ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ.
ಮೆಟ್ಟಿಲುಗಳನ್ನು ಕಟ್ಟಿಕೊಂಡು ಮೇಲೆ ಮೇಲೆ ಹೋಗಿ ದೇವಸ್ಥಾನ ತಲುಪಿದ ಹಿಂದಿನ ಮಹಾತ್ಮರುಗಳನ್ನು ಅರ್ಥ ಮಾಡಿಕೊಳ್ಳಲು ಸೋತಿರುವ ನಾವು ಯಾವ ಮೆಟ್ಟಿಲನ್ನೂ ಹತ್ತದೆ ನೇರವಾಗಿ ಮಂತ್ರ,ತಂತ್ರ,ಯಂತ್ರದ ಸಹಾಯ ಪಡೆದು ಮೇಲೇರಿರುವವರಿಂದ ದೇವಸ್ಥಾನದಲ್ಲಿ ಅಧರ್ಮ, ಅನ್ಯಾಯ, ಅಸತ್ಯ,ಭ್ರಷ್ಟಾಚಾರವು ಪ್ರವೇಶ ಮಾಡಿದರೆ ದೇವರಿರಲು ಕಷ್ಟ. ನಿರಾಕಾರ ಬ್ರಹ್ಮನ ಸಾಕಾರದಲ್ಲಿ ಕಾಣುವುದು ಸುಲಭ.ಆದರೆ ಇದು ನಿರಾಕಾರದ ಕಡೆಗೆ ನಡೆದರೆ ದೈವತ್ವವಾಗುತ್ತದೆ.ತತ್ವದಿಂದ ದೈವತ್ವವನ್ನು ಬೆಳೆಸಿಕೊಂಡು ಜನರಲ್ಲಿ ಅರಿವು ಮೂಡಿಸಲು ಪ್ರಯತ್ನ ಪಟ್ಟವರನ್ನೇ ಮಟ್ಟಿಲಾಗಿ ಬಳಸಿ ಮಧ್ಯೆ ನಿಂತು ಮುಂದೆ ಹೋಗುವವರನ್ನು ತಡೆಯುವುದು ಮಧ್ಯವರ್ತಿಗಳ ವ್ಯವಹಾರವಾದರೆ ವ್ಯವಹಾರದಲ್ಲಿ ಸಾಲಪವಿದೆ. ಸಾಲವನ್ನು ತೀರಿಸಲು ಪುನರ್ಜನ್ಮ ಪಡೆಯಬೇಕು.ಹೀಗಾಗಿ ಕಲಿಯುಗದಲ್ಲಿ ಹೆಚ್ಚು ಹೆಚ್ಚು ದೇವಾಲಯವಿದ್ದರೂ ದೈವತ್ವದ ಕೊರತೆ ಮಾನವನಿಗೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಾ ಅದೇ ಸ್ಥಿತಿಗೆ ಬಂದು ಕೊನೆಯಲ್ಲಿ ಲಯವಾದರೂ ಸಮಸ್ಯೆಯ ಮೂಲ ತಿಳಿಯದೆ ಹೋದ ಜೀವಕ್ಕೆ ಮುಕ್ತಿ ಸಿಗದೆ ಅತಂತ್ರಸ್ಥಿತಿಗೆ ಬಂದರೆ ಜೀವನ್ಮುಕ್ತಿ ಯಾರಿಗಿದೆ? ಒಟ್ಟಿನಲ್ಲಿ ಮೆಟ್ಟಿಲುಗಳ ಉದ್ದೇಶ ಸಾತ್ವಿಕವಾಗಿತ್ತು.ಅದನ್ನು ಕಟ್ಟುವುದಕ್ಕೆ ಸಾಕಷ್ಟು ಶ್ರಮವಹಿಸಿ ಜ್ಞಾನದ ಬಳಕೆಯಾಗಿತ್ತು.ಪರಮಾತ್ಮನ ಕಾಣೋದಕ್ಕೆ ಆಂತರಿಕ ಶಕ್ತಿಯಿಂದ, ಜ್ಞಾನದಿಂದ ಮಾತ್ರ ಸಾಧ್ಯವೆನ್ನುವುದನ್ನು ನಡೆ ನುಡಿಯ ಮೂಲಕ ತೋರಿಸಿ ಹೋದವರು ಎಲ್ಲಿರುವರು? ಮಟ್ಟಿಲ ಮೇಲಿರುವರೆ ?