ಬೆಳೆಸಿಕೊಳ್ಳುವರೋ ಆಗಲೇ ಆತ್ಮಜ್ಞಾನ. ಇಲ್ಲಿ ದೇವಿಯನ್ನು ಸ್ತ್ರೀ ಎನ್ನುವ‌ಮಟ್ಟಿಗೆ ನಿಲ್ಲಿಸಿ ಪೂಜಿಸುವ ಬದಲು  ಇಡೀ ಜಗತ್ತನ್ನೇ ತನ್ನ ಅಧೀನದಲ್ಲಿಟ್ಟುಕೊಂಡಿರುವ
ಮಹಾಮಾತೆ ಎನ್ನುವ ಬಾವನೆ ಯಾರಿಗೆ ಬರುವುದೋ ಅವರಿಗಷ್ಟೆ ಆ ತಾಯಿಯನ್ನು ಕಾಣಲು,ಸೇರಲು  ಸಾಧ್ಯ.
ತ್ರಿಮೂರ್ತಿಗಳು ಕೂಡ ಅವರ ಮಕ್ಕಳೆ ಆದಾಗ‌ ಸೃಷ್ಟಿ ಸ್ಥಿತಿ ಲಯದ ಕಾರ್ಯವು ಆ ತಾಯಿಯ ಅಪ್ಪಣೆಯಿಲ್ಲದೆ ಆಗದು.
ಭೂಮಿಯ ಮೇಲಿರುವ ಸ್ತ್ರೀ ಕುಲ ಯಾವಾಗಲೂ ಆ ತಾಯಿಯ ಶಕ್ತಿಯನ್ನರಿತು ಭೂಮಿಯಲ್ಲಿ ಧರ್ಮ. ರಕ್ಷಣೆ ಮಾಡಿದರೆ  ಭೂಮಿಯಲ್ಲಿ ಅಸುರರ ಸಂಖ್ಯೆ ಬೆಳೆಯದು.
ಆದರೆ,ಯಾವಾಗ ಸ್ತ್ರೀ ಗೇ ಅಜ್ಞಾನ ಹೆಚ್ಚಾಗಿ ಅಹಂಕಾರ ಸ್ವಾರ್ಥ ದಿಂದ  ಅಸುರರ ಕೆಟ್ಟಗುಣವನ್ನೂ ಬೆಳೆಸುವಳೋ ಆಗಲೇ ಅದು ತಿರುಗಿ ಹೊಡೆಯುವುದು.ಇಲ್ಲಿ ತಿಳಿದೋ ತಿಳಿಯದೆಯೋ  ಪಾಪ ಪುಣ್ಯ ಕರ್ಮಗಳಾಗುತ್ತಿದ್ದರೂ ಅದರ ಪ್ರತಿಫಲ ಮಾತ್ರ ಜೀವಾತ್ಮನೇ ಅನುಭವಿಸುವುದೆ
ನ್ನುವ ಅರಿವಿರಬೇಕಷ್ಟೆ.ನಾವೆಲ್ಲರೂ ನಮ್ಮ ನಮ್ಮ ಪ್ರಕಾರ ಸರಿದಾರಿಯಲ್ಲಿ ನಡೆದರೂ ನಡೆಯುವಾಗ ಜೊತೆಗೆ ಬರುವವರೂ ಅದನ್ನು ಸರಿದಾರಿ ಎಂದು ತಿಳಿಯಬಹುದು ,ವಿರೋಧಿಸಲೂಬಹುದು.ಹಾಗಂತಒಂದೇ ದಾರಿ ಇದ್ದರೆ
 ಎಲ್ಲಾ ಅದರಲ್ಲಿಯೇ ನಡೆಯಬೇಕು.