ಮೇಲೆ ಹತ್ತಿ ಹೋಗಿ ದೇವಸ್ಥಾನ ತಲುಪಿಲ್ಲವೆ? ಅಂದಿನಂತೆಯೇ ಇಂದಿಗೂ ಭೂಮಿಯ ಮೇಲಿರುವ ಮನುಕುಲಕ್ಕೆ ಈ ಮೆಟ್ಟಿಲು ಇದ್ದರೂ ಅವಸರದ ಜೀವನದಲ್ಲಿ ಏರಲಾಗದೆ ನೇರವಾಗಿ ಯಂತ್ರದ ಸಹಾಯದಿಂದ ಮೇಲೆ ಹಾರಿ ದೇವಸ್ಥಾನ ನೋಡಿ ಬರುವುದರಿಂದ ಯಾವುದೇ ಮೆಟ್ಟಿಲಿನಮೇಲಿದ್ದ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಿದೆ. ಇರಲಿ,ಮೇಲೆ ಹಾರಿ ಹೋಗಿ ದೇವಸ್ಥಾನ ತಲುಪಿ ತಿರುಗಿ ಕೆಳಗೆ ಬಂದರೆ ದೈವತ್ವ ಬರುವುದಾದರೆ ಸರಿ. ಹೀಗಾಗಿ ಇಂದು ಎಲ್ಲರಲ್ಲಿಯೂ ಅಡಗಿರುವ ಒಂದೇ ದೇವರನ್ನು ಅರ್ಥ ಮಾಡಿಕೊಳ್ಳಲು ಸೋತು ಅಸಂಖ್ಯಾತ ದೇವತೆಗಳು ಸೃಷ್ಟಿ ಮಾಡಿಕೊಂಡ ಮಾನವನಿಗೆ ಅಧ್ಯಾತ್ಮದ ಮೆಟ್ಟಿಲಿನಲ್ಲಿದ್ದ ಸಾತ್ವಿಕ ಶಕ್ತಿಯ ಅರಿವಾಗದೆ ಮೆಟ್ಟಿಲು ಹತ್ತದೆ ದೇವಸ್ಥಾನ ತಲುಪುವುದಕ್ಕೆ ಮಂತ್ರ,ತಂತ್ರ,ಯಂತ್ರದ ಬಳಕೆಯಾದರೂ ಇವುಗಳಿಂದ ಸ್ವತಂತ್ರ ಜ್ಞಾನದ ಕೊರತೆ ಹೆಚ್ಚುವುದು. ಪರಾವಲಂಬನೆಯೇ ನರಕ ಸ್ವಾವಲಂಬನೆ ಸ್ವರ್ಗ ಎಂದಿದ್ದಾರೆ.ನಮ್ಮ ಶಿಕ್ಷಣವೇ ಪರಾವಲಂಬನೆಯ ಹಾದಿಯಲ್ಲಿರುವಾಗ ಒಳಗೇ ಇರುವ ದೈವತ್ವದೆಡೆಗೆ ಮನಸ್ಸು ಹರಿಸಿಕೊಳ್ಳಲು ಕಷ್ಟ. ಹೋಗಲಿ ಹೊರಗಿನ ಅಧ್ಯಾತ್ಮ ಪುಸ್ತಕಗಳನ್ನು ಅವಲಂಬಿಸಿ ನಡೆಯಲು ಸಹಕಾರವಿದೆಯೆ? ಇಲ್ಲವಾದರೆ ಎಲ್ಲಿಯ ಸ್ವತಂತ್ರ ಜ್ಞಾನ. ಅನುಭವವಿಲ್ಲದೆ ಯಾವ ಮಟ್ಟಿಲಲ್ಲಿ ನಿಂತರೂ ಅದೊಂದು ಕಲ್ಲಿನಮೆಟ್ಟಿಲಷ್ಟೆ.ಚಪ್ಪಲಿ ಬಿಟ್ಟು ಮೇಲೆ ಹೋದರೂ ಕಾಲುಬುಡದ ಕಸವನ್ನು ಸ್ವಚ್ಚಗೊಳಿಸಿಕೊಂಡರೂ ಒಳಗಿನ ಕಲ್ಮಶ ಮನಸ್ಸನ್ನು ಸ್ವಚ್ಚ ಮಾಡೋದಕ್ಕೆ ಮಾನವನಿಗೆ ಕಷ್ಟ. ಇದಕ್ಕೆ ಜ್ಞಾನದ ಶಿಕ್ಷಣ ಬೇಕು.ಶಿಷ್ಟಾಚಾರದ ಕ್ಷಣ ಶಿಕ್ಷಣ. ಭ್ರಷ್ಟಾಚಾರದ ಹಣದಲ್ಲಿ ಶಿಕ್ಷಣ ಪಡೆದರೂ ಕಷ್ಟ. ಹೀಗಾಗಿ ಮಹಾತ್ಮರುಗಳನ್ನು ಅರ್ಥ ಮಾಡಿಕೊಳ್ಳಲು ಅವರು ಏರಿದ ಮೆಟ್ಟಿಲನ್ನು ಸ್ವಚ್ಚವಾಗಿ ಬಳಸಿದರೆ ಇನ್ನೂ ಮೇಲಿನ ಮೆಟ್ಟಲಿನೆಡೆಗೆ ಹೋಗಬಹುದೆನ್ನಬಹುದು. ಭಾರತವನ್ನು ಸ್ವಚ್ಚ ಮಾಡಲು ರಾಜಕೀಯದಿಂದ ಕಷ್ಟ. ಯಾರ ಮನೆಯಲ್ಲಿ ರಾಜಕೀಯ ಇರುವುದೋ ಅಲ್ಲಿ ಮೇಲು ಕೀಳೆಂಬ ಅಜ್ಞಾನದ ಅಹಂಕಾರ ಇರುವುದು.ಸಮಾನತೆಗೆ ಆತ್ಮಶುದ್ದಿಯಾಗಿರಬೇಕು.ಎಂದು ಒಂದೊಂದು ಮೆಟ್ಟಲಿನಲ್ಲಿರುವ ಅಶುದ್ದತೆಯನ್ನು ತೊಳೆದು
ಮೇಲಿನ ಮೆಟ್ಟಿಲವರೆಗೆ ಸ್ವಚ್ಚ ಮಾಡುತ್ತಾ ಹೋದವರಿಗಷ್ಟೆ ಒಬ್ಬನೇ ಪರಮಾತ್ಮನ ದರ್ಶನವಾಗಿ ಮೋಕ್ಷಗಳಿಸಿದ್ದಾರೆ. ಕಲಿಗಾಲದ ಪ್ರಭಾವ,ಅಲ್ಪ ಆಯಸ್ಸಿನಲ್ಲಿ ಅಲ್ಪ ಪ್ರಮಾಣದ ಜ್ಞಾನದಲ್ಲಿ ಜೀವನ ನಡೆಸುವಾಗ ಹೊರಗಿನ ಸ್ವಚ್ಚತೆಯನ್ನು ಮಾಡೋದಕ್ಕೆ ಸಮಯವಿಲ್ಲ ಇನ್ನು ಒಳಹೊಕ್ಕಿ ನೋಡಲು ಕಷ್ಟ.ಯೋಗದ ಮೂಲಕ ಮಾಡಬಹುದು.ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಆಂತರಿಕ ಶುದ್ದಿಗಾಗಿ ಯೋಗ್ಯ ಶಿಕ್ಷಣ ನೀಡಿ ಪೋಷಕರೂ ಮೆಟ್ಟಿಲುಗಳನ್ನು ಹತ್ತುವುದರಿಂದ ಬದಲಾವಣೆ ನಿಧಾನವಾದರೂ ಸಾಧ್ಯ. ಈಗಾಗಲೇ ಎಲ್ಲೆಡೆ ನಡೆಯುತ್ತಿದೆ.ಒಗ್ಗಟ್ಟಿನ ಅಭಾವದಿಂದ ಪೂರ್ಣ ಪ್ರಮಾಣದಲ್ಲಿ ಮುಂದೆ ಬರದೆ ಮಧ್ಯವರ್ತಿಗಳು ತಮ್ಮ ತಮ್ಮ ಸ್ವಾರ್ಥ ದ ಬೇಳೆ ಬೇಯಿಸಿಕೊಂಡು ಇರುವ ಮೆಟ್ಟಿಲನ್ನೂ ಅಶುದ್ದಗೊಳಿಸುವ ಪ್ರಯತ್ನದಲ್ಲಿ ಯಶಸ್ಸು