ಅನೇಕ ದಾರಿಗಳನ್ನು ಮಾಡಿಕೊಂಡು ಹೋದರೂ ಕೊನೆಗೆ
ಸೇರೋದು ಒಂದು ಮುಖ್ಯರಸ್ತೆ. ಹೀಗಾಗಿ ಅಡ್ಡದಾರಿಗೆ ಹೋದರೂ ಸೀದಾದಾರಿಗೆ ಬರಲೇಬೇಕೆನ್ನುವುದೇ ಆ ತಾಯಿಯ ಉದ್ದೇಶ.ಭೂಮಿಯ ಮೇಲಿದ್ದು ಅವಳನ್ನು ದುರ್ಭಳಕೆ ಮಾಡಿಕೊಂಡು ಆಳಿದರೂ ಕೊನೆಗೆ ಸೇರೋದು ಭೂಮಿಗೆ. ಆ ನಕಾರಾತ್ಮಕ ಶಕ್ತಿ ಹೆಚ್ಚಾದಂತೆ ಶಕ್ತಿಹೀನವಾಗಿ ಮನುಕುಲಕ್ಕೆ ಮಾರಕವಾದ ಅಸುರರು ಹೆಚ್ಚುತ್ತಾರೆ. ಇದೇ
ಅಧರ್ಮ, ಅನ್ಯಾಯ, ಅಸತ್ಯ,ಭ್ರಷ್ಟಾಚಾರ ದಂತಹ ಕೆಟ್ಟ
ಶಕ್ತಿಯಾಗಿ  ಜೀವನದ ಮುಖ್ಯ ಗುರಿ ತಲುಪದೆ  ಭೌತಿಕದ ಸಾಧನೆಯಲ್ಲಿ ಅಧ್ಯಾತ್ಮದ ಸಾಧನೆಯ ವಿರುದ್ದ ನಡೆದರೆ
ಮಹಾಶಕ್ತಿಯೇ ಮಹಾಕಾಳಿಯಾಗಿ ನಿಂತು ಅಸುರ ಶಕ್ತಿಗೆ ತಡೆಹಾಕಿ ಕೊಲ್ಲಬಹುದು.ಇಂದಿನ ಈ ಪರಿಸ್ಥಿತಿಗೆ ಕಾರಣವೇ
ಅಸುರರ  ಅತಿಯಾದ ವ್ಯವಹಾರ ಜ್ಞಾನ. ಮಾನವನನ್ನು ಮಾನವನೇ ಅಜ್ಞಾನದಿಂದ ಆಳಿದರೆ ಮಹಾತ್ಮರಾಗೋದು ಹೇಗೆ ಸಾಧ್ಯ. ಸತ್ಯವನ್ನು ತಿರುಚಿಕೊಂಡು ಜನರಲ್ಲಿ ಅಸತ್ಯ ತುಂಬಿ ಬೆಳೆಸುವ ಶಿಕ್ಷಣದಿಂದ ಯಾರಲ್ಲಿ ದೈವಶಕ್ತಿ ಹೆಚ್ಚಿದೆ?
ಒಟ್ಟಿನಲ್ಲಿ ಧರ್ಮ, ದೇವರು,ಸಂಸ್ಕೃತಿ, ಸಂಸ್ಕಾರ,ಯೋಗ
ಕೇವಲ ಓದಿನಿಂದ ಬೆಳೆಸಲಾಗದು.ಅದನ್ನು ಸರಿಯಾಗಿ ಅರಗಿಸಿಕೊಂಡರೆ  ದೇಹದೊಳಗೆ ಜೀರ್ಣ ವಾಗಿ ಶಕ್ತಿ
ಹೆಚ್ಚುತ್ತದೆ ಎನ್ನುವುದನ್ನು ನಮ್ಮ ಹಿಂದಿನ ಜ್ಞಾನಿಗಳ ನಡೆ ನುಡಿಗಳಿಂದ ತಿಳಿಯಬಹುದಷ್ಟೆ. ಅವರನ್ನು ವ್ಯವಹಾರದ ಕೇಂದ್ರ ಬಿಂದು ಮಾಡಿಕೊಂಡು ಆಳಿದರೆ ನಮಗೆ ಒಳಗಿನ ಆತ್ಮಜ್ಞಾನ ದೊರೆಯದು. ಹೊರಗಿನಿಂದ ಏನೇ ಪಡೆದರೂ ಅದೊಂದು ಸಾಲವಾಗಿರುತ್ತದೆ.ಆ ಸಾಲ ತೀರಿಸಲು ಸೇವೆ ಮಾಡಬೇಕಿದೆ.ಸೇವೆಯೂ ನಿಸ್ವಾರ್ಥ ನಿರಹಂಕಾರದಿಂದ
ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡಿದಾಗಲೇ ಮುಕ್ತಿ ಮೋಕ್ಷ ಎನ್ನುವುದಾದರೆ  ನಮಗೆ ಮುಕ್ತಿ ಮೋಕ್ಷ ಸಿಗುವುದೆ? ಆ ತಾಯಿಯಿಲ್ಲದೆ ಜನ್ಮವಿಲ್ಲ.ಜನನವಾಗದೆ  ಈ ಭೂಮಿಯ ಮೇಲೆ ಮನುಕುಲವಿಲ್ಲ.ಮಾನವನಿಗಷ್ಟೆ ಆರನೇ ಅರಿವಿನ ಶಕ್ತಿ ಇರೋವಾಗ ಆ ಶಕ್ತಿಯನ್ನು ಪಡೆಯಲು ಆ ತಾಯಿಯ ಕೃಪೆ ಅಗತ್ಯವಿದೆ. ಆ ತಾಯಿಯನ್ನು  ಬಿಟ್ಟು ಹೊರಗಿನ  ದೇವರನ್ನು  ಕಾಡಿ ಬೇಡಿ ವರ ಪಡೆದರೂ ಕೊನೆಗೆ ತಾಯಿಯ 
ಕೃಪೆ ಯಿಲ್ಲವಾದರೆ ಭೌತಿಕದಲ್ಲಿಯೇ ಜೀವನ ಮುಗಿಯುತ್ತದೆ. ಯಾವಾಗ ತಾಯಿಯೇ ಅತಿಯಾದ ವ್ಯಾಮೋಹದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡದೆ ಬೆಳೆಸುವಳೋ ಆಗಲೇ ಅಸುರ ಸಂತಾನ ಬೆಳೆಯುತ್ತದೆ. ಇಲ್ಲಿ ಸ್ತ್ರೀ ಯನ್ನು ಜ್ಞಾನಿಯನ್ನಾಗಿಸಲು ಅಧ್ಯಾತ್ಮ ವಿದ್ಯೆ ಅಗತ್ಯವಿತ್ತು. ನಮ್ಮ ಭಾರತದಲ್ಲಿ ಭೌತಿಕ ವಿದ್ಯೆಗೆ ನೀಡಿದ ಸಹಕಾರ ಅಧ್ಯಾತ್ಮ ವಿದ್ಯೆಗೆ ನೀಡದೆ ಸ್ತ್ರೀ ಯನ್ನು  ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಂಡು ಸಂಸಾರದ ಒಳಗೇ ಸಮಸ್ಯೆಗಳು ಬೆಳೆದುನಿಂತು ಈಗಿದು ಸಮಾಜದಿಂದ ದೇಶ ವಿದೇಶ ತಲುಪುತ್ತಿದೆ. ಜ್ಞಾನವಿಲ್ಲದೆ ಹಣಸಂಪಾದಿಸಿದರೆ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಕಷ್ಟ. ಆ ಹಣದ ದುರ್ಭಳಕೆ ಸಾಲವಾಗಿ ಕಾಡುತ್ತದೆ. ಸಾಲ ತೀರಿಸಲು ಸತ್ಕರ್ಮ ಸ್ವಧರ್ಮದ ಮಾರ್ಗ ತೋರಿಸುವ ಜಗನ್ಮಾತೆಯ
ಸೇವೆ ಮಾಡುವವರು ಮೊದಲು ತಮ್ಮ ಮೂಲವನ್ನು ಅರ್ಥ ಮಾಡಿಕೊಂಡರೆ  ಉತ್ತಮ. ನವಶಕ್ತಿಯ ಆರಾಧಕರಿಗೆ ರಕ್ಷಣೆ ಹೆಚ್ಚು. ತಾಯಿಯ ಋಣ ತೀರಿಸಲು ಕಷ್ಟ.ಸೇವೆ ಮಾಡಿದರೆ ಸಾಧ್ಯ.ಇದನ್ನು ಬ್ರಾಹ್ಮಣರು ಜ್ಞಾನದಿಂದ, ಕ್ಷತ್ರಿಯರು ದೇಶಸೇವೆಯಿಂದ,ವೈಶ್ಯರು ವ್ಯವಹಾರಿಕ ಧರ್ಮ ಮಾರ್ಗದಿಂದ, ಶೂದ್ರರು ಕಾಯಕವೇ ಕೈಲಾಸವೆಂಬ ಮಹಾಮಂತ್ರದಿಂದ ಹಿಂದಿನ ವರ್ಣಗಳ ಪ್ರಕಾರ ತಿಳಿಸಿದ್ದರು.