ಕಾಣುತ್ತಿರುವುದಕ್ಕೆ ಕಾರಣವೆ ನಮ್ಮ ಅತಿಯಾದ ವ್ಯವಹಾರ ಜ್ಞಾನ.ವ್ಯವಹಾರದಿಂದ ಹಣದ ಲಾಭವಾದರೂ ಜ್ಞಾನದ ನಷ್ಟವಿದೆ. ಇದನ್ನು ಪರಕೀಯರು ಕಂಡುಕೊಂಡಿದ್ದಾರೆ.ಹಣ ನೀಡಿ ಜ್ಞಾನಿಗಳನ್ನು ತಮ್ಮೆಡೆ ಸೆಳೆಯುತ್ತಾ ನೇರವಾಗಿ ಮೇಲೆ ಏರಿಸುವ ಕೆಲಸ ಮಾಡಿದರೆ ಕೆಳಗಿರುವ ಮೆಟ್ಟಿಲುಗಳನ್ನು ಅರ್ಥ ಮಾಡಿಕೊಳ್ಳಲು ಸೋತಂತೆ.ತಿರುಗಿ ಕೆಳಗಿಳಿಯೋ ಬದಲಾಗಿ ನಿಧಾನವಾದರೂ ಸರಿ ಮೆಟ್ಟಿಲನ್ನು
ಹತ್ತುವಾಗ ನಮ್ಮವರನ್ನು ಒಗ್ಗೂಡಿಸುವ ಕೆಲಸವಾದರೆ ಸರಿ.
ಮೇಲೇರುವವರನ್ನು ತಡೆಯಬಾರದು. ಕೆಳಗಿದ್ದವರಿಗೆ ಅವಕಾಶ ನೀಡೋ ಮೊದಲು ಅವರಿಗೆ ಮೆಟ್ಟಿಲುಗಳ ಶುದ್ದತೆ ಬಗ್ಗೆ ತಿಳುವಳಿಕೆಯಿದ್ದರೆ ಎಲ್ಲರಲ್ಲಿಯೂ ಅಡಗಿರುವ ದೈವಶಕ್ತಿ ಜಾಗೃತವಾಗುತ್ತದೆ.ಅಸುರೀ ಶಕ್ತಿಯ ಹಿಂದೆ ನಿಂತು ಎಷ್ಟೇ ದೇವತಾಕಾರ್ಯ ನಡೆಸಿದರೂ ವ್ಯರ್ಥ. ಹೀಗಾಗಿ ಹಿಂದಿನವರಲ್ಲಿದ್ದ ಅಗಾಧವಾದ ಜ್ಞಾನ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಜನರನ್ನು ಆಳೋ ಬದಲಾಗಿ ಮಹಾತ್ಮರ ಆಳಾಗಿದ್ದರೆ ಪರಮಾತ್ಮನೆಡೆಗೆ ಹೋಗಬಹುದು.
ಹಾಗಂತ. ಎಲ್ಲರಿಗೂ ಮೆಟ್ಟಿಲನ್ನು ಕಟ್ಟುವ ಶಕ್ತಿಯಿಲ್ಲ.ಕಟ್ಟಿದ ಮೆಟ್ಟಿಲನ್ನು ಏರುವ ಶಕ್ತಿಯಿದೆ. ಈ ಏರುವಾಗ ಸ್ವಚ್ಚ ಮನಸ್ಸು ಬೆಳೆದರೆ ದೈವತ್ವವನ್ನು ಒಳಗಿನಿಂದ ಪಡೆಯಬಹುದೆನ್ನಬಹುದು. ಮಾನವನಿಗೂ ದೇವರಿಗೂ ವ್ಯತ್ಯಾಸವಿಷ್ಟೆ. ಮಾನವ ವ್ಯಕ್ತಿ ದೇವರು ಶಕ್ತಿ. ಈ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಮಹಾತ್ಮರು.ಮಕ್ಕಳಲ್ಲಿರುವ ಈ ಶಕ್ತಿಯನ್ನು ಸರಿಯಾದ ಶಿಕ್ಷಣದಿಂದ ಮೇಲೇರಿಸುವುದು ಪೋಷಕರ ಧರ್ಮ . ಯೋಗಿ ಬಯಸಿದ್ದು ಯೋಗಿಗೆ.ಭೋಗಿ ಬಯಸಿದ್ದು ಭೋಗಿಗೆ. ಯೋಗಾಭೋಗದ ವ್ಯತ್ಯಾಸದಲ್ಲಿ ರೋಗವಿದೆ. ಯಾವುದೂ ಅತಿಯಾದರೆ ಗತಿಗೇಡು ಎನ್ನುವುದು ಸತ್ಯ.ಮೇಲೇರಿದವರು ಕೆಳಗಿಳಿಯೋದಿಲ್ಲ.
ಕೆಳಗಿದ್ದವರಿಗೆ ಮೇಲಿರುವ ಸತ್ಯ ತಿಳಿದಿಲ್ಲ
ಮಧ್ಯವರ್ತಿಗಳು ವ್ಯವಹಾರದಿಂದ ಬಿಡುಗಡೆ ಪಡೆಯಲಾಗಿಲ್ಲ. ಹೀಗಾಗಿ ವ್ಯವಹಾರಿಕ ಜೀವನದ ಮಧ್ಯೆ
ಒಮ್ಮೊಮ್ಮೆ ಈ ಮೆಟ್ಟಿಲುಗಳ ಕಡೆಗೆ ಗಮನವಿಟ್ಟು ಹತ್ತಿ ಇಳಿದು ಮಾಡೋವಾಗ ಸ್ವಚ್ಚತೆ ಕಡೆಗೆ ಮನಸ್ಸು ಹರಿಸುವುದು ಅಗತ್ಯವಾಗಿದೆ. ಆತ್ಮನಿರ್ಭರ ಭಾರತವಾಗಲು ಮೆಟ್ಟಿಲುಗಳಿಂದ ಆತ್ಮರಕ್ಷಣೆ ಯಾಗಬೇಕಿದೆ. ಮಕ್ಕಳಿಗೆ ಮೂಲ ಶಿಕ್ಷಣವೇ ಮೊದಲ ಮೆಟ್ಟಿಲು.ಇದರಲ್ಲಿ ರಾಜಕೀಯಕ್ಕೆ ಇಳಿದರೆ ಆತ್ಮಹತ್ಯೆ ಹೆಚ್ಚಾಗಬಹುದಷ್ಟೆ.ಅಂದರೆ ದೇವರನ್ನು ನಾವು ಆಳೋದಕ್ಕೂ ದೈವತ್ವವನ್ನು ಬೆಳೆಸಿಕೊಂಡು ಮುಂದೆ ಹತ್ತುವುದಕ್ಕೂ ವ್ಯತ್ಯಾಸವಿದೆ. ಒಬ್ಬನೇ ದೇವರಿಗೆ ಸಾಕಷ್ಟು
ಮೆಟ್ಟಿಲಿದ್ದರೂ ನಮ್ಮಹತ್ತಿರದ ಮೆಟ್ಟಲನ್ನು ನಾವೇ ಹತ್ತಬೇಕು. ಅದನ್ನು ಬೇರೆಯವರಿಗೆ ಬಿಟ್ಟು ಹೊರಗೆ ನಡೆದರೆ? ನಮ್ಮಹಿಂದಿನ ಮಹಾತ್ಮರುಗಳು ತೋರಿಸಿದ ದಾರಿ ಮುಚ್ಚಿ ಹೊರಗಿನವರ ದಾರಿಯಲ್ಲಿ ನಡೆದರೆ ಹಿಂದೂ ಧರ್ಮ ವಾಗುವುದೆ? ಹಿಂದಿನ ಕಾಲಕ್ಕೆ ಹೋಗಲಾಗದು.ಆದರೆ ಹಿಂದಿನ ಸತ್ಯ ತಿಳಿಯಬಹುದು.ಹೊರಗೆ ಎಷ್ಟು ನಡೆದರೂ ಸತ್ಯ ಕಾಣದು ಅದೇ ಒಳಗಿರುವ ಸತ್ಯಕ್ಕೆ ಬೆಲೆಕೊಟ್ಟರೆ
ಸತ್ಯವೇ ದೇವರಾಗುತ್ತದೆ.ಇದಕ್ಕೆ ಅವರವರ ಹಿಂದಿನ ಗುರು ಹಿರಿಯರಸತ್ಯ,ನ್ಯಾಯ,ನೀತಿ,ಸಂಸ್ಕೃತಿ,ಸದಾಚಾರ,ಸಾತ್ವಿಕತೆ,