ಯಾವಾಗ ಸ್ತ್ರೀ ಯನ್ನು ಬಿಟ್ಟು ಸ್ವತಂತ್ರ ಜೀವನ ನಡೆಸಲು ಅಧರ್ಮ ಮಾರ್ಗ ಹಿಡಿದರೂ ಆಗಲೇ ಭೂಮಿಯನ್ನು  ತನ್ನ ಸೇವೆಗೆ ಬಳಸಿಕೊಂಡು ವ್ಯವಹಾರಕ್ಕೆ ಬೆಲೆಕೊಟ್ಟು  ತನ್ನ ಆತ್ಮವಂಚನೆಗೆ ತಾನೇ ಕಾರಣನಾಗಿದ್ದರೂ ಹೊರಗಿನ ಸಮಾಜವನ್ನು  ದೂರುತ್ತಾ ಕೊನೆಗೆ  ಎಲ್ಲವನ್ನೂ ಬಿಟ್ಟು ಹೋಗಬೇಕಾಯಿತು. ಕಲಿಗಾಲದಲ್ಲಿಯ ಮಾನವರಿಗೆ ಜ್ಞಾನ ಕಡಿಮೆ. ರೆಡಿಮೇಡ್ ಜಗತ್ತು.ಹಿಂದಿನವರು ಮಾಡಿಟ್ಟ ಭೌತಿಕ ಆಸ್ತಿಯಾದ ಹೆಸರು,ಹಣ,ಅಂತಸ್ತು ಹಿಡಿದುಕೊಂಡು ನನ್ನದು ಎನ್ನುವ ಅಹಂಕಾರ ಸ್ವಾರ್ಥ ದಲ್ಲಿ  ಜನರನ್ನು ಆಳಿದರೆ  ಇಲ್ಲಿ ನನ್ನದು ಯಾವುದಿದೆ? ಆತ್ಮ ಶಾಶ್ವತವಾದರೂ ಜೀವವೇ ಮುಖ್ಯವಾಗಿರುವ ಜಗತ್ತಿನಲ್ಲಿ ಜೀವವನ್ನು ಹೊತ್ತು ಹೋಗುತ್ತಿರುವ ನಿರಾಕಾರ ಶಕ್ತಿಯನ್ನು ತಡೆಯಲಾಗದು.
ಕೊರೊನ ಮಹಾಮಾರಿಯ ದರ್ಶನ ,ಪ್ರಕೃತಿ ವಿಕೋಪ,
ಯುದ್ದ,ಹೋರಾಟ,ಹಾರಾಟ,ಮಾರಾಟದಿಂದ ಪಡೆದದ್ದು  ಎಷ್ಟು? ಕಳೆದುಕೊಂಡದ್ದು ಏನು? ಹಣಪಡೆದು ವ್ಯವಹಾರಕ್ಕೆ ಇಳಿದವರೂ ಇಲ್ಲ, ಜ್ಞಾನದಿಂದ ಜೀವನ ನಡೆಸಿದವರೂ ಇಲ್ಲ.ಉಳಿಯೋದು ಕೇವಲ ಒಳ್ಳೆಯ ಕಾರ್ಯದ ಫಲ. ಇದನ್ನು ಯಾರದ್ದೋ ಹಣದಲ್ಲಿ ಮಾಡೋ ಬದಲು ನಮ್ಮ ಶ್ರಮದ ಹಣದಲ್ಲಿ ಮಾಡಿದರೆ ತೃಪ್ತಿ, ಶಕ್ತಿ, ಶಾಂತಿ,ಮುಕ್ತಿ  ನೀಡುವವಳೆ ಆ ಜಗನ್ಮಾತೆ. ಹಾಗಾದರೆ ಜಗನ್ಮಾತೆಗೆ ಜ್ಞಾನದಿಂದ ಸಂಪಾದಿಸಿದ  ಹಣದಿಂದ ಸೇವೆ ಮಾಡಿದರೆ ನಿಜವಾದ ಧರ್ಮ ರಕ್ಷಣೆ ಸಾಧ್ಯ.ಭ್ರಷ್ಟಾಚಾರ ದ ಹಣವನ್ನು ದೇವಿಯ ಮೇಲೇರಿಸಿ ವೈಭವದಿಂದ ಆಚರಣೆ ಮಾಡುವ ಅಗತ್ಯವಿದೆಯೆ? ದೇಶವೇ ಸಾಲದ ಹೊರೆಯಲ್ಲಿದೆ. ಜನರ ಅಜ್ಞಾನ ಮಿತಿಮೀರಿದೆ. ಅಜ್ಞಾನಕ್ಕೆ ಔಷಧವಾಗಿ ಜ್ಞಾನದ
 ಶಿಕ್ಷಣ ನೀಡಬೇಕಿದೆ.ಇದನ್ನು ರಾಜಕೀಯವಾಗಿ ಬಳಸದೆ  ಧರ್ಮದ ಪ್ರಕಾರ ನೀಡುವುದೆ ಆ ತಾಯಿ ಸರಸ್ವತಿಯ ಸೇವೆ.ಸರಸ್ವತಿಯ ನಂತರವೇ ಲಕ್ಮಿ ಯ ಆರಾಧನೆ.ಮೂಲ ಬಿಟ್ಟು ನಡೆದರೆ ದುರ್ಗೆಯ ಅವತಾರ .ಹೀಗೇ ತ್ರಿಮೂರ್ತಿಗಳ  ಸೃಷ್ಟಿ ,ಸ್ಥಿತಿ ಲಯದ ಕಾರ್ಯದಲ್ಲಿ  ತ್ರಿದೇವಿಯರೂ ಇದ್ದಾರೆನ್ನುವ  ಜ್ಞಾನವಿರಲಿ.