ಆಹಾರಪದ್ದತಿ ಸಾಧ್ಯವಾದರೆ ತಿಳಿದು ತಿರುಗಲು ಪ್ರಯತ್ನ
ಪಟ್ಟರೆ ಹಿಂದಿನ ಸಾಲದಿಂದ ಮುಕ್ತಿ.ಇದು ಸಮಾಜಕ್ಕಾಗಲಿ ದೇಶಕ್ಕಾಗಲಿ ನಷ್ಟವಾಗೋ ಹಾಗಿದ್ದರೆ ವ್ಯರ್ಥ. ಸಾಲ ತೀರಿಸಲು ಬಂದ ಜೀವಕ್ಕೆ ಮತ್ತಷ್ಟು ಸಾಲದ ಹೊರೆ ಏರಿಸುವ ಮೆಟ್ಟಿಲುಗಳಿಂದ ಏನು ಪ್ರಯೋಜನವಿಲ್ಲ. ಆಧುನಿಕತೆಯ ವೈಭವದ ಮೆಟ್ಟಿಲು ಸಾಲದ ಹೊರೆ ಹಾಕುತ್ತಿದೆ. ದೇವಸ್ಥಾನವು ಸಾಲದಿಂದ ಬಿಡುಗಡೆ ಪಡೆಯಲು ಕಟ್ಟಿದ ಮಹಾಕ್ಷೇತ್ರವಾಗಿರಬೇಕಾದರೆ
ಅದನ್ನು ಪ್ರವಾಸಿತಾಣ ಮಾಡಬಾರದು. ಯಾತ್ರೆ ಶುದ್ದವಾಗಿದ್ದಷ್ಟೂ ಜೀವನಯಾತ್ರೆ ಸುಲಭ. ಜೀವನದಮೆಟ್ಟಿಲುಗಳಲ್ಲಿ ಆ ದೈವ ಶಕ್ತಿ ಜಾಗೃತವಾಗಲು ಕಷ್ಟಪಡಬೇಕೆನ್ನುವ ಕಾರಣಕ್ಕಾಗಿ ದೇವರೆ ಇಲ್ಲ ನಾನೇ ಎಲ್ಲಾ ಎನ್ನುವ ಅಹಂಕಾರ ಸ್ವಾರ್ಥ ದ ಅಸುರಿತನ ಮಾನವನಿಗೆ ಇನ್ನಷ್ಟು ಸಮಸ್ಯೆ ಬೆಳೆಸುವಂತಾಗಿದೆ. ಹಾಗಾದರೆ ನಾವ್ಯಾರು? ಅಸುರರಾದರೆ ದೇವಸ್ಥಾನ ಶುದ್ದ ಆಗಿರುವುದೆ? ನಾನೇ ದೇವರಾಗಿದ್ದರೆ ದೇವಸ್ಥಾನ ಬೇಕೆ?
ಒಂದೇ ದೇವರನ್ನು ಎಲ್ಲಾ ಒಂದಾಗಿ ಕಾಣಬಹುದೆ? ಇಲ್ಲ ಎಂದಾಗ ಅವರವರ ದೇವರನ್ನು ಕಾಣಲು ಬಿಡಬಹುದು.
ಇದಕ್ಕೆ ರಾಜಕೀಯ ಬೇಕೆ? ಇದಕ್ಕಾಗಿ ಶಿಕ್ಷಣವು ಬದಲಾದರೆ ಒಳಗಿರುವ ಆತ್ಮಶಕ್ತಿಯನ್ನು ಮೆಟ್ಟಿಲಿನ ಸಹಾಯದಿಂದ ನಿಧಾನವಾಗಿ ಮೇಲೆ ಹತ್ತಿಸುವ ಕೆಲಸ ನಿಜವಾದ ಗುರು,
No comments:
Post a Comment