ಇದೇ ಸಮಾನತೆ.ರಾತ್ರಿಯ ನಂತರ ಬೆಳಕಾಗುತ್ತದೆ. ಬೆಳಕಿನಲ್ಲಿಯೂ ರಾತ್ರಿಯಿರುತ್ತದೆ ಕಣ್ಣಿಗೆ ಕಾಣೋದಿಲ್ಲವಷ್ಟೆ.
ಭಾರತದಂತಹ ಮಹಾ ಜ್ಞಾನಿಗಳ ದೇಶವನ್ನು ಅಜ್ಞಾನಿಗಳ ವಶಕ್ಕೆ ಬಿಟ್ಟು ರಾಜಕೀಯ ನಡೆಸಿದರೆ  ಯಾವ ಶಕ್ತಿಯ ದರ್ಶನವಾಗೋದಿಲ್ಲ.ತೋರುಗಾಣಿಕೆಯ  ಪ್ರಚಾರದ ಅಗತ್ಯವಿಲ್ಲ. ಆಚರಣೆಯು  ಆತ್ಮಜ್ಞಾನದಿಂದಾದರೆ ಉತ್ತಮ
ಬದಲಾವಣೆ ಸಾಧ್ಯವಿದೆ. ಆಗುತ್ತಿದೆ,ಆಗುತ್ತದೆ ಎನ್ನಬಹುದು
ಆಗೋದೆಲ್ಲಾ ಒಳ್ಳೆಯದಕ್ಕೆ, ಆಗೋದನ್ನು ತಡೆಯಲಾಗದು.
ಆದರೂ ಯಾಕೆ ಆಗುವುದೆನ್ನುವ ಜ್ಞಾನ ಅಗತ್ಯವಾಗಿದೆ. ಸತ್ಯ ಜ್ಞಾನದ ನಂತರವೇ ಮುಕ್ತಿ ಮೋಕ್ಷ. ಹಿಂದಿನ ಮಹಾತ್ಮರಲ್ಲಿ ಯಾರೂ ಹಣದಿಂದ ಶ್ರೀಮಂತ ರಾಗಿ ಗುರುವಾದವರಿಲ್ಲ,ದಾಸರಾಗಿಲ್ಲ,ಶರಣರಾಗಿಲ್ಲ,ಸಂನ್ಯಾಸಿಯಾಗಿಲ್ಲ,ಯೋಗಿಯಾಗಿಲ್ಲ,ಮಹಾತ್ಮರಾಗಿಲ್ಲ,ಭಕ್ತರಾಗಿಲ್ಲ ಎಂದಾಗ ಇಂದು ನಾವು ಅಂತಹವರನ್ನು ಕಾಣುತ್ತಿರುವೆವೆ?
ಎಲ್ಲಿರುವರು ಜ್ಞಾನಿಗಳು? ಮಹಾತ್ಮರುಗಳು? ದೇವರುಗಳು? ಒಳಗೋ ಹೊರಗೂ? ಭೂಮಿ ಮೇಲೋ ಕೆಳಗೋ?
ಜ್ಞಾನವೆನ್ನುವುದು ಯಾರು ಕೊಟ್ಟು ಕೊಳ್ಳುವ ವಸ್ತುವಲ್ಲ.ಅದನ್ನು ನಾವೇ ಕಷ್ಟಪಟ್ಟು ಬೆಳೆಸಿಕೊಳ್ಳಬೇಕಷ್ಟೆ.
ಸಾಮಾನ್ಯಜ್ಞಾನ ಎಲ್ಲರಲ್ಲಿಯೂ ಇದೆ. ಗುರುತಿಸದೆ ಆಳಿದರೆ
ಅಧರ್ಮ ವಾಗುತ್ತದೆ. 

No comments:

Post a Comment